ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Astrology Tips: ಮದುವೆ ಸಂದರ್ಭದಲ್ಲಿ ಗಮನಿಸಬೇಕಾದ ಜ್ಯೋತಿಷ್ಯ ಸಂಗತಿಗಳು

Google Oneindia Kannada News

ಮದುವೆ ಎಂಬುದು ಅದ್ಯಾವ ಪರಿಯಲ್ಲಿ ನಿರ್ಣಾಯಕ ಹಾಗೂ ಮಹತ್ವದ್ದು ಎಂದು ವಿಶೇಷವಾಗಿ ಹೇಳುವ ಅಗತ್ಯ ಇಲ್ಲ. ಆದರೆ ಬಹಳ ಮಂದಿ ವಧು- ವರನ ನಕ್ಷತ್ರ, ರಾಶಿಗಳು ಗುಣ ಮತ್ತು ಕೂಟ ಕೂಡಿಬಂದರೆ ಆಯಿತು ಅಂತಷ್ಟೇ ನೋಡಿ, ಆಗಿಬರುತ್ತದೆ ಅಥವಾ ಇಲ್ಲ ಎಂದು ಹೇಳಿಬಿಡುತ್ತಾರೆ. ಇತ್ತೀಚೆಗಂತೂ ಆನ್ ಲೈನ್ ನಲ್ಲೇ ತಮಗೆ ತಾವೇ ಸಾಲಾವಳಿ ನೋಡಿಕೊಂಡು ಬಿಡುತ್ತಾರೆ.

ಈ ರೀತಿ ಮಾಡುವುದು ಸರಿಯೇ? ಗುಣ ಮತ್ತು ಕೂಟದ ಮಟ್ಟಿಗೆ ಹೇಳಬೇಕು ಅಂದರೆ ಸರಿ. ಆದರೆ ಮದುವೆ ಅಂದರೆ ಅಷ್ಟೇ ಅಲ್ಲ. ಸಂತಾನ ಹಾಗೂ ಸಂಸಾರ ಸುಖ, ಅವರಿಬ್ಬರಲ್ಲೂ ಗಂಡ ಅಥವಾ ಹೆಂಡತಿಯ ಆಯುಷ್ಯ, ಪರಸ್ಪರರಲ್ಲಿ ಪ್ರೀತಿ- ನಂಬಿಕೆ ಎಷ್ಟಿರುತ್ತದೆ, ಆರೋಗ್ಯ ಇವುಗಳೆಲ್ಲವನ್ನೂ ಗಮನಿಸಬೇಕು.

ಫೆಬ್ರವರಿ 12ರಂದು ಆರು ಗ್ರಹಗಳು ಮಕರ ರಾಶಿಯಲ್ಲಿ; ಇದರ ಫಲಗಳೇನು?ಫೆಬ್ರವರಿ 12ರಂದು ಆರು ಗ್ರಹಗಳು ಮಕರ ರಾಶಿಯಲ್ಲಿ; ಇದರ ಫಲಗಳೇನು?

ಜನ್ಮ ಜಾತಕದಲ್ಲಿನ ಐದು, ಏಳನೇ ಮನೆಗಳನ್ನು ಹಾಗೂ ನವಾಂಶ ಕುಂಡಲಿಯನ್ನು ಸರಿಯಾಗಿ ಪರಾಂಬರಿಸದ ಹೊರತು ಮುಂದುವರಿಯಬಾರದು. ಜನ್ಮ ಜಾತಕದಲ್ಲಿ ಕುಜ, ಶುಕ್ರ ಮತ್ತು ಗುರು ಗ್ರಹದ ಸ್ಥಿತಿ ಕೂಡ ಬಹಳ ಮುಖ್ಯ ಆಗುತ್ತದೆ. ಇನ್ನು ಯಾವುದಾದರೂ ಪ್ರಮುಖ ದೋಷಗಳಿವೆಯೇ ಹಾಗೂ ಅಂಥ ದೋಷಗಳಿದ್ದಲ್ಲಿ ಅವುಗಳನ್ನು ನಿವಾರಿಸುವಂಥ ಯೋಗಗಳು ಇವೆಯೇ ಅಂತಲೂ ನೋಡಬೇಕು.

Marriage Horoscope: What Are The Points To Consider According To Astrology?

ಸ್ತ್ರೀ ಜನ್ಮನಕ್ಷತ್ರ ಕೆಲವು ದೋಷಪೂರಿತವಾಗಿ, ಅದರಲ್ಲೂ ಕೆಲವು ಪಾದ ದೋಷದಿಂದ ಕೂಡಿರುತ್ತದೆ. ಅಂಥವುಗಳು ಯಾವುವು ಎಂಬ ಬಗ್ಗೆ ಸಾಮಾನ್ಯವಾಗಿ ತಿಳಿದಿರುತ್ತದೆ. ಅದರ ಹೊರತಾಗಿ ಕೆಲವು ನಕ್ಷತ್ರ ದೋಷಗಳು ಇರುವುದುಂಟು. ಇದೇನು ಬರೀ ದೋಷ ಹೇಳುತ್ತಾರಲ್ಲ ಅಂದುಕೊಳ್ಳಬೇಡಿ.

ಮೊದಲೇ ಹೇಳಿದಂತೆ ಎಂಥ ದೋಷವನ್ನೂ ಪರಿಹರಿಸುವಂಥ ಅತ್ಯುತ್ತಮ ಯೋಗಗಳು ಸಹ ಇರುತ್ತವೆ. ಅದನ್ನು ಪತ್ತೆ ಮಾಡುವುದಕ್ಕೆ ಹಾಗೂ ಗುರುತಿಸುವುದಕ್ಕೆ ಜ್ಯೋತಿಷ್ಯ ಜ್ಞಾನ, ತಿಳಿವಳಿಕೆ, ಅನುಭವ ಅತ್ಯಗತ್ಯ. ಆದ್ದರಿಂದ ಮದುವೆಗೆ ಮುಂಚೆ ಸಾಲಾವಳಿ ನೋಡುವಾಗ ಪರಿಗಣಿಸಬೇಕಾದ ಸಂಗತಿಗಳು ಈ ಕೆಳಕಂಡಂತಿವೆ.

  • ಗುಣ- ಕೂಟಗಳು, ಜನ್ಮ ನಕ್ಷತ್ರ ದೋಷ, ಲಗ್ನಾತ್, ಚಂದ್ರಾತ್ ಹಾಗೂ ಶುಕ್ರಾತ್ ಅಂದರೆ ಲಗ್ನ, ಚಂದ್ರ ಹಾಗೂ ಶುಕ್ರ ಗ್ರಹ ಇರುವ ಮನೆಗಳಿಂದ ಕುಜ ಗ್ರಹ ಎಷ್ಟನೇ ಮನೆಯಲ್ಲಿದೆ ಎಂಬುದನ್ನು ಹಾಗೂ ಅದೆಷ್ಟು ದೋಷಕಾರಕ ಎಂಬುದನ್ನು ವಧು- ವರ ಇಬ್ಬರಿಗೂ ಲೆಕ್ಕ ಹಾಕಬೇಕು.
  • ಲಗ್ನದಿಂದ ಏಳು, ಐದನೇ ಸ್ಥಾನಗಳ ಪರಾಮರ್ಶೆ ಮಾಡಬೇಕು.
  • ನವಾಂಶ ಕುಂಡಲಿ ಪರಿಶೀಲಿಸಬೇಕು.
  • ಜಾತಕದಲ್ಲಿನ ಯೋಗಗಳನ್ನು ಪರಿಗಣಿಸಬೇಕು.

ಇವೆಲ್ಲವನ್ನೂ ಹೊರತುಪಡಿಸಿದಂತೆ ಜ್ಯೋತಿಷಿಯ ಅನುಭವ ಸಹ ಉಪಯುಕ್ತ ಆಗುತ್ತದೆ. ಮದುವೆಗಾಗಿ ಇಡುವ ಮುಹೂರ್ತ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಮದುವೆಯ ವಿಚಾರದಲ್ಲಿ ಈ ಎಲ್ಲ ಅಂಶಗಳನ್ನೂ ಗಮನಿಸಿ. ನಿಮಗೆಲ್ಲವೂ ಒಳ್ಳೆಯದಾಗಲಿ.

ರಾಘವೇಂದ್ರ ಕುಡ್ಲ

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಕೇಂದ್ರ ತುಳುನಾಡಿನ ಕರಾವಳಿಯ ದೈವಶಕ್ತಿ ಜ್ಯೋತಿಷ್ಯರು ಸ್ತ್ರೀ-ಪುರುಷ ಪ್ರೇಮವಿಚಾರ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಅತ್ತೆ-ಸೊಸೆ ಕಿರಿಕಿರಿ, ವಶೀಕರಣ, ಸಂತಾನಯೋಗ, ಇತ್ಯಾದಿ ಸಮಸ್ಯೆಗಳಿಗೆ, ಅಷ್ಟಮಂಗಳ ಪ್ರಶ್ನೆ, ತಾಂಬೂಲ ಪ್ರಶ್ನೆ, ಜಾತಕ ವಿಶ್ಲೇಷಣೆ ಮಾಡಿ ನಿಮ್ಮ ಇಷ್ಟಾರ್ಥ ಕಾರ್ಯಗಳಿಗೆ 5 ದಿನದಲ್ಲಿ ಪರಿಹಾರ ಶತಸಿದ್ದ. ಮನೆಯ ವಿಳಾಸ: ನಂ.86, ಸಂಪಿಗೆ ರಸ್ತೆ, ಮಲ್ಲೇಶ್ವರಂ ಮೊ: 9945515555.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X