• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಲಾ ರಾಶಿ ಸ್ತ್ರೀಯ ಸೊಂಟದಲ್ಲಿದೆ ಬಯಕೆಯ ಉದ್ದೀಪನ

By ರಮಾಕಾಂತ್
|

ದಾಂಪತ್ಯದ ವಿಚಾರಕ್ಕೆ ಬಂದರೆ ಗಂಡು- ಹೆಣ್ಣಿನ ಜಾತಕದ ಹೊಂದಾಣಿಕೆ ಬಹಳ ಮುಖ್ಯ. ಸಂಸಾರದಲ್ಲಿ ಸಂತೋಷ ಮನೆ ಮಾಡಬೇಕು ಅಂದರೆ ಗಂಡು-ಹೆಣ್ಣು ಇಬ್ಬರ ಜಾತಕದ ಮಧ್ಯೆ ಅದ್ಭುತ ಎನಿಸುವಂಥ ಹೊಂದಾಣಿಕೆ ಇರಬೇಕು.

ಮದುವೆಯ ಸಂದರ್ಭದಲ್ಲಿ ಜ್ಯೋತಿಷಿಗಳ ಬಳಿಗೆ ಹೋಗಿ ಗಂಡು- ಹೆಣ್ಣಿನ ಜಾತಕ ತೋರಿಸಿ, ಇಬ್ಬರಿಗೂ ಹೊಂದಾಣಿಕೆ ಹೇಗಿರುತ್ತದೆ ಎಂದು ಕೇಳುವುದು ವಾಡಿಕೆ. ಅದೇ ರೀತಿ ಕೂಟಗಳು ಮತ್ತು ಗುಣ ಇಷ್ಟು ಎಂದು ಲೆಕ್ಕ ಹಾಕಿ ಜ್ಯೋತಿಷಿಗಳು ಬರೆದು ಕೊಟ್ಟು, ಮದುವೆ ಮಾಡಬಹುದೋ ಇಲ್ಲವೋ ಎಂಬುದನ್ನು ತಿಳಿಸುತ್ತಾರೆ. ಈ ಪರಿಪಾಠ ಹಿಂದಿನಿಂದಲೂ ನಡೆದುಬಂದಿದೆ.

ಸ್ತನದ ಆಕಾರ, ಬಣ್ಣ, ರಚನೆ ಆಧಾರದಲ್ಲಿ ಹೆಣ್ಣಿನ ಗುಣ-ಸ್ವಭಾವ

ದಾಂಪತ್ಯದಲ್ಲಿ ಗಂಡು- ಹೆಣ್ಣಿನ ಆಸಕ್ತಿ ಸಮಾನವಾದರೆ ಒಂದು ಬಗೆ. ಒಂದು ವೇಳೆ ಸ್ವಲ್ಪ ಕೈ ಕೊಟ್ಟು ಹೆಣ್ಣು- ಗಂಡಿನ ಆದ್ಯತೆಗಳು ಬೇರೆಯಾಗಿ ಉತ್ತರ ಧ್ರುವ- ದಕ್ಷಿಣ ಧ್ರುವ ಎಂದಾಗಿಬಿಟ್ಟರೆ ಕಷ್ಟ ಕಷ್ಟ. ಇನ್ನು ಲೈಂಗಿಕ ವಿಚಾರಕ್ಕಾಗಿಯೂ ಗಂಡ- ಹೆಂಡತಿ ಬೇರೆಯಾಗುವ ಸಂದರ್ಭಗಳಿವೆ. ಸ್ತ್ರೀಯರ ಲೈಂಗಿಕ ಪ್ರಾಧಾನ್ಯ ಬೇರೆಯೇ ಇರುತ್ತದೆ. ಜ್ಯೋತಿಷ್ಯದಲ್ಲೇ ಆ ಬಗ್ಗೆ ಏನು ಹೇಳಲಾಗಿದೆ ಎಂಬುದನ್ನು ತಿಳಿಸಿಕೊಡುವ ಯತ್ನವಿದು.

ಸಾಮುದ್ರಿಕಾ ಶಾಸ್ತ್ರದಲ್ಲಿ ಹೆಣ್ಣಿನ ಭುಜ ತಿಳಿಸುವ ಗುಣ-ನಡತೆ-ಭವಿಷ್ಯ

ಅಶ್ಲೀಲದ ಸೋಂಕು ತಾಗದಂತೆ ದಂಪತಿ ಮಧ್ಯದ ಲೈಂಗಿಕ ಜೀವನಕ್ಕೆ ಪೂರಕ ಆಗಬಹುದಾದ ಲೇಖನ ಇದು. ಯಾವ ರಾಶಿ ಸ್ತ್ರೀಯರ ಪ್ರಣಯ ಉತ್ತೇಜಕ ಯಾವುದು ಎಂಬುದರ ಸರಣಿಯ ಮುಂದುವರಿದ ಭಾಗವನ್ನು ಈ ದಿನ ಓದಲಿದ್ದೀರಿ. ಅದರಲ್ಲಿ ತುಲಾ ರಾಶಿಯ ಸ್ತ್ರೀ ಬಗ್ಗೆ ತಿಳಿಸಲಾಗುವುದು.

 ಹುಲಿ ಹಾಗೂ ಎಮ್ಮೆ

ಹುಲಿ ಹಾಗೂ ಎಮ್ಮೆ

ಚಿತ್ತಾ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಸ್ವಾತಿ ನಕ್ಷತ್ರದ ನಾಲ್ಕು ಪಾದ ಮತ್ತು ವಿಶಾಖ ನಕ್ಷತ್ರದ ಒಂದು ಹಾಗೂ ಎರಡನೇ ಪಾದ ಸೇರಿ ತುಲಾ ರಾಶಿಯಾಗುತ್ತದೆ. ಚಿತ್ತಾ ಹಾಗೂ ವಿಶಾಖ ನಕ್ಷತ್ರದ ಯೋನಿ ಕೂಟ ಹುಲಿ ಮತ್ತು ಸ್ವಾತಿ ನಕ್ಷತ್ರಕ್ಕೆ ಎಮ್ಮೆ ಆಗುತ್ತದೆ.

 ಸೊಂಟವೇ ಉತ್ತೇಜನಕ್ಕೆ ಪೂರಕ

ಸೊಂಟವೇ ಉತ್ತೇಜನಕ್ಕೆ ಪೂರಕ

ತುಲಾ ರಾಶಿಯ ಸ್ತ್ರೀಯರ ಸೊಂಟದಲ್ಲಿ ಅವರನ್ನು ಲೈಂಗಿಕತೆಗೆ ಉತ್ತೇಜಿಸುವ ಸ್ಥಾನವಿರುತ್ತದೆ. ಬೆನ್ನಿನ ಕೆಳತುದಿ ಹಾಗೂ ಹಿಂಭಾಗದ ಮೇಲೆ ಕೈಯಾಡಿಸುತ್ತಾ ಕಾಮನೆಗಳನ್ನು ಉತ್ತೇಜಿಸಿದರೆ ಮುಂದಿನ ಕ್ರಿಯೆಗೆ ಸಿದ್ಧತೆ ನಡೆಸಿದಂತೆಯೇ.

 ಭಾವನಾತ್ಮಕ ನಂಟು ಹೆಚ್ಚು

ಭಾವನಾತ್ಮಕ ನಂಟು ಹೆಚ್ಚು

ಈ ರಾಶಿಯ ಸ್ತ್ರೀಯರು ಉಳಿದ ರಾಶಿಯವರಿಗಿಂತ ಹೆಚ್ಚು ಭಾವನಾಜೀವಿಗಳು. ಕೆಲಸ-ಕಾರ್ಯಗಳಲ್ಲೂ ವಿಪರೀತ ಚಟುವಟಿಕೆ ಮತ್ತು ನಿಸ್ಸೀಮರು. ಆದರೆ ಭಾವನಾತ್ಮಕವಾಗಿ ಹಚ್ಚಿಕೊಂಡ ನಂತರ ಅವರಿಗೆ ಬೇಸರವಾಗುವಂತೆ ನಡೆದುಕೊಂಡಿರೋ ಮತ್ತೆ ನಿಮ್ಮತ್ತ ತಿರುಗಿ ಕೂಡ ನೋಡುವುದಿಲ್ಲ. ಸಹಕರಿಸುವುದಿಲ್ಲ. ಸ್ಪಂದಿಸುವುದಿಲ್ಲ.

 ಅಳೆದು-ತೂಗಿ ನೋಡುವ ಜಾಯಮಾನ

ಅಳೆದು-ತೂಗಿ ನೋಡುವ ಜಾಯಮಾನ

ಪ್ರತಿ ಮಾತನ್ನೂ ಅಳೆದು-ತೂಗಿ ನೋಡುವ ಈ ಮಹಿಳೆಯರು ಕೆಲವು ಸಲ ತಕ್ಷಣಕ್ಕೆ ಸ್ಪಂದಿಸುವುದಿಲ್ಲ. ಅದರರ್ಥ ಆಸಕ್ತಿ ಇಲ್ಲ ಎಂದಲ್ಲ. ಅವರು ಭವಿಷ್ಯದಲ್ಲಿ ಎದುರಾಗಬಹುದಾದ ಸನ್ನಿವೇಶ- ಸವಾಲುಗಳ ಲೆಕ್ಕಾಚಾರದಲ್ಲಿ ಇರುತ್ತಾರೆ. ಆದ್ದರಿಂದ ಉತ್ಕಟವಾದ ಸುಖದಲ್ಲಿರುವಾಗ ಹಳೆ ವಿಚಾರಗಳು, ವ್ಯವಹಾರದ ಸಂಗತಿಗಳು ಮಾತನಾಡಲೇ ಬೇಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This is an article about Libra zodiac sign woman sensual behavior and tips to how to induce them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more