ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ಪಕ್ಷದ ಚತುರ್ದಶಿ, ಅಮಾವಾಸ್ಯೆ ಜನನವಾದರೆ ಏನು ಫಲ?

By ರಮಾಕಾಂತ್
|
Google Oneindia Kannada News

Recommended Video

ಕೃಷ್ಣ ಚತುರ್ದಶಿ ಹಾಗು ಅಮಾವಾಸ್ಯೆಯಂದು ಜನಿಸಿದರೆ ಏನು ಫಲ? | Oneindia Kannada

ಜ್ಯೋತಿಷ್ಯದಲ್ಲಿ ಜನನ ಕಾಲದ ದೋಷಗಳ ಬಗ್ಗೆ ಹೇಳಲಾಗಿದೆ. ಲಗ್ನ ಚೆನ್ನಾಗಿದ್ದು, ಗ್ರಹಗಳು ಉತ್ತಮ ಸ್ಥಿತಿಯಲ್ಲಿದ್ದರೂ ಜನನ ಕಾಲದ ಆಧಾರದಲ್ಲಿ ಕೆಲವು ದೋಷಗಳನ್ನು ಹೇಳಲಾಗಿದೆ. ಅಂದರೆ ಅಮಾವಾಸ್ಯೆ ಹಾಗೂ ಕೃಷ್ಣ ಪಕ್ಷದ ಚತುರ್ದಶಿಯಂದು ಗಂಡು ಮಕ್ಕಳ ಜನನವಾದರೆ ಅದನ್ನು ದೋಷವೆಂದು ಪರಿಗಣಿಸಲಾಗುತ್ತದೆ.

ಇನ್ನು ಭದ್ರ ಕರಣದಲ್ಲಿ ಜನನವಾದರೆ, ತಂದೆ- ತಾಯಿ, ಸೋದರನ ನಕ್ಷತ್ರದಲ್ಲೇ ಮಗುವಿನ ಜನನವಾದರೆ, ಸೂರ್ಯ ಗ್ರಹವು ಮತ್ತೊಂದು ರಾಶಿಯನ್ನು ಪ್ರವೇಶ ಮಾಡುವ ಸಮಯದಲ್ಲಿ, ಸೂರ್ಯ ಅಥವಾ ಚಂದ್ರ ಗ್ರಹಣದ ವೇಳೆಯಲ್ಲಿ, ವ್ಯತೀಪಾತ ಯೋಗದಲ್ಲಿ, ಯಮಗಂಡ, ತಿಥಿಕ್ಷಯ, ದಗ್ಧ ಯೋಗದಲ್ಲಿ ಜನಿಸಿದರೆ ದೋಷಪ್ರದ ಎಂದು ಪರಿಗಣಿಸಲಾಗುತ್ತದೆ.

ಮಹಾಭಾರತ ಯುದ್ಧ ಕಾಲದಲ್ಲೂ ಸಂಭವಿಸಿತ್ತು ಎರಡು ಗ್ರಹಣ, ಏನು ಪರಿಣಾಮ?ಮಹಾಭಾರತ ಯುದ್ಧ ಕಾಲದಲ್ಲೂ ಸಂಭವಿಸಿತ್ತು ಎರಡು ಗ್ರಹಣ, ಏನು ಪರಿಣಾಮ?

ಮೂವರು ಹೆಣ್ಣುಮಕ್ಕಳ ನಂತರ ಒಂದು ಗಂಡುಮಗು ಜನಿಸಿದರೆ, ಮೂವರು ಗಂಡು ಮಕ್ಕಳ ನಂತರ ಒಂದು ಹೆಣ್ಣುಮಗು ಹುಟ್ಟಿದರೆ ಅದು ಕೂಡ ದೋಷಪ್ರದ ಎನಿಸುತ್ತದೆ. ಆದರೆ ಈ ಎಲ್ಲ ದೋಷಗಳಿಗೂ ಜ್ಯೋತಿಷ್ಯದಲ್ಲಿ ಪರಿಹಾರವನ್ನು ಸೂಚಿಸಲಾಗಿದೆ ಎಂಬುದು ಗಮನಿಸಬೇಕಾದ ಅಂಶ.

Effect of Inauspicious birth on Krishna Chaturdashi and Amavasya

ಅಮಾವಾಸ್ಯೆಯಂದು ಜನಿಸಿದ ಗಂಡುಮಕ್ಕಳು ಬಡತನ ಅನುಭವಿಸಬೇಕಾದ ಸ್ಥಿತಿ ಏರ್ಪಡುತ್ತದೆ. ಆದ್ದರಿಂದ ಆ ಜನನ ದೋಷದ ನಿವಾರಣೆ ಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗೆ ನಿವಾರಣೆ ಮಾಡಿಕೊಂಡರೆ ಅಮಾವಾಸ್ಯೆ ಜನನ ದೋಷವು ಹೋಗಿ, ಆ ಮಗುವಿಗೆ ಉತ್ತಮ ಫಲಗಳು ದೊರೆಯುತ್ತವೆ.

ಹನ್ನೆರಡು ರಾಶಿಗಳ ಮೇಲೆ ಜುಲೈ 27ರ ಚಂದ್ರ ಗ್ರಹಣದ ಫಲಾಫಲಹನ್ನೆರಡು ರಾಶಿಗಳ ಮೇಲೆ ಜುಲೈ 27ರ ಚಂದ್ರ ಗ್ರಹಣದ ಫಲಾಫಲ

ಕೃಷ್ಣ ಪಕ್ಷದ ಚತುರ್ದಶಿ ಜನನ ದೋಷದ ವಿಚಾರಕ್ಕೆ ಬಂದರೆ, ಆ ತಿಥಿಯ ಪ್ರಮಾಣವನ್ನು ಆರು ಭಾಗ ಮಾಡಿಕೊಳ್ಳಬೇಕು. ಮೊದಲ ಭಾಗದಲ್ಲಿ ಜನನ ಆಗಿದ್ದರೆ ಶುಭಪ್ರದ. ಎರಡನೇ ಭಾಗದಲ್ಲಿ ಆದರೆ ನಾಶವನ್ನು ಅಥವಾ ತಂದೆಗೆ ಕೆಡುಕನ್ನು ಸೂಚಿಸುತ್ತದೆ. ಮೂರನೇ ಭಾಗವು ತಾಯಿಗೆ ಕೆಡುಕನ್ನು ಸೂಚಿಸುತ್ತದೆ. ನಾಲ್ಕನೇ ಭಾಗದಲ್ಲಿ ಜನನವಾದರೆ ತಾಯಿಯ ಅಣ್ಣ- ತಮ್ಮಂದಿರಿಗೆ ಕೆಡುಕು, ಐದನೇ ಭಾಗದಲ್ಲಿಯಾದರೆ ಕುಟುಂಬವೇ ನಾಶ, ಆರರಲ್ಲಿ ಸ್ವತಃ ಆ ಮಗುವಿಗೇ ತೊಂದರೆಯಾಗುತ್ತದೆ.

English summary
Here is the explanation about Inauspicious effect of birth on Krishna Chaturdashi and Amavasya according to vedic astrology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X