• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಡಿಶ್ರೀಗಳು ನುಡಿದಿದ್ದ ಭವಿಷ್ಯ: ಬಹಳ ಜಾಗರೂಕತೆಯಿಂದ ಇರಬೇಕಾದ ಈ 2 ತಿಂಗಳು

|
Google Oneindia Kannada News

ವಿಶ್ವಕ್ಕೆ ಮಾರಣಾಂತಿಕ ವೈರಾಣುವೊಂದು ಕಂಟಕಪ್ರಾಯವಾಗಲಿದೆ ಎಂದು ಈ ವರ್ಷದ ಆದಿಯಲ್ಲಿ ಅಂದರೆ ಫೆಬ್ರವರಿ ಮಾಸದಲ್ಲಿ ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದರು.

ಇದಾದ ನಂತರ ಯುಗಾದಿಯ ವೇಳೆ ತಮ್ಮ ಭವಿಷ್ಯವನ್ನು ಪುನರುಚ್ಚಿಸಿದ್ದ ಕೋಡಿಶ್ರೀಗಳು, ಅತಿವೃಷ್ಟಿಯ ಬಗ್ಗೆಯೂ ಹೇಳಿದ್ದರು. ತಾಳೇಗೆರೆ ಆಧಾರದ ಮೇಲೆ ಭವಿಷ್ಯ ನುಡಿಯುವ ಶ್ರೀಗಳ ಭವಿಷ್ಯ ಹೇಗೆ ಒಂದೊಂದೇ ಸರಿಯಾಗುತ್ತಾ ಸಾಗುತ್ತಿದೆ ಎನ್ನುವುದಕ್ಕೆ ಕಾಲವೇ ಸಾಕ್ಷಿಯಾಗುತ್ತಿದೆ.

ಭವಿಷ್ಯವಾಣಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರಿಗೆ ಕಿರೀಟ? ಭವಿಷ್ಯವಾಣಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರಿಗೆ ಕಿರೀಟ?

ಈಗ ಮನುಕುಲ ಎದುರಿಸುತ್ತಿರುವ ಸಮಸ್ಯೆಗಳಿಗೆ ಜನರಿಗೆ ದೇವರ ಮೇಲಿನ ನಂಬಿಕೆ, ಭಕ್ತಿ ಕಮ್ಮಿಯಾಗುತ್ತಿರುವುದೇ ಕಾರಣ ಎಂದು ಹಲವು ಬಾರಿ ಕೋಡಿಶ್ರೀಗಳು ಹೇಳಿದ್ದರು. ಲಾಕ್ ಡೌನ್ ವಿವಿಧ ಹಂತದಲ್ಲಿ, ಮೊದಲು ಮದ್ಯದಂಗಡಿ ಓಪನ್ ಮಾಡಲು ಅನುಮತಿ ನೀಡಿ, ನಂತರ ದೇವಸ್ಥಾನ ತೆರೆಯಲು ಸರಕಾರ ಅನುಮತಿ ನೀಡಿದ್ದಕ್ಕೂ ಶ್ರೀಗಳು ಅಸಮಾಧಾನ ವ್ಯಕ್ತ ಪಡಿಸಿದ್ದರು.

ಶ್ರೀಗಳು ನುಡಿದ ಭವಿಷ್ಯದ ಪ್ರಕಾರ, ಕೊರೊನಾ ವಿಚಾರದಲ್ಲಿ ಸಾರ್ವಜನಿಕರು ಅತ್ಯಂತ ಜಾಗರೂಕತೆಯಿಂದ ಇರಬೇಕಾಗಿರುವ ತಿಂಗಳು ಬಂದೇ ಬಿಟ್ಟಿದೆ. ಆದರೆ, ಸಾರ್ವಜನಿಕರು ಇವರ ಎಚ್ಚರಿಕೆಯನ್ನು ಪಾಲಿಸುತ್ತಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ.

ಟ್ರಂಪ್ ಮತ್ತೆ ಅಧ್ಯಕ್ಷರಾಗೋದು ಗ್ಯಾರಂಟಿ..? ನಾಸ್ಟ್ರಡಾಮಸ್ ಕೂಡ ಇದನ್ನೇ ಹೇಳಿದ್ದನಾ..? ಟ್ರಂಪ್ ಮತ್ತೆ ಅಧ್ಯಕ್ಷರಾಗೋದು ಗ್ಯಾರಂಟಿ..? ನಾಸ್ಟ್ರಡಾಮಸ್ ಕೂಡ ಇದನ್ನೇ ಹೇಳಿದ್ದನಾ..?

ಒಂದೇ ಒಂದು ವ್ಯತ್ಯಾಸವೆಂದರೆ ಜನರು ಮಾಸ್ಕ್ ಧರಿಸಿರುವುದು ಅಷ್ಟೇ

ಒಂದೇ ಒಂದು ವ್ಯತ್ಯಾಸವೆಂದರೆ ಜನರು ಮಾಸ್ಕ್ ಧರಿಸಿರುವುದು ಅಷ್ಟೇ

ಕೊರೊನಾ ಹಾವಳಿಯ ನಡುವೆಯೂ ಜನರು ನವರಾತ್ರಿ ಸಂಭ್ರಮದಲ್ಲಿದ್ದಾರೆ. ಎಲ್ಲೆಲ್ಲೂ ಆಯುಧಪೂಜೆಯ ಗೌಜಿಗದ್ದಲ. ಬೆಂಗಳೂರು ಸೇರಿದಂತೆ, ರಾಜ್ಯದ ಪ್ರಮುಖ ನಗರ, ಪಟ್ಟಣಗಳ ಮಾರುಕಟ್ಟೆಯಲ್ಲಿ ಜನಸಂದಣಿ ನೋಡಿದರೆ, ಕೊರೊನಾ ಎನ್ನುವುದು ಇದೆಯಾ ಎನ್ನುವಷ್ಟರ ಮಟ್ಟಿಗೆ ಎಲ್ಲೆಲ್ಲೂ ಜನ..ಜನ..ಜನ. ಕಳೆದ ವರ್ಷಕ್ಕೆ ಹೋಲಿಸಿದರೆ, ಒಂದೇ ಒಂದು ವ್ಯತ್ಯಾಸವೆಂದರೆ ಜನರು ಮಾಸ್ಕ್ ಧರಿಸಿರುವುದು ಅಷ್ಟೇ. (ಸಾಂದರ್ಭಿಕ ಚಿತ್ರ)

ಕಲಬುರಗಿ, ವಿಜಯಪುರ ಮುಂತಾದ ಕಡೆ ಸುರಿದ ಬೀಭತ್ಸ ಮಳೆ

ಕಲಬುರಗಿ, ವಿಜಯಪುರ ಮುಂತಾದ ಕಡೆ ಸುರಿದ ಬೀಭತ್ಸ ಮಳೆ

ಕೆಲವು ತಿಂಗಳ ಹಿಂದೆಯೇ ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯದ ಪ್ರಕಾರ, ನಾಡಿನ ಕೆಲವು ಭಾಗದಲ್ಲಿ ಅತಿವೃಷ್ಟಿಯಾಗಲಿದೆ ಎಂದು. ಅದರಂತೆಯೇ, ಕಲಬುರಗಿ, ವಿಜಯಪುರ ಮುಂತಾದ ಕಡೆ ಸುರಿದ ಬೀಭತ್ಸ ಮಳೆ, ಜನರ ಜೀವನವನ್ನು ನರಕಸದೃಶವನ್ನಾಗಿ ಮಾಡಿತ್ತು. ಕಂಡು ಕೇಳರಿಯದ ಮಳೆಗೆ ಜನರ ಜೀವನ ಮೂರಾಬಟ್ಟೆಯಾಗಿತ್ತು.

ಆಶ್ವೀಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ ಹೆಚ್ಚಾಗಲಿದೆ

ಆಶ್ವೀಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ ಹೆಚ್ಚಾಗಲಿದೆ

ಶ್ರಾವಣ ಮಾಸಾರಂಭದಲ್ಲಿ ಮತ್ತೆ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು. "ಆಶ್ವೀಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ ಹೆಚ್ಚಾಗಲಿದೆ. ಹಳ್ಳಿಹಳ್ಳಿಗಳಲ್ಲೂ ಕೊರೊನಾ ಸೋಂಕು ಹರಡಲಿದೆ. ಜನರು ಎಚ್ಚರಿಕೆಯಿಂದ ಇರಬೇಕು, ಸರಕಾರದ ಮಾರ್ಗಸೂಚಿ ಪಾಲಿಸುವುದನ್ನು ಜನರು ಮರೆಯಬಾರದು"ಎಂದು ಭವಿಷ್ಯ ನುಡಿದಿದ್ದರು.

ಆಶ್ವೀಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ

ಆಶ್ವೀಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ

"ಹಳ್ಳಿಗಳಲ್ಲಿನ ಜನರು ಎಚ್ಚರದಿಂದ ಇರಬೇಕು. ಜನರು ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಜನರು ಸ್ವಚ್ಛತೆ, ಸಾಮಾಜಿಕ ಅಂತರದ ಕಡೆ ಗಮನ ಕೊಡಬೇಕು. ಇನ್ನೂ ಕೆಲ ತಿಂಗಳು ಕೊರೊನಾ ಅಟ್ಟಹಾಸ ಇರಲಿದೆ" ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದರು.

  ಎಲ್ಲರೂ BJPಗೆ ಸೇರೋದು ಪಕ್ಕ!! | Oneindia Kannada
  ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು

  ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು

  ಶ್ರೀಗಳು ನುಡಿದಿರುವ ಆಶ್ವೀಜ, ಕಾರ್ತಿಕ ಮಾಸಗಳಲ್ಲಿ ನಾವಿದ್ದೇವೆ. ಜನರು ದಸರಾ ಸಂಭ್ರಮದಲ್ಲಿದ್ದಾರೆ. ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿ ಹಬ್ಬ, ಹತ್ತು ಹಲವು ಜಾತ್ರೆಗಳು ಇನ್ನಷ್ಟೇ ಬರಬೇಕಿದೆ. ಈ ವೇಳೆ ಜನರು ಮೈಮೆರೆಯಬಾರದು ಎನ್ನುವ ಮಾತನ್ನೇ ಶ್ರೀಗಳು ತಿಂಗಳ ಹಿಂದೆ ನುಡಿದಿದ್ದು. ಇನ್ನು, ಕೊರೊನಾ ವಿಚಾರದಲ್ಲಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸುವುದು ಸಾರ್ವಜನಿಕರಿಗೆ ಅತಿಮುಖ್ಯ.

  English summary
  Coronavirus Spreading Alert In October And Novermber, Should Be Careful: Prediction By Kodimutt Seer,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X