ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

February Horoscope 2023 : ಫೆಬ್ರವರಿ 2023ರ ಮಾಸಭವಿಷ್ಯ: ಮಕರ ಸಂಕ್ರಾಂತಿ ನಂತರ ಈ ರಾಶಿಗಳಿಗೆ ಶುಭವಾಗಲಿದೆ!

|
Google Oneindia Kannada News

ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ ಸಮಯದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಲು ಬಯಸುತ್ತಾನೆ.ಈ ಮೂಲಕ ಭವಿಷ್ಯದಲ್ಲಿ ಉಂಟಾಗುವ ತೊಡಕುಗಳ ಕುರಿತು ಮುನ್ನೆಚ್ಚರಿಕೆ ವಹಿಸಬಹಿಸುತ್ತಾನೆ. ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ಮ ಮುಂಬರುವ ಸಮಯದಲ್ಲಿ ಸಂಭವಿಸಬಹುದಾದ ಘಟನೆಗಳನ್ನು ಊಹಿಸಲು ಸಹ ಕಷ್ಟವಾಗುತ್ತದೆ. ಅಂತಹ ಯಾವುದೇ ಮಾಹಿತಿಗಾಗಿ ವ್ಯಕ್ತಿಯು ಜ್ಯೋತಿಷ್ಯದ ಸಹಾಯವನ್ನು ತೆಗೆದುಕೊಳ್ಳುತ್ತಾನೆ.

ಶುಭಕೃತ ನಾಮ ಸಂವತ್ಸರದ ಉತ್ತರಾಯಣ ಮಾಘ-ಫಾಲ್ಗುಣ ಮಾಸ ಶಿಶಿರ ಋತು.ತಾ: 01.02.2023 ರಿಂದ 28.02.2023, ಮಾಸಭವಿಷ್ಯ.

ಮೇಷ ರಾಶಿ:

ಮೇಷ ರಾಶಿ:

ಈಗ ನಿಮ್ಮ ಕಷ್ಟಗಳೆಲ್ಲ ನೀಗುವ ಸಮಯ. ಮೂರು ವರ್ಷದಿಂದ ಒಂದಲ್ಲ ಒಂದು ಸಂಕಟಗಳಿಗೆ ಈಡಾಗಿದ್ದೀರಿ. ಸರಿಯಾದ ಗುರುಬಲ ಇಲ್ಲದೆ ಶನಿಬಲ ಇಲ್ಲದೆ ಯಾವ ಕೆಲಸಕ್ಕೆ ಕೈ ಹಾಕಿದರೂ ಹಿನ್ನಡೆ ಅನುಭವಿಸಿದ್ದೀರಿ. ಈಗ ನಿಮಗೆ ಅನುಕೂಲ ಸಮಯ. ಈಗ ನಿಮಗೆ ಗುರುಬಲ ಇಲ್ಲದಿದ್ದರೂ ಶನಿಬಲ ಇದೆ. ಶನಿ ಹನ್ನೊಂದನೇ ಮನೆಯಲ್ಲಿ ಬಹಳ ಬಲಿಷ್ಠ. ಹನ್ನೊಂದನೇ ಮನೆ ಲಾಭ ಸ್ಥಾನ. ಇಲ್ಲಿ ಯಾವುದೇ ಗ್ರಹ ಇದ್ದರೂ ಅದರ ಶಕ್ತಿಯಿದ್ದಷ್ಟು ಲಾಭ ಕೊಟ್ಟೇ ಕೊಡುತ್ತದೆ. ಶನಿ ಇದ್ದರೆ ಲಾಭ ಹೆಚ್ಚು ಏಕೆಂದರೆ ಶನಿ ಒಂದು ರಾಶಿಯಲ್ಲಿ ಎರಡೂವರೆ ವರ್ಷ ಇರುತ್ತಾನೆ. ಹೀಗಾಗಿ ಲಾಭವನ್ನೂ ಹೆಚ್ಚೇ ಕೊಡುತ್ತಾನೆ.

ನೀವು ಅಂದು ಕೊಂಡ ಕೆಲಸಗಳಲ್ಲಿ ಜಯ ಸಾಧಿಸಿಸುತ್ತೀರಿ. ವೃತ್ತಿಯಲ್ಲಿ ಹಾಗೂ ವೈಯುಕ್ತಿಕವಾಗು ಮುನ್ನಡೆ ಅಭಿವೃದ್ಧಿ ಇದೆ. ಕೋರ್ಟು ಕೇಸುಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಪ್ರಮೋಷನ್ ದೊರೆಯುತ್ತದೆ. ಮನೆ ಕಟ್ಟುವುದು, ಹೊಸ ಗಾಡಿ ತೆಗೆದುಕೊಳ್ಳುವುದು ಮುಂತಾದ ಗುಣಾತ್ಮಕ ಸಂಗತಿಗಳು ನಡೆಯುತ್ತದೆ. ಹಣವು ನಿಮ್ಮ ಬಳಿ ಹರಿದು ಬರುತ್ತದೆ. ಆದರೆ ರಾಹು ನಿಮ್ಮ ರಾಶಿಯಲ್ಲೇ ಇರುವುದರಿಂದ ಆರೋಗ್ಯದ ಬಗ್ಗೆ ಗಮನ ಇರಲಿ. ಕಬ್ಬಿಣ, ಹಾಗೂ ತೈಲ ವ್ಯಾಪಾರಿಗಳಿಗೆ ಶುಭಲಾಭ ಇದೆ.

ವೃಷಭ ರಾಶಿ:

ವೃಷಭ ರಾಶಿ:

ಈಗ ನಿಮಗೆ ಶನಿ ಹತ್ತನೇ ಮನೆಯಲ್ಲಿ ಇದ್ದಾನೆ. ಹತ್ತನೇ ಮನೆ ಕುಂಭರಾಶಿಯಲ್ಲಿ ಶನಿ ಬಲಿಷ್ಠ ಇದು ಶನಿಗೆ ಮೂಲತ್ರಿಕೋಣ ಸ್ಥಾನ. ಹತ್ತನೇ ಮನೆ ವೃತ್ತಿಸ್ಥಾನ. ನಿಮಗೆ ವೃತ್ತಿಯಲ್ಲಿ ಶ್ರೇಯಸ್ಸು, ಅಭಿವೃದ್ಧಿ ಇದೆ. ಕಚೇರಿಯಲ್ಲಿ ಒಳ್ಳೆಯ ಹೆಸರು ಪಡೆಯುತ್ತೀರಿ. ದಕ್ಷರು,ಪ್ರಾಮಾಣಿಕರು ಎನಿಸಿಕೊಳ್ಳುತ್ತೀರಿ. ಈಗ ನಿಮಗೆ ಗುರುಬಲ ಕೂಡ ಇದೆ. ಗುರು ಹನ್ನೊಂದನೇ ಮನೆ ಲಾಭಸ್ಥಾನದಲ್ಲಿ ಇದ್ದಾನೆ. ಗುರು ನಿಮ್ಮನ್ನು ಅಪಾಯಗಳಿಂದ ಪಾರು ಮಾಡುತ್ತಾನೆ. ಗುರು ಧರ್ಮ ಗ್ರಹ. ಹೀಗಾಗಿ ನಿಮಗೆ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಲಾಭ ಕೊಟ್ಟೇ ಕೊಡುತ್ತಾನೆ. ಧರ್ಮಮಾರ್ಗದಲ್ಲಿ ನಡೆಸುತ್ತಾನೆ.

ಕುಲದೇವರ ದರ್ಶನ ಭಾಗ್ಯ ಇದೆ. ತೀರ್ಥಯಾತ್ರೆ ಪುಣ್ಯಕ್ಷೇತ್ರ ದರ್ಶನ ಮಾಡುತ್ತೀರಿ. ಯಾವುದಾದರೂ ಬಹು ದಿನಗಳಿಂದ ಅಂದುಕೊಂಡಿದ್ದ ಕೆಲಸಕ್ಕೆ ಶುಭಾರಂಭವಾಗಲಿದೆ. ಬಂಧುಗಳು ಆತ್ಮೀಯರ ಭೇಟಿ ಆಗುತ್ತದೆ. ನಿಮ್ಮನ್ನು ಯಾರೂ ನೆಲಕ್ಕೆ ಬೀಳಿಸಲಾರರು. ಶತ್ರುಗಳಿಂದ ರಕ್ಷಣೆ ಸಿಗುತ್ತದೆ. ನಿಮ್ಮ ವಿರುದ್ಧ ಯಾರಾದರೂ ಪಿತೂರಿ ಮಾಡಿದರೆ ಅದು ವ್ಯರ್ಥವಾಗುತ್ತದೆ. ಬಹಳ ಒಳ್ಳೆಯ ಸಮಯ. ಹಣದ ಹರಿವು ಕೂಡ ಉತ್ತಮವಾಗಿದೆ. ಆದರೆ 12 ನೇ ಮನೆಯಲ್ಲಿ ರಾಹು ಇರುವುದರಿಂದ ಖರ್ಚುಗಳ ಬಗ್ಗೆ ಎಚ್ಚರಿಕೆ ಇರಲಿ.

ಮಿಥುನ ರಾಶಿ:

ಮಿಥುನ ರಾಶಿ:

ನಿಮಗೆ ಕಳೆದ ಮೂರು ವರ್ಷದಿಂದ ಇದ್ದ ಅಷ್ಠಮ ಶನಿಯ ಕಾಟ ಈಗ ನಿವಾರಣೆ ಆಗಿದೆ. ನಿಮ್ಮ ಪಾಲಿಗೆ ಇದು ಒಂದು ದೊಡ್ಡ ಮೈಲಿಗಲ್ಲು. ಅಷ್ಠಮ ಶನಿ ಯಾವಯಾವ ರೀತಿ ತೊಂದರೆ ಕೊಡುತ್ತದೋ ಗೊತ್ತಾಗುವುದಿಲ್ಲ. ಯಾವ ಕೆಲಸಕ್ಕೆ ಕೈಹಾಕಿದರೂ ಹಣ ಮತ್ತು ಶ್ರಮ ವ್ಯರ್ಥವೇ ವಿನಾ ಕೆಲಸ ಆಗಿರುವುದಿಲ್ಲ. ಏನೇನೋ ತೊಂದರೆಗಳು ಅಡಚಣೆಗಳು ಎದುರಾಗಿರುತ್ತದೆ. ಕೆಲವರು ವೃಥಾ ಕೇಸುಗಳಲ್ಲಿ ಸಿಕ್ಕಿಕೊಂಡು ಒದ್ದಾಡಿರುತ್ತೀರಿ. ಕೌಟುಂಬಿಕ ನೆಮ್ಮದಿ ಹಾಳಾಗಿರುತ್ತದೆ. ಗಂಡ-ಹೆಂಡತಿ ನಡುವೆ ವೈಮನಸ್ಸು ಬಂದಿರುತ್ತದೆ. ಈಗ ಅದೆಲ್ಲಕ್ಕೂ ಮುಕ್ತಾಯ ಆಗಲಿದೆ. ನಿಮ್ಮ ಯೋಜನೆಗಳು ಹಾಗೂ ಜೀವನ ಏನೇನು ಏರುಪೇರು ಆಗಿದೆಯೋ ಅವೆಲ್ಲ ಈಗ ಸರಿಯಾಗಲಿದೆ. ಶನಿ ಹೋಗುವಾಗ ಏನಾದರೂ ಒಳ್ಳೆಯದನ್ನು ಕೊಟ್ಟು ಹೋಗುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ನಿಮಗೆ ಶನಿ ಈಗ ಒಳ್ಳೆಯದು ಮಾಡಿಯೇ ಹೋಗುತ್ತಾನೆ. ಮುಂದಿನ ದಿನಗಳಲ್ಲಿ ನಿಮಗೆಗುರುಬಲ ಕೂಡ ಸಿಗಲಿದ್ದು ಇದು ನಿಮಗೆ ಇನ್ನಷ್ಟು ಶಕ್ತಿಯನ್ನು ಕೊಡುತ್ತದೆ. ರಾಹು ಈಗ ಹನ್ನೊಂದನೇ ಮನೆ ಲಾಭ ಸ್ಥಾನದಲ್ಲಿ ಇದ್ದಾನೆ. ಇದು ನಿಮಗೆ ಹಣದ ಹರಿವನ್ನು ಬಹಳ ಅಭಿವೃದ್ಧಿ ಮಾಡುತ್ತದೆ. ನೀವು ಹೂಡುವ ಪ್ರತಿ ಯೋಜನೆಯಲ್ಲೂ ಧನಲಾಭ ಇದೆ. ಸಾಲಗಳನ್ನು ತೀರಿಸಲು ಅನುಕೂಲ ಒದಗಿ ಬರುತ್ತದೆ.

ಕಟಕ ರಾಶಿ:

ಕಟಕ ರಾಶಿ:

ಇದುವರೆಗೂ ಏಳನೇ ಮನೆಯಲ್ಲಿ ಇದ್ದ ಶನಿ ಈಗ ಎಂಟನೇ ಮನೆಗೆ ಬಂದಿದ್ದಾನೆ. ಇದು ನಿಮಗೆ ಅಷ್ಠಮ ಶನಿಯ ಪ್ರಭಾವ ಪ್ರಾರಂಭವನ್ನು ತೋರಿಸುತ್ತದೆ. ಅಷ್ಠಮ ಶನಿ ಕೆಲವು ತೊಂದರೆಗಳನ್ನು ನೀಡುತ್ತದೆ. ಕೆಲಸಕಾರ್ಯಗಳು ವಿಳಂಬ, ಹಣಕಾಸಿನ ವಿಪರೀತ ಖರ್ಚು, ವಿನಾಕಾರಣ ಅಪವಾದ, ನಿಂದೆ ಅಪಮಾನ ಇಂಥವನ್ನು ಅನುಭವಿಸುತ್ತೀರಿ. ವೃತ್ತಿಯಲ್ಲಿ ಮೇಲಧಿಕಾರಿಗಳಿಂದ ಕಿರುಕುಳ, ಕೈಕೆಳಗಿನವರಿಂದ ಅಸಹಕಾರ ಮುಂತಾಗಿ ತೊಂದರೆಗಳು ಇರುತ್ತದೆ. ಆರೋಗ್ಯ ಕೆಡಬಹುದು. ಅಥವಾ ಈಗಾಗಲೇ ಆರೋಗ್ಯದಲ್ಲಿ ಸಮಸ್ಯೆ ಇರುವವರಿಗೆ ಅದರ ತೀವ್ರತೆ ಹೆಚ್ಚಾಗಬಹುದು.

ನಿಮಗೆ ಬೇಡದ ಸ್ಥಳಕ್ಕೆ ವರ್ಗಾವಣೆ ಆಗಬಹುದು. ಮನೆಯಲ್ಲಿ ವಿನಾಕಾರಣ ಜಗಳ ಮನಸ್ತಾಪ ಆಗುತ್ತದೆ. ಯಾವುದಕ್ಕೂ ಹೆದರಬೇಡಿ. ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳಿ. ಸತ್ಯದ ದಾರಿಯಲ್ಲಿ ನಡೆಯಿರಿ. ನೀವು ಸತ್ಯದ ದಾರಿಯಲ್ಲಿ ಇದ್ದರೆ ಶನಿ ನಿಮ್ಮನ್ನು ಏನೂ ಮಾಡಲಾರ. ಶನಿ ಪೊಲೀಸ್ ಇದ್ದ ಹಾಗೆ. ನಾವು ತಪ್ಪುಮಾಡುವುದನ್ನು ಕಾಯುತ್ತಿರುತ್ತಾನೆ. ತಪ್ಪಿಗೆ ಕಠಿಣ ಶಿಕ್ಷೆಯನ್ನೇ ಕೊಡುತ್ತಾನೆ. ಆದ್ದರಿಂದ ತಪ್ಪು ಮಾಡಲು ಹೋಗಬೇಡಿ. ಈಗ ಗುರುಬಲ ಇರುವುದರಿಂದ ಗುರು ನಿಮ್ಮನ್ನು ಬಹಳ ಮಟ್ಟಿಗೆ ಕಾಪಾಡುತ್ತಾನೆ. ಕುಜ 11 ನೇ ಮನೆಯಲ್ಲಿ ಇರುವುದರಿಂದ ಕೂಡ ನಿಮಗೆ ಲಾಭ ಇದೆ. ಈ ತಿಂಗಳು ನಿಮಗೆ ಮಿಶ್ರಫಲ.

ಸಿಂಹ ರಾಶಿ:

ಸಿಂಹ ರಾಶಿ:

ಈಗ ಎರಡೂವರೆ ವರ್ಷದಿಂದ ಶನಿ ಆರನೇ ಮನೆಯಲ್ಲಿ ಇದ್ದು ಅದರ ಲಾಭವನ್ನು ಅನುಭವಿಸಿದ್ದೀರಿ. ಈಗ ಶನಿ ಏಳನೇ ಮನೆಗೆ ಪ್ರವೇಶವಾಗಗಿದ್ದಾನೆ. ಇದು ನಿಮಗೆ ಲಾಭವೂ ಇಲ್ಲ ನಷ್ಟವೂ ಇಲ್ಲ. ಆದರೆ ವೇಗವಾಗಿ ಹೋಗುತ್ತಿದ್ದ ಜೀವನಕ್ಕೆ ಬ್ರೇಕ್ ಬಿದ್ದಂತೆ ಆಗುತ್ತದೆ. ಹಣಕಾಸಿನ ವಿಪರೀತ ಖರ್ಚು ಇಲ್ಲದೇ ಹೋದರೂ ಕೆಲಸಕಾರ್ಯಗಳು ನಿಧಾನವಾಗುತ್ತದೆ. ನಿಮ್ಮ ವೇಗಕ್ಕೆ ತಡೆ ಬಿದ್ದಂತೆ ಆಗುತ್ತದೆ. ಈಗ ಗುರುಬಲವೂ ಇಲ್ಲದಿರುವುದರಿಂದ ಎಲ್ಲ ಕೆಲಸಗಳು ನೀವು ಅಂದುಕೊಂಡಂತೆ ನಡೆಯುವುದಿಲ್ಲ. ಸಮಯ ಶ್ರಮ ಬೇಡುತ್ತದೆ. ಧಾರ್ಮಿಕ ಕೆಲಸಕಾರ್ಯಗಳಿಗೆ ಹಣ ಖರ್ಚಾಗುತ್ತದೆ.

ಗುರು ಎಂಟನೇ ಮನೆಯಲ್ಲಿ ಇರುವುದು ರಾಹು ಒಂಬತ್ತನೇ ಮನೆಯಲ್ಲಿ ಇರುವುದು ಶನಿ ಏಳನೇ ಮನೆಯಲ್ಲಿ ಇರುವುದು ಎಲ್ಲವೂ ಈಗ ನಿಮಗೆ ವ್ಯತಿರಿಕ್ತ ಪರಿಣಾಮಗಳು ಆಗುತ್ತವೆ. ಬಲವಾದ ಯಾವ ಗ್ರಹದ ಬೆಂಬಲವೂ ಇಲ್ಲ. ಕೇತು ಒಂಬ್ಬನೇ ಈಗ ನಿಮಗೆ ರಕ್ಷೆ. ಕೇತು ಮೂರನೇ ಮನೆಯಲ್ಲಿ ಇರುವುದು ಕೊಂಚ ಧನಲಾಭವನ್ನು, ಮುನ್ನುಗಿ ಕೆಲಸ ಮಾಡುವ ಛಾತಿಯನ್ನೂ ಕೊಡುತ್ತಾನೆ. ಕೆಲಸಕಾರ್ಯಗಳು ನಡೆಯಲು ಸಹಕರಿಸುತ್ತಾನೆ. ನಿಮಗೆ ಲಾಭದ ದಿನಗಳನ್ನು ಕಾಣಲು ಇನ್ನೂ ಸಮಯ ಬೇಕು. ನೀವು ಕಾಯಬೇಕು. ನಿಮ್ಮ ದಶಾಭುಕ್ತಿ ಒಳ್ಳೆಯದಿದ್ದರೆ ಪರವಾಗಿಲ್ಲ. ಇಲ್ಲವಾದರೆ ಹಣಕಾಸಿನ ಖರ್ಚು, ಮಾನಸಿಕ ಅಶಾಂತಿ ಇರುತ್ತದೆ. ನಿತ್ಯವು ಈಶ್ವರನ ಧ್ಯಾನ ಮಾಡಿ.

ಕನ್ಯಾ ರಾಶಿ:

ಕನ್ಯಾ ರಾಶಿ:

ಈಗ ನಿಮಗೆ ಶನಿ ಆರನೇ ಮನೆಗೆ ಪ್ರವೇಶವಾಗಿದ್ದಾನೆ. ಇದುವರೆಗೂ ಪಂಚಮಸ್ಥಾನದಲ್ಲಿ ಶನಿ ಇದ್ದು ಬಹಳ ಅಡೆತಡೆಗಳನ್ನು ನಷ್ಟವನ್ನೂ ಅನುಭವಿಸಿದ್ದೀರಿ. ಈಗ ನಿಮಗೆ ಶುಭಸಮಯ. ಗುರುಬಲವೂ ಇದ್ದೂ ಅದರ ಜೊತೆಗೆ ಶನಿಬಲವೂ ಸೇರಲಿದೆ. ನೀವು ಯಾವುದೇ ಕೆಲಸಕಾರ್ಯ ಅಥವಾ ಹೊಸ ಯೋಜನೆಗಳನ್ನು ಶುರು ಮಾಡಬಹುದು. ಎಲ್ಲಿಯೇ ಕೆಲಸವಾಗಬೇಕಿದ್ದರೂ ಸುಲಲಿತವಾಗಿ ಯಾವುದೆ ತಡೆಯಿಲ್ಲದೆ ನಡೆಯುತ್ತದೆ. ಹಣದ ಹರಿವು ಬಹಳ ಉತ್ತಮವಾಗಿದೆ. ಯಾವುದಾದರೂ ವಸೂಲಿಯಾಗದೇ ಬಾಕಿ ಇದ್ದರೆ ಈಗ ವಸೂಲಾಗುತ್ತದೆ. ವಿದೇಶಿ ವ್ಯಾಪಾರಗಳಲ್ಲಿ ಲಾಭ ಇದೆ.

ಅವಿವಾಹಿತರಿಗೆ ವಿವಾಹ ಯೋಗ ಇದೆ. ಕೋರ್ಟು ಕೇಸುಗಳಲ್ಲಿ ಜಯ ನಿಮ್ಮದೇ ಆಗುತ್ತದೆ. ಉನ್ನತ ಶಿಕ್ಷಣಕ್ಕೆ ಅವಕಾಶ ಇದೆ. ನೀವು ಇನ್ನು ಎರಡೂವರೆ ವರ್ಷ ಯಾವುದಾದರೂ ದೊಡ್ಡ ಯೋಜನೆಯಲ್ಲಿ ಹಣ ಹೂಡಬಹುದು. ಹೊಸ ಕೆಲಸ ಸಿಗುವ ಸಾಧ್ಯತೆ ಇದೆ. ಈಗ ಇರುವ ಕೆಲಸದಲ್ಲಿ ಬಡ್ತಿ ಉನ್ನತಿ ಇದೆ. ಸರ್ಕಾರದಿಂದ ಲಾಭ ಇದೆ. ನಿಮಗೆ ಈಗ ಎರಡನೇ ಮನೆಯಲ್ಲಿ ಕೇತು ಇರುವುದು ಕೊಂಚ ಕಿರಿಕಿರಿಯಾಗುತ್ತದೆ. ನಿಮ್ಮ ಮಾತಿನಿಂದ ನಿಮಗೆ ತೊಂದರೆ ಬರುವ ಸಾಧ್ಯತೆ ಇದೆ. ಯೋಚಿಸಿ ಮಾತನಾಡಿ. ರಾಹು ಎಂಟನೇ ಮನೆಯಲ್ಲಿ ಇರುವುದು ಆರೋಗ್ಯಕ್ಕೆ ತೊಂದರೆ ಆಗಬಹುದು. ಜಾಗ್ರತೆ ಇರಲಿ.

ತುಲಾ ರಾಶಿ:

ತುಲಾ ರಾಶಿ:

ನಿಮಗೆ ಈಗ ಪಂಚಮ ಶನಿಯ ಪ್ರಾರಂಭ. ಇದು ನಿಮಗೆ ಕೊಂಚ ಹಿನ್ನಡೆ ಕೊಡುತ್ತದೆ. ಹಣಕಾಸಿನ ನಷ್ಟ, ಆರೋಗ್ಯದಲ್ಲಿ ಏರುಪೇರು, ಬಂಧುಗಳಲ್ಲಿ ಮನಸ್ತಾಪ, ಕುಟುಂಬದಲ್ಲಿ ಅಶಾಂತಿ ಮೊದಲಾದ ಋಣಾತ್ಮಕ ಸಂಗತಿಗಳು ನಡೆಯುತ್ತದೆ. ಯಾವ ಕೆಲಸಕ್ಕೆ ಕೈಹಾಕಿದರೂ ನಿಧಾನ, ಬೇಗ ಬೇಗ ಆಗುವುದಿಲ್ಲ. ಅಪಾರ ಹಣ ಹಾಗೂ ಪರಿಶ್ರಮ ಬೇಡುತ್ತದೆ. ಈ ಅವಧಿಯಲ್ಲಿ ನೀವು ಯಾರಿಗೂ ಸಾಲ ಕೊಡಬೇಡಿ. ನೀವು ಸಾಲ ಮಾಡಿದ್ದರೆ ಈಗ ಸಾಲ ಕೊಟ್ಟವರು ಬಂದು ತಗಾದೆ ಮಾಡಬಹುದು. ಈಗ ಗುರುಬಲವೂ ಇಲ್ಲ.

ಪಂಚಮ ಶನಿ ಎರಡೂವರೆ ವರ್ಷ ಇದ್ದರೂ ಗುರುಬಲ ಇದ್ದಾಗ ಕಷ್ಟಗಳು ದೊಡ್ಡದೆನಿಸುವುದಿಲ್ಲ. ಪರಿಹಾರ ಶೀಘ್ರವಾಗಿ ದೊರೆಯುತ್ತದೆ. ಆದರೆ ಈಗ ಗುರುಬಲ ಇಲ್ಲದಿರುವುದರಿಂದ ಸಣ್ಣಪುಟ್ಟ ತೊಂದರೆಗಳು ಅಗಾಧವಾಗಿ ಕಾಣುತ್ತದೆ. ಚಿಂತೆ ಹೆಚ್ಚಿಸುತ್ತದೆ. ಒಂದೆರಡು ತಿಂಗಳು ಕಳೆದ ಬಳಿಕ ಗುರುಬಲ ಬಂದು ಸಮಸ್ಯೆಗಳು ಹಗುರವಾಗುತ್ತದೆ. ನಿಮ್ಮ ರಾಶಿಯಲ್ಲೇ ಕೇತು ಇರುವುದು ಆರೋಗ್ಯಕ್ಕೆ ತೊಂದರೆ. ಗಣಪತಿಯ ಪೂಜೆ ಮಾಡಿ. ಏಳನೇ ಮನೆಯಲ್ಲಿ ರಾಹು ಇರುವುದು ವಿವಾಹಕ್ಕೆ ತೊಂದರೆ.ಯಾವುದಕ್ಕೂ ತಾಳ್ಮೆ ಇರಲಿ. ಕಾಳಹಸ್ತಿಗೆ ಹೋಗಿ ದರ್ಶನ ಮಾಡಿಕೊಂಡು ಬರುವುದು ಸೂಕ್ತ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಈಗ ನಿಮಗೆ ಬಹಳ ಒಳ್ಳೆಯ ಸಮಯ. ಶನಿಬಲ ಕಡಿಮೆಯಾದರೂ ಗುರುಬಲ ರಾಹುಬಲ ಇದೆ. ರಾಹು ಆರನೇ ಮನೆಯಲ್ಲಿ ಹಾಗೂ ಗುರು ಐದನೇ ಮನೆಯಲ್ಲಿ ಶುಭಫಲಗಳನ್ನು ಕೊಡುತ್ತಾರೆ. ರಾಹು ಆರನೇ ಮನೆಯಲ್ಲಿ ಧನಲಾಭ ಮಾಡಿಸಿದರೆ ಗುರು ಐದನೇ ಮನೆಯಲ್ಲಿ ವಿವಾಹ, ಸಂತಾನ ಮೊದಲಾದ ಅಭಿವೃದ್ಧಿ ಫಲಗಳನ್ನು ಕೊಡುತ್ತಾನೆ. ವೃತ್ತಿಯಲ್ಲಿ ಯಶಸ್ಸನ್ನು ಕೊಡಿಸುತ್ತಾನೆ. ಕೀರ್ತಿ ಪ್ರತಿಷ್ಠೆಗಳನ್ನು ಹೆಚ್ಚಿಸುತ್ತಾನೆ. ಬಂಧುಗಳೊಂದಿಗೆ ಆತ್ಮೀಯತೆಯನ್ನು ಬೆಳೆಸುತ್ತಾನೆ. ರಾಹು ಆರನೇ ಮನೆಯಲ್ಲಿ ಇರುವುದರಿಂದ ನಿಮಗೆ ಎಲ್ಲಿಯಾದರೂ ಬಂಡವಾಳ ಹೂಡಿದರೆ ಯಶಸ್ಸು ಇದೆ.

ಕೇತು 12ನೇ ಮನೆಯಲ್ಲಿ ಇರುವುದು ನಿಮಗೆ ಆಧ್ಯಾತ್ಮದ ಕಡೆ ಮನಸ್ಸು ಸೆಳೆಯುತ್ತದೆ. ಸಾಧುಸಂತರ ಪರಿಚಯ ಆಗುತ್ತದೆ. ಮಂತ್ರವಾದದಲ್ಲಿ ಆಸಕ್ತಿ ಇರುವವರಿಗೆ ಈಗ ಅದನ್ನು ಕಲಿಯಲು ಸುಸಮಯ. ಆದರೆ ನಿಮ್ಮ ಜಾತಕದಲ್ಲೂ ಕೇತು ಒಳ್ಳೆಯ ಮನೆಯಲ್ಲಿ ಇದ್ದರೆ ಮಂತ್ರವಾದ ನಿಮಗೆ ಒಲಿಯುತ್ತದೆ. ಸಂತಾನದಿಂದ ಲಾಭ ಇದೆ. ಈಗ ನಿಮಗೆ ಪರಿಶ್ರಮ ಕಡಿಮೆ ಪ್ರಯೋಜನ ಹೆಚ್ಚು. ಯಾವುದೇ ಕೆಲಸವೂ ಅಡೆತಡೆಗಳಿಲ್ಲದೇ ವೇಗವಾಗಿ ನಡೆಯುತ್ತದೆ. ಉನ್ನತ ಶಿಕ್ಷಣಕ್ಕೆ ಈಗ ಅವಕಾಶ ಇದೆ. ವಿದ್ಯಾರ್ಥಿಗಳಿಗೂ ಶುಭ. ಆಸ್ತಿ ಖರೀದಿ ವಾಹನ ಖರೀದಿ ಮೊದಲಾದವನ್ನು ಈಗ ನಿರ್ಧರಿಸಬಹುದು.

ಧನಸ್ಸು ರಾಶಿ:

ಧನಸ್ಸು ರಾಶಿ:

ಈಗ ನಿಮಗೆ ಸಾಡೆಸಾತಿ ಶನಿಯಿಂದ ಸಂಪೂರ್ಣ ಬಿಡುಗಡೆ ದೊರೆತಿದೆ. ಸುಮಾರು ಎಂಟು ವರ್ಷದಿಂದ ಬಹಳ ಕಷ್ಟ ಪಟ್ಟಿದ್ದೀರಿ. ನೋವು ಅವಮಾನಗಳನ್ನು ಅನುಭವಿಸಿದ್ದೀರಿ. ಹಣ ಕಳೆದುಕೊಂಡಿದ್ದೀರಿ. ವೃತ್ತಿಯನ್ನು ಕಳೆದುಕೊಂಡವರೂ ಇದ್ದಾರೆ. ಕೌಟುಂಬಿಕ ಸಾಮರಸ್ಯ ಕಳೆದುಕೊಂಡವರೂ ಇದ್ದಾರೆ. ಈ ರಾಶಿಯವರು ಬಹಳ ಕಷ್ಟಪಟ್ಟಿದ್ದಾರೆ. ಆತ್ಮೀಯರೂ ಬಂಧುಗಳೂ ದೂರ ಆಗಿದ್ದಾರೆ. ನಿಮ್ಮವರೇ ನಿಮಗೆ ಅವಮಾನ ಸಂಕಟಗಳನ್ನು ಕೊಟ್ಟಿದ್ದಾರೆ. ಎಲ್ಲವನ್ನೂ ಸಹಿಸಿದ್ದೀರಿ. ಆರೋಗ್ಯ ಕೈಕೊಟ್ಟಿದೆ. ಈಗ ಅವೆಲ್ಲಕ್ಕೂ ಅಂತಿಮ ತೆರೆ ಬೀಳಲಿದೆ.

ಈಗ ನೀವು ಮುಟ್ಟಿದ್ದೆಲ್ಲ ಚಿನ್ನ. ಹೊಸ ಕೆಲಸ, ಇರುವ ಕೆಲಸದಲ್ಲಿ ಬಡ್ತಿ, ನಿಮಗೆ ಬೇಕಾದ ಕಡೆಗೆ ವರ್ಗಾವಣೆ ಮುಂತಾದ ವೃತ್ತಿಪರ ಶುಭಫಲಗಳು ಸಿಗಲಿವೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಆಸ್ತಿ ಕೊಳ್ಳುವ ಯೋಗ ಇದೆ. ನಿಮ್ಮನ್ನು ಅವಮಾನ ಪಡಿಸಿದವರ ಮುಂದೆ ತಲೆ ಎತ್ತಿ ನಿಲ್ಲಲಿದ್ದೀರಿ. ಮುಂದೆ ಗುರುಬಲವೂ ಸಿಕ್ಕಿ ನಿಮ್ಮ ಅದೃಷ್ಟ ಇನ್ನೂ ಒಂದು ಮೆಟ್ಟಿಲು ಏರುತ್ತದೆ. ಮಕ್ಕಳಿಂದ ಶುಭ ಸಮಾಚಾರ ಕೇಳುತ್ತೀರಿ. ಮಕ್ಕಳ ಅಭಿವೃದ್ಧಿ ನಿಮಗೆ ಸಂತಸ ಕೊಡುತ್ತದೆ. ಪ್ರವಾಸಗಳನ್ನು ಮಾಡುವ ಕಾಲ. ಖುಷಿಯಾಗಿ ಸಂತಸದಿಂದ ಕಾಲ ಕಳೆಯುವ ಸಮಯ ಬಂದಿದೆ. ಹಣಕಾಸಿನ ಹರಿವು ಉತ್ತಮವಾಗಿದೆ. ಅನಾರೋಗ್ಯ ಇದ್ದವರಿಗೆ ಆರೋಗ್ಯ ಸರಿಹೋಗುತ್ತದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ.

ಮಕರ ರಾಶಿ:

ಮಕರ ರಾಶಿ:

ಮೂರು ವರ್ಷದಿಂದ ನಿಮ್ಮ ರಾಶಿಯಲ್ಲೇ ಇದ್ದ ಶನಿ ಈಗ ಮುಂದಿನ ರಾಶಿಯಾದ ಕುಂಭಕ್ಕೆ ಚಲಿಸಿದ್ದಾನೆ. ಕುಂಭರಾಶಿ ಕೂಡ ಶನಿಗೆ ಸ್ವಂತ ಮನೆಯಾದರೂ ಅಲ್ಲಿ ಅವನಿಗೆ ಬಲ ಹೆಚ್ಚು. ಐದು ವರ್ಷಗಳಿಂದ ಬಹಳ ಸವಾಲುಗಳನ್ನು ಎದುರಿಸಿದ್ದೀರಿ. ನಾನಾ ವಿಧದ ಕಷ್ಟಗಳನ್ನು ಅನುಭವಿಸಿದ್ದೀರಿ. ಜೀವನವೇ ಬೇಸರವಾಗುವಷ್ಟು ಮನಸ್ಸಿಗೆ ನೋವಾಗಿದೆ. ಈಗ ನಿಮಗೆ ಸಾಡೆಸಾತಿ ಶನಿಯಿಂದ ಮುಕ್ಕಾಲು ಭಾಗ ಬಿಡುಗಡೆ ಸಿಕ್ಕಿದೆ. ಇನ್ನು ಕಾಲು ಭಾಗ ಮಾತ್ರವೇ ಇದೆ. ಈ ಸಮಯದಲ್ಲಿ ಶನಿ ಅಷ್ಟೊಂದು ತೊಂದರೆ ನೀಡಲಾರನು. ನಿಮ್ಮ ತೊಂದರೆ ಕಷ್ಟಗಳೆಲ್ಲವೂ ಈಗ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.

ಹೊಸ-ಹೊಸ ಅವಕಾಶಗಳು ಸಿಗುತ್ತದೆ. ತುಂಬಾ ಒಳ್ಳೆಯ ಅಂತ ಅಲ್ಲದಿದ್ದರೂ ತಕ್ಕಮಟ್ಟಿನ ಅವಕಾಶಗಳು ಸಿಗಲಿದೆ. ನಿಮ್ಮ ಸಾಮರ್ಥ್ಯಕ್ಕೆ ಕಡಿಮೆ ಅನಿಸಿದರೂ ಬೇಸರಿಸಬೇಡಿ. ಬಂದ ಅವಕಾಶವನ್ನು ಒಪ್ಪಿಕೊಳ್ಳಿ. ಮುದೆ ಇದೇ ನಿಮಗೆ ಮುಂದೆ ಯಶಸ್ಸಿನ ಮೆಟ್ಟಿಲಾಗುತ್ತದೆ. ಮನೆಯಿಂದ ದೂರ ಇರುವ ಸಾಧ್ಯತೆ ಇದೆ. ಇದನ್ನು ವೃತ್ತಿ ರೀತ್ಯಾ ಬದಲಾಯಿಸಿಕೊಳ್ಳಿ. ಈಗ ನಾಲ್ಕನೇ ಮನೆಯಲ್ಲಿ ಇರುವ ರಾಹು ಮೂರನೇ ಮನೆಗೆ ಬಂದಾಗ ನಿಮಗೆ ಇನ್ನೂ ಹೆಚ್ಚಿನ ಧನಲಾಭ ಹಾಗೂ ಒಳ್ಳೆಯ ಸಂಗತಿಗಳು ನಡೆಯುತ್ತದೆ. ಹಣಕಾಸು ಕೊಂಚ ಕೈಕಟ್ಟಿದರೂ ನಿತ್ಯಜೀವನಕ್ಕೆ ಬೇಕಾದಷ್ಟು ಒದಗಿ ಬರುತ್ತದೆ. ಮುಂದೆ ಒಳ್ಳೆಯ ದಿನಗಳು ಇವೆ. ಕೊಂಚ ತಾಳ್ಮೆ ವಹಿಸಿ. ಮನಸ್ಸನ್ನು ಅಧೀರ ಮಾಡಿಕೊಳ್ಳಬೇಡಿ. ನೀವು ಕಳೆದುಕೊಂಡ ಎಲ್ಲವನ್ನೂ ಮುಂದೆ ಖಂಡಿತಾ ಗಳಿಸುತ್ತೀರಿ.

ಕುಂಭ ರಾಶಿ:

ಕುಂಭ ರಾಶಿ:

ನಿಮಗೆ ಈಗ ನಿಮ್ಮ ರಾಶಿಗೇ ಶನಿ ಬಂದಿದ್ದಾನೆ. ನಿಮ್ಮ ರಾಶಿಗೇ ಶನಿ ಬಂದಾಗ ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ನಿಮ್ಮ ಹತ್ತಿರದವರೇ ನಿಮಗೆ ಅವಮಾನ ಮಾಡುವುದು, ನಿಮ್ಮ ಯಾವುದೋ ಮರೆತೇ ಹೋಗಿದ್ದ ಹಳೆಯ ತಪ್ಪು ಈಗ ಮೇಲೆದ್ದು ನಿಂತು ನಿಮ್ಮನ್ನು ಹೆದರಿಸುವುದು ಆರೋಗ್ಯ ಕೆಡುವುದು ಮುಂತಾದ ಸಂಗತಿಗಳು ನಡೆಯುತ್ತದೆ. ಯಾವುದೇ ಮುಖ್ಯ ನಿರ್ಧಾರಗಳನ್ನು ಮಾಡುವಾಗ ಜಾಗರೂಕರಾಗಿರಿ.

ಯಾರೊಂದಿಗೆ ಮಾತನಾಡಬೇಕಾದರೂ ಭಿನ್ನಾಭಿಪ್ರಾಯ ಇಲ್ಲದಂತೆ ನಡೆದುಕೊಳ್ಳಿ. ಈಗ ಗುರುಬಲ ಇದೆ. ಆದ್ದರಿಂದ ಅಷ್ಟು ಹೆದರಬೇಕಿಲ್ಲ. ರಾಹುಬಲವೂ ಇದೆ. ರಾಹುಬಲ ನಿಮಗೆ ಶಕ್ತಿಯನ್ನು ಪರಾಕ್ರಮವನ್ನೂ ಕೊಡುತ್ತದೆ. ಗುರುಬಲ ನಿಮ್ಮನ್ನು ರಕ್ಷಣೆ ಮಾಡುತ್ತದೆ. ಹಣಕಾಸಿನ ಖರ್ಚು ಇರುತ್ತದೆ. ಓಡಾಡುವಾಗ, ವಾಹನ ಚಲಾಯಿಸುವಾಗ ಜಾಗ್ರತೆ ಇರಲಿ. ನಿಮಗೆ ಬಡ್ತಿ ಬರುವುದಿದ್ದರೆ ಮುಂದಕ್ಕೆ ಹೋಗುವುದು, ನಿಮಗೆ ಬೇಡದ ಸ್ಥಳಕ್ಕೆ ವರ್ಗಾವಣೆ ಆಗಬಹುದು. ಮನಸ್ಸಿಗೆ ವಿನಾ ಕಾರಣ ಭೀತಿ ಆತಂಕ ಇರುತ್ತದೆ. ಚಿಂತೆ ಮಾಡಬೇಡಿ. ಪ್ರತಿದಿನ ವಿಷ್ಣುಸಹಸ್ರನಾಮ ಮತ್ತು ಹನುಮಾನ್ ಚಾಲೀಸಾ ಪಠೀಸಬೇಕು. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ. ನಿಮ್ಮ ಮಾತಿಗೆ ಬೆಲೆ ಇರುತ್ತದೆ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ.

ಮೀನ ರಾಶಿ:

ಮೀನ ರಾಶಿ:

ಈಗ ನಿಮಗೆ 12ನೇ ಮನೆಯಲ್ಲಿ ಶನಿ ಪ್ರವೇಶವಾಗಿದ್ದಾನೆ. ನಿಮಗೆ ಏಳೂವರೆ ವರ್ಷ ಶನಿಯ ಕಾಟ ಪ್ರಾರಂಭವಾಗಿದೆ. ಜೀವನ ಕೊಂಚ ಏರುಪೇರಿನಿಂದ ಕೂಡಿರುತ್ತದೆ. ಸರಾಗವಾಗಿ ನಡೆಯುತ್ತಿದ್ದ ಜೀವನಕ್ಕೆ ಈಗ ಅಡೆತಡೆಗಳು ಎದುರಾಗುತ್ತದೆ. ಮಾನಹಾನಿ, ಧನಹಾನಿ ಆಗುತ್ತದೆ. ನಿಮ್ಮ ಮಾತೇ ನಿಮಗೆ ವಿರುದ್ಧವಾಗಿ ತಿರುಗಬಹುದು. ವಿಪರೀತ ಖರ್ಚುಗಳು ಒತ್ತಡ ಇರುತ್ತದೆ. ವೃತ್ತಿಯಲ್ಲಿ ಕಿರಿಕಿರಿ ಮೇಲಧಿಕಾರಿಗಳ ಅವಕೃಪೆ ಮುಂತಾದುವನ್ನು ಎದುರಿಸಬೇಕು. ಶನಿ ಪೊಲೀಸ್ ಇದ್ದಹಾಗೆ. ಬೇರೆ ಯಾವ ಗ್ರಹಕ್ಕೂ ನಮಗೆ ಶಿಕ್ಷೆ ಕೊಡುವ ಅಧಿಕಾರ ಇಲ್ಲ. ಶನಿಗೆ ಮಾತ್ರವೇ ಇದೆ. ಹಾಗಾಗಿ ಕಷ್ಟ ಬಂದಾಗ ಎದೆಗುಂದಬೇಡಿ.

ನಿಮ್ಮ ಪಾಪಕರ್ಮಗಳನ್ನು ಶನಿ ತೊಳೆದು ಸ್ವಚ್ಛ ಮಾಡುತ್ತಿದ್ದಾನೆ ಎಂದು ತಿಳಿಯಿರಿ. ಎಲ್ಲಾ ಮೀನ ರಾಶಿಯವರಿಗೂ ಒಂದೇ ತೆರನಾದ ಕಷ್ಟ ಬರುವುದಿಲ್ಲ. ಒಬ್ಬರಿಗೆ ಹೆಚ್ಚು ಒಬ್ಬರಿಗೆ ಕಡಿಮೆ ಇರುತ್ತದೆ. ಅವರವರ ಕರ್ಮಾನುಸಾರ ಕಷ್ಟಗಳನ್ನು ಶನಿ ಕೊಡುತ್ತಾನೆ. ಪ್ರತಿ ಶನಿವಾರ ಹನುಮಾನ್ ಗುಡಿಗೆ ಹೋಗಿಬನ್ನಿ. ನಳಚರಿತ್ರೆ, ಸತ್ಯಹರಿಶ್ಚಂದ್ರನ ಕತೆ ಇಂಥವನ್ನು ಓದಿದರೆ ಶನಿಯ ಪ್ರಭಾವ ಕಡಿಮೆಯಾಗುತ್ತದೆ. ನಿಮ್ಮ ದಶಾಭುಕ್ತಿಗಳು ಒಳ್ಳೆಯದಿದ್ದರೂ ಶನಿಪ್ರಭಾವ ಕಡಿಮೆ ಇರುತ್ತದೆ. ತಿಳಿದೂ ತಪ್ಪು ಮಾಡಬೇಡಿ. ಆದಷ್ಟು ಸತ್ಯದ ದಾರಿಯಲ್ಲಿ ನಡೆಯಿರಿ. ನಿಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಬೇಡಿ. ಆದಷ್ಟು ಭಗವಂತನ ಧ್ಯಾನ ಮಾಡಿ.

English summary
February 2023 Monthly Horoscope In Kannada: December Masika Rashi Bhavishya: Check January Monthly Horoscope for all 12 Zodiac Signs in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X