ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿಧ ಗ್ರಹಗಳು ರೂಪಿಸುವ ಸುನಫಾ, ಅನಫಾ ಯೋಗಗಳ ಶುಭ ಫಲಗಳಿವು

By ಪಂಡಿತ್: ಶ್ರೀ ಗಣೇಶಕುಮಾರ್
|
Google Oneindia Kannada News

ನಿಮಗೆ ಈಗಾಗಲೇ ಸುನಫಾ, ಅನಫಾ ಯೋಗಗಳ ಬಗ್ಗೆ ತಿಳಿಸಿದ್ದೀನಿ. ಆದರೂ ಇನ್ನೊಮ್ಮೆ ಆ ಬಗ್ಗೆ ನೆನಪಿಸಿ, ಯಾವ ಗ್ರಹದಿಂದ ಏರ್ಪಡುವ ಸುನಫಾ, ಅನಫಾ ಯೋಗಗಳಿಂದ ಏನು ಫಲ ಎಂಬುದನ್ನು ವಿವರವಾಗಿ ಮನವರಿಕೆ ಮಾಡಿಕೊಡುತ್ತೇನೆ.

ಜನ್ಮ ಜಾತಕದಲ್ಲಿ ಚಂದ್ರನು ಇರುವ ಮನೆಯಿಂದ ಮುಂದಿನ ಮನೆಯಲ್ಲಿ ಒಂದು ಗ್ರಹವಿದ್ದರೆ ಸುನಫಾ ಯೋಗವು ರೂಪುಗೊಳ್ಳುತ್ತದೆ, ಅದು ಆ ಜಾತಕರಿಗೆ ಸಂಪತ್ತು ಮತ್ತು ಖ್ಯಾತಿಯನ್ನು ನೀಡುತ್ತದೆ.

ಅನಫಾ- ಸುನಫಾ ಯೋಗಗಳೇನಾದರೂ ನಿಮ್ಮ ಜಾತಕದಲ್ಲಿದೆಯಾ?ಅನಫಾ- ಸುನಫಾ ಯೋಗಗಳೇನಾದರೂ ನಿಮ್ಮ ಜಾತಕದಲ್ಲಿದೆಯಾ?

ಜನ್ಮ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಗ್ರಹ ಇದ್ದಲ್ಲಿ ಅನಫಾ ಯೋಗವು ರೂಪುಗೊಳ್ಳುತ್ತದೆ. ಅನಫಾ ಯೋಗವು ಆ ಜಾತಕರಿಗೆ ಉತ್ತಮ ಆರೋಗ್ಯ, ಖ್ಯಾತಿ ಮತ್ತು ಜೀವನದಲ್ಲಿ ಆಧ್ಯಾತ್ಮಿಕ ಬೆಳವಣಿಗೆಯನ್ನು ನೀಡುತ್ತದೆ.

Good Effects Of Sunapha And Anapha Yogas In Astrology

ರವಿ ಗ್ರಹವನ್ನು ಹೊರತುಪಡಿಸಿದಂತೆ ಉಳಿದ ಗ್ರಹಗಳಿಗೆ ಶುಭ ಫಲವನ್ನು ಹೇಳಲಾಗಿದೆ. ಒಂದು ವೇಳೆ ರವಿ ಇದ್ದರೂ ಜತೆಗೆ ಬೇರೆ ಗ್ರಹವೂ ಇರಬೇಕು. ಮೊದಲಿಗೆ ಸುನಫಾ ಯೋಗ, ಅಂದರೆ ಚಂದ್ರನಿರುವ ಮನೆಯಿಂದ ಮುಂದಿನ ಮನೆಯಲ್ಲಿ ಯಾವ ಗ್ರಹವು ಏನು ಫಲ ನೀಡುತ್ತದೆ ಎಂಬುದನ್ನು ನೋಡೋಣ.

ಮಂಗಳ- ಸುನಫಾ ಯೋಗ: ವ್ಯಕ್ತಿಯ ಜಾತಕದಲ್ಲಿ ಚಂದ್ರನ ಮುಂದಿನ ಮನೆಯಲ್ಲಿ ಮಂಗಳ ಇದ್ದಲ್ಲಿ, ಮಂಗಳ ಸುನಫಾ ಯೋಗವು ರೂಪುಗೊಳ್ಳುತ್ತದೆ. ಇದು ವ್ಯಕ್ತಿಯನ್ನು ಧೈರ್ಯವಂತರನ್ನಾಗಿ ಮಾಡುತ್ತದೆ ಮತ್ತು ಸಂಪತ್ತಿನಿಂದ ಆಶೀರ್ವದಿಸುತ್ತದೆ. ಆ ವ್ಯಕ್ತಿಯು ಭೂಮಿ ಅಥವಾ ಆಸ್ತಿಯ ಮಾಲೀಕರಾಗಿರುತ್ತಾರೆ. ಹೇಗಾದರೂ, ಈ ವ್ಯಕ್ತಿಗಳಿಗೆ ಗಡುಸು ಧ್ವನಿ ಇರುತ್ತದೆ.

ಬುಧ- ಸುನಫಾ ಯೋಗ: ಯಾವ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಮುಂದಿನ ಮನೆಯಲ್ಲಿ ಬುಧ ಇರುತ್ತದೋ, ಇದರಿಂದ ಬುಧ ಸುನಫಾ ಯೋಗವು ರೂಪುಗೊಳ್ಳುತ್ತದೆ. ಇದು ಆ ವ್ಯಕ್ತಿಯನ್ನು ಪವಿತ್ರ ಗ್ರಂಥಗಳು, ಸಂಗೀತ ಮತ್ತು ಕಲೆಯಲ್ಲಿ ಪ್ರವೀಣರನ್ನಾಗಿ ಮಾಡುತ್ತದೆ. ಇವರು ಕಾವ್ಯದ ಬಗ್ಗೆ ಒಲವು ಹೊಂದಿರುತ್ತಾರೆ ಮತ್ತು ಸುಂದರವಾದ ದೇಹ ಹಾಗೂ ಉದಾತ್ತವಾದ ಸ್ವಭಾವ ಉಳ್ಳವರಾಗಿರುತ್ತಾರೆ. ಆ ವ್ಯಕ್ತಿಯು ಒಳ್ಳೆಯ ಕಾರ್ಯಗಳಿಗಾಗಿ ಎಲ್ಲರಿಂದಲೂ ಪ್ರೀತಿಸಲ್ಪಡುತ್ತಾರೆ.

ಗುರು - ಸುನಫಾ ಯೋಗ: ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಮುಂದಿನ ಮನೆಯಲ್ಲಿ ಗುರು ಗ್ರಹ ಇದ್ದಲ್ಲಿ ಗುರು ಸುನಫಾ ಯೋಗವು ರೂಪುಗೊಳ್ಳುತ್ತದೆ. ಇದು ಆ ವ್ಯಕ್ತಿಯನ್ನು ಶೈಕ್ಷಣಿಕ ಕ್ಷೇತ್ರಗಳಲ್ಲಿ ಪ್ರವೀಣರನ್ನಾಗಿ ಮಾಡುತ್ತದೆ ಮತ್ತು ಸಮಾಜದಲ್ಲಿ ಗೌರವ ದೊರೆಯುವಂತೆ ಮಾಡುತ್ತದೆ. ಆ ವ್ಯಕ್ತಿಯು ಶ್ರೀಮಂತರಾಗಿದ್ದು, ಆಧ್ಯಾತ್ಮಿಕ ಒಲವು ಕೂಡ ಹೊಂದಿರುತ್ತಾರೆ.

ಶುಕ್ರ- ಸುನಫಾ ಯೋಗ: ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಮುಂದಿನ ಮನೆಯಲ್ಲಿ ಶುಕ್ರ ಇದ್ದಲ್ಲಿ ಶುಕ್ರ ಸುನಫಾ ಯೋಗವು ರೂಪುಗೊಳ್ಳುತ್ತದೆ. ಇದು ಭೂಮಿ ಅಥವಾ ಆಸ್ತಿಯ ಮಾಲೀಕರನ್ನಾಗಿ ಮಾಡುತ್ತದೆ, ಧೈರ್ಯಶಾಲಿ ಆಗಿರುತ್ತಾರೆ ಮತ್ತು ಅಧಿಕಾರಿಗಳಿಂದ ಗುರುತಿಸಲ್ಪಡುತ್ತಾರೆ. ಆ ವ್ಯಕ್ತಿಯು ಬುದ್ಧಿವಂತರು ಎನಿಸಿಕೊಳ್ಳಲಿದ್ದು, ಮನೆ ಮತ್ತು ವಾಹನದ ಸೌಕರ್ಯಗಳು, ಅನುಕೂಲಗಳನ್ನು ಆನಂದಿಸುತ್ತಾರೆ.

ಶನಿ - ಸುನಫಾ ಯೋಗ: ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಮುಂದಿನ ಮನೆಯಲ್ಲಿ ಶನಿ ಇದ್ದಲ್ಲಿ ಶನಿ ಸುನಫಾ ಯೋಗವು ರೂಪುಗೊಳ್ಳುತ್ತದೆ. ಆ ವ್ಯಕ್ತಿಯು ನ್ಯಾಯಪರವಾಗಿ ನಡೆದುಕೊಳ್ಳುತ್ತಾರೆ, ಕಠಿಣ ಪರಿಶ್ರಮಿಗಳಾಗಿರುತ್ತಾರೆ ಮತ್ತು ಅದೃಷ್ಟಶಾಲಿಯಾಗುತ್ತಾರೆ.

ವಿವಿಧ ಗ್ರಹಗಳ ಅನಫಾ ಯೋಗಗಳು
ಮಂಗಳ- ಅನಫಾ ಯೋಗ: ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಮಂಗಳ ಇದ್ದಲ್ಲಿ ಮಂಗಳ ಅನಫಾ ಯೋಗವು ರೂಪುಗೊಳ್ಳುತ್ತದೆ. ಇದು ಒಬ್ಬ ವ್ಯಕ್ತಿಯನ್ನು ಗುಂಪಿನ ನಾಯಕರಾಗಿ ಮಾಡುತ್ತದೆ. ಅವರಲ್ಲಿ ದಿಟ್ಟ ವ್ಯಕ್ತಿತ್ವ ಇರುತ್ತದೆ. ಸದಾ ಆತ್ಮವಿಶ್ವಾಸದಿಂದಿರುತ್ತಾರೆ ಮತ್ತು ಯಾವಾಗಲೂ ಸವಾಲುಗಳನ್ನು ಎದುರಿಸುತ್ತಾರೆ.

ಬುಧ- ಅನಫಾ ಯೋಗ:ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಬುಧ ಇದ್ದಲ್ಲಿ ಬುದ್ಧ ಅನಫಾ ಯೋಗವು ರೂಪುಗೊಳ್ಳುತ್ತದೆ. ಇವರು ಸುಂದರವಾಗಿರುತ್ತಾರೆ, ಕವನ, ಬರವಣಿಗೆ ಮತ್ತು ಸಂಗೀತದಲ್ಲಿ ಪ್ರವೀಣರಾಗುತ್ತಾರೆ. ಅಷ್ಟೇ ಅಲ್ಲ, ಉತ್ತಮ ವಾಗ್ಮಿಗಳಾಗಿದ್ದ, ಖ್ಯಾತಿಯನ್ನು ಪಡೆಯುತ್ತಾರೆ.

ಗುರು- ಅನಫಾ ಯೋಗ: ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಗುರು ಇದ್ದಲ್ಲಿ, ಗುರು ಅನಫಾ ಯೋಗವು ರೂಪುಗೊಳ್ಳುತ್ತದೆ. ಈ ವ್ಯಕ್ತಿಗಳು ಬುದ್ಧಿವಂತರಾಗಿರುತ್ತಾರೆ. ಯಾವ ಕೆಲಸವನ್ನಾದರೂ ಗಮನಕೇಂದ್ರೀಕರಿಸಿ ಮಾಡುತ್ತಾರೆ. ಇವರಿಗೆ ತೀಕ್ಷ್ಣ ವಿಚಕ್ಷಣಾ ಬುದ್ಧಿ ಇರುತ್ತದೆ. ಮೇಲಧಿಕಾರಿಗಳು ಮತ್ತು ಸಂಸ್ಥೆಗಳಿಂದ ಬಹುಮಾನ ಪಡೆಯುತ್ತಾರೆ.

ಶುಕ್ರ - ಅನಫಾ ಯೋಗ: ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಶುಕ್ರ ಇದ್ದಲ್ಲಿ, ಶುಕ್ರ ಅನಫಾ ಯೋಗವು ರೂಪುಗೊಳ್ಳುತ್ತದೆ. ಈ ವ್ಯಕ್ತಿಗಳು ಪುರುಷರಾಗಿದ್ದಲ್ಲಿ ಸ್ತ್ರೀಯರ ಮಧ್ಯೆ ಹಾಗೂ ಸ್ತ್ರೀಯರಾಗಿದ್ದಲ್ಲಿ ಪುರುಷರ ಮಧ್ಯೆ ಜನಪ್ರಿಯರಾಗುತ್ತಾರೆ. ಇವರ ಬಗ್ಗೆ ಅಧಿಕಾರಿಗಳು ವಿಶ್ವಾಸ ಹೊಂದಿರುತ್ತಾರೆ ಮತ್ತು ಇವರ ಬಳಿ ಐಷಾರಾಮಿ ವಾಹನಗಳಿರುತ್ತವೆ.

ಶನಿ- ಅನಫಾ ಯೋಗ: ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಹಿಂದಿನ ಮನೆಯಲ್ಲಿ ಶನಿಗ್ರಹ ಇದ್ದಲ್ಲಿ, ಶನಿ ಅನಫಾ ಯೋಗವು ರೂಪುಗೊಳ್ಳುತ್ತದೆ. ಈ ವ್ಯಕ್ತಿಗಳು ಅದೃಷ್ಟಶಾಲಿಗಳಾಗಿರುತ್ತಾರೆ, ಹಲವು ಕೆಲಸಗಳಲ್ಲಿ ನುರಿತವರಾಗಿರುತ್ತಾರೆ ಮತ್ತು ಜೀವನದಲ್ಲಿ ಕಷ್ಟಪಟ್ಟು ಕೆಲಸ ಮಾಡಲು ಇತರರಿಗೆ ಪ್ರೇರಣೆಯಾಗಿರುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo - ಪಂಡಿತ್: ಶ್ರೀ ಗಣೇಶಕುಮಾರ್,

ಸೂಚನೆ: ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಸ್ತ್ರೀ-ಪುರುಷ - ಆಕರ್ಷಣೆ , ದಾಂಪತ್ಯ, ಪ್ರೇಮವಿಚಾರ , ಮಾನಸಿಕ, ಗೃಹಶಾಂತಿ, ಆರೋಗ್ಯ, ಹಣಕಾಸು, ಮಾಟಭಾದೆ, ಶತ್ರುಕಾಟ, ಅಲ್ಲದೇ ರಾಜಯೋಗವಶಗಳು, ಅಖಂಡಯೋಗವಶಗಳು ಇನ್ನಿತರ ನಿಮ್ಮ ಯಾವುದೇ ಕಠಿಣ, ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಪರಿಹಾರ ಶತಸಿದ್ದ .
(ಫೋನಿನ ಮೂಲಕ ಪರಿಹಾರ) PH:-9880533337 .
ಮೈಸೂರು ಸರ್ಕಲ್ (ಸಿರಸಿ ವೃತ್ತ) ಚಾಮರಾಜಪೇಟೆ, ಬೆಂಗಳೂರು.

English summary
Here we talking about the good effects of Sunapha yoga and Anapha Yoga in astrology. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X