ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಗ್ರಹಣ ವಿಶೇಷ: ಯಾವುದೇ ಗ್ರಹಣದ ಶುಭಾಶುಭ ಫಲಗಳ ಅವಧಿ ಎಷ್ಟು?

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

Recommended Video

ಜುಲೈ 27 ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರಗ್ರಹಣ : ಗ್ರಹಣದ ಮುಂಚೆ ಹಾಗು ನಂತರದ ಪರಿಣಾಮಗಳೇನು? |Oneindia Kannada

ಜುಲೈ ಇಪ್ಪತ್ತೇಳನೇ ತಾರೀಕಿನಂದು ಕೇತುಗ್ರಸ್ತ ಚಂದ್ರಗ್ರಹಣ ಮಕರ ರಾಶಿಯಲ್ಲಿ ಸಂಭವಿಸುತ್ತದೆ ಎಂಬುದು ಜ್ಯೋತಿಷ್ಯ ವಿದ್ಯಮಾನ ಎಂಬುದಕ್ಕಿಂತ ಸುದ್ದಿಯಾಗಿಯೇ ಹೆಚ್ಚು ಪ್ರಚಲಿತದಲ್ಲಿದೆ. ಅಂಥ ಸನ್ನಿವೇಶದಲ್ಲಿ ಈ ಗ್ರಹಣದ ಪರಿಣಾಮ ಎಷ್ಟು ಕಾಲ ಅಥವಾ ಸಮಯ ಇರುತ್ತದೆ ಎಂಬ ಪ್ರಶ್ನೆಗೆ ಉತ್ತರವಾಗಿದೆ ಈ ಲೇಖನ.

ಚಂದ್ರ ಗ್ರಹಣವನ್ನು ಶುಭ, ಅಶುಭ ಹಾಗೂ ಮಿಶ್ರ ಫಲ ಅಂತ ವಿಂಗಡಿಸಬಹುದು.

ಅಶುಭ ಫಲ : ಮಕರ, ಕುಂಭ, ಧನು, ಮಿಥುನ

ಶುಭ ಫಲ: ಮೇಷ, ಸಿಂಹ, ವೃಶ್ಚಿಕ ಹಾಗೂ ಮೀನ

ಮಿಶ್ರ ಫಲ : ವೃಷಭ, ಕರ್ಕಾಟಕ, ಕನ್ಯಾ, ತುಲಾ

ಹನ್ನೆರಡು ರಾಶಿಗಳ ಮೇಲೆ ಜುಲೈ 27ರ ಚಂದ್ರ ಗ್ರಹಣದ ಫಲಾಫಲಹನ್ನೆರಡು ರಾಶಿಗಳ ಮೇಲೆ ಜುಲೈ 27ರ ಚಂದ್ರ ಗ್ರಹಣದ ಫಲಾಫಲ

ಶುಭ ಹಾಗೂ ಮಿಶ್ರ ಫಲ ಕೊಡುವ ರಾಶಿಗಳ ವಿಚಾರದಲ್ಲಿ ಒಂದೆರಡು ರಾಶಿಯ ಬಗ್ಗೆ ಜ್ಯೋತಿಷಿಗಳಲ್ಲೇ ಭಿನ್ನವಾದ ಅಭಿಪ್ರಾಯ ಕೇಳಿಬರುತ್ತದೆ. ಆದರೆ ಈ ರೀತಿಯ ಫಲಗಳು ಹೇಗೆ ಹಾಗೂ ಎಷ್ಟು ಸಮಯದಿಂದ ಎಷ್ಟು ಅವಧಿ ತನಕ ಇರುತ್ತದೆ ಎಂಬ ಪ್ರಶ್ನೆ ಸಹಜವಾಗಿ ಮೂಡುವುದರಿಂದ ಅದಕ್ಕೆ ಉತ್ತರ ಕೊಡುವ ಲೇಖನವಿದು.

ಗ್ರಹಣ ಮುಗಿದ ಎರಡು ತಿಂಗಳ ತನಕ ಪ್ರಭಾವ

ಗ್ರಹಣ ಮುಗಿದ ಎರಡು ತಿಂಗಳ ತನಕ ಪ್ರಭಾವ

ಜುಲೈ ಇಪ್ಪತ್ತೇಳನೇ ತಾರೀಕು ಚಂದ್ರ ಗ್ರಹಣ ಇರುವುದರಿಂದ ಅದಕ್ಕೆ ಹದಿನೈದು ದಿನ ಮೊದಲಿಗೆ ಹಾಗೂ ಗ್ರಹಣ ನಂತರದ ಎರಡು ತಿಂಗಳ ಕಾಲ ಆಯಾ ರಾಶಿಗೆ ತಕ್ಕ ಫಲ ಸಿಗುತ್ತದೆ. ಆದ್ದರಿಂದ ಒಳ್ಳೆ ಫಲಗಳು ಇದ್ದರೆ ಇನ್ನೂ ಏಕೆ ಸಿಗಲಿಲ್ಲ ಎಂದು ಯೋಚಿಸುವ ಅಗತ್ಯವಿಲ್ಲ. ಅದೇ ರೀತಿ ಗ್ರಹಣ ಮುಗಿಯಿತು. ಇನ್ನೇನೂ ಸಮಸ್ಯೆಯಿಲ್ಲ ಎಂದುಕೊಂಡರೆ, ಹಾಗಲ್ಲ. ಗ್ರಹಣ ಮುಗಿದ ನಂತರ ಎರಡು ತಿಂಗಳ ಕಾಲದಲ್ಲಿ ನಿಮ್ಮ ಪಾಲಿಗೆ ಶುಭ ಅಥವಾ ಅಶುಭ ಫಲಗಳು ಎದುರುಗೊಳ್ಳಬಹುದು.

ಹೊಸ ಸಾಹಸಗಳು ಖಂಡಿತಾ ಬೇಡ

ಹೊಸ ಸಾಹಸಗಳು ಖಂಡಿತಾ ಬೇಡ

ಆ ಕಾರಣಕ್ಕೆ ಅಶುಭ ಫಲ ಅಥವಾ ಮಿಶ್ರ ಫಲ ಇರುವಂಥ ರಾಶಿಗಳವರು ಗ್ರಹಣ ಕಾಲದಲ್ಲಿ ಹೇಗಿದ್ದರೂ ಎಚ್ಚರವಾಗಿ ಇದ್ದೇ ಇರ್ತೀರಿ. ಆದರೆ ಗ್ರಹಣ ಮುಗಿಯಿತು ಎಂಬ ಕಾರಣಕ್ಕೆ ಹೊಸದಾಗಿ ಸಾಹಸದ ಕೆಲಸಗಳನ್ನು ಮಾಡಲು ಹೊರಟು ನಿಂತುಬಿಡಬೇಡಿ. ಆಗ ಸುಮ್ಮನೆ ಇಲ್ಲದ ಸಮಸ್ಯೆಯನ್ನು ನೀವೇ ತಂದುಕೊಂಡಂತೆ ಆಗುತ್ತದೆ.

ಅನಿವಾರ್ಯ ಅಲ್ಲದಿದ್ದಲ್ಲಿ ದೊಡ್ಡ ವ್ಯವಹಾರಕ್ಕೆ ಕೈ ಹಾಕದಿರಿ

ಅನಿವಾರ್ಯ ಅಲ್ಲದಿದ್ದಲ್ಲಿ ದೊಡ್ಡ ವ್ಯವಹಾರಕ್ಕೆ ಕೈ ಹಾಕದಿರಿ

ಹಾಗಂತ ನೀವು ವ್ಯಾಪಾರಸ್ಥರೋ ಅಥವಾ ವ್ಯವಹಾರಸ್ಥರೋ ಆಗಿದ್ದರೆ ಅದನ್ನು ನಿಲ್ಲಿಸಿ ಅನ್ನೋದು ಈ ಧ್ವನಿಯ ಅರ್ಥವಲ್ಲ. ಹೊಸಬರ ಜತೆಗೆ ವ್ಯವಹಾರ ಮಾಡುವಾಗ, ದೊಡ್ಡ ಮಟ್ಟದ ಹೂಡಿಕೆ ಮಾಡುವಾಗ, ದೊಡ್ಡ ಮಟ್ಟದ ಸಾಲವನ್ನು ನೀಡುವಾಗ ಬಹಳ ಎಚ್ಚರಿಕೆಯಿಂದ ವ್ಯವಹರಿಸಬೇಕು. ತೀರಾ ಅನಿವಾರ್ಯ ಅಲ್ಲದಿದ್ದಲ್ಲಿ ಅಂಥ ವ್ಯವಹಾರವೇ ಮಾಡಬೇಡಿ.

ಮಕರ, ಮಿಥುನದವರು ಉಳಿದವರಿಗಿಂತ ಜಾಗರೂಕರಾಗಿರಿ

ಮಕರ, ಮಿಥುನದವರು ಉಳಿದವರಿಗಿಂತ ಜಾಗರೂಕರಾಗಿರಿ

ಗ್ರಹಣ ದಿನದಂದು ಮಾಡುವ ಕೆಲಸಗಳ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು. ಗ್ರಹಣ ಕಾಲದಲ್ಲಿ ಮಾತ್ರ ಫಲಗಳು ಅನ್ವಯಿಸುತ್ತವೆ ಎಂಬ ಉಡಾಫೆ ಮಾಡಬೇಡಿ. ಅದರಲ್ಲೂ ಮಕರ ರಾಶಿಯವರು ಮತ್ತು ಮಿಥುನ ರಾಶಿಯವರ ಪಾಲಿಗೆ ಈ ಗ್ರಹಣದ ಪರಿಣಾಮ ತೀಕ್ಷ್ಣವಾಗಿರುತ್ತದೆ. ಆದ್ದರಿಂದ ಆರೋಗ್ಯವೋ, ಗೃಹ ಕೃತ್ಯವೋ ಅಥವಾ ವ್ಯವಹಾರವೋ ಯಾವುದೇ ಸಣ್ಣ-ಪುಟ್ಟ ಬದಲಾವಣೆಯಾದರೂ ತಕ್ಷಣ ಎಚ್ಚೆತ್ತುಕೊಳ್ಳಿ.

English summary
Lunar eclipse on July 27, 2018. Here is the astrology importance of eclipse and astrologer Pandit Vittala Bhat explains lunar eclipse effect on native for how many days?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X