ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 27ಕ್ಕೆ ಮಕರದಲ್ಲಿ ಕೇತುಗ್ರಸ್ತ ಚಂದ್ರಗ್ರಹಣ, ಆಚರಣೆ ವಿಚಾರ

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

Recommended Video

ಜುಲೈ 27, 2018 ಕೇತುಗ್ರಸ್ತ ಚಂದ್ರಗ್ರಹಣ : ಈ ದಿನದ ಆಚರಣೆಗಳೇನು?

ವಿಳಂಬಿ ನಾಮ ಸಂವತ್ಸರದ ಆಷಾಢ ಶುಕ್ಲ ಹುಣ್ಣಿಮೆ ಅಂದರೆ 27-07-2018ರ ಶುಕ್ರವಾರದಂದು ಉತ್ತರಾಷಾಢ ಮತ್ತು ಶ್ರವಣ ನಕ್ಷತ್ರಗಳಲ್ಲಿ, ಮಕರ ರಾಶಿಯಲ್ಲಿ, ಮೇಷ, ವೃಷಭ ಮತ್ತು ಮಿಥುನ ಲಗ್ನಗಳಲ್ಲಿ, ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತದೆ.

ಗ್ರಹಣದ ಸ್ಪರ್ಶ ಕಾಲ : ರಾತ್ರಿ 11.54

ಗ್ರಹಣ ಮಧ್ಯ ಕಾಲ : ಮಧ್ಯರಾತ್ರಿ 1.52

ಗ್ರಹಣ ಮೋಕ್ಷ ಕಾಲ : ರಾತ್ರಿ 3.49

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೊನೆಗೊಳಿಸಲಿದೆಯೇ ಜುಲೈ ಚಂದ್ರ ಗ್ರಹಣ?ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೊನೆಗೊಳಿಸಲಿದೆಯೇ ಜುಲೈ ಚಂದ್ರ ಗ್ರಹಣ?

ಆ ದಿನದಂದು ಗ್ರಹಣವು ಭಾರತ ದೇಶದಲ್ಲಿ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ. ಆಷಾಢ ಮಾಸದ ಪೌರ್ಣಮಿಯಂದು ಚಂದ್ರ ಗ್ರಹಣ ಸಂಭವಿಸಲಿದ್ದು, ಸ್ಪರ್ಶ ಕಾಲ ರಾತ್ರಿ 11.54 ರಿಂದ ಪ್ರಾರಂಭವಾಗಿ ರಾತ್ರಿ 3.49ಕ್ಕೆ ಮೋಕ್ಷ ಕಾಲವಾಗಿರುತ್ತದೆ.

ಭೋಜನ ವಿಚಾರ :

ಆ ದಿನ ಸೂರ್ಯೋದಯಾದಿ ಹಗಲು 12.29 ರವರೆಗೆ ಆಹಾರ ಸೇವಿಸಬಹುದು. ಬಾಲಕರು, ವೃದ್ಧರು, ರೋಗಿಗಳು, ಅಶಕ್ತರು ಆ ದಿನ ಹಗಲು 3.38 ರವರೆಗೂ ಆಹಾರ ಸೇವಿಸಬಹುದು.

ತರ್ಪಣ ವಿಚಾರ :

ಆ ದಿನ ಗ್ರಹಣ ಮಧ್ಯಕಾಲಾನಂತರ ಅಂದರೆ ರಾತ್ರಿ 1.51ರ ನಂತರ ತರ್ಪಣ ನೀಡಬಹುದು.

ಶ್ರಾದ್ಧ ವಿಚಾರ :

27-07-2018ರ ಶುಕ್ರವಾರ ನಡೆಸತಕ್ಕ ಆಷಾಢ ಶುಕ್ಲ ಪೌರ್ಣಮಿ ಶ್ರಾದ್ಧವನ್ನು ಮಾರನೇ ದಿನ (28-07-2018) ಶನಿವಾರ ನಡೆಸಬೇಕು.

ಗ್ರಹಣ ಶಾಂತಿ ಮಾಡಿಸಿಕೊಳ್ಳಬೇಕಾದವರು ಯಾರು?

ಗ್ರಹಣ ಶಾಂತಿ ಮಾಡಿಸಿಕೊಳ್ಳಬೇಕಾದವರು ಯಾರು?

ಉತ್ತರಾಷಾಢ, ಶ್ರವಣ ನಕ್ಷತ್ರದವರು, ಮಕರ, ಧನುಸ್ಸು ರಾಶಿಯವರು ಇಲ್ಲಿ ಕೊಟ್ಟಿರುವ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದುಕೊಂಡು, ಗ್ರಹಣ ಮುಗಿಯುವವರೆಗೂ ತಮ್ಮಲ್ಲಿಟ್ಟುಕೊಂಡು, ಗ್ರಹಣ ಮೋಕ್ಷಾ ನಂತರ ದಕ್ಷಿಣೆ ಸಮೇತ ದಾನ ಮಾಡತಕ್ಕದ್ದು.

ಶ್ಲೋಕ :

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |

ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||


ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||


ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |

ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 || ‌‌

ಗ್ರಹಣ ಕಾಲದಲ್ಲಿನ ಆಚರಣೆಗಳು ಏನು?

ಗ್ರಹಣ ಕಾಲದಲ್ಲಿನ ಆಚರಣೆಗಳು ಏನು?

ಗ್ರಹಣದ ಆಚರಣೆ ಶಾಸ್ತ್ರದ ವಚನ, ಎಂದರೆ ಭಗವಂತನ ಆದೇಶ. ಪರಮಾತ್ಮ ನಮ್ಮ ಬದುಕಿಗೆ ಹಾಕಿದ ಸಂವಿಧಾನ ಅದು. ಅವಶ್ಯವಾಗಿ ಆಚರಣೆ ಮಾಡಲೇಬೇಕು. ಗ್ರಹಣ ಕಾಲವನ್ನು ಸೂತಕ ಸಮಯ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಆ ಸಮಯ ಬಹಳ ಅಶುಭ ಕಾಲವಾಗಿರುತ್ತದೆ.

ಗ್ರಹಣದ ಆರಂಭ ಹಾಗೂ ಅಂತ್ಯಗಳಲ್ಲಿ ಧರಿಸಿದ ಬಟ್ಟೆಯ ಸಮೇತ ಸ್ನಾನವನ್ನು ಮಾಡಲೇಬೇಕು.

ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ. ‌ ‌

ಚಂದ್ರ ಗ್ರಹಣದ ಸೂತಕವು ಗ್ರಹಣ ಆರಂಭದ ಒಂಬತ್ತು ಗಂಟೆಗಳ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ.

ಗ್ರಹಣ ಕಾಲದಲ್ಲಿ ಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು.

ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು.‌

ಜನನ ಅಥವಾ ಮೃತ ಶೌಚ ಇರುವವರಿಗೆ ಅನ್ವಯ

ಜನನ ಅಥವಾ ಮೃತ ಶೌಚ ಇರುವವರಿಗೆ ಅನ್ವಯ

ದೇವಾಲಯ ಅಥವಾ ಪೂಜಾ ಸ್ಥಳಗಳಿಗೆ ಪ್ರವೇಶ ಹಾಗೂ ದೇವರ ಮೂರ್ತಿಗಳ ಸ್ಪರ್ಶವನ್ನು ಮಾಡಬಾರದು.

ಶೌಚಾಲಯದ ಬಳಕೆಯನ್ನು ಮಾಡಬಾರದು.

ಗ್ರಹಣ ಕಾಲದಲ್ಲಿ ಅಲಂಕಾರ ಮಾಡಿಕೊಳ್ಳಬಾರದು.

"ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ" ಎಲ್ಲಾ ವರ್ಣದವರೂ ಗ್ರಹಣ ಕಾಲದಲ್ಲಿ ಮೈಲಿಗೆಯನ್ನು ಆಚರಿಸಬೇಕು.


ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಗೋಮೂತ್ರವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬೇಕು. ‌ ‌ ‌

ಜನನ ಶೌಚವಿರುವವರು, ಮೃತ ಶೌಚವಿರುವವರು ಮತ್ತು ರಜಸ್ವಲೆಯಾದವರೂ ಸಹ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಆದರೆ ಅವರು ಜಪ ಪಾರಾಯಣಗಳನ್ನು ಮಾಡಬಾರದು.

ಗ್ರಹಣ ಕಾಲದಲ್ಲಿ ಸಮುದ್ರ ಸ್ನಾನ ಸರ್ವೋತ್ತಮ

ಗ್ರಹಣ ಕಾಲದಲ್ಲಿ ಸಮುದ್ರ ಸ್ನಾನ ಸರ್ವೋತ್ತಮ

ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ.

ಗ್ರಹಣ ಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು ಎಂದು ಯಮನ ಆದೇಶವಿದೆ. ತೀರ ಅಶಕ್ತರಾದವರು ಮಾತ್ರ ಬಿಸಿನೀರಿನಿಂದ ಸ್ನಾನವನ್ನು ಮಾಡಬೇಕು.

ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯ ಇದೆ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆಯನ್ನು ಹಾಕಿರಬೇಕು.

ಗ್ರಹಣ ಆರಂಭದಿಂದ ಅಂತ್ಯದ ಕಾಲದವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು. ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು. ‌

English summary
Lunar eclipse in Capricorn zodiac sign on July 27th. What are the rituals to be follow on that day, which zodiac sign people should be careful explained in this article by well known astrologer pandit Vittala Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X