• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಚ್ಡಿ ಕುಮಾರಸ್ವಾಮಿ ಸರ್ಕಾರ ಬಗ್ಗೆ ಟಾರೋ ಕಾರ್ಡ್ ಭವಿಷ್ಯವೇನು?

By ಪ್ರಕಾಶ್ ದಳವಿ
|
   ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಒಂದು ರೀತಿ ಮಂಕು ಕವಿದಿದೆ | Oneindia Kannada

   ಲೋಕಸಭೆ ಚುನಾವಣೆ ಬಳಿಕ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಒಂದು ರೀತಿ ಮಂಕು ಕವಿದಿದೆ. ಆದರೆ, ಸರ್ಕಾರ ಆಗಸ್ಟ್ ತನಕ ಸುನಾಮಿ ಬಂದರೂ ಭದ್ರವಾಗಿರಲಿದೆ ಎಂದು ಟಾರೋ ಕಾರ್ಡ್ ಭವಿಷ್ಯ ನುಡಿಯುವ ಪ್ರಕಾಶ್ ದಳವಿ ಅವರು ಹೇಳಿದ್ದಾರೆ.

   17ನೇ ಲೋಕಸಭೆಗಾಗಿ ಏಪ್ರಿಲ್ 11 ರಿಂದ ಮೇ 19 ರ ತನಕ ನಡೆದ ಏಳು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಕರ್ನಾಟಕದಲ್ಲಿ ಏಪ್ರಿಲ್ 18, 23ರಂದು ಮತದಾನವಾಗಿ, ಮೇ 23ರಂದು ಫಲಿತಾಂಶ ಹೊರ ಬಂದಿತು. ಕರ್ನಾಟಕದ 28 ಸ್ಥಾನಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಗೆಲುವು ಸಾಧಿಸಿದರು.

   ಇದಾದ ಬಳಿಕ ಕುಮಾರಸ್ವಾಮಿ ಅವರ ಸರ್ಕಾರ ಉಳಿಯುವುದೇ, ಬಿಜೆಪಿ ಏನಾದರೂ ಆಪರೇಷನ್ ಕಮಲಕ್ಕೆ ಮತ್ತೆ ಚಾಲನೆ ನೀಡುವುದೇ? ಬಿಎಸ್ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗುವ ಕನಸು ನನಸಾಗುವುದೇ? ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಕತೆ ಏನು? ಎಂಬ ಪ್ರಶ್ನೆ ಎದ್ದಿತ್ತು.

   ಟಾರೋ ಕಾರ್ಡ್ ಭವಿಷ್ಯ: ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು?

   ರಾಜ್ಯ ರಾಜಕೀಯದ ಪ್ರಮುಖ ನಾಯಕರಾದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಹೆಸರಿಗೆ ಬರುವ ಟಾರೋ ಕಾರ್ಡ್ ಗಳನ್ನು ಇಟ್ಟುಕೊಂಡು ಪ್ರಕಾಶ್ ಅವರು ಮೇ 28ರಂದೇ ಸಮ್ಮಿಶ್ರ ಸರ್ಕಾರ ಹಾಗೂ ಯಡಿಯೂರಪ್ಪ ಅವರ ಪ್ರಯತ್ನ ಫಲ ನೀಡುವುದೋ ಇಲ್ಲವೋ ಎನ್ನುವುದರ ಭವಿಷ್ಯ ನುಡಿದಿದ್ದರು. ಈ ಬಗ್ಗೆ ವರದಿ ಇಲ್ಲಿದೆ.

   ಕುಮಾರಸ್ವಾಮಿ ನೊಂದು ಬೆಂದು ಪುನರ್ ಬೆಳವಣಿಗೆ

   ಕುಮಾರಸ್ವಾಮಿ ನೊಂದು ಬೆಂದು ಪುನರ್ ಬೆಳವಣಿಗೆ

   ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದು, ತುಮಕೂರು ಕ್ಷೇತ್ರದಲ್ಲಿ ತಮ್ಮ ತಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಗೆಲುವು ಸಾಧಿಸಲು ಆಗದೆ ಇದ್ದದ್ದು, ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಅವರು ಗೆದ್ದರೂ ಅವರ ಆಸ್ತಿ ವಿವರ ಅಫಿಡವಿಟ್ ಗೊಂದಲ ಎಲ್ಲದರಿಂದ ಕುಮಾರಸ್ವಾಮಿ ಕೊಂಚ ನೊಂದಿದ್ದರು. ಆದರೆ, ಸರ್ಕಾರ ಉಳಿಸಿಕೊಳ್ಳುವುದು ಮುಖ್ಯ ಎಂದು ಬಹುಬೇಗ ಅರಿತುಕೊಂಡಿದ್ದರಿಂದ ಕೆಲಸ ಸುಲಭವಾಯಿತು.

   ಹಲವು ಸಂಧಾನದ ಮೂಲಕ ಸರ್ಕಾರ ಉಳಿಸಿಕೊಂಡಿದ್ದಾರೆ

   ಹಲವು ಸಂಧಾನದ ಮೂಲಕ ಸರ್ಕಾರ ಉಳಿಸಿಕೊಂಡಿದ್ದಾರೆ

   ಆದರೆ, ಒಂದು ವಾರದ ಬಳಿಕ ಹತ್ತು ಹಲವು ಸಂಧಾನದ ಮೂಲಕ ಸರ್ಕಾರ ಉಳಿಸಿಕೊಳ್ಳುವುದರ ಮಹತ್ವವನ್ನು ಕುಮಾರಸ್ವಾಮಿ ಅರಿತುಕೊಂಡು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಮೈತ್ರಿ ಬಗ್ಗೆ ಅನೇಕ ಹಿರಿಯ ನಾಯಕರ ಅಪಸ್ವರ ಕೇಳಿ ಬಂದರೂ, ಜೆಡಿಎಸ್ ನಲ್ಲೂ ಈ ಬಗ್ಗೆ ಅಸಮಾಧಾನ ಕಂಡು ಬಂದರೂ ಕುಮಾರಸ್ವಾಮಿ ಮಾತ್ರ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದ್ದಲ್ಲದೇ, ಸರ್ಕಾರ ಉಳಿಸಿಕೊಳ್ಳಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಮಾಡಿಕೊಂಡಿದ್ದಾರೆ.

   ಮೇ 23ರಂದು ಫಲಿತಾಂಶದ ದಿನದಿಂದ ಜೂನ್ 21ರ ತನಕ

   ಮೇ 23ರಂದು ಫಲಿತಾಂಶದ ದಿನದಿಂದ ಜೂನ್ 21ರ ತನಕ

   ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಂದ ಬಳಿಕ, ಜೆಡಿಎಸ್ ಗಿಂತ ಕಾಂಗ್ರೆಸ್ ನಲ್ಲಿ ಪರಸ್ಪರ ಕೆಸರೆರಚಾಟ ಶುರುವಾಯಿತು. ಚುನಾವಣಾ ಪ್ರಚಾರ ವೈಖರಿ, ಟಿಕೆಟ್ ಹಂಚಿಕೆಯಿಂದ ಹಿಡಿದು, ಮೈತ್ರಿ ಅಗತ್ಯದ ತನಕ ಎಲ್ಲವೂ ಚರ್ಚೆಯಾಯಿತು. ಬಹಿರಂಗವಾಗಿ ಅನೇಕ ನಾಯಕರು ಮಾತನಾಡಿದರೂ ಸದ್ಯಕ್ಕೆ ಶಿವಾಜಿನಗರದ ಶಾಸಕ, ಎಐಸಿಸಿ ಸದಸ್ಯ ರೋಷನ್ ಬೇಗ್ ಅವರು ಕಾಂಗ್ರೆಸ್ಸಿನಿಂದ ಅಮಾನತುಗೊಂಡಿದ್ದಾರೆ. ಮಂಡ್ಯ ಕ್ಷೇತ್ರ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಸಿಎಸ್ ಪುಟ್ಟರಾಜು ಅವರು ಸಚಿವ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಂಡು ಕುಮಾರಸ್ವಾಮಿ ಜಾಣತನ ತೋರಿದ್ದಾರೆ. ಅತೃಪ್ತ ಶಾಸಕರು ಬುಸುಗುಟ್ಟಿದರೂ ಸರ್ಕಾರ ಬುಡಮೇಲು ಮಾಡಲು ಆಗುತ್ತಿಲ್ಲ. ಒಟ್ಟಾರೆ, ಇದೇ ಪರಿಸ್ಥಿತಿ ಇನ್ನೂ ಒಂದು ತಿಂಗಳು ಮುಂದುವರೆಯಲಿದೆ ಎಂದು ಭವಿಷ್ಯಗಾರರು ತಿಳಿಸಿದ್ದಾರೆ.

   ಜೂನ್ ತಿಂಗಳಿನಲ್ಲಿ ಯಡಿಯೂರಪ್ಪಗೆ ಬಲವಿಲ್ಲ

   ಜೂನ್ ತಿಂಗಳಿನಲ್ಲಿ ಯಡಿಯೂರಪ್ಪಗೆ ಬಲವಿಲ್ಲ

   ಜೂನ್ ತಿಂಗಳಿನಲ್ಲಿ ಅಪರೇಷನ್ ಕಮಲ ಪ್ರಯತ್ನಕ್ಕೆ ಬಲವಿಲ್ಲ. ಯಡಿಯೂರಪ್ಪ ಅವರಿಗೂ ಯಾವುದೇ ಅದೃಷ್ಟವಿರುವುದಿಲ್ಲ. ಒಂದು ವೇಳೆ ಸಿಎಂ ಆಗಲು ಹೊರಟರೆ ಮುಖಭಂಗವಾಗಲಿದ್ದು, ತೀವ್ರ ಹಿನ್ನಡೆ ಅನುಭವಿಸಲಿದ್ದಾರೆ. ಈಗ ಜೊತೆಗೆ ನಿಲ್ಲುವವರೂ ದೂರಾಗಲಿದ್ದಾರೆ. ದೆಹಲಿ ನಾಯಕರ ಬೆಂಬಲವೂ ಸಿಗುವುದಿಲ್ಲ. ಜುಲೈನಲ್ಲಿ ಯಡಿಯೂರಪ್ಪ ಪ್ರಯತ್ನ ಪಟ್ಟರೆ ಸಫಲವಾಗುವ ಸಾಧ್ಯತೆಯಿದೆ. ಈ ವೇಳೆಗೆ ಮೈತ್ರಿ ಸರ್ಕಾರದಲ್ಲೂ ಒಡಕು ಮೂಡಲಿದ್ದು, ಬಿಜೆಪಿ ಹೆಚ್ಚಿನ ಪ್ರಯತ್ನಪಡದಿದ್ದರೂ ಕಾರ್ಯಸಿದ್ಧಿಸುವ ಸಾಧ್ಯತೆ ಹೆಚ್ಚಿದೆ.

   ಸಿದ್ದರಾಮಯ್ಯ ಅವರಿಗೆ ಮತ್ತೆ ಸಿಎಂ ಯೋಗವಿದೆಯೇ?

   ಸಿದ್ದರಾಮಯ್ಯ ಅವರಿಗೆ ಮತ್ತೆ ಸಿಎಂ ಯೋಗವಿದೆಯೇ?

   ಎಲ್ಲಾ ಬೆಳವಣಿಗೆಯನ್ನು ಪರದೆ ನಿಂತು ನೋಡುತ್ತಿರುವ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯನ್ನು ಕಾಣುವ ಆಸೆ ಇಟ್ಟುಕೊಂಡಿದ್ದಾರೆ. ಆದರೆ, ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಿಲ್ಲ. ಜುಲೈನಲ್ಲಿ ಸಿದ್ದರಾಮಯ್ಯ ಅವರು ತಮ್ಮ ನಡೆ ಇಡಲಿದ್ದು, ಇದರಿಂದ ಸಮ್ಮಿಶ್ರ ಸರ್ಕಾರದ ಅಸ್ತಿತ್ವದ ಪ್ರಶ್ನೆ ಏಳಲಿದೆ. ಸಿದ್ದರಾಮಯ್ಯ ಅವರು ಇಟ್ಟ ನಡೆಗೆ ಕುಮಾರಸ್ವಾಮಿ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ಸರ್ಕಾರದ ಅಸ್ತಿತ್ವದ ಭವಿಷ್ಯ ನಿರ್ಧಾರವಾಗಲಿದೆ. ಸಿದ್ದರಾಮಯ್ಯ ಅವರಿಗೆ ಈ ಸಮಯಕ್ಕೆ ಮತ್ತೆ ಸಿಎಂ ಆಗುವ ಯೋಗವಿಲ್ಲ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   HD Kumaraswamy led JDS- Congress coalition government is safe till August, BS Yeddyurappa won't be successful if tries to topple to government : Tarot card reader.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more