ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಚುನಾವಣೆ: ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಭವಿಷ್ಯ

|
Google Oneindia Kannada News

Recommended Video

ಕರ್ನಾಟಕ ವಿಧಾನಸಭಾ ಚುನಾವಣೆ 2018 : ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಭವಿಷ್ಯ | Oneindia Kannada

"ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಭಾರೀ ಗದ್ದಲ, ಗಲಾಟೆ ಹಾಗೂ ಹಿಂದೆಂದೂ ಕಂಡಿರದ ರಾಜಕೀಯ ಮೇಲಾಟವನ್ನು ಕಾಣಬೇಕಾಗುತ್ತದೆ" ಎಂದು ಭವಿಷ್ಯ ನುಡಿದಿದ್ದಾರೆ ದೇಶದ ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞೆ ಹಾಗೂ ಟಾರೋಟ್ ರೀಡರ್ ಶೀಲಾ ಬಜಾಜ್. ಅಂದಹಾಗೆ ಈ ಶೀಲಾ ಬಜಾಜ್ ಯಾರು ಅಂತೀರಾ?

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬಿಗ್ ಬಾಸ್ ಕನ್ನಡ ಸೀಸನ್ ನಾಲ್ಕರಲ್ಲಿ ಸ್ಪರ್ಧಾಳುಗಳಿಗೆ ಭವಿಷ್ಯ ಹೇಳಲು 'ಆ ಮನೆ'ಯೊಳಗೆ ಹೋಗಿದ್ದವರು ಇದೇ ಶೀಲಾ ಬಜಾಜ್. ಅಲ್ಲಿಂದ ಹೊರಗೆ ಬಂದ ಮೇಲೆ ಪ್ರಥಮ್ ಗೆ ಗೆಲ್ಲುವ ಅವಕಾಶಗಳು ಹೆಚ್ಚಿವೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಕೂಡ ಹಾಕಿದ್ದರು. ಹದಿನೆಂಟು ವರ್ಷಗಳ ಸುದೀರ್ಘ ಅನುಭವ, ಲಕ್ಷಾಂತರ ಮಂದಿಗೆ ಸಂಖ್ಯಾಶಾಸ್ತ್ರ ಹಾಗೂ ಟಾರೋಟ್ ರೀಡಿಂಗ್ ಮಾಡಿರುವ ಶೀಲಾ ಮೂಲತಃ ಬೆಂಗಳೂರಿನವರು.

ಏಷ್ಯಾದಲ್ಲೇ ಬೆಸ್ಟ್ ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಬಗ್ಗೆ ಗೊತ್ತೆ?ಏಷ್ಯಾದಲ್ಲೇ ಬೆಸ್ಟ್ ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಬಗ್ಗೆ ಗೊತ್ತೆ?

ಕೋರಮಂಗಲದಲ್ಲಿ ಅವರ ಕಚೇರಿ ಇದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಬಗ್ಗೆ ಆಸಕ್ತಿಕರವಾದ ವಿಚಾರಗಳನ್ನು 'ಒನ್ಇಂಡಿಯಾ ಕನ್ನಡಕ್ಕೆ' ತಿಳಿಸಿದ್ದಾರೆ ಶೀಲಾ ಬಜಾಜ್. ಏನು ಆ ವಿಶೇಷ? ಯಾವ ಪಕ್ಷ ಗೆಲ್ಲುವ ಅವಕಾಶ ಜಾಸ್ತಿ ಇದೆ ಇತ್ಯಾದಿ ಮಾಹಿತಿಗಾಗಿ ಮುಂದೆ ಓದಿ.

ಹಿಂದೆಂದಿಗಿಂತ ಹೆಚ್ಚಿನ ಗದ್ದಲ ಈ ಸಲದ ಚುನಾವಣೆಯಲ್ಲಿ

ಹಿಂದೆಂದಿಗಿಂತ ಹೆಚ್ಚಿನ ಗದ್ದಲ ಈ ಸಲದ ಚುನಾವಣೆಯಲ್ಲಿ

"ಈ ಟಾರೋಟ್ ರೀಡಿಂಗ್ ನಿಂದ ಇಂದಿನ ಸನ್ನಿವೇಶಕ್ಕೆ ಯಾವ ಶಕ್ತಿ ಹೇಗೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ನನಗೆ ಬಂದಿರುವ ಈ ಕಾರ್ಡ್ ಗಳನ್ನು ನೋಡಿದರೆ, ಈ ಬಾರಿ ಚುನಾವಣೆ ಬಹಳ ಗದ್ದಲದಿಂದ ಕೂಡಿರುತ್ತದೆ. ಆರೋಪ- ಪ್ರತ್ಯಾರೋಪ, ಹೊಡೆದಾಟ- ಬಡಿದಾಟ ಇಂಥದ್ದಕ್ಕೆಲ್ಲ ಇಲ್ಲಿನ ಜನರು ಸಾಕ್ಷಿ ಆಗಬೇಕಾಗುತ್ತದೆ. ಈ ಹಿಂದಿನ ಎಲ್ಲ ಚುನಾವಣೆಗಿಂತ ಹೆಚ್ಚಿನ ಗದ್ದಲ ಈ ಸಲ ಆಗುವುದು ನಿಶ್ಚಿತ" ಎನ್ನುತ್ತಾರೆ ಶೀಲಾ.

ರಾಜಕೀಯ ಪಕ್ಷದ ಚಿಹ್ನೆ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯರಾಜಕೀಯ ಪಕ್ಷದ ಚಿಹ್ನೆ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

ಬಿಜೆಪಿಯಿಂದ ಹೊಸ ನಾಯಕತ್ವ ಬರುವ ಲಕ್ಷಣಗಳು

ಬಿಜೆಪಿಯಿಂದ ಹೊಸ ನಾಯಕತ್ವ ಬರುವ ಲಕ್ಷಣಗಳು

ಬಿಜೆಪಿಯ ಯಡಿಯೂರಪ್ಪ ಅವರ ಸ್ಥಿತಿ ಕೂಡ ತುಂಬ ಪ್ರಬಲವಾಗಿದೆ. ಇದು ಈ ಕಾರ್ಡ್ ನಿಂದ ಗೊತ್ತಾಗುತ್ತಿದೆ. ಹೆಚ್ಚಿನ ಸ್ಥಾನ ಪಡೆಯುವುದರಲ್ಲಿ ಅನುಮಾನ ಇಲ್ಲ. ಆದರೆ ಬಿಜೆಪಿಯಿಂದ ಹೊಸ ನಾಯಕತ್ವ ಬರಬಹುದಾದ ಲಕ್ಷಣಗಳು ಗೋಚರಿಸುತ್ತಿವೆ. ನಾಯಕತ್ವದ ವಿಚಾರದಲ್ಲಿ ಸ್ವಲ್ಪ ಮಟ್ಟದ ಗೊಂದಲ ಏರ್ಪಟ್ಟು, ಹೊರಗಿನ ಪಕ್ಷದ ಒಬ್ಬರಿಗೆ ಅನುಕೂಲ ಕಂಡುಬರುತ್ತಿದೆ.

ಚುನಾವಣೆ ವರ್ಷದಲ್ಲಿ ಯಾವ ರಾಶಿಯ ರಾಜಕಾರಣಿಗೆ ಯಾವ ಫಲ?ಚುನಾವಣೆ ವರ್ಷದಲ್ಲಿ ಯಾವ ರಾಶಿಯ ರಾಜಕಾರಣಿಗೆ ಯಾವ ಫಲ?

ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಪರಸ್ಪರ ಸಮ ಸಮ ಹೋರಾಟ

ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಪರಸ್ಪರ ಸಮ ಸಮ ಹೋರಾಟ

ಇನ್ನು ಕಾಂಗ್ರೆಸ್ ನ ಸಿದ್ದರಾಮಯ್ಯ ಅವರ ಸನ್ನಿವೇಶ ಕೂಡ ಬಹಳ ಪ್ರಬಲವಾಗಿದೆ. ಈ ವಿಷಯದಲ್ಲಿ ಯಡಿಯೂರಪ್ಪ ವರ್ಸಸ್ ಸಿದ್ದರಾಮಯ್ಯ ಎಂಬ ಜಿದ್ದಾಜಿದ್ದಿ ದೊಡ್ಡ ಮಟ್ಟದಲ್ಲಿ ಚುನಾವಣೆಯಲ್ಲಿ ಕಂಡುಬರುತ್ತದೆ. ಇದನ್ನು ಬಿಜೆಪಿ ವರ್ಸಸ್ ಕಾಂಗ್ರೆಸ್ ಹೋರಾಟ ಅತ ಬೇಕಾದರೂ ಅಂದುಕೊಳ್ಳಬಹುದು. ಇಬ್ಬರಿಗೂ ಗೆಲುವು ಸುಲಭಕ್ಕೆ ಸಿಗದಷ್ಟು ದೊಡ್ಡ ಹೋರಾಟ ಗಮನಿಸಬಹುದು.

ಇಬ್ಬರ ಜಗಳದಲ್ಲಿ ಕುಮಾರಸ್ವಾಮಿಗೆ ಲಾಭ ಆಗುತ್ತದೆ

ಇಬ್ಬರ ಜಗಳದಲ್ಲಿ ಕುಮಾರಸ್ವಾಮಿಗೆ ಲಾಭ ಆಗುತ್ತದೆ

ಕುಮಾರಸ್ವಾಮಿ ಅವರ ಪಾಲಿಗೆ ಉಳಿದಿಬ್ಬರಿಗಿಂತ ಶಕ್ತಿ ಕಡಿಮೆ ಇದೆ. ಆದರೆ ಇಬ್ಬರ ಮಧ್ಯದ ಜಿದ್ದಾಜಿದ್ದಿ ಹೋರಾಟದಲ್ಲಿ ಕುಮಾರಸ್ವಾಮಿ ಅವರಿಗೆ ಲಾಭ ಆಗುತ್ತದೆ. ಇಬ್ಬರಿಗೂ ಕುಮಾರಸ್ವಾಮಿ ಅವರ ಬೆಂಬಲದ ಅಗತ್ಯ ಕಂಡುಬರಬಹುದು. ಈ ವಿಚಾರದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇರುವುದು ಕಾಂಗ್ರೆಸ್ ಹಾಗೂ ಬಿಜೆಪಿಗೆ.

English summary
India's leading numerologist and tarot reader Sheelaa Bajaj prediction about Karnataka assembly elections 2018. According to her, Congress Siddaramaiah and BJP Yeddyurappa cards are strong. There will be tough fight between them. JDS Kumaraswamy cards are not that much powerful. But he will be in gaining position.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X