• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭವಿಷ್ಯ: ಕೊರೊನಾ ವೈರಸ್ ತೀವ್ರತೆ ಕ್ಷೀಣಿಸಲಿದೆ ಈ ತಿಂಗಳಿನಿಂದ!

|

ಕೊರೊನಾ ವೈರಸ್ ವಿಚಾರದಲ್ಲಿ ಹಲವು ಜ್ಯೋತಿಷಿಗಳು ತಮ್ಮ ಅಭಿಪ್ರಾಯವನ್ನು ಪುಂಖಾನುಪುಂಖವಾಗಿ ಮಂಡಿಸಿದ್ದಾಗಿದೆ. ಜೂನ್ ನಂತರ, ಸೂರ್ಯಗ್ರಹಣದ ನಂತರ, ಕಾಳಸರ್ಪಯೋಗ ಮುಗಿದ ನಂತರ, ಕೊರೊನಾದಿಂದ ಮುಕ್ತಿ ಸಿಗುತ್ತದೆ ಎಂದು ಹೇಳಿದ್ದರು.

   R Ashwin , ಬೌಲರ್‌ಗಳ ನೆರವಿಗೆ ಹೊಸ ಐಡಿಯಾ ಕೊಟ್ಟಿದ್ದಾರೆ | Oneindia Kannada

   ಆದರೆ, ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಆಗಸ್ಟ್ 12ರಂದು ಒಂದೇ ದಿನ ಗರಿಷ್ಠ ಪಾಸಿಟೀವ್ ಕೇಸ್ ಭಾರತದಲ್ಲಿ ದಾಖಲೆಯಾಗಿತ್ತು. ಈ ಹಿಂದೆಯೂ, ಕೊರೊನಾ ಮತ್ತು ಚೀನಾ ಸಂಘರ್ಷದ ಬಗ್ಗೆ ಭವಿಷ್ಯ ನುಡಿದಿದ್ದ, ಉತ್ತರ ಭಾರತದ ಮೂಲದ ಮನೀಜಾ ಅಹುಜಾ, ಮತ್ತೊಮ್ಮೆ ಕೊರೊನಾದ ಬಗ್ಗೆ ತಮ್ಮ ಭವಿಷ್ಯದ ವಿಡಿಯೋವನ್ನು ಮಾಡಿದ್ದಾರೆ. ಅವರು ಹೇಳಿದ್ದು ಹೀಗಿದೆ:

   .ಭಾರತ, ಚೀನಾದ ನಡುವೆ ಯುದ್ದ ಸಂಭವಿಸುತ್ತಾ: ಬಾಲ ಜ್ಯೋತಿಷಿ ಅಭಿಗ್ಯಾ ನುಡಿದ ಭವಿಷ್ಯ

   "ಹೆಚ್ಚಿನ ಜ್ಯೋತಿಷಿಗಳು ಏಪ್ರಿಲ್, ಮೇ ಅಂತ್ಯದೊಳಗೆ ಕೊರೊನಾ ನಿರ್ನಾಮವಾಗಲಿದೆ ಎನ್ನುವ ಭವಿಷ್ಯವನ್ನು ನುಡಿದಿದ್ದರು. ಇದಾದ ನಂತರ, ಸೂರ್ಯಗ್ರಹಣದ ನಂತರ ಕೊರೊನಾದಿಂದ ಮುಕ್ತಿ ಸಿಗಲಿದೆ ಎನ್ನುವ ಭವಿಷ್ಯವನ್ನೂ ನುಡಿದಿದ್ದರು. ಈ ರೀತಿ ಆಗುವುದಿಲ್ಲ ಎಂದು ನಾನು ಹೇಳಿದ್ದೆ".

   ತಾನು ಆಡಿದ ಮಾತೇ ತಲಕಾವೇರಿ ಪ್ರಧಾನ ಅರ್ಚಕರಿಗೆ ಮುಳುವಾಯಿತೇ: ಭೂಸಮಾದಿ ಶಂಕೆ

   "ಈ ಹಿಂದೆ ಮಾರ್ಚ್ 15ಕ್ಕೆ ಕೊರೊನಾ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನು ಮಂಡಿಸಿದ್ದೆ. ಕೊರೊನಾ ಸೋಂಕಿತರ ಸಂಖ್ಯೆ ಡಬಲ್ ಡಿಜಿಟ್ ನಲ್ಲಿದ್ದಾಗಲೇ ನಾನು ಕೊರೊನಾ ವೈರಸಿನ ಹಾವಳಿ ಯಾವಾಗ ಕಮ್ಮಿಯಾಗುತ್ತದೆ ಎನ್ನುವುದರ ಬಗ್ಗೆ ನುಡಿದಿದ್ದೆ" ಎಂದು ಅಹುಜಾ ಹೇಳಿದ್ದಾರೆ.

   ಸೆಪ್ಟಂಬರ್ ಮಾಸಾಂತ್ಯದ ವೇಳೆ

   ಸೆಪ್ಟಂಬರ್ ಮಾಸಾಂತ್ಯದ ವೇಳೆ

   "ಮೇ ಹದಿನೈದರ ನಂತರ ಕೇಸುಗಳ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದೂ ಹೇಳಿದ್ದೆ. ಕೊರೊನಾ ಹಾವಳಿಯ ತೀವ್ರತೆ ಕಮ್ಮಿಯಾಗಲು ಆರಂಭವಾಗುವುದು ಸೆಪ್ಟಂಬರ್ ಮಾಸಾಂತ್ಯದ ವೇಳೆ. ಆದರೂ, ಇದರ ಎಫೆಕ್ಟ್ ಸಂಪೂರ್ಣ ಕಮ್ಮಿಯಾಗಲು ನವೆಂಬರ್ ಅಂತ್ಯದವರೆಗೆ ಕಾಯಲೇಬೇಕು"ಎಂದು ಮನೀಜಾ ಅಹುಜಾ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.

   ಭಾರತದಲ್ಲಿ ಸೆಪ್ಟಂಬರ್ ವರೆಗೆ ಕೊರೊನಾ ತೊಂದರೆ ಇದ್ದೇ ಇರುತ್ತದೆ

   ಭಾರತದಲ್ಲಿ ಸೆಪ್ಟಂಬರ್ ವರೆಗೆ ಕೊರೊನಾ ತೊಂದರೆ ಇದ್ದೇ ಇರುತ್ತದೆ

   "ಭಾರತದಲ್ಲಿ ಸೆಪ್ಟಂಬರ್ ವರೆಗೆ ಕೊರೊನಾ ತೊಂದರೆ ಇದ್ದೇ ಇರುತ್ತದೆ. ಜೂನ್ ವೇಳೆ ಮರಣದ ಪ್ರಮಾಣವೂ ಹೆಚ್ಚಾಗಲಿದೆ ಎಂದು ಮಾರ್ಚ್ ತಿಂಗಳಲ್ಲಿ ಹೇಳಿದ್ದೆ. ಹಾಗಾಗಿ, ಮುಂದಿನ ಕೆಲವು ದಿನಗಳಲ್ಲಿ ನಾವು ಜಾಗರೂಕತೆಯಿಂದ ಇರುವುದು ಸೂಕ್ತ" ಎಂದು ಅಹುಜಾ ಹೇಳಿದ್ದಾರೆ.

   ವರ್ಷಾಂತ್ಯದಲ್ಲಿ ಇನ್ನೊಂದು ವೈರಸ್ ಅಟ್ಯಾಕ್

   ವರ್ಷಾಂತ್ಯದಲ್ಲಿ ಇನ್ನೊಂದು ವೈರಸ್ ಅಟ್ಯಾಕ್

   "ಕೊರೊನಾ ವೈರಸ್ ನಂತರ ಅಂದರೆ, ಈ ವರ್ಷಾಂತ್ಯದಲ್ಲಿ ಇನ್ನೊಂದು ವೈರಸ್ ಅಟ್ಯಾಕ್ ಮಾಡಲಿದೆ ಎನ್ನುವ ಭವಿಷ್ಯವನ್ನು ಕೆಲವು ಜ್ಯೋತಿಷಿಗಳು ಹೇಳಿದ್ದರು. ಆದರೆ, ಇದು ಸುಳ್ಳು, ಅಂತಹ ಯಾವುದೇ ವೈರಸ್ ಮತ್ತೆ ದಾಳಿ ಮಾಡುವುದಿಲ್ಲ. ಪ್ರಾರಬ್ದವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ನಾರಾಯಣ ಕವಚವನ್ನು ಜನರು ಓದಿದರೆ ಎಲ್ಲರಿಗೂ ಮಂಗಳವಾಗಲಿದೆ" ಎಂದು ಜ್ಯೋತಿಷಿ ಅಹುಜಾ ಹೇಳಿದ್ದಾರೆ.

   ರಾಮಾನುಜ ಸಂಪ್ರದಾಯ

   ರಾಮಾನುಜ ಸಂಪ್ರದಾಯ

   "ನನ್ನ ಗುರುಗಳ ಆಶ್ರಮ ಫರೀದಾಬಾದ್ ನಲ್ಲಿದೆ. 35ವರ್ಷದ ಹಿಂದೆ, ಪೊಲೀಸ್ ಅಧಿಕಾರಿಯೊಬ್ಬರಿಗೆ ಅವರು ನುಡಿದಿದ್ದ ವಿಷಯ ಇನ್ನೂ ನನಗೆ ನೆನಪಿದೆ. ರಾಮಾನುಜ ಸಂಪ್ರದಾಯವನ್ನು ನಾನು ಪಾಲಿಸುತ್ತಿರುವುದು. 2023ರಲ್ಲಿ ಹೊಸ ವೈರಸ್ ದಾಳಿ ಮಾಡಲಿದ್ದು, ಇದು ಸಾಕಷ್ಟು ಮೃತ್ಯುವಿಗೆ ಕಾರಣವಾಗಲಿದೆ ಎಂದು ನನ್ನ ಗುರುಗಳು 35ವರ್ಷದ ಹಿಂದೆ ಹೇಳಿದ್ದರು" ಎಂದು ಅಹುಜಾ, ಮೂರು ವರ್ಷದ ನಂತರ ಹೊಸ ವೈರಸ್ ದಾಳಿಯ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

   English summary
   Effect Of Coronavirus Will Come Down From September 2020 Onwards: Prediction By Maneeza Ahuja.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X