ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಕದ ಪಾಕಿಸ್ತಾನ್, ಅದಕ್ಕೆ ಇಮ್ರಾನ್ ಖಾನ್- ಜ್ಯೋತಿಷ್ಯ ವಿಶ್ಲೇಷಣೆ

By ಪ್ರಕಾಶ್ ಅಮ್ಮಣ್ಣಾಯ
|
Google Oneindia Kannada News

ನಾವು ಒಂದು ಮನೆ ಕಟ್ಟಬೇಕಾದರೇನೋ ಅಥವಾ ಬಾಡಿಗೆ ಮನೆಗೆ ಹೋಗಬೇಕಾದರೇನೋ ಅಕ್ಕಪಕ್ಕದಲ್ಲಿ ವಾತಾವರಣ ಹೇಗಿದೆ? ಅಲ್ಲಿನ ಜನರು ಎಂಥವರು ಎಂದು ಒಂದಕ್ಕೆ ನಾಲ್ಕು ಸಲ ವಿಚಾರಿಸಿಕೊಂಡು ಹೋಗ್ತೀವಿ. ಅಂಥದ್ದರಲ್ಲಿ ನಮ್ಮ ದೇಶಕ್ಕೆ ಪಾಕಿಸ್ತಾನದಂಥದ್ದು ಪಕ್ಕದಲ್ಲೇ ಇದೆ. ಆ ದೇಶದ ಬಗ್ಗೆ ಭಾರತಕ್ಕಷ್ಟೇ ತಕರಾರು ಇದ್ದಿದ್ದರೆ ನಮ್ಮ ಆಲೋಚನೆಯಲ್ಲಿನ ದೋಷ ಅನ್ನಬಹುದಿತ್ತು.

ಆದರೆ, ಪಾಕಿಸ್ತಾನ ಅಂದರೆ ತಂಟೆಕೋರರ ಟೋಳಿ. ಅಲ್ಲಿನ ಸೈನ್ಯ ಅಂದರೆ ಭಾರತದ ಕೈಲಿ ಹಲವು ಬಾರಿ ಪೆಟ್ಟು ತಿಂದಿರುವ ಬಡಕಲು ಗುಳ್ಳೆ ನರಿ ಎಂಬುದು ಇತಿಹಾಸದ ಘಟನೆಗಳಿಂದ ಸಾಬೀತಾಗಿದೆ. ವಾಜಪೇಯಿ, ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ ಸಹ ಆ ದೇಶದ ಜತೆಗೊಂದು ಸೌಹಾರ್ದವಾದ ಸಂಬಂಧ ಇರಿಸಿಕೊಳ್ಳಲು ಯತ್ನಿಸಿದರು.

ಇಮ್ರಾನ್ ಖಾನ್ ಗೆ ಅಜರುದ್ದೀನ್ ನೀಡಿದ ಎಚ್ಚರಿಕೆ ಸಂದೇಶ ಇಮ್ರಾನ್ ಖಾನ್ ಗೆ ಅಜರುದ್ದೀನ್ ನೀಡಿದ ಎಚ್ಚರಿಕೆ ಸಂದೇಶ

ಅದು ಸಾಧ್ಯವಾಗಲೇ ಇಲ್ಲ. ಇದೀಗ ಪಾಕಿಸ್ತಾನದ ಮಹಾ ಚುನಾವಣೆ ಮುಗಿದಿದೆ. ಆ ದೇಶದ ಚುಕ್ಕಾಣಿ ಹಿಡಿಯಲು ಇಮ್ರಾನ್ ಖಾನ್ ಎಂದು ಮಾಜಿ ಕ್ರಿಕೆಟಿಗ ಸಿದ್ಧರಾಗಿದ್ದಾರೆ. ಇನ್ನೇನು ಸರಕಾರ ರಚನೆ ಆಗುವುದೊಂದೇ ಬಾಕಿ. ಅಲ್ಲಿಂದ ಮುಂದೆ ಶಾಂತಿಯೋ ಸಂಗ್ರಾಮವೋ ಅದು ನಿರ್ಧಾರವಾಗುವುದು ಆ ನಾಯಕನ ಗುಣಗಳ ಆಧಾರದಲ್ಲಿ.

ಮೋದಿ ಉದಾಹರಣೆ ಕೊಟ್ಟು ಚುನಾವಣೆ ಪ್ರಚಾರ

ಮೋದಿ ಉದಾಹರಣೆ ಕೊಟ್ಟು ಚುನಾವಣೆ ಪ್ರಚಾರ

ಈಗಿನ ಪರಿಸ್ಥಿತಿಯನ್ನು ಜ್ಯೋತಿಷಿಗಳು ಒಂದು ಕೋನದಿಂದ ನೋಡಿದರೆ, ರಾಜಕೀಯ ವಿಶ್ಲೇಷಕರು ಮತ್ತು ರಕ್ಷಣಾ ತಜ್ಞರು ಮತ್ತೊಂದು ಬಗೆಯಲ್ಲಿ ವಿಶ್ಲೇಷಿಸುತ್ತಾರೆ. ನನ್ನ ವೃತ್ತಿ ಹಾಗೂ ಆಸಕ್ತಿಯು ಜ್ಯೋತಿಷ್ಯವೇ ಆದ್ದರಿಂದ ಆ ದೃಷ್ಟಿಕೋನದಲ್ಲೇ ನಿಮಗಾಗಿ ವಿಶೇಷ ಸಂಗತಿಗಳನ್ನು ತಿಳಿಸಿಕೊಡ್ತೀನಿ. ಪಾಕಿಸ್ತಾನದಲ್ಲಿ ಒಟ್ಟು ಸ್ಥಾನಗಳು 342. ಆ ಪೈಕಿ ಅಧಿಕಾರ ಹಿಡಿಯುವುದಕ್ಕೆ 172 ಸ್ಥಾನಗಳು ಪಡೆಯಬೇಕು. ಇದೀಗ ಇಮ್ರಾನ್ ಖಾನ್ ನೇತೃತ್ವದ ಪಕ್ಷ 121 ಸ್ಥಾನಗಳಲ್ಲಿ ಗೆದ್ದು ಬಂದಿದ್ದಾರೆ. ಭಾರತವನ್ನು ಮುನ್ನಡೆಸುತ್ತಿರುವ ಮೋದಿಯ ಉದಾಹರಣೆಯನ್ನೇ ನೀಡಿ, ತಾನು ಕೂಡ ಪಾಕಿಸ್ತಾನವನ್ನು ಅಭಿವೃದ್ಧಿಪರ ಹಾಗೂ ಬಲಶಾಲಿಯನ್ನಾಗಿ ಮಾಡುವ ಬಗ್ಗೆ ಭರವಸೆ ನೀಡಿ, ವೈರಿ ದೇಶದ ಹೆಸರಾಂತ ವ್ಯಕ್ತಿಯನ್ನೇ ತನ್ನ ಗೆಲುವಿಗೆ ಬಳಸಿಕೊಂಡಂಥ ಬುದ್ಧಿವಂತ ಇಮ್ರಾನ್ ಖಾನ್.

ಆಗಸ್ಟ್ 14ರೊಳಗೆ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಆಗಸ್ಟ್ 14ರೊಳಗೆ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ

ಇಮ್ರಾನ್ ಖಾನ್ ಜಾತಕ ಹೇಗಿದೆ?

ಇಮ್ರಾನ್ ಖಾನ್ ಜಾತಕ ಹೇಗಿದೆ?

ಅಂದ ಹಾಗೆ ಇಮ್ರಾನ್ ಖಾನ್ ಜಾತಕ ಹೇಗಿದೆ? ಇಮ್ರಾನ್ ಖಾನ್ ವೃಶ್ಚಿಕ ಲಗ್ನ ಜನಿತರು, ಕುಂಭ ರಾಶಿ, ಶತಭಿಷ ನಕ್ಷತ್ರ. ಸದ್ಯಕ್ಕೆ ಶುಕ್ರದಶೆ ನಡೆಯುತ್ತಿದೆ. ಗೋಚಾರದಲ್ಲೂ ಅಕ್ಟೋಬರ್ ನಂತರ ಇವರಿಗೆ ಉತ್ತಮ ಫಲ ನೀಡುವ ಕಾಲ. ಇವರ ಜಾತಕದಲ್ಲಿ ಶನಿ ಅತ್ಯಂತ ಬಲಿಷ್ಠ 29.5 ಡಿಗ್ರಿ (ಮೋದಿಯವರ ಜಾತಕದ ಶನಿಯಂತೆ). ಈ ಶನಿಯು ಇವರಿಗೆ ಏಕಾದಶ ಭಾವದಲ್ಲಿರುವುದು. ವೃಶ್ಚಿಕಕ್ಕೆ ಕನ್ಯಾ ರಾಶಿಯು ಮಹಾಬಾಧಾ ರಾಶಿಯೂ, ಶನಿಗೆ ಏಕಾದಶ ವೀಕ್ಷಣೆ ಉತ್ತಮವಾದರೆ, ಏಕಾದಶದಲ್ಲಿ ಸ್ಥಿತನಾಗುವುದು ಅನಿಷ್ಟವೂ ಆಗುತ್ತದೆ.

ಅದಿಕಾರ ದುರುಪಯೋಗದ ಲಕ್ಷಣ

ಅದಿಕಾರ ದುರುಪಯೋಗದ ಲಕ್ಷಣ

ಏಕೆಂದರೆ, ಶನಿಯ ಮೂರನೆಯ ಪೂರ್ಣ ದೃಷ್ಟಿ ಲಗ್ನಕ್ಕೆ ಬಿದ್ದಾಗ ದುರ್ಬುದ್ಧಿ ಶುರುವಾಗುತ್ತದೆ. ಒಂದು ವೇಳೆ ಗುರು ವೀಕ್ಷಣೆ, ಗುರುವಿನ ಕ್ಷೇತ್ರ, ಗುರು ನಕ್ಷತ್ರದಲ್ಲಿ ಇದ್ದರೆ ದುರ್ಬುದ್ಧಿ ನಾಶವಾಗುತ್ತದೆ. ಇಲ್ಲಿ ಇದು ಯಾವುದೂ ಇಲ್ಲ. ಪುರಾಣಗಳಲ್ಲಿನ ಪ್ರಸ್ತಾವ ಆಗಿರುವಂತೆ ರಾವಣನಿಗೆ ಏಕಾದಶದಲ್ಲಿ ಶನಿ ಇದ್ದ. ಅದರ ಪರಿಣಾಮ ಏನು ಎಂದು ವಿವರಿಸಬೇಕಾಗಿಲ್ಲ. ಅಂದರೆ ಅಧಿಕಾರದ ದುರುಪಯೋಗವಾಗುವ ಲಕ್ಷಣಗಳಿವು. ಇಮ್ರಾನ್ ಖಾನ್ ನದು ಎಂಥ ಸ್ವಭಾವ ಅಂದರೆ, ತನ್ನ ಎದುರಿನವರು ಚಾಪೆಯಡಿಯಲ್ಲಿ ನುಗ್ಗಿದರೆ ಈತ ರಂಗೋಲಿ ಅಡಿಯಲ್ಲಿ ನುಸುಳುವ ಜಾಯಮಾನ.

ನರೇಂದ್ರ ಮೋದಿಗೆ ಸವಾಲಾಗುವ ಸಾಧ್ಯತೆ

ನರೇಂದ್ರ ಮೋದಿಗೆ ಸವಾಲಾಗುವ ಸಾಧ್ಯತೆ

ನರೇಂದ್ರ ಮೋದಿ ಅವರ ಪಾಲಿಗೆ ಇಮ್ರಾನ್ ಖಾನ್ ಸವಾಲು ಆಗುವ ಸಾಧ್ಯತೆ ಇದೆ. ಆದರೆ ಮೋದಿ ಜಾತಕದಲ್ಲಿ ಇರುವ ಅನೇಕ ಯೋಗಗಳು ಇಮ್ರಾನ್ ಖಾನ್ ಪಾಲಿಗಿಲ್ಲ. ಪಾಕಿಸ್ತಾನದ ಬಗ್ಗೆ ಇಡೀ ಜಗತ್ತಿನಲ್ಲಿ ಇರುವ ಅಭಿಪ್ರಾಯ, ಆ ದೇಶದೊಳಗಿನ ಮೂಲಭೂತವಾದಿಗಳ ಭಯೋತ್ಪಾದನೆಯಿಂದ ಆತನ ಕೆಲ ಉತ್ತಮ ಪ್ರಯತ್ನಗಳು ಸಹ ವಿಫಲವಾಗುತ್ತದೆ. ಇನ್ನು ಭಾರತದೊಳಗಿನ ಕೆಲವರು ಇಮ್ರಾನ್ ಖಾನ್ ಜತೆಗೆ ಸಖ್ಯ ಬೆಳೆಸಬಹುದು. ಭಾರತದಲ್ಲಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇವರ ಉಪಟಳ ಹೆಚ್ಚಾಗಲಿದೆ.

ಕಾರ್ಗಿಲ್ ನಂಥ ಯುದ್ಧ ಸಂಭವಿಸಬಹುದು

ಕಾರ್ಗಿಲ್ ನಂಥ ಯುದ್ಧ ಸಂಭವಿಸಬಹುದು

ಇಂಥ ಪರಿಸ್ಥಿತಿಯಿಂದ ನರೇಂದ್ರ ಮೋದಿ ಅವರಿಗೆ ಬಹಳ ಕಷ್ಟವಾದೀತು. ಕಾರ್ಗಿಲ್ ಯುದ್ಧದಂಥದ್ದು ಸಂಭವಿಸಿದರೆ ಕೂಡ ಅಚ್ಚರಿ ಪಡುವಂಥದ್ದೇನೂ ಇಲ್ಲ. ಇಂಥ ಅಹಿತಕರ ಹಾಗೂ ಆತಂಕಕಾರಿ ಬೆಳವಣಿಗೆಯು ಜುಲೈ 27ನೇ ತಾರೀಕು ಸಂಭವಿಸಿದ ಚಂದ್ರಗ್ರಹಣದ ಫಲವೇ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆದರೆ ಈ ಎಲ್ಲ ಘಟನೆಗಳಿಂದ ಬಿಜೆಪಿಯ ಶಕ್ತಿ ಹೆಚ್ಚಾಗುತ್ತದೆ. ಮತ್ತು ಲೋಕಸಭೆ ಚುನಾವಣೆಗೆ ಸಹಾಯ ಆಗುತ್ತದೆ.

English summary
Former cricketer Imran Khan likely to be PM of Pakistan. How this development impact on India, personally how Imran will lead Pakisatan? Here is an astrology analysis by well known astrologer Prakash Ammannaya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X