ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರಾ: ಜ್ಯೋತಿಷಿ ಏನಂತಾರೆ?

By ಪ್ರಕಾಶ್ ಅಮ್ಮಣ್ಣಾಯ
|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗ್ತಾರಾ? ಜ್ಯೋತಿಷಿ ಹೀಗ್ ಹೇಳ್ತಾರೆ | Oneindia Kannada

ಇಲ್ಲಿ ಪ್ರಕಟವಾಗಿರುವ ಭವಿಷ್ಯವು ಜ್ಯೋತಿಷಿಗಳು ಹೇಳಿರುವುದು. ಇದರಲ್ಲಿನ ಯಾವುದೇ ಅಂಶಕ್ಕೂ ಒನ್ಇಂಡಿಯಾ ಕನ್ನಡ ಜವಾಬ್ದಾರವಲ್ಲ - ಸಂಪಾದಕ

*****

ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಭವಿಷ್ಯದ ಬಗೆಗಿನ ಲೇಖನವಿದು. ಮಹಾನ್ ನಾಯಕರಾದ ಅವರ ವಿಚಾರದಲ್ಲಿ ಭಾವೋದ್ವೇಗಕ್ಕೆ ಒಳಗಾಗುವ ಅಭಿಮಾನಿಗಳೇ ಹೆಚ್ಚು. ಆದರೆ ಗ್ರಹಗತಿಗಳು ಎಲ್ಲರನ್ನೂ ಒಂದೇ ರೀತಿ ನೋಡುತ್ತವೆ.

ಅವರ ಜನ್ಮ ಜಾತಕ ಹಾಗೂ ಗ್ರಹಗಳ ಸ್ಥಿತಿಯ ಆಧಾರದಲ್ಲಿ ಏನನ್ನು ಸೂಚಿಸುತ್ತಿದೆಯೋ ಆ ಅಂಶಗಳನ್ನೇ ಇಲ್ಲಿ ಕೊಡಲಾಗಿದೆ. ಫಲಾಫಲದ ಪರಾಮರ್ಶೆಯಷ್ಟೇ ನಾವು ಮಾಡಲು ಸಾಧ್ಯ. ಉಳಿದದ್ದು ಆ ಭಗವಂತನಿಗೆ ಬಿಟ್ಟ ವಿಚಾರ. ವೃಶ್ಚಿಕ ರಾಶಿಯವರಾದ ಯಡಿಯೂರಪ್ಪನವರ ಜನ್ಮ ಜಾತಕ ನೋಡುವಾಗ ವೃಷಭದಲ್ಲಿ ಶನಿ ಗ್ರಹವಿದೆ.

ಜ್ಯೋತಿಷ್ಯ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ, ಎಚ್ ಡಿಕೆ ಸಿಎಂಜ್ಯೋತಿಷ್ಯ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ, ಎಚ್ ಡಿಕೆ ಸಿಎಂ

ಇನ್ನು ಧನು ಲಗ್ನದವರಾದ ಅವರಿಗೆ ಎರಡನೇ ಸ್ಥಾನದಲ್ಲಿ ಕುಜ ಹಾಗೂ ಬುಧ ಗ್ರಹವಿದೆ. ಸದ್ಯಕ್ಕೆ ಧನು ರಾಶಿಯಲ್ಲಿ ಶನಿಯು ಸ್ಥಿತನಾಗಿದ್ದು, ಜನ್ಮ ಕಾಲದಲ್ಲಿ ವೃಷಭ ರಾಶಿಯಲ್ಲಿದ್ದ ಶನಿಯಿಂದ ಲೆಕ್ಕ ಹಾಕಿದರೆ ಈಗ ಎಂಟನೆ ಸ್ಥಾನದಲ್ಲಿದೆ. ಆದ್ದರಿಂದ ಯಾವ ರೀತಿಯಲ್ಲೂ ಅನುಕೂಲಕರವಾದ ಅಥವಾ ಶುಭವಾದ ಫಲಗಳನ್ನು ಹೇಳುವುದು ಕಷ್ಟವಾಗುತ್ತದೆ.

ಸಾಡೇ ಸಾತ್ ನಿಂದ ಶ್ರಮ ಹೆಚ್ಚು

ಸಾಡೇ ಸಾತ್ ನಿಂದ ಶ್ರಮ ಹೆಚ್ಚು

ವೃಶ್ಚಿಕ ರಾಶಿಗೆ ಈಗ ಸಾಡೇಸಾತ್ ನಡೆಯುತ್ತಿದೆ. ಆದ್ದರಿಂದ ಶ್ರಮ ಹೆಚ್ಚಾಗುತ್ತದೆ. ಇನ್ನು ಜನ್ಮ ಜಾತಕದಲ್ಲಿರುವ ಶನಿಯಿಂದ ಎಂಟನೇ ಮನೆಯಲ್ಲಿ ಸದ್ಯಕ್ಕೆ ಶನಿ ಆಗುವುದರಿಂದ ಆರೋಗ್ಯದಲ್ಲಿ ಬಹಳ ಸಮಸ್ಯೆಗಳಾಗುತ್ತವೆ. ಇನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಆಗುವುದಕ್ಕೆ ಸಾಲುಸಾಲು ಅಡೆತಡೆಗಳು ಎದುರಾಗುತ್ತದೆ.

ಮಾತಿನ ಕಾರಣಕ್ಕೆ ವಿರೋಧ

ಮಾತಿನ ಕಾರಣಕ್ಕೆ ವಿರೋಧ

ಯಡಿಯೂರಪ್ಪನವರು ತಮ್ಮ ಮಾತುಗಳಿಂದ ಬಹಳ ವಿರೋಧ ಕಟ್ಟಿಕೊಳ್ಳುತ್ತಾರೆ. ಪಕ್ಷದ ವರಿಷ್ಠರು ಹಾಗೂ ರಾಜ್ಯ ಬಿಜೆಪಿಯೊಳಗಿನ ನಾಯಕರ ಅಸಮಾಧಾನಕ್ಕೂ ಇದು ಕಾರಣ ಆಗಲಿದೆ. ತಮ್ಮ ಸಿಟ್ಟಿನ ನಡವಳಿಕೆ ಕಾರಣಕ್ಕೆ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ ಎಂಬುದನ್ನು ಸೂಚಿಸುತ್ತಿದೆ.

ಮತ್ತೆ ಎದ್ದು ನಿಲ್ಲುವ ಆರೋಪಗಳು

ಮತ್ತೆ ಎದ್ದು ನಿಲ್ಲುವ ಆರೋಪಗಳು

ಇನ್ನು ಈ ಹಿಂದೆ ಎದುರಿಸಿದ್ದ ಆರೋಪಗಳು ಮತ್ತೆ ಬೇಟೆ ಆಡಲು ಆರಂಭಿಸುತ್ತವೆ. ಇದಕ್ಕೆ ಕಾರಣ ಕೂಡ ಗ್ರಹಸ್ಥಿತಿಗಳೆ. ಯಾವುದು ಮುಗಿಯಿತು, ಇನ್ನು ಸಮಸ್ಯೆಯಿಲ್ಲ ಎಂದು ಭಾವಿಸಿದ್ದರೋ ಅವುಗಳೇ ಎದ್ದು ನಿಲ್ಲುತ್ತವೆ. ಅಷ್ಟೇ ಅಲ್ಲ, ಕಂಟಕವಾಗಿ ಮಾರ್ಪಾಡು ಆಗುತ್ತವೆ.

ಹಿನ್ನಡೆಯ ಸೂಚನೆ

ಹಿನ್ನಡೆಯ ಸೂಚನೆ

ಆದ್ದರಿಂದ ಯೋಗಸ್ಯ ಪರಿರಕ್ಷಣಂ ಕ್ಷೇಮಃ ಎಂಬ ಮಾತಿನಂತೆ ತಮಗಿರುವ ಯೋಗವನ್ನು ಕಾಯ್ದುಕೊಳ್ಳುವುದೇ ಬುದ್ಧಿವಂತಿಕೆ. ಇನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಅಧಿಕಾರ ಹಿಡಿಯುವುದನ್ನು ಕೂಡ ಸೂಚಿಸುತ್ತಿದೆ. ಒಟ್ಟಿನಲ್ಲಿ ಯಡಿಯೂರಪ್ಪನವರ ಸಂಘಟನಾ ಶಕ್ತಿಯಲ್ಲಿನ ಹಿನ್ನಡೆ, ಸಿಟ್ಟು, ಅನಾರೋಗ್ಯ ಸಮಸ್ಯೆಯಾಗಿ ಅವರನ್ನು ಕಾಡುತ್ತದೆ, ಎಚ್ಚರ ಅಗತ್ಯ.

English summary
BS Yeddyurappa's political career analysis according to vedic astrology by well known astrologer Prakash Ammannaya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X