ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ 2022 ತಿಂಗಳ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ...!

|
Google Oneindia Kannada News

ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ ಸಮಯದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಲು ಬಯಸುತ್ತಾನೆ. ಆದರೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಸ್ವಲ್ಪ ಕಷ್ಟ. ಇದರೊಂದಿಗೆ, ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ಮ ಮುಂಬರುವ ಸಮಯದಲ್ಲಿ ಸಂಭವಿಸುವ ಘಟನೆಗಳನ್ನು ಊಹಿಸಲು ಸಹ ಕಷ್ಟವಾಗುತ್ತದೆ. ಅಂತಹ ಯಾವುದೇ ಮಾಹಿತಿಗಾಗಿ ವ್ಯಕ್ತಿಯು ಜ್ಯೋತಿಷ್ಯದ ಸಹಾಯವನ್ನು ತೆಗೆದುಕೊಳ್ಳುತ್ತಾನೆ.

ಸೆಪ್ಟೆಂಬರ್ ತಿಂಗಳಲ್ಲಿ ಅನೇಕ ದೊಡ್ಡ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸಲಿವೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಬದಲಾವಣೆಯು ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ಹೇಳಲಾದ ಎಲ್ಲಾ 12 ರಾಶಿಚಕ್ರಗಳ ಮೇಲೆ ಇದರ ಪರಿಣಾಮ ಕಂಡುಬರುತ್ತದೆ. ಸೆಪ್ಟೆಂಬರ್ ತಿಂಗಳು ಶುಭ ಫಲಿತಾಂಶಗಳನ್ನು ತರುತ್ತದೆ ಮತ್ತು ಯಾರಿಗೆ ನಷ್ಟವಾಗಬಹುದು ಎನ್ನುವುದನ್ನು ತಿಳಿಯಬಹುದು.

ಶ್ರೀ ಶುಭಕೃತನಾಮ ಸಂವತ್ಸರ ದಕ್ಷಿಣಾಯನ ಶರದ್ ಋತು, ಆಶ್ವೀಜಮಾಸ . ತಾ: 01.10.22 ರಿಂದ 31.10.22.

18.10.22 ರಂದು ಸೂರ್ಯ ಹಾಗೂ ಶುಕ್ರ ತುಲಾರಾಶಿ ಪ್ರವೇಶ. 15.10.22 ರಂದು ಕುಜ ಮಿಥುನ ರಾಶಿಗೆ ಪ್ರವೇಶ.

ಮಾಸದ ವಿಶೇಷ:
02.10.22: ಗಾಂಧಿಜಯಂತಿ
03.10.22 ಮಹಾನವಮಿ ಆಯುಧಪೂಜೆ.
04.10.22 ವಿಜಯದಶಮಿ
09.10.22: ಶ್ರೀ ಚಾಮುಂಡೇಶ್ವರಿ ರಥ.
ಮಾಸಭವಿಷ್ಯ:

ಮೇಷರಾಶಿ

ಮೇಷರಾಶಿ

ತುಲಾರಾಶಿ ಗೆ ಶುಕ್ರನ ಪ್ರವೇಶವಾದ ನಂತರ ನಿಮ್ಮ ರಾಶಿಗೆ ಶುಭಫಲಗಳು ಸಂಪೂರ್ಣವಾಗಿ ದೊರೆಯುತ್ತದೆ. ಸೂರ್ಯನ ತುಲಾರಾಶಿ ಪ್ರವೇಶ ನಿಮಗೆ ಕೊಂಚ ಒತ್ತಡವನ್ನು ಕೊಡುತ್ತಾನೆ. ಗಂಡ ಹೆಂಡತಿಯರ ನಡುವೆ ಸ್ವಲ್ಪ ವೈಮನಸ್ಯಕ್ಕೂ ಕಾರಣ ಆಗಬಹುದು. ಮನೆಯಲ್ಲಿ ಜಗಳವಾಗದಂತೆ ಎಚ್ಚರಿಕೆ ವಹಿಸಿ. ಖರ್ಚುಗಳು ಸಾಕಷ್ಟಿವೆ ನಿಭಾಯಿಸಬೇಕು. ಮೂರನೇ ಮನೆಗೆ ಕುಜನ ಪ್ರವೇಶದಿಂದ ನಿಮ್ಮ ಯಶಸ್ಸು ಇಮ್ಮಡಿಯಾಗುತ್ತದೆ. ಹಿಡಿದ ಕೆಲಸಕಾರ್ಯಗಳಲ್ಲಿ ಜಯ. ನೀವು ಮುನ್ನುಗ್ಗಿ ಕೆಲಸ ಮಾಡುವ ಧೈರ್ಯ ಪರಾಕ್ರಮವನ್ನು ಕುಜ ಕೊಡುತ್ತಾನೆ. ನಿಮ್ಮ ರಾಶಿಯ ಅಧಿಪತಿಯೂ ಕುಜ ನೇ ಆಗಿರುವುದರಿಂದ ನಿಮ್ಮ ಯಶಸ್ಸು 15 ನೇ ತಾರೀಖಿನ ನಂತರ ದ್ವಿಗುಣಗೊಳ್ಳುತ್ತದೆ. ಹಣದ ಹರಿವು ಉತ್ತಮಗೊಳ್ಳುತ್ತದೆ. ಭೂಮಿ ಆಸ್ತಿ ಕೊಳ್ಳುವ ಯೋಗ ಬರುತ್ತದೆ. ರಿಯಲ್ ಎಸ್ಟೇಟ್ ನವರಿಗೆ ಈ 15 ರಿಂದ ಒಳ್ಳೆಯ ಲಾಭ. ಕಟ್ಟಡ ಕಟ್ಟುವ ಕೆಲಸಗಾರರು, ಸಿವಿಲ್ ಇಂಜಿನಿಯರ್ ಗಳು, ಕ್ರೀಡಾಪಟುಗಳು, ಪೊಲೀಸ್ ಮಿಲಿಟರಿ ಇಲಾಖೆಯವರಿಗೂ ಶುಭಲಾಭವಿದೆ. ವೃತ್ತಿಯಲ್ಲಿ ಕೊಂಚ ಒತ್ತಡ ಇರುತ್ತದೆ. ಆರೋಗ್ಯದಲ್ಲೂ ಎಚ್ಚರಿಕೆ ವಹಿಸಬೇಕು. ಅದಿತ್ಯ ಹೃದಯ ಸ್ತೋತ್ರ ಹೇಳಿಕೊಳ್ಳಿ.

ವೃಷಭ ರಾಶಿ

ವೃಷಭ ರಾಶಿ

12 ನೇ ಮನೆಯಲ್ಲಿ ರಾಹು ಖರ್ಚುಗಳನ್ಬು ಕೊಡುತ್ತಾನೆ. ಎರಡನೇ ಮನೆ ಕುಜನಿಂದ ಎಲೆಕ್ಟ್ರಿಕಲ್ ವ್ಯಾಪಾರಸ್ಥರಿಗೆ ಲಾಭ ಇದೆ. ವ್ಯವಸಾಯಗಾರರಿಗೆ ಲಾಭ ಇದೆ. ನಿಮಗೆ ಏಳನೇ ಸಂಗಾತಿ ಸ್ಥಾನದ ಅಧಿಪತಿಯೂ ಕುಜ ಎರಡನೇ ಮನೆಗೆ ಬಂದ ನಂತರ ಹಣದ ಹರಿವು ಉತ್ತಮವಾಗುತ್ತದೆ. ಸಂಗಾತಿಯಿಂದ ಲಾಭ ಇದೆ.
ಸೂರ್ಯನ ತುಲಾ ರಾಶಿ ಪ್ರವೇಶದ ನಂತರ ನಿಮಗೆ ಶುಭಫಲಗಳು ಇವೆ.‌ ಧೈರ್ಯ ಪರಾಕ್ರಮ ಹೆಚ್ಚಾಗುತ್ತದೆ. ಸರ್ಕಾರದಿಂದ ಆಗಬೇಕಾದ ಕೆಲಸಗಳು ಸುಲಲಿತವಾಗಿ ನಡೆಯುತ್ತದೆ. ಸರ್ಕಾರದ ಹಣ ಬರುವುದಿದ್ದರೆ ಸುಗಮವಾಗಿ ಬರುತ್ತದೆ. ಐದರ ಬುಧನಿಂದ ನಿಮ್ಮ ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಪ್ರಯೋಜನ ಇದೆ. ಯಶಸ್ಸು ಕೀರ್ತಿ ಸಿಗುತ್ತದೆ. ಮಕ್ಕಳಿಂದ ಶುಭ ಸುದ್ದಿ ಇದೆ. ಮಕ್ಕಳಾಗದವರಿಗೆ ಈಗ ಮಕ್ಕಳ ಫಲ ಪ್ರಾಪ್ತಿಯಾಗುತ್ತದೆ. ಹನ್ನೊಂದರ ಗುರು ನಿಮ್ಮ ಕೆಲಸಗಳಲ್ಲಿ‌ ಯಶಸ್ಸನ್ಬು ಗೆಲುವನ್ನೂ ಕೊಡುತ್ತಾನೆ. ಹೊಸ ಮನೆ ಆಸ್ತಿ ಖರೀದಿ ಯೋಗ ಇದೆ. ವಿದೇಶ ಪ್ರಯಾಣ ಯೋಗ ಇದೆ. ಸಿಎ, ಬ್ಯಾಂಕಿಂಗ್ ಕ್ಷೇತ್ರದವರಿಗೆ ಶುಭಫಲಗಳಿವೆ.

ಮಿಥುನರಾಶಿ

ಮಿಥುನರಾಶಿ

ನಿಮ್ಮ ರಾಶಿಗೆ ಕುಜನ ಪ್ರವೇಶ ನಿಮಗಷ್ಟು ಒಳ್ಳೆಯದಲ್ಲ. ಒತ್ತಡ ಹೆಚ್ಚಾಗುತ್ತದೆ. ನಾಲ್ಕರ ಬುಧ ನಿಮ್ಮ ಸೌಕರ್ಯಗಳನ್ನು ಹೆಚ್ವಿಸುತ್ತಾನೆ. ವಿದ್ಯಾರ್ಥಿಗಳಿಗೆ ಶುಭ. ಪರೀಕ್ಷೆ ಬರೆದು ಕಾಯುತ್ತಿರುವವರಿಗೆ ಈಗ ಶುಭಕಾಲ.‌18 ರ ನಂತರ ಶುಕ್ರನ ತುಲಾ ಪ್ರವೇಶದಿಂದ ನಿಮಗೆ ಮತ್ತಷ್ಟು ಲಾಭ ಇದೆ. ಹಣದ ಹರಿವು ಉತ್ತಮವಾಗುತ್ತದೆ. ಹೆಣ್ಣು ಮಕ್ಕಳು, ಸೊಸೆಯರು ತಾಯಿ, ಸಹೋದರಿ ಮೊದಲಾದವರಿಂದ ಲಾಭ ಇದೆ. ಅವರ ಬೆಂಬಲ ಸಹಕಾರ ಸಿಗುತ್ತದೆ. ಸೂರ್ಯನ ನೀಚರಾಶಿಯ ಪ್ರವೇಶದಿಂದ ಗಂಡುಮಕ್ಕಳಿಗೆ ಕೊಂಚ ಹಿನ್ನಡೆ ಇದೆ. ವೃತ್ತಿ ಸ್ಥಾನದಲ್ಲಿ ಒತ್ತಡ ಇರುತ್ತದೆ. ಹನ್ನೊಂದರ ರಾಹು ನಾಲ್ಕರ ಬುಧ, ಐದರ ಶುಕ್ರ ಈ ತಿಂಗಳಲ್ಲಿ ನಿಮಗೆ ಶುಭಫಲಗಳನ್ನು ನೀಡುತ್ತಾರೆ. ಗುರು ತಟಸ್ಥ. ಸೂರ್ಯನಿಂದ ಕೆಲಸಕಾರ್ಯಗಳಲ್ಲಿ ಹಿನ್ನಡೆ ಇದೆ .ಅಷ್ಠಮ ಶನಿಯ ಪ್ರಭಾವ ಕಡಿಮೆಯಾಗಿದೆ. ಶನಿ ಒಂಬತ್ತನೇ ಮನೆ ಹಾಗೂ ಗುರು ಹನ್ನೊಂದನೇ ಮನೆಗೆ ಪ್ರವೇಶವಾದಾಗ ನಿಮಗೆ ಭಾಗ್ಯೋದಯವಾಗುವ ಸಮಯ. ಯಾವುದಕ್ಕೂ ತಾಳ್ಮೆ ಯಿಂದ ಕಾಯಬೇಕು.

 ಕಟಕರಾಶಿ

ಕಟಕರಾಶಿ

ಮೂರರ ಬುಧ, ನಾಲ್ಕರ ಶುಕ್ರ ಒಂಬತ್ತರ ಗುರು ನಿಮಗೆ ಭಾಗ್ಯವನ್ನು ತಂದುಕೊಡುತ್ತಾರೆ. ಹನ್ನೆರಡರ ಕುಜ ಭೂಮಿಯಿಂದ ನಷ್ಟವಾಗುವಂತೆ ಮಾಡುತ್ತಾನೆ. ಈ ರಾಶಿಯ ಕ್ರೀಡಾಪಟುಗಳಿಗೆ ಹಿನ್ನಡೆ ಇದೆ. ನಾಲ್ಕನೇ ಮನೆಗೆ ಬರುವ ಸೂರ್ಯ ಬಲಹೀನನಾಗಿ ಕೊಂಚ ಕಿರಿಕಿರಿ ಮಾಡುತ್ತಾನೆ. ಸಹೋದರರಿಂದ ಲಾಭ ಇದೆ. ಸಹೊದರರ ಸಹಕಾರ ಬೆಂಬಲ‌ಇದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಹತ್ತನೇ ಮನೆ ವೃತ್ತಿ ಸ್ಥಾನ ಅಧಿಪತಿ ಕುಜ ಹನ್ನೆರಡನೇ ಮನೆಯಲ್ಲಿದ್ದು ವೃತ್ತಿಯಲ್ಕಿ ಕಿರಿಕಿರಿ ಮಾಡುತ್ತಾನೆ. ಬೇಡದ ಸ್ಥಳಕ್ಕೆ ವರ್ಗಾವಣೆ ಆಗಬಹುದು. ಕೈಗೆ ಸಿಗುವಂತಿದ್ದ ಬಡ್ತಿ ಮುಂದಕ್ಕೆ ಹೋಗಬಹುದು. ವೃತ್ತಿಯಲ್ಲಿಒತ್ತಡವೂ ಹೆಚ್ಚು. ಆದರೆ ಗುರುಬಲ ಇರುವುದರಿಂದ ಪರಿಸ್ಥಿತಿ ಸಮತೋಲನದಲ್ಲಿ ಇರುತ್ತದೆ. ರಿಯಲ್ ಎಸ್ಟೇಟ್ ನವರಿಗೆ ನಷ್ಟವಿದೆ. ಶೇರ್ಸ್ ವ್ಯವಹಾರ ಮಾಡುವವರಿಗೆ ಧನಲಾಭ ಇದೆ. ಗೃಹಾರಂಭ, ವಿವಾಹಾದಿ ಶುಭಕಾರ್ಯಗಳಿಗೆ ಈಗ ನಿಮಗೆ ಸುಸಮಯ. ನಂತರ ಶನಿಯ ಅಷ್ಠಮ ಸ್ಥಾನಪ್ರವೇಶದಿಂದ ಎಲ್ಲ ಕೆಲಸಗಳಿಗೂ ಹಿನ್ನಡೆ ಆಗುತ್ತದೆ. ಸಕಾಲದಲ್ಲಿ ಲೋನ್ ಕೂಡ ಸಿಗದೆ ಪರಿತಪಿಸುವಂತಾಗುತ್ತದೆ. ಹಾಗಾಗಿ ಯಾವುದೇ ಮುಖ್ಯವಾದ ಕೆಲಸ ಕಾರ್ಯಗಳನ್ಬು ಈಗ ಮಾಡಿ ಮುಗಿಸಿ. ಈಗ ನಿಮಗೆ ದೈವ ಹಾಗು ಗುರುಗಳ ಅನುಗ್ರಹ ಇದೆ

ಸಿಂಹರಾಶಿ

ಸಿಂಹರಾಶಿ

ನಿಮ್ಮ ರಾಶಿಯ ಅಧಿಪತಿ ಸೂರ್ಯ 18 ರಂದು ಮೂರನೇ ಮನೆಗೆ ಪ್ರವೇಶವಾಗುತ್ತಾನೆ. ತುಲಾರಾಶಿ ಸೂರ್ಯನಿಗೆ ನೀಚರಾಶಿ ಆದರೂ ಮೂರನೆ ಮನೆ ಪರಾಕ್ರಮ ಸ್ಥಾನ. ನೀವು ಬಹಳ ಕಷ್ಟ ಎಂದುಕೊಂಡ ಕೆಲಸಗಳು ಸಲೀಸಾಗಿ ಆಗುತ್ತದೆ. ಸರ್ಕಾರದಿಂದ ಲಾಭ ಇದೆ. ಹನ್ನೊಂದನೇ ಮನೆಗೆ ಬರುವ ಕುಜ ಸಹ ನಿಮಗೆ ಹಣದ ಹರಿವನ್ನು ಉತ್ತಮ ಪಡಿಸುತ್ತಾನೆ. ಭೂಮಿಯಿಂದ ಲಾಭ ಇದೆ. ಭೂಮಿ ಖರೀದಿ ಮಾಡುವ ಯೋಗ ಇದೆ. ಯಾವುದಾದರೂ ಭೂಮಿಯನ್ನು ಬೆಲೆ ಕುದುರದೆ ಖರೀದಿ ಮಾಡದೆ ಹಾಗೆ ಬಿಟ್ಟಿದ್ದರೆ ಅದುಈಗ ನಿಮಗೆ ಬಹಳ ಸುಲಭ ಬೆಲೆಗೆ ದೊರೆಯುತ್ತದೆ. ಭೂಮಿಯ ಮೇಲೆ ಹಣ ಹೂಡಿದರೂ ಈಗ ನಿಮಗೆ ಲಾಭ ಇದೆ. ಮೂರರ ಕೇತು ಸಹ ನಿಮಗೆ ಕಷ್ಟಸಾಧ್ಯ ಎಂದುಕೊಂಡ ಕೆಲಸಗಳನ್ನು ಸುಲಭ ಮಾಡಿಕೊಡುತ್ತಾನೆ. ಹಣದ ಹರಿವನ್ನೂ ಹೆಚ್ಚಿಸುತ್ತಾನೆ. ಸಹೋದರರಿಂದ ನಷ್ಟ ಹಾಗೂ ಸಹೋದರಿಯರಿಂದ ಲಾಭ ಇದೆ. ಮನೆಗೆ ಅಲಂಕಾರದ ವಸ್ತುಗಳನ್ನು ಖರೀದಿ ಮಾಡುತ್ತೀರಿ.‌ಈ ರಾಶಿಯ ರಾಜಕೀಯ ನಾಯಕರಿಗೆ ಕೊಂಚ ಹಿನ್ನಡೆ ಇದೆ.

ಕನ್ಯಾರಾಶಿ

ಕನ್ಯಾರಾಶಿ

ಎರಡನೆಯ ಮನೆಯಲ್ಲಿ ಶುಕ್ರ, ಸೂರ್ಯ, ಕೇತು ಸೇರಿ ಒಂದು ರಾಜಯೋಗವಾಗಿದೆ. ಇದು ನಿಮಗೆ ಕುಟುಂಬದಲ್ಲಿ ಸೌಖ್ಯವನ್ನು ಹಣದ ಹರಿವನ್ನೂ ವೃದ್ಧಿಸುತ್ತದೆ. ಐದನೇ ಮನೆ ಶನಿಯಿಂದ ಯೋಜಿತ ಕೆಲಸಗಳು ನಿಧಾನ ವಾಗುತ್ತದೆ. ಸ್ವಲ್ಪ ದಿನ ತಡೆಯಿರಿ ಶನಿ ಕುಂಭರಾಶಿ ಯ ಪ್ರವೇಶದ ನಂತರ ನಿಮ್ಮ ಅನೇಕ ಯೋಜನೆಗಳು ಮುಂಚೂಣಿಗೆ ಬರುತ್ತವೆ. ಯಾವ ಅಡೆತಡೆಯಿಲ್ಲದೆ ಕೆಲಸ ಸಾಗುತ್ತದೆ. ಒಳ್ಳೊಳ್ಳೆಯ ಯೋಜನೆಗಳು ನಿಮ್ಮನ್ನು ಹುಡುಕಿ ಬರುತ್ತದೆ. ಎಲ್ಲವೂ ನಿಮಗೆ ಗೆಲುವನ್ನು ಯಶಸ್ಸನ್ಬೂ ತಂದುಕೊಡುತ್ತದೆ. ಏಳರ ಗುರು ನಿಮಗೆ ಒಳ್ಳೆಯ ಹೆಸರನ್ನು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವನ್ನು ಕೊಡಿಸುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವೃತ್ತಿಯಲ್ಲಿ ಉನ್ನತ ಸ್ಥಾನಮಾನ ಲಭ್ಯವಾಗುತ್ತದೆ. ಜನಗಳು ನಿಮ್ಮ ಪ್ರಭಾವಕ್ಕೆ ಆಕರ್ಷಿತರಾಗಿ ನಿಮ್ಮ ಬಳಿ ಬರುತ್ತಾರೆ. ನಿಮ್ಮ ಮಾತು ಬಹಳ ಪ್ರಭಾವಶಾಲಿಯಾಗಿರುತ್ತದೆ. ನೀವು ಯಾರಿಗಾದರೂ ಕೆಲಸ ಮಾಡಿಕೊಡಬೇಕೆಂದರೆ ನಿಮ್ಮ ಮಾತು ಬಹಳ ಮುಖ್ಯ. ಮಾತಿಗೂ ಬೆಲೆಯಿರುವ ಕಾಲ. ನಿಮ್ಮ ಒಂದು ಮಾತಿನಿಂದಲೇ ಎಷ್ಡೋ ಕೆಲಸಗಳು ನಡೆಯುತ್ತದೆ. ರಾಶಿಯಲ್ಲೇ ಇರುವ ಬುಧ ನಿಮಗೆ ಜ್ಞಾನವನ್ನು ಚಿಂತನೆಯನ್ನು ಹೆಚ್ಚಿಸುತ್ತಾನೆ. ಸತ್ಸಂಗಳು ಸಿಗುತ್ತವೆ. ಸಜ್ಜನರ ಸಹವಾಸದಿಂದ ಮನಸ್ಸಿಗೆ ಅಲೌಕಿಕ ಆನಂದ.

ತುಲಾ ರಾಶಿ

ತುಲಾ ರಾಶಿ

15 ನೇ ತಾರೀಖಿನ ನಂತರ ಕುಜ ಒಂಬತ್ತನೇ ರಾಶಿ‌ಪ್ರವೇಶದಿಂದ ನಿಮಗೆ ಪಿತ್ರಾರ್ಜಿತ ಆಸ್ತಿ‌ ಬರುವ ವಿಷಯದಲ್ಲಿ ಇದ್ದ ಕಿರಿಕಿರಿ ಗಳು ದೂರವಾಗಿ ನಿಮ್ಮ ದಾರಿ ಸುಗಮವಾಗುತ್ತದೆ. ಭೂಮಿ ವ್ಯವಹಾರದಲ್ಲಿ, ವ್ಯವಸಾಯದಲ್ಲಿ ಲಾಭ ಇದೆ. ವೃತ್ತಿಯಲ್ಲಿ ಅನುಕೂಕರ ವಾತಾವರಣ ಇದೆ. ಗುರು ಐದನೇ ಮನೆ ನಿಮ್ಮ ವೃತ್ತಿಸ್ಥಾನವನ್ನು ನೋಡುವುದರಿಂದ ನಿಮ್ಮ ವೃತ್ತಿಯಲ್ಲಿ ಯಶಸ್ಸೂ ಲಾಭವೂ ಇದೆ. ನಿಮ್ಮ ರಾಶಿಗೇ ಕುಜನ ಪ್ರವೇಶವಾದನಂತರ ನಿಮ್ಮ ಆರೋಗ್ಯದಲ್ಲೂ ಸುಧಾರಣೆ ಕಾಣುತ್ತದೆ. ಸೂರ್ಯ ಈ 17 ರ ನಂತರ ನಿಮ್ಮ ರಾಶಿಗೆ ಪ್ರವೇಶವಾದ ನಂತರ ನಿಮ್ಮ ರಾಶಿಯ ಸರ್ಕಾರಿ ನೌಕರರಿಗೆ ಕೊಂಚ ಹಿನ್ನಡೆ ಇದೆ. ರಾಜಕೀಯ ನಾಯಕರಿಗೂ 17 ರ ನಂತರ ಪರಿಸ್ಥಿತಿ ಅನುಕೂಲ ವಾಗಿರುವುದಿಲ್ಲ.‌ ಬುಧ 12 ನೇ ಮನೆಯಲ್ಲಿರುವುದು ಬಂಧುಗಳಿಂದ ವೃಥಾಪವಾದ. ಆದರೆ ಯಾರಿಗೂ ಅಂಜಬೇಡಿ. ದುರ್ಗಾಸ್ತುತಿ ಪಠಿಸಿ. ಏಳರ ರಾಹುವಿನಿಂದ ಸಂಗಾತಿಯೊಂದಿಗೆ ವಿರೋಧದ ವಾತಾವರಣ ಇದೆ. ಅಕ್ಟೋಬರ್ 27 ನಿಮ್ಮ ರಾಶಿಯಲ್ಲಿ ನಾಲ್ಕು ಗ್ರಹಗಳ ಸಂಯೋಗ ನಿಮಗೆ ರಾಜಯೋಗವನ್ನು ತಂದುಕೊಡುತ್ತದೆ.

ವೃಶ್ಚಿಕರಾಶಿ

ವೃಶ್ಚಿಕರಾಶಿ

ಐದರ ಗುರು, ಆರರ ರಾಹು, ಹನ್ನೊಂದರ ಕೇತು, ಶುಕ್ರ ಮೂರರ ಶನಿ ಹತ್ತರ ಸೂರ್ಯ-ಬುಧ ಎಲ್ಲರೂ ನಿಮಗೆ ಅನುಕೂಲಕರ ವಾಗಿದ್ದಾರೆ. ಶತೃಧ್ವಂಸವಾಗುತ್ತದೆ. ವೃತ್ತಿಯಲ್ಲಿ ಯಶಸ್ಸು, ಭಾಗ್ಯೋದಯವಾಗುವ ಸಮಯ. ಸರ್ಕಾರಿ ಕೆಲಸಗಾರರಿಗೂ ಶುಭಲಾಭ ಇದೆ. ಅವಿವಾಹಿತರಿಗೆ ವಿವಾಹವಾಗುವ ಸಮಯ. ನೌಕರಿಯಲ್ಲಿ ಯಶಸ್ಸು ಪ್ರಸಿದ್ಧಿ ಕೀರ್ತಿ ಸಿಗುವ ಸಮಯ. ಹೊಸ ನೌಕರಿ ಹುಡುಕುತ್ತಿರುವವರೆಗೂ ಈಗ ಸುಸಮಯ. ವಿದೇಶ ಪ್ರವಾಸ ಯೋಗ ಇದೆ. ಸನ್ಮಾನಗಳು ಪ್ರಶಸ್ತಿಗಳು ಸಿಗುವ ಸಮಯ. ನಿಮ್ಮನ್ನು ದೂರ ಮಾಡಿರುವವರೂ ಈಗ ನಿಮನ್ನು ಹುಡುಕಿ ಬರುವ ಸಮಯ. ನಿಮ್ಮ ಮಾತಿಗೆ ಬೆಲೆ ಇದೆ. ನಿಮ್ಮ ಒಂದು ಮಾತಿನಿಂದ ಎಷ್ಟೋ ಮುಖ್ಯವಾದ ಕೆಲಸಗಳು ಸಲೀಸಾಗಿ ಆಗುತ್ತದೆ. ಹಣದ ಹರಿವು ಉತ್ತಮವಾಗಿದೆ. ಸಾಲ ತೀರಿಸಿ ಋಣಮುಕ್ತಗುವಿರಿ. ತಂದೆಗೆ ಬೆಂಬಲ ಕೊಡುವಿರಿ. ವಾಹನ ಚಲಾಯಿಸುವಾಗ ಕೊಂಚ ಎಚ್ಚರ ಇರಲಿ. ನರಸಿಂಹನ ಪ್ರಾರ್ಥನೆ ಮಾಡಿ.

ಧನಸ್ಸು ರಾಶಿ

ಧನಸ್ಸು ರಾಶಿ

ಅಕ್ಟೋಬರ್27 ರ ನಂತರ ನಿಮ್ಮ ರಾಶಿಯ ಹನ್ನೊಂದನೇ ಮನೆಯಲ್ಲಿ ನಾಲ್ಕು ಗ್ರಹಳು ಸೇರಿ ಒಂದು ರಾಜಯೋಗವಾಗಲಿದೆ. ಇದರಿಂದ ನಿಮಗೆ ಹಣದ ಹರಿವು ಉತ್ತಮವಾಗುತ್ತದೆ. ವ್ಯಾಪಾರದಲ್ಲಿ ಲಾಭ ಇದೆ. ಅಲಂಕಾರ ವಸ್ತುಗಳನ್ನು ಮಾರಾಟ ಮಾಡುವವರು, ಸೌದರ್ಯತಜ್ಞರು, ಬೆಳ್ಳಿ ಬಂಗಾರ ಆಭರಣ ವ್ಯಾಪಾರಿಗಳಿಗೆ ಶುಭ ಲಾಭ ಇದೆ. ಎರಡನೇ ಮನೆಯ ಶನಿಯಿಂದ ಕುಟುಂಬದಲ್ಲಿ ಅಸೌಖ್ಯ. ಸಂಗಾತಿಯೊಡನೆ ವಿರಸ. ಇದು ವಿಕೋಪಕ್ಕೆ ಹೋಗದಂತೆ ತಾಳ್ಮೆ ವಹಿಸಿ. ದುರ್ಗಾ ಸ್ತುತಿ ಮಾಡಿ. ಆರರ ಕುಜ ನಿಮಗೆ ಧೈರ್ಯವನ್ನು ಪರಾಕ್ರಮವನ್ನೂ ಕೊಡುತ್ತಾನೆ. ಮುನ್ನುಗ್ಗಿ‌ ಯಾವುದೇ ಕೆಲಸ ಮಾಡಿದರೂ ನಿಮಗೆ ಜಯವಿದೆ. ಸಿಎ, ಬ್ಯಾಂಕಿಂಗ್ ಕ್ಷೇತ್ರ, ಅಕೌಂಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶುಭಲಾಭ ಇದೆ. ಹತ್ತರ ಬುಧ ವೃತ್ತಿಯಲ್ಲಿ ಯಶಸ್ಸನ್ನು ಕೊಡುತ್ತಾನೆ. ನಾಲ್ಕರ ಗುರು ಕೊಂಚ ಮಾನಸಿಕ ಕಿರಿಕಿರಿ ನೀಡುತ್ತಾನೆ. ಶ್ರೀ ದತ್ತಾತ್ರೇಯ ಸ್ತೋತ್ರ ಪಠಿಸಿ. ಕಡಲೆಬೇಳೆಯನ್ನು ದಾನವಾಗಿ ಕೊಡಿ. ಕಡಲೆ ಬೆಲ್ಲವನ್ನು ಬಿಳಿ ಹಸುವಿಗೆ ತಿನ್ನಿಸಿ. ಭೂಮಿ ವ್ಯವಹಾರದಲ್ಲಿ ಲಾಭ ಇದೆ. ಹೊಸ ಆಸ್ತಿ ಖರೀದಿ ಯೋಗ ಇದೆ. ಶನಿ ಮೂರನೇ ಮನೆಗೆ ಪ್ರವೇಶವಾದ ನಂತರ ಮತ್ತಷ್ಟು ಶುಭಫಲಗಳು ದೊರೆಯಲಿದೆ.

ಮಕರರಾಶಿ

ಮಕರರಾಶಿ

ಗ್ರಹಗಳು ನಿಮಗೆ ವ್ಯತಿರಿಕ್ತವಾಗಿ ಇವೆ. ಆದರೆ ಸೂರ್ಯ ಬುಧ ಅನುಕೂಲವಾಗಿದ್ದಾರೆ. ಗುರು ಕೂಡ ಅರ್ಧ ಬೆಂಬಲ ತೋರಿಸುತ್ತಾನೆ. ವಿದೇಶ ಪ್ರಯಾಣ ಯೋಗ ಇದೆ. ಆದರೆ ಕೆಲಸಗಳು ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ಆದರೂ ಯಾರಾದರೂ ಒಬ್ಬರು ದೈವಾನುಗ್ರಹದಿಂದ ನಿಮ್ಮ ಸಹಾಯಕ್ಕೆ ಒದಗಿ ಬರುತ್ತಾರೆ. 15 ರ ನಂತರ ನಿಮ್ಮ ಕೆಲಸಗಳು ಸರಾಗವಾಗಿ ಮುಂದುವರೆಯುತ್ತದೆ. 27 ರ ನಂತರ ಮತ್ತಷ್ಟು ಅಭಿವೃದ್ಧಿ ಇದೆ. ದುರ್ಗಾ ಸ್ತುತಿ ಪಾರಾಯಣ ಮಾಡಿ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಸಹೋದರರಿಂದ ಸಹಾಯ ಇದೆ. ಚಂದ್ರನ ಸಂಚಾರದಿಂದಲೂ ನಿಮಗೆ ಶುಭಫಲಗಳು ಸಿಗುತ್ತವೆ. ಆದರೂ ಈಗ ನಿಮಗೆ ಪ್ರಯತ್ನ ಹೆಚ್ಚು ಫಲ ಕಡಿಮೆ ಎಂಬಂತೆ ಆಗಿದೆ. ದತ್ತಾತ್ರೇಯ ಸ್ತೋತ್ರ ಹೇಳಿಕೊಳ್ಳಿ.‌

ಕುಂಭರಾಶಿ

ಕುಂಭರಾಶಿ

ನಿಮಗೆ ಎರಡರ ಗುರು ಮೂರರ ರಾಹು ಪ್ರಭಾವಶಾಲಿಗಳು. ನೀವು ನೆನೆಸಿದ ಕಾರ್ಯಗಳು ಚಿಟಿಕೆ ಹೊಡೆಯುವುದರಲ್ಲಿ ನೆರವೇರುತ್ತದೆ. ಐದರ ಕುಜನಿಂದ ಮಕ್ಕಳಿಂದ ಲಾಭ. ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವೃತ್ತಿಯಲ್ಲಿ ನಿಮ್ಮ ಕೀರ್ತಿ ಹೆಚ್ಚಾಗುವ ಸಮಯ.‌ ವೃತ್ತಿಯಸ್ಥಾನದ ಅಧಿಪತಿ ಕುಜ ಐದರಲ್ಲಿ ಇದ್ದಾನೆ. ಇದು ನಿಮಗೆ ವೃತ್ತಿಯಲ್ಲಿ ಅನುಕೂಲಕರ. ವಾತಾವರಣ ಕೊಡುತ್ತದೆ. 27 ರ ನಂತರ ಶುಕ್ರ ಸ್ವಂತ ಮನೆಗೆ ಬಂದಾಗ ನಿಮಗೆ ಒಂಬತ್ತನೆ ಮನೆಯಲ್ಲಿ‌ಒಂದು ರಾಜಯೋಗ ಆಗುತ್ತದೆ. ಇದರಿಂದ ಬಹಳಷ್ಟು ಶುಭಫಲಗಳನ್ನು ಕಾಣುವಿರಿ.

ಮೀನರಾಶಿ

ಮೀನರಾಶಿ

ಹನ್ನೊಂದರ ಶನಿ, ಏಳರ ಬುಧ ನಿಮಗೆ ಅನುಕೂಲರು. ನಿಮ್ಮ ರಾಶಿಯಲ್ಲೆ ಇರುವ ಗುರು ಕೊಂಚ ಕಿರಿಕಿರಿ ಯನ್ನೂ ನಷ್ಟವನ್ನೂ ಕೊಡುತ್ತಾನೆ. ಈಗ ಮೂರನೇ ಮನೆಯಲ್ಲಿರುವ ಕುಜ 15 ರ ನಂತರ ನಾಲ್ಕನೇ ಮನೆ ಪ್ರವೇಶವಾಗುತ್ತಾನೆ. ಈ ಎರಡೂ ಮನೆಗಳೂ ಕುಜನ ಸಂಚಾರ ನಿಮಗೆ ಶುಭಫಲವೇ ಸಿಗುತ್ತದೆ. ಯಾವುದೋ ಬಾಕಿಯಾಗಿ ಮರೆತುಹೋಗಿದ್ದ ಹಣ ವಾಪಸ್ ಬರುತ್ತದೆ. ಏಳರ ಬುಧನಿಂದ ವಿದ್ವತ್ ಜನರ ಪರಿಚಯವಾಗುತ್ತದೆ. ನಿಮ್ಮ ಹಿರಿಮೆ ಬೆಳೆಯುತ್ತದೆ. ಎರಡನೇ ಮನೆಯ ರಾಹುವಿನಿಂದ ನಿಮ್ಮ ಮಾತು ಕೆಲವರಿಗೆ ಖಾರವಾಗಿ ಕಾಣಬಹುದು. ಮನಸ್ತಾಪಕ್ಕೆ ಎಡೆಮಾಡಿಕೊಡದಂತೆ ಜಾಣತನವಾಗಿ ಮಾತನಾಡಿ.‌ ಹನ್ನೊಂದರ ಶನಿ ನಿಮಗೆ ಅನಿರೀಕ್ಷಿತ ಧನಲಾಭ ವಾಗುವಂತೆ ಮಾಡುತ್ತಾನೆ. ನಿಮಗೆ ಈಗ ಅರ್ಧಲಾಭ ಅರ್ಧ ನಷ್ಟದ ಸಮಯ. ಯೋಚಿಸಿ ಹೆಜ್ಜೆ ಮುಂದಿಡಿ.‌

ಶುಭಮಸ್ತು

English summary
October 2022 Monthly Horoscope In Kannada: October Masika Rashi Bhavishya: Check October Monthly Horoscope for all 12 Zodiac Signs in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X