ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶ ಆಳುವವರೇ ದೇಶದ್ರೋಹಿಗಳು: 200 ವರ್ಷದ ಹಿಂದಿನ ಕೈವಾರ ತಾತಯ್ಯ ಕಾಲಜ್ಞಾನ

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ರಾಜಧಾನಿ ಬೆಂಗಳೂರಿನಿಂದ ಸುಮಾರು ಅರವತ್ತು ಕಿಲೋಮೀಟರ್ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲೂಕಿನ ಕೈವಾರ ತಾತಯ್ಯನ ಕ್ಷೇತ್ರ, ಅವರು ಶತಮಾನಗಳ ಹಿಂದೆ ನುಡಿದಿದ್ದ ಕಾಲಜ್ಞಾನ ಮುನ್ನಲೆಗೆ ಬಂದ ನಂತರ ಇನ್ನಷ್ಟು ಜನಪ್ರಿಯತೆಯನ್ನು ಪಡೆಯಿತು.

ಅವರು ತೆಲುಗು ಭಾಷೆಯಲ್ಲಿ ಬರೆದಿದ್ದ ಕಾಲಜ್ಞಾನದ ಕನ್ನಡ ಅನುವಾದದ ಪುಸ್ತಕ ಪ್ರಕಾಶನಗೊಂಡಿತ್ತು. ಮಹಾನ್ ಸಂತ ಭಕ್ತರಿಂದ ತಾತಯ್ಯ ಎಂದು ಕರೆಯಲ್ಪಡುವ ಶ್ರೀ ಯೋಗಿನಾರೇಯಣ ಯತೀಂದ್ರರು, ದೇಶ ಹಾಗೂ ಪ್ರಪಂಚದಲ್ಲಿ ಮುಂದೆ ಏನೆಲ್ಲ ಆಗುತ್ತದೆ ಎಂಬ ಕಾಲಜ್ಞಾನವನ್ನು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಪಡಿಸಿದ್ದವರು.

ಒಂದು ಲಕ್ಷ ಗೆಲ್ಲುವ ಆಫರ್ ಸೋತ ಜ್ಯೋತಿಷಿಗಳು!ಒಂದು ಲಕ್ಷ ಗೆಲ್ಲುವ ಆಫರ್ ಸೋತ ಜ್ಯೋತಿಷಿಗಳು!

1726ರಲ್ಲಿ ಜನಿಸಿದ ತಾತಯ್ಯ 1836ರಲ್ಲಿ ಜೀವ ಸಮಾಧಿಯಾದರು. ತಾತಯ್ಯನವರು ಜೀವ ಸಮಾಧಿಯಾದ ಕೈವಾರ ಕ್ಷೇತ್ರವು ಭಕ್ತರ ಪಾಲಿಗೆ ಶ್ರದ್ದಾತಾಣ. ನಾಲ್ಕು ಯುಗಗಳ ಇತಿಹಾಸವುಳ್ಳ ಪುರಾಣ ಪ್ರಸಿದ್ದ ಸ್ಥಳವೆಂದೇ ಭಕ್ತರಿಂದ ಪೂಜಿಸಲ್ಪಡುವ ಇಲ್ಲಿ, ಅಮರನಾರೇಯಣ ದೇವಾಲಯ, ತಾತಯ್ಯನವರ ಬೃಂದಾವನ, ಶ್ರೀ ಯೋಗಿನಾರೇಯಣ ಮಠ, ಭೀಮಲಿಂಗೇಶ್ವರ ದೇವಾಲಯ, ತಪೋವನ ನರಸಿಂಹ ಸ್ವಾಮಿ ದೇಗುಲಗಳೂ ಇವೆ.

ಇಂದು (ಜೂನ್ 2) ಕೈವಾರ ತಾತಯ್ಯ ಭೂಸಮಾಧಿಯಾಗಿ 186ವರ್ಷ. ತಾತಯ್ಯನವರ ಆರಾಧನೆಯ ಸಂದರ್ಭದಲ್ಲಿ ಅವರ ಕಾಲಜ್ಞಾನದ ಕೆಲವೊಂದು ಅಂಶಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ. ನುಡಿದಿದ್ದ ಭವಿಷ್ಯಗಳಲ್ಲಿ ಬಹುತೇಕ ಘಟನೆಗಳು ಸತ್ಯವಾಗಿವೆ ಎನ್ನುವುದು ಆಸ್ತಿಕರ ನಂಬಿಕೆ.

ಜೂನ್ 3 ಕ್ಕೆ ವೃಷಭ ರಾಶಿಯಲ್ಲಿ ಬುಧ ನೇರ ಸಂಚಾರ: ದ್ವಾದಶ ರಾಶಿಗಳ ಮೇಲೆ ಹೇಗಿದೆ ಪ್ರಭಾವ...? ಜೂನ್ 3 ಕ್ಕೆ ವೃಷಭ ರಾಶಿಯಲ್ಲಿ ಬುಧ ನೇರ ಸಂಚಾರ: ದ್ವಾದಶ ರಾಶಿಗಳ ಮೇಲೆ ಹೇಗಿದೆ ಪ್ರಭಾವ...?

 110ವರ್ಷ ಬದುಕಿದ್ದ ಯೋಗಿನಾರೇಯಣ ಯತೀಂದ್ರರು

110ವರ್ಷ ಬದುಕಿದ್ದ ಯೋಗಿನಾರೇಯಣ ಯತೀಂದ್ರರು

ಸುಮಾರು 110ವರ್ಷ ಬದುಕಿದ್ದ ಯೋಗಿನಾರೇಯಣ ಯತೀಂದ್ರರು ಹಲವಾರು ಪವಾಡಗಳನ್ನು ಮಾಡಿದ್ದಾರೆ ಎನ್ನುವುದು ಭಕ್ತರ ವಲಯದಲ್ಲಿ ಕೇಳಿ ಬರುವಂತಹ ಮಾತು. ಆಹಾರವಿದ್ದರು ಉಣ್ಣಲು ಆಗುವುದಿಲ್ಲ, ದುಬಾರಿ ಜಗತ್ತಿನಲ್ಲಿ ವಿಚಿತ್ರ ಬರಗಾಲ, ಪತಿ - ಪತ್ನಿ ಸಂಬಂಧ ಸೇರಿದಂತೆ ಸಮಾಜದ ಬಗ್ಗೆ ಅನೇಕ ಪ್ರಚಲಿತ ವಿಷಯಗಳ ಬಗ್ಗೆ ಬಹಳ ಹಿಂದೆಯೇ ಕೈವಾರ ತಾತಯ್ಯ ಉಲ್ಲೇಖಿಸಿದ್ದರು. ಶ್ರೀಮುಖನಾಮ ಸಂವತ್ಸರದ ಶುದ್ದ ಪಂಚಮಿಯ ಮಧ್ಯರಾತ್ರಿಯ ವೇಳೆ ಕಾಲಜ್ಞಾನವನ್ನು ಬರೆಯಲಾಗಿದೆ ಎಂದು ಹಲವು ಕಡೆ ಉಲ್ಲೇಖವಾಗಿದೆ.

 ಕಾಲಜ್ಞಾನ ಸೂಕ್ಷ್ಮ ಭೀಮಲಿಂಗ ಶತಕುಮು - 27 ಶ್ಲೋಕ

ಕಾಲಜ್ಞಾನ ಸೂಕ್ಷ್ಮ ಭೀಮಲಿಂಗ ಶತಕುಮು - 27 ಶ್ಲೋಕ

1813-14ರ ಜುಲೈ ತಿಂಗಳಲ್ಲಿ ಈ ಗ್ರಂಥ ರಚಿತವಾಗಿದೆ ಮತ್ತು ಇದರಲ್ಲಿ 43 ಪದ್ಯಗಳು ತೆಲುಗು ಭಾಷೆಯಲ್ಲಿದೆ ಎಂದು ಉಲ್ಲೇಖವಾಗಿದೆ. ಪ್ರಚಂಡ ನಾರೇಯಣ ಕವಿ ಪದ್ಯಮುಲು - ಹದಿನಾರು ಶ್ಲೋಕಗಳು ಮತ್ತು ಕಾಲಜ್ಞಾನ ಸೂಕ್ಷ್ಮ ಭೀಮಲಿಂಗ ಶತಕುಮು - 27 ಶ್ಲೋಕಗಳಿವೆ. ಈ ಶ್ಲೋಕದ ವಿಶ್ಲೇಷಣೆಯನ್ನು ಮಾಡಿದರೆ, ಮುಂದಿನ ಆಗುಹೋಗುಗಳ ಸಮಸ್ತ ವಿವರ ಲಭ್ಯವಾಗುವುದು ಎಂದು ಹೇಳಲಾಗುತ್ತದೆ.

 ದೇಶವನ್ನು ಆಳುವವರು ಪರಿಶುದ್ದನಾಗಿರುವುದಿಲ್ಲ

ದೇಶವನ್ನು ಆಳುವವರು ಪರಿಶುದ್ದನಾಗಿರುವುದಿಲ್ಲ

ಅಲ್ಪ ಆಯುಧವುಳ್ಳವರು ಆಯುಧ ಪ್ರಯೋಗದ ಅನುಭವ ಇಲ್ಲದವರು ದೇಶವನ್ನು ಆಳುತ್ತಾರೆ, ದೇಶ ಆಳುವವರು ದೇಶದ್ರೋಹಿಗಳಾಗುತ್ತಾರೆ. ರಾಜ ಇರುವುದಿಲ್ಲ, ರಾಜ್ಯ ಇರುತ್ತೆ, ಭೂಭಾರ ಹೆಚ್ಚಾಗಲಿದೆ ಎಂದು ಶ್ಲೋಕವನ್ನು ವಿಶ್ಲೇಷಿಸಲಾಗಿದೆ. ಪಾಪಕೃತ್ಯಗಳು ಹೆಚ್ಚುತ್ತವೆ, ದೇಶವನ್ನು ಆಳುವವರು ಪರಿಶುದ್ದನಾಗಿರುವುದಿಲ್ಲ ಎಂದು ತಾತಯ್ಯನ ಇನ್ನೊಂದು ಶ್ಲೋಕವನ್ನು ಈ ರೀತಿ ವಿಶ್ಲೇಷಿಸಲಾಗಿದೆ.

 ಕೆಟ್ಟ ಸಮಯ ಬಂದಾಗ ಯಾವ ರೀತಿ ಎಚ್ಚೆತ್ತುಕೊಳ್ಲಬೇಕು

ಕೆಟ್ಟ ಸಮಯ ಬಂದಾಗ ಯಾವ ರೀತಿ ಎಚ್ಚೆತ್ತುಕೊಳ್ಲಬೇಕು

"ಹಿಂದೆ ಏನಾಗಿತ್ತು, ಮುಂದೆ ಏನಾಗುತ್ತದೆ ಎನ್ನುವುದೇ ಕಾಲಜ್ಞಾನ, ಇಂತವರು ಕಾಲದ ಬಗ್ಗೆ ನುಡಿಯುತ್ತಾರೆ. ದೇವರು ಮತ್ತು ಇವರುಗಳು ಬೇರೆಯವರಲ್ಲ, ತಾತಯ್ಯನವರು ತಮ್ಮ ಗ್ರಂಥದಲ್ಲಿ ಇದನ್ನು ತುಂಬಾ ಚೆನ್ನಾಗಿ ವಿವರಣೆಯನ್ನು ಮಾಡಿದ್ದಾರೆ. ಕೆಟ್ಟ ಸಮಯ ಬಂದಾಗ ಯಾವ ರೀತಿ ಎಚ್ಚೆತ್ತುಕೊಳ್ಲಬೇಕು ಎಂದು ತಮ್ಮ ಶ್ಲೋಕದಲ್ಲಿ ವಿವರಿಸಿದ್ದಾರೆ"ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಂ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

English summary
Eve Of 186 Death Anniversary Of Kaivara Tatayya, Recalling His Kalagnanam. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X