• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಂತವರು ಕುಂತಲ್ಲೇ, ನಿಂತವರು ನಿಂತಲ್ಲೇ ಮರಣ: 2021ರ ಸಾರುವಯ್ಯ ನುಡಿದ ಕಾಲಜ್ಞಾನ ಭವಿಷ್ಯ

|
Google Oneindia Kannada News

ಉದ್ದನೆಯ ನಿಲುವಂಗಿ, ತಲೆಗೆ ಕಾವಿ ರುಮಾಲು, ಕೈಯಲ್ಲಿ ಕಂದೀಲು, ಹಣೆಗೆ ವಿಭೂತಿ ಮತ್ತು ಕೊರಳಿಗೆ ರುದ್ರಾಕ್ಷಿ ಹಾಕಿ ಸಾರುವಯ್ಯ 2021ರ ಆಗುಹೋಗುಗಳ ಬಗ್ಗೆ ನುಡಿದಿರುವ ಭವಿಷ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಮಕರ ಸಂಕ್ರಾಂತಿಯ ನಂತರ, ಮಹಾಶಿವರಾತ್ರಿಗೆ ಮುನ್ನ, ಮುಂದಿನ ಒಂದು ವರ್ಷದ ಭವಿಷ್ಯವನ್ನು ಇವರು ನುಡಿಯುವ ಪದ್ದತಿಯಿದೆ. ಕಳೆದ ವರ್ಷ ಜನವರಿ ಒಂಬತ್ತನೇ ತಾರೀಕಿನಂದು ಸಾರುವಯ್ಯನವರು ಭವಿಷ್ಯ ನುಡಿದಿದ್ದರು.

ಗವಿಗಂಗಾಧರೇಶ್ವರನನ್ನು ಸ್ಪರ್ಶಿಸದ ಸೂರ್ಯರಶ್ಮಿ: ಯುದ್ದದ ಸೂಚಕ ಗವಿಗಂಗಾಧರೇಶ್ವರನನ್ನು ಸ್ಪರ್ಶಿಸದ ಸೂರ್ಯರಶ್ಮಿ: ಯುದ್ದದ ಸೂಚಕ

2020 ಅತ್ಯಂತ ಕೆಟ್ಟ ವರ್ಷ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಆದರೆ, ಮುಂದಿನ ವರ್ಷ ಇನ್ನೂ ಭಯಾನಕವಾಗಲಿದೆ ಎಂದು ಬಲ್ಗೇರಿಯಾದ ನಿಗೂಢ ಮಹಿಳೆ ಬಾಬಾ ವಂಗಾ ಬಹು ಹಿಂದೆನೇ ಹೇಳಿದ್ದ 2021 ಭವಿಷ್ಯ ಬಹಿರಂಗವಾಗಿತ್ತು.

ಸಾರುವಯ್ಯನವರ ಭವಿಷ್ಯದ ಪ್ರಕಾರ, "ದೇಶದಲ್ಲಿ ಅತಿವೃಷ್ಟಿಯಾಗಲಿದೆ, ಧರ್ಮಯುದ್ದಕ್ಕೆ ಜಯವಾಗಲಿದೆ. ಬಡವ ಬಲ್ಲಿದನಾಗುತ್ತಾನೆ, ಬಲ್ಲಿದ ಬಡವಾಗುತ್ತಾನೆ". ಇವರು ಹೇಳಿದ ಭವಿಷ್ಯದ ಯಥಾವತ್ ಕಾಪಿ ಹೀಗಿದೆ:

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾಗೆ ಭಾರೀ ಹಿನ್ನಡೆ: ಖ್ಯಾತ ಜ್ಯೋತಿಷಿಯ ಭವಿಷ್ಯ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾಗೆ ಭಾರೀ ಹಿನ್ನಡೆ: ಖ್ಯಾತ ಜ್ಯೋತಿಷಿಯ ಭವಿಷ್ಯ

2021ರ ಸಾರುವಯ್ಯ ನುಡಿದ ಭವಿಷ್ಯ

2021ರ ಸಾರುವಯ್ಯ ನುಡಿದ ಭವಿಷ್ಯ

2020ರಲ್ಲಿ ಜನ ಪಡಬಾರದ ಕಷ್ಟವನ್ನು ಪಡುತ್ತಾರೆ, ನೋಡಬಾರದ ಸಾವನ್ನು ನೋಡುತ್ತಾರೆ ಎನ್ನುವ ಭವಿಷ್ಯವನ್ನು ಹೇಳಿದ್ದೆ, ಅದರಂತೆಯೇ ಆಗಿದೆ. ಜನವರಿ 9, 2020ರಲ್ಲಿ ಇದೇ ಜಾಗದಲ್ಲಿ ನಿಂತು ಹೇಳಿದ್ದೆ. ಈ ವರ್ಷದಲ್ಲಂತೂ ವಿಚಿತ್ರವಾಗಿ ನೋಡತಕ್ಕಂತದ್ದು ಬಹಳಷ್ಟಿದೆ. ಮಾಡಿದವನಿಗೆ ಮಾಡಿದಷ್ಟೇ, ನೋಡಿದವನಿಗೆ ನೋಡಿದಷ್ಟೇ, ನರಕದ ಕಾಲ ಬರುತ್ತದೆಯೇ ಹೊರತು ಸ್ವರ್ಗದ ಕಾಲ ಬರುವುದಿಲ್ಲ.

ಬಸವಣ್ಣನವರು ಆಡಿದ ಮಾತು ನೆತ್ತಿಯ ಮೇಲೆ ಗೂಟಾ ಹೊಡೆದಂತೆ

ಬಸವಣ್ಣನವರು ಆಡಿದ ಮಾತು ನೆತ್ತಿಯ ಮೇಲೆ ಗೂಟಾ ಹೊಡೆದಂತೆ

ಈ ವರ್ಷದಲ್ಲಿ ಮೇ 27ರ ನಂತರ ಏನೇನು ಆಗಲಿದೆ ಎನ್ನುವುದು ನಿಮಗೇ ಗೊತ್ತಾಗಲಿದೆ. ಇದು ಗರ್ವದಿಂದ ಕಳೆಯುವ ಸಮಯವಿಲ್ಲ, ಕರ್ಮದಿಂದ ಬದುಕಬೇಕಾದ ಸಮಯವಿದು. ಅತಿಯಾಸೆ ದುಃಖಕ್ಕೆ ಮೂಲ ಎನ್ನುವುದು ಈ ವರ್ಷದಲ್ಲಿ ಗೊತ್ತಾಗಲಿದೆ. ಬಡವ ಬಲ್ಲಿದನಾಗುತ್ತಾನೆ, ಬಲ್ಲಿದ ಬಡವನಾಗುತ್ತಾನೆ. ಬಸವಣ್ಣನವರು ಆಡಿದ ಮಾತು ನೆತ್ತಿಯ ಮೇಲೆ ಗೂಟಾ ಹೊಡೆದಂತೆ.

ವ್ಯವಸಾಯ ಮಾಡುವವನು ಕೂಲಿ ಮಾಡುವವನಿಗಿಂತ ಕಡೆಯಾಗುವ ಸಮಯ

ವ್ಯವಸಾಯ ಮಾಡುವವನು ಕೂಲಿ ಮಾಡುವವನಿಗಿಂತ ಕಡೆಯಾಗುವ ಸಮಯ

ಕಲ್ಲು ದೇವರಿಗೆ ಪೂಜೆ ಮಾಡುತ್ತೀರಾ, ನಿಜವಾದ ದೇವರು ತಂದೆತಾಯಿ, ಅವರ ಪಾದಪೂಜೆ ಮಾಡಿ. ಅಲ್ಪರ ಸಂಗ, ಅಭಿಮಾನ ಭಂಗ ಎನ್ನುವುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. 2023ರಲ್ಲಿ ದೇಶದ ನಾಯಕತ್ವದಲ್ಲಿ ಬಹಳ ಬದಲಾವಣೆಯಾಗಲಿದೆ. ವ್ಯವಸಾಯ ಮಾಡುವವನು ಕೂಲಿ ಮಾಡುವವನಿಗಿಂತ ಕಡೆಯಾಗುವ ಸಮಯ ಬರಲಿದೆ. ಈ ವರ್ಷದಲ್ಲಿ ಭೂಮಿಗೆ ಕಾಲಿಡಲು ಕಷ್ಟವಾಗುವಂತಹ ಸಮಯ ಎದುರಾಗುತ್ತದೆ.

  ಸಾಡೇಸಾತಿ ಶನಿ ಇದು ನಿಮ್ಮ ರಾಶಿಯಲ್ಲಿದ್ದರೆ ದೋಷವೋ ಫಲವೋ? | Effects of Sade Sati On Signs | Oneindia Kannada
  ಸ್ವಾಮೀಜಿಗಳು ಅತಿವೃಷ್ಟಿಯಾಗಲಿದೆ ಎನ್ನುವುದರ ಮುನ್ಸೂಚನೆ ನೀಡಿದ್ದಾರೆ

  ಸ್ವಾಮೀಜಿಗಳು ಅತಿವೃಷ್ಟಿಯಾಗಲಿದೆ ಎನ್ನುವುದರ ಮುನ್ಸೂಚನೆ ನೀಡಿದ್ದಾರೆ

  ಈ ವರ್ಷ 75ಪೈಸೆಯ ಮಳೆಯಾಗಲಿದೆ ಎನ್ನುವ ಮೂಲಕ ಸ್ವಾಮೀಜಿಗಳು ಅತಿವೃಷ್ಟಿಯಾಗಲಿದೆ ಎನ್ನುವುದರ ಮುನ್ಸೂಚನೆ ನೀಡಿದ್ದಾರೆ. ಕಾಯಿಲೆಯಿಂದ ಜನರು ಸಾಯುವುದಿಲ್ಲ, ಪ್ರಾಕೃತಿಕ ವಿಕೋಪದಿಂದ ಜನರು ಸಾವನ್ನಪ್ಪಲಿದ್ದಾರೆ. ಆರು ವರ್ಷದ ಕನ್ಯೆ ಹಾರಾಡುವ ಕಾಲ. ಮುಂದಿನ ದಿನಗಳಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು. ಈ ವರ್ಷ ದುರ್ಮರಣಗಳ ಸಂಖ್ಯೆ ಹೆಚ್ಚಾಗಲಿದೆ. ಕುಂತವರು ಕುಂತಲ್ಲೇ, ನಿಂತವರು ನಿಂತಲ್ಲೇ ಮರಣ ಹೊಂದುತ್ತಾರೆ. ರಾಜ್ಯದ ಹದಿನೆಂಟು ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗಲಿದೆ. ಧರ್ಮಯುದ್ದಕ್ಕೆ ಜಯವಾಗಲಿದೆ, ಕರ್ಮಯುದ್ದದಿಂದ ಲಯವಾಗಲಿದೆ.

  English summary
  More Tough Days Ahead 2021, Saruvayya Prediction Ahead Of Maha Shivaratri,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X