ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Love astrology: ಯಾರಿಗೆ ಪ್ರೇಮ ವಿವಾಹ ಆಗುತ್ತದೆ?

By ಶ್ರೀನಿವಾಸ ಗುರೂಜಿ
|
Google Oneindia Kannada News

ಯಾರಿಗೆ ಪ್ರೇಮಾಂಕುರವಾಗುತ್ತದೆ? ಈ ಪ್ರಶ್ನೆ ಕೇಳಿದರೆ, ಯಾರಿಗೆ ಬೇಕಾದರೂ ಪ್ರೇಮ ಮೂಡಬಹುದು ಎಂಬ ಉತ್ತರ ನೀಡಬಹುದು. ಗಂಡು- ಹೆಣ್ಣಿನ ಮಧ್ಯೆ ಪ್ರೀತಿ ಮೂಡುವುದು ಪ್ರಕೃತಿ ಸಹಜ. ಆದರೆ ಆ ಪ್ರೀತಿ ಜೀವನ ಪೂರ್ತಿಯಾಗಿದ್ದು, ಮದುವೆ ತನಕ ಮುನ್ನಡೆಯುವುದು ಎಷ್ಟು ಮಂದಿಗೆ ಸಾಧ್ಯ? ಇದಕ್ಕೆ ಜ್ಯೋತಿಷ್ಯ ರೀತಿಯಾಗಿ ಉತ್ತರ ನೀಡಬಹುದು.

ಕೆಲವರಿಗೆ ನಾನು ಈ ವಿಷಯ ತಿಳಿಸಿದಾಗ ನಕ್ಕವರಿದ್ದಾರೆ. ಆದರೆ ಪ್ರೀತಿ ಕಳೆದುಕೊಂಡು ಬಿಕ್ಕುವಾಗ ಮಾತಿನ- ಸಲಹೆಯ ತೂಕ ಅರ್ಥವಾಗುತ್ತದೆ. ಆದರೆ ಕಾಲ ಮಿಂಚಿ ಹೋದ ಮೇಲೆ ನಾವಾದರೂ ಏನು ಮಾಡಬಹುದು? ಆದ್ದರಿಂದಲೇ ಈ ದಿನ ಯಾರು ಪ್ರೇಮ ವಿವಾಹದಲ್ಲಿ ಯಶಸ್ವಿ ಆಗುತ್ತಾರೆ ಎಂಬ ಬಗ್ಗೆ ಲೇಖನ ಬರೆಯೋಣ, ಆ ಮೂಲಕ ಪ್ರೇಮಿಗಳ ದಿನಾಚರಣೆಗೆ ಶುಭಾಶಯ ಹೇಳೋಣ ಎಂಬುದು ನನ್ನ ಉದ್ದೇಶ.

ಕೀರ್ತಿ, ಹಣ, ಯಶಸ್ಸು, ಸುಖ ನೀಡುವ ಶುಕ್ರ ಗ್ರಹ ನಿಮ್ಮ ಜಾತಕದಲ್ಲಿ ಹೇಗಿದೆ?ಕೀರ್ತಿ, ಹಣ, ಯಶಸ್ಸು, ಸುಖ ನೀಡುವ ಶುಕ್ರ ಗ್ರಹ ನಿಮ್ಮ ಜಾತಕದಲ್ಲಿ ಹೇಗಿದೆ?

ವೈಯಕ್ತಿಕವಾಗಿ ಈ ದಿನಾಚರಣೆ ಬಗ್ಗೆ ನನಗೆ ನಂಬಿಕೆಯಿಲ್ಲ. ಆದರೆ ಲೋಕಾರೂಢಿ ಬಂದಿದೆಯಾದ್ದರಿಂದ ಯುವ ಜನರ ಮನಸ್ಸಿಗೆ ನೋವು ಮಾಡಬಾರದು ಎಂಬ ಕಾರಣಕ್ಕೆ ನೀವಿದನ್ನು ಓದುತ್ತಿದ್ದೀರಿ.

Love Astrology: Who Has More Chance To Get Love Marriage

* ಜನ್ಮ ಜಾತಕದಲ್ಲಿ ಲಗ್ನದಿಂದ ಐದನೇ ಮನೆ ಪ್ರೀತಿ ಮತ್ತು ಏಳನೇ ಮನೆ ವಿವಾಹವನ್ನು ಸೂಚಿಸುತ್ತದೆ. ಇವೆರಡಕ್ಕೂ ಏನಾದರೂ ಸಂಬಂಧ ಇದೆಯಾ ಎಂಬುದನ್ನು ನೋಡಬೇಕು.

* ಶುಕ್ರ ಮತ್ತು ಲಗ್ನಾಧಿಪತಿ ಎರಡೂ ಒಂದು ಮತ್ತು ಏಳನೇ ಮನೆಯಲ್ಲಿ ಇದ್ದಲ್ಲಿ ಖಂಡಿತಾ ಪ್ರೇಮವಿವಾಹವೇ ಆಗುತ್ತದೆ.

* ಪ್ರೀತಿ ಮತ್ತು ಮದುವೆ ಎಂಬುದು ಶುಕ್ರ ಹಾಗೂ ಕುಜ ಗ್ರಹಕ್ಕೆ ಸಂಬಂಧಿಸಿದ್ದು. ಈ ಎರಡೂ ಗ್ರಹಗಳು ಐದು ಮತ್ತು ಏಳನೇ ಮನೆಯ ಸಂಪರ್ಕದಲ್ಲಿ ಅಥವಾ ಆ ಎರಡು ಮನೆಯ ಅಧಿಪತಿಗಳ ಸಂಪರ್ಕದಲ್ಲಿ ಇರಬೇಕು.

* ರಾಶ್ಯಾಧಿಪತಿಯು ಏಳನೇ ಮನೆಯಲ್ಲಿ ಹಾಗೂ ಏಳನೇ ಮನೆಯ ಅಧಿಪತಿಯು ಲಗ್ನದಲ್ಲಿ ಇದ್ದಲ್ಲಿ ಪ್ರೇಮ ವಿವಾಹದ ಅವಕಾಶ ಹೆಚ್ಚಿರುತ್ತದೆ.

* ಚಂದ್ರ ಹಾಗೂ ಶುಕ್ರ ಲಗ್ನದಲ್ಲಿ ಅಥವಾ ಲಗ್ನದಿಂದ ಏಳನೇ ಮನೆಯಲ್ಲಿ ಇದ್ದಲ್ಲಿ ಪ್ರೇಮ ವಿವಾಹವನ್ನು ಸೂಚಿಸುತ್ತದೆ.

* ಲಗ್ನ, ಐದನೇ ಮನೆ, ಏಳನೇ ಮನೆ ಮತ್ತು ಒಂಬತ್ತನೇ ಮನೆ ಪರಸ್ಪರ ಸಂಬಂಧ ಇದ್ದಲ್ಲಿ ಕೂಡ ಪ್ರೇಮ ವಿವಾಹ ಆಗುತ್ತದೆ.

ಇನ್ನೊಂದು ವಿಷಯ ನೆನಪಿಟ್ಟುಕೊಳ್ಳಿ. ಲಗ್ನದಿಂದ ಐದನೇ ಮನೆ ಎಂಬುದು ವ್ಯಕ್ತಿಯ ಮನಸ್ಸು. ಏಳನೇ ಮನೆ ಎಂಬುದು ಸಹಚರ್ಯ. ಆದರೆ ಈಗಿನ ಆಧುನಿಕ ಕಾಲಘಟ್ಟದಲ್ಲಿ ಈ ಲೆಕ್ಕಾಚಾರ ಬದಲಾಗಿದೆ. ಮದುವೆಗೂ ಮುನ್ನವೇ ಗಂಡು- ಹೆಣ್ಣು ಒಟ್ಟೊಟ್ಟಿಗೆ ಓಡಾಡುತ್ತಾರೆ (ಇದು ಸ್ನೇಹ ಅಥವಾ ಸಹಚರ್ಯ). ಒಬ್ಬರಿಗೊಬ್ಬರು ಚೆನ್ನಾಗಿ ಅರ್ಥವಾಗಿರುತ್ತಾರೆ. ಆದ್ದರಿಂದ ಈ ಹಿಂದಿನ ಕಾಲದಲ್ಲಿ ಲೆಕ್ಕ ಹಾಕುತ್ತಿದ್ದಂತೆ ನೋಡಲು ಆಗಲ್ಲ.

ಜ್ಯೋತಿಷ್ಯ: ಅದೃಷ್ಟ ರತ್ನಗಳ ಅಡ್ಡಪರಿಣಾಮಗಳು ಹೇಗೆ ಇರುತ್ತವೆ ಗೊತ್ತೆ?ಜ್ಯೋತಿಷ್ಯ: ಅದೃಷ್ಟ ರತ್ನಗಳ ಅಡ್ಡಪರಿಣಾಮಗಳು ಹೇಗೆ ಇರುತ್ತವೆ ಗೊತ್ತೆ?

* ಶುಕ್ರ ಅಥವಾ ಲಗ್ನದಿಂದ ಏಳನೇ ಮನೆಯ ಅಧಿಪತಿ ಶನಿಯೊಂದಿಗೆ ಇದ್ದಲ್ಲಿ ಅಥವಾ ಶನಿಯ ದೃಷ್ಟಿ ಇದ್ದಲ್ಲಿ ಪ್ರೇಮ ವಿವಾಹ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

* ಶುಕ್ರ ಗ್ರಹ ನೀಚವಾಗಿ ರಾಹು, ಶನಿ, ಕುಜ ಗ್ರಹದ ದೃಷ್ಟಿ ಇದ್ದಲ್ಲಿ ಪ್ರೇಮ ವಿವಾಹ ಆಗುತ್ತದೆ. ಆದರೆ ಸಮಾಜ ಹಾಗೂ ಕುಟುಂಬದ ಬೆಂಬಲ ಸಿಗಲ್ಲ.

* ಶುಕ್ರ ಹಾಗೂ ಕುಜ ಸಂಯೋಗ ಇದ್ದು, ಯಾವುದೇ ಶುಭ ಗ್ರಹದ ದೃಷ್ಟಿ ಇಲ್ಲದಿದ್ದಲ್ಲಿ ಹಲವು ಸಂಬಂಧ, ಮದುವೆಗಳು ಆಗುತ್ತವೆ. ಒಂದು ವೇಳೆ ಈ ಗ್ರಹ ಸಂಯೋಗಕ್ಕೆ ಲಗ್ನ ಅಥವಾ ಹತ್ತನೇ ಮನೆಯ ಸಂಬಂಧ ಏರ್ಪಟ್ಟಲ್ಲಿ ತಮ್ಮ ನಡವಳಿಕೆಯಿಂದ ಸಮಾಜದಲ್ಲಿ ಗೌರವ ಕಳೆದುಕೊಳ್ಳುತ್ತಾರೆ.

* ಶುಕ್ರ-ಶನಿ ಹಾಗೂ ಕುಜ ಉತ್ತಮವಾದ ಸ್ಥಾನದಲ್ಲಿ ಸ್ಥಿತವಾಗಿದ್ದರೆ ಪ್ರೇಮ ವಿವಾಹದಲ್ಲಿ ಯಶಸ್ವಿ ಕಾಣುತ್ತಾರೆ. ಉದಾಹರಣೆ: ಒಂದು ವೇಳೆ ಶುಕ್ರ ಗ್ರಹವು ಲಗ್ನದ ಏಳು ಮತ್ತು ಎರಡನೇ ಸ್ಥಾನದ ಅಧಿಪತಿಯಾಗಿದ್ದು, ಉತ್ತಮ ಸ್ಥಿತಿಯಲ್ಲಿದ್ದು, ಶನಿ ಗ್ರಹದ ಉತ್ತಮ ದೃಷ್ಟಿಯಲ್ಲಿದ್ದರೆ ಮತ್ತು ಉಳಿದ ಗ್ರಹಗಳ ನಕಾರಾತ್ಮಕ ಪರಿಣಾಮಗಳು ಇಲ್ಲದಿದ್ದಲ್ಲಿ ಪ್ರೇಮ ವಿವಾಹ ಆಗುತ್ತದೆ. ಅದಕ್ಕೆ ಕುಟುಂಬ ಮತ್ತು ಸಮಾಜದ ಬೆಂಬಲ ದೊರೆಯುತ್ತದೆ.

ಯಾವುದೇ ಮಾರ್ಗದರ್ಶನಕ್ಕೆ, ಸೂಕ್ತ ಜಾತಕ ವಿಶ್ಲೇಷಣೆಗೆ ವೈಯಕ್ತಿಕವಾಗಿ ಭೇಟಿಗೆ ಮೊಬೈಲ್ ಫೋನ್ ಸಂಖ್ಯೆ 9886665656- 9886155755 ಸಂಪರ್ಕಿಸಿ.

English summary
Who has more chance of become love marriage? Here is an analysis according to vedic astrology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X