• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಾರೋ ಕಾರ್ಡ್ ಭವಿಷ್ಯ: ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು?

By ಪ್ರಕಾಶ್ ದಳವಿ
|

ಇಂಗ್ಲೆಂಡಿನಲ್ಲಿ ನಡೆದಿರುವ 12ನೇ ಆವೃತ್ತಿಯ ಕ್ರಿಕೆಟ್ ವಿಶ್ವಕಪ್ ಟೂರ್ನಮೆಂಟಿನಲ್ಲಿ ಗೆಲ್ಲಬಲ್ಲ ತಂಡ ಯಾವುದು? ಈ ಬಾರಿಯಾದರೂ 'ಕ್ರಿಕೆಟ್ ಜನಕ' ಇಂಗ್ಲೆಂಡಿಗೆ ಅದೃಷ್ಟ ಒಲಿಯುವುದೇ? 10 ತಂಡಗಳ ಪೈಕಿ ಕಪ್ ಎತ್ತಬಲ್ಲ ಸಾಮರ್ಥ್ಯ ಯಾವ ತಂಡಕ್ಕಿದೆ? ಭಾರತ ತಂಡ ಭವಿಷ್ಯವೇನು? ಎಂಬೆಲ್ಲ ಪ್ರಶ್ನೆಗಳಿಗೆ ಟಾರೋ(Taro) ಕಾರ್ಡ್ ಮೂಲಕ ಉತ್ತರವನ್ನು ಪ್ರಕಾಶ್ ದಳವಿ ಅವರು ಕಂಡುಕೊಂಡು ನಿಮ್ಮ ಮುಂದಿಡುತ್ತಿದ್ದಾರೆ.

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಅತಿಥೇಯ ರಾಷ್ಟ್ರಗಳಾಗಿದ್ದು, 11 ಮೈದಾನಗಳಲ್ಲಿ 46 ದಿನಗಳ ಕಾಲ 48 ಪಂದ್ಯಗಳನ್ನು ಆಯೋಜಿಸಿವೆ.

ವಿಶ್ವಕಪ್ 2019 ಸಮಗ್ರ ಮಾಹಿತಿ, ಫ್ಯಾನ್ಸಿಗೆ ಸಂಪೂರ್ಣ ಗೈಡ್

ಇಂಗ್ಲೆಂಡ್, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಕಣದಲ್ಲಿದ್ದು, ರೌಂಡ್ ರಾಬಿನ್ ಲೀಗ್ ಮಾದರಿ ಟೂರ್ನಮೆಂಟ್ ಪಂದ್ಯಗಳು ನಡೆಯಲಿದ್ದು, ಎಲ್ಲಾ 10 ತಂಡಗಳು ಪರಸ್ಪರ ಲೀಗ್ ಹಂತದಲ್ಲಿ ಸೆಣಸಾಡಲಿವೆ. ಟಾಪ್ 4 ತಂಡಗಳು ಸೆಮಿಫೈನಲ್ ತಲುಪಲಿವೆ. ಅಗ್ರಸ್ಥಾನ ತಂಡದ ವಿರುದ್ಧ ನಾಲ್ಕನೇ ಸ್ಥಾನದ ತಂಡ, ಎರಡನೇ ಸ್ಥಾನದ ತಂಡದ ವಿರುದ್ಧ 3ನೇ ಸ್ಥಾನದ ತಂಡ ಆಡಿ ಫೈನಲ್ ತಲುಪಲಿವೆ.

ಐದು ತಂಡಗಳ ಬಗ್ಗೆ ಟಾರೋ ಕಾರ್ಡ್ ರೀಡಿಂಗ್

ಐದು ತಂಡಗಳ ಬಗ್ಗೆ ಟಾರೋ ಕಾರ್ಡ್ ರೀಡಿಂಗ್

ಮೊದಲ ಹಂತದಲ್ಲಿ ಐದು ತಂಡಗಳ ಬಗ್ಗೆ ಟಾರೋ ಕಾರ್ಡ್ ರೀಡಿಂಗ್ ಮಾಡಲಾಗುತ್ತದೆ, ನಂತರ ಮಿಕ್ಕ ಐದು ತಂಡಗಳ ಬಗ್ಗೆ ತಿಳಿಯಲಾಗುತ್ತದೆ. ಶೇ 100ರಷ್ಟು ನಿಖರವಾದ ಭವಿಷ್ಯ ಇದಾಗಿದೆ ಎಂದು ಹೇಳಲಾರೆ, ನೈಜತೆಗೆ ಸಮನಾಗಬಲ್ಲ ಸಾಧ್ಯತೆ ಇದಾಗಿದೆ, ಟಾರೋ ಕಾರ್ಡ್ ಭವಿಷ್ಯವನ್ನು ನಂಬಿಕೊಂಡು ಯಾರೋ ಬೆಟ್ಟಿಂಗ್ ಕಟ್ಟಬೇಡಿ, ಬೆಟ್ಟಿಂಗ್ ಮಾಡಿ ಹಣ ಕಳೆದುಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ಟಾರೋ ಕಾರ್ಡ್ ರೀಡರ್ ಪ್ರಕಾಶ್ ಹೇಳಿದ್ದಾರೆ.

ಮುಕ್ತವಾದ ಪೈಪೋಟಿಯುಳ್ಳ ಟೂರ್ನಮೆಂಟ್

ಮುಕ್ತವಾದ ಪೈಪೋಟಿಯುಳ್ಳ ಟೂರ್ನಮೆಂಟ್

ಈ ಬಾರಿ ಯಾವುದೇ ಒಂದು ತಂಡವನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಊಹಿಸುವುದು ಕಷ್ಟ, ಎಲ್ಲಾ 10 ತಂಡಗಳಿಗೂ ಒಂದಲ್ಲ, ಒಂದು ಉತ್ತಮ ಅವಕಾಶ ಸಿಗಲಿದ್ದು, ಆ ದಿನ, ಆ ಕ್ಷಣದಲ್ಲಿ ಅದೃಷ್ಟ ಕೈಗೂಡಿದರೆ ಮುಂದಿನ ಹಂತಕ್ಕೆ ಹೋಗುವ ಅರ್ಹತೆ ಪಡೆಯಬಹುದು. ಒಂದೆರಡು ತಂಡಗಳು ಮಾತ್ರ ಸುಲಭವಾಗಿ ಮುಂದಿನ ಹಂತ ತಲುಪಬಲ್ಲದು ಹಾಗೂ ಕೆಲ ತಂಡಗಳು ಟೂರ್ನಮೆಂಟ್ ನಿಂದ ಹೊರಬೀಳಬಲ್ಲ ಮೊದಲ ತಂಡ ಯಾವುದು ಎಂಬುದನ್ನು ತಿಳಿಯಲಾಗುತ್ತದೆ.

ಮೊದಲ ಐದು ತಂಡಗಳ ಭವಿಷ್ಯ

ಮೊದಲ ಐದು ತಂಡಗಳ ಭವಿಷ್ಯ

ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಶ್ರೀಲಂಕಾ ಬಗ್ಗೆ ತಿಳಿಯಲು ಐದು +ಐದು ಟಾರೋ ಕಾರ್ಡ್ ಬಳಸಲಾಗುತ್ತದೆ. ಈ ಐದು ತಂಡಗಳ ಪೈಕಿ ವೆಸ್ಟ್ ಇಂಡೀಸ್ ತಂಡ(ಲವರ್ಸ್ ಕಾರ್ಡ್ ಬಂದಿದೆ) ಮಿಕ್ಕ ತಂಡಗಳಿಗಿಂತ ಮುಂಚೂಣಿಯಲ್ಲಿದ್ದು, ಮುಂದಿನ ಹಂತಕ್ಕೆ ಸುಲಭವಾಗಿ ತಲುಪಲಿದೆ. ತಂಡದ ಸಂಘಟಿತ ಹೋರಾಟ ಫಲ ನೀಡಲಿದೆ. ಮಿಕ್ಕಂತೆ ಎರಡನೇ ಅದೃಷ್ಟ ಪಾಕಿಸ್ತಾನಕ್ಕೆ ಒಲಿಯುವ ಲಕ್ಷಣಗಳಿವೆ. ಪಾಕಿಸ್ತಾನಕ್ಕೆ ಜೋಕರ್ ಹಣ ಬ್ಯಾಲೆನ್ಸ್ ಮಾಡುವ ಕಾರ್ಡ್ ಸಿಕ್ಕಿದೆ ಹೀಗಾಗಿ, ನೆಟ್ ರನ್ ರೇಟ್ ಆಧಾರದ ಮೇಲೆ ಲಕ್ ತಿರುಗಬಹುದು. ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾಕ್ಕೆ ಸೆಮಿಫೈನಲ್ ತಲುಪುವ ಯೋಗವಿಲ್ಲ.

ಎರಡನೇ ಐದು ತಂಡಗಳ ಭವಿಷ್ಯ

ಎರಡನೇ ಐದು ತಂಡಗಳ ಭವಿಷ್ಯ

ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳ ಬಗ್ಗೆ ತಿಳಿಯಲು ಐದು +ಐದು ಟಾರೋ ಕಾರ್ಡ್ ಬಳಸಲಾಗುತ್ತದೆ. ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ನೀಡಿದರೂ, ಬಂದಿರುವ ಕಾರ್ಡ್ ಪ್ರಕಾರ ನಿಧಾನಗತಿಯ ಆಟ ರನ್ ರೇಟ್ ಬಲವಿಲ್ಲದೆ ಮುಂದಿನ ಹಂತಕ್ಕೆ ಹೋಗುವ ಅರ್ಹತೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆಸ್ಟ್ರೇಲಿಯಾ(ದಿ ವರ್ಲ್ಡ್ ಕಾರ್ಡ್) ಲೀಗ್ ಹಂತವನ್ನು ಸುಲಭವಾಗಿ ಆಡಿ ಸೆಮಿಫೈನಲ್ ತಲುಪಬಹುದು. ದಕ್ಷಿಣ ಆಫ್ರಿಕಾದ ನಾಯಕನಿಗೆ ಅದೃಷ್ಟವಿದ್ದರೂ ತಂಡಕ್ಕೆ ಈ ಬಾರಿ ಯಶ ಸಿಗುವುದಿಲ್ಲ, ಇಂಗ್ಲೆಂಡ್ ದಿ ಚಾರಿಯಟ್ ಕಾರ್ಡ್, ಪೇಜ್ ಆಫ್ ವೇನ್ ಕಾರ್ಡ್ ಸಿಕ್ಕಿದ್ದು, ಸೆಮಿಫೈನಲ್ ಸುಲಭವಾಗಿ ತಲುಪಲಿದೆ. ಭಾರತ ಕೂಡಾ (ಲವರ್ಸ್ ಕಾರ್ಡ್ ಬಂದಿದೆ) ಲೀಗ್ ಹಂತದಲ್ಲಿ ಸುಲಭವಾಗಿ ಜಯಭೇರಿ ಬಾರಿಸಿ ಮುಂದಿನ ಹಂತಕ್ಕೇರಲಿದೆ,

ಸೆಮಿಫೈನಲ್ ತಲುಪುವ ತಂಡಗಳು

ಸೆಮಿಫೈನಲ್ ತಲುಪುವ ತಂಡಗಳು

ಲೀಗ್ ಹಂತದಿಂದ ಹೊರ ಬೀಳುವ ಪ್ರಮುಖ ತಂಡವಾಗಿ ದಕ್ಷಿಣ ಆಫ್ರಿಕಾ ಹೊರಹೊಮ್ಮಿದೆ. ಮಿಕ್ಕಂತೆ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಹಾಗೂ ಭಾರತ ಸುಲಭವಾಗಿ ಸೆಮಿಫೈನಲ್ ಹಂತ ತಲುಪಲಿವೆ. ವೆಸ್ಟ್ ಇಂಡೀಸ್ ಹಾಗೂ ಭಾರತ ಸೆಮಿಫೈನಲ್ ಸಾಧ್ಯತೆಯಿದೆ. ನಾಲ್ಕನೆ ತಂಡವಾಗಿ ಸೆಮಿಫೈನಲ್ ತಲುಪಲು ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಪೈಪೋಟಿ ಬೀಳಲಿದೆ. ನೆಟ್ ರನ್ ರೇಟ್ ಆಧಾರವೂ ಪರಿಗಣಿಸಲ್ಪಡುತ್ತದೆ. ಮೂರು ತಂಡದಲ್ಲಿ ಒಂದು ತಂಡ ಸೆಮೀಸ್ ಹಂತಕ್ಕೆ ಬಂದರೂ ಫೈನಲ್ ತಲುಪುವುದು ಕಷ್ಟ. ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸೆಮಿಫೈನಲ್ ಸಾಧ್ಯತೆಯಿದೆ. ಒಟ್ಟಾರೆ, ಕಾಂಬಿನೇಷನ್ ಅದಲು ಬದಲಾದರೂ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಭಾರತ ಹಾಗೂ ಮತ್ತೊಂದು ತಂಡ ಉಪಾಂತ್ಯ ಹಂತದಲ್ಲಿ ಕಾಣಿಸಿಕೊಳ್ಳಲಿವೆ.

ಫೈನಲ್ ಗೆದ್ದು, ಕಪ್ ಯಾರು ಎತ್ತಲಿದ್ದಾರೆ?

ಫೈನಲ್ ಗೆದ್ದು, ಕಪ್ ಯಾರು ಎತ್ತಲಿದ್ದಾರೆ?

ಇಂಗ್ಲೆಂಡ್ ಹಾಗೂ ಭಾರತ ಅಂತಿಮ ಹಣಾಹಣಿಯಲ್ಲಿ ಸೆಣಸಬಲ್ಲ ತಂಡಗಳಾಗಿವೆ. ಐಪಿಎಲ್ ಕಾರ್ಡ್ ರೀಡ್ ಮಾಡುವಾಗ ಏಸ್ ಅಂಡ್ ಕಪ್ಸ್ ತಂಡ ಮುಂಬೈ ಇಂಡಿಯನ್ಸ್ ಗೆ ಬಂದಿತ್ತು ಹಾಗೂ ತಂಡ ಗೆಲುವು ಸಾಧಿಸಿತ್ತು. ಈಗ ಇದೆ ಕಾರ್ಡ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾಕ್ಕೆ ಸಿಕ್ಕಿದೆ. ಆದರೆ, ಭಾರತ ಕಪ್ ಗೆಲ್ಲಬಹುದೆ? ಎಂದರೆ ಚಾನ್ಸ್ ಇದೆ, ಆದರೆ, ಸ್ಪಷ್ಟವಾಗಿ ಹೇಳಲಾಗದು. ಆದರೆ, ಇಂಗ್ಲೆಂಡ್ ಗೆ ನೈಟ್ ಅಂಡ್ ವಾಂಡ್ಸ್ ಕಾರ್ಡ್ ಬಂದಿದ್ದು, ಇಂಗ್ಲೆಂಡ್ ಫೈನಲ್ ನಲ್ಲಿ ಗೆಲ್ಲುವ ಎಲ್ಲಾ ಸಾಧ್ಯತೆಗಳಿದ್ದು, ಮೊಟ್ಟ ಮೊದಲ ಬಾರಿಗೆ ಕಪ್ ಎತ್ತುವ ಅದೃಷ್ಟ ಇಂಗ್ಲೆಂಡಿಗಿದೆ ಎಂದು ಕಾರ್ಡ್ ಸೂಚಿಸುತ್ತಿದೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
ICC Cricket World Cup 2019: Here is Tarot card Prediction by Prakash who tells about who will tournament? Which four teams can make it to the semis and which two teams can play on July 14 Finals at Lord's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X