ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿಗೆ ದ್ವಾದಶ ರಾಶಿಗಳಿಗೆ ಆಯವ್ಯಯ ಹೇಗಿದೆ?

ಪೂಜೆಪುನಸ್ಕಾರಗಳನ್ನೆಲ್ಲ ಮುಗಿಸಿ, ಬಂಧುಗಳೆಲ್ಲ ಸೇರಿ ಭರ್ಜರಿ ಹೋಳಿಗೆ ಸಿಹಿಯಿರುವ ಮೃಷ್ಟಾನ್ನ ಭೋಜನ ಜಡಿದ ನಂತರ, ಸಂಜೆಯ ವೇಳೆ ಹೊಸ ಪಂಚಾಂಗವನ್ನು ಓದಲು ಮರೆಯದಿರಿ. ಆಯವ್ಯಯದ ಬಗ್ಗೆ ತಿಳಿದುಕೊಳ್ಳಿ.

By ವಿಠ್ಠಲ ಭಟ್ಟ
|
Google Oneindia Kannada News

ಈ ಬಾರಿ ಹೊಸ ಪಂಚಾಂಗ, ಹೊಸ ಕ್ಯಾಲೆಂಡರ್ ನೋಡಿದವರು ಕೊಂಚ ಗೊಂದಲಕ್ಕೊಳಗಾಗುವುದು ನಿಶ್ಚಿತ. ಏಕೆಂದರೆ, ಯುಗಾದಿಯಿಂದ ಆರಂಭವಾಗುವ ಹೊಸ ಸಂವತ್ಸರದ ಹೆಸರೇನು ಎಂಬುದು. ಕೆಲ ಕ್ಯಾಲೆಂಡರ್ ಗಳು ಹೇವಲಂಬಿ ನಾಮ ಸಂವತ್ಸರ ಅಂತ ಬರೆದಿದ್ದರೆ ಕೆಲ ಪಂಚಾಂಗಗಳು ಹೇವಿಳಂಬಿ ನಾಮ ಸಂವತ್ಸವರ ಎಂದು ಬರೆದಿವೆ.[ಜ್ಯೋತಿಷ್ಯ: ಯಾವ ರಾಶಿಯವರಿಗೆ ಯಾವುದು ಅದೃಷ್ಟ ರತ್ನ?]

ಕೆಲವರು, ಯಾವ ಸಂವತ್ಸರವಾದರೂ ಆಗಿರಲಿ, ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬ ತಾತ್ಸಾರ ಭಾವನೆ ತೋರಿದರೂ ಅಚ್ಚರಿಯಿಲ್ಲ. ಅವರು ಆಸ್ತಿಕರೇ ಆಗಿರಲಿ ನಾಸ್ತಿಕರೇ ಆಗಿರಲಿ, ಒಂದು ಬಾರಿ ಹೊಸ ಸಂವತ್ಸರದಲ್ಲಿ ಆಯವ್ಯಯ ಹೇಗಿದೆ ಎಂಬ ಸಂಗತಿಯ ಬಗ್ಗೆ ಸ್ವಲ್ಪವಾದರೂ ಆಸಕ್ತಿ ತೋರೇತೋರುತ್ತಾರೆ. ಈ ಹಿಂದೂ ವರ್ಷದಲ್ಲಿ ನಮಗೆ ಒಳ್ಳೆಯದಾಗುತ್ತೋ ಕೆಟ್ಟದಾಗುತ್ತೋ ಎಂದು ತಿಳಿಯಲು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ?[ಮಾರ್ಚ್ 2017 - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ]

ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಮಾರ್ಚ್ 29ರಂದು ಯುಗಾದಿ ಹಬ್ಬ, ಅಂದಿನಿಂದ 60 ಸಂವತ್ಸರಗಳಲ್ಲಿನ 31ನೇ ಸಂವತ್ಸರವಾಗಿರುವ ಹೇವಿಳಂಬಿ ಸಂವತ್ಸರದ ಆರಂಭ. ದುರ್ಮುಖ ನಾಮ ಸಂವತ್ಸರ ಕಳೆದು ಹೇವಿಳಂಬಿ ನಾಮ ಸಂವತ್ಸರ ಆರಂಭವಾಗಲಿದೆ. ಮುಂದಿನ ಸಂವತ್ಸರ ವಿಳಂಬಿ, ನಂತರದ್ದು ವಿಕಾರಿ... [ಜ್ಯೋತಿಷ್ಯ: ರಾಹು ಗ್ರಹವು ಕೊಟ್ಟರೆ ವರ, ಇಟ್ಟರೆ ಶಾಪ!]

ಹೆಸರೇನೇ ಇರಲಿ, ಮನೆಯಲ್ಲಿ ಪೂಜೆಪುನಸ್ಕಾರಗಳನ್ನೆಲ್ಲ ಮುಗಿಸಿ, ಬಂಧುಗಳೆಲ್ಲ ಸೇರಿ ಭರ್ಜರಿ ಹೋಳಿಗೆ ಸಿಹಿಯಿರುವ ಮೃಷ್ಟಾನ್ನ ಭೋಜನ ಜಡಿದ ನಂತರ, ಸಂಜೆಯ ವೇಳೆ ಹೊಸ ಪಂಚಾಂಗವನ್ನು ಓದಲು ಮರೆಯದಿರಿ. ಯಾವ ರಾಶಿಗೆ ಈ ವರ್ಷ ಹೇಗಿದೆ, ಆಯವ್ಯಯ ಯಾವ ರೀತಿಯಿದೆ ಎಂದು ತಿಳಿಯಲು ಆಸಕ್ತಿಯಿದ್ದರೆ ಮುಂದೆ ಓದಿರಿ. [ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

ಮೇಷ : ಸೆಪ್ಟೆಂಬರ್ ನಂತರ ಮರ್ಯಾದೆ

ಮೇಷ : ಸೆಪ್ಟೆಂಬರ್ ನಂತರ ಮರ್ಯಾದೆ

ಆದಾಯ :- 04
ವ್ಯಯ :- 06
ರಾಜೋಪಚಾರ :- 05
ಅವಮಾನ :- 05

ಈ ವರ್ಷ ಸೆಪ್ಟೆಂಬರ್ 12ನೇ ತಾರಿಖಿನ ತನಕ ಗುರು ಕನ್ಯಾ ರಾಶಿಯಲ್ಲಿ ಇರುವುದರಿಂದ ಅಲ್ಲಿಯ ತನಕ ನಿಮಗೆ ಕೇವಲ ಗುರುಬಲ ಇಲ್ಲದಿರುವುದು ಅಷ್ಟೇ ಅಲ್ಲದೇ ಷಷ್ಠ ಅಂದರೆ ರಿಪು ಸ್ಥಾನದಲ್ಲಿ ಗುರು ತನ್ನ ವೈರಿಯಾದ ಬುಧನ ಕ್ಷೇತ್ರದಲ್ಲಿ ಇರುವುದರಿಂದ ಹೇವಿಳಂಬಿ ಸಂವತ್ಸರದ ಮೊದಲ ಆರು ತಿಂಗಳು ನಿಮಗೆ ಅವಮಾನ ಹಾಗೂ ನಷ್ಟ ಹೆಚ್ಚು ಇರುತ್ತದೆ. ತದ ನಂತರ ಗುರು ಗ್ರಹ ತುಲಾ ರಾಶಿಗೆ ಸಂಚಾರ ಆದ ನಂತರ ನಿಮಗೆ ಭಾಗ್ಯದಲ್ಲಿ ಶನಿ ಹಾಗು ಸಪ್ತಮದಿಂದ ಪೂರ್ಣ ಗುರುಬಲ ಲಭಿಸಿ ಉತ್ತಮ ಫಲ ಹಾಗೂ ಮರ್ಯಾದೆ ಹೆಚ್ಚು ಲಭಿಸುತ್ತದೆ.[ಮೇಷ ವರ್ಷ ಭವಿಷ್ಯ : ಹರ್ಷದ ಸಮಯ ಅನುಭವಿಸಲು ಸಿದ್ಧರಾಗಿ]

ಪರಿಹಾರ :- ಆಜ್ಯಕ್ತ ತಿಲ ವ್ರೀಹಿ ದ್ರವ್ಯದಲ್ಲಿ ರುದ್ರ ಹವನ ಸಹಿತ ಗುರು ಶಾಂತಿ ಹವನವನ್ನು ಮಾಡಿಸಿದರೆ ಉತ್ತಮ.

ವೃಷಭ : ಉದ್ಯೋಗ ತ್ಯಜಿಸುವ ಸಾಹಸ ಬೇಡ

ವೃಷಭ : ಉದ್ಯೋಗ ತ್ಯಜಿಸುವ ಸಾಹಸ ಬೇಡ

ಆದಾಯ :- 03
ವ್ಯಯ :- 07
ರಾಜೋಪಚಾರ :- 02
ಅವಮಾನ :- 08

ಈ ವರ್ಷದ ಆರಂಭದಿಂದಲೇ ನಿಮಗೆ ಅಷ್ಟಮ ಶನಿ ಪ್ರಭಾವ ಪ್ರಾರಂಭ ಆಗಿರುತ್ತೆ. ಆದರೆ ಸಾಮಾನ್ಯವಾಗಿ ಈ ವರ್ಷ ಸೆಪ್ಟೆಂಬರ್ ತನಕ ಗುರು ಬಲ ಇರುವುದರಿಂದ ಅಷ್ಟಮ ಶನಿಯ ಕಠೋರತೆ ತಾಗುವುದಿಲ್ಲ. ಆದರೆ ಸೆಪ್ಟೆಂಬರ್ 12ನೇ ತಾರೀಖಿನ ನಂತರ ಷಷ್ಠ ಗುರು ಹಾಗೂ ಅಷ್ಟಮ ಶನಿ ಈ ಎರಡೂ ಸ್ಥಿತಿಗಳನ್ನು ಎದುರಿಸಬೇಕಾಗಿದೆ. ಆದುದರಿಂದ ಅವಮಾನ ಹಾಗೂ ಕೆಲಸಕಾರ್ಯಗಳಲ್ಲಿ ಹಿನ್ನಡೆಯಾಗುವ ಸಂಭವವಿದೆ. ಸ್ತ್ರೀ ಪುರುಷ ಭೇದವಿಲ್ಲದೇ ಎಲ್ಲಾ ವೃಷಭ ರಾಶಿಯವರೂ ಸಹ ಆರೋಗ್ಯದ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ವ್ಯಾಪಾರಿಗಳು ಹೊಸದಾಗಿ ಹೂಡಿಕೆ ಮಾಡಬೇಡಿ ಉದ್ಯೋಗಿಗಳು ಇರುವ ಉದ್ಯೋಗವನ್ನು ತ್ಯಜಿಸಿ ಹೊಸ ಉದ್ಯೋಗ ಹುಡುಕುವ ಹುಚ್ಚು ಸಾಹಸ ಮಾಡಬೇಡಿ.[ವೃಷಭ ವರ್ಷಭವಿಷ್ಯ : ಪಲಾವ್ ಇಲ್ಲದಿದ್ದರೂ ಚಿತ್ರಾನ್ನಕ್ಕೆ ಕೊರತೆಯಿಲ್ಲ]

ಪರಿಹಾರ :- ಕೃಸರಾನ್ನ ಹಾಗೂ ಶಮೀ ಸಮಿಧದಲ್ಲಿ ಶನಿ ಶಾಂತಿ ಹವನ ಸಹಿತ ಗುರು ಶಾಂತಿ ಹವನವನ್ನು ಕಡ್ಡಾಯವಾಗಿ ಮಾಡಿಸಿ.

ಮಿಥುನ : ಅಡಚಣೆಗಳು ಸರ್ವೇಸಾಮಾನ್ಯ

ಮಿಥುನ : ಅಡಚಣೆಗಳು ಸರ್ವೇಸಾಮಾನ್ಯ

ಆದಾಯ :- 04
ವ್ಯಯ :- 06
ರಾಜೋಪಚಾರ :- 03
ಅವಮಾನ :- 07

ಈ ವರ್ಷ ನಿಮಗೆ ಗುರು ಬಲ ಇಲ್ಲ, ಬರುವುದೂ ಇಲ್ಲ. ಆದರೂ ಶನಿ ಸಪ್ತಮದಲ್ಲಿ ಬರುವುದರಿಂದ ಅವಮಾನಗಳು ಆಗಬಹುದು. ಪ್ರಾರಂಭಿಸಿದ ಕೆಲಸಕಾರ್ಯಗಳು ನಿಧಾನ ಆಗುತ್ತದೆ. ಹೋಗಬೇಕಾದಲ್ಲಿ ಹೋಗಲು ಹಿಂಜರಿಯುತ್ತೀರಿ. ಮಾಡಿ ಮುಗಿಸಬೇಕಾಗಿದ್ದು ಮಾಡಲು ನಿಧಾನ ಮಾಡುತ್ತೀರಿ. ಸ್ನೇಹಿತರೊಂದಿಗೆ ಸೇರಿ ಹೊಸ ಉದ್ಯಮ ವ್ಯಾಪಾರ ಆರಂಭ ಮಾಡುವುದಾದಲ್ಲಿ ಅವುಗಳು ಬೇಗ ಕಾರ್ಯ ರೂಪಕ್ಕೆ ಬಾರದು. ಒಬ್ಬರು ಒಪ್ಪುವಷ್ಟರಲ್ಲಿ ಇನ್ನೊಬ್ಬರು ತಕರಾರು ತೆಗೆಯುತ್ತಾರೆ. ಇನ್ನು ಮದುವೆ ಮಾತುಕತೆಯ ಹಂತದಲ್ಲಿ ಸಮಸ್ಯೆ ಹಾಗೂ ಅಡಚಣೆಗಳು ಈ ವರ್ಷ ನಿಮಗೆ ಸಾಮಾನ್ಯ.[ಮಿಥುನ ವರ್ಷಭವಿಷ್ಯ: ಏರಿಳಿತವಿಲ್ಲದ ಸರಳರೇಖೆಯಂತೆ ಬದುಕು]

ಪರಿಹಾರ :- ಪುರುಷಸೂಕ್ತ ಹವನ ಮಾಡಿಸಿದರೆ ಅತೀ ಉತ್ತಮ.

ಕರ್ಕ : ಅದೃಷ್ಟ ಕೈಹಿಡಿಯುತ್ತದೆ, ಯಶಸ್ಸು ಗ್ಯಾರಂಟಿ

ಕರ್ಕ : ಅದೃಷ್ಟ ಕೈಹಿಡಿಯುತ್ತದೆ, ಯಶಸ್ಸು ಗ್ಯಾರಂಟಿ

ಆದಾಯ :- 06
ವ್ಯಯ :- 04
ರಾಜೋಪಚಾರ :- 07
ಅವಮಾನ :-03

ಈ ವರ್ಷ ನಿಮಗೆ ಗುರು ಹಾಗು ಶನಿ ಈ ಎರಡೂ ಗ್ರಹಗಳ ದೋಷ ಫಲವಿಲ್ಲ! ಇನ್ನು ಬಿಡಿಸಿ ನೋಡಿದರೆ ಶನಿ ಷಷ್ಠದಲ್ಲಿ ಇದ್ದು ಶುಭ ಫಲಗಳನ್ನೇ ನೀಡುತ್ತಾನೆ ಹಾಗೆಯೇ ಗುರು ತೃತೀಯದಲ್ಲಿ ಈಗಿದ್ದು ಭಾಗ್ಯಸ್ಥಾನವನ್ನು ನೋಡುವುದರಿಂದ ನಿಮಗೆ ಅದೃಷ್ಟ ಕೈ ಹಿಡಿಯುವುದು, ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರಕುವುದು. ಈ ವರ್ಷದಲ್ಲಿ ನೀವು ಹೆಚ್ಚು ಹೆಚ್ಚು ಧಾರ್ಮಿಕ ಮನಸ್ಥಿತಿಯನ್ನು ಹೊಂದುತ್ತೀರಿ ಹಾಗು ದಾನ ಧರ್ಮ ಹೋಮ ಹವನ ಇತ್ಯಾದಿ ವೈದಿಕ ಕಾರ್ಯಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತೀರಿ. ಸೆಪ್ಟೆಂಬರ್ ನಂತರ ಚತುರ್ಥಕ್ಕೆ ಗುರು ಗ್ರಹ ಹೋಗುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ಆಗುತ್ತದೆ.[ಕರ್ಕಾಟಕ ವರ್ಷ ಭವಿಷ್ಯ: ಪಟ್ಟ ಕಷ್ಟ ಮಾಯವಾಗಿ, ಸುಖ ನಿರೀಕ್ಷಿಸಿ]

ಪರಿಹಾರ :- ಆಶ್ಲೇಷ ಬಲಿ ಪೂಜಾ ಸಹಿತ ತ್ರಿಮಧ್ವಾಕ್ತ ತಿಲ ದ್ರವ್ಯದಲ್ಲಿ ಸರ್ಪ ಶಾಂತಿ ಹವನ ಮಾಡಿಸಿ.

ಸಿಂಹ : ಸಾಲ ಕೊಡಬೇಡಿ, ಕೊಡಿಸಲೂಬೇಡಿ

ಸಿಂಹ : ಸಾಲ ಕೊಡಬೇಡಿ, ಕೊಡಿಸಲೂಬೇಡಿ

ಆದಾಯ:- 05
ವ್ಯಯ :- 05
ರಾಜೋಪಚಾರ:- 05
ಅವಮಾನ :- 05

ನಿಮಗೆ ಈ ವರ್ಷದಲ್ಲಿ ಪಂಚಮ ಶನಿ ಪ್ರಭಾವ ಇದ್ದರೂ ಸಹ ದ್ವಿತೀಯದ ಗುರು ಬಲದಿಂದಾಗಿ ಶನಿ ದುಷ್ಪ್ರಭಾವ ಅಷ್ಟಾಗಿ ಕಾಡದು. ಸಂತಾನ ಇಲ್ಲದೇ ಕಷ್ಟಪಡುತ್ತಿದ್ದಲ್ಲಿ ಈ ವರ್ಷ ಸಂತಾನದ ಯೋಗ ಫಲವಿದೆ. ನಿಮ್ಮ ರಾಶಿಯಲ್ಲಿಯೇ ರಾಹು ಗ್ರಹ ಇರುವುದರಿಂದ ಈ ವರ್ಷ ವೃಥಾ ಓಡಾಟ ಅಧಿಕವಾದ ಅನಿರೀಕ್ಷಿತ ಖರ್ಚುಗಳು ಸಾಲು ಸಾಲಾಗಿ ಬಂದು ನಿಮ್ಮನ್ನು ಸ್ವಲ್ಪ ಕಾಡಲಿದೆ. ಆದರೆ ನೆನಪಿಟ್ಟು ನೀವು ಅನುಸರಿಸಬೇಕಾದದ್ದು ಎಂದರೆ ಯಾರಿಗೂ ಸಾಲ ಕೊಡಬೇಡಿ ಹಾಗೂ ಇನ್ನೂ ಮುಖ್ಯವಾಗಿ ನೀವು ಮಧ್ಯವರ್ತಿಯಾಗಿ ನಿಂತು ಯಾರಿಗೂ ಸಾಲ ಕೊಡಿಸಬೇಡಿ. ದೊಡ್ಡ ಪ್ರಮಾಣದಲ್ಲಿ ಅಡಮಾನಗಳನ್ನು ಇಟ್ಟು ಸಾಲ ಮಾಡಲೂ ಬೇಡಿ. ನಿಮ್ಮ ಉಳಿತಾಯದ ಹಣದ ವಿಚಾರದಲ್ಲಿ ಬಹಳ ಎಚ್ಚರಿಕೆ ಅತ್ಯಗತ್ಯ.[ಸಿಂಹ ವರ್ಷ ಭವಿಷ್ಯ: ವ್ಯವಹಾರದಲ್ಲಿ ಹುಷಾರಾದರೆ ಜೀವನ ಸೂಪರ್]

ಪರಿಹಾರ:- ಶ್ರೀ ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿಸಿ ಕಮಲ ಪುಷ್ಪ ಹಾಗೂ ಪಾಯಸದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಹೃದಯ ಹವನ ಮಾಡಿಸಿ ಅದರ ಸಹಿತ ಶನಿ ಶಾಂತಿ ಮಾಡಿಸಿ.

ಕನ್ಯಾ : ಹೆಚ್ಚು ಉಳಿತಾಯ ಮಾಡಲಿದ್ದೀರಿ

ಕನ್ಯಾ : ಹೆಚ್ಚು ಉಳಿತಾಯ ಮಾಡಲಿದ್ದೀರಿ

ಆದಾಯ :- 06
ವ್ಯಯ :- 04
ರಾಜೋಪಚಾರ :- 06
ಅವಮಾನ :- 04

ನಿಮ್ಮ ಹಿಂದಿನ ವರುಷಗಳಿಗೆ ಹೋಲಿಸಿದರೆ ಈ ವರ್ಷ ನಿಮಗೆ ಅತ್ಯಂತ ಆಶ್ಚರ್ಯ ಆಗುವಂತೆ ಈ ವರ್ಷ ಸ್ವಲ್ಪ ಉಳಿತಾಯವನ್ನು ಮಾಡುತ್ತೀರಿ! ನೀವು ಖರ್ಚು ಮಾಡಿದರೂ ಸಹ ಅದು ನಿಮಗೆ ಮನೋರಂಜನೆ ನೀಡುವ ವಿಷಯ ವಸ್ತುಗಳ ಮೇಲೆ ಮಾಡಬಹುದಷ್ಟೇ! ಈ ವರ್ಷದ ಕೊನೆಯ ಭಾಗ ಮಾತ್ರ ನಿಮಗೆ ಇನ್ನೂ ಉತ್ತಮವಾಗಿರುತ್ತದೆ. ಆದರೆ ಈಗಾಗಲೇ ಇರುವ ವ್ಯಾಪಾರ ಅಲ್ಲದೇ ಹೊಸದಾಗಿ ಏನನ್ನಾದರೂ ಪ್ರಾರಂಭಿಸುವ ಆಲೋಚನೆಗಳಿದ್ದಲ್ಲಿ ಒಮ್ಮೆ ನಿಮ್ಮ ಜಾತಕವನ್ನು ಪರಾಮರ್ಶಿಸಿಕೊಳ್ಳಿ. ಅದೇ ವಿಧದಲ್ಲಿ ನಿಮ್ಮ ಆಹಾರ ಪದ್ಧತಿ ಹಾಗೂ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರ ವಹಿಸಿ.[ಕನ್ಯಾ ರಾಶಿ ವರ್ಷ ಭವಿಷ್ಯ: ಘಟ ಇದ್ದರಷ್ಟೇ ಮಠ, ಆರೋಗ್ಯ ಜೋಪಾನ]

ಪರಿಹಾರ :- ಶ್ರೀ ಧನ್ವಂತರಿ ಮಹಾ ವಿಷ್ಣು ಹವನ ಮಾಡಿಸಿ.

ತುಲಾ : ಮಧ್ಯಭಾಗದ ನಂತರ ಪರಿಸ್ಥಿತಿ ಸುಧಾರಣೆ

ತುಲಾ : ಮಧ್ಯಭಾಗದ ನಂತರ ಪರಿಸ್ಥಿತಿ ಸುಧಾರಣೆ

ಆದಾಯ :- 02
ವ್ಯಯ :- 08
ರಾಜೋಪಚಾರ :- 03
ಅವಮಾನ :- 07

ಸಾಡೇಸಾತಿ ಮುಗಿಯಿತು ಎಂದು ಸಂತಸ ಪಟ್ಟರೂ ಸಹ ಅದು ಸಾಲುವುದಿಲ್ಲ. ಕಾರಣ ಸದ್ಯ ನಿಮಗೆ ವ್ಯಯದಲ್ಲಿ ಗುರು ಸ್ಥಿತನಾಗಿ ಇರುವುದು. ಕೈಲಾಗದವನು ಮೈಯೆಲ್ಲಾ ಪರಚಿಕೊಂಡನು ಎಂಬಂತೆ ಇರುತ್ತದೆ ಕೆಲ ಪರಿಸ್ಥಿತಿಗಳು. ಈ ವರ್ಷದ ಮಧ್ಯಭಾಗ ಮುಗಿದ ನಂತರ ಪರಿಸ್ಥಿತಿಗಳು ಅದೂ ಸಹ ಸ್ವಲ್ಪ ನಿಧಾನವಾಗಿ ಸರಿಹೋಗುತ್ತಾ ಬರುತ್ತದೆ. ಆದರೆ ಆ ಬದಲಾದ ಸಮಯದಲ್ಲಿ ಆರೋಗ್ಯದ ವಿಚಾರದಲ್ಲಿ ಎಚ್ಚರ ಅವಶ್ಯ. ಶರೀರದಲ್ಲಿ ಪಿತ್ಥೋದ್ರೇಕ ಆಗಿ ತುರಿಕೆ ಇತ್ಯಾದಿ ಚರ್ಮ ವ್ಯಾಧಿಗಳು ಕಾಡಬಹುದು. ಯಾವುದೇ ಕಾರಣದಲ್ಲಿಯೂ ಸಹ ಕಷ್ಟ ಎಂದು ಅಥವಾ ಬೇರೆ ಕಾರಣಗಳಿಂದ ಈಗಿರುವ ಕೆಲಸ ಬಿಟ್ಟು ಹೊಸ ಉದ್ಯೋಗ ಹುಡುಕಲು ಹೋಗದಿರಿ.[ತುಲಾ ವರ್ಷ ಭವಿಷ್ಯ: ಸಿಕ್ಕಾಪಟ್ಟೆ ಪರೀಕ್ಷೆಗಳು ಮುಂದಿವೆ, ಸಾಹಸ ಬೇಡ]

ಪರಿಹಾರ :- ಕನಿಷ್ಠ ದಶ ಸಹಸ್ರ ಸಂಖ್ಯೆ ಗುರು ಜಪ ಮಾಡಿ ಅದರ ದಶಾಂಶ ಪದ್ದತಿಯಲ್ಲಿ ಹವನ ತರ್ಪನ ಪ್ರೋಕ್ಷಣ ಹಾಗೂ ಪ್ರಾಶನ ಮಾಡಿಸಿ ಕಡಲೇ ಕಾಳು ದಾನ ಮಾಡಿ.

ವೃಶ್ಚಿಕ : ಕಷ್ಟ ಎದುರಿಸುವ ಧೈರ್ಯ ಬೇಕೇಬೇಕು

ವೃಶ್ಚಿಕ : ಕಷ್ಟ ಎದುರಿಸುವ ಧೈರ್ಯ ಬೇಕೇಬೇಕು

ಆದಾಯ :- 04
ವ್ಯಯ:- 06
ರಾಜೋಪಚಾರ:- 04
ಅವಮಾನ :- 06

ಈ ವರ್ಷದ ಮಧ್ಯ ಭಾಗದ ತನಕ ನಿಮಗೆ ಗುರು ಬಲ ಇರುವುದು ನಿಜ. ಆದರೆ ಆ ಸಮಯದ ನಂತರ ಗುರು ವ್ಯಯ ಸ್ಥಾನಕ್ಕೆ ಬರುವುದರಿಂದ ಒಂದು ಕಡೆಯಲ್ಲಿ ಸಾಡೇಸಾತಿ ಇನ್ನೊಂದು ಕಡೆ ವ್ಯಯದಲ್ಲಿ ಗುರು. ಇಲ್ಲಿ ಅರ್ಥ ಮಾಡಿಕೊಳ್ಳ ಬೇಕಾದುದು ಎಂದರೆ ಕೇವಲ ಗುರು ಬಲ ಮುಗಿಯುವುದಕ್ಕೂ ಹಾಗು ಗುರುಬಲ ಮುಗಿದು ಗುರು ವ್ಯಯ ಸ್ಥಾನಕ್ಕೆ ಬರುವುದಕ್ಕೂ ಜೀವನದ ಮೇಲಿನ ಅದರ ಪ್ರಭಾವದಲ್ಲಿ ಬಹಳ ವ್ಯತ್ಯಾಸವಿದೆ. ಆ ವ್ಯತ್ಯಾಸವನ್ನು ಎದುರಿಸುವ ಧೈರ್ಯ ಹಾಗೂ ಬುದ್ಧಿವಂತಿಕೆ ಎರಡೂ ಬೇಕು. ವರ್ಷಾಂತ್ಯ ಬಂದಂತೆ ಎಷ್ಟೇ ಕಷ್ಟ ಬಂದರೂ ಸಹ ಕೆಲಸ ಬಿಡ ಬೇಡಿ. ನಾಯಿಯಿಂದ ಕಚ್ಚಿಸಿಕೊಳ್ಳುವ ಸಾಧ್ಯತೆಯಿದೆ. {ಸಾಕು ನಾಯಿ ಇದ್ದರೂ ಸಹ ಎಚ್ಚರ}[ವೃಶ್ಚಿಕ ವರ್ಷ ಭವಿಷ್ಯ: ಕಂಡ ಕನಸುಗಳೆಲ್ಲ ಕೈಗೂಡಿ, ಸಂಭ್ರಮ]

ಪರಿಹಾರ :- ದೂರ್ವಾ ಮೃತ್ಯುಂಜಯ ಶಾಂತಿ ಹವನವನ್ನು ಮಾಡಿಸಿ.

ಧನು : ಆರೋಗ್ಯಕ್ಕಾಗಿ ಆಯುರ್ವೇದಕ್ಕೆ ಮೊರಹೋಗಿ

ಧನು : ಆರೋಗ್ಯಕ್ಕಾಗಿ ಆಯುರ್ವೇದಕ್ಕೆ ಮೊರಹೋಗಿ

ಆದಾಯ :- 06
ವ್ಯಯ :- 04
ರಾಜೋಪಚಾರ :- 03
ಅವಮಾನ :- 07

ಈ ವರ್ಷ ನಿಮಗೆ ಆರೋಗ್ಯ ಹಾಗು ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳ ವಿಚಾರದಲ್ಲಿ ಚಿಂತಿಸಬೇಕಾದ ಪರಿಸ್ಥಿತಿ ಇದೆ. ಹಣದ ವಿಚಾರದಲ್ಲಿ ಅಷ್ಟಾಗಿ ಸಮಸ್ಯೆಗಳು ಆಗುವ ಸಾಧ್ಯತೆಗಳು ಕಡಿಮೆ. ಆದರೆ ಜನ್ಮ ಶನಿಯ ಪ್ರಭಾವ ನಿಮಗೆ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನ ಅತ್ಯಗತ್ಯ! ಆಲಸ್ಯ ನಿಮ್ಮನ್ನು ಬಿಟ್ಟೂ ಬಿಡದೇ ಕಾಡುತ್ತದೆ. ಬೆನ್ನು ನೋವು ಸೊಂಟ ನೋವು ಇತ್ಯಾದಿಗಳಿಂದ ಬಳಲುವುದು ಒಂದು ಕಡೆ, ಆದರೆ ಇನ್ನೊಂದು ಕಡೆಯಿಂದ ಏನ್ ಕೆಲಸ ಮಾಡಲೂ ಸಹ ಉತ್ಸಾಹ ಇರೋದಿಲ್ಲ. ಕೆಲಸಗಳು ತಾನಾಗಿ ಆಗಲೀ ಶ್ರಮ ಆದಷ್ಟೂ ಕಡಿಮೆ ಆಗಲಿ ಅನಿಸುತ್ತದೆ. ಆಯುರ್ವೇದಕ್ಕೆ ಮೊರೆ ಹೋಗಿ ಹಾಗೂ ಆಹಾರ ಪದ್ಧತಿಗಳ ವಿಚಾರದಲ್ಲಿ ಎಚ್ಚರ ಇರಲಿ.[ಧನು ವರ್ಷ ಭವಿಷ್ಯ: ಆಲಸ್ಯ ಅಡ್ಡವಾಗಲಿದೆ, ಅದೇ ಖೆಡ್ಡಾ ಆಗದಿರಲಿ]

ಪರಿಹಾರ :- ಉಗ್ರ ನಾರಸಿಂಹ ಜಪ ತರ್ಪಣ ಹವನ ಸಹಿತ ಶನಿ ಜಪ ತರ್ಪಣ ಹವನಗಳನ್ನು ಕಡ್ಡಯವಾಗಿ ಮಾಡಿಸಿ.

ಮಕರ : ಸಾಡೇಸಾತಿ ಪ್ರಭಾವ ಇದ್ದೇ ಇರುತ್ತದೆ

ಮಕರ : ಸಾಡೇಸಾತಿ ಪ್ರಭಾವ ಇದ್ದೇ ಇರುತ್ತದೆ

ಆದಾಯ :- 07
ವ್ಯಯ :- 03
ರಾಜೋಪಚಾರ :- 04
ಅವಮಾನ :- 06

ಈ ವರ್ಷದಿಂದ ತಾನೇ ನಿಮಗೆ ಸಾಡೇಸಾತಿ ಶನಿಯ ಪ್ರಭಾವ ಪ್ರಾರಂಭ ಆಗಿದೆ ಆದರೆ ಭಾಗ್ಯಸ್ಥಾನದಲ್ಲಿ ಗುರು ಇರುವುದರಿಂದ ಗುರುಬಲ ನಿಮಗೆ ಉತ್ತಮ ಯಶಸ್ಸು ಹಾಗು ಆದಾಯ ಲಭಿಸುವಂತೆ ಆಗುತ್ತದೆ. ಇನ್ನು ಸಾಡೇಸಾತಿಯ ಪ್ರಭಾವ ಇದ್ದೇ ಇರುತ್ತದೆ. ಆದುದರಿಂದ ನಿಮಗೆ ಉದ್ಯೋಗ ಕ್ಷೇತ್ರ ಅಥವಾ ಸಮಾಜದಲ್ಲಿ ಸ್ವಲ್ಪ ಅವಮಾನ ಜಾಸ್ತಿ ಆಗುತ್ತದೆ. ನಿಮ್ಮ ಮೇಲೆ ನಂಬಿಕೆ ಇಟ್ಟು ನಿಮ್ಮನ್ನು ಸಲಹಿದವರು ಸಹ ನಿಮ್ಮನ್ನು ಟೀಕಿಸಿ ಅವಮಾನಿಸಬಹುದು. ಹಣದ ಗಳಿಕೆ ನೂತನ ಉದ್ಯೋಗ ಪ್ರಾಪ್ತಿ ವಿವಾಹ ಭಾಗ್ಯ ನೂತನ ವಾಹನ ಖರೀದಿ ಇತ್ಯಾದಿ ಯಾವುದೇ ವಿಚಾರಗಳಲ್ಲಿ ನಿಮಗೆ ಹೆಚ್ಚಿನ ಸಮಸ್ಯೆಗಳು ಆಗುವುದಿಲ್ಲ.[ಮಕರ ವರ್ಷ ಭವಿಷ್ಯ: ಸಮಸ್ಯೆಗಳೆಲ್ಲ ಸರಾಗವಾಗಿ ಸರಿದು, ಬದುಕು ಬೊಂಬಾಟ್]

ಪರಿಹಾರ :- ಅಷ್ಟದ್ರವ್ಯ ಮಹಾಗಣಪತಿ ಹವನ ಮಾಡಿಸಿ.

ಕುಂಭ : ಶನಿ ಗ್ರಹ ಲಾಭದಲ್ಲಿ ಇರುವುದರಿಂದ

ಕುಂಭ : ಶನಿ ಗ್ರಹ ಲಾಭದಲ್ಲಿ ಇರುವುದರಿಂದ

ಆದಾಯ:- 06
ವ್ಯಯ :-04
ರಾಜೋಪಚಾರ:- 07
ಅವಮಾನ :- 03

ಈ ವರ್ಷ ನಿಮಗೆ ಗುರು ಬಲ ಇಲ್ಲ. ಜೊತೆಗೆ ಅಷ್ಟಮದಲ್ಲಿ ಗುರು ಆದರೂ ಸಹ ಆ ಸಮಸ್ಯೆ ಈ ವರ್ಷದ ಮಧ್ಯಭಾಗದ ತನಕ ಮಾತ್ರ ಇರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನಿಮ್ಮ ರಾಶಿಯ ಸ್ವಾಮಿಯಾದ ಶನಿ ಗ್ರಹ ಲಾಭ ಸ್ಥಾನದಲ್ಲಿ ಬಂದಿರುವುದರಿಂದ ಉತ್ತಮ ಫಲಗಳನ್ನು ಹೇಳಬಹುದು. ಆದರೆ ಅದು ನಿಮ್ಮ ಬುದ್ದಿವಂತಿಕೆಯ ಮೇಲೆ ನಿಂತಿದೆ ಎನ್ನಬಹುದು. ಕಾರಣ ನಿಮಗೆ ಬರಬೇಕಾದ ಲಾಭಗಳು ಎಲ್ಲ ಸ್ವಲ್ಪ ನಿಧಾನ ಆಗಬಹುದು. ಆದರೆ ನಿಮ್ಮ ಬುದ್ದಿವಂತಿಕೆಯಿಂದ ಅವುಗಳನ್ನು ತ್ವರಿತವಾಗಿ ನೀವು ಪಡೆದು ಸಂತೋಷವಾಗಿ ಇರಲು ಪ್ರಯತ್ನಿಸಬೇಕು.[ಕುಂಭ ವರ್ಷ ಭವಿಷ್ಯ: ಸಣ್ಣ ಗಾಯವೇ ಘಾಸಿ ತಂದೀತು ಎಚ್ಚರ!]

ಪರಿಹಾರ :- ದುರ್ಗಾಸೂಕ್ತವನ್ನು ಕನಿಷ್ಠ 108 ಬಾರಿ ಜಪ ಮಾಡಿಸಿ ದಶಾಂಶ ಹವನ ಮಾಡಿಸಿ 3 ಜನ ಮುತ್ತೈದೆಯರಿಗೆ ಅರಿಶಿಣ ಕುಂಕುಂಮ ವಸ್ತ್ರ ಇತ್ಯಾದಿ ಮಂಗಲ ದ್ರವ್ಯ ದಾನ ಮಾಡಿ.

ಮೀನ : ವಿದೇಶ ಪ್ರಯಾಣ, ವಿವಾಹ ಭಾಗ್ಯ

ಮೀನ : ವಿದೇಶ ಪ್ರಯಾಣ, ವಿವಾಹ ಭಾಗ್ಯ

ಆದಾಯ :- 07
ವ್ಯಯ :- 03
ರಾಜೋಪಚಾರ :- 06
ಅವಮಾನ :- 04

ಈ ವರ್ಷದ ಆದಿಯಲ್ಲಿ ಹಾಗೂ ಮಧ್ಯ ಭಾಗದ ತನಕ ನಿಮಗೆ ಅತೀ ಉತ್ತಮವಾಗಿದೆ ಎನ್ನಬಹುದು. ವಿದೇಶ ಪ್ರಯಾಣಗಳು, ಅವಿವಾಹಿತರಿಗೆ ವಿವಾಹ ಭಾಗ್ಯ, ವಿವಾಹಿತರಿಗೆ ಸಂತಾನ ಭಾಗ್ಯ ಇತ್ಯಾದಿ ಎಲ್ಲ ಶುಭವನ್ನು ಈ ಕಾಲದಲ್ಲಿ ಕಾಣಬಹುದು. ಆದರೆ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಅಥವಾ ಮಾಡುತ್ತಿರುವ ಉದ್ಯೋಗದಲ್ಲಿ ಭಡ್ತಿಯ ಆಸೆಯಲ್ಲಿ ಇರುವವರಿಗೆ ಸ್ವಲ್ಪ ನಿರಾಸೆ ಆಗಬಹುದು. ಆದರೆ ಉದ್ಯೋಗದ ಸ್ಥಾನ ಬದಲಾವಣೆಯ ಆಸೆ ಪಡುವವರು ಅಂದರೆ transfer ಬಯಸುವವರು ಮಾತ್ರ ಸುಲಭವಾಗಿ ಪಡೆಯಬಹುದು. ಆದರೆ ಈ ವರ್ಷದ ಮಧ್ಯಭಾಗ ಅಂತ್ಯ ಭಾಗಕ್ಕೆ ಸರಿದಂತೆ ಆರೋಗ್ಯ ಬಾಧೆಗಳು ಅದರಲ್ಲಿಯೂ ಹೊಟ್ಟೆಗೆ ಸಂಬಂಧಪಟ್ಟ ಖಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು ಇವೆ.[ಮೀನ ವರ್ಷಭವಿಷ್ಯ : ದೈವಾನುಗ್ರಹದಿಂದ ಬದುಕು ಸುಂದರ]

ಪರಿಹಾರ :- ನವಗ್ರಹ ಶಾಂತಿ ಹವನ ಸಹಿತ ವಿಶೇಷವಾಗಿ ಗುರು ಹಾಗೂ ಶನಿ ಶಾಂತಿ ಹವನವನ್ನು ಮಾಡಿಸಿ.

ಸರ್ವರಿಗೂ ಶುಭವಾಗಲಿ :- ಆಚಾರ್ಯ ವಿಠ್ಠಲ ಭಟ್ಟ 98456 82380

English summary
Hevilambi Samvatsara Ugadi : Aya Vyaya (earning and expenditure) for all zodiac signs (rashis) during 2017-18 by Pandit Vittal Bhat. The well known astrologer has suggested solution for the problems the people may face. Wish you all have wonderful new year, happy Ugadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X