• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಂಚ ಜ್ಯೋತಿಷಿಗಳ 'ಅತಂತ್ರ' ವಿಧಾನಸಭೆ ಭವಿಷ್ಯ ನಿಜವಾಗುವುದೆ?

By ಒನ್ಇಂಡಿಯಾ ಸಿಬ್ಬಂದಿ
|

ಬೆಂಗಳೂರು, ಮೇ 14: ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಮತದಾನ ಮುಗಿದಿದ್ದು, ಮುಂದಿನ ಐದು ವರ್ಷಗಳ ಕಾಲ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು? ಯಾರು ನಮ್ಮ ಸಿಎಂ ಆಗಬೇಕು ಎಂಬ ಜನಾದೇಶ ನಾಳೆ(ಮೇ 15) ಹೊರಬೀಳಲಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಐದು ವರ್ಷಗಳ ಕಾಲ ಅಧಿಕಾರ ನಡೆಸಿ, ದಾಖಲೆ ಬರೆದಿದ್ದರೂ, ಹಲವಾರು ಎಕ್ಸಿಟ್ ಪೋಲ್ ಗಳಲ್ಲಿ ಕಾಂಗ್ರೆಸ್ಸಿಗೆ ಹೆಚ್ಚಿನ ಬಲ ಸಿಕ್ಕಿಲ್ಲ. ಗುಪ್ತಚರ ವರದಿ ಕೂಡಾ ಕೈಗೆ ಹಿತವಾಗಿಲ್ಲ.

ಟಾರೋ ರೀಡಿಂಗ್: ಸಿದ್ದು, ಈಶು, ಕಟ್ಟಾ ಮತ್ತಿತರರ ಫಲಿತಾಂಶ ಏನಾಗಬಹುದು?

ಬಿಜೆಪಿಯ ಸಿಎಂ ಅಭ್ಯರ್ಥಿ ಯಡಿಯೂರಪ್ಪ ಅವರನ್ನು ಬಿಟ್ಟರೆ ಬಿಜೆಪಿ ನಾಯಕರಿಗೆ ಅಧಿಕಾರ ಸ್ಥಾಪಿಸುವ ನಿರೀಕ್ಷೆಯಿಲ್ಲ. ಜೆಡಿಎಸ್ ಬೆಂಬಲ, ಮೈತ್ರಿ ಸರ್ಕಾರದ ಮಾತುಕತೆ, ಚರ್ಚೆ ಆರಂಭವಾಗಿದೆ.

ಟಿವಿ9 ಕನ್ನಡ ಸುದ್ದಿ ವಾಹಿನಿ ನಡೆಸಿದ ಜ್ಯೋತಿಷ್ಯ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ವಾಚಸ್ಪತಿ ಭಟ್, ಗೋಪಾಲ ಶರ್ಮ, ಬಸವರಾಜ, ಡಿಎಸ್ ರಾಘವನ್ ಹಾಗೂ ಹರೀಶ್ ಕಶ್ಯಪ್ ಅವರು ನೀಡಿದ ಅಭಿಪ್ರಾಯ ಸಂಗ್ರಹ ಇಲ್ಲಿದೆ...

ಖ್ಯಾತ ಜ್ಯೋತಿಷಿಗಳ ಅಭಿಮತ ಇಲ್ಲಿದೆ

ಖ್ಯಾತ ಜ್ಯೋತಿಷಿಗಳ ಅಭಿಮತ ಇಲ್ಲಿದೆ

ಟಿವಿ9 ಕನ್ನಡ ಸುದ್ದಿ ವಾಹಿನಿ ನಡೆಸಿದ ಜ್ಯೋತಿಷ್ಯ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ವಾಚಸ್ಪತಿ ಭಟ್, ಗೋಪಾಲ ಶರ್ಮ, ಬಸವರಾಜ, ಡಿಎಸ್ ರಾಘವನ್ ಹಾಗೂ ಹರೀಶ್ ಕಶ್ಯಪ್ ಅವರು ನೀಡಿದ ಅಭಿಪ್ರಾಯ ಸಂಗ್ರಹ ಇಲ್ಲಿದೆ.

ಚುನಾವಣೆ ಘೋಷಣೆ ದಿನಾಂಕ, ಮತದಾನ, ಮತ ಎಣಿಕೆ ದಿನ ಶುದ್ಧಿ, ಸಿಎಂ ಅಭ್ಯರ್ಥಿಗಳು ಹಾಗೂ ಮಾರ್ಗದರ್ಶಿಗಳ ಜಾತಕದ ಆಧಾರದ ಮೇಲೆ ಜ್ಯೋತಿಷಿಗಳು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಐವರಲ್ಲಿ ನಾಲ್ವರು ಈ ಬಾರಿ ಅತಂತ್ರ ವಿಧಾನಸಭೆ, ಸಮ್ಮಿಶ್ರ ಸರ್ಕಾರ ಸಾಧ್ಯತೆ ಎಂದು ಭವಿಷ್ಯ ನುಡಿದಿದ್ದಾರೆ.

ಟಾರೋ ಕಾರ್ಡ್ ಭವಿಷ್ಯ: ಮಾಗಡಿ ಲಡಾಯಿಯಲ್ಲಿ ಗೆಲುವು ಯಾರಿಗೆ?

ಎರಡು ದಿನಶುದ್ಧಿ ಹೇಗಿದೆ?

ಎರಡು ದಿನಶುದ್ಧಿ ಹೇಗಿದೆ?

1. ಮೇ 12 ಮತದಾನ ಹಾಗೂ ಮೇ 15 ಮತ ಎಣಿಕೆ ಎರಡು ದಿನಶುದ್ಧಿ ಹೇಗಿದೆ? ಎರಡು ದಿನ ಅಶುಭವೇ?

ಬಸವರಾಜ ಗುರು:

- ಮಾರ್ಚ್ 27 - ಮಂಗಳವಾರ ಪುಷ್ಯ ನಕ್ಷತ್ರ ಕರ್ಕಾಟಕ ರಾಶಿಯಲ್ಲಿ ನೋಟಿಫಿಕೇಷನ್ ದಿನ.

- ಮೇ 12 : ಉತ್ತರಾಭಾದ್ರ ನಕ್ಷತ್ರ ಮೀನ ರಾಶಿಯಲ್ಲಿ ಮತದಾನ ನಡೆದಿದೆ.

- ಮೇ 15 : ಮೇಷ ರಾಶಿ ರೇವತಿ ನಕ್ಷತ್ರ ಇರುವ ದಿನ ಫಲಿತಾಂಶ ಬರಲಿದೆ. ಹೀಗಾಗಿ, ಈ ನಕ್ಷತ್ರಗಳಲ್ಲಿ ಬಂದಿರುವುದು ವಿಶೇಷ

ಕೊರಟಗೆರೆಯಲ್ಲಿ ಗೆಲುವು ಯಾರಿಗೆ? ಇದು ಟಾರೋ ಕಾರ್ಡ್ ಭವಿಷ್ಯ

ಗೋಪಾಲಕೃಷ್ಣ ಶರ್ಮ ಅವರ ಭವಿಷ್ಯ

ಗೋಪಾಲಕೃಷ್ಣ ಶರ್ಮ ಅವರ ಭವಿಷ್ಯ

* ಗೋಪಾಲಕೃಷ್ಣ ಶರ್ಮ: ಮಂಗಳವಾರ, ಶನಿವಾರ, ಭಾನುವಾರ ಶುಭ ಕಾರ್ಯಕ್ಕೆ ಒಳ್ಳೆಯದಲ್ಲ, ಕ್ರೂರವಾಗಿದ್ದು, ಉತ್ತಮವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮೂವರಿಗೆ ಹೃದಯಾಘಾತವಾಗಲಿದೆ. ಅಭ್ಯರ್ಥಿ, ಮತದಾರ, ಕಾರ್ಯಕರ್ತ ಯಾರೆ ಆಗಿರಬಹುದು. ಶನಿ ಹಾಗೂ ಕುಜ ಇಬ್ಬರು ಅಲ್ಲಾಡಿಸಿಬಿಡುತ್ತಾರೆ.

* ಹರೀಶ್ ಕಶ್ಯಪ್ : ಒಳ್ಳೆಯದಾಗುತ್ತದೆ, ಸಾರ್ವಜನಿಕವಾಗಿ ನಡೆಯುವ ಘಟನೆಗಳ ಮೇಲೆ ಪರಿಣಾಮವಾಗುವುದಿಲ್ಲ. ಜನಾಕರ್ಷಣೆ ಇರುವ ವಾರವಾಗಿದೆ.

* ಡಿ.ಎಸ್ ರಾಘವನ್ : ಸೂರ್ಯೋದಯಕಾಲದಲ್ಲಿ ಅಮಾವಾಸ್ಯೆ ಇರುತ್ತದೆ. ಸೂರ್ಯ ಹಾಗೂ ಶನಿ ವೈರಿಗಳಾಗಿರುವುದರಿಂದ ಫಲಿತಾಂಶ ಸಂದರ್ಭದಲ್ಲಿ ದೊಂಬಿ ಜಗಳ ಹಲ್ಲೆ ನಿರೀಕ್ಷಿತ.

* ವಾಚಸ್ಪತಿ ಭಟ್ : ಯಾರ ಜಾತಕದಲ್ಲಿ ಮಂಗಳ, ಶನಿ ಚೆನ್ನಾಗಿದೆಯೋ ಅವರಿಗೆ ಮಾತ್ರ ಶುಭಕರ.

ರಾಜ್ಯದಲ್ಲಿ ಬಿಜೆಪಿಗೆ ಸರಳ ಬಹುಮತ: ಕಬ್ಯಾಡಿ ಜಯರಾಮಾಚಾರ್ಯ ಭವಿಷ್ಯ

ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತೆ?

ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತೆ?

2. ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತೆ? ಸಮ್ಮಿಶ್ರ ಸರ್ಕಾರ ಸಾಧ್ಯತೆ ಇದೆಯೇ?

* ಬಸವರಾಜ: ಸಮ್ಮಿಶ್ರ ಸರ್ಕಾರ ಸಾಧ್ಯತೆ ಬಂದರೆ, ಬಿಜೆಪಿ- ಜೆಡಿಎಸ್ ಉತ್ತಮ, ಕಾಂಗ್ರೆಸ್ -ಜೆಡಿಎಸ್ ಎರಡು ಬೆಂಕಿ ಒಂದಾಗಲಾರದು.

* ಗೋಪಾಲ ಶರ್ಮ: ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಹೆಚ್ಚಿನ ಬಲ ಸಿಗಲಿದೆ. ಇದಕ್ಕೆ ಭರಣಿ ನಕ್ಷತ್ರದ ಅಮಿತ್ ಶಾ ನೆರವಾಗಲಿದ್ದಾರೆ.

* ಹರೀಶ್ ಕಶ್ಯಪ್: ಪಕ್ಷೇತರರು, ಜೆಡಿಎಸ್ ಗೆ ಲಾಭ.

ಬಿಜೆಪಿಗೆ ಜೆಡಿಎಸ್ ನೆರವಾಗಲಿದೆ

ಬಿಜೆಪಿಗೆ ಜೆಡಿಎಸ್ ನೆರವಾಗಲಿದೆ

* ಡಿಎಸ್ ರಾಘವನ್ : ಕಾಂಗ್ರೆಸ್ -ಬಿಜೆಪಿ ಪೈಪೋಟಿ ಇದ್ದು, 113 ಸ್ಥಾನ ಒದಗಿಸಲು ಬಿಜೆಪಿಗೆ ಜೆಡಿಎಸ್ ನೆರವಾಗಲಿದೆ.

* ವಾಚಸ್ಪತಿ ಭಟ್: ವಿಳಂಬಿ ನಾಮ ಸಂವತ್ಸರಕ್ಕೆ ರಾಜ ಸೂರ್ಯ. ಚುನಾವಣೆ ಮತದಾನ, ಫಲಿತಾಂಶದ ಮೇಲೆ ಸೂರ್ಯನ ಪ್ರಭಾವವಿದೆ. ಹಾಗಾಗಿ, ಹಾಲಿ ಇರುವ ರಾಜನಿಗೆ ಹೆಚ್ಚಿನ ಬಲ ಸಿಗಲಿದೆ. ಸಿದ್ದರಾಮಯ್ಯ ಅವರಿಗೆ ಗುರುಬಲವಿದೆ.

ಯಾರಿಗೆ ಎಷ್ಟು ಸ್ಥಾನ ಸಿಗಲಿದೆ?

ಯಾರಿಗೆ ಎಷ್ಟು ಸ್ಥಾನ ಸಿಗಲಿದೆ?

ವಾಚಸ್ಪತಿ ಭಟ್ :

ಕಾಂಗ್ರೆಸ್ : 70-76

ಬಿಜೆಪಿ : 68-74

ಜೆಡಿಎಸ್ : 62-67

ಗೋಪಾಲಕೃಷ್ಣ

ಕಾಂಗ್ರೆಸ್ : 70

ಬಿಜೆಪಿ : 128

ಜೆಡಿಎಸ್ : 60

ಬಸವರಾಜ

ಕಾಂಗ್ರೆಸ್ : 60-76

ಬಿಜೆಪಿ : 80-95

ಜೆಡಿಎಸ್ : 40-45

ಇತರೆ : 05-08

ಹರೀಶ್ ಕಶ್ಯಪ್

ಕಾಂಗ್ರೆಸ್ : 60-75

ಬಿಜೆಪಿ : 100-102

ಜೆಡಿಎಸ್ : 35-40

ಡಿಎಸ್ ರಾಘವನ್

ಕಾಂಗ್ರೆಸ್ : 86-92

ಬಿಜೆಪಿ : 95-98

ಜೆಡಿಎಸ್ : 36-40

ಮೈತ್ರಿ ಸರ್ಕಾರ ಯಾವುದು ಸದೃಢವಾಗಿದೆ?

ಮೈತ್ರಿ ಸರ್ಕಾರ ಯಾವುದು ಸದೃಢವಾಗಿದೆ?

ಬಸವರಾಜರು: ಬಿಜೆಪಿ-ಜೆಡಿಎಸ್ ಹೆಚ್ಚು ಸದೃಢ, ಸ್ಥಿರ ಸರ್ಕಾರ ನೀಡುವ ಸಾಧ್ಯತೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಸಾಧ್ಯವಿಲ್ಲ.

ಹರೀಶ್ ಕಶ್ಯಪ್: ಬಿಜೆಪಿ ಅಧಿಕ ಸ್ಥಾನ ಗಳಿಸಿದರೂ ಬಾಹ್ಯ ಬೆಂಬಲ ಪಡೆಯಲೇ ಬೇಕು.

ಡಿಎಸ್ ರಾಘವನ್: ಜೆಡಿಎಸ್ ಅಧಿಕಾರ ಆಸೆ ಇಲ್ಲದೆ, ಬಾಹ್ಯ ಬೆಂಬಲ ನೀಡಲಿದ್ದಾರೆ.

ವಾಚಸ್ಪತಿ ಭಟ್: ಜೆಡಿಎಸ್- ಬಿಜೆಪಿ ಸಂಯುಕ್ತ ಸರ್ಕಾರ ಬರಲಿದೆ.

ಗೋಪಾಲ ಶರ್ಮ: ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಬಲ ಹೊಂದಿದ್ದು, ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಬಹುದು.

ಸಿಎಂಗೆ ಯಾವ ಕ್ಷೇತ್ರದಲ್ಲಿ ಗೆಲುವು? ಚಾಮುಂಡೇಶ್ವರಿ, ಬಾದಾಮಿ

ಸಿಎಂಗೆ ಯಾವ ಕ್ಷೇತ್ರದಲ್ಲಿ ಗೆಲುವು? ಚಾಮುಂಡೇಶ್ವರಿ, ಬಾದಾಮಿ

ಬಸವರಾಜರು: ಚಾಮುಂಡೇಶ್ವರಿಯಲ್ಲಿ ಗೆಲ್ಲಲ್ಲ, ಬಾದಾಮಿಯಲ್ಲಿ ಜಯ.

ಗೋಪಾಲ ಶರ್ಮ: ಎರಡೂ ಕಡೆಯಲ್ಲೂ ಸೋಲು. ಗೆದ್ದರೂ ಅತಿ ಕಡಿಮೆ ಅಂತರದಿಂದ ಗೆಲ್ಲಬಹುದು.

ಹರೀಶ್ ಕಶ್ಯಪ್: ಗುರುಬಲ, ದೈವ ಬಲ ಇಲ್ಲದ ಕಾರಣ, ಗೆಲುವು ಕಷ್ಟಸಾಧ್ಯ, ಒಂದು ಕಡೆ ಮಾತ್ರ ಗೆಲುವು.

ಡಿ.ಎಸ್ ರಾಘವನ್: ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಸೋಲು

ವಾಚಸ್ಪತಿ ಭಟ್: ಬಾದಾಮಿಯಲ್ಲಿ ಗೆಲ್ಲುವುದು ಕಷ್ಟ. ಚಾಮುಂಡೇಶ್ವರಿ ರೇವತಿ ನಕ್ಷತ್ರವಾಗಿದ್ದರಿಂದ ಗೆಲ್ಲುವ ಅವಕಾಶವಿದೆ.

ಕುಮಾರಸ್ವಾಮಿಗೆ ಎಲ್ಲಿ ಗೆಲುವು?

ಕುಮಾರಸ್ವಾಮಿಗೆ ಎಲ್ಲಿ ಗೆಲುವು?

ಬಸವರಾಜರು: ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯಲ್ಲಿ ಗೆಲುವು

ಹರೀಶ್ ಕಶ್ಯಪ್: ಚನ್ನಪಟ್ಟಣದಲ್ಲಿ ಗೆಲುವು

ಡಿ.ಎಸ್ ರಾಘವನ್: ಚನ್ನಪಟ್ಟಣದಲ್ಲಿ ಸೋಲು.

ವಾಚಸ್ಪತಿ ಭಟ್: ಚನ್ನಪಟ್ಟಣದಲ್ಲಿ ಸೋಲು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Assembly Elections 2018: Astrologers prediction on Which Party will form Government? Who will become CM? Will there will be hung assembly? all questions answered here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more