• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Makar Sankranti 2022: ಸೂರ್ಯನ ಸಂಚಾರದಿಂದ ಈ ರಾಶಿಗಳು ಸಂಕಷ್ಟಕ್ಕೀಡಾಗಲಿವೆ

|
Google Oneindia Kannada News

ಮಕರ ಸಂಕ್ರಾಂತಿಯಂದು ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದು ಹಲವಾರು ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ಈ ದಿನ ಪವಿತ್ರ ಸ್ನಾನ ಮಾಡುವುದು ಮತ್ತು ಅಗತ್ಯವಿರುವ ವಸ್ತುಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹಿಂದೂ ಸಂಪ್ರದಾಯಗಳ ಪ್ರಕಾರ, ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ಎಂಟು ಗಂಟೆಗಳ ಮೊದಲು ಸ್ನಾನ ಮಾಡುವುದು, ಸೂರ್ಯನನ್ನು ಪೂಜಿಸುವುದು ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ. ಮಕರ ಸಂಕ್ರಾಂತಿಯಂದು ಕಪ್ಪು ಎಳ್ಳು, ಬೆಲ್ಲ, ಖಿಚಡಿ, ಕಂಬಳಿ ಮತ್ತು ಕಟ್ಟಿಗೆಯ ದಾನಕ್ಕೆ ವಿಶೇಷ ಮಹತ್ವವಿದೆ. ಜನವರಿ 14ರ ನಂತರ ಮದುವೆ, ಗೃಹಪ್ರವೇಶ ಮುಂತಾದ ಶುಭ ಕಾರ್ಯಗಳು ಆರಂಭವಾಗಲಿವೆ.

ಮಕರ ಸಂಕ್ರಾಂತಿಯ ದಿನದಂದು ಮಕರ ರಾಶಿಯಲ್ಲಿ ಸೂರ್ಯನ ಆಗಮನದಿಂದಾಗಿ ಈ ಆರು ಗ್ರಹಗಳಲ್ಲಿ ಕೆಲವು ಶುಭ ಮತ್ತು ಅಶುಭ ಪರಿಣಾಮಗಳಿವೆ. ಸೂರ್ಯ ಮತ್ತು ಶನಿ ಸಂಯೋಗ ಅಥವಾ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವುದರಿಂದ ಮೇಷ, ವೃಷಭ, ಮಿಥುನ, ಕನ್ಯಾ, ಧನು, ಮಕರ ಮತ್ತು ಮೀನ ರಾಶಿಯವರಿಗೆ ಕೆಲ ವಿಷಯದಲ್ಲಿ ಪರಿಣಾಮ ಬೀಳಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಮ್ಮ ಜಾತಕದಲ್ಲಿ ಸೂರ್ಯ ಮತ್ತು ಶನಿಯ ದುಷ್ಪರಿಣಾಮಗಳಿಂದ ಬಳಲುತ್ತಿರುವ ಭಕ್ತರು ಮಕರ ಸಂಕ್ರಾಂತಿಯಂದು ಸೂರ್ಯನನ್ನು ಆರಾಧಿಸಬೇಕು ಎಂದು ಹೇಳಲಾಗುತ್ತದೆ. ಇದರಿಂದಾಗಿ ಭಕ್ತಾದಿಗಳಿಗೆ ಸರ್ಕಾರಿ ನೌಕರಿ ದೊರೆಯುವುದು, ಆತ್ಮಸ್ಥೈರ್ಯ ವೃದ್ಧಿಯಾಗುವುದು, ಆರೋಗ್ಯದ ಖಾಯಿಲೆಗಳಾದ ತಲೆನೋವು, ನೇತ್ರ ರೋಗಗಳು, ಅಸ್ಥಿ ರೋಗಗಳು, ಹೃದ್ರೋಗಗಳಿಂದ ಮುಕ್ತಿ ದೊರೆಯುವುದು.

ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಶುಭ ಮತ್ತು ಅಶುಭ ಪರಿಣಾಮಗಳನ್ನು ಇಲ್ಲಿ ನೋಡೋಣ.

ಮೇಷ ರಾಶಿ: ಮೇಷ ರಾಶಿಯ ಹತ್ತನೇ ಮನೆಯಲ್ಲಿ ಸೂರ್ಯ ಮತ್ತು ಬುಧ ಗ್ರಹದ ಉಪಸ್ಥಿತಿಯು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಕೆಲಸದ ಸ್ಥಳದಲ್ಲಿ ಅಸಮಾನತೆಯನ್ನು ಎದುರಿಸಬೇಕಾಗಬಹುದು. ವರ್ಗಾವಣೆಯ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ನಷ್ಟ ಉಂಟಾಗಬಹುದು.

 Makar Sankranti 2022: Sun Transit in Capricorn effect these Seven zodiac signs

ವೃಷಭ ರಾಶಿ: ಒಂಬತ್ತನೇ ಮನೆಯಲ್ಲಿ ಸೂರ್ಯನ ಉಪಸ್ಥಿತಿಯು ಕುಟುಂಬದ ಸಂತೋಷ ಮತ್ತು ಶಾಂತಿಯನ್ನು ಮರೆಮಾಡುತ್ತದೆ. ತಂದೆಯೊಂದಿಗಿನ ಸಂಬಂಧಗಳು ಹದಗೆಡಬಹುದು. ಕುಟುಂಬದಲ್ಲಿ ಅನಗತ್ಯ ವಿವಾದಗಳು ಉಂಟಾಗಬಹುದು. ಆದ್ದರಿಂದ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಮಿಥುನ ರಾಶಿ: ಎಂಟನೇ ಮನೆಯಲ್ಲಿ ಸೂರ್ಯ ಮತ್ತು ಶನಿ ಒಟ್ಟಿಗೆ ಇರುವುದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಸೇವಿಸುವ ಆಹಾರ ಪೌಷ್ಠಿಕವಾಗಿರುವುದನ್ನು ಗಮನಿಸಿ. ಅಪೌಷ್ಠಿಕ ಆಹಾರದಿಂದ ದೂರವಿರಿ. ನೀವು ದೀರ್ಘ ಪ್ರಯಾಣಕ್ಕೂ ಹೋಗಬಹುದು.
ಕನ್ಯಾ ರಾಶಿ: ಈ ಸಮಯವನ್ನು ನಿಮಗೆ ತುಂಬಾ ಮಂಗಳಕರವೆಂದು ಕರೆಯಲಾಗುವುದಿಲ್ಲ. ಮಗುವಿನ ಕಡೆಯಿಂದ ಉದ್ವೇಗ ಉಂಟಾಗಬಹುದು. ಈ ಸಮಯವು ವಿದ್ಯಾರ್ಥಿಗಳ ಜೀವನದಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ. ಅವನ ಗಮನ ಅಧ್ಯಯನದ ವೇಳೆ ವಿಚಲಿತಗೊಳ್ಳುತ್ತದೆ.

ಧನು ರಾಶಿ: ಈ ಸಮಯವನ್ನು ನಿಮಗೆ ಶುಭ ಎಂದು ಕರೆಯಲಾಗುವುದಿಲ್ಲ. ಕುಟುಂಬದಲ್ಲಿ ಉದ್ವಿಗ್ನ ವಾತಾವರಣವು ನಿಮ್ಮನ್ನು ಕಾಡುತ್ತಿರುತ್ತದೆ. ಈ ಅವಧಿಯಲ್ಲಿ ಸಂಗ್ರಹವಾದ ಸಂಪತ್ತು ಕೂಡ ಕಡಿಮೆಯಾಗುತ್ತದೆ. ಹೀಗಾಗಿ ಖರ್ಚಿನ ಕಡೆಗೆ ಗಮನವಿರಲಿ. ಮೋಸ ಹೋಗುವವರಿಂದ ದೂರವಿರಿ.

ಮಕರ ರಾಶಿ: ನಿಮಗೆ ಹಣಕಾಸಿನ ಸಮಸ್ಯೆಗಳು ಕಾಡಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನೀವು ಕೆಲವು ಗಂಭೀರ ಕಾಯಿಲೆಗಳಿಗೆ ಬಲಿಯಾಗಬಹುದು. ಈ ಸಮಯದಲ್ಲಿ ನೀವು ಯೋಗ ಮಾಡುವುದು ಉತ್ತಮ.

ಮೀನ ರಾಶಿ: ಈ ಅವಧಿಯಲ್ಲಿ ನಿಮ್ಮ ಅಹಂಕಾರವನ್ನು ಬದಿಗಿರಿಸಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಶಾಂತವಾಗಿ ಮತ್ತು ತಾಳ್ಮೆಯಿಂದ ಸಂವಹನ ನಡೆಸಿ. ಈ ಅವಧಿಯಲ್ಲಿ ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬಹುದು. ಹೀಗಾಗಿ ಸಾಧ್ಯವಾದಷ್ಟು ಶಾಂತವಾಗಿರಿ. ತಾಳ್ಮೆಯಿಂದ ವರ್ತಿಸಿ ಮಾತನಾಡುವುದು ಉತ್ತಮ.

English summary
Makar Sankranti 2022, Sun will enter the Capricorn zodiac sign that will bring good news for several zodiac signs, but these 7 zodiac signs will be affected. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X