ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಷದಿಂದ ಮೀನ : ದ್ವಾದಶ ರಾಶಿಗಳ ಕ್ರಿಮಿನಲ್ ಜಾತಕ

ನಿಮ್ಮದು ಕರ್ಕರಾಶಿಯಾಗಿದ್ದರೆ ನಿಮಗಿಂತ ದೊಡ್ಡ ಕ್ರಿಮಿನಲ್ ಬೇರೊಬ್ಬನಿಲ್ಲ. ನಿಮ್ಮದು ತುಲಾ ರಾಶಿಯಾಗಿದ್ದರೆ, ಬೇರೆ ರಾಶಿಯವರಿಗಿಂತ ಹೆಚ್ಚು ಅಪರಾಧ ಕೃತ್ಯಗಳು ನಿಮ್ಮ ಹೆಸರಲ್ಲಿರುತ್ತವೆ. ಇನ್ನು ಮಿಥುನ ರಾಶಿಯವರಾಗಿದ್ದರೆ...

By ವಿಕಾಸ್ ನಂಜಪ್ಪ
|
Google Oneindia Kannada News

ನಿಮ್ಮ ಜನ್ಮರಾಶಿ ಯಾವುದು? ಏನು ಇಂಥ ಪ್ರಶ್ನೆ ಕೇಳುತ್ತಿದ್ದೀರೆಂದು ನಿರ್ಲಕ್ಷ್ಯ ಮಾಡಬೇಡಿ. ಸರಿಬಿಡಿ, ನಿಮ್ಮ ರಾಶಿ ಯಾವುದೆಂದು ಹೇಳಲು ಇಚ್ಛೆಯಿಲ್ಲದಿದ್ದರೆ ಬಿಡಿ. ಈ ಪ್ರಶ್ನೆಗೆ ಉತ್ತರಿಸಿ... ನೀವೆಂಥ ಕ್ರಿಮಿನಲ್?

ಈ ಪ್ರಶ್ನೆಯಿಂದ ತಬ್ಬಿಬ್ಬಾಗದೆ ಇರಲು ಸಾಧ್ಯವೇ ಇಲ್ಲ. ಇದೇನಿದು ನಮ್ಮ ರಾಶಿಗಳಿಗೂ ಕ್ರಿಮಿನಲ್ ಹಿನ್ನೆಲೆಗೂ ಇರುವಂಥ ಸಂಬಂಧ? ಎಂದು ಪ್ರಶ್ನೆ ಉದ್ಭವವಾಗೇ ಆಗುತ್ತದೆ. ಅದಕ್ಕೆ ಇನ್ನಷ್ಟು ಪ್ರಶ್ನೆಗಳೇಳುವಂತೆ ಮಾಡುವ ರೋಚಕ ಉತ್ತರಗಳೂ ಮುಂದಿವೆ ಓದಿರಿ.

ನಿಮ್ಮದು ಕರ್ಕರಾಶಿಯಾಗಿದ್ದರೆ ನಿಮಗಿಂತ ದೊಡ್ಡ ಕ್ರಿಮಿನಲ್ ಬೇರೊಬ್ಬನಿಲ್ಲ. ನಿಮ್ಮದು ತುಲಾ ರಾಶಿಯಾಗಿದ್ದರೆ, ಬೇರೆ ರಾಶಿಯವರಿಗಿಂತ ಹೆಚ್ಚು ಅಪರಾಧ ಕೃತ್ಯಗಳು ನಿಮ್ಮ ಹೆಸರಲ್ಲಿರುತ್ತವೆ. ಇನ್ನು ಮಿಥುನ ರಾಶಿಯವರು ಯಾವಾಗಲೂ ಮೋಸ ಮಾಡುತ್ತಲೇ ಇರುತ್ತಾರೆ.[2017ರ ಅಕ್ಷಯ ತೃತೀಯಾಕ್ಕೆ ಯಾವುದು ಶುಭ-ಯಾವುದು ಅಶುಭ?]

ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಮುಂದಿನದನ್ನು ಕೂಡ ಓದಿಯೇಬಿಡಿ. ಹೀಗೆ ರಾಶಿಗಳು ಮತ್ತು ಕ್ರಿಮಿನಲ್ ಹಿನ್ನೆಲೆಯನ್ನು ತಾಳೆಹಾಕಿ ತಳಕುಹಾಕಿದ್ದು ಯಾವುದೇ ಖ್ಯಾತ ಅಥವಾ ಕುಖ್ಯಾತ ಜ್ಯೋತಿಷಿಯಲ್ಲ. ಇದು ಯಾವುದೇ ಕ್ರೈಂ ಥ್ರಿಲ್ಲರ್ ಚಿತ್ರಕಥೆಯ ಎಳೆಯೂ ಅಲ್ಲ. ಇದನ್ನು ಮಾಡಿದ್ದು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್.

ಅತ್ಯಂತ ಖತರ್ನಾಕ್ ರಾಶಿ ಯಾವುದು ಎಂಬ ಪಟ್ಟಿಯನ್ನು ಎಫ್ಬಿಐ ಸಿದ್ಧ ಮಾಡಿದೆ. ರಾಶಿಗಳಿಗೂ ಅವರು ಮಾಡುವ ಅಥವಾ ಮಾಡಬಹುದಾದ ಅಪರಾಧಗಳಿಗೂ ನೇರಾನೇರ ಸಂಬಂಧವಿದೆ ಎಂಬ ಬೆಚ್ಚಿಬೀಳಿಸುವ ವರದಿಯನ್ನು ಹೊರಹಾಕಿದೆ.

ಅಪರಾಧ ಚಟುವಟಿಕೆಗಳಲ್ಲಿ ನಿರತರಾಗಿರುವ ಕ್ರಿಮಿನಲ್ ಗಳ ರಾಶಿಗಳನ್ನು ರಾಶಿರಾಶಿ ಹಾಕಿಕೊಂಡು ಅಧ್ಯಯನ ಮಾಡಿದ ನಂತರ, ಯಾವ ರಾಶಿಯವರು ಎಂಥ ಕ್ರಿಮಿನಲ್ ಗಳಾಗಿರುತ್ತಾರೆ ಎಂಬ ವರದಿ ಪ್ರಕಟವಾಗಿದೆ. ಈ ರಾಶಿಗಳನ್ನು ನಾಲ್ಕು ಭಾಗಗಳನ್ನಾಗಿ ವಿಭಾಗಿಸಲಾಗಿದೆ : ಅಗ್ನಿ, ನೀರು, ಭೂಮಿ ಮತ್ತು ಗಾಳಿ.[ದ್ವಾದಶ ರಾಶಿಗಳ ಮೇಲೆ ವಕ್ರೀ ಶನಿಯ ಪರಿಣಾಮ ಏನು?]

ತುಲಾ, ಮಿಥುನ ಮತ್ತು ಕುಂಭಕ್ಕೆ ಗಾಳಿ ಸಂಕೇತ

ತುಲಾ, ಮಿಥುನ ಮತ್ತು ಕುಂಭಕ್ಕೆ ಗಾಳಿ ಸಂಕೇತ

ತುಲಾ ರಾಶಿಯವರು ಕ್ರಿಮಿನಲ್ ಗಳಲ್ಲಿಯೇ ಕ್ರಿಮಿನಲ್ಸ್. ಗಾಳಿ ಸಂಕೇತವಿರುವ ಇತರ ರಾಶಿಗಳವರಿಗಿಂತ ಇವರು ಡೇಂಜರಸ್. ಯಾವಾಗಲೂ ಆಯುಧಗಳನ್ನು ಬಳಿಯಿಟ್ಟುಕೊಳ್ಳುವ ಇವರು ಡೆಡ್ಲಿ ಕ್ರಿಮಿನಲ್ಸ್. ಮಿಥುನ ರಾಶಿಯವರು ಮೋಸದಲ್ಲಿಯೇ ನಿರತರಾದರೆ, ಕುಂಭ ರಾಶಿಯವರು ಸೇಡು ತೀರಿಸಿಕೊಳ್ಳಲು ಅಪರಾಧಕ್ಕೆ ಇಳಿಯುತ್ತಾರೆ.

ಮಕರ, ಕನ್ಯಾ ಮತ್ತು ವೃಷಭಕ್ಕೆ ಭೂಮಿ ಸಂಕೇತ

ಮಕರ, ಕನ್ಯಾ ಮತ್ತು ವೃಷಭಕ್ಕೆ ಭೂಮಿ ಸಂಕೇತ

ಗುಟುರು ಹಾಕುತ್ತಲೇ ಇರುವ ವೃಷಭ ರಾಶಿಯವರಿಗೆ ತಾಳ್ಮೆ ತುಂಬಾ ಕಡಿಮೆ. ಇವರೊಂದಿಗೆ ವ್ಯವಹರಿಸುವವರು ಹುಷಾರಾಗಿರಬೇಕು. ಕನ್ಯಾ ರಾಶಿಯವರು ಕೈಯಲ್ಲಿ ಬಂದೂಕು ಹಿಡಿದುಕೊಂಡೇ ಅಡ್ಡಾಡುತ್ತಿರುತ್ತಾರೆ, ಇವರ ಬಗ್ಗೆಯೂ ಎಚ್ಚರದಿಂದಿರಬೇಕು. ಇನ್ನು ಮಕರ ರಾಶಿಯವರು ಕ್ರೈಂಗೆ ಸಂಬಂಧಿಸಂದತೆ ಸಕಲಕಲಾವಲ್ಲಭರು.[ಜ್ಯೋತಿಷ್ಯ: ಯಾವ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?]

ಕರ್ಕ, ವೃಶ್ಚಿಕ ಮತ್ತು ಮೀನಕ್ಕೆ ನೀರು ಸಂಕೇತ

ಕರ್ಕ, ವೃಶ್ಚಿಕ ಮತ್ತು ಮೀನಕ್ಕೆ ನೀರು ಸಂಕೇತ

ಕರ್ಕ ರಾಶಿಯವರು ಹಿಂಸಪಶುಗಳಿದ್ದಂತೆ. ಇವರು ಎಲ್ಲ ರಾಶಿಗಳಿಗಿಂತ ಡೆಡ್ಲಿಯೆಸ್ಟ್. ಹೆಚ್ಚಾಗಿ ಬಂಧಿತರಾಗುವವರೂ ಈ ರಾಶಿಯವರೇ. ಕರ್ಕಕ್ಕೆ ಹೋಲಿಸಿದರೆ ವೃಶ್ಚಿಕ ಮತ್ತು ಮೀನ ರಾಶಿಯವರು ಕಮ್ಮಿಯೇನಿಲ್ಲ. ಇವರಿಬ್ಬರು ಲಗಾಮು ಕಳಚಿಕೊಂಡ ಹೋರಿಗಳಂತೆ. ಅಪರಾಧಕ್ಕೆ ಬಿದ್ದರೆ ಇವರಿಬ್ಬರನ್ನು ನಿಯಂತ್ರಣಕ್ಕೆ ತರುವುದು ಬಲು ಕಷ್ಟ.

ಧನುಸ್ಸು, ಸಿಂಹ ಮತ್ತು ಮೇಷಕ್ಕೆ ಅಗ್ನಿ ಸಂಕೇತ

ಧನುಸ್ಸು, ಸಿಂಹ ಮತ್ತು ಮೇಷಕ್ಕೆ ಅಗ್ನಿ ಸಂಕೇತ

ಧನುಸ್ಸು ರಾಶಿಯವರು ಮೂರನೇ ಅತಿ ಕ್ರೂರ ಅಪರಾಧಿಗಳು. ಇವರಲ್ಲಿ ಕಳ್ಳರು, ದರೋಡೆಕೋರರು ಮತ್ತು ಕಲಾಕಾರರೇ ಹೆಚ್ಚು. ಇನ್ನು ಮೇಷ ರಾಶಿಯವರು ಸುಪಾರಿ ಕಿಲ್ಲರ್ಸ್. ಇತರರನ್ನು ಹತ್ಯೆ ಮಾಡಲು ಇವರನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಸಿಂಹ ರಾಶಿಯವರು ತಮ್ಮನ್ನು ಇತರರು ಗುರುತಿಸುತ್ತಿಲ್ಲವೆಂಬ ಕಾರಣಕ್ಕೆ ಅಪರಾಧಕ್ಕಿಳಿಯುತ್ತಾರೆ. ಏನ್ ಹೇಳ್ತೀರಾ?[ಜ್ಯೋತಿಷ್ಯ ಸಲಹೆ: ಭವಿಷ್ಯದಲ್ಲಿ ಕೆಡುಕಿದ್ದರೆ ಪರಿಹಾರ ತಿಳಿಸಿ...]

ಕರ್ಕ : ಪರಮ ಸ್ಯಾಡಿಸ್ಟ್ ಕಿಲ್ಲರ್ಸ್

ಕರ್ಕ : ಪರಮ ಸ್ಯಾಡಿಸ್ಟ್ ಕಿಲ್ಲರ್ಸ್

ಕರ್ಕ ರಾಶಿಯವರಿಗೆ ಕೊಲ್ಲುವುದೆಂದರೆ ಏನೋ ಆನಂದ. ಇವರು ಸಾವಿನಲ್ಲಿಯೇ ಪರಮಾನಂದ ಪಡೆಯುವ ಸ್ಯಾಡಿಸ್ಟ್ ಗಳು ಕೂಡ. ಕೊಲ್ಲುವುದು ಇವರಿಗೆ ನೀರು ಕುಡಿದಷ್ಟೇ ಸರಳ ಮತ್ತು ಕೊಂದ ನಂತರ ಹತ್ಯೆಗೀಡಾದ ವ್ಯಕ್ತಿಗಳ ಮೇಲೆ ಏನಾದರೊಂದು ಸಾಕ್ಷಿ ಬಿಟ್ಟುಹೋಗುವುದು ಇವರ ಖತರ್ನಾಕ್ ವೈಖರಿಗೊಂದು ಸಾಕ್ಷಿ.

ವೃಷಭ : ಕೊಲೆಗಡುಕರಲ್ಲಿ ಇವರೇ ಜಾಣರು

ವೃಷಭ : ಕೊಲೆಗಡುಕರಲ್ಲಿ ಇವರೇ ಜಾಣರು

ವೃಷಭ ರಾಶಿಯವರಿಗೆ ತಾಳ್ಮೆ ಸಿಕ್ಕಾಪಟ್ಟೆ ಕಮ್ಮಿ. ಅತೀ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗುವುದು ಇವರ ವಿರುದ್ಧ. ಇವರು ತಾಳ್ಮೆಗೆಡುವಂಥವರಿದ್ದರೂ ಕೊಲೆಗಡುಕರಲ್ಲಿ ಜಾಣರು. ಹಣದ ಅವ್ಯವಾಹರ ಮಾಡುವುದರಲ್ಲಿ ನಿಸ್ಸೀಮರಾಗಿರುವ ಇವರಿಗೆ ಈ ಕೃತ್ಯ ಎಸಗುವುದೆಂದರೆ ಸ್ವರ್ಗಸುಖ.

ಧನುಸ್ಸು : ಮಹಾ ನಿಪುಣ ವಂಚಕರು

ಧನುಸ್ಸು : ಮಹಾ ನಿಪುಣ ವಂಚಕರು

ಧನುಸ್ಸು ರಾಶಿಯವರು ಮಹಾ ವಂಚಕರು, ನಿಪುಣರು ಮತ್ತು ಹೆಚ್ಚಾಗಿ ಕಳ್ಳಕಾಕರು. ಅವರು ತಮ್ಮ ಕೈಚಳಕ ತೋರುವಾಗ ತಮಗೆ ಅಪಾಯವಾಗದಿದ್ದರೆ ಯಾರಿಗೆ ಏನೂ ಮಾಡುವುದಿಲ್ಲ. ಆದರೆ ಅಪಾಯ ಎದುರಾದ್ರೆ ಮಾತ್ರ ಬಿಡುವುದಿಲ್ಲ. ಆದ್ದರಿಂದ ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡುವುದು ಉತ್ತಮ.

ಮೇಷ : ಬೇಡಿಕೆ ಇರುವ ಸುಪಾರಿ ಕಿಲ್ಲರ್ಸ್

ಮೇಷ : ಬೇಡಿಕೆ ಇರುವ ಸುಪಾರಿ ಕಿಲ್ಲರ್ಸ್

ಇವರು ಅತೀಹೆಚ್ಚು ಬೇಡಿಕೆ ಇರುವ ಸುಪಾರಿ ಕಿಲ್ಲರ್ಸ್. ಹಣಕ್ಕಾಗಿ ಇವರು ಎಂಥ ಹೇಯ ಕೃತ್ಯಕ್ಕೂ ಇಳಿಯಬಲ್ಲರು. ಆದರೆ, ಉದ್ದೇಶವಿದ್ದಾಗ ಮಾತ್ರ ಇವರು ಹತ್ಯೆಗಿಳಿಯುತ್ತಾರೆ. ದುರುದ್ದೇಶಪೂರ್ವಕವಾಗಿ ಇವರು ಯಾರನ್ನೂ ಕೊಲ್ಲಲಾರರು.

ಮಕರ : ಕ್ರಿಮಿನಲ್ ಗಳಲ್ಲೇ ಜಾಣರು

ಮಕರ : ಕ್ರಿಮಿನಲ್ ಗಳಲ್ಲೇ ಜಾಣರು

ಮಕರ ರಾಶಿಯವರು ಮಾಡುವ ಕ್ರೈಂಅನ್ನು ಕೂಡ ಅತ್ಯಂತ ಶಿಸ್ತುಬದ್ದವಾಗಿ, ಜಾಣತನದಿಂದ ಮತ್ತು ಜಾಗರೂಕತೆಯಿಂದ ಮಾಡುತ್ತಾರೆ. ಆದರೆ, ಅವರು ವೃಶ್ಚಿಕ ರಾಶಿಯವರಿಗಿಂತ ಸ್ಯಾಡಿಸ್ಟ್ ಕ್ರಿಮಿನಲ್ ಗಳು. ಗೋಳು ಹೊಯ್ದುಕೊಂಡು ಹತ್ಯೆ ಮಾಡುವುದೆಂದರೆ ಇವರಿಗೆ ಅದೇನೋ ಪ್ರೀತಿ.

 ವೃಶ್ಚಿಕ : ನಿಯಂತ್ರಣಕ್ಕೇ ಸಿಕ್ಕುವುದಿಲ್ಲ

ವೃಶ್ಚಿಕ : ನಿಯಂತ್ರಣಕ್ಕೇ ಸಿಕ್ಕುವುದಿಲ್ಲ

ವೃಶ್ಚಿಕ ರಾಶಿಯವರು ಮೊದಲೇ ಹೇಳಿದಂತೆ ಸ್ಯಾಡಿಸ್ಟ್ ಕ್ರಿಮಿನಲ್ ಗಳು. ಸಾವಿನಲ್ಲಿಯೂ ವಿಕೃತ ಆನಂದ ಪಡೆಯುವ ಭೂಪರು. ಇವರು ಅಪರಾಧ ಎಸಗುವಾಗ ನಿಯಂತ್ರಣಕ್ಕೇ ಸಿಕ್ಕುವುದಿಲ್ಲ. ಹಿಂಸ್ರಪಶುಗಳಂತೆ ದಾಳಿ ಮಾಡಿ ಕೊಲ್ಲುವುದೆಂದರೆ ಇವರಿಗೆ ಬೇಸಿಗೆಯಲ್ಲಿ ಮಜ್ಜಿಗೆ ಕುಡಿದಷ್ಟೇ ತೃಪ್ತಿ.

ಕನ್ಯಾ : ಮಹಾ ಹುಂಬ ಕಳ್ಳಕಾಕರು

ಕನ್ಯಾ : ಮಹಾ ಹುಂಬ ಕಳ್ಳಕಾಕರು

ಕನ್ಯಾ ರಾಶಿಯವರು ಜಾಣತನದಿಂದ ಕಳ್ಳತನ ಮಾಡುವುದರಲ್ಲಿ ಅಗ್ರಗಣ್ಯರು ಮತ್ತು ಹುಂಬರು. ಕಳ್ಳತನ ಮಾಡುವಾಗ ಭಾರೀ ಆಯುಧಗಳನ್ನು ಬಳಸುವ ಇವರ ಎದುರಿಗೆ ಯಾರೇ ನಿಂತರೂ ಅವರು ಮಟಾಷ್. ಸೋ, ಇವರ ಬಗ್ಗೆ ಎಚ್ಚರದಿಂದಿರುವುದು ಉತ್ತಮ.

ತುಲಾ : ಹುಟ್ಟಾ ಕ್ರಿಮಿನಲ್ ಗಳು

ತುಲಾ : ಹುಟ್ಟಾ ಕ್ರಿಮಿನಲ್ ಗಳು

ತುಲಾ ರಾಶಿಯವರು ಹುಟ್ಟಾ ಕ್ರಿಮಿನಲ್ ಗಳು ಇದ್ದಂತೆ. ಇವರು ಭ್ರಷ್ಟರಲ್ಲಿ ಭ್ರಷ್ಟರು. ಹಣಕ್ಕಾಗಿ ಎಂಥ ಕೆಲಸಕ್ಕೂ ಕೈಹಾಕಲು ಹೇಸುವುದಿಲ್ಲ. ಇತರ ರಾಶಿಗಳವರಿಗಿಂತ ಇವರು ಡೇಂಜರಸ್. ಯಾವಾಗಲೂ ಆಯುಧಗಳನ್ನು ಬಳಿಯಿಟ್ಟುಕೊಳ್ಳುವ ಇವರು ಡೆಡ್ಲಿ ಕ್ರಿಮಿನಲ್ಸ್.

ಮಿಥುನ : ಹರ್ಷದ್ ಮೆಹ್ತಾ ಇದ್ದಂತೆ

ಮಿಥುನ : ಹರ್ಷದ್ ಮೆಹ್ತಾ ಇದ್ದಂತೆ

ಹಣಕಾಸಿಗೆ ಸಂಬಂಧಿಸಿದಂತೆ ಅಪರಾಧ ಎಸಗುವುದರಲ್ಲಿ ಇವರು ಹರ್ಷದ್ ಮೆಹ್ತಾ ಇದ್ದಂತೆ. ಆದರೆ, ಇವರು ಯಾವುದನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅತ್ಯಂತ ಚಾಕಚಕ್ಯತೆಯಿಂದ ಹಣ ಲಪಟಾಯಿಸುವುದರಲ್ಲಿ ಇವರು ನಿಸ್ಸೀಮರು. ಇವರನ್ನು ಕಳ್ಳರಲ್ಲಿಯೇ ಕಲಾಚತುರರು ಎಂದು ಹೇಳಬಹುದು.

ಸಿಂಹ : ಗುರುತಿಸಿಕೊಳ್ಳಲೆಂದು ಅಪರಾಧಿಗಳಾಗುತ್ತಾರೆ

ಸಿಂಹ : ಗುರುತಿಸಿಕೊಳ್ಳಲೆಂದು ಅಪರಾಧಿಗಳಾಗುತ್ತಾರೆ

ಕ್ರಿಮಿನಲ್ ಗಳಂದ್ರೆ ಇವರಪ್ಪ! ತಮ್ಮನ್ನು ಯಾರೂ ಯಾವ ಕಾರಣಕ್ಕೂ ಗುರುತಿಸುತ್ತಿಲ್ಲ ಎಂದು ಇವರು ಕ್ರಿಮಿನಲ್ ಗಳೊಂದಿಗೆ ಗುರುತಿಸಿಕೊಳ್ಳುವುದಕ್ಕೂ ಹೇಸುವುದಿಲ್ಲ. ಒಟ್ಟಿನಲ್ಲಿ ಸುದ್ದಿಯಲ್ಲಿರಬೇಕು. ಇವರು ಇತರರೊಂದಿಗೆ ಗುರುತಿಸಿಕೊಂಡರೂ ಸಣ್ಣಪುಟ್ಟ ಕ್ರೈಂ ಮಾಡುವಂಥವರೇ ಅಲ್ಲ. ಇವರದೇನಿದ್ದರೂ ಏಕ್ ಮಾರ್ ದೋ ತುಕ್ಡಾ!

ಕುಂಭ : ಸೇಡು ತೀರಿಸಿಕೊಳ್ಳಲು ಅಪರಾಧ

ಕುಂಭ : ಸೇಡು ತೀರಿಸಿಕೊಳ್ಳಲು ಅಪರಾಧ

ಕುಂಭ ರಾಶಿಯವರು ದ್ವೇಷ ಸಾಧಿಸುವುದರಲ್ಲಿ ಮತ್ತು ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ಅಪರಾಧಕ್ಕೆ ಇಳಿಯುತ್ತಾರೆ. ಇವರೊಂಥರಾ ಮೆಂಟಲ್ ಗಳಿದ್ದ ಹಾಗೆ. ಇತರ ಕ್ರಿಮಿನಲ್ ಗಳು ತಮಗಿಂತ ಮೇಲೇಳದಂತೆ ಎಚ್ಚರವಹಿಸಿ, ಅವರಿಗಿಂತ ಭಾರೀ ಕ್ರೈಂ ಮಾಡಲು ತುದಿಗಾಲ ಮೇಲೆ ನಿಂತಿರುತ್ತಾರೆ.

ಮೀನ : ಮಾದಕದ್ರವ್ಯಕ್ಕಾಗಿ ಅಪರಾಧ

ಮೀನ : ಮಾದಕದ್ರವ್ಯಕ್ಕಾಗಿ ಅಪರಾಧ

ಇವರು ಸುಮ್ಮನೇ ಇರುತ್ತಾರೆ. ಆದರೆ, ಪ್ರಸಂಗ ಬಂದರೆ ಎಂಥ ಅಪರಾಧ ಎಸಗಲೂ ಹಿಂಜರಿಯುವುದಿಲ್ಲ. ಬಲಿಷ್ಠರಾದ ಇವರು ನಿಯಂತ್ರಣಕ್ಕೇ ಬರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇವರಿಗೆ ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಅಪರಾಧ ಎಸಗುವುದು ಬಲುಪ್ರೀತಿ.

English summary
If your zodiac signs is Cancer then you may be one of the most dangerous criminals. Libras have the most criminal record when compared to other signs and Geminis often get involved in crimes of fraud. Yes you heard it right. This is not some fictitious piece, but what the FBI states. The FBI has put out a list of most dangerous zodiac signs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X