• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಲಾದಿಂದ ಮೀನದವರೆಗೆ ಮಕರ ರಾಶಿ ಕುಜ ಸಂಚಾರದ ಪ್ರಭಾವ

By ರಮಾಕಾಂತ್
|

ಮೇ ಎರಡನೇ ತಾರೀಕಿನಂದು ಕುಜ ಗ್ರಹವು ಮಕರ ರಾಶಿಯನ್ನು ಪ್ರವೇಶ ಮಾಡಿದೆ. ಈ ವರೆಗೆ ಧನುಸ್ಸು ರಾಶಿಯಲ್ಲಿ ಶನಿಯೊಂದಿಗೆ ಇದ್ದ ಕುಜ ಗ್ರಹವು ಮಂದ-ಮಂಗಳ ಯೋಗವನ್ನು ಸೃಷ್ಟಿಸಿ ಭಾರೀ ವ್ಯತ್ಯಾಸಗಳನ್ನು ಮಾಡಿರುವುದು ಹೌದು. ಅದರ ಪರಿಣಾಮಗಳ ಬಗ್ಗೆ ಈ ಹಿಂದೆ ಒನ್ಇಂಡಿಯಾ ಕನ್ನಡದಲ್ಲೇ ಲೇಖನ ಪ್ರಕಟಿಸಲಾಗಿತ್ತು.

ಇದೀಗ ತನ್ನ ಉಚ್ಚ ಕ್ಷೇತ್ರವಾದ ಮಕರ ರಾಶಿಯನ್ನು ಕುಜ ಗ್ರಹವು ಪ್ರವೇಶ ಮಾಡಿದೆ. ಅದು ಕೇತುನೊಟ್ಟಿಗೆ ಕೆಲ ಕಾಲ ಸ್ಥಿತವಾಗಿರುತ್ತದೆ. ಕೆಲ ಕಾಲ ಅಂದರೆ ಈ ವರ್ಷದ ನವೆಂಬರ್ ಆರನೇ ತಾರೀಕಿನವರೆಗೆ ಕುಜ ಗ್ರಹ ಮಕರ ರಾಶಿಯಲ್ಲಿ ಇರುತ್ತದೆ. ಈ ಮಧ್ಯೆ ಕೆಲ ಕಾಲ ವಕ್ರೀಯಾಗಿ ಕೂಡ ಸಂಚಾರ ಮಾಡುತ್ತದೆ.

ಕುಜ ಗ್ರಹ ಅಂದರೆ ಬೆಂಕಿ, ಆಕ್ರಮಣಕಾರಿ, ಯೋಧ, ಶಕ್ತಿಯಿಂದ ಕೂಡಿರುವಂಥ ಗ್ರಹ. ಇಂಥ ಸಾಮರ್ಥ್ಯದ ಗ್ರಹವು ಮಕರ ರಾಶಿಯಲ್ಲಿರುವಾಗ ಹನ್ನೆರಡು ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು ಎಂದು ತಿಳಿಸುವ ಲೇಖನವಿದು. ಈಗಾಗಲೇ ಮಕರ ರಾಶಿಗೆ ಕುಜ ಗ್ರಹದ ಪ್ರವೇಶ ಆಗಿದೆ. ಇನ್ನು ಐದು ತಿಂಗಳು ಈ ಫಲಗಳನ್ನು ಕಾಣಬೇಕಾಗುತ್ತದೆ. ಏನು ಫಲ ಎಂದು ತಿಳಿಯಲು ಮುಂದೆ ಓದಿ.

ತುಲಾ: ಆರ್ಥಿಕ ಸ್ಥಿತಿಯಲ್ಲಿ ಇಳಿಮುಖವಿದೆ

ತುಲಾ: ಆರ್ಥಿಕ ಸ್ಥಿತಿಯಲ್ಲಿ ಇಳಿಮುಖವಿದೆ

ತುಲಾ ರಾಶಿಯ ಜಾತಕರಿಗೆ ಎರಡು ಹಾಗೂ ಏಳನೇ ಮನೆಯ ಅಧಿಪತಿಯಾದ ಕುಜನು ನಾಲ್ಕನೇ ಸ್ಥಾನದಲ್ಲಿ ಸಂಚರಿಸುತ್ತದೆ. ಆದ್ದರಿಂದ ಆರ್ಥಿಕ ಸ್ಥಿತಿಯಲ್ಲಿ ಇಳಿಮುಖವಾಗುತ್ತದೆ. ಇನ್ನು ಮಾತನಾಡುವಾಗ ಪೆಡಸು ಅಥವಾ ಒರಟು ಮಾತನ್ನಾಡಬೇಡಿ. ಕುಟುಂಬ ಕಲಹ ಆಗದಂತೆ ಎಚ್ಚರವಹಿಸಿ. ಮಾನಸಿಕ ತುಮುಲ ಹೆಚ್ಚುತ್ತದೆ. ಕೌಟುಂಬಿಕ ಸಂಬಂಧಗಳಲ್ಲಿ ವಿರಸ ಕಾಣಿಸಿಕೊಳ್ಳುತ್ತದೆ. ಬಾಳಸಂಗಾತಿ ಜತೆಗಿನ ಬಿಕ್ಕಟ್ಟಿನಿಂದ ವರ್ಚಸ್ಸಿಗೆ ಹಾನಿಯಾಗುವ ಸಾಧ್ಯತೆಯಿದೆ. ಕೆಲಸದ ವಿಚಾರದಲ್ಲಿನ ನಿಮ್ಮ ಆಕ್ರಮಣಕಾರಿ ಧೋರಣೆ ಉಲ್ಟಾ ಹೊಡೆಯುತ್ತದೆ. ಬೇರೆಯವರಿಗೆ ತಿಳಿಸಬೇಕಾದ ಸಂಗತಿಯನ್ನು ಪರಿಣಾಮಕಾರಿಯಾಗಿ ತಿಳಿಸಬೇಕು. ಪಾಲುದಾರಿಕೆ ವ್ಯವಹಾರ ಮಾಡುತ್ತಿದ್ದರೆ ಅದು ಮುರಿದು ಬೀಳುವ ಅಥವಾ ದೊಡ್ಡ ಮಟ್ಟದಲ್ಲಿ ಸ್ನೇಹ ಹಾಳಾಗುವ ಸನ್ನಿವೇಶ ಸೃಷ್ಟಿಯಾಗುತ್ತದೆ.

ನಕಾರಾತ್ಮಕ ಆಲೋಚನೆಗಳಿಂದ ಗೊಂದಲ ಮತ್ತೂ ಹೆಚ್ಚಾಗುತ್ತದೆ. ನಿಮ್ಮ ಶತ್ರುಗಳ ಹಿಕಮತ್ತಿಗೆ ಬಲಿಯಾಗುತ್ತೀರಿ. ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಕಳುವಾಗಬಹುದು. ಅಗ್ನಿ ಅವಘಡಗಳು ಅಥವಾ ವಾಹನ ಅಪಘಾತಗಳು ಸಹ ಸಂಭವಿಸಬಹುದು. ಹಲವು ಕಡೆಗಳಿಂದ ವಿರೋಧ ಎದುರಿಸ ಬೇಕಾಗುತ್ತದೆ. ಪಾಪ ಅಥವಾ ಕೆಟ್ಟ ಕೃತ್ಯಗಳ ಕಡೆಗೆ ನಿಮ್ಮ ಮನಸ್ಸು ಸೆಳೆಯುತ್ತದೆ. ಅದನ್ನು ನಿಯಂತ್ರಿಸದಿದ್ದರೆ ಕಷ್ಟವಿದೆ.

ವೃಶ್ಚಿಕ: ಅತ್ಯುತ್ತಮ ಫಲಿತಾಂಶ ದೊರೆಯುವ ಸಮಯವಿದು

ವೃಶ್ಚಿಕ: ಅತ್ಯುತ್ತಮ ಫಲಿತಾಂಶ ದೊರೆಯುವ ಸಮಯವಿದು

ವೃಶ್ಚಿಕ ರಾಶಿಯವರಿಗೆ ಒಂದು ಹಾಗೂ ಆರನೇ ಸ್ಥಾನಾಧಿಪತಿ ಕುಜ. ಅಂಥ ಗ್ರಹವು ಈಗ ಮೂರನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇದು ಬಹಳ ಶುಭ ಸಮಯ. ಅತ್ಯುತ್ತಮ ಫಲಿತಾಂಶ ನೀಡುವ ಸ್ಥಾನವಿದು. ಮಕರ ರಾಶಿಯು ವ್ಯವಹಾರ, ಉದ್ದೇಶ ಮತ್ತು ಶಿಸ್ತನ್ನು ಪ್ರತಿನಿಧಿಸುತ್ತದೆ. ಅದರಲ್ಲೂ ಕುಜ ಗ್ರಹವು ಇಲ್ಲಿ ಸ್ಥಿತವಾಗಿದ್ದಾಗ ಜಾದೂ ಹಾಗೂ ಅದ್ಭುತಗಳನ್ನು ಮಾಡುತ್ತದೆ. ನಿಮ್ಮ ಸಾಮರ್ಥ್ಯ ವೃದ್ಧಿಯಾಗುತ್ತದೆ. ಸಮಸ್ಯೆ ನಿವಾರಣೆ ಮಾಡುವ ಬುದ್ಧಿ ಮತ್ತೆ ಹೆಚ್ಚುತ್ತದೆ. ಸಂಕಲ್ಪ ಶಕ್ತಿ ಹೆಚ್ಚು ಗಟ್ಟಿಯಾಗುತ್ತದೆ. ಸಹಜವಾಗಿಯೇ ಆತ್ಮವಿಶ್ವಾಸವು ಮೇಲ್ಮಟ್ಟದಲ್ಲಿರುತ್ತದೆ. ನಿಮ್ಮ ಅಧಿಕಾರಯುತ ಧ್ವನಿಯಿಂದ ಇತರರ ಮೇಲೆ ನಿಯಂತ್ರಣ ಸಾಧಿಸುತ್ತೀರಿ.

ಈ ಅದೃಷ್ಟಕರ ಕುಜನು ನಿಮ್ಮ ಪಾಲಿಗೆ ಯಶಸ್ಸಿನ ಕಿಟಕಿಗಳನ್ನು ತೆರೆಯುತ್ತಾನೆ. ನಿಮ್ಮ ವೃತ್ತಿ ಬದುಕಿನ ಬಗ್ಗೆ ಹೆಚ್ಚು ತನ್ಮಯತೆಯಿಂದ ತೊಡಗಿಸಿಕೊಳ್ಳಬೇಕು ಎಂಬುದು ಮುಖ್ಯ. ನೀವು ಬಹಳ ಕೆಲಸ ಮೈ ಮೇಲೆ ಎಳೆದುಕೊಂಡು ಬಿಟ್ಟಿದ್ದೀರಿ ಎಂದು ಕುಟುಂಬದವರು ದೂರು ಹೇಳಬಹುದು. ಒಮ್ಮೆ ನಿಮ್ಮ ಯಶಸ್ಸು ಕಂಡ ಮೇಲೆ ಅವರ ದುಃಖ ಮಾಯವಾಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಬಹಳ ಪ್ರಯಾಣ ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಿ.

ಧನು: ಮಾತು-ಹಣಕಾಸಿನ ಖರ್ಚಿನ ಬಗ್ಗೆ ಲಕ್ಷ್ಯವಿರಲಿ

ಧನು: ಮಾತು-ಹಣಕಾಸಿನ ಖರ್ಚಿನ ಬಗ್ಗೆ ಲಕ್ಷ್ಯವಿರಲಿ

ನಿಮ್ಮ ರಾಶಿಯಿಂದ ಎರಡನೇ ಸ್ಥಾನದಲ್ಲಿ ಕುಜ ಸಂಚಾರ ಮಾಡುತ್ತದೆ. ನಿಮಗೆ ಹನ್ನೆರಡು ಮತ್ತು ಐದನೇ ಸ್ಥಾನಾಧಿಪತಿಯು ಕುಜ. ಆದ್ದರಿಂದ ಹಣಕಾಸು ಹಾಗೂ ಸಂಪತ್ತಿನ ವಿಚಾರದಲ್ಲಿ ನಷ್ಟ ಆಗಬಹುದು. ದಿಢೀರ್ ಎಂದು ಖರ್ಚು ಕಾಣಿಸಿಕೊಳ್ಳುತ್ತದೆ. ನೀವು ಕೊಟ್ಟಿದ್ದ ಮಾತಿನ ಬಗ್ಗೆ ಲಕ್ಷ್ಯ ಇರಬೇಕು. ಕುಟುಂಬ ಸದಸ್ಯರ ಕಾರಣಕ್ಕೆ ಒತ್ತಡ ಹೆಚ್ಚಾಗುತ್ತದೆ. ಪ್ರಣಯ ಸಂಬಂಧವೂ ಸೇರಿದಂತೆ ಎಲ್ಲ ಸಂಬಂಧಗಳು ಕಷ್ಟದ ಹಾದಿ ಹಿಡಿಯುತ್ತದೆ. ಸುಮ್ಮನೆ ಮಾತಿನ ಸೂಚನೆಗಳಿಂದ ಹೆಚ್ಚು ಫಾಯಿದೆ ಇಲ್ಲ ಎಂದೆನಿಸುತ್ತದೆ. ನಿಮ್ಮ ಸಂವಹನ, ಆಲೋಚನಾ ಶಕ್ತಿ ಹಾಗೂ ಬುದ್ಧಿವಂತಿಕೆ ಇವ್ಯಾವು ನಿಮ್ಮ ಸಮಯಕ್ಕೆ ಕೈ ಹಿಡಿಯುತ್ತಿಲ್ಲ. ಅದರಲ್ಲೂ ಸಂಬಂಧದ ವಿಚಾರದಲ್ಲಿ ಸೋಲುತ್ತಿದ್ದೇನೆ ಎನಿಸುತ್ತದೆ.

ವೃತ್ತಿ ಜೀವನವಾಗಲಿ, ಕೌಟುಂಬಿಕ ಜೀವನವಾಗಲೀ ಅಂದುಕೊಂಡ ಹಾದಿಯಲ್ಲಿ ಸಾಗುವುದಿಲ್ಲ. ಹೊಸ ಸಾಹಸಗಳು ನಷ್ಟವನ್ನು ತಂದೊಡ್ಡುತ್ತವೆ. ಸಂಬಂಧಿಕರು ಹಾಗೂ ಸೋದರ ಸಂಬಂಧಿಕರ ಜತೆಗೆ ಬಿಕ್ಕಟ್ಟು ಕಾಣಿಸಿಕೊಳ್ಳುತ್ತದೆ. ಪೆಡಸು- ಒಅರಟು ಮಾತನಾಡಿ ನೀವಾಗಿಯೇ ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಡಿ. ಷೇರು- ಸಟ್ಟಾ ವ್ಯವಹಾರಗಳಲ್ಲಿ ಇಷ್ಟು ಕಾಲ ಇದ್ದ ಆಸಕ್ತಿ ಈಗ ಕರಗಿ ಅನಗತ್ಯ ಖರೀದಿ ಮಾಡುತ್ತೀರಿ. ಆ ನಂತರ ಅದಕ್ಕಾಗಿ ಕೊರಗುತ್ತೀರಿ.

ಮಕರ: ಆರೋಗ್ಯ ಸಮಸ್ಯೆ ಕಾಡುತ್ತದೆ

ಮಕರ: ಆರೋಗ್ಯ ಸಮಸ್ಯೆ ಕಾಡುತ್ತದೆ

ನಿಮ್ಮ ರಾಶಿಗೆ ಹನ್ನೊಂದು ಮತ್ತು ನಾಲ್ಕನೇ ಸ್ಥಾನಾಧಿಪತಿ ಜನ್ಮ ರಾಶಿಯಲ್ಲೇ ಇರುತ್ತದೆ. ನಿಮ್ಮ ಮೇಲೆ ಹಲವು ರೀತಿಯಲ್ಲಿ ಆರೋಪಗಳು ಬರುತ್ತವೆ. ಮತ್ತು ಮಾನಸಿಕ ಕಿರಿಕಿರಿ ಅನುಭವಿಸುತ್ತೀರಿ. ಆರೋಗ್ಯ ಸಮಸ್ಯೆ ಮುಖ್ಯವಾಗಿ ಕಾಡುತ್ತದೆ. ನಿಮ್ಮ ಕೋಪವನ್ನು ಮಿತಿಯಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಬೇರೆ ಯಾರೋ ಕೆಲಸ ಮಾಡಿಕೊಡುತ್ತಾರೆ ಎಂದು ಇತರರ ಮೇಲೆ ಅವಲಂಬನೆ ಕೂಡದು. ಎಷ್ಟೋ ಸಲ ಬೇರೆಯವರೇ ಆ ಕೆಲಸ ಮಾಡಿಕೊಡಬೇಕು ಎಂಬ ಸ್ಥಿತಿ ಇದ್ದರೂ ಅದು ಸಾಧ್ಯವಾಗುವುದಿಲ್ಲ. ನಿಮ್ಮ ಮಿತಿಗಳನ್ನು ಮೀರಿ, ಕೆಲಸ ಬದಲಾವಣೆ ಆಗಿ, ಅಭಿವೃದ್ಧಿ ಕಾಣುವ ಅವಕಾಶಗಳಿವೆ. ನಿಮ್ಮ ಜತೆಗೆ ಕೆಲಸ ಮಾಡುವುದಕ್ಕೆ ಅಥವಾ ಜತೆಗೆ ಸಾಗುವುದಕ್ಕೆ ಅರ್ಹರಲ್ಲ ಎನಿಸುವವರನ್ನು ರಿಸ್ಕ್ ಆದರೂ ಕೈ ಬಿಡುತ್ತೀರಿ.

ಜೀವನದಲ್ಲಿ ಒಂದೊಂದೇ ಈಗಷ್ಟೇ ಆರಂಭವಾಗುತ್ತಿದೆ, ಅಂದರೆ ಆರಂಭಿಕ ಹಂತದ ಹಾದಿಯಲ್ಲಿರುವವರಿಗೆ ಕೆಲ ಇರುಸುಮುರುಸು ಎದುರಾಗುತ್ತದೆ. ಇಷ್ಟು ಕಾಲ ಜತೆಗಿದ್ದು, ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬಂಥ ಸಹೋದ್ಯೋಗಿಗಳಲ್ಲಿ ಸಕಾರಾತ್ಮಕವಾದ ಬದಲಾವಣೆ ಕಾಣಿಸಿಕೊಳ್ಳುತ್ತದೆ. ವಾಹನ ಚಾಲನೆ ಮಾಡುವಾಗ ಎಚ್ಚರ. ರಕ್ತಕ್ಕೆ ಸಂಬಂಧಿಸಿದಂತೆ ಕಾಯಿಲೆಗಳು ಬಾಧಿಸುತ್ತವೆ. ಬಾಳಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇರುತ್ತದೆ ಎಚ್ಚರವಿರಲಿ.

ಕುಂಭ: ಅನಿರೀಕ್ಷಿತ- ಅನಗತ್ಯ ಖರ್ಚು-ವೆಚ್ಚ

ಕುಂಭ: ಅನಿರೀಕ್ಷಿತ- ಅನಗತ್ಯ ಖರ್ಚು-ವೆಚ್ಚ

ನಿಮ್ಮ ರಾಶಿಗೆ ಮೂರು ಮತ್ತು ಹತ್ತನೇ ಸ್ಥಾನಾಧಿಪತಿಯಾದ ಶನಿಯು ಹನ್ನೆರಡನೇ ಮನೆಯಲ್ಲಿ ಸಂಚರಿಸುತ್ತದೆ. ಅನಗತ್ಯವಾದ ಹಾಗೂ ಅನಿರೀಕ್ಷಿತವಾದ ಖರ್ಚುಗಳು ಕಾಣಿಸಿಕೊಳ್ಳುತ್ತವೆ. ಎಷ್ಟು ಸಾಧ್ಯವೋ ಅಷ್ಟು ಎಚ್ಚರಿಕೆಯಿಂದ ಈ ಸಂದರ್ಭದಲ್ಲಿ ನೀವು ಇರಬೇಕು. ನೀವು ವಿದೇಶದಲ್ಲಿ ಉದ್ಯೋಗ ಮಾಡುವಂಥವರಾಗಿದ್ದರೆ ಈ ಸಮಯದಲ್ಲಿ ಯಶಸ್ಸು ಖಾತ್ರಿ. ಈ ಅವಧಿಯಲ್ಲಿ ಸಣ್ಣ ಪ್ರಮಾಣದ ಪ್ರಯಾಣ ಕೂಡ ಸಾಧ್ಯವಿದೆ. ನಿಮ್ಮ ಉದ್ಯೋಗ, ಸಾಧನೆ, ಬೌದ್ಧಿಕ ಸಾಧನೆಯು ನಿಮ್ಮ ಕೌಟುಂಬಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಕೂಡ ಪ್ರಶ್ನಾರ್ಹ. ನಿಮ್ಮ ತಾಳ್ಮೆ- ಸಂಯಮವೇ ಈ ಅವಧಿಯಲ್ಲಿ ಫಲಿತ ನೀಡುತ್ತದೆ. ಉದ್ಯೋಗದ ವಿಚಾರದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ- ವಾಗ್ವಾದ ಎದುರಿಸಬೇಕಾಗುತ್ತದೆ.

ಇನ್ನು ಮಾಧ್ಯಮಗಳಲ್ಲಿ ಕೆಲಸ ಮಾಡುವಂಥವರಿಗೆ ಅಶುಭ ಸಂಗತಿಗಳು ನಡೆಯುತ್ತವೆ. ಮುದ್ರಣ ಮಾಧ್ಯಮದಲ್ಲಿ ಇರುವವರು ಅಥವಾ ಪ್ರಿಂಟಿಂಗ್ ಪ್ರೆಸ್ ಇತ್ಯಾದಿ ಇರುವವರು ನಷ್ಟ ಎದುರಿಸಬೇಕಾಗುತ್ತದೆ. ಜತೆಗೆ ವರ್ಚಸ್ಸಿಗೆ ಹಾನಿಯಾಗುವ ಸಾಧ್ಯತೆ ಇದೆ. ಶುಭ ಸುದ್ದಿ ಏನೆಂದರೆ, ವಿದೇಶದಲ್ಲಿ ಇರುವವರ ಜತೆಗೆ ವ್ಯವಹಾರ ಸಂಬಂಧಗಳನ್ನು ವೃದ್ಧಿಸಿಕೊಳ್ಳಬಹುದು. ವೃತ್ತಿ ಬದುಕಿನಲ್ಲಿ ಕೆಲ ಅಡೆತಡೆ ಎದುರಾಗುತ್ತದೆ. ವಿಳಂಬವಾಗುತ್ತದೆ. ಅಂತಿಮವಾಗಿ ಪೂರ್ಣಗೊಳ್ಳುತ್ತದೆ. ದೀರ್ಘಕಾಲೀನ ಪರಿಣಾಮವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಈಗಿನ ವೈಫಲ್ಯವನ್ನು ಸ್ವೀಕರಿಸಿ.

ಮೀನ: ಖ್ಯಾತಿ ಲಭಿಸುತ್ತದೆ, ದೂರ ಪ್ರಯಾಣವಿದೆ

ಮೀನ: ಖ್ಯಾತಿ ಲಭಿಸುತ್ತದೆ, ದೂರ ಪ್ರಯಾಣವಿದೆ

ನಿಮ್ಮ ರಾಶಿಗೆ ಎರಡು ಮತ್ತು ಒಂಬತ್ತನೇ ಸ್ಥಾನಾಧಿಪತಿಯಾದ ಕುಜ ಹನ್ನೊಂದನೇ ಮನೆಯಲ್ಲಿ ಸಂಚರಿಸುತ್ತದೆ. ಇಷ್ಟು ಕಾಲ ನೀವಂದುಕೊಂಡಂಥ ಉದ್ಯೋಗ ಅಥವಾ ವೃತ್ತಿ ವಾತಾವರಣ ಇರಲಿಲ್ಲ ಎಂಬ ಕೊರಗು ಏನಿತ್ತು, ಅದು ಕರಗುವ ಸಮಯವಿದು. ನಿಮ್ಮ ಕೆಲಸಕ್ಕೆ ಪೂರಕವಾದ ಗ್ಯಾಜೆಟ್ ಗಳನ್ನು ಖರೀದಿಸುವ ಸಾಧ್ಯತೆ ಇದೆ. ಇನ್ನು ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಗತಿಯಲ್ಲಿ ಏಳ್ಗೆ ಕಾಣಿಸುತ್ತದೆ. ಸ್ನೇಹಿತರು ಹಾಗೂ ಸಹೋದ್ಯೋಗಿಗಳು ನೆರವಿಗೆ ಬರುತ್ತಾರೆ. ನಿಮ್ಮ ಪಾಲಿಗೆ ಅದೃಷ್ಟ ಕೂಡ ಬಾಗಿಲು ತೆರೆಯುತ್ತದೆ ಹಾಗೂ ಇಷ್ಟು ಕಾಲ ಬಾಕಿಯಿದ್ದ ಕೆಲಸಗಳು ಕೂಡ ಪೂರ್ಣಗೊಳ್ಳುತ್ತವೆ. ಉತ್ತಮ ಲಾಭವಿದೆ. ಕೆಲವು ದಾನ- ಧರ್ಮ ಕೂಡ ಮಾಡುತ್ತೀರಿ. ಬಹಳ ಪ್ರಖ್ಯಾತ ಆಗುತ್ತೀರಿ ಮತ್ತು ದೂರ ಪ್ರಯಾಣ ಮಾಡುತ್ತೀರಿ.

ಆಟ, ಮನರಂಜನೆ ಮತ್ತು ಸಂತೋಷದ ಸನ್ನಿವೇಶಗಳು ಹೊಸ ಸಂಬಂಧಗಳನ್ನು ವೃದ್ಧಿಸುತ್ತವೆ ಮತ್ತು ಬೆಳೆಸುತ್ತವೆ. ನಿಮ್ಮ ಶ್ರಮದ ಲಾಭ ಕೈ ತಪ್ಪಿ ಹೋಗದಂತೆ ಎಚ್ಚರ ವಹಿಸಿ. ಸೌಹಾರ್ದ ಹಾಗೂ ಕೌಟುಂಬಿಕ ಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಸ್ನೇಹ- ಕೌಟುಂಬಿಕ ಬಂಧ ಹತ್ತಿರವಾಗುತ್ತವೆ. ನಿಮ್ಮ ಸಹೋದರ- ಸಹೋದರಿಯರು ಅಥವಾ ಸಮಾನರು ನಿಮ್ಮ ನೆರವಿಗೆ ಬರುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Planet Mars entered in Capricorn on May 2nd, 2018. It will transit in Capricorn till November 6th, 2018. What are the results of this transition for 12 zodiac sign from Libra to Pisces, here are the results.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more