ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಡೇಸಾತಿ ಶನಿಕಾಟದೊಂದಿಗೆ ಇನ್ನು ಗುರುಕಾಟ ಧನುಸ್ಸು ರಾಶಿಗೆ

By ನಾಗನೂರಮಠ ಎಸ್ಎಸ್
|
Google Oneindia Kannada News

"ಸಾಮೇರು" ಗುರುಫಲವನ್ನು ಯಾವ ರೀತಿ ಹೇಳುತ್ತಾರೆ ಎಂಬುದು ಕೆಲವು ಮೂರ್ಖರಿಗೆ ಇದೂವರೆಗೆ ಗೊತ್ತಿಲ್ಲದಿರುವದು ನಗೆಪಾಟೀಲನ ವಿಷಯ. ಇಂಥ ಮೂರ್ಖರಿಗೆಂದೇ ಸಾಮೇರ ಬತ್ತಳಿಕೆಯಲ್ಲಿ ಬಹಳಷ್ಟು ಬಾಣಗಳಿವೆ. ನೇರವಾಗಿ ಸಾಮೇರೊಂದಿಗೆ ಮಾತಾಡೋಕೆ ಎದೆಯಲ್ಲಿ ಗುಂಡಿಗೆ ಗಟ್ಟಿ ಇಲ್ಲ, ಮಾತಾಡಿದ್ರೆ ಎಲ್ಲಿ ಬೀಳತ್ತೋ ಏಟು ಎಂಬ ಭಯ ಮೂರ್ಖರಿಗೆ.

ಇರಲಿ, ಗುರುಫಲವು ಕೇವಲ ಗುರುವಿನ ಸಂಚಾರದ ಫಲವಾಗಿದೆ. ವರ್ಷ ಭವಿಷ್ಯ ವರ್ಷದಾರಂಭದಿಂದ ವರ್ಷದ ಕೊನೆಯ ತಿಂಗಳಿನವರೆಗಿನದು ಇರುತ್ತದೆ. ಇದೇ ರೀತಿ ಯುಗಾದಿ ಭವಿಷ್ಯವೂ ಕೂಡ ಮುಂದಿನ ಯುಗಾದಿಯ ತನಕದ್ದು ಇರುತ್ತದೆ. ಇಷ್ಟರಲ್ಲಿ ಎಲ್ಲ ಭವಿಷ್ಯಗಳಲ್ಲಿ ಎಲ್ಲ ಫಲಗಳು ಒಂದೇ ರೀತಿ ಇರುವುದಿಲ್ಲ. ಫಲಗಳಲ್ಲಿ ವ್ಯತ್ಯಾಸವಿರುತ್ತದೆ ಅಷ್ಟೇ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಅಷ್ಟಕ್ಕೂ ಇದನ್ನೆಲ್ಲಾ ನಂಬಲ್ಲ ಎನ್ನುವ ತಿಳಿಗೇಡಿಗಳು, ತಮ್ಮ ಜಾತಕ ಮತ್ತು ಹುಟ್ಟಿದ ವಿವರಗಳಿದ್ದಾವೋ ಇಲ್ಲವೋ ಮೊದಲು ನೋಡಿಕೊಂಡು ತಮ್ಮ ಮನೆಮಂದಿಗೆಲ್ಲ ಹೇಳಿಕೊಳ್ಳಲಿ ತಮ್ಮ ಪೌರುಷವನ್ನು. ಆಮೇಲೆ ಸಾಮೇರ ಹತ್ತಿರ ಬರಲಿ. ಏಕೆಂದರೆ ಸಾಮೇರು ಬೆಂಕಿ, ಬೆಂಕಿಯೊಂದಿಗೆ ಸರಸವಾಡುವವರಿಗೇನೆ ನಷ್ಟ, ಸಾಮೇರಗಲ್ಲ. ಸಾಮೇರು ಮಾಗಝಿನ್ ಹಾಕಿ ಒತ್ತಿದರೆ ಮುಗೀತು ಶಂಭೋಲಿಂಗನ ಸ್ಥಳಕ್ಕೆ ಹೋಗಬೇಕಾಗುತ್ತದೆ ಎಚ್ಚರವಿರಲಿ.

ಈಗಾಗಲೇ ಶನಿಸಾಡೇಸಾತಿಯ ಮೊದಲನೇ ಹಂತವನ್ನು ಯಶಸ್ವಿಯಾಗಿ ಎರಡು ವರ್ಷ ಮುಗಿಸಿರುವ ಧನುಸ್ಸು ರಾಶಿಯವರಿಗೆ ಜನವರಿ ತಿಂಗಳಿಂದ ಸಾಡೇಸಾತಿಯು ಎರಡನೇ ಹಂತದಲ್ಲಿ ಕಾಲಿಡಲಿದೆ. [ಧನಸ್ಸು ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ]

ಧನುಸ್ಸು ರಾಶಿಯವರು ಗುರುಬಲ ಕಳೆದುಕೊಳ್ಳುತ್ತಾರೆ

ಧನುಸ್ಸು ರಾಶಿಯವರು ಗುರುಬಲ ಕಳೆದುಕೊಳ್ಳುತ್ತಾರೆ

ಇಷ್ಟು ದಿನ ಅಂದರೆ, ಒಂದು ವರ್ಷದಿಂದ ಗುರುಬಲದಿಂದ ಹುರುಪಾಗಿದ್ದ ಧನುಸ್ಸು ರಾಶಿಯವರು ಈಗ ಗುರುಬಲ ಕಳೆದುಕೊಂಡಿದ್ದಾರೆ. ಈಗ ರಾಶಿಯಿಂದ ದಶಮದಲ್ಲಿ ಬಂದಿರುವ ಗುರು ಇಷ್ಟು ದಿನ ಎಷ್ಟು ಅನುಕೂಲನಿದ್ದನೋ ಅಷ್ಟೇ ಕೆಟ್ಟವನ ತರಹ ಫಲ ನೀಡುತ್ತಾನೆ. ಅಂದರೆ ಇಷ್ಟು ದಿವಸ ಇದ್ದ ಕೆಲವೊಂದು ಸೌಲಭ್ಯಗಳು ಮತ್ತು ಸೌಕರ್ಯಗಳು ಕಡಿಮೆಯಾಗುತ್ತವೆ ಅಥವಾ ಬಿಟ್ಟು ಹೋಗುತ್ತವೆ.

ಜಗಳಗಳನ್ನು ಮಾತುಕತೆಯಲ್ಲೇ ಬಗೆಹರಿಸಿ

ಜಗಳಗಳನ್ನು ಮಾತುಕತೆಯಲ್ಲೇ ಬಗೆಹರಿಸಿ

ಈ ಸಮಯದಲ್ಲಿ ಆಸ್ತಿಪಾಸ್ತಿಗಾಗಿ ಕದನಗಳು ಆರಂಭವಾಗುತ್ತವೆ ಮನೆಯವರೊಂದಿಗೆ. ಅಣ್ಣ-ತಮ್ಮ ಅಥವಾ ಸಂಬಂಧಿಕರಿಂದಲೇ ಕೋರ್ಟ್ ಗಳಿಗೆ ಅಲೆದಾಡಬೇಕಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಮಾತುಕತೆಯಲ್ಲಿಯೇ ಕೆಲವೊಂದು ವಿಷಯಗಳನ್ನು ಬಗೆಹರಿಸಿಕೊಳ್ಳಬೇಕು ಧನುಸ್ಸು ರಾಶಿಯವರು. ಏಕೆಂದರೆ ಈ ಸಮಯದಲ್ಲಿ ಜಗಳಗಳಲ್ಲಿ ಗೆಲುವಿನ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ.

ಉಪಾಯಗಳಿಂದ ಯೋಜನೆಗಳನ್ನು ರೂಪಿಸಿ

ಉಪಾಯಗಳಿಂದ ಯೋಜನೆಗಳನ್ನು ರೂಪಿಸಿ

ಮೊದಲೇ ಶನಿಕಾಟ ಜೊತೆಗೆ ಗುರುಬಲವೂ ಇಲ್ಲದ್ದರಿಂದ ನೀವೇ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವಂತಹ ಕೆಲಸ ಮಾಡಬಾರದು ಬುದ್ಧಿವಂತರಾಗಿದ್ದರೆ. ಈ ಸಮಯದಲ್ಲಿ ಏನೇ ಮಾಡಿದರೂ ತುಂಬಾ ಯೋಚಿಸಿ ಮತ್ತು ಹಲವಾರು ಉಪಾಯಗಳಿಂದ ಯೋಜನೆಗಳನ್ನು ಮತ್ತು ಕೆಲಸ ಕಾರ್ಯಗಳನ್ನು ಹಾಕಿಕೊಳ್ಳಬೇಕು.

ದುಡ್ಡಿನ ವ್ಯವಹಾರ ಈಗಲೇ ಕಲಿತುಕೊಳ್ಳಿ

ದುಡ್ಡಿನ ವ್ಯವಹಾರ ಈಗಲೇ ಕಲಿತುಕೊಳ್ಳಿ

ಬೇಕಿದ್ದರೆ ಕೆಲವೊಂದು ವಿಷಯಗಳಿಗೆ ಟ್ರೈನಿಂಗ್ ಸಹ ಪಡೆದುಕೊಳ್ಳಬಹುದು. ವ್ಯಕ್ತಿತ್ವ ವಿಕಸನ, ಹಣ ಉಳಿಸಿ, ಬೆಳೆಸುವುದು ಹೇಗೆ ಮುಂತಾದ ಟ್ರೈನಿಂಗ್ ಕೊಡ್ತಾ ಇರ್ತಾರೆ. ಅಲ್ಲಿ ಸೇರಿಕೊಂಡು ಕಷ್ಟದ ಸಮಯದಲ್ಲಿ ಹೇಗಿರಬೇಕು ಮತ್ತು ಯಾವ ರೀತಿ ದುಡ್ಡಿನ ವ್ಯವಹಾರ ಮಾಡಬೇಕು ಎಂಬುದನ್ನು ಕಲಿತುಕೊಳ್ಳಿ.

ಕಷ್ಟ, ನಷ್ಟ, ಲಾಭ ಇವೆಲ್ಲಾ ಶನಿಪ್ರಭಾವದಿಂದ

ಕಷ್ಟ, ನಷ್ಟ, ಲಾಭ ಇವೆಲ್ಲಾ ಶನಿಪ್ರಭಾವದಿಂದ

ಶನಿಸಾಡೇಸಾತಿ ಈಗ ಮೊದಲನೇ ಹಂತದಲ್ಲಿದೆ. ಇನ್ನು ಎರಡು ಹಂತಗಳನ್ನು ದಾಟಬೇಕು. ಹೀಗಾಗಿ ಮುಂದಿನ ದಿನಗಳಿಗೆ ಅನುಕೂಲವಾಗಲಿ ಎಂದು ಈಗಲೇ ಎಚ್ಚೆತ್ತುಕೊಳ್ಳಬೇಕು. ಈಗ ಗುರುವಂತೂ ಏನೂ ಕೊಡಲ್ಲ, ಕೊಡದಿದ್ದರೂ ಕಷ್ಟ ಮಾತ್ರ ಕೊಡಲ್ಲ. ಕಷ್ಟ, ನಷ್ಟ, ಲಾಭ ಇವೆಲ್ಲಾ ಶನಿಪ್ರಭಾವದಿಂದ ಮಾತ್ರ.

ಆರೋಗ್ಯವನ್ನು ಅಮೂಲಾಗ್ರವಾಗಿ ಪರೀಕ್ಷಿಸಿಕೊಳ್ಳಿ

ಆರೋಗ್ಯವನ್ನು ಅಮೂಲಾಗ್ರವಾಗಿ ಪರೀಕ್ಷಿಸಿಕೊಳ್ಳಿ

ಇನ್ನು ಧನುಸ್ಸು ರಾಶಿಯ ಉದ್ಯೋಗಿಗಳಿಗೆ ಮತ್ತು ವ್ಯವಹಾರಸ್ಥರಿಗೆ ಬೇರೆ ಕಡೆ ಕೆಲಸ ಮಾಡುವ ಆದೇಶ ಬಂದರೆ ನಿರ್ಭಿಡೆಯಿಂದ ಒಪ್ಪಿಕೊಳ್ಳಬೇಕು. ದೇಹಾರೋಗ್ಯದಲ್ಲಿ ಕೆಲವೊಮ್ಮೆ ಏರಿಳಿತವಾಗುತ್ತಿದ್ದರೆ ಕೂಡಲೇ ಇಡೀ ದೇಹವನ್ನೇ ಪರೀಕ್ಷಿಸಿಕೊಂಡು ಯಾವುದರಲ್ಲಿ ತೊಂದರೆ ಇದೆ ಎಂಬುದನ್ನು ತಿಳಿದುಕೊಳ್ಳಬೇಕು ಒಳ್ಳೆಯ ಮತ್ತು ಹಿರಿಯ ವೈದ್ಯರಿಂದ.

ಚಿಂತೆ ಬಿಡಿ, ಮನೋಸ್ಥೈರ್ಯ ಬೆಳೆಸಿಕೊಳ್ಳಿ

ಚಿಂತೆ ಬಿಡಿ, ಮನೋಸ್ಥೈರ್ಯ ಬೆಳೆಸಿಕೊಳ್ಳಿ

ಅತಿಯಾಗಿ ಯಾವುದನ್ನೂ ತಲೆಗೆ ಹಚ್ಚಿಕೊಳ್ಳಬಾರದು, ಚಿಂತೆ ಎಂದರೆ ಏನು ಎಂದು ನೀವೇ ಕೇಳಬೇಕು ಇತರರಿಗೆ. ಮನೋಸ್ಥೈರ್ಯ ಬೆಳೆಸಿಕೊಳ್ಳಲು ಯೋಗ ಮಾಡುತ್ತಿದ್ದರೆ ಯಾವ ಚಿಂತೆಯೂ ಹತ್ತಿರ ಸುಳಿಯಲ್ಲ. ಇಲ್ಲಾಂದ್ರೆ ಹೈಪರ್ ಟೆನ್ಸನ್ ನಿಂದ ಬಿಪಿ ಬರುವುದು ಗ್ಯಾರಂಟಿ.

ಸಮಸ್ಯೆಗಳು ಬರದಂತೆ ನೋಡಿಕೊಳ್ಳಬೇಕು

ಸಮಸ್ಯೆಗಳು ಬರದಂತೆ ನೋಡಿಕೊಳ್ಳಬೇಕು

ಚಿಕ್ಕಪುಟ್ಟ ವಿಷಯಗಳಿಗೇಕೆ, ದೊಡ್ಡ ದೊಡ್ಡ ವಿಷಯಗಳಿಗೂ ತಲೆ ಕೆಡಿಸಿಕೊಳ್ಳಬಾರದು. ಸಮಸ್ಯೆಗಳು ಬರದಂತೆ ನೋಡಿಕೊಳ್ಳಬೇಕು. ಬಂದರೆ ಎದುರಿಸುತ್ತೇನೆ ಎಂಬ ಧೈರ್ಯ ಎದೆಯಲ್ಲಿ ಮತ್ತು ಮನದಲ್ಲಿಟ್ಟುಕೊಂಡಿರಬೇಕು ಯಾವಾಗಲೂ.

ಸುಮ್ಮನೆ ನನ್ನ ತಂಟೆಗೆ ಬರಬೇಡಿ, ಅಷ್ಟೇ

ಸುಮ್ಮನೆ ನನ್ನ ತಂಟೆಗೆ ಬರಬೇಡಿ, ಅಷ್ಟೇ

ಕಚೇರಿಯಲ್ಲಿ ಕೆಲವೊಮ್ಮೆ ಹಿರಿಯರು ಅಥವಾ ಮೇಲಾಧಿಕಾರಿಗಳು ಕಿರಿಕಿರಿ ಮಾಡುತ್ತಿದ್ದರೆ ನೇರವಾಗಿ ಹೇಳಿ. ತಪ್ಪಿದ್ದರೆ ಮಾತ್ರ ನನಗೆ ಹೇಳಿ, ಇಲ್ಲಾಂದ್ರೆ ಸುಮ್ಮನೇ ಸುದ್ದಿಗೆ ಬರಬೇಡಿ ಎಂದು. ಅವರೇನೂ ಮಾಡಲ್ಲ, ಮತ್ತು ಹೆಚ್ಚಿನ ನಂಬಿಕೆ ಮತ್ತು ವಿಶ್ವಾಸ ಹುಟ್ಟುತ್ತದೆ. ನೇರಾನೇರ ಹೇಳುವವರ ಹೃದಯ ನಿರ್ಮಲವಾಗಿರುತ್ತದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿದೆ.

ಬೇರೆಡೆ ಕೆಲಸ ಸಿಕ್ಕರೆ ಹೊರಟುಬಿಡಿ

ಬೇರೆಡೆ ಕೆಲಸ ಸಿಕ್ಕರೆ ಹೊರಟುಬಿಡಿ

ಬೇರೆ ಊರಿಗೆ ಹೋಗಬೇಕಾದರೆ ಕೆಲಸದ ನಿಮಿತ್ತ ಖುಷಿಯಿಂದ ಹೊರಡಿ. ದೇಶ ಸುತ್ತಿದರೆ ಮತ್ತು ಕೋಶ ಓದಿದರೆ ಜ್ಞಾನ ವೃದ್ಧಿಯಾಗುತ್ತದಂತೆ ಎಂಬುದನ್ನು ಅರ್ಥ ಮಾಡಿಕೊಂಡು ಪರ ಊರಿನಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿರುವುದು ಸೌಭಾಗ್ಯವೆಂದುಕೊಳ್ಳಿ.

ಧನುಸ್ಸು ರಾಶಿಯವರು ಅಡವಿರಾಜನಂಗೆ ಇರಬೇಕು

ಧನುಸ್ಸು ರಾಶಿಯವರು ಅಡವಿರಾಜನಂಗೆ ಇರಬೇಕು

ಈ ಸಮಯದಲ್ಲಿ ಧನುಸ್ಸು ರಾಶಿಯವರು ಒಂಥರಾ ಅಡವಿರಾಜನಂಗೆ ಇರಬೇಕು. ಶನಿಬಲವಿಲ್ಲ ಗುರುಬಲವಿಲ್ಲ ಹೀಗಿದ್ದಾಗ ಕೆಲವೊಮ್ಮೆ ಚಿಕ್ಕಪುಟ್ಟವರೂ ಸಹ ತೊಂದರೆ ಕೊಡಲು ಬರುತ್ತಾರೆ. ಒಮ್ಮೆ ಘರ್ಜನೆ ಮಾಡಿ ಅಡವಿರಾಜನ ತರಹ. ಬಾಲ ಮುದುರಿಕೊಂಡು ಓಡಲಾರಂಭಿಸುತ್ತಾರೆ ಯಪ್ಪಾ, ಯವ್ವಾ ಎಂದು.

ಎಲ್ಲರೊಂದಿಗೆ ಒಳ್ಳೆಯವರಾಗಿಯೇ ಇರಬೇಕಂತಿಲ್ಲ

ಎಲ್ಲರೊಂದಿಗೆ ಒಳ್ಳೆಯವರಾಗಿಯೇ ಇರಬೇಕಂತಿಲ್ಲ

ಇನ್ನು ನೀವು ಎಲ್ಲರೊಂದಿಗೆ ಒಳ್ಳೆಯವರಾಗಿಯೇ ಇರಬೇಕಂತಿಲ್ಲ. ಅವರು ಕೆಮ್ಮಿದರೆ ನೀವೂ ಕೆಮ್ಮಿ, ನಮಸ್ಕಾರ ಹೇಳಿದರೆ ನೀವೂ ನಮಸ್ಕಾರ ಹೇಳಿ. ಒಳ್ಳೆಯವರೆಂದು ಕರೆಯಿಸಿಕೊಳ್ಳಬೇಕು ಎಂದು ಕೆಟ್ಟ ಗುಣಗಳವರೊಂದಿಗೆ ಒಳ್ಳೆಯ ವರ್ತನೆ ತೋರಿಸಿದರೆ ಅವರು ಟೋಪಿ ಹಾಕಲು ಸ್ಕೆಚ್ ಹಾಕ್ತಾರೆ ನೆನಪಿರಲಿ.

ರಾಮಾಯಣ ಮಹಾಭಾರತ ಓದಿ ತಿಳಿದುಕೊಳ್ಳಿ

ರಾಮಾಯಣ ಮಹಾಭಾರತ ಓದಿ ತಿಳಿದುಕೊಳ್ಳಿ

ಒಂದು ಮಾತು ನೆನಪಿಟ್ಟುಕೊಳ್ಳಿ. ರಾಮಾಯಣ ಓದಿ, ನೋಡಿ ಜೀವನದಲ್ಲಿ ಹೇಗಿರಬೇಕು ಎಂದು ಕಲಿತುಕೊಳ್ಳಿ, ಮಹಾಭಾರತ ಓದಿ, ನೋಡಿ ಜೀವನದಲ್ಲಿ ಹೇಗಿರಬಾರದು ಎಂಬುದನ್ನು ಕಲಿತುಕೊಳ್ಳಿ.

English summary
Gurubala for Sagittarius zodiac signs based on transit of Jupiter plant from Leo to Virgo in 2016. Planet Jupiter has entered Virgo on August 11, 2016. Our astrologer explains how it affects and helps Sagittarius people. Difficult time ahead for Sagittarius people. They should now know how to lead life without difficulties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X