• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕರ ರಾಶಿಗೆ ಶನಿಬಲ, ಗುರುಬಲ ಎರಡೂ ಕೂಡಿಬಂದಿವೆ

By ನಾಗನೂರಮಠ ಎಸ್ಎಸ್
|

ಇಷ್ಟು ದಿನ ಅಷ್ಟಮ ಗುರುವಿನಿಂದ ಸಾಕಷ್ಟು ನಷ್ಟ, ಹಾನಿ, ನೋವು ಅನುಭವಿಸಿದ್ದ ಮಕರ ರಾಶಿಯವರಿಗೆ ಇನ್ನೊಂದು ವರ್ಷ ಹಿಡಿದವರಿಲ್ಲ ಎನ್ನಬಹುದು. ಕಾರಣ ಈಗಾಗಲೇ ಶನಿಬಲದಿಂದ ಲೈಫ್ ಸೆಟ್ಲ್ ಮಾಡಿಕೊಂಡಿರುವ ಮಕರ ರಾಶಿಯವರು ಈಗ ಗುರುವಿನ ಶುಭಫಲವನ್ನೂ ಅನುಭವಿಸುತ್ತಾರೆ.

ಸಾಕಷ್ಟು ಪ್ರಮಾಣದಲ್ಲಿ ಹಣಕಾಸಿನ ಅನುಕೂಲ ಮಾಡಿಕೊಡುವ ಗುರು ಒಂಬತ್ತನೇ ಸ್ಥಾನಕ್ಕೆ ಯಾವ ರಾಶಿಗೂ ಬಂದರೂ ಕೊಡುವುದು ಶುಭಫಲವನ್ನೇ. ಹೀಗಾಗಿ ಎಷ್ಟೋ ಜನ ನಮಗ್ಯಾವಾಗ ಗುರುಬಲ ಬರುತ್ತೋ ಎಂದು ಕಾಯ್ದು ಕುಳಿತಿರುತ್ತಾರೆ. ಈಗ ಮಕರ ರಾಶಿಯವರಿಗೆ ಗುರುಬಲ ಬಂದಿದೆ. ಅದು ಮುಂದಿನ ವರ್ಷದ ಸೆಪ್ಟೆಂಬರ್ ವರೆಗೂ ಇರುತ್ತೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಈ ಸಮಯದಲ್ಲಿ ಕೆಲಸದಲ್ಲಿ ಭಾರಿ ಪ್ರಮಾಣ ಲಾಭವನ್ನು ನಿರೀಕ್ಷಿಸಬಹುದು. ವ್ಯವಹಾರಸ್ಥರೂ ಕೂಡ ಲಾಭವನ್ನು ನೆಚ್ಚಿಕೊಳ್ಳಬಹುದು. ರಾಜಕಾರಣಿಗಳಾಗಿದ್ದರೆ ಈಗ ಹೆಸರುವಾಸಿಯಾಗುವಂತಾಗುತ್ತದೆ ಒಳ್ಳೆಯ ರೀತಿಯಿಂದ. ಹೀಗಾಗಿ ಹೆಚ್ಚಿನ ಜನಸೇವೆ ಮಾಡದವರು ಈಗ 'ಜನಸೇವೆಯೇ ನನ್ನ ಜೀವಾಳ' ಎನ್ನುವಂತಿರಲು ಆರಂಭಿಸಬೇಕು. [ಮಕರ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ]

ಏಕೆಂದರೆ ಗುರುವು ಒಮ್ಮಿಂದೊಮ್ಮೆಲೆ ಒಳ್ಳೆಯದನ್ನು ಮಾಡುವುದಿಲ್ಲ. ನಾವು ಯಾರಿಗ್ಯಾದರೂ ಒಳ್ಳೆಯದು ಮಾಡಿದ್ದರೆ ಮಾತ್ರ ನಮಗೆ ಒಳ್ಳೆಯದನ್ನು ಮಾಡುತ್ತಾನೆ ನೆನಪಿರಲಿ. ಇಷ್ಟು ದಿನಗಳವರೆಗೆ ಅನ್ಯಾಯದ ಕೆಲಸ ಮಾಡುತ್ತ ಬಂದು, ಒಮ್ಮೆಲೆ ಗುರುಬಲ ಬಂದಿದೆ ಎಂದಿದೆ ಎಂದು ಖುಷಿ ಪಡುವುದು ತಪ್ಪು. ತಪ್ಪು ಮಾಡಿದವರನ್ನು ಗುರುವು ತಿರುಗಿಯೂ ನೋಡಲ್ಲ. ಗುರುಫಲ ಏನಿದ್ದರೂ ಒಳ್ಳೆಯ ಗುಣ ಮತ್ತು ನಡತೆ ಇದ್ದವರಿಗೆ ಮಾತ್ರ ಎಂಬುದು ಮತ್ತೊಮ್ಮೆ ತಿಳಿದುಕೊಳ್ಳಬೇಕು ಗುರುಬಲ ಬಂದವರು. [ಸಾಡೇಸಾತಿ ಶನಿಕಾಟದೊಂದಿಗೆ ಇನ್ನು ಗುರುಕಾಟ ಧನುಸ್ಸು ರಾಶಿಗೆ]

ತಪ್ಪುಒಪ್ಪುಗಳ ಲೆಕ್ಕ ಇಡಲು ಇದು ಸುಸಮಯ

ತಪ್ಪುಒಪ್ಪುಗಳ ಲೆಕ್ಕ ಇಡಲು ಇದು ಸುಸಮಯ

ನೀವು ಹೇಳುವುದು ಎಲ್ಲ ಸುಳ್ಳು ಎಂದು ಬೊಗಳುವವರು ಒಮ್ಮೆ ತಮ್ಮ ಜೀವನದ ಹಿಂದಿನ ದಿನಗಳನ್ನು ಮೆಲಕು ಹಾಕಲಿ. ಆಗ ಗೊತ್ತಾಗುತ್ತದೆ ತಪ್ಪೆಷ್ಟು ಮಾಡಿದ್ದೇನೆ, ಒಪ್ಪು ಎಷ್ಟು ಮಾಡಿದ್ದೇನೆ ಎಂದು. ಆಗ ಜ್ಯೋತಿಷ್ಯ ಸುಳ್ಳು ಎನ್ನುವವರಿಗೆ ಅರಿವಾಗುತ್ತದೆ.

ಇಂಥವರಿಗೇಕೆ ಜ್ಯೋತಿಷ್ಯ ಮತ್ತು ಭವಿಷ್ಯ?

ಇಂಥವರಿಗೇಕೆ ಜ್ಯೋತಿಷ್ಯ ಮತ್ತು ಭವಿಷ್ಯ?

ಜ್ಯೋತಿಷ್ಯ ನಿಜವಾಗುವುದು ಕೇವಲ ಆಸ್ತಿಕರಿಗೆ, ದಾನ, ಧರ್ಮಾದಿಗಳನ್ನು ಮಾಡುವವರಿಗೆ, ಒಳ್ಳೆಯದ ಸದ್ಗುಣಗಳನ್ನು ಹೊಂದಿರುವವರಿಗೆ ಮಾತ್ರ ಎಂಬುದು ನೆನಪಿರಲಿ. ಸುಖಾಸುಮ್ಮನೇ ನೂರೆಂಟು ಅಡ್ನಾಡಿ ಕೆಲಸ ಮಾಡುತ್ತ ಜೀವನ ಸಾಗಿಸುವವರಿಗೆ ಭವಿಷ್ಯವೇ ಇರುವುದಿಲ್ಲ. ಇಂಥವರಿಗೇಕೆ ಜ್ಯೋತಿಷ್ಯ ಮತ್ತು ಭವಿಷ್ಯ?

ಒಳ್ಳೆಯ ಯೋಜನೆ ಕಾರ್ಯರೂಪಕ್ಕೆ ತನ್ನಿ

ಒಳ್ಳೆಯ ಯೋಜನೆ ಕಾರ್ಯರೂಪಕ್ಕೆ ತನ್ನಿ

ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಶ್ರೀಮಂತನಿರಲಿ ಅವನು ನಡೆದು ಬಂದ ದಾರಿ ನೋಡಬೇಕಾಗುತ್ತದೆ. ಮಕರ ರಾಶಿಯವರು ಈಗ ಶನಿಬಲ ಬೇರೆ ಹೊಂದಿದ್ದಾರೆ. ಮುಟ್ಟಿದ್ದೆಲ್ಲ ಚಿನ್ನವಾಗಿದೆ ಕೆಲವರಿಗೆ, ಇನ್ನೂ ಆಗಿಲ್ಲ ಎನ್ನುವವರಿಗೆ ಈಗ ಗುರುಬಲ ಬೇರೆ ಬಂದಿದೆ. ಈಗ ಆಸೆ, ಆಕಾಂಕ್ಷೆಗಳು ಈಡೇರುತ್ತವೆ. ಒಳ್ಳೆಯ ಯೋಜನೆಗಳನ್ನು ಹಾಕಿಕೊಂಡು ಅವುಗಳನ್ನು ಕಾರ್ಯ ರೂಪಕ್ಕೆ ತರಬೇಕು.

ಮದುವೆಯ ಶುಭಯೋಗ ಕೂಡಿಬಂದಿದೆ

ಮದುವೆಯ ಶುಭಯೋಗ ಕೂಡಿಬಂದಿದೆ

ಮದುವೆ ಯೋಗಕ್ಕಾಗಿ ಕಾಯುವವರಿಗೆ ಈಗ ಕಟ್ಟಿಕೊಳ್ಳುವ ಕಾಲ ಬಂದಿದೆ ಎನ್ನಬಹುದು. ಸಂತಾನಾಪೇಕ್ಷಿಗಳಿಗೆ ಸಂಬಂಧಿಕರಿಗೆ ಶುಭ ಸುದ್ದಿ ಹೇಳುವ ಸಮಯ ಬರುತ್ತದೆ ಶೀಘ್ರ. ಕೆಲಸದಲ್ಲಿರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಬಡ್ತಿ, ವೇತನ ಹೆಚ್ಚಳ ಸೇರಿದಂತೆ ಸಾಕಷ್ಟು ರೀತಿಯ ಅನುಕೂಲಗಳನ್ನೂ ಪಡೆದುಕೊಳ್ಳಬಹುದು. ಸೈಟ್, ಕಾರ್ ಆಪೇಕ್ಷೆ ಪಟ್ಟವರು ಈಗ ಬುಕ್ ಮಾಡಬಹುದು.

ಸತ್ಯ ಮತ್ತು ನ್ಯಾಯದ ಹಾದಿ ಬಿಡಬೇಡಿ

ಸತ್ಯ ಮತ್ತು ನ್ಯಾಯದ ಹಾದಿ ಬಿಡಬೇಡಿ

ಮಾನಸಿಕವಾಗಿ ಯೋಚಿಸಿದ ಹಲವಾರು ಯೋಜನೆಗಳನ್ನು ಈಗ ಕೈಗೂಡುವ ಸಮಯ ಬಂದಿದೆ ಎನ್ನಬಹುದು. ಆದರೆ ಏನೇ ಮಾಡಲಿ, ಎಷ್ಟೇ ಮಾಡಲಿ ಸತ್ಯ ಮತ್ತು ನ್ಯಾಯದ ಹಾದಿಯಲ್ಲಿರಲಿ. ಜನರಿಗೆ, ಸರಕಾರಕ್ಕೆ, ಸಮಾಜಕ್ಕೆ ಮೋಸ ಮಾಡುವಂತಹ ಕೆಲಸ ಕಾರ್ಯಗಳನ್ನು ಮಾಡಲಾರಂಭಿಸಿದರೆ, ಇನ್ನಾರೇ ತಿಂಗಳಲ್ಲಿ ಶನಿ ಸಾಡೇಸಾತಿ ಶುರುವಾಗುತ್ತದೆ.

ಅನ್ಯಾಯದ ಫಲ ಅತೀ ಭೀಕರ, ಎಚ್ಚರ

ಅನ್ಯಾಯದ ಫಲ ಅತೀ ಭೀಕರ, ಎಚ್ಚರ

ಹಿಂದೆ ಮಾಡಿದ ಅನ್ಯಾಯದ ಫಲವನ್ನು ಕಂಬಿಗಳ ಹಿಂದೆ ಕುಳಿತು ಉಣ್ಣಬೇಕಾಗುತ್ತದೆ ಎಚ್ಚರವಿರಲಿ. ಇಲ್ಲಾ ಅದೆಲ್ಲಾ ಕತೆ ಬೇಡಿ ಅಂದರೆ, ಮನೆ ಮಂದಿಯನ್ನ ಅನಾಥರನ್ನಾಗಿಸಲು ಸಿದ್ಧಗೊಂಡವರಿಗೆ ಇನ್ನೇನು ಹೇಳಬೇಕು ಎನ್ನಬೇಕಾಗುತ್ತದೆ?

ಜೇಬು ಭರ್ತಿ ಮಾಡಿಕೊಳ್ಳಲು ಇದುವೇ ಸಕಾಲ

ಜೇಬು ಭರ್ತಿ ಮಾಡಿಕೊಳ್ಳಲು ಇದುವೇ ಸಕಾಲ

ಕೆಲವರು ಶೇರ್ ಬಿಜಿನೆಸ್ ಮಾಡುವವರು ಈಗ ಕೈ ಬಿಚ್ಚಿ ಜೇಬು ತುಂಬಿಕೊಳ್ಳಬೇಕು. ಆದರೂ ಜನ್ಮ ಜಾತಕವನ್ನು ಪರಿಶೀಲಿಸಿಕೊಂಡು ಯಾವ ರೀತಿಯಲ್ಲಿ ಗುರುಫಲವನ್ನು ಪಡೆದುಕೊಳ್ಳಬೇಕು ಎಂಬುದನ್ನು ಒಮ್ಮೆ ತಿಳಿದುಕೊಳ್ಳಬೇಕು. ಹಣ ಹೋಗುತ್ತದೆ ಎಂದು ಕೈ ಕಟ್ಟಿ ಕುಳಿತುಕೊಂಡರೆ ಬಂಡಿಗಟ್ಟಲೇ ಬರುವುದನ್ನು ತಪ್ಪಿಸಿಕೊಂಡು ಪರಿತಪಿಸಬೇಕಾಗುತ್ತದೆ ಮಕರ ರಾಶಿಯವರು.

ಮಕರ ರಾಶಿಯವರು ಆಸ್ತಿ ಖರೀದಿಗೆ ಮುಂದಾಗಬೇಕು

ಮಕರ ರಾಶಿಯವರು ಆಸ್ತಿ ಖರೀದಿಗೆ ಮುಂದಾಗಬೇಕು

ಆಸ್ತಿಗಳನ್ನು ಖರೀದಿಸಲು ಹೆಚ್ಚಿನ ಸಮಯ ವ್ಯರ್ಥ ಮಾಡದೇ ಅನುಕೂಲ ಬಂದ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಏಕೆಂದರೆ ಲಾಭದ ದಿನಗಳ ಇವು. ಇಂಥ ಸಮಯದಲ್ಲಿ ಎಲ್ಲಿ ಕೈ ಸುಟ್ಟುಕೊಳ್ಳುತ್ತೇವೆಯೋ ಎಂದು ಯೋಚಿಸದೇ ಮುನ್ನುಗ್ಗಬೇಕು. ಕೈತುಂಬ ಕಾಸು ಕಟ್ಟಿಟ್ಟ ಬುತ್ತಿ. ಇನ್ನು ಯಾವುದಕ್ಕೂ ಒಮ್ಮೆ ಜಾತಕ ಪರೀಕ್ಷಿಸಿಕೊಂಡು ಫಲಾಫಲಗಳನ್ನು ತಿಳಿದುಕೊಳ್ಳಿ ಬೇಕಿದ್ದರೆ, ಇಲ್ಲವಾದರೇ ಸಾಮೇರು ಹೇಳಿದ್ದೇ ಅಂತಿಮ ಎನ್ನುವುದಾದರೆ ಅದಕ್ಕೂ ಸೈ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gurubala for Capricorn zodiac signs based on transit of Jupiter plant from Leo to Virgo in 2016. Planet Jupiter has entered Virgo on August 11, 2016. Our astrologer explains how it affects and helps Capricorn people. Make hay while the sun shines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more