ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕರ ರಾಶಿಯಲ್ಲಿ ಕುಜ ಸಂಚಾರ, ಯಾರ ಪಾಲಿಗೆ ಏನು ಹೊಸ ವಿಚಾರ?

By ರಮಾಕಾಂತ್
|
Google Oneindia Kannada News

ಮೇ ಎರಡನೇ ತಾರೀಕಿನಂದು ಕುಜ ಗ್ರಹವು ಮಕರ ರಾಶಿಯನ್ನು ಪ್ರವೇಶ ಮಾಡಿದೆ. ಈ ವರೆಗೆ ಧನುಸ್ಸು ರಾಶಿಯಲ್ಲಿ ಶನಿಯೊಂದಿಗೆ ಇದ್ದ ಕುಜ ಗ್ರಹವು ಮಂದ-ಮಂಗಳ ಯೋಗವನ್ನು ಸೃಷ್ಟಿಸಿ ಭಾರೀ ವ್ಯತ್ಯಾಸಗಳನ್ನು ಮಾಡಿರುವುದು ಹೌದು. ಅದರ ಪರಿಣಾಮಗಳ ಬಗ್ಗೆ ಈ ಹಿಂದೆ ಒನ್ಇಂಡಿಯಾ ಕನ್ನಡದಲ್ಲೇ ಲೇಖನ ಪ್ರಕಟಿಸಲಾಗಿತ್ತು.

ಇದೀಗ ತನ್ನ ಉಚ್ಚ ಕ್ಷೇತ್ರವಾದ ಮಕರ ರಾಶಿಯನ್ನು ಕುಜ ಗ್ರಹವು ಪ್ರವೇಶ ಮಾಡಿದೆ. ಅದು ಕೇತುನೊಟ್ಟಿಗೆ ಕೆಲ ಕಾಲ ಸ್ಥಿತವಾಗಿರುತ್ತದೆ. ಕೆಲ ಕಾಲ ಅಂದರೆ ಈ ವರ್ಷದ ನವೆಂಬರ್ ಆರನೇ ತಾರೀಕಿನವರೆಗೆ ಕುಜ ಗ್ರಹ ಮಕರ ರಾಶಿಯಲ್ಲಿ ಇರುತ್ತದೆ. ಈ ಮಧ್ಯೆ ಕೆಲ ಕಾಲ ವಕ್ರೀಯಾಗಿ ಕೂಡ ಸಂಚಾರ ಮಾಡುತ್ತದೆ.

ಶುಕ್ರ ಗ್ರಹ ಅನುಗ್ರಹಕ್ಕಾಗಿ 7 ಅದ್ಭುತ ಸಲಹೆಗಳುಶುಕ್ರ ಗ್ರಹ ಅನುಗ್ರಹಕ್ಕಾಗಿ 7 ಅದ್ಭುತ ಸಲಹೆಗಳು

ಕುಜ ಗ್ರಹ ಅಂದರೆ ಬೆಂಕಿ, ಆಕ್ರಮಣಕಾರಿ, ಯೋಧ, ಶಕ್ತಿಯಿಂದ ಕೂಡಿರುವಂಥ ಗ್ರಹ. ಇಂಥ ಸಾಮರ್ಥ್ಯದ ಗ್ರಹವು ಮಕರ ರಾಶಿಯಲ್ಲಿರುವಾಗ ಹನ್ನೆರಡು ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು ಎಂದು ತಿಳಿಸುವ ಲೇಖನವಿದು. ಈಗಾಗಲೇ ಮಕರ ರಾಶಿಗೆ ಕುಜ ಗ್ರಹದ ಪ್ರವೇಶ ಆಗಿದೆ. ಇನ್ನು ಐದು ತಿಂಗಳು ಈ ಫಲಗಳನ್ನು ಕಾಣಬೇಕಾಗುತ್ತದೆ. ಏನು ಫಲ ಎಂದು ತಿಳಿಯಲು ಮುಂದೆ ಓದಿ.

ಮೇಷ: ಉದ್ಯೋಗ- ವೃತ್ತಿಯಲ್ಲಿನ ಏಳ್ಗೆ ಸೂಚನೆ

ಮೇಷ: ಉದ್ಯೋಗ- ವೃತ್ತಿಯಲ್ಲಿನ ಏಳ್ಗೆ ಸೂಚನೆ

ಹತ್ತನೇ ಮನೆಯ ಕುಜ ಗ್ರಹವು ಕೇತುವಿನ ಜತೆಗೆ ಸ್ಥಿತವಾಗಿದೆ. ಇನ್ನು ನಿಮ್ಮದೇ ರಾಶಿಯ ಮೇಲೆ ಗುರು ಗ್ರಹದ ದೃಷ್ಟಿ ಇದೆ. ಹತ್ತನೇ ಮನೆಯ ಕುಜ ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಉತ್ತಮ ಫಲಗಳನ್ನು ನೀಡುತ್ತದೆ. ಆದರೆ ಇತರ ವಿಚಾರಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವ್ಯಾಪಾರ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ಕಾನೂನು ವಿಚಾರಗಳು ನಿಮ್ಮ ಪರವಾಗಿ ಆಗುವ ಸಾಧ್ಯತೆಗಳಿವೆ. ನಿಮ್ಮ ಗುರಿ ತಲುಪುವ ಧೈರ್ಯ ಮತ್ತು ಉತ್ಸಾಹವನ್ನು ತೋರಿಸಬೇಕು. ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಪತ್ತೆ ಹಚ್ಚಬೇಕು. ಆ ನಂತರ ನಿಮ್ಮ ಉದ್ಯೋಗ ಸ್ಥಳದಲ್ಲಿ ಪ್ರಾಮುಖ್ಯತೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು.

ನಿಮ್ಮ ಆರೋಗ್ಯ, ಆಸ್ತಿ, ಸಾಮರ್ಥ್ಯದ ಪ್ರಾಮಾಣಿಕ ಮೌಲ್ಯಮಾಪನ ಮಾಡಿಕೊಳ್ಳಬೇಕು. ಯಂತ್ರೋಪಕರಣಗಳಿಂದ ಅಪಘಾತ ಸಾಧ್ಯತೆಗಳು ಕಾಣುತ್ತಿವೆ. ವಾಹನ ಚಾಲನೆ ಮಾಡುವಾಗ ಎಚ್ಚರ. ಯಾರೊಂದಿಗೂ ಶತ್ರುತ್ವ ಬೆಳೆಸಿಕೊಳ್ಳಬೇಡಿ. ಹಾಗೊಂದು ವೇಳೆ ಮಾಡಿಕೊಂಡರೆ ಕುಜ ವಕ್ರೀ ಚಲನೆ ಮಾಡುವಾಗ ತೊಂದರೆ ಅನುಭವಿಸುತ್ತೀರಿ.

ವೃಷಭ: ಮಿಶ್ರ ಫಲ ಅನುಭವಕ್ಕೆ ಬರುತ್ತದೆ

ವೃಷಭ: ಮಿಶ್ರ ಫಲ ಅನುಭವಕ್ಕೆ ಬರುತ್ತದೆ

ಕುಜನು ನಿಮ್ಮ ರಾಶಿಯಿಂದ ಒಂಬತ್ತನೇ ಸ್ಥಾನದಲ್ಲಿ ಸಂಚರಿಸುತ್ತದೆ. ಶನಿಯು ಎಂಟನೇ ಮನೆಯಲ್ಲಿ ಸಂಚಾರ. ಕುಜ ಗ್ರಹವು ಮಿಶ್ರ ಫಲಗಳನ್ನು ನೀಡುತ್ತದೆ. ನಿಮಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಚಾರಗಳತ್ತ ಮನಸು ಹೊರಳುತ್ತದೆ. ನಿಮ್ಮೊಳಗೆ ನಿಗೂಢತೆ ಹಾಗೂ ದುಃಖವೊಂದು ಕಾಡುತ್ತಲೇ ಇರುತ್ತದೆ. ಆದ್ದರಿಂದ ಸನ್ನಿವೇಶದ ಮೌಲ್ಯಮಾಪನವನ್ನು ಸರಿಯಾಗಿ ಮಾಡಿ. ಆ ನಂತರ ನಿಮ್ಮ ಆಲೋಚನೆ ಹಾಗೂ ಅದರ ವ್ಯಾಖ್ಯಾನ ಸರಿಯಾದ ದಿಕ್ಕಿನಲ್ಲಿ ಮಾಡಿ, ಏಕೆ ಹೀಗಾಯಿತು ಎಂಬ ಬಗ್ಗೆ ಅವಗಾಹನೆ ಬರುತ್ತದೆ. ವ್ಯವಹಾರಸ್ಥರಾಗಿದ್ದಲ್ಲಿ ವ್ಯಾಪಾರಕ್ಕೆ ಹಣಕಾಸಿನ ಕೊರತೆ ಎದುರಾಗುತ್ತದೆ. ನೀವು ಆಮದು-ರಫ್ತು ವ್ಯವಹಾರ ಮಾಡುವಂಥವರಾಗಿದ್ದರೆ ಅಥವಾ ನಿಮ್ಮ ವ್ಯವಹಾರವೇ ವಿದೇಶದಲ್ಲಿ ಇರುವಂಥದ್ದು ಎಂದಾದರೆ ಒಳ್ಳೆ ಲಾಭ ಹಾಗೂ ಗೌರವ- ಸ್ಥಾನ-ಮಾನ ಪಡೆಯುತ್ತೀರಿ.

ಬಾಳಸಂಗಾತಿ ಸ್ವಲ್ಪ ಕಿರಿಕಿರಿ ಮಾಡಿ, ಬಿಕ್ಕಟ್ಟು ಹೆಚ್ಚಾಗಬಹುದು. ವೈವಾಹಿಕ ಜೀವನವನ್ನು ಚೆನ್ನಾಗಿ ನೋಡಿಕೊಳ್ಳುವುದು ನಿಮ್ಮದೇ ಜವಾಬ್ದಾರಿ. ಹೊಂದಾಣಿಕೆ ಹಾಗೂ ಸಹಕಾರ ಈ ಕುಜ ಸಂಚಾರದ ವೇಳೆ ಬಹಳ ಮುಖ್ಯ. ವಿಲಾಸಿ ವಸ್ತುಗಳ ಮೇಲೆ ಹಣ ವೆಚ್ಚ ಮಾಡಬೇಡಿ. ಕೈಯಲ್ಲಿ ನಗದು ಇರುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ವೈಯಕ್ತಿಕ ಜೀವನದಲ್ಲಿ ಅಸಮಾಧಾನ ಕಾಣಿಸಿಕೊಳ್ಳುತ್ತದೆ. ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಮಾರ್ಗ. ಆಗ ಖರ್ಚು ಮಾಡುವುದಕ್ಕೆ ಸಮಯವೇ ಸಿಗುವುದಿಲ್ಲ.

ಮಿಥುನ: ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ

ಮಿಥುನ: ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ

ಮಿಥುನ ರಾಶಿಯವರಿಗೆ ಎಂಟನೇ ಮನೆಯಲ್ಲಿ ಕುಜ ಸಂಚಾರ ಆಗುತ್ತದೆ. ಆದ್ದರಿಂದ ಈ ಸಮಯ ಅಂಥ ಭರವಸೆದಾಯಕವಲ್ಲ. ಮುಖ್ಯವಾಗಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು. ಅದೆಷ್ಟೇ ಸಣ್ಣ ಪ್ರಮಾಣದ್ದು ಅಂತನಿಸಿದರೂ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ದಿಢೀರ್ ಲಾಭ ಹಾಗೂ ದಿಢೀರ್ ನಷ್ಟ ಕಾಣುತ್ತೀರಿ. ಶತ್ರುವಿನ ಕಾಟ ಕಾಣಿಸಿಕೊಳ್ಳುತ್ತದೆ. ಸಹೋದರರಿಂದ ಸಮಸ್ಯೆಗಳಾಗುತ್ತವೆ. ಕೌಟುಂಬಿಕ ಜೀವನ ಹಳಿ ಬಿಟ್ಟು ಆಚೀಚೆ ಸರಿದಂಥ ಅನುಭವ ಆಗುತ್ತದೆ. ಅಂದುಕೊಳ್ಳದ ರೀತಿಯಲ್ಲಿ ಉನ್ನತ ಸ್ಥಾನಮಾನ ದೊರಕಿಬಿಡಬಹುದು. ಇನ್ನು ಪ್ರಣಯ ವಿಚಾರದಲ್ಲಿ ಆಗಾಗ ಕಿರಿಕಿರಿ. ಅಂದುಕೊಳ್ಳದ ಮಟ್ಟದಲ್ಲಿ ಖರ್ಚಿನ ಪ್ರಮಾಣ ಏರಿಬಿಡುತ್ತದೆ. ಇನ್ನು ನೀವಾಗಿಯೇ ರಹಸ್ಯ ಶತ್ರುಗಳನ್ನು ಹುಟ್ಟು ಹಾಕಿಕೊಳ್ತೀರಿ. ಹನ್ನೊಂದು ಹಾಗೂ ಆರನೇ ಸ್ಥಾನಾಧಿಪತಿ ಎಂಟರಲ್ಲಿರುವುದು ಒಳ್ಳೆಯದಲ್ಲ.

ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದು ಹಾಗೂ ಹೊತ್ತಲ್ಲದ ಹೊತ್ತಲ್ಲಿ ಸ್ನೇಹಿತರ ಜತೆಗೆ ಕಳೆಯುವುದು ಒಳ್ಳೆಯದಲ್ಲ. ನೀವು ಕೆಲಸ ಮಾಡುವ ಸ್ಥಳದಲ್ಲಿ ಯಾರಿಗೋ ಸಿಗಬೇಕಾದ ಒಂದು ಉತ್ತಮ ಅವಕಾಶ ನಿಮ್ಮ ಪಾಲಿಗೆ ಬರಬಹುದು. ಇದೊಂದೇ ಈ ಕುಜ ಸಂಚಾರದ ಅವಧಿಯಲ್ಲಿ ನಿಮ್ಮ ಪಾಲಿಗೆ ಸಂಭವಿಸಬಹುದಾದ ಒಳಿತು. ಚೂಪಾದ ಹಾಗೂ ಲೋಹದ ವಸ್ತುಗಳಿಂದ ದೂರವಿರಿ. ಉದ್ಯೋಗ ಸ್ಥಳದಲ್ಲಿ ಯಾರೊಂದಿಗೂ ವಾದ-ವಿವಾದ, ಸಂಘರ್ಷ ಮಾಡಿಕೊಳ್ಳದಂತೆ ಎಚ್ಚರ ವಹಿಸಿ.

ಕರ್ಕಾಟಕ: ಸಿಟ್ಟಿನ ಕಾರಣಕ್ಕೆ ಸಂಬಂಧದಲ್ಲಿ ಬಿಕ್ಕಟ್ಟು

ಕರ್ಕಾಟಕ: ಸಿಟ್ಟಿನ ಕಾರಣಕ್ಕೆ ಸಂಬಂಧದಲ್ಲಿ ಬಿಕ್ಕಟ್ಟು

ನಿಮ್ಮ ರಾಶಿಗೆ ಏಳನೇ ಮನೆಯಲ್ಲಿ ಕುಜ ಇರುತ್ತದೆ. ಈ ಸ್ಥಾನದಲ್ಲಿ ಕುಜ ಗ್ರಹವು ಮಿಶ್ರ ಫಲವನ್ನು ನೀಡುತ್ತದೆ. ಸಂಬಂಧ ಹಾಗೂ ಪಾಲುದಾರಿಕೆಯಲ್ಲಿ ಬಿಕ್ಕಟ್ಟುಗಳು ಉದ್ಭವಿಸುತ್ತವೆ. ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎನ್ನುವ ಮುಂಚೆ ಎಚ್ಚರಗೊಳ್ಳಬೇಕು. ನಿಮಗೇ ಗೊತ್ತಾಗುವಂತೆ ವಿಪರೀತ ಎನಿಸುವಷ್ಟು ಸಿಟ್ಟು ಬರುತ್ತದೆ. ನಿಮ್ಮ ಸಿಟ್ಟಿನ ಮೂಲ ಕಾರಣವೇ ಬಾಳಸಂಗಾತಿ. ನಿಮ್ಮ ಪರಿಶ್ರಮ ಹಾಗೂ ಸಂಯಮ ಪ್ರತಿಫಲ ನೀಡುತ್ತದೆ. ಆದರೆ ಅಂದುಕೊಂಡಷ್ಟು ಅಲ್ಲ. ನಿಮ್ಮ ಕೆಲವು ನಿರ್ಧಾರಗಳಿಂದ ಹೆಸರು ಹಾಳಾಗುವ ಸಾಧ್ಯತೆ ಇರುವುದರಿಂದ ಎಚ್ಚರವಾಗಿರಿ. ನಿಮ್ಮ ಐದು ಹಾಗೂ ಹತ್ತನೇ ಸ್ಥಾನಾಧಿಪತಿ ಏಳರಲ್ಲಿ ಇರುತ್ತದೆ. ಇದನ್ನು ಮಾರಕ ಭಾವ ಎನ್ನಲಾಗುತ್ತದೆ. ಪ್ರೇಮಿಗಳಿಗೆ, ಪ್ರಣಯ ಸಂಬಂಧಗಳಲ್ಲಿ ಇರುವವರು ಹಾಗೂ ಪಾಲುದಾರಿಕೆ ವ್ಯವಹಾರ ಮಾಡುತ್ತಿರುವವರಿಗೆ ಅಹಂಕಾರ ಅಡ್ಡ ಬಂದು ಬಿಕ್ಕಟ್ಟು ಉದ್ಭವಿಸುತ್ತದೆ.

ಸಂಬಂಧದ ವಿಚಾರದಲ್ಲಿ ಸಹಕಾರದಿಂದ ನಡೆದುಕೊಳ್ಳಿ. ಅದು ಈ ಸನ್ನಿವೇಶದ ತುರ್ತು. ಸಮಸ್ಯೆ ಕಾಣಿಸಿಕೊಂಡಿತು ಅಂದ ತಕ್ಷಣ ಅದನ್ನು ಪರಿಹರಿಸಿಕೊಳ್ಳುವುದಕ್ಕೆ ಮುಂದಾಗಿ. ಸಣ್ಣ- ಪುಟ್ಟ ಅಪಸವ್ಯಗಳನ್ನು ನೀವಾಗಿಯೇ ಮರೆತುಬಿಡಿ. ಇತರರ ತಪ್ಪುಗಳ ಬಗ್ಗೆ ವಿಪರೀತ ಟೀಕೆ-ಟಿಪ್ಪಣಿ ಮಾಡದಿದ್ದರೆ ಒಳಿತು.

ಸಿಂಹ: ಪ್ರೋತ್ಸಾಹದಾಯಕವಾದ ಸಮಯವಿದು

ಸಿಂಹ: ಪ್ರೋತ್ಸಾಹದಾಯಕವಾದ ಸಮಯವಿದು

ಸಿಂಹ ರಾಶಿಯವರಿಗೆ ನಾಲ್ಕು ಹಾಗೂ ಒಂಬತ್ತನೇ ಸ್ಥಾನಾಧಿಪತಿಯಾದ ಕುಜ ಗ್ರಹವು ಆರನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇದು ಪ್ರೋತ್ಸಾಹದಾಯಕವಾದಂಥ ಸಮಯ. ನಿಮ್ಮ ಆದಾಯ ಮೂಲ ಹೆಚ್ಚಾಗುತ್ತದೆ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂಥವರ ಪಾಲಿಗೆ ಅನುಕೂಲವಾದ ಸನ್ನಿವೇಶ. ಜೀವನದಲ್ಲಿ ಎತ್ತರದ ಸ್ಥಾನಕ್ಕೆ ಏರಲು, ವಿಸ್ತರಣೆ ಮಾಡಿಕೊಳ್ಳಲು ಹಾಗೂ ಹಲವು ಬಗೆಯಲ್ಲಿ ಉತ್ತಮಗೊಳ್ಳಲು ಸಿದ್ಧರಾಗಿ. ನಿಮ್ಮ ಈ ವರೆಗಿನ ಕೆಲಸಗಳಿಗೆ ಪ್ರತಿಫಲ, ಮನ್ನಣೆ ಹಾಗೂ ಗೌರವಾದರಗಳು ದೊರೆಯುವ ಕಾಲವಿದು. ಜತೆಗೆ ಕೆಲವು ಅಧಿಕಾರ ಕೂಡ ಸಿಗುವ ಸಮಯವಿದು. ನಿಮ್ಮ ಆಲೋಚನೆಗಳು ವಾಸ್ತವಿಕವಾಗಿರುತ್ತವೆ. ನಿಮ್ಮ ಬಗ್ಗೆ ಆತ್ಮವಿಶ್ವಾಸವೊಂದು ಮೂಡುತ್ತದೆ. ಯಾವುದೇ ಕಾರ್ಯವನ್ನು ವೃತ್ತಿಪರತೆಯಿಂದ ಹಾಗೂ ಶೀಘ್ರಗತಿಯಲ್ಲಿ ನೀವು ಮಾಡಬಲ್ಲಿರಿ ಎಂಬುದನ್ನು ನಿಮ್ಮ ಸುತ್ತಲಿನವರು ಗುರುತಿಸುತ್ತಾರೆ.


ನಿಮ್ಮ ಮೇಲಧಿಕಾರಿಗಳ ಜತೆಗೆ ನಿಕಟ ಸ್ನೇಹ ಬೆಳೆಯುತ್ತದೆ. ದೈಹಿಕ ಸುಖಗಳನ್ನು ಅನುಭವಿಸುವ ಕಾಲವಿದು. ವಿದ್ಯಾರ್ಥಿಗಳಿಗೆ ಕೂಡ ಉತ್ತಮ ಸಮಯವಿದು. ಮಕ್ಕಳು ಹೆಚ್ಚು ಶ್ರಮ ಪಟ್ಟು ವಿದ್ಯಾರ್ಜನೆ ಮಾಡುತ್ತಾರೆ. ಪರೀಕ್ಷೆಗಳಲ್ಲಿ ಒಳ್ಳೆ ಫಲಿತಾಂಶ ಬರುತ್ತದೆ. ಆದರೆ ಆರೋಗ್ಯ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಶ್ರಮಪಡುವ ಕೆಲಸ ಹಾಗೂ ಆಹಾರ ಪಥ್ಯದಲ್ಲಿನ ನಿರ್ಲಕ್ಷ್ಯದಿಂದ ಸಮಸ್ಯೆ ಆಗಬಹುದು, ಎಚ್ಚರವಿರಲಿ.

ಕನ್ಯಾ: ಪ್ರೀತಿ- ಪ್ರೇಮದ ಸಂಬಂಧ ಹಾಳಾಗದಂತೆ ಎಚ್ಚರ ವಹಿಸಿ

ಕನ್ಯಾ: ಪ್ರೀತಿ- ಪ್ರೇಮದ ಸಂಬಂಧ ಹಾಳಾಗದಂತೆ ಎಚ್ಚರ ವಹಿಸಿ

ನಿಮ್ಮ ರಾಶಿಗೆ ಮೂರು ಮತ್ತು ಎಂಟನೇ ಸ್ಥಾನದ ಅಧಿಪತಿಯಾದ ಕುಜನು ಐದನೇ ಸ್ಥಾನದಲ್ಲಿದೆ. ನಿಮ್ಮ ಪ್ರೀತಿ- ಪ್ರೇಮದ ಸಂಬಂಧಗಳನ್ನು ಹಾಳು ಮಾಡುತ್ತಿದೆ. ಈಗಾಗಲೇ ಪ್ರೀತಿ- ಪ್ರೇಮದಲ್ಲಿ ಇರುವವರು ದೂರವಾಗುವ ಸಾಧ್ಯತೆಗಳಿವೆ. ಪ್ರೇಮ ಸಂಬಂಧಗಳನ್ನು ಗೌರವಿಸುವುದು ಬಹಳ ಮುಖ್ಯ. ನಿಮ್ಮ ಮನಸ್ಸು ಗೊಂದಲಕ್ಕೆ ಬೀಳುತ್ತದೆ. ನಾನಾ ಕಾರಣಗಳಿಗೆ ನೀವು ಚಿಂತೆಗೆ ಬೀಳುತ್ತೀರಿ. ಆತಂಕಕ್ಕೆ ಕಾರಣವಾಗುವ ಮಟ್ಟದಲ್ಲಿ ಆದಾಯದಲ್ಲಿ ಇಳಿಕೆಯಾಗುತ್ತದೆ. ವ್ಯವಹಾರಕ್ಕೆ ಸಂಬಂಧಪಟ್ಟ ದೂರ ಪ್ರಯಾಣವೊಂದರಿಂದ ಯಾವುದೇ ಪ್ರತಿಫಲ ದೊರೆಯುವುದಿಲ್ಲ. ಈ ಹಿಂದೆ ಆದ ನಷ್ಟದ ಬಗ್ಗೆ ಪರಿಶೀಲನೆ ಅಗತ್ಯವಿದೆ. ಅದನ್ನು ವಿಭಿನ್ನ ದೃಷ್ಟಿಕೋನದಿಂದ ಪರಾಂಬರಿಸಬೇಕು. ನಿಮ್ಮ ಶ್ರೀಮಂತಿಕೆ ಕಂಡು ಕರುಬುವ ಮಂದಿಯ ಜತೆಗೆ ವಾಗ್ವಾದ ಮಾಡುವಂತಾಗುತ್ತದೆ.

ಹಲವು ವಿಚಾರದಲ್ಲಿ ಜನರು ನಿಮ್ಮ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಆಧ್ಯಾತ್ಮಿಕ ಹಾಗೂ ಬೌದ್ಧಿಕ ಎಚ್ಚರವೇ ಈ ವೇಳೆಯಲ್ಲಿ ನಿಮ್ಮ ಸಾಮರ್ಥ್ಯ. ಕಷ್ಟದ ಅವಧಿಯಲ್ಲಿ ನಿಮ್ಮನ್ನು ಕಾಪಾಡಿಕೊಳ್ಳುವ ಅಸ್ತ್ರಗಳೇ ಇವು. ಆರೋಗ್ಯ ವಿಚಾರದಲ್ಲಿ ಸ್ವಲ್ಪ ಹಿನ್ನಡೆ ಆಗಬಹುದು. ನಿಮ್ಮ ಮಕ್ಕಳಿಗೆ ಸಮಸ್ಯೆಗಳಾಗಬಹುದು. ಅವರು ಅನಾರೋಗ್ಯಪೀಡಿತರಾಗಬಹುದು ಅಥವಾ ಸಣ್ಣ-ಪುಟ್ಟ ಪೆಟ್ಟು ಮಾಡಿಕೊಳ್ಳಬಹುದು. ರಹಸ್ಯ ಶತ್ರುಗಳು ನಿಮ್ಮ ವಿರುದ್ಧ ಮಸಲತ್ತು ನಡೆಸುವ ಸಾಧ್ಯತೆಗಳಿವೆ.

ಮುಂದುವರಿಯುವುದು

English summary
Planet Mars entered in Capricorn on May 2nd, 2018. It will transit in Capricorn till November 6th, 2018. What are the results of this transition for 12 zodiac sign from Aries to Pisces, here are the results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X