• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕರ ಸಂಕ್ರಾಂತಿ ಫಲಾಫಲ ಯಾರಿಗೆ ಲಾಭ? ಯಾರಿಗೆ ನಷ್ಟ?

By ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
|
   ರಶ್ಮಿಕಾ ಕುಟುಂಬದ ಒಟ್ಟು ಆಸ್ತಿ ವಿವರ ಗೊತ್ತಾ? | RASHMIKA MANDANNA | IT RAID | ONEINDIA KANNADA

   ಶ್ರೀ ಶಾಲಿವಾಹನ ಶಕೆ 1941 ಶ್ರೀವಿಕಾರಿನಾಮ ಸಂವತ್ಸರ ಪುಷ್ಯ ಕೃಷ್ಣ ಚತುರ್ಥಿ ಬುಧವಾರ ದಿ.15-01-2020 ರಂದು 47 ಘಟಿ 50 ಫಳಕ್ಕೆ ಅಂದರೆ ಬುಧವಾರ ಬೆಳಿಗ್ಗೆ 06 ಘಂ 08 ನಿಮಿಷಕ್ಕೆ ಪೂರ್ವಾಫಾಲ್ಗುಣಿ ನಕ್ಷತ್ರ, ತೈತಿಲ ಕರಣದಲ್ಲಿ ಸೂರ್ಯನಾರಾಯಣನು ಧನು ರಾಶಿಯನ್ನು ಬಿಟ್ಟು ಮಕರ ರಾಶಿ ಪ್ರವೇಶ ಮಾಡುತ್ತಾನೆ.

   ಪೂರ್ವಾಫಾಲ್ಗುಣಿ

   ನಕ್ಷತ್ರನಾಮ-

   ಘೋರಾ

   ಬುಧವಾರ

   ವಾರನಾಮ-

   ಮಹೋದರಿ

   ವಾಹನ: ಕತ್ತೆ,

   ಉಪವಾಹನ: ಟಗರು

   ಸಂಕ್ರಾಂತಿ ಪುಣ್ಯ ಕಾಲ : ಮಂಗಳವಾರ ಭೋಗಿ ಹಾಗೂ ಬುಧವಾರ ಹಬ್ಬದ ಆಚರಣೆ ಇದೆ. ಸಂಕ್ರಾಂತಿ ನಂತರದ 40ಘಟಿವರೆಗೆ ಅಂದರೆ 16ತಾಸು ಪುಣ್ಯಕಾಲವಿರುತ್ತದೆ. ಅಂದರೆ ಮರುದಿನ ಬುಧವಾರ ದಿನಾಂಕ 15ರಂದು ಸಾಯಂಕಾಲ 06 ಘ 08 ನಿಮಿಷದವರೆಗೂ ಪರ್ವಪುಣ್ಯಕಾಲದ ಆಚರಣೆಯನ್ನು ಮಾಡಬೇಕು. ಈ ಸಮಯದಲ್ಲಿ ಸ್ನಾನ,ದಾನ,ಪಿತೃತರ್ಪಣ ಮುಂತಾದ ಕಾರ್ಯವನ್ನು ಮಾಡಬೇಕು.

   ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ

   ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ

   ಪಂಡಿತ್ ಶ್ರೀ ಶ್ರೀ ನಿವಾಸ್ ಗುರೂಜಿ

   9886665656- 9886155755

   Www.astrologerdurgasrinivas.com

   ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶ್ರೀ ಆದಿಶಕ್ತಿ ಚೌಡೇಶ್ವರಿ ಅಮ್ಮನವರ ಸರ್ವಾಭಿಷ್ಟ ಸಿದ್ದಿ ಪೂಜೆ ವಿಧಿವಿಧಾನಗಳಿಂದ ಕೆಲವೇ ದಿವಸಗಳಲ್ಲಿ ಪರಿಹಾರ ಶತಸಿದ್ಧ ನಂಬಿಕೆ ಮಾಡಿ ಇದು ಸತ್ಯ

   9886665656 9886155755

   ಸಂಕ್ರಾಂತಿ ಸ್ವರೂಪ

   ಸಂಕ್ರಾಂತಿ ಸ್ವರೂಪ

   ಸಂಕ್ರಾಂತಿ ಸ್ವರೂಪ : ಯೌವನಾವಸ್ಥೆಯ ಪಕ್ಷಿಜಾತಿಯ ಸಂಕ್ರಾಂತಿ ದೇವಿಯು ಪೂರ್ವದಿಂದ ಬಂದು, ದಕ್ಷಿಣಕ್ಕೆ ಮುಖಮಾಡಿ, ವಾಯವ್ಯಕ್ಕೆ ದೃಷ್ಟಿನೆಟ್ಟು, ಪಶ್ಚಿಮದೆಡೆಗೆ ಹೊರಟಿದ್ದಾಳೆ. ಶ್ವೇತ ಬಣ್ಣದ ಹತ್ತಿ ಬಟ್ಟೆ ತೊಟ್ಟು, ದಂಡ ಆಯುಧ ಧರಿಸಿ, ಬೆಳ್ಳಿ ಪಾತ್ರೆಯಲ್ಲಿ ಅಪೂಪ (ಕರಿದ ಸಿಹಿ) ಉಂಡು, ವಜ್ರ, ಹವಳ, ಕೇದಿಗೆ ಪುಷ್ಪ, ಗೋಪಿಚಂದನದಿಂದ ಅಲಂಕೃತಳಾಗಿ ಕುಳಿತಿದ್ದಾಳೆ.

   ಜನ್ಮ ನಕ್ಷತ್ರ ಮೇಲಿಂದ ಸಂಕ್ರಾಂತಿ ಫಲ

   ಜನ್ಮ ನಕ್ಷತ್ರ ಮೇಲಿಂದ ಸಂಕ್ರಾಂತಿ ಫಲ

   ಪಂಥಾಫಲ

   ಮಘಾ

   ಪೂರ್ವಾ

   ಉತ್ತರಾ

   ಭೋಗಫಲ

   ಹಸ್ತಾ

   ಚಿತ್ತಾ

   ಸ್ವಾತಿ

   ವಿಶಾಖಾ

   ಅನುರಾಧಾ

   ಜ್ಯೇಷ್ಠಾ

   ಚಿಂತಾಫಲ

   ಮೂಲಾ

   ಪೂ,ಷಾ

   ಉ,ಷಾ

   ವಸ್ತ್ರಫಲ

   ಶ್ರವಣಾ

   ಧನಿಷ್ಠಾ

   ಶತತಾರಾ

   ಪೂ,ಭಾ

   ಉ,ಭಾ

   ರೇವತಿ

   ಹಾನಿಫಲ

   ಅಶ್ವಿನಿ

   ಭರಣಿ

   ಕೃತ್ತಿಕಾ

   ವಿಪುಲಧನ ಫಲ

   ರೋಹಿಣಿ

   ಮೃಗಶಿರಾ

   ಆದ್ರ್ರಾ

   ಪುನರ್ವಸು

   ಪುಷ್ಯ

   ಆಶ್ಲೇಷಾ

   ಆರು ವಿಧದಲ್ಲಿ ಎಳ್ಳಿನ ಉಪಯೋಗ

   ಆರು ವಿಧದಲ್ಲಿ ಎಳ್ಳಿನ ಉಪಯೋಗ

   ಶ್ಲೋಕ :

   ತೀಲಸ್ನಾಯಿ ತಿಲೋದ್ವರ್ತಿ ತಿಲಹೋಮಿ ತೀಲತರ್ಪಣ: |

   ತಿಲಭುಕ್ ತಿಲದಾತಾಚ ಷಟ್‍ತಿಲಾಃ ಪಾಪನಾಶನಾ: ||

   ಈ ಪರ್ವ ಕಾಲದಲ್ಲಿ ಯಾರು ಆರು ವಿಧದಲ್ಲಿ ಎಳ್ಳಿನ ಉಪಯೋಗವನ್ನು ಮಾಡುತ್ತಾರೋ ಅಂಥವರ ಪಾಪ ನಾಶವಾಗಿ ಪುಣ್ಯವನ್ನು ಸಂಪಾದಿಸುತ್ತಾರೆ. 1) ಎಳ್ಳು ಮಿಶ್ರಿತ ನೀರಿನಿಂದ ಸ್ನಾನ ಮಾಡುವುದು 2) ಎಳ್ಳಿನ ಕಲ್ಕದಿಂದ ಮೈ-ಕೈ ತಿಕ್ಕಿಕೊಳ್ಳುವದು 3) ಎಳ್ಳಿನ ಹೋಮ 4) ಎಳ್ಳು ಮಿಶ್ರಿತ ನೀರಿನ ಸೇವನೆ 5) ಎಳ್ಳನ್ನು ಗುರುಗಳಿಗೆ ಇಲ್ಲವೇ ಬ್ರಾಹ್ಮಣರಿಗೆ ದಾನ ಕೊಡುವದು. 6) ಎಳ್ಳನ್ನು ಸೇವಿಸುವದು, ಹೀಗೆ ಆರು ರೀತಿಯಲ್ಲಿ ಎಳ್ಳನ್ನು ಉಪಯೋಗಿಸಿದರೆ ಅವರಿಗೆ ಪುಣ್ಯ ಪ್ರಾಪ್ತಿ ಆಗುತ್ತದೆ.

   ಮಕರ ಸಂಕ್ರಮಣ - #ಸೂರ್ಯಆರಾಧನೆ

   ಮಕರ ಸಂಕ್ರಮಣ - #ಸೂರ್ಯಆರಾಧನೆ

   ಮಕರ ಸಂಕ್ರಮಣ - #ಸೂರ್ಯನ ಆರಾಧನೆ

   ಆದಿತ್ಯೋ ಹ ವೈ ಪ್ರಾಣೋ ರಯಿರೇವ ಚಂದ್ರಮಾಃ

   ರಯಿರ್ವಾ ಏತತ್ಸರ್ವಂ ಯಃ ಮೂರ್ತಂ ಚ ಅಮೂರ್ತಂ ಚ

   ತಸ್ಮಾತ್ ಮೂರ್ತಿರೇವ ರಯಿಃ ||

   ವಿಶ್ವರೂಪಂ ಹರಿಣಂ ಜಾತವೇದಸಂ ಪರಾಯಣಂ

   ಜ್ಯೋತಿರೇಕಂ ತಪನ್ತಂ ಸಹಸ್ರರಷ್ಮಿಃ ಶತಧಾ ವರ್ತಮಾನಃ

   ಪ್ರಾಣಃ ಪ್ರಜಾನಾಂ ಉದಯತಿ ಏಷಃ ಸೂರ್ಯಃ || ( ಪ್ರಶ್ನೋಪನಿಷತ್ )

   ವೇದೋಪನಿಷತ್ತುಗಳಲ್ಲಿ ವರ್ಣಿಸಿದಂತೆ ಸೂರ್ಯನೇ ಪ್ರಾಣ , ರಯಿ ಎಂದರೆ ಮೂರ್ತ-ಅಮೂರ್ತರೂಪವಾದ ಜೀವ ಜಗತ್ತು. ಜಗತ್ತಿನ ಚಲನೆಗೆ ಸೂರ್ಯನೇ ಕಾರಣ. ಅದ್ವಿತೀಯ ಶಕ್ತಿಸ್ವರೂಪಿ, ವಿಶ್ವರೂಪಿಯಾದ ಸೂರ್ಯನಾರಾಯಣನು ಸಹಸ್ರ ಕಿರಣ ಪ್ರಕಾಶದಿಂದ ಉದಯಿಸಿ ಸಕಲ ಜೀವರಾಶಿಗೆ ಚೇತನಾಶಕ್ತಿಯನ್ನು ತುಂಬುತ್ತಾನೆ.

   ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ

   ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ

   ಖಗೋಳಶಾಸ್ರಜ್ಞ ಶ್ರೀಭಾಸ್ಕರಾಚಾರ್ಯರು,

   ಯಸ್ಯೋದಯಾಸ್ತ ಸಮಯೇ ಸುರಮುಕುಟ ನಿಘೃಷ್ಠ ಚರಣ ಕಮಲೋಪಿ |

   ಕುರುತೇಂಜಲಿಂ ತ್ರಿನೇತ್ರಃ ಸಜಯತಿ ಧಾಮ್ನಾಂ ನಿಧಿ ಸೂರ್ಯಃ ||

   ಯಾವ ಸೂರ್ಯನ ಉದಯಾಸ್ತ ಕಾಲಕ್ಕೆ ದೇವತೆಗಳೂ ತಲೆಬಾಗಿ ನಮಿಸುತ್ತಾರೋ ಅಂತಹ ಸರ್ವಶಕ್ತನಾದ, ಮಹಾನಿಧಿಯಾದ ಸೂರ್ಯನು ವಿಶ್ವಕ್ಕೆ ಜಯವನ್ನು ತಂದು ಕೊಡಲಿ ಎಂದು ಕೊಂಡಾಡಿದ್ದಾರೆ.

   ಗೋಚಾರದಿಂದ ಸೂರ್ಯನು ಪ್ರತಿ ತಿಂಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಾನೆ ಈ ಸೂರ್ಯ ಪರಿಭ್ರಮಣೆಗೆ ಸಂಕ್ರಮಣ ಎಂದು ಕರೆಯುತ್ತಾರೆ. ಕರ್ಕರಾಶಿ ಪ್ರವೇಶದಿಂದ ದಕ್ಷಿಣಾಯನ ಮತ್ತು ಮಕರ ರಾಶಿ ಪ್ರವೇಶದಿಂದ ಉತ್ತರಾಯಣ ಆರಂಭವಾಗುತ್ತದೆ.

   ರವಿಯ ಮಕರ ರಾಶಿ ಪ್ರವೇಶ

   ರವಿಯ ಮಕರ ರಾಶಿ ಪ್ರವೇಶ

   ದೃಕ್ ಸಿದ್ಧಾಂತದ ಪ್ರಕಾರ ಡಿಸೆಂಬರ್ 22ರಿಂದಲೇ ಉತ್ತರಾಯಣ. ಅಂದರೆ ಚಲನಶೀಲವಾದ ಭೂಮಿಯು ಉತ್ತರದೆಡೆಗೆ ವಾಲುತ್ತದೆ. ಚಾಂದ್ರಮಾನ ಪಂಚಾಂಗದ ನಿರಯನ ಗಣನೆಯಂತೆ ಜನವರಿ 15ರಂದು ರವಿಯ ಮಕರ ರಾಶಿ ಪ್ರವೇಶದಿಂದ ಉತ್ತರಾಯಣ ಪ್ರಾರಂಭವಾಗುತ್ತದೆ.

   ಇದು ದೇವತೆಗಳಿಗೆ ಹಗಲು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಶ್ರೀಭೀಷ್ಮಾಚಾರ್ಯರು ಶರಶಯ್ಯೆಯ ಮೇಲೆ ಮಲಗಿ ಧರ್ಮೋಪದೇಶ ಮಾಡಲು ಹಾಗೂ ದೇಹತ್ಯಾಗ ಮಾಡಲು ಉತ್ತರಾಯಣಕ್ಕಾಗಿ ಕಾದಿದ್ದರು ಎಂಬ ಉಲ್ಲೇಖಗಳಿವೆ.

   ಹಬ್ಬ-ಜಾತ್ರೆ-ಉತ್ಸವಗಳ ಕಾಲ

   ಹಬ್ಬ-ಜಾತ್ರೆ-ಉತ್ಸವಗಳ ಕಾಲ

   ಆದ್ದರಿಂದ ಸಂಕ್ರಮಣದ ಕಾಲದಲ್ಲಿ ಸ್ನಾನ-ದಾನ ಮತ್ತು ದೇವಋಷಿ-ಪಿತೃ ತರ್ಪಣಕ್ಕೆ ವಿಶೇಷ ಮಹತ್ವವಿದೆ. ದೃಷ್ಟ ಕರ್ಮಗಳನ್ನು ದೃಕ್ ಸಿದ್ಧಾಂತದಂತೆ ಹಾಗೂ ಅದೃಷ್ಟ ಕರ್ಮಗಳಾದ ಹಬ್ಬ, ಹರಿದಿನ, ಪರ್ವಕಾಲ, ವ್ರತಗಳ ಆಚರಣೆ, ಮೊದಲಾದ ಧಾರ್ಮಿಕ ಕಾರ್ಯಗಳನ್ನು ನಿರಯನ ಗಣನೆಯಂತೆ ಆಚರಿಸಬೇಕು.

   ಆದ್ದರಿಂದ ಮಕರ ಸಂಕ್ರಮಣವು ಹಬ್ಬ-ಜಾತ್ರೆ-ಉತ್ಸವಗಳ ಕಾಲವಾಗಿದೆ. ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಗೆ ಆಸ್ಸಾಂನಲ್ಲಿ ಮಾಘಬಿಹು ಎನ್ನುತ್ತಾರೆ. ದಕ್ಷಿಣ ಭಾರತದ ಕೇರಳ ಮುಂತಾದ ರಾಜ್ಯದಲ್ಲಿ ಪೊಂಗಲ್, ಮಾಟ್ಟು ಪೊಂಗಲ್, ತೈ ಪೊಂಗಲ್, ಮಕರ ವಾವು ಹಾಗೂ ಪಂಜಾಬನಲ್ಲಿ ಲೊಹರಿ ಎಂದು ಆಚರಿಸುತ್ತಾರೆ.

   ಸಂಕ್ರಾಂತಿ ಕೃಷಿಕರ ಹಬ್ಬ

   ಸಂಕ್ರಾಂತಿ ಕೃಷಿಕರ ಹಬ್ಬ

   ಸಂಕ್ರಾಂತಿ ಕೃಷಿಕರ ಹಬ್ಬ ಆದ್ದರಿಂದ ದನಕರುಗಳಿಗೆ, ಹಸಿಧಾನ್ಯಗಳಗೆ, ಕೃಷಿ ಉಪಯುಕ್ತ ಉಪಕರಣಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಜಾತ್ರೆ-ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ, ಶಕ್ತಿಪ್ರದರ್ಶನ, ಚಕ್ಕಡಿ ಓಟ, ಜಲ್ಲಿಕಟ್ಟು ಮುಂತಾದ ಆಟಗಳ ಆಯೋಜನೆ ಮಾಡಲಾಗುತ್ತದೆ.

   ಹಬ್ಬವನ್ನು ಮೂರುದಿನ ಆಚರಿಸುವದು ರೂಢಿಯಲ್ಲಿದೆ. ಮೊದಲದಿನ ‘ಭೋಗಿ' ಅಂದು ಬೆಳಗ್ಗೆ ಕಬ್ಬು, ಬಾರಿಹಣ್ಣು, ಬೆಳಸಿ, ಸುಲಗಾಯಿ, ಬದನೆ, ತಪ್ಪಲು ಉಳ್ಳಾಗಡ್ಡಿ,ಬೆಣ್ಣೆ, ಬೆಲ್ಲ ಸಹಿತವಾಗಿ ಕಾಯಿ, ಸೀರೆ, ಕಾಡಿಗೆ, ಕನ್ನಡಿ, ಹಣಿಗೆ ಮುಂತಾದ ವಸ್ತುಗಳನ್ನಿಟ್ಟು ಸುಮಂಗಲಿಯರಿಗೆ ಮರದಬಾಗಿನ ಕೊಡುವರು. ಸಾಯಂಕಾಲ ಕಬ್ಬು, ಸಕ್ಕರೆ ಅಚ್ಚು, ಹಣ್ಣುಗಳಿಂದ ಹಣ್ಣೆರೆದು ಆರತಿ ಮಾಡುವರು ಅಲ್ಲದೇ ದಿನಬಳಕೆಯ ವಸ್ತುಗಳಾದ ಲೋಟ, ತಟ್ಟೆ, ಬಟ್ಟಲು, ಮುಂತಾದ ಪಾತ್ರೆಗಳನ್ನು ಹಾಗೂ ಮಕ್ಕಳಿಗೆ ಪೆನ್ನು, ಪುಸ್ತಕ, ಆಟದ ಸಾಮಾನುಗಳನ್ನು ಹಂಚುತ್ತಾರೆ ಇದನ್ನು ‘ಲುಟಾಯಿಸುವದು' ಅಥವಾ ‘ಬೀರುವದು' ಎನ್ನುವರು.

   ಎರಡನೇ ದಿನ ಸಂಕ್ರಮಣ ಪುಣ್ಯಕಾಲ

   ಎರಡನೇ ದಿನ ಸಂಕ್ರಮಣ ಪುಣ್ಯಕಾಲ

   ಎರಡನೇ ದಿನ ಸಂಕ್ರಮಣ ಅಂದು ಪರ್ವಪುಣ್ಯಕಾಲ ಇರುತ್ತದೆ. ಸಂಕ್ರಾಂತಿಯ ನಂತರದ 16ತಾಸಿನವರೆಗೆ ಪುಣ್ಯಕಾಲ ಇರುತ್ತದೆ. ಈ ಸಮಯದಲ್ಲಿ ಸುಮುದ್ರ, ನದಿ, ಸಂಗಮ ಸ್ಥಳಗಳಲ್ಲಿ ಸ್ನಾನ ಮಾಡುವದು ವಿಶೇಷ.

   ‘ತಿಲಸ್ನಾಯೀ ತಿಲೋದ್ವರ್ತಿ ತಿಲಹೋಮಿ ತಿಲೋದಕಿ | ತಿಲಭುಕ್ ತಿಲದಾತಾ ಚ ಷಟ್ ತಿಲಾ ಪಾಪನಾಶನಾಃ ||'

   ಪುಣ್ಯಕಾಲದಲ್ಲಿ ಎಳ್ಳಿನ ಚಟ್ಟನ್ನು ಹಚ್ಚಿಕೊಂಡು ಎಳ್ಳು ಮಿಶ್ರಿತ ನೀರಿನಿಂದ ಸ್ನಾನ ಮಾಡುವದು, ಎಳ್ಳಿನಿಂದ ಹೋಮ ಮಾಡುವದು, ಎಳ್ಳಿನಿಂದ ತರ್ಪಣ ಕೊಡುವದು, ಎಳ್ಳನ್ನು ಸೇವಿಸುವದು ಹಾಗೂ ಬಂಧುಮಿತ್ರರಿಗೂ ಕೊಡುವದು ಹೀಗೆ ಎಳ್ಳನ್ನು ಆರುವಿಧದಲ್ಲಿ ಉಪಯೋಗ ಮಾಡುವುದರಿಂದ ಪಾಪನಾಶವಾಗುತ್ತದೆ. ಮನೆಮನೆಗೂ ಹೋಗಿ ಎಳ್ಳುಬೆಲ್ಲ ಕೊಟ್ಟು ಮಧುರವಾಗಿ ಮಾತನಾಡಿ ಹಬ್ಬದ ಶುಭಾಶಯ ಕೋರುವದು ಸಂಪ್ರದಾಯ.

   ಸಂಕ್ರಮಣ ಕರಿ

   ಸಂಕ್ರಮಣ ಕರಿ

   ಕೊನೆಯದಿನಕ್ಕೆ ಸಂಕ್ರಮಣ ಕರಿ ಎನ್ನುತ್ತಾರೆ. ಇದನ್ನು ತೊಡಕು ಎನ್ನುವರು. ವಿಘ್ನ ಪರಿಹಾರಕ್ಕೆ ಈ ದಿನ ಶ್ರೇಷ್ಟವಾಗಿದೆ. ಹೊಸದಾಗಿ ಮದವೆಯಾದ ಮೊದಲಗಿತ್ತಿಗೆ ಕಪ್ಪು ಸೀರೆ, ಕಪ್ಪು ಬಳೆ, ಕಪ್ಪು ಬಣ್ಣದ ಆಭರಣದಿಂದ ಅಲಂಕರಿಸಿ ಆರತಿ ಮಾಡಿ ದೃಷ್ಟಿ ತೆಗೆಯುವ ವಿಶಿಷ್ಟ ಸಂಪ್ರದಾಯವಿದೆ. ಅದರಂತೆ ಹೊಸದಾಗಿ ಖರೀದಿಸಿದ ದನಕರುಗಳು, ಯಂತ್ರೋಪಕರಣಗಳು, ಆಸ್ತಿ, ವಸ್ತು, ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ದಿನ ಶುಭಕಾರ್ಯ ಅಥವಾ ಮಹತ್ವದ ಕಾರ್ಯಗಳಿಗೆ ವಜ್ರ್ಯವಾಗಿದೆ.

   ಶ್ರೀಕೃಷ್ಣಾರ್ಪಣಮಸ್ತು

   ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ

   ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ

   ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ

   9886155755

   ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್

   9886665656-

   Www.astrologerdurgasrinivas.com

   English summary
   Makar Sankranti Special: What is the Astrological Significance of this day and how Rashiphala Jyotishya to all rashis get information from Pandit Srinivas Guruji.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X