ಮೇಷದಿಂದ ಮೀನದವರೆಗೆ ಮೇ ತಿಂಗಳ ಭವಿಷ್ಯ ಮತ್ತು ಪರಿಹಾರ

Posted By: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

  ಮಾಸ ಭವಿಷ್ಯ ಎಂಬುದು ಒಂದು ತಿಂಗಳ ಕಾಲ ನಡೆಯಬಹುದಾದ ಘಟನೆಗಳ ಸುಳಿವು. ಒಳಿತು-ಕೆಡುಕುಗಳನ್ನು ಗ್ರಹಗಳ ಸ್ಥಿತಿಯನ್ನು ಆಧರಿಸಿ, ಲೆಕ್ಕಾಚಾರಗಳನ್ನು ಮಾಡಿದ ನಂತರ ನುಡಿಯುವ ಭವಿಷ್ಯತ್ತಿನ ಫಲಾಫಲ. ಒನ್ಇಂಡಿಯಾದಲ್ಲಿ ಪ್ರಕಟವಾಗುವ ಈ ಭವಿಷ್ಯವನ್ನು ಇಡೀ ಮಾಸಕ್ಕೆ ಅನ್ವಯಿಸುವಂತೆ ನೀಡಲಾಗುತ್ತದೆ.

  ಘಟನೆ-ಸನ್ನಿವೇಶವನ್ನು ಆಧರಿಸಿ ನಿಮ್ಮ ಜೀವನಕ್ಕೆ ಅದನ್ನು ಅನ್ವಯಿಸಿಕೊಳ್ಳಬಹುದು. ಆದರೆ ಈ ಭವಿಷ್ಯವು ಗೋಚಾರ ಅಂದರೆ ಗ್ರಹಗಳ ಸಂಚಾರ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ದಶಾ- ಭುಕ್ತಿ ಮತ್ತಿತರ ಪ್ರಮುಖ ವಿಚಾರಗಳನ್ನು ಜ್ಯೋತಿಷಿಗಳ ಬಳಿಯೇ ಕೇಳಬೇಕು. ಏಕೆಂದರೆ, ಒಂದೇ ರಾಶಿಯವರು ಲಕ್ಷಾಂತರ ಮಂದಿಗೆ ಒಂದೇ ಥರದ ಭವಿಷ್ಯ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ.

  ಗುರು ಸಂಚಾರ ದುಷ್ಪ್ರಭಾವಕ್ಕೆ ಜ್ಯೋತಿಷ್ಯ ಪರಿಹಾರೋಪಾಯ

  ನಿಜ, ಈ ಮಾತು ನೂರಕ್ಕೆ ನೂರು ನಿಜ. ಆದ್ದರಿಂದ ತಮ್ಮ ಜಾತಕವನ್ನು ವರ್ಷಾವಧಿಗೆ ಒಮ್ಮೆಯೋ ಅಥವಾ ಹೇಗೆ ವಾಡಿಕೆಯಲ್ಲಿ ನಡೆಸಿಕೊಂಡು ಬಂದಿದ್ದಾರೆಯೋ ಹಾಗೆ ಜ್ಯೋತಿಷಿಗಳ ಬಳಿ ತೋರಿಸಿ, ಆಯಾ ಕಾಲಕ್ಕೆ ಕೈಗೊಳ್ಳಬೇಕಾದ ಪೂಜೆ-ಶಾಂತಿಯನ್ನು ಮಾಡಿಸಿಕೊಂಡರೆ ಒಳಿತು. ನಂಬಿಕೆ ವೈಯಕ್ತಿಕವಾದದ್ದು. ಎಲ್ಲರಿಗೂ ಒಳಿತಾಗಬೇಕು ಎಂಬುದು ನಮ್ಮ ಆಶಯ.

  ಜ್ಯೋತಿಷ್ಯ: ಗ್ರಹಗಳು ನಿಮ್ಮ ಜೀವನದಲ್ಲಿ ಒಳಿತು-ಕೆಡುಕು ಮಾಡೋದು ಹೇಗೆ?

  ನಿಮ್ಮ ರಾಶಿಗೆ ಈ ಮಾಸದ ಗೋಚಾರ ಏನು ಹೇಳುತ್ತದೆ ಎಂದು ತಿಳಿಯುವುದಕ್ಕೆ ಮುಂದೆ ಓದಿ.

  ಮೇಷ: ಅಂದಾಜಿಗಿಂತ ಹೆಚ್ಚಿನ ಖರ್ಚುಗಳು ಆಗುತ್ತವೆ

  ಮೇಷ: ಅಂದಾಜಿಗಿಂತ ಹೆಚ್ಚಿನ ಖರ್ಚುಗಳು ಆಗುತ್ತವೆ

  ಪುರುಷರು :ಈ ಮಾಸದ ಅರ್ಧ ಅಂದರೆ ಹದಿನೈದು ದಿನ ನಿಮಗೆ ಅತ್ಯಂತ ಶುಭಪ್ರದ! ನಿಮ್ಮ ಕೆಲಸ ಕಾರ್ಯಗಳು ಸಾಂಗೋಪಾಂಗ ನೆರವೇರುತ್ತವೆ. ಮಕ್ಕಳಿಂದ ಸಂತಸ ದೊರೆಯಲಿದೆ. ಮಕ್ಕಳೊಂದಿಗೆ ದೂರ ಪ್ರಯಾಣ ವಿಹಾರ ಇತರೆ ಹೋಗಬಹುದು. ಮಕ್ಕಳೊಂದಿಗೆ ರಜಾ ದಿನಗಳ ಮಜಾ ಅನುಭವಿಸಲು ಸರಿಯಾದ ಸಮಯ! ಆರ್ಥಿಕವಾಗಿ ಸಹ ಯಾವುದೂ ತೊಂದರೆ ತಾಪತ್ರಯಗಳು ಕಾಣುತ್ತಾ ಇಲ್ಲ ಆದರೆ ಸ್ವಲ್ಪ ಜಿಪುಣತನ ಬಿಡಬೇಕು ಅಷ್ಟೆ. ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಮಾತ್ರ ಕೆಲಸದ ಒತ್ತಡ ತುಸು ಜಾಸ್ತಿಯೇ ಇರುತ್ತದೆ ಎಂದರೆ ತಪ್ಪಾಗಲಾರದು. ಟೀಕಿಸುವವರು ಟೀಕಿಸುತ್ತಿರಲಿ ನಿಮ್ಮ ಕೆಲಸವನ್ನು ನೀವು ಶ್ರದ್ದೆಯಿಂದ ಮಾಡುತ್ತಾ ಹೋದಲ್ಲಿ ನಿಮಗೆ ಯಾವುದೂ ತೊಂದರೆ ಇಲ್ಲ ನಿಮ್ಮ ಕೆಲಸದಲ್ಲಿ ನಿಮ್ಮ ಯಶಸ್ಸು ತೋರಿಸ ಬೇಕು. ಆರೋಗ್ಯ ಬಾಧೆ ಇರುವವರು ಮಾಸದ ಮೊದಲರ್ಧ ಭಾಗದಲ್ಲಿಯೇ ಗುಣ ಮುಖ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಒಂದೊಮ್ಮೆ ಹಾಗೆ ಆಗಿಲ್ಲ ಎಂದಾದಲ್ಲಿ ಮಾಸಾಂತ್ಯದಲ್ಲಿ ಸಹ ಗುಣ ಮುಖ ಆಗುವುದು ಅನುಮಾನ ಆದುದರಿಂದ ಔಷಧ ಉಪಚಾರ ಮಾಡುವ ವಿಚಾರದಲ್ಲಿ ತಡ ಮಾಡಬೇಡಿ. ಹಣ ಬರುವ ಸಮಯ ಈ ತಿಂಗಳ ಮೊದಲಾರ್ಧ ಭಾಗ ಆಮೇಲೆ ಖರ್ಚುಗಳು ಹೆಚ್ಚು ಇವೆ ಅಥವಾ ಹಣದ ಒಳ ಹರಿವು ಕಡಿಮೆ ಆಗಲಿದೆ ಜಿಪುಣತನ ಬೇಡ ಹಾಗೆಂದು ಸಿಕ್ಕಾ ಪಟ್ಟೆ ಖರ್ಚು ಸಹ ಬೇಡ!

  ಸ್ತ್ರೀಯರು :ಆರೋಗ್ಯ ಬಾಧೆ ಹೆಚ್ಚು ಕಾಡಿಸದು, ಅದುವೇ ದೊಡ್ಡ ವರ ಎನ್ನಬಹುದು. ಕುಟುಂಬದವರೊಂದಿ ಉತ್ತಮ ಸಮಯ ಕಳೆಯುವ ಅವಕಾಶ ಸಹ ಲಭ್ಯ ಇದೆ. ಸಿಟ್ಟು ಕಡಿಮೆ ಮಾಡಿ ಸಿಡುಕುವುದನ್ನು ಬಿಟ್ಟು ನಗುನಗುತ್ತಾ ಕುಟುಂಬದವರೊಂದಿಗೆ ಸಮಯ ಕಳೆದರೆ ಮಾತ್ರ ಆ ಸಂತೋಷ ನಿಮ್ಮ ಪಾಲಿಗೆ ಸಿಗಲಿದೆ. ನಿಮ್ಮ ಖರ್ಚುಗಳಿಗೆ ಸುಲಭವಾಗಿ ಹಣ ದೊರೆಯುತ್ತದೆ. ಸ್ವಲ್ಪ ಐಷಾರಾಮದ ಜೀವನ ಲಭಿಸುತ್ತದೆ ಆದರೆ ನೆನಪಿಡಿ ಆ ಜೀವನಕ್ಕೆ ಒಗ್ಗಬೇಡಿ ನಿಮ್ಮ ನಿತ್ಯಜೀವನ ಶೈಲಿ ಮರೆಯಬೇಡಿ. ಒಟ್ಟು ಕುಟುಂಬದಲ್ಲಿ ಇದ್ದು ಸ್ವಲ್ಪ ಪರಸ್ಪರ ಭಿನ್ನಾಭಿಪ್ರಾಯ ಈ ಹಿಂದೆ ಇತ್ತು ಎಂದಾದಲ್ಲಿ ಅದು ಕಡಿಮೆ ಆಗುವ ಅಥವಾ ಒಂದು ಸಂಧಾನಸೂತ್ರ ಯಶಸ್ಸು ಪಡೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಆದರೆ ನೀವೂ ಸಹ ಸ್ವಲ್ಪ option ಗಳಿಗೆ flexible ಆಗಿ ಒಪ್ಪಿಗೆ ನೀಡಬೇಕಾಗುತ್ತದೆ. ಚಿಕ್ಕ ಪುಟ್ಟ ಬದಲಾವಣೆಗಳು ದೊಡ್ಡ ಮಟ್ಟದ ಯಶಸ್ಸು ಲಭಿಸುತ್ತದೆ. ಅನಿವಾರ್ಯ ಇದ್ದಲ್ಲಿ ಸಾಲ ಮಾಡ ಬಹುದು ಅಥವಾ ಸಾಲ ಕೊಡ ಬಹುದು ಪರಿಸ್ಥಿತಿ ಜಾಸ್ತಿ ಕೆಟ್ಟದಾಗಿ ಕಾಣುತ್ತಾ ಇಲ್ಲ.

  ವಿದ್ಯಾರ್ಥಿಗಳು :ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಮಯ ಎನ್ನಬಹುದು ಕಾರಣ ಅವರಿಗೆ ಅಪೇಕ್ಷಿತ ಸಹಾಯ ಲಭಿಸುತ್ತದೆ ಅದರಲ್ಲಿಯೂ ಸಹ ಶುಲ್ಕ ಪಾವತಿ ಆಗದೇ ಬಹಳ ಕಷ್ಟ ಆಗುತ್ತಾ ಇದ್ದಲ್ಲಿ ಮಾತ್ರ ನಿಮ್ಮ ಶುಲ್ಕ ಪಾವತಿಗೆ ಅನುಕೂಲ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ವಿದೇಶ ಪ್ರಯಾಣ ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಮಾರ್ಗ ಸುಲಭ ಆಗಲಿದೆ. ಇಲ್ಲಿ ಸಮಸ್ಯೆ ಅಂದರೆ ನಿಮ್ಮ ಕೈಯಲ್ಲಿ ದುಡ್ಡು ಚನ್ನಾಗಿ ಓಡಾಡಲಿದೆ ಅದು ಸಮಸ್ಯೆಯೇ ಆಗಿರುತ್ತದೆ ಕಾರಣ ವಿದ್ಯಾರ್ಥಿಗಳಿಗೆ ಬೇಕಿರುವುದು ಹಣ ಅಲ್ಲ ವಿದ್ಯೆ! ಇನ್ನೂ ದೊಡ್ಡ ಸಮಸ್ಯೆ ಅಂದರೆ ವಿದ್ಯಾರ್ಥಿಗಳು ವಿದ್ಯೆ ಬಿಟ್ಟು ಪ್ರೀತಿ ಪ್ರೇಮ ಇತ್ಯಾದಿ ಅನಗತ್ಯ ವಿಚಾರಗಳಲ್ಲಿ ತಲ್ಲಿನ ಆಗಬಹುದು ಅದನ್ನು ಬಿಡ ಬೇಕು ಇಲ್ಲದಿದ್ದಲ್ಲಿ ಎಲ್ಲವೂ ನೀರಿನಲ್ಲಿ ಹೋಮ ಆಗುತ್ತದೆ.

  ಪರಿಹಾರ :ತಪ್ಪದೇ ಸರ್ವ ಮಂಗಳ ಮಾಂಗಲ್ಯೆ ಈ ಪೂರ್ಣ ಶ್ಲೋಕದಿಂದ ಸಂಪುಟಿ ವಿಧಾನದಲ್ಲಿ ಸಪ್ತಶತಿ ಚಂಡಿಕಾ ಪಾರಾಯಣ ಮಾಡಿಸಿ ಮುತ್ತೈದೆಗೆ ಅರಿಶಿನ ಕುಂಕುಮ ನೀಡಿ

  ವೃಷಭ: ಅಪರಿಚಿತರೊಂದಿಗೆ ವ್ಯವಹಾರ ಬೇಡ

  ವೃಷಭ: ಅಪರಿಚಿತರೊಂದಿಗೆ ವ್ಯವಹಾರ ಬೇಡ

  ಪುರುಷರು: ಬದಲಾವಣೆಯ ಪರ್ವವನ್ನು ನೀವು ಬಹಳ ಬಯಸುತ್ತಾ ಇದ್ದೀರಿ ಅದರೆ ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ ಅನಿಸುತ್ತಿದೆ. ದಯಮಾಡಿ ನಾಸ್ತಿಕರಾಗಬೇಡಿ. ಕಷ್ಟಗಳ ಸಾಲು ಕಂಡು ಕಂಗೆಟ್ಟು ಹೆಚ್ಚು ಆಸ್ತಿಕ ಆಗಬೇಕು. ಅದ ಬಿಟ್ಟು ನಾಸ್ತಿಕವಾದ ಬೇಡ. ನಿಮ್ಮ ವಿರುದ್ಧ ಪಿತೂರಿ ಮಾಡುವವರು ನಿಮ್ಮ ಉದ್ಯೋಗ ಸ್ಥಳದಲ್ಲಿ ನಿಮ್ಮ ಮೇಲೆ ರಾಜಕೀಯ ಮಾಡುವವರು ಇವರಾರಿಗೂ ಕೊರತೆ ಇರುವುದಿಲ್ಲ. ಎಲ್ಲರಿಗೂ ನೀವು ಬಲಿ ಕಾ ಬಕರಾ ಥರಹ ಕಾಣುತ್ತೀರಿ ಎನ್ನುವುದೇ ವಿಶೇಷ. ಈ ಎಲ್ಲ ಪರಿಸ್ಥಿತಿಗಳನ್ನೂ ಧೈರ್ಯವಾಗಿ ಎದುರಿಸಿ ಗೆದ್ದು ಬರಲು ನಿಮಗೆ ತಾಳ್ಮೆ ಸಂಯಮ ಹಾಗೂ ದೈವಾನುಗ್ರಹ ಬೇಕೇಬೇಕು. ಯಾರೊಂದಿಗೂ ಜಗಳ ವಾಗ್ವಾದ ಬೇಡ. ವಸ್ತ್ರ ವ್ಯಾಪಾರಿಗಳು ಚಲನಚಿತ್ರ ನಟರು ಹಾಡುಗಾರರು ಸ್ವಲ್ಪ ಉತ್ತಮ ಅವಕಾಶ ಪ್ರಖ್ಯಾತಿ ಧನ ಲಾಭ ಇತ್ಯಾದಿ ಅಪೇಕ್ಷಿತ ಎಲ್ಲವನ್ನೂ ಪಡೆಯಬಹುದು. ನಿಮಗೆ ಆರ್ಥಿಕ ಸಮಸ್ಯೆ ತಿಂಗಳ ಮೊದಲಾರ್ಧದಲ್ಲಿ ಅಷ್ಟಾಗಿ ಕಾಡದು ಅದೇನಿದ್ದರೂ ತಿಂಗಳ ನಂತರದ ಭಾಗದಲ್ಲಿ ಮಾತ್ರ. ತಿಂಗಳ ಕೊನೆಯಲ್ಲಿ ಹಣ ಇದ್ದರೂ ಸಹ ಅದನ್ನು ಬಳಸುವ ಅವಕಾಶ ಇರುವುದಿಲ್ಲ ಉದಾಹರಣೆಗೆ ನಿಮ್ಮ ಡೆಬಿಟ್ ಕಾರ್ಡ್ ನೀವು ಕಳೆದುಕೊಳ್ಳಬಹುದು

  ಸ್ತ್ರೀಯರು: ಶಾರೀರಿಕ ಇತ್ಯಾದಿ ಕಾರಣಗಳಿಂದಾಗಿ ಮನೆಯಲ್ಲಿಯೇ ನೆಡೆಯುವ ದೇವರ ಕಾರ್ಯಗಳಲ್ಲಿ ಭಾಗವಹಿಸಲು ಆಗುವುದಿಲ್ಲ ಆ ಬೇಸರ ನಿಮಗೆ ಇದ್ದೇ ಇರುತ್ತದೆ. ನಿಮ್ಮ ಸೌಂದರ್ಯ ಇನ್ನೂ ಹೆಚ್ಚುತ್ತದೆ, ಇನ್ನಷ್ಟು ಅಂದವಾಗಿ ಚಂದವಾಗಿ ಕಾಣುತ್ತೀರಿ. ಹೊಸ ವಸ್ತ್ರ ಖರೀದಿ ಆಗುತ್ತದೆ. ಯಾವುದೇ ಬಣ್ಣದ ಬಟ್ಟೆ ಆಗಲಿ ನಿಮ್ಮ ಮೇಲೆ ಅದು ಚೆನ್ನಾಗಿಯೇ ಕಾಣುತ್ತದೆ. ವಿಶೇಷವಾಗಿ ರೋಹಿಣಿ ನಕ್ಷತ್ರದ ವೃಷಭ ರಾಶಿ ಅವರಿಗೆ ಅವಿವಾಹಿತೆ ಆಗಿದ್ದಲ್ಲಿ ವಿವಾಹ ಯೋಗ ಇದೆ ಆದರೆ ವಿವಾಹದ ಮಾತುಕತೆ ಇತ್ಯಾದಿಗಳು ಎಲ್ಲಾ ಈ ತಿಂಗಳ ಅರ್ಧ ಭಾಗದ ಒಳಗೆ ಮುಗಿದಲ್ಲಿ ಒಳ್ಳೆಯದು. ಸ್ತ್ರೀ ಸಂಘ ಇತ್ಯಾದಿಗಳಲ್ಲಿ ಸಕ್ರೀಯವಾಗಿ ಇದ್ದವರಿಗೆ ಅಥವಾ ತುರ್ತಾಗಿ ಸಾಲ ಬೇಕಾದವರಿಗೆ ಸುಲಭವಾಗಿ ಸಾಲ ಸಿಗುತ್ತದೆ ಆದರೆ ಒಂದು ನಿಮಗೆ ಸಿಕ್ಕ ಸಾಲದ ಹಣದಲ್ಲಿ ಒಂದು ಕೇಜಿ ಕರಿ ಎಳ್ಳು ಹಾಗೂ ಅಡಿಗೆಗೆ ಉಪಯುಕ್ತವಾದ ಎಳ್ಳು ಎಣ್ಣೆಯನ್ನು ಹತ್ತಿರದ ಶನೈಶ್ಚರ ದೇಗುಲದಲ್ಲಿ ಸಮರ್ಪಣೆ ಮಾಡಿ.

  ವಿದ್ಯಾರ್ಥಿಗಳು : ಓದುವುದು ಬರೆಯುವುದು ಅಂದರೆ ಎನು ಅನ್ನುವಷ್ಟರ ಮಟ್ಟಿಗೆ ನೀವು ಅದನ್ನು ಮರೆತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿ ಆಗುತ್ತೀರಿ. ನಿಮ್ಮ ದೊಡ್ಡ ಸ್ನೇಹಿತ ನಿಮ್ಮ ಪುಸ್ತಕ ಆಗಿತ್ತು ಈಗ ಅದು ಕನ್ನಡಿ ಆಗಿದೆ. ಕನ್ನಡಿ ಮುಂದೆ ಅಥವಾ ಟಿವಿ ಮುಂದೆ ಅಥವಾ ಮೊಬಾಯಿಲ್ ನಲ್ಲಿ ನೀವು ಕಳೆಯುತ್ತಿರುವ ಸಮಯ ಎಷ್ಟು ಎನ್ನುವುದು ಲೆಖ್ಖ ಹಾಕಿ ನೋಡಿ ಈ ರಜೆ ಮುಗಿದ ನಂತರ ಮತ್ತೆ ನೀವು ಪುಸ್ತಕದ ಪ್ರಪಂಚಕ್ಕೆ ಮರಳಿ ಬರಲು ಎಷ್ಟು ಕಷ್ಟ ಆಗಬಹುದು ಎನ್ನುವ ಅಂದಾಜು ಇದೆಯೇ? ನಿಮ್ಮ ತಂದೆಯವರ ಹಾಗೂ ನಿಮ್ಮ ಮಧ್ಯೆ ಅಭಿಪ್ರಾಯ ಬೇಧ ಬಹಳ ಜಾಸ್ತಿ ಆಗುತ್ತದೆ ಈ ವಿಚಾರದಲ್ಲಿ ಗೆಲ್ಲುವುದು ನಿಮ್ಮ ತಂದೆಯವರೇ ಎನ್ನುವುದು ವಿಶೇಷ. ಮಾಸದ ಅರ್ಧ ಭಾಗದ ನಂತರ ನೀವು ಅದಕ್ಕೆ ಹೊಂದಿಕೊಲ್ಲುತ್ತೀರಿ.

  ಪರಿಹಾರ: ಮನೆಯಲ್ಲಿ ಶ್ರೀ ಶನೈಶ್ಚರ ವೃತ ಮಾಡಿಸಿ ಕರಿ ಎಳ್ಳು-ಬೆಲ್ಲ ಹಾಕಿ ಮಾಡಿದ ಪ್ರಸಾದ ಹಂಚಿ.

   ಮಿಥುನ: ಅಧಿಕ ಖರ್ಚಿನಿಂದ ಬೇಸರವಿದೆ

  ಮಿಥುನ: ಅಧಿಕ ಖರ್ಚಿನಿಂದ ಬೇಸರವಿದೆ

  ಪುರುಷರು :ಸಮಯ ಸಾಧಕರ ನಡುವೆ ನಿಮ್ಮ ಕಾರ್ಯ ಸಾಧನೆಗೆ ನಿಮಗೆ ಸಮಯ ಸಿಗುವ ಲಕ್ಷಣಗಳು ಬಹಳ ವಿರಳ. ತಿಂಗಳ ಮೊದಲ ಭಾಗದಲ್ಲಿ ನಿಮ್ಮ ಸಹೋದರರ ಸಹಾಯ ನಿಮಗೆ ಬಹಳ ಚನ್ನಾಗಿ ಇರುತ್ತದೆ ಆದರೆ ಅವಶ್ಯಕತೆಗಿಂತ ಹೆಚ್ಚು ನೀವು ಅವರ ಮೇಲೆ ಅವಲಂಬಿತರಾದ ಮೇಲೆ ಮಾಸಾಂತ್ಯಕ್ಕೆ ಸರಿದಂತೆ ಅವರ ಸಹಾಯ ಸಹ ನಿಮಗೆ ದೊರಕುವುದು ಕಷ್ಟ ಆಗುತ್ತದೆ ಆದುದರಿಂದ ಬಳಸಿಕೊಳ್ಳುವಾಗ ಇತಿಮಿತಿ ಇರಲಿ. ನಿಮ್ಮ ಹಾಸ್ಯ ನಿಮಗೆ ಒಳ್ಳೆಯ ಹೆಸರು ತಂದುಕೊಡುತ್ತದೆ ನಾಲ್ಕಾರು ಕಡೆ ಪ್ರಚಾರ ಸಹ ಪಡೆಯುತ್ತೀರಿ ಆದರೆ ಅದು ದೀರ್ಘ ಬೇಕು ಎಂದಾದಲಿ ನಿಮ್ಮಲ್ಲಿ ನಿಮ್ಮ ಮಾತುಗಳಲ್ಲಿ ಹೊಸತನ ಬೇಕು. ದೂರ ಪ್ರಯಾಣಗಳಲ್ಲಿ ಬಹಳ ಖರ್ಚು ಮಾಡುತ್ತೀರಿ ಆದರೆ ಖರ್ಚಿಗೆ ತಕ್ಕ ಪ್ರತಿಫಲ ಲಭಿಸುವುದು ಮಾತ್ರ ಅನುಮಾನ ನಿಮಗೆ ತೃಪ್ತಿ ಇಲ್ಲ. ವಿದೇಶ ಪ್ರಯಾಣ ಸುಲಭವಾಗಿ ಸಿಗಲಿದೆ ಆದರೆ ಅಲ್ಲಿ ಕಾಗದ ಪತ್ರ ವ್ಯವಹಾರದಲ್ಲಿ ಎಚ್ಚರವಹಿಸಿ. ನಿಮ್ಮ ಮೇಲೆ ನಿಮ್ಮ ತೀರ್ಮಾನಗಳ ಮೇಲೆ ಅವಲಂಬಿತರಾಗಿರುವ ಜನ ಹೆಚ್ಚು ಆಗಲಿದ್ದಾರೆ ಅದರ ಸೂಚನೆ ಸಹ ನಿಮಗೆ ದೊರೆಯಲಿದೆ. ರಾಜಿ ಮಾಆಡಿಸಲಿಕ್ಕೆ ಸಂಧಾನ ಮಾಡಿಸಲು ಹೆಚ್ಚು ಹೆಚ್ಚು ಒಡಾಡ ಬೇಕಾಗುತ್ತದೆ. ಇತ್ತ ನುಂಗಲೂ ಆಗದ ಅತ್ತ ಉಗುಳಲೂ ಆಗದ ವಿಚಿತ್ರ ಸ್ಥಿತಿ ಒಂದು ನೀವು ಎದುರಿಸಲೇ ಬೇಕಾದ ಅನಿವಾರ್ಯತೆ ಇದೆ.

  ಸ್ತ್ರೀಯರು: ಗರ್ಭಿಣಿ ಸ್ತ್ರೀಯರು ಸ್ವಲ್ಪ ಜಾಸ್ತಿ ಎಚ್ಚರಿಕೆಯಿಂದ ಓಡಾಡ ಬೇಕು. ವೈದ್ಯರ ಹಾಗೂ ಹಿರಿಯರ ಸಲಹೆ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಉದಾಸೀನತೆ ಬೇಡ. ಮನೆಯಲ್ಲಿ ನಿಮ್ಮ ಯಜಮಾನರ ಜೊತೆ ಸ್ವಲ್ಪ ಜಗಳ ಮಾಡಿಕೊಂಡು ನಂತರ ಸಂಧಾನಕ್ಕಾಗಿ ಪರಿತಪಿಸುತ್ತೀರಿ. ನಿರುದ್ಯೋಗಿ ಮಹಿಳೆ ಈ ಮಾಸದ ಮಧ್ಯದೊಳಗೆ ಕೆಲಸ ಹುಡುಕಿಕೊಂಡರೆ ಒಳಿತು ಇಲ್ಲದಿರೆ ನಂತರ ನಿಮ್ಮ ಇಷ್ಟದ ಕೆಲಸ ಸಿಗುವುದು ಕಷ್ಟ. ಚಿಕ್ಕ ಪುಟ್ಟ ಸ್ವಂತ ಕೆಲಸ ಉದ್ಯೋಗ ಮಾಡಿಕೊಂಡಿರುವ ಮಹಿಳೆ ಆಗಿದ್ದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನಿಮ್ಮ ಕೈಗೆ ಕೊಡುವುದಿಲ್ಲ ಸಾಲ ಎಂದು ಅಥವಾ ಬೇರೆ ಎನೋ ಹೇಳಿ ದುಡ್ಡು ನಂತರ ಕೊಡುವುದಾಗಿ ಹೇಳುತ್ತಾರೆ ಅದರಿಂದಾಗಿ ಕೈ ತುಂಬಾ ಕೆಲಸ ಆದರೆ ದುಡ್ಡು ಮಾತ್ರ ಇಲ್ಲ ಎಂಬಂಥ ಸ್ಥಿತಿ ಇದರಿಂದ ಪಾರಾಗ ಬೇಕಾದಲ್ಲಿ ದಾಕ್ಷಿಣ್ಯ ಬಿಟ್ಟು ಮೊದಲೇ ದುಡ್ಡು ತೆಗೆದುಕೊಳ್ಳಿ. ವಿದೇಶ ಪ್ರಯಾಣದ ಅವಕಾಶಗಳಿಗಾಗಿ ಕಾಯುತ್ತಾ ಇರುವವರಿಗೆ ಆ ಅವಕಾಶ ಲಭಿಸಲಿದೆ ಆದರೆ ಮೊದಲ ಸಲ ಹೋಗುತ್ತಿರುವವರು ಪುನಃ ಪುನಃ ನಿಮ್ಮ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವಿಚಾರಿಸಿ ಪರೀಕ್ಷಿಸಿ ನಂತರ ಹೊರಡಿ

  ವಿದ್ಯಾರ್ಥಿಗಳು: ನೀವು ಮಾತು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡುವ ಎಕೈಕ ಮಾಸ ಇದೇ ಆಗುತ್ತದೆ ಅನಿಸುತ್ತಿದೆ! ನಿಮ್ಮಿಂದ ಅನಿರೀಕ್ಷಿತ ವರ್ತನೆಗಳನ್ನು ನಿಮ್ಮ ಹಿರಿಯರು ಕಾಣುತ್ತಾರೆ ಈ ಬದಲಾವಣೆಗೆ ಕಾರಣ ಏನು ಎಂದು ಆಶ್ಚರ್ಯಚಕಿತರಾಗಿ ನೋಡುತ್ತಾರೆ. ನೀವು ಹೆಚ್ಚು ಮೌನ ಮಾಡಲು ಮಾತು ಕಡಿಮೆ ಮಾಡಲು ಮೂಲ ಕಾರಣ ನಿಮ್ಮ ಮಾತುಗಳಿಗೆ ಅಪಾರ್ಥ ಹುಡುಕುವ ಜನ ಹೆಚ್ಚಾಗಿ ಅದರ ಕಹಿ ಅನುಭವ ಮಾಸದ ಆದಿಯಲ್ಲಿಯೇ ನಿಮಗೆ ಆಗಿ ಹೋಗುತ್ತದೆ ಆದುದರಿಂದ ಆದಷ್ಟು ಸುಮ್ಮನೇ ಮೌನವಾಗಿ ಇದ್ದು ಬಿಡ್ತೇನೆ ಅನ್ನುವ ತೀರ್ಮಾನಕ್ಕೆ ನೀವು ಬಂದಿರುತ್ತೀರಿ. ಎಲ್ಲಾ ಸರಿ ಇರುವಂತೆ ಅನಿಸಿದರೂ ಸಹ ಎಲ್ಲಿಯೋ ಎನೋ missing ಎಂದು ನಿಮಗೆ ಅನಿಸುತ್ತಾ ಇರುತ್ತದೆ ಕಾರಣ ವಿನಾಕಾರಣ ಶುಲ್ಕ ಪಾವತಿಯಲ್ಲಿ ತೊಂದರೆ ಅಡೆ ತಡೆ ಸುಖಾ ಸುಮ್ಮನೆ ನಿಮಗೆ ಬರ ಬೇಕಾದ ಅವಕಾಶ ಇತರರ ಪಾಲಾಗುವುದು ಕ್ರೀಡಿಯಲ್ಲಿ ಹಿನ್ನೆಡೆ ಇತ್ಯಾದಿ

  ಪರಿಹಾರ: ಶ್ರೀ ಲಕ್ಷ್ಮಿ ಸತ್ಯ ನಾರಾಯಣ ವೃತ ಮಾಡಿಸಿ

  ಕರ್ಕ: ಈ ಮಾಸ ಶುಭದಾಯಕವಾಗಿದೆ

  ಕರ್ಕ: ಈ ಮಾಸ ಶುಭದಾಯಕವಾಗಿದೆ

  ಪುರುಷರು: ನಿಮ್ಮ ಶರೀರ ದಪ್ಪ ಆಗುತ್ತಿದೆ ಸ್ವಲ್ಪ ಗಮನಿಸಿದರೆ ಅದು ನಿಮ್ಮ ಅನುಭವಕ್ಕೆ ಬರುತ್ತದೆ ಅಷ್ಟೇ ಅಲ್ಲ ವೃಥಾ ಓಡಾಟಗಳು ಹೆಚ್ಚು ಮಾಡುತ್ತಿದ್ದೀರಿ ಸಾಲದ್ದಕ್ಕೆ ದುಡ್ಡನ್ನು ನೀರಿನಂತೆ ಖರ್ಚು ಮಾಡುತ್ತಿದ್ದೀರಿ. ನೀವು ಎನು ಮಾಡುತ್ತಾ ಇದ್ದೀರಿ ಎನ್ನುವ ಬಗ್ಗೆ ನಿಮಗೆ ಎಷ್ಟೋ ಸಲ ಸ್ಪಷ್ಟತೆ ಇಲ್ಲ ಆದರೆ ಯಾರಿಗೂ ತಿಳಿಯದಂತೆ ಈ ವಿಚಾರವನ್ನು ಗೌಪ್ಯವಾಗಿ ಇಡುತ್ತಿದ್ದೀರಿ. ಅನಿವಾರ್ಯ ಎನ್ನುತ್ತಾ ಸುಳ್ಳು ಹೆಚ್ಚು ಹೇಳುತ್ತೀರಿ ಕೆಲವರು ದುಶ್ಚಟಕ್ಕೂ ಬಲಿ ಆಗಬಹುದು ಎಚ್ಚರ. ಐಶಾರಾಮಿ ಜೀವನಕ್ಕೆ ಕೊರತೆ ಇರುವುದಿಲ್ಲ. ನಿಮ್ಮ ಮನಸಿಗೆ ಸಮಾಧಾನದ ವಿಚಾರ ಎಂದರೆ ನೀವು ಒಪ್ಪಿಕೊಂಡ ಕೆಲಸ ಕೊನೇಯದಾಗಿ ಚನ್ನಾಗಿ ಮೂಡಿ ಬರುತ್ತಿದೆ ಎನ್ನುವುದು. ವಿದೇಶ ಪ್ರಯಾಣಕ್ಕೆ ಹೋಗುವುದಕೆ ಸುಸಮಯ. ಮೇಲಿಂದ ಮೇಲೆ ಹೊಸ ಹೊಸ ಮಿತ್ರರು ಆಗುತ್ತಾರೆ ಯಾರನ್ನು ನೆನಪಿಡಲಿ ಯಾರನ್ನು ಮರೆಯಲಿ ಎನ್ನುವ ಹೊಸ ಅನುಮಾನ ಬೇರೆ ! ವ್ಯಾಪಾರಿಗಳಿಗೆ ಅತ್ಯಧಿಕ ಧನ ಲಾಭ ನೋಡುವ ಸಮಯ ಚಿಕ್ಕ ವ್ಯಾಪಾರ ಆದರೂ ಸಹ ಅದರಲ್ಲಿಯೇ ಇತರರಿಗಿಂತ ಹೆಚ್ಚು ಲಾಭ ಕಾಣುತ್ತೀರಿ ಎನ್ನುವುದೇ ವಿಶೇಷ! ಶುಭ ಕಾರ್ಯಗಳಾದ ಮದುವೆ ಇತ್ಯಾದಿಗಳಿಗೆ ಸ್ವಲ್ಪ ವಿಘ್ನಗಳಿವೆ ಇನ್ನೂ ಸ್ವಲ್ಪ ದಿನ ಕಾಯ ಬೇಕು ಈ ಸಧ್ಯ ವಿವಾಹ ಭಾಗ್ಯ ಬಲವಾಗಿ ಕಾಣುತ್ತಾ ಇಲ್ಲ ಆದರೆ ವಿವಾಹಿತ ಸಂತಾನ ಅಪೇಕ್ಷಿತರಿಗೆ ಸಂತಾನಕ್ಕಾಗಿ ಪ್ರಯತ್ನಿಸಲು ಸುಸಮಯ.

  ಸ್ತ್ರೀಯರು: ಪ್ರೀತಿ ಪ್ರೇಮ ವಿಚಾರಗಳಲ್ಲಿ ಯಶಸ್ಸು ಸಿಗುತ್ತದೆ ಆದರೆ ಮನೆಯಲ್ಲಿ ಈ ವಿಚಾರವನ್ನು ಈ ತಿಂಗಳ ಆದಿಯಲ್ಲಿಯೇ ತಿಳಿಸಬೇಕು. ಒಂದು ವೇಳೆ ಮಾಸಾಂತ್ಯದಲ್ಲಿ ನಿಮ್ಮ ಪ್ರೀತಿ ಪ್ರೇಮದ ವಿಚಾರ ಮನೆಯಲ್ಲಿ ತಿಳಿದರೆ ಮಾತ್ರ ಜಗಳ ಮನಸ್ತಾಪ ಖಚಿತ ಆದುದರಿಂದ ಶುಭಸ್ಯ ಶೀಘ್ರಂ! ದೂರ ಪ್ರಯಾಣ ಹೊರಡುವ ವಿಚಾರ ಇದ್ದಲ್ಲಿ ನೀವು ಹೋಗುತ್ತಿರುವ ಜಾಗದಲ್ಲಿ ನಿಮಗೆ ಊಟದ ವ್ಯವಸ್ಥೆ ಎನು ಎಂಬುದನ್ನು ತಿಳಿದುಕೊಳ್ಳಿ. ಆಹಾರ ಸೇವನೆ ವಿಚಾರದಲ್ಲಿ ನಿಮಗೆ ಅಲ್ಲಿ ಸಮಸ್ಯೆ ಆಗಬಹುದು. ಮಾಸದ ಆದೈಯಲ್ಲಿ ಪ್ರಯತ್ನಿಸಿದರೆ ವಿವಾಹಿತ ಸ್ತ್ರೀ ತನ್ನ ತವರು ಮನೆಯಿಂದ ತನ್ನ ಪಾಲಿನ ಭೂಮಿಯ ವಿಚಾರದಲ್ಲಿ ವಾಗ್ದಾನ ಪಡೆಯ ಬಹುದು ತಡ ಮಾಡಿದರೆ ನಿಮಗೆ ಸಿಗುವ ಅಥವಾ ಸಿಗಬಹುದಾದ ಭೂಮಿಯ ವಿಚಾರದಲ್ಲಿ ಇತರರ ಹಸ್ತಕ್ಷೇಪ ಕೊಕ್ಕೆ ಬೀಳುತ್ತದೆ ಅದರಿಂದ ನಿಮಗೆ ನಷ್ಟ ಯೋಚಿಸಿ. ಸುಗಮವಾಗಿ ಯಾರಿಗೂ ಬೇಸರ ಆಗದಂತೆ ನಿಮ್ಮ್ಸ ಪಾಲು ನೀವು ಕೇಳಿ ಪಡೆಯಬಹುದು.

  ವಿದ್ಯಾರ್ಥಿಗಳು: ಹಠ ಅದೂ ಸಹ ಅನಾವಶ್ಯಕ ಹಠದ ಸ್ವಭಾವ ಹೆಚ್ಚುತ್ತದೆ ಅಷ್ಟೇ ಅಲ್ಲ ನಿಮಗೆ ಅರಿವಿಲ್ಲದಂತೆ ಸ್ವಲ್ಪ ಅಹಂ ಸಹ ಹೆಚ್ಚುತ್ತದೆ ವಿದ್ಯಾರ್ಥಿಗಳಿಗೆ ಹಾಗೆ ಅಹಂ ಇರಬಾರದು ಅದನ್ನು ಬಿಡಿ. ನೀವಾಡುವ ಮಾತು ನಿಮಗೆ ಮುಳ್ಳಾಗಿ ನಿಮಗೆ ಬರ ಬೇಕಾದ ಸೌಕರ್ಯ ಒಂದನ್ನು ಅದು ತಪ್ಪಿಸುತ್ತದೆ. ಆಯ್ದ ಕೆಲ ಸನ್ನಿವೇಶಗಳಲ್ಲಿ ಮೌನವಾಗಿದ್ದಲ್ಲಿ ಅದೃಷ್ಟ ಖುಲಾಯಿಸುತ್ತದೆ ಮಾತನಾಡಿದರೆ ಅದೃಷ್ಟ ಹೋಯಿತು. ಉನ್ನತ ಶಿಕ್ಷಣ ಪಡೆಯುವ ಉದ್ದೇಶ ಇರುವ ವಿದ್ಯಾರ್ಥಿಗಳು ನಿಮ್ಮ ಗುರುಗಳ ಬೆನ್ನು ಬಿಡದೇ ಅವರ ದೃಷ್ಟಿಯಲ್ಲಿ ಉತ್ತಮ ವಿದ್ಯಾರ್ಥಿ ಎಂಬ ಬಿರುದು ಪಡೆಯಲೇ ಬೇಕು ಆ ಅನಿವಾರ್ಯತೆ ಅವಶ್ಯಕತೆ ನಿಮಗೆ ಇದೆ. ಸಮಯ ಪರಿಸ್ಥಿತಿ ನೋಡಿದರೆ ನೀವು ಹೋಸ್ಟೆಲ್ ಬದಲಾಗಿ ಮನೆಯ ವಾಸ್ತವ್ಯ ಹಾಗೂ ಮನೆಯ ಊಟೋಪಚಾರವೇ ನಿಮಗೆ ಉತ್ತಮ ಅನಿಸುತ್ತಿದೆ. ಮಾಸಾಂತ್ಯದಲ್ಲಿ ಅಜೀರ್ಣ ಸಮಸ್ಯೆ ಆಗಿ ಹೊಟ್ಟೆ ನೋವು ವಾಂತಿ ಬೇದಿ ಎನ್ನುತ್ತ ಕೆಲ ದಿನಗಳು ಒದ್ದಾಡುವ ದಿನಗಳು ಇವೆ.

  ಪರಿಹಾರ: ಬಿಡದೇ ಪ್ರತೀ ದಿನ ಆದಿತ್ಯ ಹೃದ್ಯ ಸ್ತೋತ್ರ ಪಠಿಸಿ ಅಥವಾ ಶ್ರವಣ ಮಾಡಿ ಸಾಧ್ಯ ಆದಲ್ಲಿ ನೀವು ಇರುವಲ್ಲಿಯೇ ದುರ್ಗಾ ದೀಪ ನಮಸ್ಕಾರ ಪೂಜೆ ಮಾಡಿಸಿ

  ಸಿಂಹ

  ಸಿಂಹ

  ಪುರುಷರು: ನಿಜವಾಗಿ ಕಷ್ಟ ಪಡುವವರಿಗೆ ಸುಖ ಇಲ್ಲ ಬರಿ ನಾಟಕ ಮಾಡುವವರಿಗೆ ಪ್ರಾಮುಖ್ಯತೆ ನೀಡುತ್ತಾರೆ ಈ ಸಮಾಜದಲ್ಲಿ ಎನ್ನುವ ಮಾನಸಿಕ ಸ್ಥಿತಿ ನಿಮ್ಮದು ಆದರೆ ಅದು ನಿಮ್ಮ ತಾತ್ಕಾಲಿಕ ಸ್ಥಿತಿ ಆಧರಿಸಿ ನಿಮಗೆ ಅನಿಸುತ್ತಿರುವ ಅನಿಸಿಕೆ ಅಷ್ಟೆ. ಮಾಸಾದ ಆದಿ ನಿಮಗೆ ಅನುಕೂಲಕರ ವಾತಾವಣವನ್ನೇ ನೀಡಲಿದೆ. ರಾಜಕೀಯ ವಿಚಾರದಲ್ಲಿ ಸಂತಸ ಇರಲಿದೆ ಕೈಗೂಡುತ್ತಿರುವ ಕೆಲಸಗಳು ನೆಮ್ಮದಿ ತರಲಿದೆ ಆದರೆ ಸಮಸ್ಯೆ ಇರುವುದು ಅರ್ಧ ತಿಂಗಳು ಕಳೆದ ನಂತರ ಬದಲಾಗುವ ಪರಿಸ್ಥಿತಿಯ ಬಗ್ಗೆ ಆ ಸನ್ನಿವೇಶವನ್ನು ನೀವು ಹೇಗೆ ನಿಭಾಯಿಸುತ್ತೀರಿ ಎನ್ನುವುದೇ ಒಂದು ಆಶ್ಚರ್ಯ. ಆರ್ಥಿಕ ಸ್ಥಿತಿ ಸಹ ಅಷ್ಟೆ ಮೊದಲ ಭಾಗದಲ್ಲಿ ಉತ್ತಮ ಲಾಭ ಇದೆ. ಈ ಹಿಂದೆ ಎಂದೋ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಆ ಹೂಡಿಕೆ ನಷ್ಟದಲ್ಲಿ ಇತ್ತು ಎಂದು ಅದನ್ನು ತೆಗೆಯದೇ ಹಾಗೆ ಇಟ್ಟು ಮರೆತಿದ್ದಲ್ಲಿ ಈ ತಿಂಗಳ ಮೊದಲ 15 ದಿನಗಳು ಅದರ ಪ್ರಗತಿ ಪರಿಶೀಲಿಸಿ ಲಾಭದಲ್ಲಿ ಇದ್ದಲ್ಲಿ ಅವುಗಳನ್ನು ಮಾರಾಟ ಮಾಡಲು ಸರಿಯಾದ ಸಮಯ. ವಿದೇಶ ಪ್ರಯಾಣ ಇತ್ಯಾದಿಗಳಿಂದ ದೂರ ಇದ್ದಷ್ಟೂ ಒಳ್ಳೆಯದು ಅನಿಸುತ್ತಿದೆ ಧೈರ್ಯ ಇದ್ದಲ್ಲಿ ನಿಮ್ಮ ಇಷ್ಟ. ಹೊಸ ವಾಹನ ಖರೀದಿ ಅನಿವಾರ್ಯ ಎಂದಾದಲ್ಲಿ ಮಾತ್ರ ಖರೀದಿ ಮಾಡಿ ಅದೂ ಸಹ ಸಾಲ ಬೇಡ ನಿಮ್ಮಲ್ಲಿ ಉಳಿತಾಯದ ಹಣ ಅವಶ್ಯಕ್ಕಿಂತ ಹೆಚ್ಚು ಇದ್ದಲ್ಲಿ ಮಾತ್ರ ಖರೀದಿಸಿ

  ಸ್ತ್ರೀಯರು: ಹಳಸಿದ ಸಂಬಂಧಗಳನ್ನು ಸಹ ನೀವು ಸರಿ ಮಾಡಿಕೊಳ್ಳುವತ್ತ ನಿಮ್ಮ ಪ್ರಯತ್ನ ಇರುತ್ತದೆ. ನಿಮ್ಮ ಈ ಪ್ರಯತ್ನ ಮಾಸದ ಮಧ್ಯ ಭಾಗದ ತನಕ ನಿಮಗೆ ಮಾನಸಿಕ ಸ್ಥೈರ್ಯ ಸಿಗುತ್ತದೆ. ಹೊಸದಾದ ಸಂಬಂಧಗಳನ್ನು ಬೆಸೆಯಲು ಸಹ ಇದು ಸುಸಮಯ ಎಂದು ನಿಮಗೆ ಅನಿಸ ತೊಡಗುತ್ತದೆ. ನಿಮ್ಮ ಒಳಗಿನ ನಿಮ್ಮ ನೈಜ ಗುಣ ಹೊರ ಬರುತ್ತದೆ ನಾಟಕದ ಮುಖವಾಡದ ಜೀವನವನ್ನು ತಿರಸ್ಕರಿಸುತ್ತೀರಿ. ಹೆಚ್ಚಿನ ಪಕ್ಷ ಎಚ್ಚರವಾಗಿ ಹಾಗೂ ಎಚ್ಚರಿಕೆಯಿಂದ ಇರುತ್ತೀರಿ ಒಳ್ಳೆಯ ಬೆಳವಣಿಗೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಆಗಬಹುದಾದ ಅವಮಾನ ಹಿನ್ನೆಡೆ ಇತ್ಯಾದಿಗಳ ಬಗ್ಗೆ ಹೆಚ್ಚು ಆಲೋಚನೆ ಮಾಡದೆ ನಿಮ್ಮ ಒಳಗಿನ ಹೊಸ ಆಲೋಚನೆಗಳನ್ನು ಹೊರ ಹಾಕುತ್ತೀರಿ. ಸ್ನೇಹಿತರೊಡನೆ ಹೆಚ್ಚು ಬೆರೆಯುವುದು ಹೆಚ್ಚು ಹೆಚ್ಚು ಮಾತನಾಡುವುದು ಮಾಡುತ್ತೀರಿ. ಇನ್ನೂ ನಿಮ್ಮೊಳಗಿನ ಸಿಟ್ಟು ಹಾಗೆಯೇ ಇದ್ದು ಕಷ್ಟ ಆಗುತ್ತಿದ್ದಲ್ಲಿ ಪ್ರತೀ ದಿನ ಧ್ಯಾನ ಹಾಗೂ ವ್ಯಾಯಾಮ ಮಾಡುವುದನ್ನು ಆರಂಭಿಸಿ.

  ವಿದ್ಯಾರ್ಥಿಗಳು: ಅಪ್ಪ-ಅಮ್ಮ ಇಂದ ದೂರ ಇದ್ದು ಬೇರೆಡೆ ಓದುತ್ತಾ ಇರುವ ವಿದ್ಯಾರ್ಥಿಗಳಿಗೆ ಈ ಮಾಸದ ಆದಿಯಲ್ಲಿ ಪೋಷಕರ ಭೇಟಿ ಮಾಡುವ ಯೋಗ ಇದೆ ನೀವೇ ಹೋಗದೇ ಇದ್ದರೂ ಸಹ ಅಪ್ಪ ಆದರೂ ನೀವಿದ್ದಲ್ಲಿಗೆ ಬಂದು ನಿಮ್ಮ ಕಂಡು ಹೋಗುತ್ತಾರೆ. ಭಾಷಣ ಸ್ಪರ್ಧೆಗಳಲ್ಲಿ ಭಗವಹಿಸಿದರೆ ಗೆಲುವು ನಿಶ್ಚಿತ ಎಂದು ಕಾಣಿಸುತ್ತಿದೆ ಆದರೆ ನಾಚಿಕೆ ದಾಕ್ಷಿಣ್ಯ ಇತ್ಯಾದಿಗಳು ನಿಮ್ಮನ್ನು ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ನೋಡಿಕೊಳ್ಳುತ್ತದೆ ಎನ್ನುವುದೇ ದುಖ್ಖ.ನಿಮ್ಮ ಇನ್ನೊಂದು ಸಮಸ್ಯೆ ಆಲಸ್ಯ ಅದು ನಿಮ್ಮನ್ನು ಬಿಡದೇ ಕಾಡಲಿದೆ. ಅದರಿಂದ ತಪ್ಪಿಸಿಕೊಂಡರೆ ನೀವು ಅರ್ಧ ಗೆದ್ದಂತೆ.! ಅತೀಯಾದ ಆಲಸ್ಯ ಮಾಡಿ ಕೊನೆಯಲ್ಲಿ ತಿಂಗಳು ಪೂರ್ತಿ ಹೀಗೇ ಓದಲಾಗದೇ ಹಾಗೇ ತಿಂಗಳನ್ನು ಮುಗಿಸಬೇಕಾದ ಸ್ಥಿತಿ ಕಾಣಿಸುತ್ತಿದೆ ಎಚ್ಚರಿಕೆ. ಉತ್ತಮ ಮಾರ್ಗ ಎಂದರೆ ದಿನದಲ್ಲಿ ಒಂದರ್ಧ ಗಂಟೆ ಆದರೂ ಧ್ಯಾನ ಪ್ರಾಣಾಯಾಮ ಅಭ್ಯಾಸ ಮಾಡಿ ನಿಮ್ಮ ಸಮಸ್ಯೆಗಳು ಅರ್ಧ ಪರಿಹಾರ ಆಗುತ್ತವೆ.

  ಪರಿಹಾರ: ಪ್ರತೀ ದಿನ ಶನಿ ದೇವರ ಅಷ್ಟೋತ್ತರ ಪಠಿಸಿ ಪ್ರತಿ ಶನಿವಾರ ಕರಿ ಎಳ್ಳು ಹಾಗೂ ಪರಿಶುದ್ಧ ಎಳ್ಳೆಣ್ಣೆ ದಾನ ಮಾಡಿ.

  ಕನ್ಯಾ: ಮೋಸ ಅಥವಾ ಕೆಡುಕನ್ನು ದೈವಬಲ ತಡೆಯುತ್ತದೆ

  ಕನ್ಯಾ: ಮೋಸ ಅಥವಾ ಕೆಡುಕನ್ನು ದೈವಬಲ ತಡೆಯುತ್ತದೆ

  ಪುರುಷರು: ದೇವರ ಕೆಲಸಗಳು ಅಂದರೆ ಧಾರ್ಮಿಕ ಕೆಲಸ ಕಾರ್ಯಗಳು ನಿಮ್ಮಿಂದ ಹೆಚ್ಚು ನೆಡೆಯುವ ಮಾಸ ಇದು. ನಾಸ್ತಿಕ ಆಗಿದ್ದರೂ ಸಹ ಕನಿಷ್ಟ ಪಕ್ಷ ತಾತ್ಕಾಲಿಕ ಆಸ್ತಿಕ ಆಗುತ್ತೀರಿ. ದೇವರ ಮೇಲೆ ಭಯ ಭಕ್ತಿ ಹೆಚ್ಚುತ್ತದೆ. ಭುಮಿಯ ವ್ಯಾಪಾರ ವ್ಯವಹಾರಗಳನ್ನು ಮಾಡುವವರಿಗೆ ಲಾಭ ಮಾಡುವ ಹೊಸ ಹೊಸ ಅವಕಾಶಗಳು ಲಭಿಸುತ್ತದೆ. ಆದರೆ ಅವುಗಳನ್ನು ಉಪಯೋಗಿಸಲು ಬಹಳವೇ ಶ್ರಮದ ಹಾಗೂ ಬುದ್ದಿವಂತಿಕೆಯ ಅವಶ್ಯವಿದೆ. ಮಾಂಸಾಹಾರದ ವ್ಯಾಪಾರ ಮಾಡುವವರಿಗೆ ಹಾಗೂ ಅದನ್ನು ತಿನ್ನುವವರಿಗೆ ಸ್ವಲ್ಪ ಕಷ್ಟದ ಸಮಯವಾಗಿ ಕಾಡಬಹುದು ಕಾರಣ ನಿಮ್ಮ ಶರೀರದಲ್ಲಿ ಉಷ್ಣ ಪ್ರಕೃತಿ ಹೆಚ್ಚಾಗಿ ಆರೋಗ್ಯ ಕೆಡುವ ಸಾಧ್ಯತೆಗಳಿವೆ ಆದುದರಿಂದ ಎಚ್ಚರವಹಿಸಿ. ನಿಮ್ಮ ವ್ಯವಹಾರಗಳನ್ನು ಮಾಡಿಕೊಡುವುದಾಗಿ ಮುಂದೆ ಬಂದವರನ್ನು ಕಣ್ಣು ಮುಚ್ಚಿ ನಂಬುವಂತಿಲ್ಲ. ಪೂರ್ವಾಪರ ಪರಿಶೀಲಿಸಿದ ನಂತರ ಅಧಿಕಾರ ಕೊಡುವುದಾದರೂ ಸಹ ಪೂರ್ಣಪ್ರಮಾಣದ ಅಧಿಕಾರ ಕೊಡ ಬೇಡಿ. ಕೆಲವರಿಗೆ ಮಾತ್ರ ಬಂಗಾರ ಖರೀದಿಯ ಯೋಗಫಲವಿದೆ ಆದರೆ ಆ ವ್ಯವಹಾರದಲ್ಲಿಯೂ ಸಹ ನಿಮಗೆ ಮೋಸ ಆಗುವ ಸಾಧ್ಯತೆಗಳಿವೆ ಎಚ್ಚರ. ವಿದೇಶ ಪ್ರಯಾಣದ ಆಸೆಗಳಿದ್ದಲ್ಲಿ ಸ್ವಲ್ಪ ಕಷ್ಟ ಆದರೂ ಸಹ ಪ್ರಯತ್ನಿಸಬಹುದು.

  ಸ್ತ್ರೀಯರು: ಪ್ರೀತಿ ಪ್ರೇಮ ಇತ್ಯಾದಿಗಳು ಗೆಲ್ಲುವ ಸಮಯ ಅಲ್ಲ ಇದು. ಅವಿವಾಹಿತರು ನಿಮ್ಮ ವಿವಾಹಕ್ಕೆ ನೂರೆಂಟು ಅಡ್ಡಿ ಆತಂಕಗಳನ್ನು ಕಾಣುತ್ತೀರಿ. ವಿಷಯವಿಲ್ಲದೇ ನಿಮ್ಮೊಂದಿಗೆ ಕೆಲ ಸ್ತ್ರೀಯರು ವಾಗ್ವಾದಕ್ಕೆ ಇಳಿಯಬಹುದು ಅದರಲ್ಲಿ ಕೆಲವರ ನೆಡವಳಿಕೆ ನಿಮಗೆ ಬೇಸರ ಉಂಟು ಮಾಡುತ್ತದೆ. ಬಾಳಸಂಗಾತಿಯಿಂದ ನೀವು ಅಪೇಕ್ಷಿಸಿದ ವಸ್ತುಗಳು ಪ್ರಾಪ್ತ ಆಗುವುದು ಕಷ್ಟ ಹೆಚ್ಚಿನ ಒತ್ತಾಯ ಮನಸ್ತಾಪ ಹಾಗೂ ಅದೇ ಮುಂದೆ ಜಗಳಕ್ಕೂ ನಾಂದಿ ಹಾಡಬಹುದು. ಆದುದರಿಂದ ಬಾಯಿಗೆ ಹಾಗೂ ಮನಸ್ಸಿಗೆ ಬೇಗ ಹಾಕುವುದು ಉತ್ತಮ ಅನಿಸುತ್ತದೆ. ಇನ್ನು ಸಂತಸದ ವಿಚಾರ ಎಂದರೆ ನಿಮ್ಮಿಂದ ಅತ್ಯಂತ ರುಚಿಕರವಾದ ತಿಂಡಿ ತಿನಿಸುಗಳು ಸಾಧ್ಯವಿದೆ. ಇಂಥ ಅವಕಾಶ ಬಿಡದೆ ಹೊಸ ರುಚಿಗಳನ್ನು ಕಲಿತು ತಯಾರು ಮಾಡಿ ನೀವು ತಿಂದು ನಿಮ್ಮ ಬಾಳ ಸಂಗಾತಿಗೂ ತಿನ್ನಿಸಿ ಅವರಿಂದ ಹೆಚ್ಚಿನ ಪ್ರೀತಿ ಪಡೆಯಿರಿ.

  ವಿದ್ಯಾರ್ಥಿಗಳು: ಜವಾಬ್ಧಾರಿಗಳಿಂದ ತಪ್ಪಿಸಿಕೊಳ್ಳಲು ನೀವು ಮಾಡುವ ತಂತ್ರಗಳು ತಾತ್ಕಾಲಿಕವಾಗಿ ನಿಮಗೆ ಉಪಯೋಗಕ್ಕೆ ಬರುವಂತೆ ಕಾಣುತ್ತಿದೆ ಆದರೆ ಪುನರಾವರ್ತನೆ ಆದಲ್ಲಿ ನಷ್ಟ ಎಂದು ಕಾಣಿಸುತ್ತಿದೆ. ನಿಮ್ಮ ಮೂಲಭೂತ ಅವಶ್ಯಕತೆಗಳನ್ನು ಬೇಡಿಕೆಗಳನ್ನು ಅಥವಾ ನಿಮ್ಮ ಸಮಸ್ಯೆಗಳನ್ನು ಅರಿಯದೇ ನಿಮ್ಮ ಮೇಲೆ ಕೆಲ ಶರತ್ತುಗಳನ್ನು ಹಾಕುತ್ತಿದ್ದಾರೆ ಎಂದು ನಿಮಗೆ ಅನಿಸಿದಲ್ಲಿ ಆಶ್ಚರ್ಯ ಇಲ್ಲ. ಆದರೆ ನೀವು ನೆನಪಿಟ್ಟುಕೊಳ್ಳ ಬೇಕಾದ ವಿಚಾರ ಎಂದರೆ ಜೀವನದಲ್ಲಿ ಉಧ್ಧಾರ ಆಗ ಬೇಕಾದಲ್ಲಿ ಮೊದಲು ನಿಮ್ಮಲ್ಲಿ ಶ್ರದ್ದೆಯನ್ನು ಹೆಚ್ಚಿಸಿಕೊಳ್ಳಿ ಹಾಗು ಕಡ್ಡಯವಾಗಿ ಶಿಸ್ತು ಪಾಲಿಸಿ ನಿಮ್ಮ ಹಿರಿಯರು ನಿಮ್ಮ ಉದ್ದರಕ್ಕಾಗಿ ನಿಮ್ಮನ್ನು ಬಯ್ಯುವುದು ಎಂಬುದ ಅರಿಯಿರಿ ಅಷ್ಟು ಸಾಕು. ವಿದೇಶದಲ್ಲಿ ಅಧ್ಯಯನ ಮಾಡಬಯಸುವವರಿಗೆ ಅವಕಾಶಗಳು ನಿರಾಯಾಸವಾಗಿಲಭಿಸುವ ಸಾಧ್ಯತೆಗಳಿವೆ. ನಿಮ್ಮ ಮೇಲೆ ಆರೋಪ ಅಥವಾ ಆಪಾದನೆ ಬಂದರೆ ಶಾಂತವಾಗಿ ಅದನ್ನು ಎದುರಿಸುವ ಶೈಲಿ ಕಲಿಯ ಬೇಕು ಜಗಳ ಅಥವಾ ವಾಗ್ವಾದ ನಿಮ್ಮ ಮೇಲಿನ ನಿಮ್ಮ ಆಪ್ತರ ನಂಬಿಕೆ ಹಾಳು ಮಾಡುತ್ತದೆ ಅಷ್ಟೇ! ಭಾಷಾ ವಿಚಾರದಲ್ಲಿ ನಿಮಗೆ ಹೆಚ್ಚಿನ ಪ್ರೋತ್ಸಾಹ ಸಹಕಾರ ಲಭಿಸುತ್ತದೆ.

  ಪರಿಹಾರ: ಕ್ರಮ ಬದ್ಧವಾಗಿ ಮಾಡುವ ಸ್ಥಳ ಎಲ್ಲಿದೆ ಎಂದು ಪರಾಮರ್ಶಿಸಿ ಆದರೂ ಸರಿ ಈ ತಿಂಗಳ ಆದಿಯಲ್ಲಿ ಏಕ ನಾರಿಕೇಳ ಅಷ್ಟ ದ್ರವ್ಯ ಗಣ ಹವನ ಮಾಡಿಸಿ.

  ತುಲಾ: ಅಧಿಕ ಖರ್ಚಿದೆ, ಆದರೆ ಚಿಂತಿಸುವ ಅಗತ್ಯವಿಲ್ಲ

  ತುಲಾ: ಅಧಿಕ ಖರ್ಚಿದೆ, ಆದರೆ ಚಿಂತಿಸುವ ಅಗತ್ಯವಿಲ್ಲ

  ಪುರುಷರು: ತಾಯಿಯ ಆರೋಗ್ಯದ ವಿಚಾರದಲ್ಲಿ ಎಚ್ಚರವಹಿಸಿ ವೈದ್ಯರ ಬಳಿ ನಿಮ್ಮ ತಾಯಿಯವರನ್ನು ಕರೆಕೊಂಡು ಹೋಗಬೇಕಾದ ಸ್ಥಿತಿ ಬರುವ ಸಾಧ್ಯತೆ ಇದೆ ಒಂದು ವೇಳೆ ಹಾಗಾದಲ್ಲಿ ಈ ಕೆಲಸವನ್ನು ಬೇರೆಯವರಿಗೆ ವಹಿಸ ಬೇಡಿ ನೀವೇ ಖುದ್ದು ತಾಯಿ ಜೊತೆ ಇರಿ.

  ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಹೆಚ್ಚಿನ ಲೆಕ್ಕ ಪರಿಶೋಧನೆಯಲ್ಲಿ ಹೆಚ್ಚಿನ ಪ್ರಮಾಣದ ವ್ಯತ್ಯಾಸಗಳಾಗಿ ಚಿಂತಿಸಬೇಕಾಗಿ ಬರಬಹುದು. ಮುನ್ನೆಚ್ಚರಿಕೆ ವಹಿಸಿದರೆ ಉತ್ತಮ. ಇನ್ನು ಸಾಮಾನ್ಯವಾಗಿ ತೈಲ ವ್ಯಾಪಾರಿಗಳಿಗೆ, ಕಿರಾಣಿ ಅಂಗಡಿ ವ್ಯಾಪಾರಿಗಳಿಗೆ ಹಾಗೂ ಭುಮಿಯ ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿಗಿನ ಲಾಭ ಕಂಡು ಬರುತ್ತಿದೆ. ಇನ್ನು ಸ್ವಲ್ಪ ಯಾಮಾರಿ ಸಿಟ್ಟು ಪ್ರದರ್ಶನ ಮಾಡಿದರೆ ಮಾತ್ರ ಸರಕಾರಿ ಹಾಗೂ ಖಸಗೀ ಈ ಎರಡೂ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುವವರಿಗೆ ಉದ್ಯೋಗದಲ್ಲಿಯೇ ತೊಂದರೆ ಆಗಿ ಕೆಲಸದಿಂದ ಅವರೇ ತೆಗೆಯಬಹುದು ಅಥವಾ ನಿಮಗೇ ಕೆಲಸ ಬಿಟ್ಟು ಬಿಡೋಣ ಅನಿಸುತ್ತದೆ. ಬಾಳಸಂಗಾತಿಯೊಡನೆ ಈ ತಿಂಗಳು ತುಸು ಹೆಚ್ಚು ಆತ್ಮೀಯವಾಗಿ ಇರುತ್ತೀರಿ. ಅವಿವಾಹಿತರಿಗೆ ವಿವಾಹ ನಿಶ್ಚಯ ಆಗುವ ಸಾಧ್ಯತೆ ಇದೆ. ನೀವು ಪ್ರೀತಿಸುತ್ತಿರುವ ಹುಡುಗಿ ಎಷ್ಟು ಗಟ್ಟಿ ಮನಸಿನ ಹುಡುಗಿ ಎಂದು ನೀವು ನಿದರ್ಶನ ಸಹಿತ ತಿಳಿದುಕೊಳ್ಳುತ್ತೀರಿ.

  ಸ್ತ್ರೀಯರು: ಸಂಗೀತದಲ್ಲಿ ಆಸಕ್ತಿ ಹೆಚ್ಚು ಆಗುತ್ತದೆ ಆದರೆ ಕಲಿಯಲು ಸಮಯಾವಕಾಶ ಮಾತ್ರ ಸಿಗುವುದಿಲ್ಲ ಸಮಯ ಸಿಕ್ಕರೂ ಬೇರೆ ಎನೋ ಒಂದು ಅಡ್ಡಿ ಆತಂಕ ಕಾಡುತ್ತದೆ ಒಟ್ಟಿನಲ್ಲಿ ನಿರ್ವಿಘ್ನವಾಗಿ ನಿಮಗೆ ಸಂಗೀತ ಲಭಿಸದು. ನ್ಯಾಯಾಲಯದಲ್ಲಿ ನೀವು ದಾವೆಗಳನ್ನು ಹೂಡಿದ್ದಲ್ಲಿ ನಿಮ್ಮ ಕಾಗದ ಪತ್ರದ ವ್ಯತಾಸ ಅಥವಾ ಅದರಲ್ಲಿನ ವಾಕ್ಯದೋಷಗಳು ವಿಚಾರಣೆ ವೇಳೆ ಗೊಂದಲಮಯ ವಾತಾವರಣ ಸೃಷ್ಟಿಸುತ್ತದೆ. ಸಾಲ ಕೊಡಿಸು ಎಂದು ಕೇಳುತ್ತ ಬರುವ ಸ್ನೇಹಿತೆಗೆ ನಿಮ್ಮ ಜಾಮೀನಿನ ಮೇಲೆ ಸಾಲ ಕೊಡಿಸಿದರೆ ಮುಂದಿನ ತಿಂಗಳಿನಿಂದ ಅದರ ಕಂತುಗಳನ್ನೂ ಸಹ ನೀವೇ ಕಟ್ಟಿಕೊಂಡು ಹೋಗ ಬೇಕಾಗುತ್ತದೆ ಜಾಗ್ರತೆ. ಅಂದರೆ ಬಡ್ಡಿಗೆ ದುಡ್ಡಿನ ವ್ಯವಹಾರ ನೆಡೆಸುವ ಸ್ತ್ರೀಯರಿಗೆ ಕಷ್ಟ ಹಾಗೂ ಧನ ಹಾನಿ ಆಗುವ ಸಂಭವವಿದೆ ಎಂದರ್ಥ, ನಿಮ್ಮ ಸ್ನೇಹಿತ ವರ್ಗದಲ್ಲಿ ಸಿಂಹ ರಾಶಿಯವರು ಇದ್ದಲ್ಲಿ ಅವರೊಟ್ಟಿಗಿನ ನಿಮ್ಮ ಮನಸ್ತಾಪ ಇನ್ನೂ ಕೆಲದಿನಗಳು ಮುಂದುವರಿಯಲಿದೆ ಆದರೆ ಕುಂಭ ರಾಶಿಯವರೊಂದಿಗಿನ ಸ್ನೇಹ ಲಾಭ ಕೊಡಿಸಲಿದೆ.

  ವಿದ್ಯಾರ್ಥಿಗಳು: ಉನ್ನತ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ದರಾಗಲು ಬಹಳ ಕಡಿಮೆ ಸಮಯ ಕೊಟ್ಟು ಅನಾನುಕೂಲ ಆಗುತ್ತಿದೆ ಅನಿಸುತ್ತದೆ. ವಿದ್ಯಾರ್ಥಿಗಳನ್ನು ಪರೀಕ್ಷಿಸುವ ಕಾಲ ಇದು ಅಂದರೆ ಪೂರ್ಣ ಮಾಸವನ್ನು ನೋಡಿದಾಗ ಸ್ವಲ್ಪ ಕಷ್ಟದಾಯಕವೇ ಎನ್ನ ಬಹುದು. ಓದಿದ್ದು ನೆನಪಿನಲ್ಲಿ ಉಳಿಯದೇ ತೊಂದರೆ ಒಂದು ಕಡೆ ಆದರೆ ಹುಡುಕಿ ಹುಡುಕಿ ನಿಮಗೇ ಬೈಯುತ್ತಿದ್ದಾರೆ ನಿಮ್ಮ ಅಧ್ಯಾಪಕರು ಎನಿಸುತ್ತದೆ ಇನ್ನೊಂದು ಕಡೆ ಕಾರಣ ಅನಾವಶ್ಯಕ ರಾಜಕೀಯದಲ್ಲಿ ನೀವು ಮೇಲೆ ಎದುರಿಗೆ ಕಾಣುತ್ತೀರಿ. ಇತರೆ ವಿದ್ಯಾರ್ಥಿಗಳ ತಪ್ಪಿಗೂ ನಿಮ್ಮನ್ನೇ ಹೊಣೆ ಆಗಿಸಿದರೆ ಹೇಗೆ ಎಂಬ ನಿಮ್ಮ ಚಿಂತನೆಗೆ ಉತ್ತರಿಸುವವರು ಮಾತ್ರ ಸಿಗುವುದಿಲ್ಲ. ಆದರೆ ನೀವು ಗಮನಹರಿಸ ಬೇಕಾದದ್ದು ಮಾತ್ರ ನಿಮ್ಮ ನೆನಪಿನ ಶಕ್ತಿಯ ವೃದ್ಧಿ ಹಾಗೂ ವಿದ್ಯೆಯತ್ತೆ ಹೆಚ್ಚು ಶ್ರದ್ಧೆ ವಹಿಸುವತ್ತ!

  ಪರಿಹಾರ: ಸರ್ವಾ ಬಾಧಾ ಪ್ರಶಮನಂ ಈ ಪೂರ್ಣ ಶ್ಲೋಕದಿಂದ ಪಲ್ಲವ ವಿಧಾನದಲ್ಲಿ ಶ್ರೀ ಸಪ್ತಶತಿ ಚಂಡಿಕಾ ಪಾರಾಯಣ ಮಾಡಿಸಿ.

  ವೃಶ್ಚಿಕ: ಹೊಸ ಹೂಡಿಕೆಗೆ ಅವಕಾಶಗಳನ್ನು ಹುಡುಕುತ್ತೀರಿ

  ವೃಶ್ಚಿಕ: ಹೊಸ ಹೂಡಿಕೆಗೆ ಅವಕಾಶಗಳನ್ನು ಹುಡುಕುತ್ತೀರಿ

  ಪುರುಷರು: ಇರುವ ಕೆಲಸ ಬಿಟ್ಟು ರೈತ ಆಗುತ್ತೇನೆ ಹೊಳ ಊಳುತ್ತೇನೆ ಏನು ಆಗುತ್ತದೆ ನೋಡಿಯೇ ಬಿಡೋಣ ಎಂದು ನೀವು ಹೊರಡುವ ಅಥವಾ ಘೋಷಿಸುವ ಸಾಧ್ಯತೆಗಳು ಹೆಚ್ಚು ಇವೆ. ನಿಮ್ಮ ಈ ನೆಡೆ ಬಹಳ ಜನರಿಗೆ ಆದಿಯಲ್ಲಿ ಹುಚ್ಚು ಎಂದೇ ಅನಿಸುತ್ತದೆ ಆದರೆ ಅಲ್ಲಿ ನಿಮಗೆ ಆಗುವ ಲಾಭ ನೋಡಿ ತಮ್ಮ ಅನಿಸಿಕೆ ಬದಲಾಯಿಸುತ್ತಾರೆ ಆದರೆ ಕ್ರಮೇಣ ನೀವು ಎಂಥಾ ಹುಚ್ಚು ತೀರ್ಮಾನ ತೆಗೆದುಕೊಂಡೆ ಎಂದು ನಿಮಗೆ ಅನಿಸುತ್ತದೆ! ಇನ್ನು ಅವಿವಾಹಿತರಿಗೆ ಇದ್ದಕಿದ್ದಂತೆ ಹೆಚ್ಚು ಮದುವೆಯ ಪ್ರಸ್ತಾಪಗಳು ಬರಲು ಪ್ರಾರಂಬಿಸುತ್ತವೆ. ದೂರ ಪ್ರಯಾಣಗಳಿಂದ ಉತ್ತಮ ಲಾಭಗಳಿವೆ. ದಿವ್ಯ ಕ್ಷೇತ್ರ ದರ್ಶನ ಯೋಗಗಳು ಸಹ ಕಂಡು ಬರುತ್ತಿದೆ. ಸ್ತ್ರೀಯರ ಮುಖಾಂತರ ಮಾಡುವ ವ್ಯವಹಾರಗಳಲ್ಲಿ ಯಶಸ್ಸು ಕಾಣುತ್ತಿದೆ. ತಿಂಗಳಾಂತ್ಯಕ್ಕೆ ಸರಿದಂತೆ ಭುಮಿ ವ್ಯವಹಾರ ಮಾಡುವವರಿಗೆ ಲಾಭದ ಸಮಯ, ಅಧ್ಯಾಪಕ ವೃತ್ತಿಯಲ್ಲಿ ಇರುವವರಿಗೆ ಸಂಬಳ ಹೆಚ್ಚಳ ಇತ್ಯಾದಿ ಮಾರ್ಗಗಳಿಂದ ಧನ ಲಾಭ. ಇನ್ನೊಬ್ಬರ ಒಟ್ಟಿಗೆ ಸೇರಿ ಮಾಡುತ್ತಿರುವ ವ್ಯಾಪಾರದಲ್ಲಿ ಲಾಭದ ಪ್ರಮಾಣ ಸ್ವಲ್ಪ ತಗ್ಗುವ ಸಾಧ್ಯತೆಗಳು ಕಾಣುತ್ತಿದೆ. ಆದರೆ ಹೊಸ ವ್ಯಾಪಾರ ವಿಚಾರಗಳ ಮಾಹಿತಿ ನಾವೂ ಸಹ ಆ ವ್ಯಾಪಾರವನ್ನು ಮಾಡೋಣ ಎಂಬ ಸಲಹೆ ಸೂಚನೆಗಳು ಲಭಿಸುತ್ತದೆ. ವಿದೇಶ ಪ್ರಯಾಣದ ಕನಸು ಅಥವಾ ಆಸೆ ಹೊತ್ತಿರುವವರು ಈ ತಿಂಗಳಿನಲ್ಲಿ ಪ್ರಯತ್ನಿಸಿದರೆ ಯಶಸ್ಸು ಸಿಗಬಹುದು. ಸಾಲ ಕೊಡಬೇಕಾದ ಅನಿವಾರ್ಯ ಸ್ಥಿತಿಯನ್ನು ಸ್ನೇಹಿತರು ಸಿದ್ದಪಡಿಸುತ್ತಾರೆ.

  ಸ್ತ್ರೀಯರು: ಒಳ್ಳೆಯ ದಿನಗಳು ಬರಲಿವೆ ಈ ಆಸೆ ನಿಮಗೂ ಆರಂಭ ಆಗುತ್ತದೆ. ಎಲ್ಲಿಯೋ ಒಂದೆಡೆ ಸ್ವಲ್ಪ ಬದಲಾವಣೆ ಆಗುತ್ತಿದೆ ತಪ್ಪಿತಸ್ಥರ ಮುಖದ ಮೇಲೆಯೇ ಅವರ ತಪ್ಪನ್ನು ಹೇಳುವ ನಿಮ್ಮ ವಿಧಾನ ಹೆಚ್ಚಿನ ಜನರ ವಿರೋಧ ಕಟ್ಟಿಸುತ್ತದೆ. ನಿಮ್ಮ ತಾಯಿ ನಿಮ್ಮ ಮೇಲೆ ಮುನಿಸಿಕೊಂಡು ಹಲವು ದಿನಗಳು ನಿಮ್ಮೊಂದಿಗೆ ಮಾತನಾಡುವುದಿಲ್ಲ. ಸಂಗೀತ ಕಲಿತಿದ್ದಲ್ಲಿ ಗಂಟಲಿನ ಸಮಸ್ಯೆ ಆಗಬಹುದು ಕುಡಿಯುವ ನೀರಿನ ವಿಚಾರದಲ್ಲಿ ಎಚ್ಚರ ವಹಿಸಿ. ಉತ್ತಮ ಅವಕಾಶಗಳು ನಿಮ್ಮನ್ನು ಅರಸುತ್ತಾ ಬರುತ್ತವೆ ಅವುಗಳನ್ನು ಬೇಡ ಎನ್ನಬೇಡಿ. ತಿಂಗಳ ಮಧ್ಯ ಹಾಗೂ ಅಂತ್ಯ ಭಾಗಕ್ಕೆ ಸರಿದಂತೆ ಆರೋಗ್ಯ ಸಮಸ್ಯೆ ಇದ್ದವರಿಗೆ ಅರೋಗ್ಯ ಸ್ವಲ್ಪ ಸುಧಾರಿಸುತ್ತಾ ಬರುತ್ತದೆ. ಹೊಲಿಗೆ ಇತ್ಯಾದಿ ಚಿಕ್ಕ ಪುಟ್ಟ ವ್ಯಾಪಾರ ಮಾಡುತ್ತಿರುವ ಸ್ತ್ರೀಯರಿಗೆ ಕಠಿಣವಾದ ಸವಾಲುಗಳು ಎದುರಾಗಬಹುದು. ಆದರೆ ಕೊನೆಯಲ್ಲಿ ಧನ ಲಾಭ ಇದೆ. ಹಳೆಯ ಕೆಲ ಸಾಲಗಳನ್ನು ಸ್ವಲ್ಪ ಪ್ರಯತ್ನಿಸಿದರೂ ಸಹ ತೀರಿಸಬಹುದು ಆದರೆ ಅತ್ತ ಹೆಚ್ಚಿನ ಗಮನಬೇಕು, ದೈವಾನುಗ್ರಹ ಇಲ್ಲ ಎನ್ನುವುದೊಂದೆ ದೊಡ್ಡ ಸಮಸ್ಯೆ ಹೆಚ್ಚು ದೇಗುಲಕ್ಕೆ ಹೋಗಿ ಇಲ್ಲ ಮನೆಯಲ್ಲಿ ನಿತ್ಯ ದೇವರ ಧ್ಯಾನ ಮಾಡಿ.

  ವಿದ್ಯಾರ್ಥಿಗಳು: ಸಂಬಂಧ ಪಡದ ವಿಚಾರದಲ್ಲಿ ನೀವು ತಪ್ಪಿತಸ್ಥನ ಸ್ಥಾನದಲ್ಲಿ ನಿಂತು ಶಿಕ್ಷೆ ಅನುಭವಿಸಬೇಕಾಗುತ್ತದೆ. ನಿಮಗೆ ಈ ಘಟನೆ ಬಹಳ ದುಃಖ ನೀಡುತ್ತದೆ ಅದರೆ ವಿಧಿ ಇಲ್ಲ. ಇಷ್ಟು ದಿನ ಹಠಕ್ಕೆ ಬಿದ್ದು ನೀವು ಮಾಡಿದ ಪ್ರಯತ್ನ ಹಾಳಾಗಬಾರದು ಎಂದು ಸುಮ್ಮನೆ ಇರುತ್ತೀರಿ. ಸ್ನೇಹಿತರು ಹಲವರು ನಿಮ್ಮ ಸಹಾಯ ಬಯಸುತ್ತಾರೆ ವಿದ್ಯೆ ವಿಚಾರದಲ್ಲಿ ಅಲ್ಲದಿದ್ದರೂ ದಿನ ನಿತ್ಯದ ಜೀವನದಲ್ಲಿ ಪ್ರಮುಖವಾದ ವಿಚಾರಗಳಲ್ಲಿ ನಿಮ್ಮ ಸಹಾಯ ಮಾರ್ಗದರ್ಶನ ನಿಮ್ಮ ಸ್ನೇಹಿತರಿಗೆ ಅನಿವಾರ್ಯ ಆಗುತ್ತದೆ, ಹಾಗೆ ನೀವು ಎಲ್ಲರಿಗೂ ಬೇಕಾಗಿರುವ ವ್ಯಕ್ತಿ ಆಗಿ ಮೂಡಿಬರುತ್ತೀರಿ. ನೆನಪಿಡಿ ನೀವು ಗಮನಿಸುವ ವ್ಯಕ್ತಿಗಳಿಗಿಂತ ನಿಮ್ಮನ್ನು ಗಮನಿಸುವ ವ್ಯಕ್ತಿಗಳ ಸಂಖ್ಯೆ ಹೆಚ್ಚು ಇದೆ. ಶಾಲಾ ಕಾಲೆಜುಗಳಲ್ಲಿ ನಿಮ್ಮ ನಿಪುಣತ್ವವನ್ನು ವಿದ್ಯೆಯಲ್ಲಿ ತೋರಿಸಿ ಅವರೆಲ್ಲರ ಮೆಚ್ಚುಗೆಗೆ ಪಾತ್ರರಾಗಿ. ನಿಮ್ಮ ಮನೆಯ ಸಮಸ್ಯೆ ನಿಮ್ಮ ಓದಿಗೆ ಅಡ್ಡಿ ಆಗಬಾರದು ಆರ್ಥಿಕ ವಿಚಾರಗಳಿಗಿಂತ ಅನ್ಯ ವಿಚಾರಗಳೂ ಸಹ ನೀವು ಹೆಚ್ಚು ಚಿಂತೆ ಅನಾವಶ್ಯಕ ಮಾಡುತ್ತಿದ್ದೀರಿ ಅದನ್ನು ಬಿಡಿ

  ಪರಿಹಾರ: ಪ್ರತೀ ದಿನ ನಿಮ್ಮ ಮನೆಯ ಹತ್ತಿರ ಇರುವ ನಾಗರ ಬಿಂಬಕ್ಕೆ ಹಾಲು ಅಭಿಷೇಕ ಮಾಡಿ ನಂತರ ನೀರು ಹಾಕಿ ಸ್ವಚ್ಛ ಮಾಡಿ ಪೂಜೆ ಪ್ರದಕ್ಷಿಣೆ ಮಾಡಿ.

  ಧನು: ಶಾರೀರಿಕವಾಗಿ ಆಯಾಸ ಹೆಚ್ಚಾದಂತೆ ಅನಿಸುತ್ತದೆ

  ಧನು: ಶಾರೀರಿಕವಾಗಿ ಆಯಾಸ ಹೆಚ್ಚಾದಂತೆ ಅನಿಸುತ್ತದೆ

  ಪುರುಷರು: ಸ್ನೇಹಿತನೊಂದಿಗೆ ಸೇರಿ ಮಾಡುತ್ತಿರುವ ವ್ಯವಹಾರಗಳು ಮಾತ್ರ ನಷ್ಟ ಆಗುತ್ತದೆ. ಇನ್ನು ಒಬ್ಬರೇ ಸ್ವಂತವಾಗಿ ವ್ಯಾಪಾರ ಆರಂಭಿಸುವ ಆಸಕ್ತಿ ಇದ್ದರೆ ಇನ್ನೂ ಕಾಯಬೇಕು. ಕೆಲವರ ವಿಚಾರದಲ್ಲಿ ನಿಮಗೆ ಭಾವನೆಗಳು ಆರಂಭಕ್ಕೂ ಮುನ್ನವೇ ಅಂತ್ಯ ಆಗುತ್ತದೆ. ನಿಮ್ಮನ್ನು ನೋಡಿ ಅಸೂಯೆ ಪಡುವ ಜನ ಹೆಚ್ಚಾಗಿದ್ದಾರೆ ಎಂದನಿಸುತ್ತದೆ. ನೀವು ಯೋಚಿಸಿ ಮಾತನಾಡುವುದನ್ನು ರೂಢಿ ಮಾಡಿಕೊಳ್ಳುವುದು ಉತ್ತಮ. ಯಾರಿಗೂ ಸಹ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಾಗಿ ಆಶ್ವಾಸನೆ ಕೊಡುವ ಕೆಲಸ ಮಾಡಬೇಡಿ. ನಿಮ್ಮ ನಿತ್ಯ ಜೀವನದ ಹಾಸ್ಯ ಸ್ವಲ್ಪ ಕಡಿಮೆ ಆಗುವ ಸಮಯ. ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಉತ್ತಮ ಅವಕಾಶ ಲಭಿಸದೇ ಚಿಕ್ಕ ಕೆಲಸಕ್ಕೂ ಹೆಚ್ಚಿನ ಓಡಾಟ ಮಾಡಬೇಕಾಗಿ ಬರುತ್ತದೆ. ಹಾಸ್ಯಾಸ್ಪದ ವಿಚಾರ ಎಂದರೆ ನಿಮ್ಮನ್ನು ಈ ಮೊದಲು ಮೋಸ ಮಾಡಿದವರೇ ಈಗ ಮತ್ತೊಮ್ಮೆ ಹೊಸ ವೇಷ ಧರಿಸಿ ಹೊಸ ಪಾತ್ರಧಾರಿಗಳಂತೆ ನಿಮ್ಮ ಮುಂದೆ ಮತ್ತೆ ಬಂದು ನಿಲ್ಲುವರು.

  ಸ್ತ್ರೀಯರು: ಮಾತಿನ ಮೋಡಿ ಈ ಹಿಂದೆ ಚಲಿಸಿದಷ್ಟು ಕರಾರುವಕ್ಕಾಗಿ ಚಲಿಸದೇ ನಿಮಗೆ ಹಿನ್ನಡೆ ಇದೆ. ನಿಮ್ಮ ಆಲೋಚನೆಗಳು ಕಾರ್ಯರೂಪ ಪಡೆಯುವ ಮುನ್ನವೇ ನೀವು ಆ ವಿಚಾರವನ್ನು ಜಗಜ್ಜಾಹೀರು ಮಾಡಿ ದೃಷ್ಟಿ ತಾಕಿಸಿಕೊಂಡು ಕಾರ್ಯ ಹಾನಿ ಮಾಡಿಕೊಳ್ಳುತ್ತೀರಿ. ಹಿರಿಯರು ನಿಮಗೆ ಮಾರ್ಗದರ್ಶನ ಮಾಡುವಾಗ ಅವರಿಗೆ ಸ್ವಲ್ಪ ಮಾತನಾಡಲು ಅವಕಾಶ ಕೊಡಬೇಕು ನಿಮ್ಮ ಮಾತೇ ಅಂತಿಮ ನಿಮ್ಮ ಪರವೇ ತೀರ್ಪು ಬರಬೇಕು ಎಂದು ಕೂಗಿದರೆ ನ್ಯಾಯ ಸಿಗದು. ಪ್ರಪಂಚವನ್ನು ನೋಡುವ ದೃಷ್ಟಿಕೋನ ಅತ್ಯಂತ ತ್ವರಿತವಾಗಿ ಬದಲಿಸಿ ನಂತರ ತಡ ಆದೀತು. ನಿಮ್ಮ ಬಾಳ ಸಂಗಾತಿಯ ಸಹಾಯ ಸಹಕಾರ ನಿರಾತಂಕವಾಗಿ ಲಭಿಸುತ್ತದೆ. ನಿಮ್ಮ ಮಕ್ಕಳ ಕೆಲ ಸಾಧನೆಗಳು ಅಥವಾ ಅವರು ಕಲಿತ ಲಲಿತ ಕಲೆಗಳು ನಿಮ್ಮನ್ನು ಹೆಚ್ಚು ಆಕರ್ಶಿಸಿ ನಿಮಗೆ ಮುದವನ್ನು ನೀಡುತ್ತದೆ.

  ವಿದ್ಯಾರ್ಥಿಗಳು : ನಿಮಗೆ ವಹಿಸಿದ ಕೆಲಸಗಳಿಂದ ಪಲಾಯನ ಮಾಡಲು ಯೋಚಿಸುತ್ತೀರಿ. ಆದರೆ ಅದು ಸೂಕ್ತವಾದ ನಿರ್ಧಾರ ಅಥವಾ ನಡೆ ಆಗುವುದಿಲ್ಲ. ನಿಮಗೆ ಅರಿವಿಲ್ಲದೆ ನಿಮ್ಮನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸುತ್ತಾರೆ. ನಿಮ್ಮ ಗುಣ ಅವಗುಣಗಳು ತಿಳಿಯಲು ನಿಮ್ಮೊಂದಿಗೆ ನಾಟಕ ಆಡಲಾಗುತ್ತದೆ. ವಿದ್ಯೆ ಮೇಲೆ ನಿಮಗೆ ಸರಿಯಾದ ಶ್ರದ್ಧೆ ಇದೆ ಎಂದು ನೀವು ಈ ಪರೀಕ್ಷೆಯಲ್ಲಿ ತೋರಿಸಲೇ ಬೇಕಾಗುತ್ತದೆ. ನಿಮಗೆ ಕಷ್ಟ ಅನಿಸಿದರೂ ಸಹ ವಿದ್ಯೆಯತ್ತೆ ಹೆಚ್ಚು ಗಮನ ಕೊಡಲೇ ಬೇಕು. ನೆನಪಿನ ಶಕ್ತಿಯು ಕುಂದಿ ನಿಮಗೆ ದೊಡ್ಡ ತಲೆ ನೊವಾಗಿ ಪರಿಣಮಿಸಬಹುದು. ಪ್ರತೀ ದಿನ ಧ್ಯಾನ ಪ್ರಾಣಾಯಾಮ ಮಾಡಿ ನಿಮ್ಮಲ್ಲಿ ಏಕಾಗ್ರತೆ ವೃದ್ಧಿಸಿಕೊಳ್ಳಿ. ನಿಮಗೆ ಸಂಬಂಧಿಸದ ವಿಚಾರಗಳತ್ತ ದೃಷ್ಟಿ ಹರಿಸದೇ ನಿಮ್ಮ ಗುರಿ ಸ್ಪಷ್ಟವಾಗಿರಲಿ.

  ಪರಿಹಾರ:-ಈ ತಿಂಗಳ ಮೊದಲ ಅಥವಾ ಎರಡನೇಯ ಮಂಗಳವಾರದಂದು ತಪ್ಪದೇ ಮನೆಯಲ್ಲಿ ಬೆಲ್ಲದ ಅನ್ನ ಮಾಡಿ ಹತ್ತಿರದ ದುರ್ಗಾ ದೇಗುಲದಲ್ಲಿ ಅದನ್ನು ನೈವೇದ್ಯ ಮಾಡಿಸಿ ದೇಗುಲಕ್ಕೆ ಬಂದ ಭಕ್ತರಿಗೆ ಹಂಚಿ.

  ಮಕರ: ಪ್ರತಿಸ್ಪರ್ಧಿಗಳ ವಿಚಾರದಲ್ಲಿ ಎಚ್ಚರ ಅವಶ್ಯ

  ಮಕರ: ಪ್ರತಿಸ್ಪರ್ಧಿಗಳ ವಿಚಾರದಲ್ಲಿ ಎಚ್ಚರ ಅವಶ್ಯ

  ಪುರುಷರು: ಸದಾ ಹೊಸತನ್ನು ಬಯಸುವ ನಿಮಗೆ ಹೊಸ ವಿಚಾರಗಳು ಲಭ್ಯ ಇದೆ ಅದರೆ ನಿಮ್ಮ ನಿರೀಕ್ಷೆಯ ಮಟ್ಟ ಬಹಳ ದೊಡ್ಡದಾದ್ದರಿಂದ ಆ ಮಟ್ಟ ತಲುಪುವುದು ಅನುಮಾನ. ಇತರರಿಗಾಗಿ ನೀವು ಬಹಳ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದೀರಿ ಎನ್ನುವಂಥ ಅನುಭವ ಅಗುತ್ತದೆ. ಭುಮಿ ಖರೀದಿಸುವ ಆಸೆ ಇದ್ದಲ್ಲಿ ಇದು ಸೂಕ್ತ ಸಮಯ. ನ್ಯಾಯಾಲಯದ ವ್ಯಾಜ್ಯಗಳು ಮಾತುಕತೆ ಇಂದ ಪರಿಹಾರ ಆಗುತ್ತದೆ ಸಂಧಾನ ಯಶಸ್ವಿ ಆಗುತ್ತದೆ ನಿಮ್ಮ ಹಾಗೂ ನ್ಯಾಯಾಲಯದಲ್ಲಿ ನಿಮ್ಮ ವಿರುದ್ದ ಮೊಕದ್ದಮೆ ಮಾಡುತ್ತಿರುವವರ ಮಧ್ಯದಲ್ಲಿ ಜಗಳ ಮಾಡಿಸಿ ಅದರ ದುರುಪಯೋಗ ಪಡೆದುಕೊಳ್ಳುತ್ತಿದ್ದ ಕೆಲವರ ಅಥವಾ ಹಲವ ಅನುಪಸ್ಥಿತಿ ನಿಮಗೆ ವರದಾನ ಆಗಲಿದೆ! ಅವಿವಾಹಿತರು ವಿವಾಹ ಕ್ಕೆ ಸಿದ್ಧರಾಗಬಹುದು. ವಿವಾಹಿತರು ಸಂತಾನದ ವಿಚಾರದಲ್ಲಿ ಒಳ್ಳೆ ಸುದ್ದಿ ಕೇಳುವ ಯೋಗಫಲ ಇದೆ. ಪ್ರೀತಿಸುವ ಆಸೆ ಇದೆ ಅದರೆ ಅದಕ್ಕೆ ತಕ್ಕ ಹುಡುಗಿ ಸಿಗುತ್ತಿಲ್ಲ ಎಂದು ಬೇಸರ ಪಡುತ್ತಿರುವವರಿಗೆ ಅವರ ಮನಸಿಗೆ ಹಿಡಿಸುವಂಥ ಹುಡುಗಿ ಕಾಣಿಸುತ್ತಾಳೆ. ನಿರುದ್ಯೋಗಿಗಳು ಮಾತ್ರ ಕೆಲಸ ಹುಡುಕುವ ನಿಮ್ಮ ಪ್ರಯತ್ನ ತೀವ್ರಗೊಳಿಸಿ ಹೆಚ್ಚು ಸಮಯ ಇಲ್ಲ ಬೇಗ ಕೆಲಸ ಹಿಡಿಯಿರಿ ಅತೀ ಆಸೆ ಬೇಡ ಸಿಕ್ಕದ್ದರಲ್ಲಿ ಸಂತೃಪ್ತಿ ಹೊಂದಿ ಸಾಕು. ಮಸಾಂತ್ಯಕ್ಕೆ ಸರಿದಂತೆ ಹೆಚ್ಚು ಸಿಟ್ಟು ಮಾಡುತ್ತೀರಿ ನಿಮ್ಮ ಮೇಲೆ ನಿಮಗೆ ಹಿಡಿತ ಇಲ್ಲ ಕಳೆದುಕೊಂಡಿದ್ದೀರಿ ಅನಿಸುತ್ತದೆ ಅದಕ್ಕೆ ಪರಿಹಾರ ಧ್ಯಾನ ಮಾಡುವುದು. ನಿಮ್ಮ ಸ್ನೇಹಿತರು ನಿಮ್ಮ ಬಳಿ ಸಹಾಯ ಕೋರಿ ಬರಲಿದ್ದಾರೆ ಅವರಿಗೆ ನಿಮ್ಮಿಂದ ಖಂಡಿತ ಸಹಾಯ ಆಗುತ್ತದೆ ಎನ್ನುವ ನಂಬಿಕೆ ಸಹ ಇದೆ

  ಸ್ತ್ರೀಯರು: ಸ್ವಲ್ಪ ಆಲಸ್ಯ ಮಾಡಿ ಜಾಸ್ತಿ ಅವಮಾನಕ್ಕೆ ಒಳಗಾಗುತ್ತೀರಿ ಅದರಿಂದಾಗಿ ಒಂದಕ್ಕಿಂತ ಹೆಚ್ಚು ಜನರ ಬಳಿ ಕ್ಷಮಾಪಣೆ ಕೇಳುವ ಸ್ಥಿತಿ ಇದೆ ಎಚ್ಚರ. ನಿಮ್ಮ ಆಶೋತ್ತರಗಳನ್ನು ನೋಡುವ ಅಥವಾ ಅರ್ಥ ಮಾಡಿಕೊಳ್ಳುವ ವಿಚಾರದಲ್ಲಿ ಜನ ಎಡವುತ್ತಿದ್ದಾರೆ ಅನಿಸುತ್ತದೆ. ಮಾತಿಗೆ ಮಾತು ಪ್ರಶ್ನೆಗೆ ಅಲ್ಲೇ ಉತ್ತರ ಇದನ್ನು ಮಾತ್ರ ಬಹಳ ಚನ್ನಾಗಿ ಮಾಡಿ ಹೆಸರು ಹಾಳು ಮಾಡಿಕೊಳ್ಳುತ್ತೀರಿ ಆದರೆ ಆ ಹೆಸರು ಹಾಳಾಗಿರುವುದು ನಿಮ್ಮ ಗಮನಕ್ಕೆ ಬಂದಿರುವುದಿಲ್ಲ ಎನ್ನುವುದೇ ವಿಶೇಷ ಹಾಗೂ ಆ ಸ್ವಭಾವ ನೀವು ಮುಂದುವರಿಸಿಕೊಂಡು ಹೋಗಲು ಕಾರಣ ಆಗುತ್ತದೆ. ಮಕ್ಕಳ ವಿಚರದಲ್ಲಿ ಅದರಲ್ಲಿಯೂ ಹೆಣ್ಣು ಮಕ್ಕಳು ನಿಮಗೆ ಅತ್ಯಂತ ಆನಂದ ತಂದುಕೊಡುತ್ತಾರೆ ಆದರೆ ಅವರನ್ನು ಹೊಗಳಿದ್ದು ತುಸು ಹೆಚ್ಚು ಆಯಿತೇನೋ ಎಂಬ ಅನುಮಾನ ನಿಮಗೆ ಬರುವಂತೆ ಮಸಾಂತ್ಯಕ್ಕೆ ಸರಿದಂತೆ ನೆಡೆದುಕೊಳ್ಳುತ್ತಾರೆ ಎನ್ನುವುದೇ ಇಲ್ಲಿ ಹಾಸ್ಯಾಸ್ಪದ. ಸಂಘ ಸಂಸ್ಥೆಗಳಲ್ಲಿ ನೆಡೆಯುವ ರಾಜಕೀಯ ನಿಮಗೆ ಅಸಹ್ಯ ಉಂಟು ಮಾಡಿ ನೀವು ಆ ಸಂಘ ಸಂಸ್ಥೆಗಳನ್ನು ತೊರೆಯುವಂತೆ ಮಾಡುತ್ತದೆ. ನೆನಪಿಡಿ ದೀಪದ ಬುಡ ಕತ್ತಲು ....

  ವಿದ್ಯಾರ್ಥಿಗಳು: ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು ಇರುವ ಮಾಸ ಇದು. ಭೂ ವಿಜ್ಞಾನ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿ ಅವಿಶ್ಕಾರಗಳನ್ನು ಮಾಡಿ ಉತ್ತಮ ಹೆಸರು ಕೀರ್ತಿ ಸಂಪಾದನೆ ಮಾಡಲು ಸುದಿನಗಳು ಎಂದು ಹೇಳಬಹುದು. ನಿಮಗೆ ಬಹಳ ವಿಚಾರಗಳು ತಿಳಿದಿದೆ ಆದರೆ ಜಾಣ ಮೌನ ಆಚರಿಸುತ್ತಿದ್ದೀರಿ ಅದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ನೀವೇ ಸ್ವತಃ ಯೋಚಿಸ ಬೇಕಾದ ವಿಚಾರ. ನಿಮ್ಮ ಬಾಲ್ಯ ಮುಗಿದು ಹೋಗಿದೆ ಬಹುಷಃ ಆ ಬುದ್ದಿ ಸಹ ಬಿಡ ಬೇಕಾದ ಸಮಯ ಅನಿಸುತ್ತಿದೆ. ಎಲ್ಲಿಯೋ ಒಂದು ಕಡೆ ಸ್ನೇಹಿತರ ಕಂಡು ಚಿಕ್ಕದಾಗಿ ಈರ್ಷೆ ಉಂಟಾಗಬಹುದು ಆದರೆ ಅದನ್ನು ನೀವು ಆ ಸ್ನೇಹಿತನಿಗೆ ತಿಳಿಸಿ ನಿಮ್ಮ ಮುಗ್ಧತೆ ತೋರಿಸುತ್ತೀರಿ. ಸಹಾಯ ಮಾಡಬೇಕು ಹೌದು ಆದರೆ ಎಷ್ಟು ಯಾವ ಪ್ರಮಾಣ? ಎಂದು ನೀವು ಎಷ್ಟೋ ಸಹಾಯಗಳನ್ನು ನಿಲ್ಲಿಸುತ್ತೀರಿ. ಆಗಿದ್ದು ಆಗಲಿ ಎಂದು ಕೆಲ ದೃಢ ನಿರ್ಧರಗಳನ್ನು ತೆಗೆದುಕೊಳ್ಳುತ್ತೀರಿ ಹಾಗೂ ಕೆಲ ಹಿರಿಯನ್ನು ಎದುರಿಸಿ ಅವರಿಗೆ ಎದುರುತ್ತರ ನೀಡಿ ತಪ್ಪಿತಸ್ಥ ಆಗುತ್ತೀರಿ.

  ಪರಿಹಾರ:- ವ್ಯಾಘ್ರ ನೇತ್ರ ರತ್ನ ಅಭಿಮಂತ್ರಿಸಿ ಧರಿಸುವ ಅವಶ್ಯಕತೆ ಕಾಣುತ್ತಿದೆ. ಪ್ರತೀ ದಿನ ದತ್ತಾತ್ರೇಯ ವಜ್ರ ಕವಚ ಸ್ತೋತ್ರವನ್ನು ಪಠಿಸಿ.

  ಕುಂಭ: ನಿತ್ಯದ ಖರ್ಚುಗಳು ಹೆಚ್ಚಾದಂತೆ ಭಾಸವಾಗುತ್ತದೆ

  ಕುಂಭ: ನಿತ್ಯದ ಖರ್ಚುಗಳು ಹೆಚ್ಚಾದಂತೆ ಭಾಸವಾಗುತ್ತದೆ

  ಪುರುಷರು:-ಮರಳಿ ಯತ್ನವ ಮಾಡು ಎನ್ನುವ ವಿಧಾನದಲ್ಲಿ ಕೆಲ ವಿಚಾರಗಳನ್ನು ಪ್ರಯತ್ನಗಳನ್ನು ನೀವು ಮೊದಲಿನಿಂದ ಮತ್ತೆ ಮಾಡ ಬೇಕಾದ ಅನಿವಾರ್ಯತೆ ಕಾಣುತ್ತಿದೆ. ಕೆಲ ವಿಚಾರಗಳಲ್ಲಿ ನೀವು ಭಯಂಕರವಾದ ಭ್ರಮಾ ಲೋಕದಲ್ಲಿ ಇದ್ದೀರಿ ಸಮಯ ಮೀರಿ ನಷ್ಟ ಅನಾಹುತ ಆಗುವುದರೊಳಗೆ ಅದರಿಂದ ಹೊರ ಬಂದು ನಿಜ ದರ್ಶನ ಮಾಡಿ. ಬಹಳ ಸರಳವಾಗಿ ಅರ್ಥ ಆಗುವ ವಿಷಯಗಳು ಯಾಕೋ ನಿಮಗೆ ಕಬ್ಬಿಣದ ಕಡಲೆ ಆಗಿರುವುದು ಹಾಸ್ಯಾಸ್ಪದ ಅನಿಸುತ್ತಿದೆ. ಅವಿವಾಹಿತರಿಗೆ ವಿವಾಹ ಆಗುವ ಲಕ್ಷಣಗಳು ಕಾಣುತ್ತಿವೆ, ಮೊಸರಿನಲ್ಲಿ ಕಲ್ಲು ಹುಡುಕುವ ಬುದ್ದಿ ಬಿಟ್ಟು ಅನುಸರಿಸಿಕೊಂಡು ಹೋದಲ್ಲಿ ಬಹಳ ಉತ್ತಮವಾಗಿ ಜೀವನ ನೆಡೆಸಬಹುದಾದ ಎಲ್ಲಾ ಸಾಧ್ಯತೆಗಳು ನಿಮ್ಮ ಮುಂದೆ ಇದೆ. ಇತರರಲ್ಲಿ ತಪ್ಪು ಹುಡುಕುವ ಮೊದಲು ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಿ ಸರಿಪಡಿಸಿಕೊಳ್ಳಿ. ನಿಮ್ಮ ಮಕ್ಕಳ ವಿಚಾರವಾಗಿ ಬೇಸರ ಆಗಬಹುದು ಆದರೆ ಅವರೊಂದಿಗೆ ಮನಸ್ತಾಪ ಬೇಡ. ನಾನಿದ್ದೇನೆ ನಾನು ಕೆಲಸ ಮಾಡಿಕೊಡುತ್ತೇನೆ ಎಂದು ಯಾರಿಗೂ ಮಾತು ಕೊಡ ಬೇಡಿ. ಆರೋಗ್ಯ ಸಹ ನಿಮಗೆ ಸಮಸ್ಯೆ ಆಗುತ್ತದೆ ಎಂದು ತೋರುತ್ತಿದೆ ಆದುದರಿಂದ ಇಂದಿನಿಂದಲೇ ಒಳ್ಳೆಯ ಆಹಾರ ಪದ್ಧತಿ ಹಾಗೂ ಉತ್ತಮ ಜೀವನ ಕ್ರಮ ಪ್ರಾರಂಭಿಸಿ ಇನ್ನು ಅನಾರೋಗ್ಯಕ್ಕೆ ಆಯುರ್ವೇದ ಪದ್ಧತಿಯ ಔಷಧಿ ಹೆಚ್ಚು ಬಳಸಿ

  ಸ್ತ್ರೀಯರು:-ಮೋಹಕ್ಕೆ ಆಕರ್ಷಣೆಗೆ ಒಳಗಾಗಿ ನಿಮ್ಮನ್ನು ನಿಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದೇ ಪರಿತಪಿಸುತ್ತೀರಿ. ಕೆಲ ವಿಚಾರಗಳಲ್ಲಿ ನಿಮಗೆ ಆಯಿಕೆ ಮಾಡಿಕೊಳ್ಳುವ ಅವಕಾಶ ಸಹ ಲಭಿಸಿ ಇನ್ನೂ ಹೆಚ್ಚು ಚಿಂತಿಸಿ ತೀರ್ಮಾನ ಮಾಡುತ್ತೀರಿ. ನಿಮ್ಮ ಹಳೇಯ ಸ್ನೇಹಿತರು ನಿಮ್ಮ ಮೇಲೆ ಕೋಪ ಬೇಸರ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು ಇದೆ ಅದರೆ ಅವರನ್ನು ಓಲೈಸುವ ಅವಕಾಶ ಸಹ ನಿಮಗೆ ಹೇರಳವಾಗಿದೆ. ಈ ಮೊದಲಿನಂತಲ್ಲದೇ ಈಗ ನಿಮಗೆ ಹೆಚ್ಚು ಸಮಯ ಸಿಗುತ್ತದೆ ಆದುದರಿಂದ ಅದನ್ನು ನೀವು ಸದುಪಯೋಗ ಮಾಡಿಕೊಳ್ಳುವ ಅವಕಾಶ ಇದೆ. ಹಣ ಕಾಸಿನ ವಿಚಾರದಲ್ಲಿ ಎಡಾವಟ್ಟು ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು ಇದೆ ಅದರಿಂದಾಗಿ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತದೆ. ಪ್ರಯಾಣಗಳು ನಿಮಗೆ ತುಸು ನೆಮ್ಮದಿ ಹಾಗೂ ಮನಶ್ಶಾಂತಿ ನೀಡುತ್ತದೆ. ಆಹಾರ ಸೇವನೆ ವ್ಯತ್ಯಾಸದಿಂದಾಗಿ ಆರೋಗ್ಯ ಹಾನಿ ಇದೆ ಅದರಲ್ಲಿಯೂ ಅಶಕ್ತತೆ ಹೆಚ್ಚು ಆಗುತ್ತದೆ ಶರೀರದಲ್ಲಿ ರಕ್ತ ಕೊರತೆ ಹೆಚ್ಚುತ್ತದೆ. ಮುಟ್ಟಿನ ಸಮಸ್ಯೆ ಹೆಚ್ಚಾಗಬಹುದು

  ವಿದ್ಯಾರ್ಥಿಗಳು:-ನೀವು ಓದುತ್ತಿರುವ ಸ್ಥಳದ ಮೇಲೆ ನಿಮ್ಮ ಈ ತಿಂಗಳ ಫಲ ಇದೆ ಅಂದರೆ ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಫಲ ಇದ್ದರೆ ಸ್ವದೇಶದಲ್ಲಿ ಓದುತ್ತಾ ಇರುವ ವಿದ್ಯಾರ್ಥಿಗಳಿಗೆ ಅಷ್ಟು ಉತ್ತಮವಾಗಿ ಕಂಡು ಬರುತ್ತಾ ಇಲ್ಲ. ಭಾವನಾತ್ಮಕ ವಿಚಾರಗಳಿಗೆ ಬೇಗ ಸ್ಪಂದಿಸುತ್ತೀರಿ ಸೂಕ್ಷ್ಮ ಬುದ್ದಿ ಅತೀ ಸೂಕ್ಷ್ಮ ಆಗುವ ಲಕ್ಷಣಗಳು ಕಾಣುತ್ತಿವೆ. ಶಾರೀರಿಕವಾಗಿ ದಪ್ಪ ಆಗುವುದಿಲ್ಲ ಆದುದರಿಂದ ಆಲಸ್ಯ ಬಿಟ್ಟು ಬಂದಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳಬಹುದು ಅಥವಾ ನೃತ್ಯ ಕಲಿಯಬಹುದು ಈ ಎರಡೂ ನಿಮಗೆ ಕೂಡಿ ಬರುತ್ತದೆ ಅದರೆ ಹಾಡು ಹಾಡುವ ಅಂದರೆ ಗಾಯನ ಬೇಡ ಅದು ನಿಮ್ಮ ಪಾಲಿನ ವಿಚಾರ ಅಲ್ಲ ಅನಿಸುತ್ತಿದೆ. ಹೇಗಿದ್ದರೂ ನಂತರ ಮಾಡಿ ಮುಗಿಸಬಹುದು ಎಂದು ಆಲೋಚಿಸಿ ಇನ್ನೂ ಮಾಡದ ಕೆಲಸಗಳನ್ನು ಮಾಡಿ ಮುಗಿಸಿದ್ದೇನೆ ಎಂದು ಹೇಳಿಕೊಂಡಲಿ ನಂತರ ಆ ಕೆಲಸಗಳನ್ನು ಮಾಡಿ ಮುಗಿಸಲಾಗದೇ ಸಿಕ್ಕಿ ಹಾಕಿಕೊಳ್ಳುತ್ತೀರಿ ನೀವು ಸುಳ್ಳು ಹೇಳುವವರು ಎಂಬ ಮುದ್ರೆ ನಿಮ್ಮ ಮೇಲೆ ಬೀಳುತ್ತದೆ.

  ಪರಿಹಾರ:- ಹೆಸರು ಕಾಳಿನ ಉಸುಳಿ ತಯಾರಿಸಿ ಈ ತಿಂಗಳಿನಲ್ಲಿ ಬರುವ ಎಲ್ಲಾ ಬುಧವಾರಗಳಂದು ಮಹಾ ವಿಷ್ಣು ದೇಗುಲದಲ್ಲಿ ಅದನ್ನು ನೈವೇದ್ಯ ಮಾಡಿಸಿ ಹಂಚಿದರೆ ಶುಭ ಆಗುತ್ತದೆ

  ಮೀನ: ತಿಂಗಳಿನ ಮೊದಲೆರಡು ವಾರ ಮಾನಸಿಕವಾಗಿ ಅತ್ಯುತ್ತಮವಾಗಿದೆ

  ಮೀನ: ತಿಂಗಳಿನ ಮೊದಲೆರಡು ವಾರ ಮಾನಸಿಕವಾಗಿ ಅತ್ಯುತ್ತಮವಾಗಿದೆ

  ಪುರುಷರು: ತಿಂಗಳ ಮೊದಲಾರ್ಧ ಅಷ್ಟು ಚನ್ನಾಗಿ ಕಾಣುತ್ತಾ ಇಲ್ಲ ಕಾರಣ ನಿಮಗಿಂತ ನಿಮ್ಮ ಶತ್ರುವಿನ ಬಲವೇ ಅಧಿಕ ಎಂಬಂತೆ ಕಾಣುತ್ತಿದೆ ಅದು ಕಡಿಮೆ ಆಗ ಬೇಕು ಎಂದಾದಲ್ಲಿ ಮಾಸದ ಮಧ್ಯ ಭಾಗ ಕಳೆಯ ಬೇಕು. ನಿಮ್ಮ ಸ್ನೇಹಿತರೊಡನೆ ನಿಮಗೆ ಭಿನ್ನಾಭಿಪ್ರಾಯ ಬರುತ್ತದೆ. ನಿಮ್ಮ ಧರ್ಮ ಪತ್ನಿಯ ಆರೋಗ್ಯ ವಿಚಾರದಲ್ಲಿ ಸಹ ತುಸು ಜಾಗ್ರತೆ ಅವಶ್ಯ ಇದೆ. ಅವಿವಾಹಿತರಿಗೆ ಕೂಡಿ ಬಂದಿರುವ ಕಂಕಣ ಬಲ ಸಹ ಶತ್ರುಗಳ ಕೈವಾಡದಿಂದಾಗಿ ಮದುವೆ ಮಾತುಕತೆ ಮುರಿದು ಬೀಳುವ ಸಾಧ್ಯತೆಗಳು ಹೆಚ್ಚು ಕಾಣುತ್ತಿದೆ. ವಿದೇಶ ಪ್ರಯಾಣ ಮಾಡಲು ಸುತಾರಾಂ ಒಳ್ಳೆಯ ಸಮಯ ಅಲ್ಲ ಅನಿವಾರ್ಯವಾದರೆ ಅದಕ್ಕೆ ಉತ್ತರ ಇಲ್ಲ. ದೈವಾನುಗ್ರಹ ಇದೆ ಆದರೆ ಸಾಲದು ಇನ್ನೂ ಹೆಚ್ಚು ಬೇಕಾಗಿದೆ ಆದುದರಿಂದ ಇನ್ನೂ ಹೆಚ್ಚು ದೇವತಾ ಕಾರ್ಯಗಳನ್ನು ಮಾಡಿ. ಸೂಜಿಯಲ್ಲಿ ಮುಗಿಯುವ ಕೆಲಸಕ್ಕೆ ಕೊಡಲಿ ಪ್ರಯೋಗ ಮೂರ್ಖತನ ಆಗುತ್ತದೆ. ಸಶಕ್ತರಿಗೆ ಸರಿಯಾದ ಬುದ್ದಿವಂತ ಮಂತ್ರಿಯ ಅವಶ್ಯಕತೆ ಇದೆ ಮಾರ್ಗದರ್ಶಕರ ಅವಶ್ಯಕತೆ ಇದೆ. ಸಹೋದರರ ಸಹಾಯದಿಂದಾಗಿ ವ್ಯಾಪಾರದಲ್ಲಿ ನಷ್ಟ ತಪ್ಪಿಸಿಕೊಳ್ಳಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಪರವಾಗಿಲ್ಲ ಇನ್ನು ಭೂಮಿಯ ವ್ಯಾಪಾರಿಗಳು ಮಾತ್ರ ಯಶಸ್ಸು ಲಾಭ ಕಾಣುತ್ತಾರೆ. ಹೋಟೆಲ್ ಉದ್ಯಮ ಸಹ ಉತ್ತಮ ಲಾಭ ತೋರಿಸುತ್ತಾ ಇದೆ. ಕಲಿಯುವ ಮನಸ್ಸು ಇದ್ದಲ್ಲಿ ಕಲಿಯುವುದು ಸಮುದ್ರದಷ್ಟು ಇದೆ. ಈಜ ಬೇಕು ಇದ್ದು ಜಯಿಸ ಬೇಕು ಅಷ್ಟೆ.

  ಸ್ತ್ರೀಯರು:-ಸಂಯಮ ಬಹಳ ಬೇಕು. ನಿಮಗೆ ಇಷ್ಟ ಇಲ್ಲದಿದ್ದರೂ ಸಹ ಅನಿವಾರ್ಯವಾಗಿ ಸಾಲಗಳನ್ನು ಕೊಡಬೇಕಾದೀತು. ಹಾಸ್ಯಾಸ್ಪದ ಎಂದರೆ ನಿಮಗೆ ಸಂಬಂಧ ಇಲ್ಲದವರ ದುಃಖ್ಖಕ್ಕೆ ನೀವು ಚಿಂತೆ ಮಾಡುತ್ತ ಇರುತ್ತೀರಿ. ಇನ್ನು ವಿದೇಶ ಪ್ರಯಾಣದಲ್ಲಿ ಆಸಕ್ತರಿಗೆ ಕಿರಿ ಕಿರಿ ತುಂಬ ಜಾಸ್ತಿ. ವಿವಾಹಿತೆ ಆಗಿದ್ದಲ್ಲಿ ಪತಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಪ್ರಯತ್ನಿಸಿ. ಹಣದ ವ್ಯವಹಾರದಲ್ಲಿ ಸಿಲುಕಿದ್ದಲ್ಲಿ ಸ್ನೇಹಿತರೂ ಸಹ ಸಹಾಯಕ್ಕೆ ಬರುವುದಿಲ್ಲ, ಮಾಸಾಂತ್ಯಕ್ಕೆ ಹೋದಂತೆಲ್ಲಾ ಸ್ವಲ್ಪ ಒಂಟಿತನ ಹಾಗು ಮಾನಸಿಕ ಒತ್ತಡ ಹೆಚ್ಚು ಕಾಡಲಿದೆ ಆದುದರಿಂದ ಗೆಳೆಯ ಬೇಕು ಅನಿಸುತ್ತದೆ ಪರಿಣಾಮ ನೀವು ಮರೆತಿದ್ದ ಹಳೆಯ ಗೆಳೆತನ ಹಾಗು ಸಂಬಂಧಗಳು ಚಿಗುರು ಒಡೆಯುತ್ತವೆ ಅದರ ಪರಿಣಾಮಗಳತ್ತ ಸಹ ಗಮನವಿರಲಿ. ಸತ್ಯ ಮಾರ್ಗದಲ್ಲಿ ನೀವು ಅಂದುಕೊಂಡರೂ ನೆಡೆಯುವುದು ಕಷ್ಟ ಆದರೆ ಪ್ರಯತ್ನ ಬಿಟ್ಟರೆ ಅಶುಭವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಒತ್ತಡ ಹೆಚ್ಚುತ್ತದೆ. ಅತೀ ಪ್ರಮುಖವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗದಿರಿ ಮುಂದೂಡಿ ಉತ್ತಮ.ಆರೋಗ್ಯದ ವಿಷಯದಲ್ಲಿ ನೀವು ಗಮನ ಕೊಡದಿದ್ದರೂ ಸಹ ಉತ್ತಮ ಆರೋಗ್ಯ ಲಭ್ಯವಿದೆ.

  ವಿದ್ಯಾರ್ಥಿಗಳು:-ನಿಮ್ಮ ಜೊತೆಗೆ ಕೂತು ಓದುತ್ತಿದ್ದ ಸ್ನೇಹಿತರು ಕಾರಣಾಂತರಗಳಿಂದ ದೂರಾಗಿದ್ದಲ್ಲಿ ಈಗ ಹಳೆಯ ಮನಸ್ತಾಪ ಅಭಿಪ್ರಾಯ ಭೇಧಗಳನ್ನು ಮರೆತು ಮರೆತು ಮತ್ತೆ ಒಟ್ಟಿಗೆ ಸೇರಿ ನಿಮ್ಮ ವಿದ್ಯೆಯನ್ನು ಮುಂದುವರಿಸುವ ಸಮಯ ನಿಮ್ಮ ಪ್ರಯತ್ನ ಆ ದಿಕ್ಕಿನಲ್ಲಿ ಇರಲಿ. ವಿದೇಶಕ್ಕೆ ಹೋಗಿ ಅಲ್ಲಿಯ ಶಾಲಾ ಕಾಲೇಜುಗಳಲ್ಲಿ ಸ್ಥಾನ ಪಡೆದು ಓದುವ ಕನಸು ಇಟ್ಟು ಪ್ರಯತ್ನ ಪಡುತ್ತಿರುವವರಿಗೆ ಮರ್ಗ ಕಷ್ಟ ಇಇನೂ ಸ್ವಲ್ಪ ದಿನಗಳು ಕಾಯ ಬೇಕು. ಸ್ವದೇಶದಲ್ಲಿಯೇ ನಿಮ್ಮ ಇಷ್ಟದ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಹಿರಿಯರ ಹಾಗೂ ರಾಜಕೀಯ ಧುರೀಣರ ಸಹಾಯ ಅನಿವಾರ್ಯ ಆಗಬಹುದು. ಮಾಸಾಂತ್ಯಕ್ಕೆ ಸರಿದಂತೆ ನಿಮ್ಮ ತಂದೆಯ ಮೇಲೆ ನಿಮಗೆ ಗೌರವ ಕಡಿಮೆ ಆಗುತ್ತದೆ ಅವರ ಹಿತ ನುಡಿ ಮಾರ್ಗದರ್ಶನದ ಬೆಲೆ ಅರಿಯದೆ ಅವರ ಮೇಲೆ ಕೂಗಾಡುತ್ತೀರಿ ಹಾಗಾಗದಂತೆ ಎಚ್ಚರವಹಿಸಿ.

  ಪರಿಹಾರ:- ಪ್ರತೀ ದಿನ ಬೆಳಗ್ಗೆ ತಪ್ಪದೇ ವಿಷ್ಣು ಸಹಸ್ರ ನಾಮ ಪಠಿಸಿ ಅಥವಾ ಶ್ರವಣ ಮಾಡಿ. ಸಶಕ್ತರು ಪುರುಶಸೂಕ್ತ ಹವನ ಮಾಡಿಸಿ.

  ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

  English summary
  Get the complete month prediction for the month of March 2018. Read monthly horoscope of 12 zodiac signs in Kannada. Get free monthly horoscope, astrology and monthly predictions in Kannada.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more