ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರಳಾಗಿ ಕಾಡುವ ಕರ್ಮ, ಪಾಪ-ಪುಣ್ಯ ಜ್ಯೋತಿಷ್ಯ ಲೆಕ್ಕಾಚಾರ

By ಶ್ರೀನಿವಾಸ್ ಗುರೂಜಿ
|
Google Oneindia Kannada News

ಮನುಷ್ಯನ ಜೀವನದಲ್ಲಿ ಕರ್ಮ, ಪೂರ್ವಜ ಹಾಗೂ ಆಧ್ಯಾತ್ಮಿಕ ಈ ಮೂರು ಪ್ರಮುಖ ಪಾತ್ರವಹಿಸುತ್ತದೆ. ಇವುಗಳು ಜೀವನದಲ್ಲಿ ಕರ್ಮ ದೋಷ, ಪಿತೃದೋಷ, ಋಣ ದೋಷ ಎಂದು ಕರೆಯುವುದು ವಾಡಿಕೆ. ನಾವು ವಾಸಿಸುತ್ತಿರುವ ಯುಗ ಕರ್ಮ ಯುಗವಾಗಿದ್ದು ಹುಟ್ಟುತ್ತಲೆ ಕರ್ಮ ಭೂಮಿಗೆ ಕಾಲಿಡುತ್ತೇವೆ.

ಕರ್ಮ ಫಲದಂತೆ ಒಳ್ಳೆಯದು-ಕೆಟ್ಟದ್ದು, ಶುಭ-ಅಶುಭ, ಅದೃಷ್ಟ- ದುರದೃಷ್ಟ, ಉತ್ತಮ ಆರೋಗ್ಯ- ಗುಣಪಡಿಸಲಾಗದ ಕಾಯಿಲೆ, ಶ್ರೀಮಂತಿಕೆ - ಬಡತನ ಹೀಗೆ ಮುಂತಾದವುಗಳು ಅನುಭವಿಸಬೇಕಾಗುತ್ತದೆ. ಲಾಭ ಕರ್ಮವು ಮನುಷ್ಯ ತಾನು ಇದ್ದಾಗ ಸೌಕರ್ಯ ಆಸ್ತಿ ಇತ್ಯಾದಿಗಳನ್ನು ಗಳಿಸುತ್ತಾನೆ. ಆದರೆ ತನ್ನ ಸಾವಿನ ನಂತರ ಅದು ನಶ್ವರ ವಾಗುವುದುಂಟು.

ತನ್ನ ಭೂತಕಾಲದ ಕರ್ಮದ ಫಲದಂತೆ ವರ್ತಮಾನದಲ್ಲಿ ಫಲಗಳು ದೊರೆಯಲು ಕಾರಣಕರ್ತರಾಗಿರುತ್ತಾರನೆ. ಒಬ್ಬ ವ್ಯಕ್ತಿಯು ಮೋಸದಿಂದ ಐಶ್ವರ್ಯ ಸಂಪಾದಿಸಬಹುದು ಆತ ಒಳ್ಳೆಯ ಸ್ಥಿತಿಯಲ್ಲಿ ಜೀವಿಸುತ್ತಿರುವುದು ಆದರೆ ತನ್ನ ಕರ್ಮದಿಂದ ಅವನು ಮತ್ತು ಅವನ ಮುಂದಿನ ಪೀಳಿಗೆ ಮುಂದಿನ ದಿನಗಳಲ್ಲಿ ವ್ಯಥೆ ಪಡುವುದು ನಿಶ್ಚಿತ.

ಜೀವನ ಶೈಲಿ ನಡವಳಿಕೆ

ಜೀವನ ಶೈಲಿ ನಡವಳಿಕೆ

ತನ್ನ ಜೀವನ ಶೈಲಿ ನಡವಳಿಕೆ ಇದರ ಮೇಲೆ ಕರ್ಮ ಪ್ರಾಪ್ತಿಯಾಗುತ್ತದೆ ಹಾಗೂ ನಾವು ಮಾಡಿದ ಸಾಲ ಅಥವಾ ಉಪಕಾರಗಳು ತೀರಿಸದಿದ್ದಲ್ಲಿ ಋಣ ದೋಷವಾಗುತ್ತದೆ. ವಯಸ್ಸಾದ ತಂದೆ ತಾಯಿಯನ್ನು ನೋಯಿಸುವುದು, ಅವರನ್ನು ತೀರಾ ನಿಕೃಷ್ಟವಾಗಿ ಕಾಣುವುದು, ಸಾಕಿದ ಪ್ರಾಣಿಗಳನ್ನು ಸರಿಯಾಗಿ ನೋಡಿ ಕೊಳ್ಳದಿರುವುದು, ನಮ್ಮ ಅಹಂಕಾರದ ಪರಮಾವಧಿ ಆಗುವುದು ಇದು ಅತ್ಯಂತ ಪಾಪಕಾರ್ಯ ಹಾಗೂ ಬ್ರಹ್ಮಹತ್ಯ ದೋಷ ಸರಿಸಮಾನವಾಗಿರುತ್ತದೆ.

ದೇವತಾ ಆರಾಧನೆಯಲ್ಲಿ ಅಸಡ್ಡೆ

ದೇವತಾ ಆರಾಧನೆಯಲ್ಲಿ ಅಸಡ್ಡೆ

ನಮ್ಮ ಕುಲ ಪರಂಪರೆ, ಹಿರಿಯರ ಆರಾಧನೆ ಅಥವಾ ದೇವತಾ ಆರಾಧನೆಯಲ್ಲಿ ಅಸಡ್ಡೆ ವಹಿಸುವುದು ಅವರ ತರ್ಪಣ, ಶ್ರಾದ್ಧ ಹಾಗೂ ವಿಧಿವತ್ತಾದ ಪೂಜಾ ಕಾರ್ಯಗಳನ್ನು ನಡೆಸದಿರುವುದು, ಪಿತೃದೋಷಗಳಾಗಿ ಮಾರ್ಪಾಡಾಗುತ್ತದೆ. ನಮ್ಮ ಸಂಸ್ಕಾರ, ಪದ್ಧತಿ, ಆಚಾರ-ವಿಚಾರಗಳನ್ನು ಧಿಕ್ಕರಿಸಿ ನಡೆದರೆ ಅದು ನಮ್ಮ ಅವನತಿಯನ್ನು ಸೂಚಿಸುತ್ತದೆ.

 ಪಿತೃದೋಷ, ಕರ್ಮ ದೋಷ

ಪಿತೃದೋಷ, ಕರ್ಮ ದೋಷ

ಇಂತಹ ಋಣ ದೋಷ, ಪಿತೃದೋಷ, ಕರ್ಮ ದೋಷಗಳನ್ನು ಜಾತಕ ಆಧಾರಿತವಾಗಿ ವಿಶ್ಲೇಷಿಸಬಹುದು ಇಂತಹ ದೋಷಗಳಿಗೆ ಪರಿಹಾರ ರೂಪವಾಗಿ ತನ್ನ ಜೀವಿತದಲ್ಲಿ ಅಷ್ಟ ವಿಧದ ದಾನಗಳನ್ನು ನೀಡಿ. ತಿಲದಾನ, ಲೋಹದಾನ, ಲವಣ ದಾನ, ವಸ್ತ್ರದಾನ, ಧಾನ್ಯದಾನ, ಗೋದಾನ, ಭೂದಾನ, ಕನ್ಯಾದಾನ(ಮದುವೆಯ ಸಂದರ್ಭ). ಇದು ಅಕ್ಷಯ ಪುಣ್ಯಫಲಗಳನ್ನು ನೀಡುತ್ತದೆ ಮತ್ತು ದಾರಿದ್ರ್ಯದಿಂದ ಉನ್ನತಿಯತ್ತ ಜೀವನ ಪ್ರಯಾಣ ಸಾಗುತ್ತದೆ.

ಕೊನೆಯದಾಗಿ ಒಂದು ಮಾತು

ಕೊನೆಯದಾಗಿ ಒಂದು ಮಾತು

ನಾವು ಮಾಡಿದ ಸಾಲ ನಮ್ಮ ಮಕ್ಕಳಿಗೆ ಹೇಗೋ ಹಾಗೆಯೇ ನಾವು ಮಾಡಿದ ಆಸ್ತಿ ನಮ್ಮ ಮಕ್ಕಳಿಗೆ ಅಲ್ಲವೇ. ಅದರಂತೆ ನಾವು ಮಾಡಿದ ಪಾಪ ಪುಣ್ಯಗಳೆಲ್ಲಾ ನಮ್ಮ ಮುಂದಿನ ಪೀಳಿಗೆಗೆ ಹಾಗೂ ನಮಗೆ ಎಂಬುದನ್ನು ಸದಾ ನೆನಪಿಡಿ.

ಲೇಖನ: ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು
ಶ್ರೀ ಶ್ರೀನಿವಾಸ ಗುರೂಜಿ

ನಿಮ್ಮ ಕಠಿಣ ಗುಪ್ತ ಸಮಸ್ಯೆಗಳು ಏನೇ ಇರಲಿ ಶಾಸ್ತ್ರೋಕ್ತ ಅಂತಿಮ ಪರಿಹಾರ ಇಂದೇ ಕರೆಮಾಡಿ.
9886665656
9886155755

English summary
Karma will haunt you: Here is an Astrological insight on Karma, Dosha and remedies for it by Pandith Srinivas Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X