• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಲಾ : ಗುರುವಿನ ಹೊಡೆತಕ್ಕೆ ಜೀವನವೇ ಅಲ್ಲೋಲಕಲ್ಲೋಲ

By ನಾಗನೂರಮಠ ಎಸ್ಎಸ್
|

ಸಾಡೇಸಾತಿಯ ಕೊನೆಯ ಹಂತದಲ್ಲಿ ಇರುವ ತುಲಾ ರಾಶಿಯವರಿಗೆ ಈಗ ಜೀವನ ನುಂಗಲಾರದ ತುಪ್ಪದಂತಾಗುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ 12ನೇ ಸ್ಥಾನದಲ್ಲಿ ಗುರು ಬಂದಿದ್ದಾನೆ. ಮೊದಲೇ ವ್ಯಯಸ್ಥಾನವೆಂದು ಕರೆಯಿಸಿಕೊಳ್ಳುವ 12ನೇ ಸ್ಥಾನದಲ್ಲಿ ಗುರು ಬಂದನಂದರೆ ಹಣಕಾಸಿನ ಸಮಸ್ಯೆ ವಿಪರೀತ ತಲೆದೋರಲಾರಂಭಿಸುತ್ತದೆ.

ಜೊತೆಗೆ ಕೆಲವೊಂದು ರೋಗ ರುಜಿನಗಳು ದೇಹದೊಳಗೆ ಮನೆ ಮಾಡಲು ಆರಂಭಿಸುತ್ತವೆ. ಹೀಗಾಗಿ ಈ ರಾಶಿಯವರು ಮುಂದಿನ ವರ್ಷದ ಜನವರಿಯವರೆಗೂ ತುಂಬಾ ಜಾಗೃತರಾಗಿರಬೇಕು. ಇಲ್ಲವಾದಲ್ಲಿ ಜೀವನ ಪೂರ್ತಿ ಆಸ್ಪತ್ರೆಗೆ ಭೇಟಿ ನೀಡುವುದು ತಪ್ಪುವುದಿಲ್ಲ. ಅಷ್ಟೊಂದು ಪರಿಣಾಮಕಾರಿಯಾಗಿದೆ ಈ ಗ್ರಹಾಚಾರದ ಫಲಾಫಲ.

ಏಕೆಂದರೆ ಮೊದಲೇ ನೀಚ ಶನಿ ವೃಶ್ಚಿಕದಲ್ಲಿದ್ದಾನೆ. ಜೊತೆಗೆ ಗುರು ಕೂಡ ವ್ಯಯ ಸ್ಥಾನಕ್ಕೆ ಬಂದು ಇದ್ದಬದ್ದದ್ದನ್ನೆಲ್ಲಾ ಕರಗಿಸಲಾರಂಭಿಸುತ್ತಾನೆ. ಇದರಿಂದ ಕಂಗೆಟ್ಟ ಪರಿಸ್ಥಿತಿ ತುಲಾ ರಾಶಿಯವರದು. ಇಷ್ಟು ದಿನ ಹನ್ನೊಂದು ಸ್ಥಾನದಲ್ಲಿದ್ದ ಗುರು ಸಾಕಷ್ಟು ಪ್ರಮಾಣದ ಹಣಕಾಸಿನ ವ್ಯವಸ್ಥೆ, ಆಸ್ತಿಪಾಸ್ತಿ ಮತ್ತಿತರರ ಸೌಕರ್ಯಗಳನ್ನು ನೀಡಿದ್ದಾನೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಈ ಸಮಯದಲ್ಲಿ ಗಳಿಸಿಟ್ಟುಕೊಂಡಿದ್ದನ್ನು ಉಳಿಸಿಕೊಂಡು ಹೋಗುವುದನ್ನು ಕಲಿಯಬೇಕು. ಇಲ್ಲವಾದಲ್ಲಿ ಹೇಗೆ ಬಂದಿತ್ತೋ ಹಾಗೇ ಹೊರಟು ಹೋಗುತ್ತವೆ ಕೆಲವೊಂದು ವಸ್ತುಗಳು ನೆನಪಿರಲಿ. ಸಾಡೇಸಾತಿಯ ಪರಿಣಾಮಗಳನ್ನು ಈಗಾಗಲೇ ಅನುಭವಿಸಿರುವುದಿಂದ ಈಗ ಶನಿಗೆ ಗುರುವು ಕೈಜೋಡಿಸುವುದರಿಂದ ಇಬ್ಬಿಬ್ಬರ ಹೊಡೆತ ತಾಳಿಕೊಳ್ಳಲು ಸಿದ್ಧರಾಗಬೇಕು ತುಲಾ ರಾಶಿಯವರು. [ಶನೈಶ್ಚರ ಜಯಂತಿ ಕುರಿತ ವಿಶೇಷ ಲೇಖನ]

ನಮ್ಮ ಧರ್ಮದ ಬಗ್ಗೆ ಅಪನಂಬಿಕೆ ಇದ್ದವರು ಅಥವಾ ಸಾಡೇಸಾತಿಯನ್ನು ಉಡಾಫೆ ಮಾಡಿದವರು ಈಗ ತಪ್ಪಿಸದೇ ಹತ್ತಿರದ ದೇವರಿಗೆ ಉರುಳು ಸೇವೆ, ದೀಡ ನಮಸ್ಕಾರ ಮತ್ತಿತರ ಧಾರ್ಮಿಕ ಕಾರ್ಯ ಮಾಡಿಕೊಂಡು ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಇಲ್ಲವಾದರೆ ಗುರುವಿನ ಹೊಡೆತದಿಂದ ಜೀವನವೇ ಅಲ್ಲೋಲ ಕಲ್ಲೋಲವಾಗಬಹುದು. ಈ ಮಾತನ್ನು ಉಡಾಫೆ ಮಾಡಿದರೆ ಅನುಭವಕ್ಕೆ ಬಂದ ಮೇಲೆ ಹೇಳಿಕೊಳ್ಳಿ ಗುರುಫಲ ಹೇಗಿತ್ತು ಎಂದು. ಉಳಿದವರಾದರೂ ಬುದ್ಧಿ ಕಲಿಯುತ್ತಾರೆ. [ತುಲಾ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

ಹೆಚ್ಚಿನ ತೊಂದರೆಗಳು ಬರುವುದರಿಂದ ಎಲ್ಲ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡಬೇಕು. ಹೆಚ್ಚಿನ ಶ್ರಮ ಹಾಕಬೇಕು. ಹಣದ ವಿಷಯದಲ್ಲಿ ತೊಂದರೆಗಳ ಮೇಲೆ ತೊಂದರೆ ಬರುವುದರಿಂದ ಇಷ್ಟದ ದೇವರನ್ನು ಸ್ಮರಿಸಬೇಕು. ನೀವು ನೋಡಿರಬಹುದು ಕೆಲವೊಂದು ಜಾತ್ರೆಗಳ ಬಗ್ಗೆ ಯಾವುದೇ ಪತ್ರಿಕೆಗಳಲ್ಲಿ ಸುದ್ದಿ ಬರುವುದಿಲ್ಲ. ಆದರೂ ಕೆಲವೊಂದು ಸ್ಥಳಗಳಲ್ಲಿ ಲಕ್ಷಗಟ್ಟಲೇ ಜನ ಸೇರುತ್ತಾರೆ. ಯಾಕೆ ಎಂದು ಒಮ್ಮೆ ಯೋಚಿಸಿ. ಅದನ್ನೇ ದೈವಭಕ್ತಿ ಎನ್ನುವುದು.

ಈಗ ತುಲಾ ರಾಶಿಯವರು ದೈವಭಕ್ತಿ ಬೆಳೆಸಿಕೊಳ್ಳುವ ಸಮಯ. ಬೆಳೆಸಿಕೊಂಡರೆ ಜೀವನ ಪಾವನ. ದೇಹಾರೋಗ್ಯದ ಬಗ್ಗೆ ತೊಂದರೆಗಳು ಉಲ್ಬಣಿಸುವುದರಿಂದ ಮೊದಲು ವ್ಯಾಯಾಮ ಮಾಡಿಕೊಳ್ಳುವುದನ್ನು ಆರಂಭಿಸಬೇಕು. ಮಧುಮೇಹ ಮತ್ತು ಬಿಪಿ ಬರಲು ಹಾತೊರೆಯುತ್ತಿರುತ್ತದೆ. ಹೀಗಾಗಿ ನಿತ್ಯದ ವ್ಯಾಯಾಮದಿಂದ ರೋಗಗಳು ದೇಹದಲ್ಲಿ ಮನೆ ಮಾಡದಂತೆ ಜಾಗೃತೆ ವಹಿಸಿಕೊಳ್ಳಬೇಕು.

ಗುರು ಸಂಚಾರವಿದ್ದಾಗಲೇ ಮಧುಮೇಹ ಬರುವ ಸಾಧ್ಯತೆಗಳು ಹೆಚ್ಚು. ಹೀಗಾಗಿ 35 ವರ್ಷ ಮೇಲ್ಪಟ್ಟವರು ಗುರು ಸಂಚಾರ ಮುಗಿಯುವವರೆಗೂ ತಿಂಗಳಿಗೊಮ್ಮೆ ರಕ್ತದಲ್ಲಿನ ಗ್ಲುಕೋಸ್ ಪರೀಕ್ಷೆ ಮಾಡಿಕೊಳ್ಳಬೇಕು. ಸಿಹಿ ತಿನಿಸುಗಳನ್ನು ಅತೀ ಕಡಿಮೆ ಮಾಡಬೇಕು. ಸಕ್ಕರೆ ಸಹವಾಸ ಕೂಡ ಕಡಿಮೆ ಮಾಡಬೇಕು. ಮಾನಸಿಕ ಸ್ಥಿರತೆಯೂ ಕೊಂಚ ಕಾಡುವುದರಿಂದ ಧ್ಯಾನ ಮತ್ತು ಯೋಗದಲ್ಲಿ ನಿತ್ಯ ಒಂದು ಗಂಟೆಯನ್ನು ಕಳೆಯಬೇಕು. [ತುಲಾ ರಾಶಿ ವರ್ಷ ಭವಿಷ್ಯ ಮತ್ತು ಪರಿಹಾರೋಪಾಯ]

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು. (ಲೇಖಕರ ಮೊಬೈಲ್ : 94815 22011)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gurubala for Libra zodiac signs based on transit of Jupiter plant from Leo to Virgo in 2016. Planet Jupiter has entered Virgo on August 11, 2016. Our astrologer explains how it affects and helps Libra people. Exercise regularly to keep the diseases away, save money for a better future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more