• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜುಲೈನಲ್ಲಿ ಚಂದ್ರ ಗ್ರಹಣ; ಯಾವ ರಾಶಿಗೆ ಅರಿಷ್ಟ, ಏನು ಪರಿಣಾಮ?

By ಪ್ರಕಾಶ್ ಅಮ್ಮಣ್ಣಾಯ
|
   Lunar Eclipse July 16,2019 : ಈ ಚಂದ್ರಗ್ರಹಣ ಯಾವ ರಾಶಿ ಮೇಲೆ ಯಾವ ರೀತಿ ಪರಿಣಾಮ ಬೀರುವುದು? | Oneindia Kannada

   ಜುಲೈ ತಿಂಗಳಿನಲ್ಲಿ ಖಂಡಗ್ರಾಸ ಚಂದ್ರಗ್ರಹಣ ಗೋಚರಿಸಲಿದೆ. ಮೊದಲಿಗೆ ಗ್ರಹಣ ಸ್ಥಿತಿಗತಿಯನ್ನು ನೋಡೋಣ. ಆ ನಂತರ ಫಲಗಳನ್ನು ನೋಡೋಣ. 16.7.2019, ಅಂದರೆ ಮಂಗಳವಾರ ಮಧ್ಯರಾತ್ರಿಯ ಬಳಿಕ 1.31ಕ್ಕೆ ಅಂದರೆ ಪಂಚಾಂಗ ಆಚರಣೆಯಲ್ಲಿ ಮಂಗಳವಾರ ಆದರೂ, ಈಗಿನ ಕ್ಯಾಲೆಂಡರ್ ಪ್ರಕಾರ 17.7.2019 1.31 am ಆಗುತ್ತದೆ. ಗ್ರಹಣ ಸ್ಪರ್ಶ ಗ್ರಹಣ ಮಧ್ಯ ಕಾಲ 3.01 am. ಗ್ರಹಣ ಮೋಕ್ಷ ಕಾಲ 4.30. ಆದ್ಯಂತ ಒಟ್ಟು ಕಾಲ 2.59 ನಿಮಿಷಗಳ ಕಾಲ ಇರುತ್ತದೆ.

   ಈ ಗ್ರಹಣದ ವಿಶೇಷ ಎಂದರೆ ರವಿಗೂ ಭಾವ ಸಂಧಿ ಕಾಲ, ಚಂದ್ರನಿಗೂ ಭಾವ ಸಂಧಿ ಕಾಲ. ಅಂದರೆ ರವಿಯು ಮಿಥುನ ರಾಶಿಯಿಂದ ಕರ್ಕ ರಾಶಿಗೆ ಪ್ರವೇಶಿಸುವ ಸಂಕ್ರಮಣ ಕಾಲ. ಚಂದ್ರನೂ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಒಂದು ಸಂಧಿಕಾಲ. ಇದು ಸಂಕ್ರಮಣ ಗ್ರಹಣವೂ, ರಾಶಿ ಸಂಧಿ ಗ್ರಹಣವೂ ಆಗುವುದರಿಂದ ಇದರಿಂದ ಅರಿಷ್ಟಗಳೇ ಜಾಸ್ತಿ ಎನ್ನಬಹುದು.

   ಸಿಸೇರಿಯನ್ ಹೆರಿಗೆ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ: ವಿಠ್ಠಲ ಭಟ್ ವಿಶ್ಲೇಷಣೆ

   ಯಾಕೆಂದರೆ ಒಂದು ರಾಶಿ ತತ್ವದಿಂದ ಇನ್ನೊಂದು ರಾಶಿ ತತ್ವಕ್ಕೆ ಪ್ರವೇಶ ಆಗುವಂಥದ್ದು ಇದಾಗಿದೆ. ಆಗ ಎರಡೂ ರಾಶಿಗಳಿಗೂ ಅರಿಷ್ಟವಿದೆ ಎಂದು ಹೇಳಬೇಕಾಗುತ್ತದೆ. ಇದೊಂದು ಸ್ಥಾನ ಪಲ್ಲಟ ಗ್ರಹಣವೂ ಆಗುತ್ತದೆ. ಒಂದು ಬೀದಿಯಲ್ಲಿ ಒಂದು ಮನೆಗೆ ಬೆಂಕಿ ಬಿದ್ದಾಗ ಇನ್ನೊಂದು ಮನೆಯನ್ನೂ ಆಹುತಿ ಪಡೆಯುವಂತಾಗುತ್ತದೆ. ಚಂದ್ರನಿಗೆ ಹಿಡಿಯುವ ಕೇತು ಗ್ರಹಣವು ಅಗ್ನಿ ತತ್ವ ಧನುರಾಶಿಯಲ್ಲಿ ಪ್ರಾರಂಭವಾಗಿ ಭೂ ತತ್ವದ ಮಕರದಲ್ಲಿ ಮೋಕ್ಷ.

   ಹಾಗೆಯೇ ಮಿಥುನ ವಾಯು ತತ್ವದಿಂದ ಕರ್ಕ ಜಲ ತತ್ವಕ್ಕೆ ರವಿಯೂ ಹೋಗುವ ಕಾಲ.

   ಪರಿಣಾಮ ಹೇಗಿರುತ್ತದೆ?

   ಪರಿಣಾಮ ಹೇಗಿರುತ್ತದೆ?

   ಧನು ರಾಶಿಯ ಉತ್ತರಾಷಾಢ ನಕ್ಷತ್ರದಲ್ಲಿ ಗ್ರಹಣ ಸ್ಪರ್ಶವಾಗುತ್ತದೆ. ಮಕರ ರಾಶಿಯ ಉತ್ತರಾಷಾಢ ನಕ್ಷತ್ರದ ಎರಡನೆಯ ಪಾದದಲ್ಲಿ ಮೋಕ್ಷ. ಉತ್ತರಾಷಾಢ ರವಿಯ ನಕ್ಷತ್ರವಾಗುತ್ತದೆ. ರವಿಯು ಮಿಥುನ ರಾಶಿಯ ಗುರು ನಕ್ಷತ್ರ ಪುನರ್ವಸು ಒಂದನೆಯ ಪಾದದಿಂದ ಕರ್ಕ ರಾಶಿಯ ಪುನರ್ವಸು ನಕ್ಷತ್ರದ ಎರಡನೆಯ ಪಾದಕ್ಕೆ ಚಲಿಸುವ ಸಂಧಿಕಾಲ. ಆ ಕಡೆ ಚಂದ್ರನು ರವಿ ನಕ್ಷತ್ರದೊಳಗೆ, ಈ ಕಡೆ ರವಿಯು ಗುರು ನಕ್ಷತ್ರದೊಳಗೆ ರಾಶಿ ಸಂಧಿಯಲ್ಲಿ ಇರುವ ಕಾಲದ ಗ್ರಹಣ ಆದುದರಿಂದ ಇದು ಬಹಳ ಮಹತ್ವ ಪಡೆಯುತ್ತದೆ. ಇದರಿಂದ ಧನು, ಮಕರ, ಕುಂಭ, ವೃಷಭ, ಮಿಥುನ, ಕರ್ಕ, ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಅರಿಷ್ಟ ಎಂದು ಹೇಳಲಾಗಿದೆ

   ಅನಿಷ್ಟಗಳ ರೂಪ ಹೇಗಿರುತ್ತದೆ?

   ಅನಿಷ್ಟಗಳ ರೂಪ ಹೇಗಿರುತ್ತದೆ?

   ಯಾವ ಯಾವ ಮನೋಭಾವನೆಯ ಮನುಷ್ಯರಿರುತ್ತಾರೋ, ಯಾವ ಯಾವ ತತ್ವಗಳ ಮನುಷ್ಯರಿರುತ್ತಾರೋ ಅವರ ಗುಣ- ತತ್ವಗಳು ಉದ್ದೀಪನವಾಗುತ್ತವೆ. ಇದರ ನಿಯಂತ್ರಣ ಮಾಡಿಕೊಳ್ಳದಿದ್ದರೆ ಅರಿಷ್ಟ. ನಿಯಂತ್ರಿಸಿಕೊಂಡವರಿಗೆ ಅಪಾಯ ಇರುವುದಿಲ್ಲ.

   ಇನ್ನು ಭಿನ್ನಮತದಲ್ಲಿ ಬೇಯುತ್ತಿರುವ ಸರಕಾರಗಳು ಪತನಗೊಳ್ಳಬಹುದು. ಅತ್ಯಂತ ಬಲಿಷ್ಠವಾಗಿ ಸಂಘಟಿಸಿದಂತಹ ಸರಕಾರಗಳು ಸ್ಥಿರವಾಗಿರುತ್ತವೆ. ಆದರೆ ಕೆಳಗಿನ (ರಾಜ್ಯ) ಸರಕಾರಗಳು ಒಡೆದುಕೊಂಡು ಛಿದ್ರವಾದಾಗ, ಮೇಲೆ ಇರುವ ಸುಸಂಘಟಿತ ಬಲಿಷ್ಠ ಸರಕಾರಕ್ಕೆ (ಕೇಂದ್ರ) ಜವಾಬ್ದಾರಿ ಹೆಚ್ಚಾಗಿ, ಸ್ವಲ್ಪ ಆತಂಕವೂ ಆಗಬಹುದು.

   ಜಲಕ್ಕೆ ಸಂಬಂಧಿಸಿದ ವಿಕೋಪಗಳಾಗಬಹುದು

   ಜಲಕ್ಕೆ ಸಂಬಂಧಿಸಿದ ವಿಕೋಪಗಳಾಗಬಹುದು

   ಪ್ರಾಕೃತಿಕವಾಗಿ ಭೂ ಕಂಪನ, ಸುನಾಮಿ, ಪ್ರವಾಹ- ಪ್ರಳಯಗಳ ಭೀತಿಯನ್ನೂ ತೋರಿಸುತ್ತದೆ. ಯಾಕೆಂದರೆ ರವಿಯ ಸಂಚಾರವು ದಕ್ಷಿಣಾಯನ ಕಾಲವೂ ಆಗಿ, ಜಲ ತತ್ವದ ರಾಶಿಯಲ್ಲೇ ರವಿ ಸಂಚಾರವೂ ಆಗುವುದರಿಂದ ಪ್ರಾಕೃತಿಕ ವಿಕೋಪದ ರೂಪ ಹೀಗಿರುತ್ತದೆ. ಇದಲ್ಲದೆ ಎರಡು ಅಗ್ನಿ ತತ್ವ (ಕುಜ, ರವಿ) ಗ್ರಹಗಳು ಜಲ ತತ್ವದಲ್ಲೇ ಸಂಚರಿಸುವುದರಿಂದ ಇವರ ರಶ್ಮಿಗಳು ನೀರಿನ ಮೇಲೆ ಕೇಂದ್ರೀಕೃತ ಆಗಿರುವುದು ಜಲ ಸಂಬಂಧಿ ವಿಕೋಪಗಳ ಸೂಚನೆಯಾಗುತ್ತದೆ.

   ಮಾನಸಿಕ, ದೈಹಿಕ ಸಮಸ್ಯೆಗಳು ಕಾಡಬಹುದು

   ಮಾನಸಿಕ, ದೈಹಿಕ ಸಮಸ್ಯೆಗಳು ಕಾಡಬಹುದು

   ಈ ಖಂಡಗ್ರಾಸ ಚಂದ್ರ ಗ್ರಹಣ ಅಂತಾದರೂ ಇದರ ಪ್ರಭಾವ ಹೆಚ್ಚಾಗಿರುತ್ತದೆ. ಇನ್ನು ಚಂದ್ರನು ಮನಸಿನ ಕಾರಕನಾದ್ದರಿಂದ ಅಭಿಪ್ರಾಯ ಭೇದಗಳು ಇದ್ದಲ್ಲಿ ಮತ್ತಷ್ಟು ಉಲ್ಬಣಿಸುತ್ತದೆ. ಧನು, ಮಕರ, ಕುಂಭ, ವೃಷಭ, ಮಿಥುನ, ಕರ್ಕ, ಸಿಂಹ ರಾಶಿಯಲ್ಲಿ ಜನಿಸಿದವರು ಪ್ರಮುಖ ಸ್ಥಾನಗಳನ್ನು ನಿಭಾಯಿಸುವವರಾದರೆ ಅಂಥಲ್ಲಿ ಗೊಂದಲ, ಗದ್ದಲ, ಭಿನ್ನಾಭಿಪ್ರಾಯ ಹೆಚ್ಚಾಗುವ ಸೂಚನೆಗಳಿವೆ. ಕೆಲವರಿಗೆ ಮಾನಸಿಕ ಅಸ್ವಾಸ್ಥ್ಯ, ಮತ್ತೂ ಕೆಲವರಿಗೆ ದೈಹಿಕ ಸಮಸ್ಯೆಗಳು ಕೂಡ ಕಾಡಬಹುದು.

   English summary
   How Lunar eclipse in July affect on zodiac signs? Partial lunar eclipse on July 17th mid night. It will be very crucial according to astrology. Astrologer Prakash Ammannaya explains in detail.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X