ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಕ ವಿಮರ್ಶೆ: ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶದಲ್ಲಿ ಮೋದಿಗೆ ಕಷ್ಟ

By ಪ್ರಕಾಶ್ ಅಮ್ಮಣ್ಣಾಯ
|
Google Oneindia Kannada News

Recommended Video

ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯರಿಂದ ಪ್ರಧಾನಿ ಮೋದಿ ಜಾತಕ ವಿಶ್ಲೇಷಣೆ | Oneindia Kannada

ಯಾವುದೇ ವ್ಯಕ್ತಿಯ ಜೀವನ ಸುಖ-ದುಃಖಗಳ ಮಿಶ್ರಣ. ಅದು ಯಾವ ಪ್ರಮಾಣದಲ್ಲಿರುತ್ತದೆ ಎಂಬುದು ಪೂರ್ವ ಜನ್ಮದಲ್ಲಿ ಆಯಾ ವ್ಯಕ್ತಿ ಮಾಡಿದ ಪಾಪ-ಪುಣ್ಯಗಳ ಮೇಲೆ ಅವಲಂಬನೆ ಆಗಿರುತ್ತದೆ. ಇನ್ನು ಸುಖ- ದುಃಖವನ್ನು ಮನಸಿಗೆ- ತಲೆಗೆ- ಹೃದಯೊಳಕ್ಕೆ ಬಿಟ್ಟುಕೊಳ್ಳದ ಸ್ಥಿತಪ್ರಜ್ಞ ಸ್ಥಿತಿಯವರಿಗೆ ಯಾವ ಭಾವವೂ ತಾಗುವುದಿಲ್ಲ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇರಲಿ, ಇಂದಿನ ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ತಮಾನ- ಭವಿಷ್ಯದ ಬಗ್ಗೆ ಕೆಲ ಸೂಕ್ಷ್ಮ ಸಂಗತಿಗಳನ್ನು ತಿಳಿಸಲಾಗುತ್ತಿದೆ. ನರೇಂದ್ರ ಮೋದಿ ಅವರದು ಅನೂರಾಧ ನಕ್ಷತ್ರ, ವೃಶ್ಚಿಕ ರಾಶಿ. ಇನ್ನು ಅವರಿಗೆ 2017ರ ನವೆಂಬರ್ ನಿಂದ 2019ರ ಏಪ್ರಿಲ್ ವರೆಗೆ ಚಂದ್ರದಶೆಯಲ್ಲಿ ಬುಧ ಭುಕ್ತಿ ನಡೆಯುತ್ತದೆ.

ರಾಜಕೀಯ ಪಕ್ಷದ ಚಿಹ್ನೆ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯರಾಜಕೀಯ ಪಕ್ಷದ ಚಿಹ್ನೆ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

ಈ ಬುಧನು ಮೋದಿಯವರ ಜಾತಕದಲ್ಲಿ ಖರದ್ರೇಕ್ಕಾಣಾಧಿಪತಿ ಅಂದರೆ 22ನೇ ದ್ರೇಕ್ಕಾಣಾಧಿಪತ್ಯ ಹೊಂದಿದವನು. ಇವನಿಗೆ ಒಂದು ಸುಸ್ಥಿತಿಯನ್ನು ನಾಶ ನಾಡುವ ಅಧಿಕಾರವಿದೆ. ಅಂದರೆ ಸಾವಿಗೆ ಸಮಾನವಾದದ್ದು ಎನಿಸುವಂಥ ಸಾಲು ಸಾಲು ಅವಮಾನಗಳನ್ನು ತರುತ್ತಾನೆ. ಯಾವುದೇ ವ್ಯಕ್ತಿಯ ಚಾರಿತ್ರ್ಯದ ಮೇಲೆ ಪದೇಪದೇ ದಾಳಿ ಮಾಡಿದರೆ, ಆತನ ಗೌರವಕ್ಕೆ ಕುಂದಾಗುವಂತೆ ಮಾಡಿದರೆ ಅದಕ್ಕಿಂತ ಸವಾಲಿನ ಸ್ಥಿತಿ ಯಾವುದಿದೆ?

ಮೋದಿ ಅವರ ಉದ್ದೇಶಕ್ಕೆ ಧಕ್ಕೆ ಆಗುವ ಸಾಧ್ಯತೆ

ಮೋದಿ ಅವರ ಉದ್ದೇಶಕ್ಕೆ ಧಕ್ಕೆ ಆಗುವ ಸಾಧ್ಯತೆ

ಇನ್ನು ಮೋದಿಯವರಿಗೆ ಬಲಿಷ್ಠ ಶನಿ ಇದ್ದು ದೇಹಕ್ಕೇನೂ ಅಪಾಯವಿಲ್ಲ. ದೀರ್ಘಾಯುಷ್ಯ ಯೋಗ ಇದೆ. ಆದರೆ ಮನುಷ್ಯನಿಗೆ ಬೇರೆ ಬೇರೆ ರೂಪದ ಜೀವಗಳಿವೆ. ನಾವು ವಾಡಿಕೆಯಲ್ಲಿ ಹೇಳುವಂತೆ, 'ನನಗೆ ಆತ ಅಥವಾ ಆಕೆ ಎಂದರೆ ಪ್ರಾಣ, ಆತ/ಆಕೆ ಎಂದರೆ ಪಂಚ ಪ್ರಾಣ' ಹೀಗೆ. ಮೋದಿಯವರಿಗೆ ಸಾಮ್ರಾಜ್ಯ ವಿಸ್ತರಣೆ, ದಕ್ಷ ಆಡಳಿತ, ಭಾರತೀಯತೆಯನ್ನು ದೇಶವ್ಯಾಪಿಯಾಗಿ ಜನಮನದಲ್ಲಿ ಬೇರೂರಿಸುವುದು ಅವರ ಪ್ರಾಣ. ಅಂದರೆ ಅವರ ದೇಹಕ್ಕೆ ಅಪಾಯವಿಲ್ಲ. ಆದರೆ ಅವರ ಭಾವನೆಗಳಿಗೆ ಧಕ್ಕೆಯಾದರೆ? ಇದು ಯೋಚಿಸಬೇಕಾದ ವಿಚಾರ. ಯಾವ ನಿರೀಕ್ಷೆ ಇಟ್ಟುಕೊಂಡಿರುತ್ತೇವೆಯೋ ಅದು ಫಲಿಸದಿದ್ದರೂ, ಪರಿಪೂರ್ಣಗೊಳ್ಳದಿದ್ದರೂ ಅದು ಮರಣಕ್ಕೆ ಸಮಾನವೇ ಆಗುತ್ತದೆ.

ಹಿನ್ನಡೆಗೆ ಕಾರಣವಾಗುತ್ತದೆ ಗ್ರಹಸ್ಥಿತಿ

ಹಿನ್ನಡೆಗೆ ಕಾರಣವಾಗುತ್ತದೆ ಗ್ರಹಸ್ಥಿತಿ

ಈ ಮದ್ಯೆ ರಾಜಸ್ತಾನ, ಮಧ್ಯಪ್ರದೇಶ, ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಅಲ್ಲದೆ ರಾಜ್ಯಸಭೆಯ ಸಂಖ್ಯೆಯನ್ನು ಪೂರ್ಣಗೊಳಿಸಲು ಬಿಜೆಪಿಗೆ ಅಭೂತಪೂರ್ವ ಗೆಲುವಿನ ಅವಶ್ಯಕತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನ ಮಂತ್ರಿ ಯಜಮಾನನಾಗುತ್ತಾರೆ. ಅಂಥ ಯಜಮಾನನ ಜಾತಕದಲ್ಲಿ ಇಂತಹ ಗ್ರಹ ಸ್ಥಿತಿ ಇದ್ದಾಗ ಇದು ಹಿನ್ನಡೆಗೆ ಕಾರಣವಾಗುತ್ತದೆ.

ಬಿಜೆಪಿ 2019 ರಲ್ಲಿ ಅಧಿಕಾರಕ್ಕೆ ಬರುವುದು ಕಷ್ಟವೇ?

ಬಿಜೆಪಿ 2019 ರಲ್ಲಿ ಅಧಿಕಾರಕ್ಕೆ ಬರುವುದು ಕಷ್ಟವೇ?

ಲೋಕಸಭೆ ಚುನಾವಣೆ ನಡೆಯುವ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟವೇ? ಎಂಬ ಪ್ರಶ್ನೆ ಮೂಡುತ್ತದೆ. ಖಂಡಿತಾ ಹಾಗೇನಿಲ್ಲ. ಆ ಸ್ಥಿತಿಗೆ ಬರಲು ಬಹಳಷ್ಟು ಪರದಾಡಬೇಕಾದೀತು. ಅಂದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರ್ಥ. ಯಾಕೆಂದರೆ ಬುಧನಿಗೆ ಇಲ್ಲಿ ಅಷ್ಟಮಾಧಿಪತ್ಯವೂ (ಲಗ್ನದಿಂದ ಎಂಟನೇ ಸ್ಥಾನ), ಏಕಾದಶಾಧಿಪತ್ಯವೂ (ಲಗ್ನದಿಂದ ಹನ್ನೊಂದನೇ ಸ್ಥಾನ) ಇದ್ದು, ಏಕಾದಶಾಧಿಪತ್ಯಕ್ಕೆ ಬಲ ಹೆಚ್ಚಿದೆ. ಏಕಾದಶ ಸ್ಥಾನದಲ್ಲೇ ನಿಪುಣ ಯೋಗ. ಅದರಲ್ಲೂ ಬುಧನ ಸ್ವಕ್ಷೇತ್ರ, ಉಚ್ಚ ಕ್ಷೇತ್ರದಲ್ಲಿ ನಿಪುಣಯೋಗ! ಇದನ್ನು ತಡೆಯಲು ಯಾವ ದುರ್ಯೋಗದಿಂದಲೂ ಸಾಧ್ಯವಿಲ್ಲ. ಆದರೆ ಮೊದಲು ಕರ್ನಾಟಕದಲ್ಲಿ ಬಿಜೆಪಿಗೆ ಅಧಿಕಾರ ವಂಚಿತವಾದರೆ ಇತರ ರಾಜ್ಯಗಳಿಗೆ ಇದರ ಪರಿಣಾಮಗಳಾಗಬಹುದು.

ಬಿಜೆಪಿಗೆ ಆಡಳಿತ ನಡೆಸುವ ಯೋಗ ಕಡಿಮೆ

ಬಿಜೆಪಿಗೆ ಆಡಳಿತ ನಡೆಸುವ ಯೋಗ ಕಡಿಮೆ

ಒಂದು ದೋಷಪ್ರದ ಕಾಲವನ್ನು ಸರಿ ಮಾಡಿಕೊಳ್ಳಲು ಅನೇಕ ವಿಧದ ತಂತ್ರಗಾರಿಕೆ ಬೇಕು. ಪೂಜೆ ಪುರಸ್ಸರಾದಿಗಳು ಸಾಲದು. ಪಕ್ಷದೊಳಗಿನ ಐಕಮತ್ಯಕ್ಕೆ ಹೆಚ್ಚು ಶ್ರಮಿಸಬೇಕು. ಪಕ್ಷದ ತರ್ಕವನ್ನು ಕಾರ್ಯಕರ್ತರಿಗೆ ವಿವರಿಸಿ, ಮನದಟ್ಟು ಮಾಡಿಸಬೇಕು. ಶತ್ರು ಪಾಳಯದ ದೋಷಗಳನ್ನು ಎತ್ತಿಹಿಡಿಯುವ ತಂತ್ರಗಳು ಬೇಕು. ಇನ್ನೊಂದಡೆ ಮೋದಿಯವರಿಗೆ ನರಗಳ ದುರ್ಬಲತೆಯೂ ಬರಬಹುದು. ಇದಕ್ಕೆಲ್ಲ ವೈದ್ಯಕೀಯ ಸಲಹೆಗಳಿವೆ. ಒಟ್ಟಿನಲ್ಲಿ ಸುಲಭದಲ್ಲಿ ಜಯ ಗಳಿಸುವ ಬದಲು ಅಧಿಕ ಶ್ರಮದಿಂದ ವಿಜಯ ಪಡೆಯಬೇಕಾದೀತು. ಆದರೆ ಕರ್ನಾಟಕದಲ್ಲಿ ಸದ್ಯ ಬಿಜೆಪಿಗೆ ಆಡಳಿತ ನಡೆಸುವ ಯೋಗ ಕಡಿಮೆ. ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಬುಧ ಭುಕ್ತಿಯೂ ಮುಗಿಯುವುದರಿಂದ ಆ ನಂತರ ನಿಪುಣ ಯೋಗದಲ್ಲೇ ಇರುವ ಕೇತು ಭುಕ್ತಿಯು ಬರುವುದರಿಂದ ಶುಭಫಲವನ್ನೇ ಹೇಳಬೇಕಾಗುತ್ತದೆ.

English summary
According to vedic astrology, victory will be tough for Prime minister Narendra Modi in Karnataka, Rajasthan and Madhya Pradesh assembly elections. Well known astrologer Prakash Ammannaya from Karnataka has analyzed the pros and cons after studying horoscope of Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X