• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

12 ವರ್ಷಗಳ ಬಳಿಕ ಮೀನದಲ್ಲಿ ಗುರು-ಶುಕ್ರ ಸಂಯೋಗ : 12 ರಾಶಿಗಳ ಮೇಲಾಗುವ ಪರಿಣಾಮ ತಿಳಿಯಿರಿ

|
Google Oneindia Kannada News

ದಿನ ಕಳೆದಂತೆ ಗ್ರಹಗತಿಗಳು ಬದಲಾಗುತ್ತಲೇ ಇರುತ್ತವೆ. ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಸಂಚಾರ ಮಾಡುತ್ತಲೇ ಇರುತ್ತವೆ. ಕೆಲ ಗ್ರಹಗಳು ವರ್ಷಕ್ಕೊಮೆ ಮತ್ತೊಂದು ಗ್ರಹದಲ್ಲಿ ಸಂಯೋಗವಾದರೆ ಇನ್ನೂ ಕೆಲವರು ಅಧಿಕ ವರ್ಷಗಳ ಬಳಿಕ ಸಂಯೋಗಗೊಳ್ಳುತ್ತವೆ. ಹೀಗೆ ಹನ್ನೆರಡು ವರ್ಷಗಳ ಬಳಿಕ ಗುರುವಿನೊಂದಿಗೆ ಶುಕ್ರಗ್ರಹವು ಮೀನ ರಾಶಿಯಲ್ಲಿ ಸಂಯೋಗ ಹೊಂದಲಿದೆ. ಮೀನ ರಾಶಿಯಲ್ಲಿ ಗುರುವಿನ ಆಗಮನದಿಂದ ಕೆಲ ದ್ವಾದಶ ರಾಶಿಗಳ ಮೇಲೆ ಮಂಗಳಕರವಾಗಲಿದೆ.

ದೇವತೆಗಳ ಗುರು ಎಂದೇ ಪರಿಗಣಿತವಾಗಿರುವ ಗುರು ಏಪ್ರಿಲ್ 13ರಂದು ಎಂದರೆ ನಾಳೆ ರಾಶಿಯನ್ನು ಬದಲಿಸಿ ಮೀನರಾಶಿಗೆ ಪ್ರವೇಶಿಸಲಿದ್ದಾನೆ. ಏಪ್ರಿಲ್ 27 ರಂದು ಗುರುವಿನ ನಂತರ ಶುಕ್ರ ಗ್ರಹ ಕೂಡ ಮೀನ ರಾಶಿಯಲ್ಲಿ ಬರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಮತ್ತು ಗುರು ಎರಡೂ ಶುಭ ಗ್ರಹಗಳಾಗಿವೆ. ಆದರೆ ಇವೆರಡರ ನಡುವೆ ಶತ್ರು ಶಕ್ತಿ ಉದ್ಭವಿಸುವ ಸಾಧ್ಯತೆ ಇದೆ. ಗುರುವಿನ ರಾಶಿಚಕ್ರ ಚಿಹ್ನೆಯ ಬದಲಾವಣೆಯ ಪರಿಣಾಮವು ಎಲ್ಲರ ಕೆಲಸ ಮತ್ತು ವ್ಯವಹಾರದಲ್ಲಿ ಲಾಭ ಮತ್ತು ನಷ್ಟದ ಜೊತೆಗೆ ಆಡಳಿತ, ಅಧಿಕಾರ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಗುರುವು ಭೌತಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಪ್ರಗತಿಯನ್ನು ಒದಗಿಸುತ್ತಾನೆ. ಸಂಪತ್ತು, ಮದುವೆ, ದಾನ , ಧರ್ಮ, ಶಿಕ್ಷಣ, ಮಕ್ಕಳು ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಗುರುವಿಗೆ ಅಧಿಕಾರವಿದೆ. ಈ ಸಂಯೋಗದಿಂದ ಅನೇಕ ಜನರ ಸಮಸ್ಯೆಗಳು ಪರಿಹಾರಗೊಳ್ಳಬಹುದು. ಅನೇಕರಿಗೆ ಸಮಸ್ಯೆಗಳು ಎದುರಾಗಬಹುದು. ಅನೇಕ ಜನರು ಇದ್ದಕ್ಕಿದ್ದಂತೆ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಗುರು ಶುಕ್ರನ ಸಂಯೋಗದಿಂದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯರ ಪ್ರಭಾವ ಹೆಚ್ಚಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾದರೆ ಈ ಎರಡು ಗ್ರಹಗಳ ಸಂಯೋಗವು ದ್ವಾದಶಿ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಮೇಷ: ಅದೃಷ್ಟದ ದಿನ

ಮೇಷ: ಅದೃಷ್ಟದ ದಿನ

ಈ ದಿನ ನಿಮಗೆ ಅದೃಷ್ಟದ ದಿನವಾಗಿದೆ. ಗುರು ಶುಕ್ರ ಗ್ರಹಗಳು ಮೀನ ರಾಶಿಯಲ್ಲಿ ಸಂಯೋಗದ ವೇಳೆ ಮೇಷ ರಾಶಿಯವರು ಹಣಕ್ಕೆ ಸಂಬಂಧಿಸಿದ ಅನೇಕ ಚಿಂತೆಗಳಿಂದ ದೂರವಾಗುತ್ತಾರೆ. ಮಾತ್ರವಲ್ಲದೇ ನೀವು ಪಡೆದ ಸಾಲಗಳೆಲ್ಲವನ್ನೂ ತೀರಿಸುತ್ತೀರಿ. ಆರ್ಥಿಕ ಮಟ್ಟ ಸುಧಾರಣೆಯಾಗಲಿದೆ. ದೈಹಿಕ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದುತ್ತೀರಿ. ಹಣದ ಒಳಹರಿವು ಹೆಚ್ಚಾದಂತೆ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಖರ್ಚು ಕೂಡ ಹೆಚ್ಚಾಗಲಿದೆ. ಹೂಡಿಕೆ ಮಾಡಿ ಹಣ ಗಳಿಸುವು ಸಾಧ್ಯತೆ ಇರುತ್ತದೆ. ಆದರೆ ಅನುಭವಿಗಳ ಮಾರ್ಗದರ್ಶನ ಪಡೆಯುವುದು ಉತ್ತಮ.

ವೃಷಭ: ಹಣಕಾಸಿನ ಲಾಭ

ವೃಷಭ: ಹಣಕಾಸಿನ ಲಾಭ

ಈ ದಿನ ವೃಷಭ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ನೀವು ಹಣಕಾಸಿನ ಲಾಭ ಪಡೆಯುವ ಸಾಧ್ಯತೆ ಇದೆ. ಕೆಲಸದಲ್ಲಿ ನಿಮ್ಮ ಶತ್ರುಗಳೊಂದಿಗೆ ನೀವು ಜಾಗರೂಕರಾಗಿರಬೇಕು. ನಿಮ್ಮ ಕೆಲಸದ ಶ್ರಮದ ಫಲವನ್ನು ಸಹೋದ್ಯೋಗಿಗಳು ಪಡೆಯಬಹುದು. ಹೀಗಾಗಿ ಜಾಗರೂಕರಾಗಿರಿ. ಯಾವುದೇ ಕಾರಣಕ್ಕೂ ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಕುಟುಂಬದ ಸದಸ್ಯರ ನಡುವೆ ಹಣದ ವಿಚಾರದಲ್ಲಿ ಜಗಳವಾಗುವ ಸಾಧ್ಯತೆ ಇದೆ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ನೀವು ಭಾವಿಸಿದರೆ, ಸ್ವಲ್ಪ ಸಮಯ ಅವರೊಂದಿಗೆ ಕಳೆಯಿರಿ. ಮುಕ್ತವಾಗಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ನಿಮ್ಮ ಸಂಗಾತಿಯು ನಿಮ್ಮನ್ನು ಪಡೆಯಲು ಅದೃಷ್ಟವಂತರಾಗಿರುತ್ತಾರೆ. ಜೀವನದಲ್ಲಿ ನೀವು ನಿಜವಾಗಿಯೂ ಸಂತೋಷ ಮತ್ತು ತೃಪ್ತಿ ಹೊಂದಬೇಕಾದರೆ ನಿಮಗಿರುವ ಬುದ್ಧಿವಂತಿಕೆಯನ್ನು ಬಳಸಿ ಕೆಲಸ ಮಾಡಿ.

ಮಿಥುನ: ಕೊಟ್ಟ ಸಾಲ ವಾಪಸ್ಸಾಗುವ ಸಾಧ್ಯತೆ

ಮಿಥುನ: ಕೊಟ್ಟ ಸಾಲ ವಾಪಸ್ಸಾಗುವ ಸಾಧ್ಯತೆ

ಈ ದಿನ ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ ಹುಟ್ಟಲಿದೆ. ನೀವು ಕೊಟ್ಟ ಸಾಲ ನಿಮಗೆ ವಾಪಸ್ಸು ಬರುವ ಸಾಧ್ಯತೆ ಇದೆ. ಸಂತಾನ ಪ್ರಾಪ್ತಿಗಾಗಿ ಕಾಯುತ್ತಿರುವವರು ಕೊಂಚ ಜಾಗರೂಕರಾಗಿರುವುದು ಉತ್ತಮ. ಮಕ್ಕಳನ್ನು ಹೊಂದಿರುವವರು ಅವರಿಂದ ಒಳ್ಳೆಯ ಸುದ್ದಿ ಪಡೆಯಬಹುದು. ನಿಮ್ಮ ಯಾವುದೇ ಯೋಜನೆಗಳನ್ನು ಪ್ರಾರಂಭಿಸಲು ನಿಮಗೆ ಹಣದ ಅಗತ್ಯವಿದ್ದರೆ, ಈ ಸಮಯದಲ್ಲಿ ನಿಮ್ಮ ಕುಟುಂಬಸ್ಥರಿಂದ ಹಾಗೂ ಸ್ನೇಹಿತರಿಂದ ನೀವು ಆ ಹಣವನ್ನು ಸಹ ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ವ್ಯವಹಾರವನ್ನು ಮುನ್ನಡೆಸಲು ಅವಕಾಶ ಸಿಗುತ್ತದೆ. ಮತ್ತೊಂದೆಡೆ, ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ. ಮನಸ್ತಾಪಗಳಿದ್ದರೂ ನೀವು ತಾಳ್ಮೆಯಿಂದ ಅವುಗಳನ್ನು ಬಗೆಹರಿಸಿಕೊಳ್ಳುತ್ತೀರಿ.

​ಕಟಕ: ಸುಖ-ಸಂತೋಷ ವೃದ್ಧಿ

​ಕಟಕ: ಸುಖ-ಸಂತೋಷ ವೃದ್ಧಿ

ಗುರು-ಶುಕ್ರ ಸಂಯೋಗ ಕಟಕ ರಾಶಿಯ ಮೇಲೆ ಪರಿಣಾಮ ಬೀರಲಿದೆ. ಈ ದಿನ ಕಟಕ ರಾಶಿಯ ಜನರ ಜೀವನದಲ್ಲಿ ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ಸುಖ-ಸಂತೋಷ ವೃದ್ಧಿಯಾಗಲಿದೆ. ಮಾನಸಿಕ ನೆಮ್ಮದಿ ಸಿಗಲಿದೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಆಸ್ತಿ-ವಾಹನ ಖರೀದಿಗೂ ಅವಕಾಶ ಸಿಗಲಿದೆ. ಆದರೆ ಯಾವುದೇ ವಸ್ತು ಖರೀದಿಗೂ ಮುನ್ನ ಅನುಭವಿಗಳ ಸಲಹೆ ಪಡೆಯುವುದು ಎಂದು ಸೂಚಿಸಲಾಗುತ್ತದೆ. ಹಾಗೆಯೇ ಮನೆ, ಜಮೀನು ಕೊಳ್ಳಲು ಇಚ್ಛಿಸುವವರ ಇಷ್ಟಾರ್ಥ ನೆರವೇರುತ್ತದೆ. ಮನೆಯವ ಸಹಾಯದಿಂದ ಇಂದು ನೀವು ಅಂದುಕೊಂಡ ಕಾರ್ಯಗಳು ನಡೆಯಲಿವೆ.

ಸಿಂಹ: ಸ್ನೇಹ ಸಂಬಂಧದಲ್ಲಿ ಬಲ

ಸಿಂಹ: ಸ್ನೇಹ ಸಂಬಂಧದಲ್ಲಿ ಬಲ

ಗುರು ಮತ್ತು ಶುಕ್ರನ ಪ್ರಭಾವದಿಂದ ಸಿಂಹ ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ವೇಳೆ ಕೆಲಸದ ಸ್ಥಳಗಳಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು. ಅಲ್ಲದೆ ಸಹೋದ್ಯೋಗಿಗಳು ಹಾಗೂ ಸ್ನೇಹಿತರೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ಹೀಗಾಗಿ ಜೀವನದಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸುತ್ತೀರಿ. ಈ ದಿನ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಸಹ ಮಹತ್ತರವಾಗಿ ಹೆಚ್ಚಾಗಬಹುದು. ಎಲ್ಲಿಯಾದರೂ ಹೂಡಿಕೆ ಮಾಡುವ ಮೊದಲು ಅನುಭವಿಗಳ ಸಲಹೆ ಪಡೆಯುವುದು ಉತ್ತಮ. ಜೊತೆಗೆ ಅದರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಯೋಚಿಸುವುದು ನಿಮಗೆ ಅನುಕೂಲವಾಗುವುದು. ಕುಟುಂಬದ ಜನರೊಂದಿಗೆ ನೀವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ ಅದು ಕೆಲಸ ಸಮಯದ ಬಳಿಕ ಸರಿಹೋಗುತ್ತದೆ. ಈ ದಿನ ನೀವು ಚಾಲನೆ ಮಾಡುವಾಗ ಜಾಗರೂಕರಾಗಿರಬೇಕು.

ಕನ್ಯಾ: ಪ್ರೇಮಿಗಳಿಗೆ ಶುಭ

ಕನ್ಯಾ: ಪ್ರೇಮಿಗಳಿಗೆ ಶುಭ

ಗುರು ಮತ್ತು ಶುಕ್ರನ ಪ್ರಭಾವದಿಂದ ಕನ್ಯಾ ರಾಶಿಯವರ ಮೇಲೆ ಪರಿಣಾಮ ಬೀರಲಿದೆ. ಈ ಸಮಯ ಪ್ರೇಮಿಗಳಿಗೆ ಶುಭವಾಗಲಿದೆ. ದಾಂಪತ್ಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಉತ್ತಮ ದಿನಗಳನ್ನು ನೋಡುತ್ತಾರೆ. ಕನ್ಯಾ ರಾಶಿಯವರ ಜೀವನದಲ್ಲಿ ಮಂಗಳಕರ ಕಾರ್ಯಕ್ರಮಗಳು ನಡೆಯಬಹುದು. ಪ್ರೇಮ ವಿವಾಹ ಆಗಲು ಬಯಸುವವರಿಗೆ ಇದು ಶುಭ ಸಮಯವಾಗಿದೆ. ಹೆಚ್ಚು ಪ್ರಭಾವಿ ವ್ಯಕ್ತಿಗಳ ಬೆಂಬಲ ನಿಮಗೆ ಉತ್ತೇಜನವನ್ನು ನೀಡುತ್ತದೆ. ನೀವು ಪ್ರಯಾಣಿಸುವಾಗ ಎಚ್ಚರದಿಂದಿರಿ. ನಿಮ್ಮ ವಸ್ತುಗಳನ್ನು ಕಳ್ಳತನ ಅಥವಾ ತಪ್ಪಾಗಿ ಇರಿಸುವ ಸಾಧ್ಯತೆಗಳನ್ನು ತಪ್ಪಿಸುತ್ತದೆ. ನಿಮ್ಮ ಕುಟುಂಬದ ಸದಸ್ಯರ ಅಗತ್ಯತೆಯ ಮೇಲೆ ಕೇಂದ್ರೀಕರಿಸುವುದು ಇಂದು ನಿಮ್ಮ ಆದ್ಯತೆಯಾಗಿರಬೇಕು. ಪ್ರೇಮ ಜೀವನವು ರೋಮಾಂಚಕವಾಗಿರುತ್ತದೆ. ನಿಮ್ಮ ಕೆಲ ವರ್ತನೆ ನಿಮ್ಮ ಸಹೋದ್ಯೋಗಿಗಳಿಂದ ಟೀಕೆಗಳಿಗೆ ಗುರಿಯಾಗಬಹುದು. ಇಂದು ನಿಮ್ಮ ಸಂಗಾತಿಯೊಂದಿಗೆ ಕಳೆಯಲು ನಿಮಗೆ ಸಾಕಷ್ಟು ಸಮಯವಿರುತ್ತದೆ. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಧ್ಯಾನ ಮಾಡುವುದು ಉತ್ತಮ.

​ತುಲಾ: ಅನಗತ್ಯ ಖರ್ಚು ತಪ್ಪಿಸಿ

​ತುಲಾ: ಅನಗತ್ಯ ಖರ್ಚು ತಪ್ಪಿಸಿ

ಈ ಸಮಯದಲ್ಲಿ ನಿಮ್ಮ ಖರ್ಚುಗಳನ್ನು ನಿಯಂತ್ರಿಸುವುದು ಉತ್ತಮ. ಅನಗತ್ಯ ಖರ್ಚುಗಳನ್ನು ಮಾಡಬೇಡಿ. ಇದು ನಿಮ್ಮ ಹಣಕಾಸಿನ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇಲ್ಲವಾದರೆ ತುಂಬಾ ತೊಂದರೆಗೆ ಸಿಲುಕಬೇಕಾಗುತ್ತದೆ. ನಿಮ್ಮ ಮಗುವಿನ ಕಾರ್ಯಕ್ಷಮತೆಯು ನಿಮಗೆ ಅಪಾರ ಆನಂದವನ್ನು ನೀಡಬಹುದು. ನೀವು ಹಣವನ್ನು ಉಳಿಸಲು ಕಷ್ಟಪಡುತ್ತೀರಿ. ನಿಮ್ಮ ಪ್ರೀತಿಪಾತ್ರರು ಸಂತೋಷವಾಗಿರುತ್ತಾರೆ. ನಿಮ್ಮ ಪ್ರೀತಿಯ ಜೀವನದ ವಿಷಯದಲ್ಲಿ ಈ ದಿನವು ಅದ್ಭುತವಾಗಿರುತ್ತದೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಬಿಡುವಿನ ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ನಿಮಗೆ ಸಲಹೆ ನೀಡಲಾಗುತ್ತದೆ. ನೀವು ಕೆಲ ದುಷ್ಟ ಜನರಿಂದ ದೂರವಿರಬೇಕು. ಇದರಿಂದ ನಿಮ್ಮ ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ನೀವು ನೋಡುತ್ತೀರಿ.

ವೃಶ್ಚಿಕ: ಹೆಚ್ಚಾಗಲಿದೆ ಪ್ರತಿಷ್ಠೆ

ವೃಶ್ಚಿಕ: ಹೆಚ್ಚಾಗಲಿದೆ ಪ್ರತಿಷ್ಠೆ

ಈ ದಿನ ವೃಶ್ಚಿಕ ರಾಶಿಯ ಪ್ರತಿಷ್ಠೆ ಹೆಚ್ಚಾಗಲಿದೆ. ಈ ವೇಳೆ ನೀವು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಇದರಿಂದಾಗಿ ನಿಮ್ಮ ಖ್ಯಾತಿ ಮತ್ತು ಗೌರವವು ಹೆಚ್ಚಾಗುತ್ತದೆ. ಜೊತೆಗೆ ಜನರು ನಿಮ್ಮ ಆಲೋಚನೆಗಳಿಂದ ಪ್ರಭಾವಿತರಾಗುತ್ತಾರೆ. ನಿಮ್ಮ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ನೀವು ಕೆಲವು ಕ್ರೀಡಾ ಚಟುವಟಿಕೆಗಳನ್ನು ಆನಂದಿಸುವ ಸಾಧ್ಯತೆಯಿದೆ. ಬಾಕಿಯಿರುವ ಸಮಸ್ಯೆಗಳು ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ. ಖರ್ಚುಗಳು ನಿಮ್ಮನ್ನು ಚಿಂತೆಗೀಡು ಮಾಡುತ್ತವೆ. ನೀವು ಅಪರೂಪವಾಗಿ ಭೇಟಿಯಾಗುವ ಜನರೊಂದಿಗೆ ಸಂವಹನ ನಡೆಸಲು ಒಳ್ಳೆಯ ದಿನ. ವ್ಯಾಪಾರದಲ್ಲಿರುವವರಿಗೆ ಉತ್ತಮ ದಿನ. ನೀವು ಅಭಿವೃದ್ಧಿ ಹೊಂದುವ ಸಾಧ್ಯತೆಯಿರುವುದರಿಂದ ನಿಮ್ಮ ಎಲ್ಲಾ ಗಮನವನ್ನು ಕೇಂದ್ರೀಕರಿಸಿ. ಕೆಲವರಿಗೆ ಹೊಸ ಅವಕಾಶಗಳೂ ಸಿಗಬಹುದು. ಸಂತೋಷದ ಪ್ರವಾಸವು ತೃಪ್ತಿಕರವಾಗಿರುತ್ತದೆ.

ಧನು: ಪ್ರಯಾಣ ಮಾಡುವ ಸಾಧ್ಯತೆ

ಧನು: ಪ್ರಯಾಣ ಮಾಡುವ ಸಾಧ್ಯತೆ

ಇಂದು ಧನು ರಾಶಿಯವರು ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಕೆಲಸದ ಪ್ರಯುಕ್ತ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಇದರಿಂದ ಉತ್ತಮ ಲಾಭ ಸಿಗುವ ಸಾಧ್ಯತೆ ಇದೆ. ನೀವು ಆರ್ಥಿಕವಾಗಿ ಬಲಗೊಳ್ಳಬಹುದು. ಇದರೊಂದಿಗೆ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುವ ಅವಕಾಶವಿದ್ದು, ಇದರಿಂದ ಮನಸ್ಸಿನ ಭಾರವೂ ಕಡಿಮೆಯಾಗುತ್ತದೆ. ದೈಹಿಕ ಆರೋಗ್ಯದ ಲಾಭಕ್ಕಾಗಿ ವಿಶೇಷವಾಗಿ ಮಾನಸಿಕ ದೃಢತೆಗಾಗಿ ಧ್ಯಾನ ಮತ್ತು ಯೋಗವನ್ನು ಪ್ರಾರಂಭಿಸಿ. ನೀವು ಸುಗಮ ಜೀವನವನ್ನು ನಡೆಸಲು ಮತ್ತು ಸ್ಥಿರವಾದ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು ಬಯಸಿದರೆ, ನಿಮ್ಮ ಹಣಕಾಸಿನ ಬಗ್ಗೆ ಗಮನಹರಿಸಬೇಕು. ಇಂದು ಆರೋಗ್ಯದ ದೃಷ್ಟಿಯಿಂದ ಚೆನ್ನಾಗಿ ಇರದ ಸಂಬಂಧಿಕರನ್ನು ಭೇಟಿ ಮಾಡಿ. ನಿಮ್ಮ ಪ್ರೀತಿಯ ಜೀವನದ ವಿಷಯದಲ್ಲಿ ಈ ದಿನವು ಅದ್ಭುತವಾಗಿದೆ. ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಜೀವನದಲ್ಲಿ ನೀವು ಹೆಚ್ಚು ಗೌರವಿಸುವ ಸಂಬಂಧಗಳು ಮತ್ತು ಜನರಿಗೆ ಸಮಯವನ್ನು ನೀಡಲು ನೀವು ಕಲಿಯಬೇಕು.

​ಮಕರ: ಆರ್ಥಿಕ ಲಾಭ

​ಮಕರ: ಆರ್ಥಿಕ ಲಾಭ

ಈ ದಿನ ಮಕರ ರಾಶಿಯವರಿಗೆ ಆರ್ಥಿಕ ಲಾಭ ಸಿಗಲಿದೆ. ಹೊಸ ಕೆಲಸಗಳು ಲಾಭ ತರಲಿವೆ. ಉದ್ಯೋಗಸ್ಥರು ಪ್ರಗತಿ ಹೊಂದುತ್ತಾರೆ. ನೀವು ವಿವಾಹಿತರಾಗಿದ್ದರೆ, ಇಂದು ನಿಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಏಕೆಂದರೆ ಅವರ ಆರೋಗ್ಯವು ಹದಗೆಡುವ ಸಾಧ್ಯತೆಗಳಿವೆ. ಪರಿಣಾಮವಾಗಿ ನೀವು ಅವರ ಆರೋಗ್ಯಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು. ಸಾಲ ಪಡೆದವರು ಹಣ ವಾಪಸ್ ನೀಡುವ ಸಾಧ್ಯತೆ ಇದೆ. ಆದರೆ ನೀವು ನಂಬಬಹುದು ಎಂದು ನೀವು ಭಾವಿಸುವ ಯಾರಾದರೂ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ಕೆಲಸದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿಮಗೆ ತುಂಬಾ ಕಷ್ಟಕರವಾಗಿರುತ್ತದೆ. ಇಂದು ನಿಮ್ಮ ಕೈಯಲ್ಲಿ ಸಾಕಷ್ಟು ಬಿಡುವಿನ ಸಮಯವನ್ನು ನೀವು ಹೊಂದಿರುತ್ತೀರಿ. ಆದರೆ ನೀವು ಬಯಸಿದಂತೆ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಸಂಗಾತಿಯು ಇಂದು ನಿಮಗಾಗಿ ವಿಶೇಷವಾದದ್ದನ್ನು ನೀಡುತ್ತಾರೆ.

ಕುಂಭ: ಕೆಲಸದಲ್ಲಿ ಅನುಕೂಲಕರ ವಾತಾವರಣ

ಕುಂಭ: ಕೆಲಸದಲ್ಲಿ ಅನುಕೂಲಕರ ವಾತಾವರಣ

ಗುರು ಮತ್ತು ಶುಕ್ರರ ಪ್ರಭಾವದಿಂದ ಕುಂಭ ರಾಶಿಯವರಿಗೆ ಶುಭವಾಗಲಿದೆ. ಈ ವೇಳೆ ನಿಮ್ಮ ಪ್ರೇಮ ವಿವಾಹವನ್ನು ಮಾಡಿಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ನಿಮ್ಮ ಸಂಗಾತಿಯನ್ನು ಪ್ರೀತಿಪಾತ್ರರನ್ನು ಭೇಟಿ ಮಾಡಲು ಅವಕಾಶ ಪಡೆಯಬಹುದು. ಇದು ಭವಿಷ್ಯದ ಯೋಜನೆಗಳನ್ನು ಬಲಪಡಿಸುತ್ತದೆ. ಈ ಸಂಕ್ರಮಣದ ಪ್ರಭಾವದಿಂದ ನೀವು ಇದ್ದಕ್ಕಿದ್ದಂತೆ ಲಾಭ ಪಡೆಯಬಹುದು. ಪೂರ್ವಿಕರ ಆಸ್ತಿಯ ವಿಷಯದಲ್ಲಿ ವಿಶೇಷ ಲಾಭವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ವಾಹನವನ್ನು ಚಾಲನೆ ಮಾಡುವಾಗ ಹೆಚ್ಚಿನ ಗಮನವನ್ನು ನೀಡಬೇಕು. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಸಮಯದಲ್ಲಿ ನೀವು ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ, ನಿಮಗೆ ಅನುಕೂಲಕರ ವಾತಾವರಣವನ್ನು ನೀವು ಕಂಡುಕೊಳ್ಳುತ್ತೀರಿ ಮತ್ತು ವ್ಯವಹಾರದಲ್ಲಿ ಗ್ರಾಹಕರ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವೂ ಸುಧಾರಿಸುತ್ತದೆ. ಪರಿಹಾರವಾಗಿ ನೀವು ಹನುಮಾನ್ ಚಾಲೀಸಾವನ್ನು ಪಠಿಸಬೇಕು.

ಮೀನ: ಮನೆಯಲ್ಲಿ ಶುಭ ಕಾರ್ಯ

ಮೀನ: ಮನೆಯಲ್ಲಿ ಶುಭ ಕಾರ್ಯ

ಗುರು ಮತ್ತು ಶುಕ್ರರ ಪ್ರಭಾವದಿಂದ ಮೀನ ರಾಶಿಯವರ ಜೀವನದಲ್ಲಿ ಶುಭ ಕಾರ್ಯಗಳು ನಡೆಯಬಹುದು. ನಿಮ್ಮ ಮನಸ್ಸು ಒಳ್ಳೆಯದನ್ನು ಸ್ವೀಕರಿಸುತ್ತದೆ. ನೀವು ವಿದೇಶದಲ್ಲಿ ಯಾವುದೇ ಭೂಮಿಯಲ್ಲಿ ಹೂಡಿಕೆ ಮಾಡಿದ್ದರೆ, ಅದನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಅದು ನಿಮಗೆ ಲಾಭವನ್ನು ಗಳಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿ ಆಚರಣೆಗಳು ಅಥವಾ ಶುಭ ಸಮಾರಂಭಗಳನ್ನು ನಡೆಸಬೇಕು. ನೀವು ಇಂದು ಕೆಲಸದಲ್ಲಿ ನಿಮ್ಮ ಜಾಣ್ಮೆಯನ್ನು ಪ್ರದರ್ಶಿಸಬಹುದು. ಈ ರಾಶಿಚಕ್ರ ಚಿಹ್ನೆಯ ಸ್ಥಳೀಯರು ಇಂದು ತಮ್ಮ ಬಿಡುವಿನ ವೇಳೆಯಲ್ಲಿ ಕೆಲವು ಆಧ್ಯಾತ್ಮಿಕ ಪುಸ್ತಕಗಳನ್ನು ಓದಬೇಕು. ಹೀಗೆ ಮಾಡುವುದರಿಂದ ನಿಮ್ಮ ಅನೇಕ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಇಂದು ಉತ್ತಮ ದಿನ.

   RCB ಯ ಬೌಲಿಂಗ್ ಮತ್ತು ಬ್ಯಾಟಿಂಗ್ ದಾಳಿಗೆ ಲಕ್ನೋ ಧೂಳೀಪಟ | Oneindia Kannada
   English summary
   Jupiter Venus Conjunction Pisces 2022: After 12 Years Jupiter Transit 2022 In Pisces And Jupiter And Venus Conjunction In Pisces In April 2022 Know Impact on All Zodiac Signs in Kannada.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X