ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021 Money, Finance Horoscope: ಮೇಷದಿಂದ ಕನ್ಯಾ ಹಣಕಾಸು ಭವಿಷ್ಯ

By ಶ್ರೀ ಶ್ರೀನಿವಾಸ್ ಗುರೂಜಿ
|
Google Oneindia Kannada News

ಬದುಕನ್ನು ಬಂಡಿ ಅಂತ ಕರೆಯುವುದಾದರೆ, ಅದನ್ನು ನಡೆಸುವ ಇಂಧನ ಹಣ. ಆದ್ದರಿಂದ ಹಣದ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರ ನಮ್ಮೆಲ್ಲರ ನೆಮ್ಮದಿಯನ್ನು ಹಾಗೂ ಸಂತೋಷವನ್ನು ಕಾಪಾಡುತ್ತದೆ. ಇನ್ನೂ ಕೆಲವು ಸಲ ಹಾಳಾಗದಂತೆ ರಕ್ಷಿಸುತ್ತದೆ, ಹೆಚ್ಚಿಸುತ್ತದೆ. ಆದ್ದರಿಂದ 2021ನೇ ಇಸವಿಯಲ್ಲಿ ಯಾವ ರಾಶಿಯವರ ಹಣಕಾಸು ಭವಿಷ್ಯ ಹೇಗಿರುತ್ತದೆ ಎಂದು ತಿಳಿಸುವುದಕ್ಕೆ ಈ ಲೇಖನ ನೀಡಲಾಗುತ್ತಿದೆ.

ಆದರೂ ಪ್ರಮುಖವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ, ನಿರ್ಧಾರ ತೆಗೆದುಕೊಳ್ಳುವಾಗ ಹಾಗೂ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡುವಾಗ ಕಡ್ಡಾಯವಾಗಿ ವೈಯಕ್ತಿಕ ಜಾತಕವನ್ನು ಪರಿಶೀಲನೆ ಮಾಡಿಸಿ. ಆ ನಂತರ ಮುಂದಕ್ಕೆ ಹೆಜ್ಜೆಗಳನ್ನು ಇಡಿ. ನಾನು ಇಲ್ಲಿ ನಿಮಗೆ ತಿಳಿಸುತ್ತಿರುವುದು ಗೋಚಾರದ ಫಲ ಮಾತ್ರ. ನಿಮ್ಮ ದಶಾ- ಭುಕ್ತಿ, ಜನ್ಮ ಜಾತಕ ಯೋಗಾಯೋಗಗಳು ಸಹ ಮುಖ್ಯವಾಗುತ್ತವೆ.

2021 Career, Job Horoscope: ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ2021 Career, Job Horoscope: ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ

ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ

ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ- ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಬಾಧೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ.

ಜೀವನದಲ್ಲಿ ಜುಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ 5 ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ಮನೆ ವಿಳಾಸ- #37/17 27ನೇ ಅಡ್ಡರಸ್ತೆ, 12ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ, ಬೆಂಗಳೂರು. ಮೊ. 99866 23344.

ಮೇಷ

ಮೇಷ

ನಿಮ್ಮ ಶ್ರಮಕ್ಕೆ ತಕ್ಕಂತೆ ಹಣ ಬರುವುದಕ್ಕೆ ಕಾಯಬೇಕಾಗುತ್ತದೆ. ನಿಮ್ಮ ಕೆಲಸದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ಆಸಕ್ತಿ ಕಳೆದುಕೊಳ್ಳಬೇಡಿ. ಇನ್ನು ಹಣದ ಹರಿವು ಶುರುವಾಗುತ್ತಿದ್ದಂತೆ ಅತಿಯಾದ ಆತ್ಮವಿಶ್ವಾಸವಂತೂ ಬೇಡವೇ ಬೇಡ. ಕರ್ಮಕ್ಕೆ ತಕ್ಕ ಫಲವನ್ನು ಕಾಣುತ್ತೀರಿ ಎಂಬ ಮಾತು ಈ ಸಲ ಅನ್ವಯ ಆಗುವುದು ಕಷ್ಟ. ನಾನು ಎಲ್ಲ ಸರಿ ಮಾಡಿದ್ದೆ. ಆದರೂ ನನಗೆ ಬರಬೇಕಾದ ಹಣದಲ್ಲಿ ಹಿಡಿದುಕೊಂಡು ಕೊಟ್ಟರೂ ಅಂದುಕೊಂಡು, ಯಾರ ಜತೆಗೂ ಜಗಳ ಆಡಬೇಡಿ. ಏಕೆಂದರೆ, ಅವರಿಂದಲೇ ಮುಂದೆ ಲಾಭ ಕಾಣಲಿದ್ದೀರಿ. ಅಥವಾ ನಿಮ್ಮ ಸಮಾಧಾನದ ಸ್ವಭಾವವೇ ಹೊಸ ಕೆಲಸ ತಂದುಕೊಡುತ್ತದೆ. ಭೂಮಿ ಮೇಲೆ ಹೂಡಿಕೆ ಮಾಡುವಾಗ ಕಾಗದ- ಪತ್ರಗಳನ್ನು ಒಂದಕ್ಕೆರಡು ಬಾರಿ ಪರಿಶೀಲಿಸಿಕೊಳ್ಳಿ. ಈ ಬಾರಿ ನಿಮಗೆ ಭೂಮಿ ವ್ಯಾಪಾರದಿಂದ ದೊಡ್ಡ ಮಟ್ಟದ ಹಣ ಬರಲಿದೆ. ಇನ್ನು ಸೂಕ್ತ ಸಮಯಕ್ಕೆ ಸರಿಯಾದ ಮಾರ್ಗದರ್ಶನ ಸಿಗದೆ ಸ್ವಲ್ಪ ಮಟ್ಟಿಗೆ ಲಾಭದ ಪ್ರಮಾಣ ಕಡಿಮೆ ಆಗಬಹುದು ಅಷ್ಟೇ. ಕೋರ್ಟ್ ಗಳಲ್ಲಿ ಬಗೆಹರಿಯಬೇಕಾದ ಹಣಕಾಸು ವ್ಯಾಜ್ಯಗಳಿದ್ದಲ್ಲಿ ಅದು ನಿಮ್ಮ ಕಡೆ ಆಗುವ ಅವಕಾಶ ಇದೆ. ಇನ್ನು ಪಿತ್ರಾರ್ಜಿತವಾಗಿಯೂ ಹಣ ಬರಲಿದೆ. ಆದರೆ ನೀವು ಮಾಡಬೇಕಾದ್ದೆಲ್ಲ ಸತ್ಕರ್ಮವೊಂದೇ.

ವೃಷಭ

ವೃಷಭ

ಯಾರೋ ಹೇಳಿದರು ಅಂತಲೋ ಅಥವಾ ಅಚಾನಕ್ ಆಗಿ ಭೂಮಿ, ಷೇರು, ಸಟ್ಟಾ ವ್ಯವಹಾರದಲ್ಲಿನ ಹೂಡಿಕೆ ಹಣ ಜಾಸ್ತಿ ಆಯಿತು ಅಂದುಕೊಂಡು, ಸಾಲ ಮಾಡಿ ದೊಡ್ಡ ಮಟ್ಟದ ಹೂಡಿಕೆ ಮಾಡದಿರಿ. ಸುಲಭಕ್ಕೆ ಹಣ ಮಾಡುವ ದಾರಿ ತೋರಿಸಿದ ದೋಸ್ತ್ ಸಿಕ್ಕನೆಂದು ಆತನೊಂದಿಗೆ ಮುಂದುವರಿದಲ್ಲಿ ಕಾನೂನು ವ್ಯಾಜ್ಯಗಳನ್ನು ಎದುರಿಸಬೇಕಾಗುತ್ತದೆ. ನೆನಪಿನಲ್ಲಿಡಿ, ಈ ವರ್ಷ ಕೆಲವು ಅನಿರೀಕ್ಷಿತವಾದ ಧನಾಗಮ ಆಗಲಿದೆ. ಅಪಾತ್ರರ ಮಾತುಗಳು ಸಹ ನಿಜವಾಗಲು ಆರಂಭವಾಗುತ್ತದೆ. ಆದರೆ ವಾಸ್ತವದಲ್ಲಿ ಅದು ನಿಮ್ಮ ಪಾಲಿನ ಅದೃಷ್ಟವಾಗಿರುತ್ತದೆ. ಆದ್ದರಿಂದ ಮನಸ್ಸಿನ ಮೇಲೆ ಹಿಡಿತ ಸಾಧಿಸಿ. ಸ್ವಲ್ಪ ಪ್ರಮಾಣದ ಲಾಭ ಬಂದರೂ ಪರವಾಗಿಲ್ಲ, ಇರುವ ಎಲ್ಲ ಹಣವನ್ನೂ ಹೂಡಿಕೆ ಮಾಡದೆ ಬುದ್ಧಿವಂತರಂತೆ ನಡೆದುಕೊಳ್ಳಿ. ವ್ಯಾಪಾರ- ವ್ಯವಹಾರದಲ್ಲಿ ಭಾವನಾತ್ಮಕವಾಗಿ ಆಲೋಚನೆ ಮಾಡಿಕೊಂಡು, ಬಂದುಗಳನ್ನು ಜತೆಗಿಟ್ಟುಕೊಳ್ಳುವುದು ಸರಿಯಲ್ಲ. ಅದರಲ್ಲೂ ಸಂಗಾತಿಯ ಕಡೆ ಸಂಬಂಧಿಕರೆಂದು ಜತೆಗೆ ಇರಿಸಿಕೊಂಡರೆ ನಷ್ಟದ ಪಾಲಾಗುತ್ತೀರಿ. ನೀವು ಕೆಲಸ ಮಾಡಿದ ಅಥವಾ ಕೆಲಸ ಮಾಡುತ್ತಿರುವ ಸಂಸ್ಥೆಗಳಿಂದ ನಿಮಗೆ ಬರಬೇಕಾದ ಬಾಕಿ ಹಣ ಇದ್ದಲ್ಲಿ ಬರಲಿದೆ.

2021 Career, Job Horoscope: ತುಲಾದಿಂದ ಮೀನದ ತನಕ ರಾಶಿ ಭವಿಷ್ಯ2021 Career, Job Horoscope: ತುಲಾದಿಂದ ಮೀನದ ತನಕ ರಾಶಿ ಭವಿಷ್ಯ

ಮಿಥುನ

ಮಿಥುನ

ಕೋತಿ ಹುಣ್ಣು ಬ್ರಹ್ಮ ರಾಕ್ಷಸ ಎಂಬ ಮಾತಿನಂತೆ ನೀವಾಗಿಯೇ ಮಾಡಿಕೊಂಡ ಯಡವಟ್ಟಿನಿಂದ ದೊಡ್ಡ ನಷ್ಟ ಎದುರಿಸಬೇಕಾಗುತ್ತದೆ. ದಶಾ- ಭುಕ್ತಿ ಕೂಡ ಕ್ರೂರವಾಗಿದ್ದಲ್ಲಿ ಸೂಕ್ತ ಶಾಂತಿ- ಹೋಮಗಳನ್ನು ಮಾಡಿಕೊಳ್ಳಿ. ಟ್ರಾನ್ಸ್ ಪೋರ್ಟೇಷನ್ ವ್ಯವಹಾರದಲ್ಲಿ ಇರುವವರಿದ್ದರೆ ವಾಹನ ಮಾರಾಟ ಮಾಡಿದ ನಂತರ ಕೂಡಲೇ ಎಲ್ಲ ದಾಖಲಾತಿಗಳನ್ನು ಸಂಬಂಧಪಟ್ಟ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಿ. ಬರಬೇಕಾದ ಹಣವನ್ನು ಯಾವ ಮುಲಾಜು ಸಹ ನೋಡದೆ ಪಡೆದುಕೊಳ್ಳಿ. ಅಯ್ಯೋ, ಪಾಪ ಎಂದು ನೀವು ಈಗಾಗಲೇ ಯಾರಿಗಾದರೂ ಜಾಮೀನಾಗಿ ನಿಂತಿದ್ದಲ್ಲಿ ಆ ಹಣ ಕಟ್ಟಿಕೊಡಬೇಕಾದ ಸ್ಥಿತಿ ಬಂದೀತು. ಅಥವಾ ಈ ವರ್ಷ ನೀವಾಗಿಯೇ ಜಾಮೀನು ನಿಂತು, ಕಟ್ಟಿಕೊಡುವಂತಾಗುತ್ತದೆ. ನೀವು ಏನನ್ನೂ ದೊಡ್ಡದಾಗಿ ಸಂಪಾದಿಸಲು ಸಾಧ್ಯವಿಲ್ಲದಿದ್ದರೂ ಚಿಂತೆಯಿಲ್ಲ, ಹಣವನ್ನು ಜಾಸ್ತಿ ಮಾಡುತ್ತೇನೆ ಎಂದು ವ್ಯಾಪಾರ- ವ್ಯವಹಾರ ಎಂದು ಮುನ್ನುಗ್ಗಬೇಡಿ. ನಿಮಗೇನಿದ್ದರೂ ಎಚ್ಚರಿಕೆ ಮಾತು ಹೇಳಬಹುದು: ದೊಡ್ಡ ಮಟ್ಟದ ಹೂಡಿಕೆ ಬೇಡ, ಸಾಲ ಬೇಡ, ಬೇರೆಯವರಿಗೆ ಜಾಮೀನು ಬೇಡ. ಇನ್ನು ಪಿತ್ರಾರ್ಜಿತವಾದ ಆಸ್ತಿ ಏನಾದರೂ ಬಂದಲ್ಲಿ ಅಥವಾ ನಿಮ್ಮ ಪಿಎಫ್, ಗ್ರಾಚ್ಯುಟಿ ಅಥವಾ ಇನ್ಯಾವುದೇ ಉಳಿತಾಯದ ಹಣ ಬಂದಲ್ಲಿ ಹೆಚ್ಚಿನ ಬಡ್ಡಿ ಆಸೆಗೆ ಬೀಳದೆ, ಸುರಕ್ಷಿತವಾದ ಬ್ಯಾಂಕ್ ನಲ್ಲಿ ಇಟ್ಟು, ಅದರ ಬಡ್ಡಿಯನ್ನು ಪಡೆದುಕೊಂಡು ನೆಮ್ಮದಿಯಾಗಿರಿ.

ಕರ್ಕಾಟಕ

ಕರ್ಕಾಟಕ

ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರಿಗೆ ಸಣ್ಣ ಗುಮಾನಿ ಶುರು ಆಗುತ್ತದೆ. ಲಾಭ ಏನೋ ಬರುತ್ತಿದೆ, ಆದರೆ ನಂಬಿ ಮುಂದುವರಿಯಬಹುದಾ ಅಥವಾ ಈಗಾಗಲೇ ಬೇರೆ ಆಗುವುದು ಉತ್ತಮವಾ? ಎಂಬ ಅನುಮಾನ ಅದು. ನೆನಪಿನಲ್ಲಿ ಇಡಿ, ಇಡೀ ವರ್ಷ ನಿಮ್ಮ ಕೈಲಿ ಹಣ ಓಡಾಡುತ್ತಲೇ ಇರುತ್ತದೆ. ಅದು ನಿಮ್ಮದು ಅಂತ ಆಗಿರಬೇಕು ಎಂದೇನಿಲ್ಲ. ಯಾರದೋ ಹಣವಾದರೂ ಅದರಲ್ಲಿ ನಿಮ್ಮ ಕೈ ಬೆರಳ ಗುರುತು ಬೀಳುತ್ತದೆ. ಅತಿಯಾದ ಬುದ್ಧಿವಂತಿಕೆ ಮಾತ್ರ ಮಾಡುವುದಕ್ಕೆ ಹೋಗದಿರಿ. ನಿಮ್ಮಿಂದ ಈ ಹಿಂದೆ ಸಹಾಯ ಪಡೆದವರು ಸಹ ನೆರವಿಗೆ ಬರುತ್ತಾರೆ. ಮಕ್ಕಳಿಂದ ಹಣಕಾಸಿನ ಅನುಕೂಲ ಆಗುತ್ತದೆ. ವಿದೇಶ ವ್ಯವಹಾರದಲ್ಲಿ ಲಾಭ ಇದೆ. ಆದರೆ ಈ ಎಲ್ಲವೂ ನಿಮ್ಮ ಬುದ್ಧಿ ಹಾಗೂ ಮಾನಸಿಕ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಅನುಮಾನದ ಸ್ವಭಾವದಿಂದ ಕೆಲವನ್ನು ಕಳೆದುಕೊಳ್ಳುವಂತಾಗುತ್ತದೆ. ಈ ಹಿಂದಿನ ನಿಮ್ಮ ಕೆಟ್ಟ ಅನುಭವಗಳು ಹಿಂದಕ್ಕೆ ಜಗ್ಗುತ್ತವೆ. ವರ್ಷದ ಕೊನೆಗೆ ನಿಮ್ಮ ಸ್ಥಿತಿ ಹೇಗಿರುತ್ತದೆ ಅಂದರೆ, ಇಷ್ಟೆಲ್ಲ ಹಣ ಓಡಾಡಿತು, ನನ್ನ ಪಾಲಿಗೆ ಉಳಿದಿದ್ದು ಏನು ಅಂತ ನೀವು ನೋಡಿಕೊಂಡರೆ ಏನೂ ಇರುವುದಿಲ್ಲ. ಆದರೆ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ.

ಸಿಂಹ

ಸಿಂಹ

ನಿಮ್ಮ ಈ ಹಿಂದಿನ ಕೆಲವು ತಪ್ಪುಗಳಿಂದ ಬರಬೇಕಾದ ಹಣಕ್ಕೆ ತಡೆಗಳು ಎದುರಾಗುತ್ತವೆ. ಕಣ್ಣೆದುರೇ ಕಾಣುತ್ತಿರುವ ಲಾಭ ನಿಮ್ಮ ಕೈ ಸೇರುವುದಕ್ಕೆ ಸಿಕ್ಕಾಪಟ್ಟೆ ಸಮಯ ತೆಗೆದುಕೊಳ್ಳುತ್ತದೆ. ಏನು ಮಾಡುತ್ತೀರಿ, ಅದೃಷ್ಟ್ ಕೈ ಕೊಡುತ್ತದೆ. ನಿಮಗಾಗದವರ ಪಿತೂರಿಯಿಂದ ಕೆಲವು ಕಾಂಟ್ರ್ಯಾಕ್ಟ್ ಗಳು, ಕೆಲಸಗಳು ಕೈ ತಪ್ಪಿ ಹೋಗಿ ಆದಾಯದಲ್ಲಿ ಕಡಿಮೆ ಆಗಬಹುದು. ಆದರೆ ಅದನ್ನು ಬಹಳ ಬೇಗ ಗುರುತಿಸಿ, ಸರಿ ಮಾಡಿಕೊಳ್ಳುತ್ತೀರಿ. ವಿದೇಶದಲ್ಲಿ ವ್ಯವಹಾರ ಮಾಡುತ್ತಿರುವವರು, ಇಂಪೋರ್ಟ್- ಎಕ್ಸ್ ಪೋರ್ಟ್ ವ್ಯವಹಾರ ಮಾಡುತ್ತಿರುವವರಿಗೆ ಅನಿರೀಕ್ಷಿತವಾಗಿ ದೊಡ್ಡ ಮಟ್ಟದ ಲಾಭ ಬಂದುಬಿಡುತ್ತದೆ. ನೀವು ಅದೆಷ್ಟು ಬಿಜಿ ಆಗಿಬಿಡುತ್ತೀರಿ ಅಂದರೆ, ಬಂದ ಹಣವನ್ನು ಎಲ್ಲಿ ಹೂಡಿಕೆ ಮಾಡುವುದು ಎಂಬ ಬಗ್ಗೆ ಕೂಡ ಯೋಜನೆ ರೂಪಿಸುವುದಕ್ಕೆ ಸಾಧ್ಯವಾಗುವುದಿಲ್ಲ. ನಿಮ್ಮ ಹಿರಿಯರ ಆಶೀರ್ವಾದ ಈ ಅವಧಿಯಲ್ಲಿ ಬಹಳ ಮುಖ್ಯವಾಗಿರುತ್ತದೆ. ಕುಟುಂಬದ ವ್ಯವಹಾರ ಮಾಡುತ್ತಿರುವವರಿಗೆ ಅದು ಪಾಲಾಗುವ ಹಾಗೂ ಆ ಮೂಲಕ ವಿಸ್ತರಣೆಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇನ್ನೂ ಕೆಲವರಿಗೆ ಪೇಟೆಂಟ್, ಕಾಪಿರೈಟ್ ನಂಥದ್ದು ಮಾರಾಟ ಮಾಡಿ ದೊಡ್ದ ಮೊತ್ತ ದೊರೆಯಲಿದೆ. ಮೊದಲೇ ಲೆಕ್ಕಾಚಾರದ ವ್ಯಕ್ತಿಗಳಾದ ನೀವು, ಈ ವರ್ಷ ಎಷ್ಟು ಸಾಧ್ಯವೋ ಅಷ್ಟು ಉಳಿತಾಯ ಮಾಡಿಟ್ಟುಕೊಳ್ಳಲಿದ್ದೀರಿ.

ಕನ್ಯಾ

ಕನ್ಯಾ

ಎದ್ದು ಹೋಗುವ ಮಾತು ಬಿದ್ದು ಹೋಗಲಿ ಎಂಬ ಸ್ವಭಾವವನ್ನು ಬಿಡಲೇಬೇಕು. ಇಲ್ಲದಿದ್ದಲ್ಲಿ ಹತ್ತು ರುಪಾಯಿ ಬರುವ ಕಡೆಗೆ ಮೂರು ರುಪಾಯಿ ಹುಟ್ಟುವುದೂ ಕಷ್ಟವಾಗುತ್ತದೆ. ಸಾಮಾನ್ಯವಾಗಿ ಬುದ್ಧಿಯನ್ನು ಬಳಸಿ, ಹಣ ದುಡಿಯಬೇಕು ಎಂದು ಆಲೋಚಿಸುವ ನೀವು ಯಾರದೋ ಜಿದ್ದಿಗೆ ಬಿದ್ದು, ನಿಮ್ಮದಲ್ಲದ ಕೆಲಸಕ್ಕೆ ಕೈ ಹಾಕಿ ಹಣ ಕಳೆದುಕೊಳ್ಳುವ ಯೋಗ ಇದೆ. ವಿದ್ಯಾರ್ಥಿಗಳು ಮುಖ್ಯವಾಗಿ ನೆನಪಿಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ, ಹೊಸ ಕೋರ್ಸ್ ಸೇರುತ್ತಿದ್ದೀರಿ, ಅದಕ್ಕೆ ಲಕ್ಷಾಂತರ ರುಪಾಯಿ ಖರ್ಚಾಗುತ್ತದೆ ಎಂದಾದಲ್ಲಿ ನಿಮ್ಮ ಆಸಕ್ತಿ ಹಾಗೂ ಯೋಗ್ಯತೆ ಅದಕ್ಕೆ ಪೂರಕವಾಗಿ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ. ಇನ್ನು ಕನ್ಯಾ ರಾಶಿಯ ಪೋಷಕರು ಮಕ್ಕಳ ಸಲುವಾಗಿ ಎಜುಕೇಷನ್ ಲೋನ್, ಬಿಜಿನೆಸ್ ಲೋನ್ ಅಂತೆಲ್ಲ ತೆಗೆದುಕೊಡುವ ಮುನ್ನ ವಾಸ್ತವ ನೆಲೆಗಟ್ಟಿನಲ್ಲಿ ನಿಂತು ಆಲೋಚನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ. ಮಕ್ಕಳ ಸಲುವಾಗಿ ಆಸ್ತಿಯನ್ನು ಮಾರುವಂಥ ನಿರ್ಧಾರಕ್ಕೆ ಬಾರದಿರಿ. ಈ ಹಿಂದೆ ಯಾವಾಗಲೋ ಮಾಡಿದ್ದ ಸಣ್ಣ ಸಾಲಕ್ಕೂ ಈಗ ದೊಡ್ದ ಮೊತ್ತ ತೆರಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಬಾಕಿಯೋ ಮತ್ತೊಂದೋ ಯಾವುದನ್ನು ಬಾಕಿ ಉಳಿಸಿಕೊಂಡಿದ್ದೀರೋ ನೀವಾಗಿಯೇ ತೀರಿಸಿ. ಇನ್ನು ಇತರರ ವಾಹನವನ್ನು ಕಲಿಯುವ ಸಲುವಾಗಿಯೋ ಅಥವಾ ಪ್ರಯಾಣಕ್ಕಾಗಿಯೋ ಪಡೆದುಕೊಳ್ಳಬೇಡಿ. ಹಾಗೆ ಮಾಡಿದಲ್ಲಿ ದೊಡ್ಡ ಮೊತ್ತ ಕಳೆದುಕೊಳ್ಳುತ್ತೀರಿ.

(ಮುಂದಿನ ಭಾಗದಲ್ಲಿ ತುಲಾದಿಂದ ಮೀನ ರಾಶಿ ತನಕ)

English summary
2021 Money And Finance Yearly Horoscope in Kannada: Read your Varshika Bhavishya for all Mesha to Kanya rashi in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X