ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ ಮೊದಲ ಚಂದ್ರ ಗ್ರಹಣ: ನಿಮ್ಮನಿಮ್ಮ ರಾಶಿಯ ಜಾತಕಫಲ ಇಲ್ಲಿದೆ

By ಕೆ.ಶ್ರೀಧರ ಭಟ್
|
Google Oneindia Kannada News

ವರ್ಷದ ಮೊದಲ ಚಂದ್ರ ಗ್ರಹಣ ಸೋಮವಾರ (ಮೇ 16) ಬೆಳಗ್ಗೆ 7.02ಕ್ಕೆ ಆರಂಭವಾಗಿ 12.20ಕ್ಕೆ ಮೋಕ್ಷವಾಗಲಿದೆ. ತುಲಾ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸಲಿದೆ. ಚಂದ್ರ ಗ್ರಹಣದ ಪ್ರಭಾವವು ಅವರವರ ರಾಶಿಯ ಮೇಲೆ ಪರಿಣಾಮವನ್ನು ಬೀರಲಿದೆ.

ಆದರೆ, ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಅಮೆರಿಕಾದ ಅರ್ಧಭಾಗ, ಮಧ್ಯಪ್ರಾಚ್ಯ ರಾಷ್ಟ್ರಗಳ ಕೆಲವು ಭಾಗ, ದಕ್ಷಿಣ ಅಮೆರಿಕಾದ ಎಲ್ಲಾ ಕಡೆ, ಆಫ್ರಿಕಾ ಖಂಡದ ದೇಶಗಳು, ಪಶ್ಚಿಮ ಯುರೋಪ್ ಮುಂತಾದ ಭಾಗಗಳಲ್ಲಿ ಈ ಗ್ರಹಣ ಗೋಚರಿಸಲಿದೆ. ಗ್ರಹಣದ ನೇರ ಪ್ರಸಾರ ನಾಸಾದ ವೆಬ್ಸೈಟಿನಲ್ಲಿ ಲಭ್ಯವಾಗಲಿದೆ.

Lunar Eclipse 2022: ಭಾರತದಲ್ಲಿ 2022ರ ಮೊದಲ ಚಂದ್ರಗ್ರಹಣ ಯಾವಾಗ?Lunar Eclipse 2022: ಭಾರತದಲ್ಲಿ 2022ರ ಮೊದಲ ಚಂದ್ರಗ್ರಹಣ ಯಾವಾಗ?

ಬೆಳಗಿನ ಅವಧಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಗೋಚರಿಸುವ ಸಾಧ್ಯತೆ ಕಮ್ಮಿ. ಈ ವರ್ಷದಲ್ಲಿ ಎರಡನೇ ಬಾರಿಗೆ ಚಂದ್ರ ಗ್ರಹಣ ನವೆಂಬರ್ ಎಂಟರಂದು ಸಂಭವಿಸಲಿದೆ. ಈ ಗ್ರಹಣವೂ ಭಾರತದಲ್ಲಿ ಗೋಚರಿಸುವುದಿಲ್ಲ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೊದಲನೇ ಚಂದ್ರ ಗ್ರಹಣದಿಂದ, ಕೆಲವು ರಾಶಿಯವರಿಗೆ ಒಳ್ಳೆಯದಾಗುತ್ತದೆ, ಕೆಲವೊಂದು ರಾಶಿಯವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸಂಕ್ಷಿಪ್ತವಾಗಿ ಈ ಚಂದ್ರ ಗ್ರಹಣದ ಗೋಚರ ಫಲ ರಾಶಿಗಳ ಮೇಲೆ ಹೇಗಿರಲಿದೆ. ಮುಂದೆ ಓದಿ..

ಭಾಗಶಃ ಚಂದ್ರಗ್ರಹಣ ನೋಡುವುದು ಶುಭವೋ, ಅಶುಭವೋ?ಭಾಗಶಃ ಚಂದ್ರಗ್ರಹಣ ನೋಡುವುದು ಶುಭವೋ, ಅಶುಭವೋ?

 ಗ್ರಹಣದ ಗೋಚರ ರಾಶಿ - ಮೇಷ

ಗ್ರಹಣದ ಗೋಚರ ರಾಶಿ - ಮೇಷ

ಮೇಷ: ಈ ಗ್ರಹಣದ ಗೋಚರ ಈ ರಾಶಿಯ ಮೇಲೆ ಇರಲಿದೆ, ಕೇತುವು ಏಳನೇ ಮನೆಯಲ್ಲಿ ಇರುವುದರಿಂದ ಮತ್ತು ಎಂಟನೇ ಮನೆಯಲ್ಲಿ ಗ್ರಹಣ ಸಂಭವಿಸುವುರಿಂದ ಅನಿರೀಕ್ಷಿತ ಘಟನೆ ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ, ಪ್ರಮುಖವಾಗಿ ಈ ರಾಶಿಯವರು ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಸೂಕ್ತ. ಸುಖಃಶಾಂತಿಗೆ ಭಂಗವಾಗುವ ಸಾಧ್ಯತೆಯಿದೆ, ಜೊತೆಗೆ, ವ್ಯಾವಹಾರಿಕವಾಗಿ ಜಾಗರೂಕತೆಯಿಂದ ಇರುವುದು ಸೂಕ್ತ.

 ಗ್ರಹಣದ ಗೋಚರ ರಾಶಿ - ವೃಷಭ

ಗ್ರಹಣದ ಗೋಚರ ರಾಶಿ - ವೃಷಭ

ವೃಷಭ: ಮೂರನೇ ಮತ್ತು ಏಳನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ. ಕೇತು ಆರನೇ ಮನೆಯಲ್ಲಿ ಇರುವುದರಿಂದ ಗ್ರಹಣದ ಗೋಚರ ಈ ರಾಶಿಯವರ ಮೇಲೂ ಇರಲಿದೆ. ಮನೆಯಲ್ಲಿ ಅಥವಾ ವ್ಯಾವಹಾರಿಕವಾಗಿ ಪಾಲುದಾರರ ಜೊತೆಗೆ ಯಾವುದೇ ವಾದವಿವಾದ ಮಾಡಿಕೊಳ್ಳಬಾರದು. ಕೆಲಸದ ಜಾಗದಲ್ಲಿ ಸಹದ್ಯೋಗಿಗಳಿಂದ ಸಂಕಷ್ಟ ಎದುರಾಗಬಹುದು. ಬುಧ ಉತ್ತಮ ಸ್ಥಾನದಲ್ಲಿ ಇಲ್ಲದೇ ಇರುವುದರಿಂದ ಯಾವುದೇ ಮಹತ್ವದ ನಿರ್ಧಾರಗಳನ್ನು ಸದ್ಯದ ಮಟ್ಟಿಗೆ ತೆಗೆದುಕೊಳ್ಳುವುದು ಸೂಕ್ತವಲ್ಲ. ಆರೋಗ್ಯದ ವಿಚಾರದಲ್ಲಿ ಎಚ್ಚರ.

 ಗ್ರಹಣದ ಗೋಚರ ರಾಶಿ - ಕಟಕ

ಗ್ರಹಣದ ಗೋಚರ ರಾಶಿ - ಕಟಕ

ಕಟಕ: ಐದನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ. ಕೇತು ನಾಲ್ಕನೇ ಸ್ಥಾನದಲ್ಲಿ ಇರುವುದರಿಂದ, ಈ ರಾಶಿಯವರು ತಮ್ಮ ಮಕ್ಕಳ ಮೆಲೆ ನಿಗಾ ಇಟ್ಟಿಕೊಳ್ಳುವುದು ಸೂಕ್ತ. ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು. ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಏಕಾಗ್ರತೆಯ ಸಮಸ್ಯೆ ಕಾಡಬಹುದು. ಈ ಅವಧಿಯಲ್ಲಿ ಅಶಾಂತಿ ಎದುರಾಗಬಹುದು, ತಾಯಿ ಜೊತೆಗಿನ ಒಡನಾಟದ ವಿಚಾರದಲ್ಲಿ ಸರಿಯಾಗಿರುವುದು ಉತ್ತಮ. ಕೌಟುಂಬಿಕ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಡಿ, ಭಾವೋದ್ವೇಗಕ್ಕೆ ಒಳಗಾಗಬೇಡಿ.

 ಗ್ರಹಣದ ಗೋಚರ ರಾಶಿ - ಮಿಥುನ

ಗ್ರಹಣದ ಗೋಚರ ರಾಶಿ - ಮಿಥುನ

ಮಿಥುನ: ಆರನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ, ಕೇತು ಐದನೇ ಸ್ಥಾನದಲ್ಲಿದ್ದಾನೆ. ಊಟದ ವಿಚಾರದಲ್ಲಿ ಎಚ್ಚರ, ಹೊರಗಡೆಯಿಂದ ತಂದ ಊಟ/ತಿಂಡಿಯನ್ನು ಸದ್ಯ ಸೇವಿಸದೇ ಇರುವುದು ಸೂಕ್ತ. ಊಟದ ವಿಚಾರದಿಂದ ಆರೋಗ್ಯ ಹದೆಗೆಡುವ ಸಾಧ್ಯತೆಯಿದೆ. ಮಂಗಳ ರಾಶಿಯು ದುರ್ಬಲವಾಗಿರುವುದರಿಂದ ಮಕ್ಕಳು ದೊಡ್ಡವರಾಗಿದ್ದರೆ, ಅವರ ಜೊತೆ ಜಗಳವಾಡುವುದು ಸೂಕ್ತವಲ್ಲ. ಪ್ರೀತಿ, ಪ್ರೇಮದ ವಿಚಾರದಲ್ಲೂ ಎಚ್ಚರ. ಗ್ರಹಣಕ್ಕೆ ಮುನ್ನ ಮತ್ತು ನಂತರದ ಕೆಲವು ದಿನಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ.

 ಗ್ರಹಣದ ಗೋಚರ ರಾಶಿ - ಸಿಂಹ

ಗ್ರಹಣದ ಗೋಚರ ರಾಶಿ - ಸಿಂಹ

ಸಿಂಹ: ಹನ್ನೆರಡು ಮತ್ತು ನಾಲ್ಕನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ. ಮೂರನೇ ರಾಶಿಯಲ್ಲಿ ಕೇತು ಇರುವುದರಿಂದ, ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಎಚ್ಚರದಿಂದ ಇರುವುದು ಸೂಕ್ತ. ಇತರ ಕಾರಣಗಳಿಂದಲೂ ಸಮಸ್ಯೆ ಎದುರಾಗಿ, ಖರ್ಚುವೆಚ್ಚಗಳು ಜಾಸ್ತಿಯಾಗಬಹುದು. ತಾಯಿಗೆ ಅನಾರೋಗ್ಯ, ಸಹೋದರರು ಮತ್ತು ನೆರೆಮನೆಯವರ ಜೊತೆಗೆ ವಾಗ್ವಾದಕ್ಕೆ ಇಳಿಯಬೇಡಿ. ಈ ಸಮಯದಲ್ಲಿ ಪ್ರವಾಸಕ್ಕೆ ಹೋಗುವುದು ಸೂಕ್ತವಲ್ಲ. ನಿದ್ರೆಯ ಸಮಸ್ಯೆ, ಅಶಾಂತಿ ಎದುರಿಸಬೇಕಾಗಬಹುದು.

 ಗ್ರಹಣದ ಗೋಚರ ರಾಶಿ - ಕನ್ಯಾ

ಗ್ರಹಣದ ಗೋಚರ ರಾಶಿ - ಕನ್ಯಾ

ಕನ್ಯಾ: ಮೂರನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ, ಈ ಅವಧಿಯಲ್ಲಿ ಮಹತ್ವದ ಆರ್ಥಿಕ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಲ್ಲ. ಅವಳಿ ಮಕ್ಕಳು ಈ ಸಮಯದಲ್ಲಿ ಜಾಗರೂಕತೆಯಿಂದ ಇರಬೇಕು. ಲಗ್ನ ಮತ್ತು ಬುಧ ಈ ಅವಧಿಯಲ್ಲಿ ದುರ್ಬಲವಾಗಿರುವುದರಿಂದ, ವೈಯಕ್ತಿಕ ಮತ್ತು ಔದ್ಯೋಗಿಕವಾಗಿ ಎಚ್ಚರದಿಂದ, ಮಾತಿನ ಮೇಲೆ ನಿಗಾ ಇರುವುದು ಸೂಕ್ತ. ಗ್ರಹಣದ ನಂತರ ಆರ್ಥಿಕ ನಿರ್ಧಾರವನ್ನು ತೆಗೆದುಕೊಳ್ಳಲು ತೊಂದರೆಯಿಲ್ಲ. ಹಾಗಾಗಿ, ಸ್ವಲ್ಪದಿನ ಎಚ್ಚರದಿಂದ, ತಾಳ್ಮೆಯಿಂದ ಇರುವುದು ಸೂಕ್ತ.

 ಗ್ರಹಣದ ಗೋಚರ ರಾಶಿ - ತುಲಾ

ಗ್ರಹಣದ ಗೋಚರ ರಾಶಿ - ತುಲಾ

ತುಲಾ: ಹತ್ತು ಮತ್ತು ಎರಡನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆ. ಕೇತು ಲಗ್ನದಲ್ಲಿ ಇರುವುದರಿಂದ, ಭಾವೋದ್ವೇಗಕ್ಕೆ ಒಳಗಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ಕೆಲಸದ ಜಾಗದಲ್ಲಿ ಅತ್ಯಂತ ತಾಳ್ಮೆ, ಜಾಗರೂಕತೆಯಿಂದ ಇರುವುದು ಸೂಕ್ತ. ಇಲ್ಲದಿದ್ದರೆ ಧನ ಮತ್ತು ಮಾನಹಾನಿಯಾಗುವ ಸಾಧ್ಯತೆಯಿಲ್ಲದಿಲ್ಲ. ಈ ಅವಧಿಯಲ್ಲಿ ಶಾಶ್ವತವಾಗಿ ತೆಗೆದುಕೊಳ್ಳಬೇಕಾಗಿರುವ ನಿರ್ಧಾರದಿಂದ ಹಿಂದಕ್ಕೆ ಸರಿಯುವುದು ಸೂಕ್ತ.

 ಗ್ರಹಣದ ಗೋಚರ ರಾಶಿ - ವೃಶ್ಚಿಕ

ಗ್ರಹಣದ ಗೋಚರ ರಾಶಿ - ವೃಶ್ಚಿಕ

ವೃಶ್ಚಿಕ: ಒಂಬತ್ತನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ, ಯಾತ್ರೆ ಅಥವಾ ಪ್ರವಾಸ ಹೋಗಲು ಇದು ಸೂಕ್ತ ಸಮಯವಲ್ಲ. ತಂದೆಯವರ ಸ್ವಾಸ್ಥ್ಯದಲ್ಲಿ ತೊಂದರೆಯಾಗಬಹುದು. ಲಗ್ನದಲ್ಲಿ ಗ್ರಹಣವಾಗುತ್ತಿರುವುದರಿಂದ ಆತ್ಮಬಲ ಕಮ್ಮಿಯಾಗಬಹುದು ಮತ್ತು ಭಯ ಕಾಡಬಹುದು. ಗ್ರಹಣದ ಆಸುಪಾಸಿನಲ್ಲಿ ಯೋಚನಾ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಗ್ರಹಣದ ನಂತರ ಸ್ನೇಹಿತರು, ಕುಟುಂಬದವರ ಬಲ ಸಿಗುತ್ತದೆ. ಹಾಗಾಗಿ, ಈ ಸಮಯದಲ್ಲಿ ಎಚ್ಚರದಿಂದ ಇರುವುದು ಸೂಕ್ತ.

 ಗ್ರಹಣದ ಗೋಚರ ರಾಶಿ - ಧನು

ಗ್ರಹಣದ ಗೋಚರ ರಾಶಿ - ಧನು

ಧನು: ಎಂಟನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತದೆ, ಅನಿರೀಕ್ಷಿತ ಘಟನೆ ಎದುರಾಗಬಹುದು. ಆರೋಗ್ಯ ಸಂಬಂಧದ ಚಿಂತೆ ಇರಲಿದೆ, ಹೆಚ್ಚಿನ ಖರ್ಚುಗಳು ಈ ಅವಧಿಯಲ್ಲಿ ಆಗಲಿದೆ. ಸ್ನೇಹಿತರಿಂದ ತೊಂದರೆ, ಸಹೋದರರಿಗೆ ಅರೋಗ್ಯ ಸಮಸ್ಯೆ ಎದುರಾಗಬಹುದು. ನಿದ್ರೆಯ ಸಮಸ್ಯೆ ಎದುರಾಗಬಹುದು. ಪ್ರವಾಸಕ್ಕೆ ಹೋಗುವ ಸಮಯ ಇದಲ್ಲ, ಕಾರ್ಪೋರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರುವುದು ಉತ್ತಮ. ಯೋಗ ಧ್ಯಾನದಲ್ಲಿ ತೊಡಗಿಸಿಕೊಂಡರೆ ಸೂಕ್ತ.

 ಗ್ರಹಣದ ಗೋಚರ ರಾಶಿ - ಮಕರ

ಗ್ರಹಣದ ಗೋಚರ ರಾಶಿ - ಮಕರ

ಮಕರ: ಏಳು ಮತ್ತು ಹನ್ನೊಂದನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ, ಈ ಅವಧಿಯಲ್ಲಿ ಮೃದು ಭಾಷಿಯಾಗಿರುವುದು ಉತ್ತಮ. ವ್ಯಾವಹಾರಿಕ ಭಾಷೆ ಸರಿಯಾಗಿರಬೇಕು, ವಿವಾಹಕ್ಕೆ ಸಂಬಂಧ ಪಟ್ಟ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಈ ವಿಚಾರದಲ್ಲಿ ವಿಳಂಬವಾಗಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ವ್ಯಾಪಾರ ಮತ್ತು ಕುಟುಂಬದ ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಹೂಡಿಕೆಯ ವಿಚಾರದಲ್ಲೂ ತುರ್ತು ನಿರ್ಧಾರ ಬೇಡ.

 ಗ್ರಹಣದ ಗೋಚರ ರಾಶಿ - ಕುಂಭ

ಗ್ರಹಣದ ಗೋಚರ ರಾಶಿ - ಕುಂಭ

ಕುಂಭ: ಚಂದ್ರ ಗ್ರಹಣದ ಪ್ರಭಾವ ತುಂಬಾ ದಿನವಿರುವುದಿಲ್ಲ, ಆರು ಮತ್ತು ಹತ್ತನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ. ಕೆಲಸದ ಜಾಗದಲ್ಲಿ ಅತ್ಯಂತ ತಾಳ್ಮೆಯಿಂದ ಇರುವುದು ಸೂಕ್ತ. ಟೆನ್ಸನ್ ವಾತಾವರಣವಿದ್ದರೂ, ಭಾವೋದ್ವೇಗಕ್ಕೆ ಒಳಗಾಗುವುದು ಬೇಡ. ಕೆಲಸದ ಜಾಗದಲ್ಲಿ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿ, ರಾಜೀನಾಮೆ ನೀಡುವ ನಿರ್ಧಾರಕ್ಕೆ ಬರಬೇಡಿ. ಓವರ್ ಕಾನ್ಪಿಡೆನ್ಸ್ ಒಳ್ಳೆಯದಲ್ಲ. ಈ ಗ್ರಹಣ ಮುಂದಿನ ದಿನಗಳಲ್ಲಿ ಈ ರಾಶಿಯವರಿಗೆ ಶುಭಫಲವನ್ನು ನೀಡಲಿದೆ.

 ಗ್ರಹಣದ ಗೋಚರ ರಾಶಿ - ಮೀನ

ಗ್ರಹಣದ ಗೋಚರ ರಾಶಿ - ಮೀನ

ಮೀನ: ಐದನೇ ಮತ್ತು ಒಂಬತ್ತನೇ ಮನೆಯಲ್ಲಿ ಗ್ರಹಣ ಸಂಭವಿಸಲಿದೆ, ಕೇತು ಎಂಟನೇ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೆಚ್ಚಾಗಿರಲಿದೆ. ಅನಿರೀಕ್ಷಿತ ಘಟನೆ, ಸುದ್ದಿ ಎದುರಾಗಲಿದೆ. ಆತ್ಮಬಲದ ಕೊರತೆ ಎದುರಾಗಲಿದೆ, ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿನ್ನಡೆಯಾಗಬಹುದು. ಆರೋಗ್ಯದ ವಿಚಾರದಲ್ಲಿ ಎಚ್ಚರ, ದೂರದ ಪ್ರಯಾಣ ಈ ಅವಧಿಯಲ್ಲಿ ಬೇಡ. ಉನ್ನತ ಶಿಕ್ಷಣಕ್ಕೆ ಹೋದವರಿಗೂ ಮಾನಸಿಕ ನೆಮ್ಮದಿ ಇರುವುದಿಲ್ಲ. ಏಕಾಗ್ರತೆ ಇರುವುದಿಲ್ಲ, ಆರ್ಥಿಕ ವಿಚಾರದಲ್ಲಿ ತುರ್ತು ನಿರ್ಧಾರ ಬೇಡ.

English summary
Lunar Eclipse May 2022: Prediction Of Twelve Zodaic Signs. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X