ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನ್ನೆರಡು ರಾಶಿ, ನವಗ್ರಹಗಳು, ಅದೃಷ್ಟ ರತ್ನಗಳ ಬಗ್ಗೆ ಗೊತ್ತಿರಬೇಕಾದ ಸಂಗತಿಗಳು

By ಪಂಡಿತ್ ಶ್ರೀ ಗಣೇಶ್ ಕುಮಾರ್
|
Google Oneindia Kannada News

ಯಾರೂ ಅದೃಷ್ಟ ರತ್ನಗಳ ವಿಚಾರದಲ್ಲಿ ಪ್ರಯೋಗಗಳನ್ನು ಮಾಡಬಾರದು ಅನ್ನೋದು ನನ್ನ ಉದ್ದೇಶ. ಈಗ ಇಂಟರ್ ನೆಟ್ ಗಳಲ್ಲಿ ಆಯಾ ರಾಶಿಗೆ, ಜನ್ಮ ದಿನಾಂಕಕ್ಕೆ ಹೀಗೆ ನಾನಾ ಬಗೆಯಲ್ಲಿ ರತ್ನ ಧಾರಣೆ ಬಗ್ಗೆ ಹೇಳಲಾಗುತ್ತದೆ. ಇದು ಹೇಗೆಂದರೆ, ನಿಮಗೆ ನೀವೇ ವೈದ್ಯ ಮಾಡಿಕೊಂಡಂತೆ. ಇದರಿಂದ ಕಾಯಿಲೆ ವಾಸಿಯೂ ಆಗಬಹುದು. ಇಲ್ಲವೇ ಉಲ್ಬಣವೂ ಆಗಬಹುದು.

ಇನ್ನು ರಾಶಿಯ ಆಧಾರವಾಗಿ ರತ್ನಗಳನ್ನು ಹೇಳಲಾಗುತ್ತದೆ.

ಮೇಷ- ವೃಶ್ಚಿಕ: ಹವಳ

ವೃಷಭ- ತುಲಾ: ವಜ್ರ

ಮಿಥುನ- ಕನ್ಯಾ: ಪಚ್ಚೆ

ಕರ್ಕಾಟಕ: ಮುತ್ತು

ಸಿಂಹ: ಸ್ಟಾರ್: ರೂಬಿ

ಧನುಸ್ಸು- ಮೀನ: ಕನಕ ಪುಷ್ಯರಾಗ

ಮಕರ- ಕುಂಭ: ನೀಲ

Lucky Gem Stones According To Zodiac Signs And Vedic Astrology

ಇದು ಸಾಮಾನ್ಯವಾಗಿ ಹೇಳುತ್ತಾರೆ. ಈ ಪೈಕಿ ಬಹುತೇಕ ರತ್ನಗಳನ್ನು ಬೆಳ್ಳಿಯಲ್ಲಿ ಧಾರಣೆ ಮಾಡಲಾಗುತ್ತದೆ. ಆದರೆ ರತ್ನ ಧಾರಣೆಗೆ ಜಾತಕ ಪರಿಶೀಲನೆ ಕಡ್ಡಾಯವಾಗಿ ಮಾಡಿಸಬೇಕು. ನಿರ್ದಿಷ್ಟ ದಶಾ ಕಾಲದಲ್ಲಿ ಕೆಲವು ರತ್ನ ಧಾರಣೆ ಮಾಡಬಹುದು. ಮತ್ತೆ ಕೆಲವನ್ನು ಜನ್ಮ ಜಾತಕದಲ್ಲಿ ಸಮಸ್ಯೆ ಇದ್ದರೆ ಅದು ಸರಿಹೋಗಲು ಧಾರಣೆ ಮಾಡಬೇಕಾಗುತ್ತದೆ.

ಇವುಗಳಲ್ಲಿ ವಜ್ರ, ನೀಲ, ಹವಳ ಈ ಮೂರು ಅದೃಷ್ಟ ರತ್ನಗಳನ್ನು ಬಹಳ ಎಚ್ಚರಿಕೆಯಿಂದ ಪರೀಕ್ಷಿಸಿ, ಸೂಕ್ತ ಮಾರ್ಗದರ್ಶನ ಮತ್ತು ವಿಧಾನವನ್ನು ಅನುಸರಿಸಿ, ಧರಿಸಬೇಕು. ಇನ್ನು ಈಗಂತೂ ರಾಹು- ಕೇತು, ಗುರು, ಶನಿ ಸಂಚಾರ ಇರುವುದರಿಂದ ಈ ಗ್ರಹಗಳಿಗೆ ಸಂಬಂಧಿಸಿದ ರತ್ನವನ್ನು ಧರಿಸಿದರೆ ಕೆಲವು ಮುಖ್ಯ ದೋಷಗಳ ನಿವಾರಣೆ ಆಗುತ್ತವೆ. ಆದರೆ ಅದಕ್ಕೆ ಜ್ಯೋತಿಷಿಗಳ ಮಾರ್ಗದರ್ಶನವನ್ನು ತೆಗೆದುಕೊಳ್ಳಿ.

ಇನ್ನು ಕೆಲವು ಹೆಣ್ಣುಮಕ್ಕಳಿಗೆ ವಜ್ರ, ಸ್ಟಾರ್ ರೂಬಿ, ಹವಳ, ಪಚ್ಚೆ ಆಭರಣಗಳ ಬಗ್ಗೆ ವಿಪರೀತ ಆಸೆ ಇರುತ್ತದೆ. ಆಸೆ ತಪ್ಪಲ್ಲ. ಆದರೆ ಹಾಗೆ ರತ್ನಖಚಿತ ಆಭರಣಗಳನ್ನು ಹಾಕಿಕೊಳ್ಳುವಾಗಲೂ ಜ್ಯೋತಿಷಿಗಳಲ್ಲಿ ಒಮ್ಮೆ ಪರೀಕ್ಷಿಸಿಕೊಳ್ಳಿ. ರತ್ನಗಳಿಗೆ ಅಗಾಧವಾದ ಶಕ್ತಿ ಇರುತ್ತದೆ. ಆದರೆ ನಿರ್ದಿಷ್ಟ ತೂಕದ್ದು ಹಾಕಬೇಕು. ಆ ಎಲ್ಲವೂ ಸರಿಯಾದಲ್ಲಿ ಭವಿಷ್ಯ ಖಂಡಿತಾ ಬದಲಾಗುತ್ತದೆ.

ಇನ್ನೊಮ್ಮೆ ತಿಳಿಸುತ್ತಿದ್ದೇನೆ, ಯಾವುದೇ ರತ್ನ ಧಾರಣೆ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಚಂದ ಕಾಣುತ್ತದೆ, ಇಷ್ಟ ಆಗುತ್ತದೆ ಎಂದು ಧರಿಸುವುದು ಸರಿಯಲ್ಲ.

ವೈಯಕ್ತಿಕ ಭೇಟಿಗಾಗಿ ಸಂಪರ್ಕಿಸಿ

ಪಂಡಿತ್ ಶ್ರೀ ಗಣೇಶ್ ಕುಮಾರ್

ಭಾರತೀಯ ಪ್ರಖ್ಯಾತ ಜ್ಯೋತಿಷಿಗಳು.

ಶ್ರೀ ಪಂಚಮುಖಿ ಜೋತಿಷ್ಯಂ

ಮೈಸೂರು ಸರ್ಕಲ್ (ಶಿರ್ಸಿ ಸರ್ಕಲ್), ಚಾಮರಾಜಪೇಟೆ, ಬೆಂಗಳೂರು. ಮೊ. 98805 33337

English summary
Here is the details about lucky gem stones on the basis of zodiac signs according to vedic astrology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X