ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಳಿಯ ಗಂಢಾಂತರ: ವರ್ಷದ ಮೊದಲ ಭವಿಷ್ಯ ನುಡಿದ ಕೋಡಿಮಠದ ಶ್ರೀ

|
Google Oneindia Kannada News

ಸಾಮಾನ್ಯವಾಗಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಜಗತ್ತಿನ ಮುಂದಿನ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳಿಂದ ಈ ಬಾರಿ ಭವಿಷ್ಯ ಹೊರಬಿದ್ದಿರಲಿಲ್ಲ. ಆದರೆ, ಸಂಕ್ರಾಂತಿಯ ಸುಮಾರು ಒಂದು ತಿಂಗಳಿನ ನಂತರ ವರ್ಷದ ಮೊದಲ ಭವಿಷ್ಯವನ್ನು ಶ್ರೀಗಳು ನುಡಿದಿದ್ದಾರೆ.

ಬಹುತೇಕ ಕರಾರುವಾಕ್ ಭವಿಷ್ಯ ನುಡಿಯುವುದರಲ್ಲಿ ಹೆಸರುಗಳಿಸಿರುವ ಕೋಡಿಶ್ರೀಗಳ ಭವಿಷ್ಯದ ಮೇಲೆ ಆಸ್ತಿಕರಿಗೆ ಇನ್ನಿಲ್ಲದ ಆಸಕ್ತಿ. ವರ್ಷದ ಮೊದಲ ಭವಿಷ್ಯದಲ್ಲಿ ದೇಶ ಕೊರೊನಾದಿಂದ ಮುಕ್ತವಾಗಲಿದೆ ಎಂದು ಶ್ರೀಗಳು ಹೇಳಿದ್ದಾರೆ.

ಪ್ರಸಿದ್ಧ ಮೈಲಾರ ಕ್ಷೇತ್ರದ ಕಾರ್ಣಿಕೋತ್ಸವಕ್ಕೆ ಈ ಬಾರಿಯೂ ಭಕ್ತರ ನಿರ್ಬಂಧಪ್ರಸಿದ್ಧ ಮೈಲಾರ ಕ್ಷೇತ್ರದ ಕಾರ್ಣಿಕೋತ್ಸವಕ್ಕೆ ಈ ಬಾರಿಯೂ ಭಕ್ತರ ನಿರ್ಬಂಧ

ರಾಷ್ಟ್ರೀಯ ದುರಂತವೊಂದು ಸಂಭವಿಸಲಿದೆ ಎಂದು ಕೋಡಿ ಶ್ರೀಗಳು ಭವಿಷ್ಯವನ್ನು ನುಡಿದಿದ್ದರು. ಅದರಂತೇ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಹಲವು ಯೋಧರು ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿದ್ದರು. ಶ್ರೀಗಳ ಭವಿಷ್ಯವನ್ನು ಇದಕ್ಕೆ ತಾಳೆಹಾಕಲಾಗಿತ್ತು.

ಶ್ರೀಗಳು ಈಗ ನುಡಿದ ಭವಿಷ್ಯದ ಪ್ರಕಾರ, ಕೊರೊನಾದಿಂದ ಜಗತ್ತು ಮುಕ್ತವಾದರೂ, ಗಂಢಾಂತರ ತಪ್ಪದು ಎಂದು ಹೇಳಿದ್ದಾರೆ. ಅದು ಗಾಳಿಯ ಮೂಲಕ ಬರುವ ಆಪತ್ತು ಎಂದು ಶ್ರೀಗಳು ಹೇಳಿದ್ದಾರೆ. ಶ್ರೀಗಳ ಭವಿಷ್ಯದ ಪ್ರಮುಖಾಂಶವನ್ನು ಕೆಳಗೆ ಮುಂದುವರಿಸಲಾಗಿದೆ..

'ಬನಶಂಕರಿ ಜಾತ್ರೆ ತಡೆಯಲು ಹೋದ್ರಿ': ಬಿಜೆಪಿಯ ಮುಂದಿನ ಚುನಾವಣಾ ಭವಿಷ್ಯ ನುಡಿದ ದಿಗಂಬರೇಶ್ವರ ಶ್ರೀ'ಬನಶಂಕರಿ ಜಾತ್ರೆ ತಡೆಯಲು ಹೋದ್ರಿ': ಬಿಜೆಪಿಯ ಮುಂದಿನ ಚುನಾವಣಾ ಭವಿಷ್ಯ ನುಡಿದ ದಿಗಂಬರೇಶ್ವರ ಶ್ರೀ

 ಮಕರ ಸಂಕ್ರಾಂತಿಯ ಆಸುಪಾಸಿನಲ್ಲಿ ಮತ್ತೊಂದು ಬಹುದೊಡ್ಡ ಅವಘಡ

ಮಕರ ಸಂಕ್ರಾಂತಿಯ ಆಸುಪಾಸಿನಲ್ಲಿ ಮತ್ತೊಂದು ಬಹುದೊಡ್ಡ ಅವಘಡ

"ಜನವರಿ ಹದಿನಾಲ್ಕು ಮಕರ ಸಂಕ್ರಾಂತಿಯ ಆಸುಪಾಸಿನಲ್ಲಿ ಮತ್ತೊಂದು ಬಹುದೊಡ್ಡ ಅವಘಡ ಸಂಭವಿಸುವ ಲಕ್ಷಣಗಳಿವೆ. ರೋಗ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ದೇಶದಲ್ಲಿ ಸಂಶಯ, ಅಸಹನೆ, ದ್ವೇಷ ಹಾಗೂ ಕಲಹಗಳು ಹೆಚ್ಚಾಗಲಿವೆ. ಕೆಲವೇ ದಿನಗಳಲ್ಲಿ ಮಳೆ ಕೂಡ ಅಧಿಕವಾಗಿ ಸುರಿಯುವ ಲಕ್ಷಣವಿದೆ"ಎಂದು ಕೋಡಿಮಠದ ಶ್ರೀಗಳು ರಾಣೆಬೆನ್ನೂರಿನಲ್ಲಿ ಕಳೆದ ವರ್ಷದ ಡಿಸೆಂಬರ್ ಅಂತ್ಯದಲ್ಲಿ ಭವಿಷ್ಯ ನುಡಿದಿದ್ದರು. ಆದರೆ, ಸಂಕ್ರಾಂತಿಯ ಸಮಯದಲ್ಲಿ ಅಂತಹ ದೊಡ್ಡ ಗಂಢಾಂತರ ಸಂಭವಿಸಿಲ್ಲ ಎನ್ನುವುದು ನೆಮ್ಮದಿಯ ವಿಚಾರ.

 ಸಂಕಟ ಬಂದಾಗ ಜನರು ವೆಂಕಟರಮಣ ಎನ್ನುತ್ತಾರೆ

ಸಂಕಟ ಬಂದಾಗ ಜನರು ವೆಂಕಟರಮಣ ಎನ್ನುತ್ತಾರೆ

ಖಾಸಗಿ ಕಾರ್ಯಕ್ರಮದ ನಿಮಿತ್ತ ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿದ್ದ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, "ಸಂಕಟ ಬಂದಾಗ ಜನರು ವೆಂಕಟರಮಣ ಎನ್ನುತ್ತಾರೆ. ಹಿಂದೆಯೇ ಹೇಳಿದ್ದೆ, ಜನರಿಗೆ ದ್ವೇಷ, ಅಸೂಯೆ, ವ್ಯಾಮೋಹ ಹೆಚ್ಚಾಗಿರುವುದರಿಂದಲೇ ಜನರಿಗೆ ಪಾಠ ಕಲಿಸಲು ದೇವರು ತನ್ನ ಆಟವನ್ನು ತೋರಿಸುತ್ತಾನೆ. ಕೊರೊನಾ ದೇವರನ್ನು ಹಿಡಿದುಕೊಂಡು ಭೂಮಿಗೆ ಬಂತು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು" ಎಂದು ಕೋಡಿಶ್ರೀಗಳು ಹೇಳಿದ್ದಾರೆ.

 ಕೊರೊನಾ ಅಬ್ಬರ ಎಷ್ಟಿತ್ತು ಎನ್ನುವುದಕ್ಕೆ ದೇವಾಲಯಗಳು ಬಾಗಿಲು ಮುಚ್ಚಿದ್ದೇ ಸಾಕ್ಷಿ

ಕೊರೊನಾ ಅಬ್ಬರ ಎಷ್ಟಿತ್ತು ಎನ್ನುವುದಕ್ಕೆ ದೇವಾಲಯಗಳು ಬಾಗಿಲು ಮುಚ್ಚಿದ್ದೇ ಸಾಕ್ಷಿ

"ಕೊರೊನಾ ಅಬ್ಬರ ಎಷ್ಟಿತ್ತು ಎನ್ನುವುದಕ್ಕೆ ದೇವಾಲಯಗಳು ಬಾಗಿಲು ಮುಚ್ಚಿದ್ದೇ ಸಾಕ್ಷಿಯಾಗಿತ್ತು. ತಿರುಪತಿ, ಧರ್ಮಸ್ಥಳ, ಚಾಮುಂಡೇಶ್ವರಿ ಮುಂತಾದ ದೇವಾಲಯಗಳಿಗೆ ಬಾಗಿಲು ಹಾಕಲಾಯಿತು. ಮಠ, ಮಾನ್ಯಗಳ ಬಾಗಿಲು ಮುಚ್ಚಿತು, ಆದರೂ ಜನರಿಗೆ ಅರ್ಥವಾಗುತ್ತಿಲ್ಲ. ಸದ್ಯ ಕೊರೊನಾ ಮಹಾಮಾರಿಯ ಶಕ್ತಿ ಕುಂದಿದ್ದು ಎಲ್ಲವೂ ಸರಿ ಹೋಗಲಿದೆ. ಆದರೆ ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರದಿಂದ ಜನತೆ ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದೆ ನರಳುತ್ತಾರೆ"ಎನ್ನುವ ಎಚ್ಚರಿಕೆಯ ಭವಿಷ್ಯವನ್ನು ಕೋಡಿಶ್ರಿಗಳು ನುಡಿದಿದ್ದಾರೆ.

 ಅಪಾಯಕಾರಿ ನೆಲೆಯಲ್ಲಿಯೇ ಕಷ್ಟವನ್ನು ಜನರಿಗೆ ತೊಂದರೆಯನ್ನು ತಂದೊಡ್ಡುತ್ತದೆ

ಅಪಾಯಕಾರಿ ನೆಲೆಯಲ್ಲಿಯೇ ಕಷ್ಟವನ್ನು ಜನರಿಗೆ ತೊಂದರೆಯನ್ನು ತಂದೊಡ್ಡುತ್ತದೆ

"ಗಾಳಿಯ ಮೂಲಕ ಗಂಡಾಂತರ ಎದುರಾಗಲಿದೆ, ಇದು ಜನರನ್ನು ಬಾಧಿಸಲಿದೆ. ಇದು ಅತ್ಯಂತ ಅಪಾಯಕಾರಿ ನೆಲೆಯಲ್ಲಿಯೇ ಕಷ್ಟವನ್ನು ಜನರಿಗೆ ತೊಂದರೆಯನ್ನು ತಂದೊಡ್ಡುತ್ತದೆ, ಆದರೆ, ಹಾಗೆಯೇ ಇದರ ಪ್ರಭಾವ ಕಮ್ಮಿಯಾಗಲಿದೆ. ಅದು ಹೋಗುವ ಕಾಲಕ್ಕೆ ವಿಪರೀತ ಬರಗಾಲವನ್ನು ತಂದು ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದ ಸ್ಥಿತಿಯನ್ನು ತಂದೊಡ್ಡಲಿದೆ" ಎಂದು ಕೋಡಿಮಠದ ಸಂಸ್ಥಾನ ಶ್ರೀಗಳು ವರ್ಷದ ಮೊದಲ ಭವಿಷ್ಯವನ್ನು ನುಡಿದಿದ್ದಾರೆ.

Recommended Video

Karnataka hijab ban: America ನೀಡಿದ Hijab ಹೇಳಿಕೆಗೆ ತಿರುಗೇಟು ಕೊಟ್ಟ ಭಾರತ | Oneindia Kannada

English summary
First Prediction From Kodimutt Swamiji In Chikkaballapur, Probelm Through Air. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X