ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ನಿಂದ ದೇಶಕ್ಕೆ ಮುಕ್ತಿ ಯಾವಾಗ? ಖ್ಯಾತ ಜ್ಯೋತಿಷಿಯ ಭವಿಷ್ಯ

|
Google Oneindia Kannada News

ಸೂರ್ಯಗ್ರಹಣ, ಚಂದ್ರಗ್ರಹಣ, ಕೊರೊನಾ ವಿಚಾರದಲ್ಲಿ ಸಾಕಷ್ಟು ಜ್ಯೋತಿಷಿಗಳು ತಮ್ಮತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾಗಿದೆ. ಜೂನ್ ತಿಂಗಳಲ್ಲೇ ಕೊರೊನಾದಿಂದ ಮುಕ್ತಿ ಸಿಗಲಿದೆ ಎನ್ನುವ ಜ್ಯೋತಿಷ್ಯ ಪೊಳ್ಳಾಗಿದೆ.

Recommended Video

BBMP commissioner Anil Kumar transferred | Oneindia Kannada

ಜೂನ್ ತಿಂಗಳಾಂತ್ಯಕ್ಕೆ ಕೊರೊನಾ ಉಪಟಳ ಕಮ್ಮಿಯಾಗಲಿದೆ ಎಂದ ಜ್ಯೋತಿಷಿಗಳಿಗೆ, ಇಂದು, ವಿಶ್ವ ಎದುರಿಸುತ್ತಿರುವ ಕೊರೊನಾದ ತೀವ್ರತೆಯ ಬಗ್ಗೆ ಅರಿವಿರದೇ ಇರಲು ಸಾಧ್ಯವೇ ಇಲ್ಲ. ಅದೇನೇ ಇರಲಿ, ಇನ್ನೊಬ್ಬ ಹೆಸರಾಂತ ಜ್ಯೋತಿಷಿಗಳು ಕೊರೊನಾದ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.

ಜೂನ್ 21, 2020ಕ್ಕೆ ಜಗತ್ತೇ ನಾಶ-ಮಾಯನ್ ಕ್ಯಾಲೆಂಡರ್ ಭವಿಷ್ಯ!ಜೂನ್ 21, 2020ಕ್ಕೆ ಜಗತ್ತೇ ನಾಶ-ಮಾಯನ್ ಕ್ಯಾಲೆಂಡರ್ ಭವಿಷ್ಯ!

ಆಂಧ್ರಪ್ರದೇಶ ಮೂಲದ ಖ್ಯಾತ ಜ್ಯೋತಿಷಿ ಕೆ.ಎನ್.ಆರ್.ರಾವ್ ಗರಡಿಯಲ್ಲಿ ಪಳಗಿದ ನೀರಜ್ ಧಾಂಕರ್, ಕೊರೊನಾ ವೈರಸ್ ನಿಂದ ಯಾವ ರೀತಿ ದೇಶಕ್ಕೆ ತೊಂದರೆಯಾಗಲಿದೆ ಎನ್ನುವುದನ್ನು ಹಂತ ಹಂತವಾಗಿ ವಿವರಿಸಿದ್ದಾರೆ. ದೇಶ, ಯಾವ ರೀತಿ ಆರ್ಥಿಕವಾಗಿ ತೊಂದರೆ ಅನುಭವಿಸಲಿದೆ ಎನ್ನುವುದನ್ನೂ ಇವರು ವಿವರಿಸಿದ್ದಾರೆ.

ಭವಿಷ್ಯ: ಎರಡು ಚಂದ್ರಗ್ರಹಣದ ಮಧ್ಯೆ ಸೂರ್ಯಗ್ರಹಣ, ಪ್ರಮುಖ ನಾಯಕನ ಸಾವು!ಭವಿಷ್ಯ: ಎರಡು ಚಂದ್ರಗ್ರಹಣದ ಮಧ್ಯೆ ಸೂರ್ಯಗ್ರಹಣ, ಪ್ರಮುಖ ನಾಯಕನ ಸಾವು!

ಆಸ್ಟ್ರೋ ಜಿಂದಗಿ ಎನ್ನುವ ಸಂಸ್ಥೆಯ ಮುಖ್ಯ ಆಡಳಿತ ನಿರ್ವಹಣಾ ಅಧಿಕಾರಿಯಾಗಿರುವ ನೀರಜ್, ಏಪ್ರಿಲ್ 2020ರಲ್ಲೇ, ದೇಶಕ್ಕೆ ಯಾವಯಾವ ಉದ್ಯಮಕ್ಕೆ, ಕೊರೊನಾದಿಂದ ತೊಂದರೆಯಾಗಲಿದೆ. ಕೊರೊನಾ ಕಾಟ ಯಾವಾಗ ಮುಗಿಯುತ್ತೆ ಎನ್ನುವುದರ ಬಗ್ಗೆ ವಿವರಿಸಿದ್ದಾರೆ.

ಅಭಿಗ್ಯಾ ಆನಂದ್ ಎನ್ನುವ ಬಾಲ ಜ್ಯೋತಿಷಿ

ಅಭಿಗ್ಯಾ ಆನಂದ್ ಎನ್ನುವ ಬಾಲ ಜ್ಯೋತಿಷಿ

"ಕೃಷಿ ಚಟುವಟಿಕೆಗಳು ಬಂದ್ ಆದರೆ, ಇದರಿಂದ ತುಂಬಾ ದೊಡ್ಡ ಆಪತ್ತು ಎದುರಿಸಬೇಕಾಗುತ್ತದೆ. ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕಿದೆ. ಇದಕ್ಕೆ ಮನುಷ್ಯ ಅರಶಿಣ ಮತ್ತು ಅಮೃತವಳ್ಳಿ ಮುಂತಾದವುದನ್ನು ಹೆಚ್ಚಾಗಿ ಸೇವಿಸಬೇಕು. ಜೂನ್ ಮಾಸಾಂತ್ಯದಿಂದ ಕೊರೊನಾ ವೈರಸ್ ಪ್ರಭಾವ ಕಮ್ಮಿಯಾಗುತ್ತಾ ಸಾಗುತ್ತದೆ" ಎನ್ನುವ ಹೊಸ ದಿನಾಂಕವನ್ನು ಅಭಿಗ್ಯಾ ಆನಂದ್ ಎನ್ನುವ ಬಾಲ ಜ್ಯೋತಿಷಿ ನುಡಿದಿದ್ದ.

ಇಂದುಜೀ ಎಂದೇ ಹೆಸರಾಗಿರುವ ಆಚಾರ್ಯ

ಇಂದುಜೀ ಎಂದೇ ಹೆಸರಾಗಿರುವ ಆಚಾರ್ಯ

"ಸೆಪ್ಟಂಬರ್ 13ರವರೆಗೆ ಕೊರೊನಾ ಎಫೆಕ್ಟ್ ಇರಲಿದೆ. ಜೂನ್ 30ರವರೆಗೆ ಕೊರೊನಾ, ಜಾಗತಿಕವಾಗಿ ತನ್ನ ಬೀಭತ್ಸ ರೂಪ ತೋರಿಸಲಿದೆ. ಆದರೆ ಭಾರತೀಯರು ಭಯ ಪಡುವ ಅಗತ್ಯವಿಲ್ಲ, ಯಾಕೆಂದರೆ ನಮ್ಮ ದೇಶ ಭಾಗ್ಯ ಸ್ಥಾನದಲ್ಲಿದೆ. ಸೆಪ್ಟಂಬರ್ 13-23ರ ಅವಧಿಯಲ್ಲಿ ವಿಶ್ವಕ್ಕೆ ದೊಡ್ಡ ಆಪತ್ತು ಕಾದಿದೆ" ಎಂದು ಇಂದುಜೀ ಎಂದೇ ಹೆಸರಾಗಿರುವ ಆಚಾರ್ಯ ಇಂದು ಪ್ರಕಾಶ್ ನುಡಿದಿದ್ದರು.

ಜ್ಯೋತಿಷಿ ನೀರಜ್ ಧಾಂಕೇರ್

ಜ್ಯೋತಿಷಿ ನೀರಜ್ ಧಾಂಕೇರ್

"ಶನಿ, ಕೇತು ಮತ್ತು ಗುರು ಗ್ರಹಗಳು ಕೇತುವಿನಲ್ಲಿ ಇರುವುದರಿಂದ, ನವೆಂಬರ್ 5,2019ಕ್ಕೆ ಕೊರೊನಾ ಎನ್ನುವ ವೈರಾಣು ಹುಟ್ಟಿತು. ಡಿಸೆಂಬರ್ 26, 2019ರಂದು ಇವೆಲ್ಲಾ ಗ್ರಹಗಳ ಜೊತೆ, ರವಿ, ಚಂದ್ರ ಮತ್ತು ಬುಧ ಗ್ರಹಗಳು ಧನು ರಾಶಿಗೆ ಪ್ರವೇಶಿಸಿದ್ದರಿಂದ, ಕೊರೊನಾ ವಿಶ್ವಕ್ಕೆ ಪಸರಿಸಲಾರಂಭಿಸಿತು" ಜ್ಯೋತಿಷಿ ನೀರಜ್.

ಶನಿ, ಗುರು ಮತ್ತು ಕುಜ ರಾಶಿಯು ಮಕರಕ್ಕೆ ಪ್ರವೇಶ

ಶನಿ, ಗುರು ಮತ್ತು ಕುಜ ರಾಶಿಯು ಮಕರಕ್ಕೆ ಪ್ರವೇಶ

ಮೇ ಒಂದಕ್ಕೆ ಶನಿ, ಗುರು ಮತ್ತು ಕುಜ ರಾಶಿಯು ಮಕರಕ್ಕೆ ಪ್ರವೇಶಿಸಿದ್ದರಿಂದ ಸ್ವಲ್ಪ ಮಟ್ಟಿನ ನಿರಾಳತೆ. ಆದರೆ, ಜೂನ್ 30ಕ್ಕೆ, ಗುರು ಮತ್ತು ಕೇತು, ಧನು ರಾಶಿಯಲ್ಲಿರುವುದರಿಂದ, ವೈರಸ್ ಹೊಸ ರೂಪವನ್ನು ಪಡೆಯುತ್ತದೆ. ಆಗಸ್ಟ್ ಐದಕ್ಕೆ, ಎರಡೂ ಗ್ರಹಗಳು, ಅದೇ ರಾಶಿಯಲ್ಲಿ ಮುಂದುವರಿಯುವುದರಿಂದ, ವೈರಸ್ ಪ್ರಭಾವ ಹಾಗೇ ಉಳಿಯುತ್ತದೆ.

ಜಗತ್ತು ನಿರಾಳವಾಗಿ, ಮಾಮೂಲಿ ಜೀವನ ಆರಂಭ

ಜಗತ್ತು ನಿರಾಳವಾಗಿ, ಮಾಮೂಲಿ ಜೀವನ ಆರಂಭ

ಸೆಪ್ಟಂಬರ್ 25, 2020ಕ್ಕೆ ಕೇತು, ವೃಶ್ಚಿಕ ರಾಶಿಗೆ ಪ್ರವೇಶಿಸಿದ ನಂತರ, ಕೊರೊನಾ ವೈರಸ್ ಗೆ ಲಸಿಕೆ ಹೊರಬರುತ್ತದೆ. ನವೆಂಬರ್ 20, 2020 ಸುಮಾರಿಗೆ, ಕೊರೊನಾ ವೈರಸ್ ಕಾಟದಿಂದ ಜಗತ್ತು ನಿರಾಳವಾಗಿ, ಮಾಮೂಲಿ ಜೀವನ ಆರಂಭವಾಗುತ್ತದೆ ಎಂದು ಜ್ಯೋತಿಷಿ ನೀರಜ್ ಧಾಂಕೇರ್ ನುಡಿದಿದ್ದಾರೆ. ಇವರ ಭವಿಷ್ಯ ನಿಜವಾಗುವುದೇ ಆದಲ್ಲಿ, ಇನ್ನೂ, ನಾಲ್ಕು ತಿಂಗಳು ವನವಾಸವೇ..

English summary
Impact Of Coronavirus In India, Noted Astrologer Neeraj Dhankher Prediction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X