• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರ್ಷದ ಕೊನೆಯ ಭವಿಷ್ಯ ನುಡಿದ ಕೋಡಿಮಠದ ಶ್ರೀ: ಕಂಟಕ ತಪ್ಪದು

|
Google Oneindia Kannada News

ನೈಸರ್ಗಿಕ ವಿಕೋಪ, ಕೊರೊನಾ, ಅಘ್ಘಾನಿಸ್ತಾನ ವಿಚಾರದಲ್ಲಿ ಬಹುತೇಕ ಕರಾರುವಾಕ್ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯವನ್ನು ನಂಬುವುದಾದರೆ ಇದರಲ್ಲಿ ಖುಷಿ ಪಡುವಂತಹ ವಿಚಾರವಿಲ್ಲ.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಮುಂದಿನ ವರ್ಷ ಮತ್ತು ಸಂಕ್ರಾಂತಿಯ ವೇಳೆ ಅವಘಡ ಸಂಭವಿಸಲಿದೆ ಎಂದು ಹೇಳಿದ್ದಾರೆ.

2022ಕ್ಕೆ ಮಹಾ ರೋಗ ರುಜಿನ ಮುಕ್ತಾಯ: ಕೊಡೆಕಲ್ ಮಹಾರಾಜ್ ಭವಿಷ್ಯವಾಣಿ2022ಕ್ಕೆ ಮಹಾ ರೋಗ ರುಜಿನ ಮುಕ್ತಾಯ: ಕೊಡೆಕಲ್ ಮಹಾರಾಜ್ ಭವಿಷ್ಯವಾಣಿ

ಕಳೆದ ಸೆಪ್ಟಂಬರ್ ತಿಂಗಳ ಆದಿಯಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕೋಡಿಮಠದ ಶ್ರೀಗಳು ಭಾಗವಹಿಸಿದ್ದರು. ಇದಾದ ನಂತರ ಶಿವಮೊಗ್ಗ ಜಿಲ್ಲೆಯ ಕಾರ್ಯಕ್ರಮದಲ್ಲೂ ಅಕಾಲಿಕ ಮಳೆಯ ಬಗ್ಗೆ ಶ್ರೀಗಳು ನುಡಿದಿದ್ದರು.

ಮುಂದಿನ ದಿನಗಳಲ್ಲಿ ಸಾವು ಹೆಚ್ಚಾಗಲಿದೆ, ಬಹುದೊಡ್ಡ ದುರಂತ ಸಂಭವಿಸಲಿದೆ, ಯಡಿಯೂರಪ್ಪನವರನ್ನು ಕೆಳಗಿಳಿಸಿದ್ದಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದೂ ಕೋಡಿಶ್ರೀಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಓಮ್ರಿಕಾನ್ ಹೆಚ್ಚಾಗಲಿದೆ, ಮುಂದೆ ಓದಿ..

ಬಿಪಿನ್ ರಾವತ್ ದುರ್ಮರಣ: 13 ತಿಂಗಳ ಹಿಂದೆಯೇ ನುಡಿಯಲಾಗಿದ್ದ ಸ್ಪೋಟಕ ಭವಿಷ್ಯಬಿಪಿನ್ ರಾವತ್ ದುರ್ಮರಣ: 13 ತಿಂಗಳ ಹಿಂದೆಯೇ ನುಡಿಯಲಾಗಿದ್ದ ಸ್ಪೋಟಕ ಭವಿಷ್ಯ

 ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಪಶ್ಚಾತ್ತಾಪ

ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಪಶ್ಚಾತ್ತಾಪ

"ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವು ಹೆಚ್ಚಾಗಲಿದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ರೋಗ ಕಾಯಿಲೆಗಳು ಹೆಚ್ಚಾಗಲಿದೆ. ರಾಷ್ಟ್ರೀಯ ದುರಂತ ಸಂಭವಿಸಲಿದೆ"ಎಂದು ಕೋಡಿಶ್ರೀಗಳು ಮೂರು ತಿಂಗಳ ಹಿಂದೆ ಹೇಳಿದ್ದರು. ಅದರಂತೆ, ಸೇನಾ ಹೆಲಿಕಾಪ್ಟರ್ ಪತನಗೊಂಡು ಸಿಡಿಎಸ್ ಸೇರಿದಂತೆ ಹದಿಮೂರು ಸೈನಿಕರು ಮೃತ ಪಟ್ಟಿದ್ದರು.

 ಅಫ್ಘಾನಿಸ್ತಾನ ತಾಲಿಬಾನ್ ವಶವಾಗುತ್ತಿದೆ

ಅಫ್ಘಾನಿಸ್ತಾನ ತಾಲಿಬಾನ್ ವಶವಾಗುತ್ತಿದೆ

ರೋಗ ರುಜಿನಗಳು ಹೆಚ್ಚಾಗಲಿದೆ ಎಂದೂ ಕೋಡಿಶ್ರೀಗಳು ಹೇಳಿದ್ದರು. ಅದರಂತೇ, ಮತ್ತೆ ಕೊರೊನಾ ರೂಪಾಂತಾರಿ ಓಮ್ರಿಕಾನ್ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಹರಡಲಾರಂಭಿಸಿದೆ. ದೇಶದ ಕೆಲವು ರಾಜ್ಯಗಳು ನೈಟ್ ಕರ್ಫ್ಯೂ ಜಾರಿಗೆ ತಂದಿದೆ. "ಜಗತ್ತಿನಲ್ಲಿ ಒಂದು ದೇಶ ಭೂಪಟದಿಂದ ಅಳಿಸಿಹೋಗಲಿದೆ ಎಂದು 2 ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದೆ. ಅದರಂತೆ ಇಂದು ಅಫ್ಘಾನಿಸ್ತಾನ ತಾಲಿಬಾನ್ ವಶವಾಗುತ್ತಿದೆ'' ಎಂದು ಕೋಡಿಮಠದ ಸ್ವಾಮೀಜಿ ತಮ್ಮ ಭವಿಷ್ಯವನ್ನು ಅರ್ಥೈಸಿದ್ದರು.

 ರಾಣೆಬೆನ್ನೂರಿನಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು

ರಾಣೆಬೆನ್ನೂರಿನಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು

ರಾಣೆಬೆನ್ನೂರಿನಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು, ಓಮ್ರಿಕಾನ್ ಮತ್ತು ರಾಜಕೀಯದ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. "ನಾನು ಹಿಂದೆ ದೊಡ್ಡ ದುರಂತ ಸಂಭವಿಸಲಿದೆ ಎಂದು ಹೇಳಿದ್ದೆ, ಅದರಂತೆ ಸೈನಿಕರು ಮೃತರಾಗಿದ್ದಾರೆ. ದೇಶದಲ್ಲಿ ಇಂತದ್ದೇ ದುರಂತ ಇನ್ನೂ ಒಂದು ಸಂಭವಿಸುವ ಮುನ್ಸೂಚನೆಯಿದೆ"ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯವನ್ನು ನುಡಿದಿದ್ದಾರೆ.

 ಕೊರೊನಾ ರೂಪಾಂತರಿ ಹೆಚ್ಚಾಗುವ ಲಕ್ಷಣಗಳಿವೆ

ಕೊರೊನಾ ರೂಪಾಂತರಿ ಹೆಚ್ಚಾಗುವ ಲಕ್ಷಣಗಳಿವೆ

"ಕೊರೊನಾ ರೂಪಾಂತರಿ ಹೆಚ್ಚಾಗುವ ಲಕ್ಷಣಗಳಿವೆ. ರೋಗ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ದೇಶದಲ್ಲಿ ಸಂಶಯ, ಅಸಹನೆ, ದ್ವೇಷ ಹಾಗೂ ಕಲಹಗಳು ಹೆಚ್ಚಾಗಲಿವೆ. ಕೆಲವೇ ದಿನಗಳಲ್ಲಿ ಮಳೆ ಕೂಡ ಅಧಿಕವಾಗಿ ಸುರಿಯುವ ಲಕ್ಷಣವಿದೆ"ಎಂದು ಕೋಡಿಮಠದ ಶ್ರೀಗಳು ನುಡಿದಿದ್ದಾರೆ. ಓಮ್ರಿಕಾನ್ ಕೇಸುಗಳು ದಿನದಿಂದ ದಿನಕ್ಕೆ ದೇಶದಲ್ಲಿ ಹೆಚ್ಚಾಗುತ್ತಿರುವುದಕ್ಕೂ, ಕೋಡಿಶ್ರೀಗಳ ಭವಿಷ್ಯಕ್ಕೂ ಒಂದಕ್ಕೊಂದು ತಾಳೆಯಾಗುತ್ತಿದೆ.

English summary
Kodimutt Swamiji Prediction In Ranebennur: Corona Case May Increase. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X