• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Love Astrology: ಯಾರಿಗೆ ಪ್ರೇಮ ವಿವಾಹ? ಯಾವ ರಾಶಿಯವರು ಆಗಬಾರದು?

By ಹರಿಶಾಸ್ತ್ರಿ ಗುರೂಜಿ
|

ಇನ್ನೇನು ಫೆಬ್ರವರಿ ಹದಿನಾಲ್ಕರಂದು 'ವ್ಯಾಲಂಟೈನ್ಸ್ ಡೇ'. ಆ ದಿನದಂದು ಪ್ರೇಮ ನಿವೇದನೆಗೆ, ಈಗಾಗಲೇ ಪ್ರೀತಿ ಮಾಡುತ್ತಿರುವವರ ಸಂಭ್ರಮಕ್ಕೆ ವರ್ಷಾವಧಿ ಹಬ್ಬ. ವೈಯಕ್ತಿಕವಾಗಿ ನಾನು ಇದನ್ನು ನಂಬುತ್ತೇನೋ ಇಲ್ಲವೋ ಅದು ಬೇರೆ ಮಾತು. ಆದರೆ ಆಚರಣೆ ಮಾಡುವವರು ಮಾಡುತ್ತಾರೆ.

ಈ ಹಿನ್ನೆಲೆಯಲ್ಲಿ ಪ್ರೇಮ ವಿವಾಹದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ ಎಂಬುದನ್ನು ಈ ದಿನ ನಿಮಗೆ ತಿಳಿಸಿಕೊಡುತ್ತೇನೆ. ಏಕೆಂದರೆ, ಪ್ರೇಮ ವಿವಾಹ ಎಂಬುದು ಭಾರತೀಯ ಪರಂಪರೆಯಲ್ಲಿ ವರ್ಜ್ಯ ಅಲ್ಲ. ಆದರೆ ಅದನ್ನು ವಿವಾಹದ ತನಕ ತೆಗೆದುಕೊಂಡು ಹೋಗುವ ಬದ್ಧತೆಯೇ ಕಂಡುಬರುತ್ತದೆ. ಹಾಗೆ ಪ್ರೀತಿ ಮಾಡುವ ಜೋಡಿ ಗಾಂಧರ್ವ ವಿವಾಹ ಆಗಿರುವುದು ಕಂಡುಬರುತ್ತದೆ.

ಜ್ಯೋತಿಷ್ಯ: 2019ರ ದ್ವಾದಶ ರಾಶಿಗಳ ಪ್ರೀತಿ-ಪ್ರೇಮ, ವಿವಾಹ ಭವಿಷ್ಯ

ವಿವಾಹಗಳಲ್ಲೇ ಹಲವು ಬಗೆ ಇದೆ. ಅದರಲ್ಲಿ ಗಾಂಧರ್ವ ವಿವಾಹವೂ ಒಂದು. ದುಷ್ಯಂತ-ಶಕುಂತಲೆಯದು ಗಾಂಧರ್ವ ವಿವಾಹವೇ. ಆದರೆ ನಮ್ಮ ಪರಂಪರೆಯಲ್ಲಿ ಪ್ರೇಮಿಗಳಿಗಾಗಿಯೇ ನಿರ್ದಿಷ್ಟ ದಿನ ಎಂದು ಮೀಸಲಾಗಿಟ್ಟಿರಲಿಲ್ಲ. ಈಗ ನನ್ನ ಬಳಿ ಬಹಳ ಮಂದಿ ಪ್ರೇಮಿಗಳು ಹಾಗೂ ಅಂಥ ಪ್ರೇಮಿಗಳ ಪೋಷಕರು ಜ್ಯೋತಿಷ್ಯ ಕೇಳಲು ಬರುತ್ತಾರೆ.

ಇಬ್ಬರೂ ಪ್ರೀತಿಸಿದ್ದಾರೆ. ಮದುವೆ ಮಾಡಿದರೆ ಸಂತೋಷವಾಗಿ ಇರುತ್ತಾರಾ ಅನ್ನೋದು ಪೋಷಕರ ಪ್ರಶ್ನೆ. ನಾವಿಬ್ಬರು ಪ್ರೀತಿಸಿದ್ದೀವಿ. ಮನೆಯವರನ್ನು ಎದುರು ಹಾಕಿಕೊಂಡು ಮದುವೆ ಆಗುತ್ತಿದ್ದೀವಿ. ನಾವು ಚೆನ್ನಾಗಿ ಇರುತ್ತೇವೆ ಅಲ್ಲವಾ ಎಂಬುದು ಅವರ ಪ್ರಶ್ನೆ ಆಗಿರುತ್ತದೆ.

2019ರ ವರ್ಷ ಭವಿಷ್ಯ; ಮೇಷ ರಾಶಿಯಿಂದ ಕನ್ಯಾ ರಾಶಿವರೆಗೆ

ಬಹಳ ಸಂದರ್ಭಗಳಲ್ಲಿ ಪ್ರೀತಿಸುವ ಇಬ್ಬರು ಯಾವ ಮಟ್ಟಕ್ಕೆ ಗಂಭೀರವಾಗಿ ಇದ್ದಾರೋ ನೋಡಿ, ಸಣ್ಣ-ಪುಟ್ಟ ಸಲಹೆ ನೀಡಿ, ಮದುವೆ ಆಗಿ ಎಂಬ ಸಲಹೆ ನೀಡುತ್ತೇನೆ. ತೀರಾ ಗಂಭೀರ ಸಮಸ್ಯೆಗಳು ಇದ್ದಲ್ಲಿ, ಅವುಗಳನ್ನು ಬಿಡಿಸಿ ಹೇಳಿ, ನಿರ್ಧಾರವನ್ನು ಅವರ ಆಯ್ಕೆಗೆ ಬಿಡುತ್ತೇನೆ. ಆದರೆ ಈ ಪ್ರೇಮ ವಿವಾಹದ ವಿಚಾರದ ಬಗ್ಗೆ ನಿಮಗೆ ಗೊತ್ತಿರಬೇಕಾದ ಅಂಶಗಳನ್ನು ಇಂದು ತಿಳಿಸಿಕೊಡುತ್ತಿದ್ದೇನೆ.

ಪ್ರೇಮ ವಿವಾಹದ ಚಿಂತನೆ ಮಾಡುವುದು ಹೇಗೆ

ಪ್ರೇಮ ವಿವಾಹದ ಚಿಂತನೆ ಮಾಡುವುದು ಹೇಗೆ

ಪ್ರೇಮ ವಿವಾಹವನ್ನು ವೈಯಕ್ತಿಕ ಜಾತಕ ನೋಡಿ ತಿಳಿಯಬಹುದು. ಜಾತಕದಲ್ಲಿ ಶುಕ್ರ ಗ್ರಹ ಎಲ್ಲಿದೆ ಎಂಬುದನ್ನು ನೋಡಿ ತಿಳಿಯಬಹುದು. ಶುಕ್ರನು ಕುಜನ ಜತೆಯಲ್ಲಿ ಅಥವಾ ರಾಹುವಿನ ಜತೆಯಲ್ಲಿ ಲಗ್ನದಲ್ಲೋ, ಲಗ್ನದಿಂದ ಐದನೇ ಮನೆಯಲ್ಲೋ (ಪುತ್ರ ಅಥವಾ ಸಂತಾನ ಸ್ಥಾನ) ಅಥವಾ ಲಗ್ನದಿಂದ ಏಳನೇ ಮನೆಯಲ್ಲೋ (ವಿವಾಹ ಅಥವಾ ಕಳತ್ರ ಸ್ಥಾನ) ಅಥವಾ ಒಂಬತ್ತನೇ ಮನೆಯಲ್ಲೋ (ಭಾಗ್ಯ ಸ್ಥಾನ) ಇದ್ದರೆ ಅಂಥವರಿಗೆ ಪ್ರೇಮ ವಿವಾಹ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇನ್ನು ಚಂದ್ರನ ಜತೆಗೆ ರವಿ ಅಥವಾ ಶುಕ್ರ ಅಥವಾ ಕುಜ ಅಥವಾ ರಾಹು ಈ ನಾಲ್ಕು ಗ್ರಹಗಳಲ್ಲಿ ಯಾವುದಾದರೂ ಒಂದು ಗ್ರಹ ಒಟ್ಟಾಗಿದ್ದು, ಲಗ್ನದಿಂದ ಎರಡು ಅಥವಾ ನಾಲ್ಕನೇ ಅಥವಾ ಏಳನೇ ಮನೆಯಲ್ಲಿ ಇದ್ದರೆ ಆಗ ಕೂಡ ಪ್ರೇಮ ವಿವಾಹದ ಸಾಧ್ಯತೆ ಹೆಚ್ಚು.

ಉದಾಹರಣೆ ಸಹಿತ ವಿವರಣೆ

ಉದಾಹರಣೆ ಸಹಿತ ವಿವರಣೆ

ರವಿ ಹಾಗೂ ಶುಕ್ರರು ಸಮ ಸಪ್ತಕದಲ್ಲಿ ಇದ್ದರೆ, ಅಂದರೆ ರವಿಯು ಶುಕ್ರ ಗ್ರಹದಿಂದ ಕ್ಲಾಕ್ ವೈಸ್ ನಲ್ಲಿ ಎಣಿಸುತ್ತಾ ಸಾಗಿದಾಗ ಏಳನೇ ಮನೆಯಲ್ಲಿರಬೇಕು. ಅದನ್ನು ಸಮ ಸಪ್ತಕ ಆಗುತ್ತದೆ. ಉದಾಹರಣೆ ಕೇಳಿ: ಮೇಷ ಲಗ್ನವಾಗಿದ್ದು, ಅಲ್ಲಿಂದ ಹನ್ನೊಂದನೇ ಮನೆಯಾದ ಕುಂಭ ರಾಶಿಯಲ್ಲಿ ಶುಕ್ರ ಹಾಗೂ ಸಿಂಹದಲ್ಲಿ ರವಿ ಇದ್ದು, ಪರಸ್ಪರರ ವೀಕ್ಷಣೆ ಮಾಡಿದರೂ ಪ್ರೇಮ ವಿವಾಹ ಆಗುತ್ತದೆ. ಅಷ್ಟೇ ಅಲ್ಲ ಕುಂಭ ರಾಶಿಯಲ್ಲೇ ರವಿ-ಶುಕ್ರ ಗ್ರಹಗಳು ಜತೆಯಾಗಿ ಇದ್ದರೂ ಪ್ರೇಮ ವಿವಾಹ ಆಗುವ ಸಾಧ್ಯತೆ ಅತಿ ಹೆಚ್ಚು ಎಂದು ಹೇಳಬಹುದು. ಇನ್ನು ಪಂಚಮ ಹಾಗೂ ಸಪ್ತಮ ಸ್ಥಾನಗಳು ಬಹಳ ಮುಖ್ಯವಾಗಿರುತ್ತದೆ. ಇದರ ಜತೆಗೆ ಗೋಚಾರ ಮತ್ತು ದಶಾ-ಭುಕ್ತಿಗಳು ಸಹ ಮುಖ್ಯವಾಗುತ್ತವೆ.

ನೀವು ಹುಟ್ಟಿದ ದಿನ ಹೇಳಿ, ನಿಮ್ಮ ಸ್ವಭಾವ ನಾವ್ ಹೇಳ್ತೀವಿ!

ಮದುವೆ ತನಕ ಮುಂದುವರಿಯುತ್ತದಾ ಪ್ರೀತಿ?

ಮದುವೆ ತನಕ ಮುಂದುವರಿಯುತ್ತದಾ ಪ್ರೀತಿ?

ಕೆಲವರು ಪ್ರೀತಿ ಮಾತ್ರ ಮಾಡುತ್ತಾರೆ. ಅದು ಮದುವೆ ತನಕ ಮುಂದುವರಿಯುತ್ತದಾ ಎಂಬುದನ್ನು ನೋಡಬೇಕು ಅಂದರೆ ಸಪ್ತಮ ಸ್ಥಾನ ಬಲವಾಗಿರಬೇಕು. ಹಾಗೆ ಸಪ್ತಮ ಸ್ಥಾನ ಬಲವಾಗಿದ್ದರೆ ಮಾತ್ರ ಆ ಪ್ರೀತಿ ಮದುವೆ ತನಕ ಮುಂದುವರಿಯುತ್ತದೆ. ಇನ್ನು ಆ ಮದುವೆಯು ಬಹಳ ಕಾಲ ಬಾಳುತ್ತದಾ ಎಂದು ನೋಡಬೇಕಾದರೆ ರಾಹು ಗ್ರಹ ಎಲ್ಲಿದೆ ಎಂಬುದನ್ನು ಗಮನಿಸಬೇಕು. ರಾಹು ಗ್ರಹದ ದೃಷ್ಟಿ ಏಳನೇ ಮನೆ ಮೇಲಿದೆಯಾ? ಅಥವಾ ಲಗ್ನದ ಮೇಲೆ ಅಥವಾ ಶುಕ್ರನ ಮೇಲಿದೆಯಾ ನೋಡಬೇಕು. ಜತೆಗೆ ರಾಹು ಏನಾದರೂ ಶುಕ್ರನ ಜತೆಗಿದೆಯಾ ಎಂಬುದನ್ನು ಸಹ ನೋಡಬೇಕು ಈ ಪೈಕಿ ಯಾವುದೇ ಒಂದಾಗಿದ್ದರೂ ಆ ಮದುವೆ ಬಹಳ ಕಾಲ ಗಟ್ಟಿಯಾಗಿ ಉಳಿಯುವುದಿಲ್ಲ.

ಪ್ರೀತಿ, ದಯೆಗೆ ಮತ್ತೊಂದು ಹೆಸರೇ ಸಂಖ್ಯೆ 2ರ ವ್ಯಕ್ತಿಗಳು

ಜಾತಕ ಪರಾಮರ್ಶೆ ಮಾಡಿಸದೆ ಮುಂದುವರಿಯಬಾರದು

ಜಾತಕ ಪರಾಮರ್ಶೆ ಮಾಡಿಸದೆ ಮುಂದುವರಿಯಬಾರದು

ಇಬ್ಬರ ಜಾತಕದಲ್ಲೂ ಶುಕ್ರ ಗ್ರಹದ ಮೇಲೆ ರಾಹುವಿನ ದೃಷ್ಟಿ ಇದ್ದರೆ ಅಂಥ ಸಂದರ್ಭದಲ್ಲಿ ಇಬ್ಬರೂ ಅಕಾಲಿಕ ಮರಣ ಹೊಂದುತ್ತಾರೆ. ಅಗ್ನಿ, ವಾಯು, ಜಲದಿಂದ ದುರ್ಮರಣಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗುರು-ಹಿರಿಯರು ನೋಡಿ ಮಾಡಿದ ಮದುವೆ ಉತ್ತಮ. ಅಂಥ ಸನ್ನಿವೇಶಗಳಲ್ಲೂ ಜಾತಕ ಪರಾಮರ್ಶೆಯಲ್ಲಿ ಏನಾದರೂ ತಪ್ಪಾದರೆ ಅಥವಾ ಸಂಬಂಧದಲ್ಲೇ ವಿವಾಹ ಮಾಡುತ್ತಿದ್ದೇವೆ ಎಂದು ನಿರ್ಲಕ್ಷ್ಯ ಮಾಡಿದರೆ ಅಥವಾ ಚಿಕ್ಕ ವಯಸ್ಸಿನಲ್ಲೇ ಮಾತು ಕೊಟ್ಟಿದ್ದೇವೆ. ಆದ್ದರಿಂದ ತಪ್ಪಲು ಸಾಧ್ಯವಿಲ್ಲ ಎಂದು ಏನನ್ನೂ ಗಮನಿಸದೆ ಮದುವೆ ಮಾಡಿದರೂ ಸಾಂಸಾರಿಕ ಜೀವನ ತೊಂದರೆಗೆ ಸಿಲುಕುತ್ತದೆ.

ವಿವಾಹ ಜ್ಯೋತಿಷ್ಯ: ಒಂದೇ ನಕ್ಷತ್ರ, ಒಂದೇ ರಾಶಿಯವರು ಮದುವೆ ಆಗಬಹುದಾ?

ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆ ಆಗಬಾರದು?

ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆ ಆಗಬಾರದು?

ಮೇಷ- ಮಕರ, ಕುಂಭ, ಮಿಥುನ, ಕನ್ಯಾ ಆಗಬಾರದು

ವೃಷಭ- ಸಿಂಹ, ಮೀನ, ಧನುಸ್ಸು ಆಗಬಾರದು

ಮೇಷ, ವೃಶ್ಚಿಕ ಶೇ ಐವತ್ತರಷ್ಟು ಪರವಾಗಿಲ್ಲ

ಮಿಥುನ- ಕರ್ಕಾಟಕ, ಮೇಷ, ವೃಶ್ಚಿಕ ಆಗಬಾರದು

ಕರ್ಕಾಟಕ- ಮಿಥುನ, ಕುಂಭ, ಮಕರ ಆಗಬಾರದು

ಸಿಂಹ- ಮಕರ, ಕುಂಭ ಆಗಬಾರದು

ಕನ್ಯಾ- ಕರ್ಕಾಟಕ, ಮೇಷ, ವೃಶ್ಚಿಕ ಆಗಬಾರದು

ತುಲಾ- ಸಿಂಹ, ಧನು, ಮೀನ ಆಗಬಾರದು

ಮೇಷ, ವೃಶ್ಚಿಕ ಶೇ ಐವತ್ತರಷ್ಟು ಪರವಾಗಿಲ್ಲ

ವೃಶ್ಚಿಕ- ಮಕರ, ಕುಂಭ, ಮಿಥುನ, ಕನ್ಯಾ ಆಗಬಾರದು

ಧನುಸ್ಸು- ಮಿಥುನ, ಕನ್ಯಾ ಆಗಬಾರದು

ಮಕರ, ಕುಂಭ, ವೃಷಭ-ತುಲಾ ಶೇ ಐವತ್ತರಷ್ಟು ಪರವಾಗಿಲ್ಲ

ಮಕರ- ಸಿಂಹ, ಕರ್ಕಾಟಕ, ಮೇಷ, ವೃಶ್ಚಿಕ ಆಗಬಾರದು

ಕುಂಭ- ಸಿಂಹ, ಕರ್ಕಾಟಕ, ಮೇಷ, ವೃಶ್ಚಿಕ ಆಗಬಾರದು

ಮೀನ- ಮಿಥುನ, ಕನ್ಯಾ ಆಗಬಾರದು

ಮಕರ, ಕುಂಭ, ವೃಷಭ-ತುಲಾ ಶೇ ಐವತ್ತರಷ್ಟು ಪರವಾಗಿಲ್ಲ

ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.

English summary
Love Astrology: Compatibility between zodiac signs explained by well known astrologer Hari Shastri Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more