• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾರಿಗೆ ಯಾವ ಬಣ್ಣದ ಕಾರು, ಬೈಕ್ ಅದೃಷ್ಟ? ಖರೀದಿಗೆ ಉತ್ತಮ ದಿನ, ಸಮಯ ಯಾವುದು?

By ರಾಘವೇಂದ್ರ ಆಚಾರ್
|

ಕಾರು ಅಥವಾ ಬೈಕ್ ಖರೀದಿ ಯಾರ ಪಾಲಿಗೆ ಕನಸಾಗಿರುವುದಿಲ್ಲ? ಆದರೆ ಯಾವ ಬಣ್ಣ, ಯಾವ ದಿನ ಖರೀದಿ ಮಾಡಬೇಕು ಅನ್ನೋದು ಬಹಳ ಮಂದಿಯ ಪ್ರಶ್ನೆ. ಎಷ್ಟೋ ಮಂದಿಗೆ ವಾಹನ ಯೋಗವೇ ಇರುವುದಿಲ್ಲ. ಅದರ ಅರ್ಥ ಏನೆಂದರೆ, ಅವರ ಬಳಿ ಎಷ್ಟೇ ದುಡ್ಡಿರಬಹುದು, ಕಾರು ಖರೀದಿ ಮಾಡಿದ ನಂತರ ಬಹಳ ಕಾಲ ಅದು ಇರುವುದಿಲ್ಲ.

ಇನ್ನೂ ಕೆಲವರು ಅದೆಷ್ಟೇ ಚೆನ್ನಾಗಿ ಚಾಲನೆ ಮಾಡುವವರಾದರೂ ಪದೇಪದೇ ಅಪಘಾತ ಆಗುತ್ತಲೇ ಇರುತ್ತದೆ. ಹಾಗಿದ್ದರೆ ಈ ಬಣ್ಣ- ಸಂಖ್ಯೆಗೆ ಏನೂ ಮಹತ್ವ ಇಲ್ಲವೆ ಎಂದು ಕೇಳಬಹುದಾ? ಅವುಗಳ ಜತೆಗೆ ಜನ್ಮ ಜಾತಕದಲ್ಲೂ ಉತ್ತಮ ಯೋಗ ಫಲಗಳು ಇರಬೇಕಲ್ಲಾ? ಕಾರು ಸ್ವಂತ ಇಟ್ಟುಕೊಳ್ಳಬೇಕು ಅಂದರೆ ಶುಕ್ರ ಗ್ರಹ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ನೆಚ್ಚಿನ ಬಣ್ಣ ನಿಮ್ಮ ಗುಣ ಹೇಗೆ ಅಂತಲೂ ಹೇಳುತ್ತೆ ಕೇಳಿ..!

ಲಗ್ನದಿಂದ ನಾಲ್ಕನೇ ಸ್ಥಾನದಲ್ಲಿ ಶುಕ್ರ ಇದ್ದರೆ ಆ ವ್ಯಕ್ತಿಗೆ ಕಡ್ಡಾಯವಾಗಿ ವಾಹನ ಯೋಗ ಇರುತ್ತದೆ. ಇನ್ನು ಪದೇಪದೇ ಅಪಘಾತ ಆಗುತ್ತಿದೆ ಅಂದರೆ ಜಾತಕದಲ್ಲಿ ರಾಹು-ಕೇತು ಎಲ್ಲಿ ಸ್ಥಿತರಾಗಿದ್ದಾರೆ ಎಂಬುದನ್ನು ಗಮನಿಸಬೇಕು. ವಾಹನ ಯೋಗ ಇದೆಯೋ ಇಲ್ಲವೋ ಎಂಬುದಕ್ಕೆ ಲಗ್ನದಿಂದ ಚತುರ್ಥ ಸ್ಥಾನ ಬಹಳ ಮುಖ್ಯ. ಇದರ ಜತೆಗೆ ಅದೃಷ್ಟದ ಬಣ್ಣ ಮತ್ತಿತರ ವಿವರಗಳು ಇಲ್ಲಿವೆ; ತಿಳಿದುಕೊಳ್ಳಿ.

 ಬಣ್ಣಗಳ ಆಯ್ಕೆ ಹೀಗಿರಲಿ

ಬಣ್ಣಗಳ ಆಯ್ಕೆ ಹೀಗಿರಲಿ

ಮೇಷ- ವೃಶ್ಚಿಕ : ಕೆಂಪು, ಹಳದಿ, ಕೇಸರಿ

ವೃಷಭ-ತುಲಾ : ಬಿಳಿ, ಹಸಿರು, ಕಪ್ಪು

ಮಿಥುನ- ಕನ್ಯಾ : ಕೆಂಪು, ಹುಲ್ಲಿನ ಹಸಿರು, ಬೂದು ಬಣ್ಣ

ಕರ್ಕಾಟಕ : ಬಿಳಿ, ಕೆಂಪು, ಹಳದಿ

ಸಿಂಹ: ಕೆಂಪು, ಹಳದಿ, ಕೇಸರಿ, ಬಿಳಿ

ಧನುಸ್ಸು- ಮೀನ: ಕೆಂಪು, ಹಳದಿ, ಕೇಸರಿ

ಮಕರ-ಕುಂಭ : ನೀಲಿ, ಹಸಿರು, ಹಳದಿ

ಯಾವ ರಾಶಿಯವರು ಕಾರು ಖರೀದಿಸಬಹುದು? ಅದೃಷ್ಟದ ಬಣ್ಣ ಯಾವುದು?

 ಯಾವ ದಿನ, ಸಮಯದಲ್ಲಿ ಡೆಲಿವರಿ ಪಡೆಯಬೇಕು?

ಯಾವ ದಿನ, ಸಮಯದಲ್ಲಿ ಡೆಲಿವರಿ ಪಡೆಯಬೇಕು?

ಇನ್ನು ಕಾರಿನ ಅಥವಾ ಬೈಕ್ ಡೆಲಿವರಿ ಯಾವಾಗ ತೆಗೆದುಕೊಳ್ಳಬೇಕು ಅನ್ನೋದು ಬಹಳ ಮಂದಿ ಪ್ರಶ್ನೆ ಆಗಿರುತ್ತದೆ. ಪೌರ್ಣಮಿ ದಿನದ ಐದು ದಿನಕ್ಕೆ ಮೊದಲು ಹಾಗೂ ಆ ನಂತರದ ಐದು ದಿನ ಬಹಳ ಒಳ್ಳೆಯದು. ಪೌರ್ಣಮಿ ದಿನ ಆರರಿಂದ ಹತ್ತು ದಿನ ಮೊದಲು ಹಾಗೂ ಆಮೇಲೆ ಮಧ್ಯಮ. ಪೌರ್ಣಮಿ ದಿನದ ಹನ್ನೊಂದರಿಂದ ಹದಿನೈದು ದಿನ ಮೊದಲು ಹಾಗೂ ನಂತರ ಒಳ್ಳೆಯದಲ್ಲ. ಇನ್ನು ವಾಹನ ಖರೀದಿ ದಿನ ನಿಗದಿ ಮಾಡಿಕೊಂಡ ಮೇಲೆ ಸಮಯ ಕಡ್ಡಾಯವಾಗಿ ನೋಡಬೇಕು. ರಾಹುಕಾಲ ಹಾಗೂ ಯಮಗಂಡ ಕಾಲದಲ್ಲಿ ವಾಹನದ ಡೆಲಿವರಿ ಪಡೆಯಬಾರದು. ಖರೀದಿ ಮಾಡುವವರ ನಕ್ಷತ್ರಕ್ಕೆ ತಾರಾ ಬಲ ಇದೆಯೇ ಎಂಬುದನ್ನು ಗಮನಿಸಬೇಕು.

 ಗಣೇಶನದೊಂದು ಪುಟ್ಟ ಮೂರ್ತಿ ಇಟ್ಟುಕೊಳ್ಳಬೇಕು

ಗಣೇಶನದೊಂದು ಪುಟ್ಟ ಮೂರ್ತಿ ಇಟ್ಟುಕೊಳ್ಳಬೇಕು

ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಯಾವ ದೇವರ ಪುಟ್ಟ ವಿಗ್ರಹ ಇಡಬೇಕು, ಇಡಬಹುದು ಅಂದರೆ, ಚಿಕ್ಕದೊಂದು ಗಣೇಶ ವಿಗ್ರಹವನ್ನು ಇಡಬೇಕು. ಏಕೆಂದರೆ, ಕೇತು ಗ್ರಹಕ್ಕೆ ಸಂಬಂಧಿಸಿದ ದೇವರು ಗಣೇಶ. ಕೇತು ಅಂದರೆ ಅಪಘಾತಗಳ ಅಥವಾ ಮುಕ್ತಿಯ ಕಾರಕ. ಇದರ ಜತೆಗೆ ವಿಘ್ನೇಶ್ವರ ಅಂದರೆ ವಿಘ್ನಗಳ ನಿವಾರಕ. ಆದರೆ ವಿನಾಯಕನ ವಿಗ್ರಹ ಡ್ಯಾಶ್ ಬೋರ್ಡ್ ನಲ್ಲಿ ಇಡುವುದು ಅತ್ಯುತ್ತಮ. ಕಾರಿನ ಡೆಲಿವರಿ ಪಡೆದ ಮೇಲೆ ದೇವಾಲಯಕ್ಕೆ ಭೇಟಿ ನೀಡಬೇಕು. ತುಂಬ ಹೆಸರಾದ ಅಥವಾ ಶಕ್ತಿ ಇರುವ ಸ್ಥಳದಲ್ಲಿ ಪೂಜೆ ಮಾಡಿಸಬೇಕು. ಆಂಜನೇಯ ಅಥವಾ ಗಣಪತಿ ದೇಗುಲದಲ್ಲಿ ಕಾರಿಗೆ ಪೂಜೆ ಮಾಡಿಸುವುದು ಅತ್ಯುತ್ತಮ.

ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ?

 ಯಾವುದು ಅದೃಷ್ಟ ಸಂಖ್ಯೆ?

ಯಾವುದು ಅದೃಷ್ಟ ಸಂಖ್ಯೆ?

ಕಾರು ಅಥವಾ ಬೈಕ್ ನ ನೋಂದಣಿ ಸಂಖ್ಯೆ ಬಹಳ ಮುಖ್ಯವಾಗುತ್ತದೆ. ನಾಲ್ಕು, ಎಂಟು ಈ ಎರಡು ಸಂಖ್ಯೆಗಳನ್ನು ಸಾಧ್ಯವಾದಷ್ಟೂ ಬಾರದಂತೆ ನೋಡಿಕೊಳ್ಳಿ. ಇನ್ನು ಸಂಖ್ಯೆ ಒಂಬತ್ತನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಆದರೆ ಕುಜನ ಸಂಖ್ಯೆಯಾದ ಒಂಬತ್ತು ಹೆಚ್ಚಿಗೆ ಇದ್ದರೆ ಅಥವಾ ಯಜಮಾನನಿಗೆ ಆಗದಿದ್ದರೆ ಪದೇಪದೇ ಅಪಘಾತಗಳು ಸಂಭವಿಸುತ್ತದೆ. ಮುಖ್ಯವಾಗಿ ಯಜಮಾನ ಜನ್ಮ ದಿನಾಂಕವನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು. ಸಾಧ್ಯವಾದರೆ ಸಾಮಾನ್ಯವಾಗಿ ಎಲ್ಲರಿಗೂ ಆಗಿಬರುವಂಥ ಸಂಖ್ಯೆಯನ್ನು ಕಾರಿನ ನೋಂದಣಿ ಸಂಖ್ಯೆಯಾಗಿ ಪಡೆಯುವುದು ಅತ್ಯುತ್ತಮ. ಸಂಖ್ಯೆ ಒಂಬತ್ತು ಇದರ ಬಗ್ಗೆ ಅಂಧ ನಂಬಿಕೆ ಸಲ್ಲದು ಎಂಬುದು ನೆನಪಿರಲಿ.

ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ?

ರಾಶ್ಯಾಧಿಪತಿಗಳ ಆಧಾರದಲ್ಲಿ ಬಣ್ಣಗಳು ಹಾಗೂ ಇಷ್ಟ ದೈವ

ರಾಶ್ಯಾಧಿಪತಿಗಳ ಆಧಾರದಲ್ಲಿ ಬಣ್ಣಗಳು ಹಾಗೂ ಇಷ್ಟ ದೈವ

ಸಿಂಹ- ರವಿ- ಕೆಂಪು- ಶಿವ

ಕರ್ಕಾಟಕ- ಚಂದ್ರ- ಬಿಳಿ- ದುರ್ಗಾ

ಮೇಷ ಮತ್ತು ವೃಶ್ಚಿಕ- ಕುಜ- ರಕ್ತ ಕೆಂಪು- ಸುಬ್ರಹ್ಮಣ್ಯ

ಮಿಥುನ ಮತ್ತು ಕನ್ಯಾ- ಬುಧ- ಹಸಿರು- ವಿಷ್ಣು

ಧನುಸ್ಸು ಮತ್ತು ಮೀನ- ಗುರು- ಹಳದಿ- ಶಿವ

ವೃಷಭ ಮತ್ತು ಕನ್ಯಾ- ಶುಕ್ರ- ಬಿಳಿ ಮತ್ತು ತಿಳಿ ಹಸಿರು- ಲಕ್ಷ್ಮಿ

ಮಕರ ಮತ್ತು ಕುಂಭ- ಶನಿ- ಕಡು ನೀಲಿ- ತ್ರಿಮೂರ್ತಿ

ಜೂನ್ 2019 - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lucky, color, number for car and bikes, which day suitable to buy vehicles? Some more details explained by astrologer Raghavendra Achar in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more