ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಕಾಯಿದೆ ವಿರುದ್ದ ರೈತರ ಪ್ರತಿಭಟನೆ ಅಂತ್ಯ ಯಾವಾಗ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಕ್ಕ ಉತ್ತರ!

|
Google Oneindia Kannada News

ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ದೇಶದ ಹೆಮ್ಮೆಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹೊರತಾಗಿ ಮತ್ತೆರಡು ಧ್ವಜವೂ ಗಣರಾಜ್ಯೋತ್ಸವದ ದಿನದಂದು ಹಾರಿತು. ರಾಜಧಾನಿಯಲ್ಲಿ ಕಿಶಾನ್ ಟ್ರ್ಯಾಕ್ಟರ್ ಪ್ರತಿಭಟನೆಯ ಕಾವು ಅಷ್ಟರ ಮಟ್ಟಿಗೆ ಇತ್ತು.

ದೆಹಲಿಯಲ್ಲಿ ಹಿಂಸಾಚಾರ ನಡೆಸುತ್ತಿರುವವರು ರೈತರು ಅಲ್ಲ ಎಂದು ವಿವಿಧ ಕಿಶಾನ್ ಯೂನಿಯನ್ ಗಳು ಈಗಾಗಲೇ ಹೇಳಿಕೆ ನೀಡಿ, ಕೈತೊಳೆದು ಕೊಂಡು ಬಿಟ್ಟಿವೆ. ಹಾಗಾದರೆ, ದೊಂಬಿ ನಡೆಸಿದವರಾರು ಎನ್ನುವ ಪ್ರಶ್ನೆಗೆ ಖಚಿತ ಉತ್ತರ ಸದ್ಯಕ್ಕಿಲ್ಲ.

ಕುಂತವರು ಕುಂತಲ್ಲೇ, ನಿಂತವರು ನಿಂತಲ್ಲೇ ಮರಣ: 2021ರ ಸಾರುವಯ್ಯ ನುಡಿದ ಕಾಲಜ್ಞಾನ ಭವಿಷ್ಯಕುಂತವರು ಕುಂತಲ್ಲೇ, ನಿಂತವರು ನಿಂತಲ್ಲೇ ಮರಣ: 2021ರ ಸಾರುವಯ್ಯ ನುಡಿದ ಕಾಲಜ್ಞಾನ ಭವಿಷ್ಯ

ತಮ್ಮ ಬಹುತೇಕ ಕರಾರುವಕ್ಕಾದ ಭವಿಷ್ಯದ ಮೂಲಕ ಉತ್ತರ ಭಾರತದಲ್ಲಿ ಜನಪ್ರಿಯ ಜ್ಯೋತಿಷಿಯಾಗಿರುವ ಆಚಾರ್ಯ ಸಲೀಲ್ ಕುಮಾರ್, ರೈತರ ಪ್ರತಿಭಟನೆ ಯಾವತ್ತು ಮುಕ್ತಾಯಗೊಳ್ಳಬಹುದು ಎನ್ನುವುದರ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.

ಗವಿಗಂಗಾಧರೇಶ್ವರನನ್ನು ಸ್ಪರ್ಶಿಸದ ಸೂರ್ಯರಶ್ಮಿ: ಯುದ್ದದ ಸೂಚಕಗವಿಗಂಗಾಧರೇಶ್ವರನನ್ನು ಸ್ಪರ್ಶಿಸದ ಸೂರ್ಯರಶ್ಮಿ: ಯುದ್ದದ ಸೂಚಕ

ಡಿಸೆಂಬರ್ 29,2020ರಂದು ಅಪ್ಲೋಡ್ ಆಗಿರುವ ಈ ವಿಡಿಯೋದಲ್ಲಿ ಪ್ರತಿಭಟನೆ ಯಾವತ್ತು ಮುಗಿಯಲಿದೆ, ಮೋದಿ ಸರಕಾರ ಇದನ್ನು ಹಿಂದಕ್ಕೆ ಪಡೆಯಲಿದೆಯಾ, ಕಾಯಿದೆಯಲ್ಲಿ ಬದಲಾವಣೆ ಬರಲಿದೆಯಾ ಎನ್ನುವುದರ ಬಗ್ಗೆ ಆಚಾರ್ಯ ಸಲೀಲ್ ಅವರು ರಾಶಿ/ಕುಂಡಲಿ ಆಧಾರಿತವಾಗಿ ವಿವರಿಸಿದ್ದಾರೆ. ಅದು ಹೀಗಿದೆ:

32ವರ್ಷದ ಹಿಂದೆ ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವ

32ವರ್ಷದ ಹಿಂದೆ ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವ

ಸುಮಾರು 32ವರ್ಷದ ಹಿಂದೆ ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವದಲ್ಲಿ ಅನ್ನದಾತರ ಬಹುದೊಡ್ಡ ಪ್ರತಿಭಟನೆ ನಡೆದಿತ್ತು ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ರೈತರು ಯಶಸ್ವಿಯಾಗಿದ್ದರು ಕೂಡಾ. ಆದರೆ, ಈಗ ನಡೆಯುತ್ತಿರುವ ಹೋರಾಟ ವಿಭಿನ್ನವಾದದ್ದು. ದೇಶದ ಕುಂಡಲಿಯನ್ನು ಆಧರಿಸಿ ಹೇಳುವುದಾದರೆ, ಸರಕಾರ ಸಂಪೂರ್ಣವಾಗಿ ಈ ಕಾಯಿದೆಯನ್ನು ಹಿಂದಕ್ಕೆ ಪಡೆಯುವ ಸಾಧ್ಯತೆ ಕಮ್ಮಿ.

ಯಾರೂ ಮಾಡದ ಕೆಲಸವನ್ನು ಮೋದಿ ಸರಕಾರ ಮಾಡುವ ಮೂಡ್ ನಲ್ಲಿದೆ

ಯಾರೂ ಮಾಡದ ಕೆಲಸವನ್ನು ಮೋದಿ ಸರಕಾರ ಮಾಡುವ ಮೂಡ್ ನಲ್ಲಿದೆ

ಇದುವರೆಗೆ ಯಾವ ಸರಕಾರವೂ ಮಾಡದ ಕೆಲಸವನ್ನು ಮೋದಿ ಸರಕಾರ ಮಾಡುವ ಮೂಡ್ ನಲ್ಲಿದೆ. ಆದರೆ, ಈ ಕೃಷಿ ಕಾಯಿದೆಯಲ್ಲಿ ರೈತರಿಗೆ ಮಾರಕವಾಗುವ ಕೆಲವೊಂದು ಅಂಶಗಳಿವೆ. ಕೃಷಿ ಕಾಯಿದೆ ಬಿಲ್ ಸಂಸತ್ತಿನ ಎರಡೂ ಮನೆಯಲ್ಲಿ ಪಾಸ್ ಆದ ಸಮಯವನ್ನು ಆಧರಿಸಿ ಹೇಳುವುದಾದರೆ, ಚಂದ್ರ-ಶನಿ-ರಾಹು ಸಹಯೋಗ ಇದ್ದಂತಹ ಸಮಯವದು. ಸೆಪ್ಟಂಬರ್ ನಲ್ಲಿ ಬಿಲ್ ಪಾಸ್ ಆದ ನಂತರ ರೈತರು ಪ್ರತಿಭಟೆನೆಗೆ ಕುಳಿತರು.

ಆಚಾರ್ಯ ಸಲೀಲ್ ಕುಮಾರ್

ಆಚಾರ್ಯ ಸಲೀಲ್ ಕುಮಾರ್

ದೇಶದ ಗೋಚರದ ಪ್ರಭಾವದ ಆಧಾರದ ಮೇಲೆ ಹೇಳುವುದಾದರೆ, ಜನವರಿ 27ರ ನಂತರ ಈ ಪ್ರತಿಭಟನೆಯ ಕಾವು ಕಮ್ಮಿಯಾಗುತ್ತಾ, ಫೆಬ್ರವರಿ ಅಂತ್ಯಕ್ಕೂ ಮುನ್ನ ಈ ರೈತರ ಪ್ರತಿಭಟನೆ ನಿಲ್ಲಲಿದೆ. ಸರಕಾರ ಈ ಕಾಯಿದೆಯಲ್ಲಿ 8-10 ತಿದ್ದುಪಡಿಯನ್ನು ಮಾಡಲಿದೆಯೇ ಹೊರತು, ಕಾಯಿದೆಯನ್ನು ಹಿಂದಕ್ಕಂತೂ ಪಡೆಯುವುದಿಲ್ಲ.

ಕೃಷಿ ಕಾಯಿದೆ ವಿರುದ್ದ ರೈತರ ಹೋರಾಟ

ಕೃಷಿ ಕಾಯಿದೆ ವಿರುದ್ದ ರೈತರ ಹೋರಾಟ

ಈ ಕೃಷಿ ಕಾಯಿದೆಯನ್ನು ಮೋದಿ ಸರಕಾರ ಹಿಂದಕ್ಕೆ ಪಡೆದಿದ್ದೇ ಆದಲ್ಲಿ, ಇದುವರೆಗೆ ಜಾರಿಗೆ ತಂದ ಎಲ್ಲಾ ಕಾಯಿದೆಗಳನ್ನು ಹಿಂದಕ್ಕೆ ಪಡೆಯುವ ಒತ್ತಡ ಹೆಚ್ಚಾಗುತ್ತದೆ. ಕೃಷಿ ಕಾಯಿದೆಯಲ್ಲಿ ಆಗುವ ತಿದ್ದುಪಡಿಯಿಂದ ಈ ದೇಶದ ಬಡ ರೈತರಿಗೆ ಒಳ್ಳೆದಾಗಲಿದೆ. ದೇಶವಾಸಿಗಳು ಮುಂದಿನ ಒಂದು ದಶಕಗಳಲ್ಲಿ ಈ ರೀತಿಯ ಪ್ರತಿಭಟನೆಯನ್ನು ಇನ್ನೂ ಎದುರಿಸಬೇಕಾಗುವ, ನೋಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.

English summary
Farmers Protest Over New Bills: Astrology Prediction When This Will End,By Acharya Salil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X