• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ದೇಶ ಸಂಪೂರ್ಣ ನಾಶ: ಕೋಡಿಶ್ರೀಗಳು ನುಡಿದ 'ಭೀಕರ' ಯುಗಾದಿ ಭವಿಷ್ಯ!

|

ಇಡೀ ವಿಶ್ವಕ್ಕೆ ಮಾರಣಾಂತಿಕ ಕೊರೊನಾ ವೈರಸ್ ಮಹಾಮಾರಿಯಾಗಿ ಕಾಡುತ್ತಿದೆ. ಕೋವಿಡ್-19 ಇಲ್ಲಿಯವರೆಗೂ 74,767 ಮಂದಿಯನ್ನು ಬಲಿ ಪಡೆದಿದೆ. ಅಮೇರಿಕಾ, ಸ್ಪೇನ್, ಇಟಲಿ, ಫ್ರಾನ್ಸ್, ಯುಕೆನಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಿದೆ. ಭಾರತದಲ್ಲೂ ಕೊರೊನಾ ಸೋಂಕಿತ ಪ್ರಕರಣಗಳು ಗಣನೀಯವಾಗಿ ಏರುತ್ತಲೇ ಇದೆ.

   ಇನ್ನೂ ಅಬ್ಬರಿಸಲಿದೆ ಕೊರೊನಾ!!ಕೋಡಿ ಶ್ರೀಗಳು ಕೊರೊನಾ ಬಗ್ಗೆ ನುಡಿದ ಭವಿಷ್ಯ ಇಲ್ಲಿದೆ

   ಜಗತ್ತಿಗೆ ದೊಡ್ಡ ಪೀಡೆಯಾಗಿ ಕಾಡುತ್ತಿರುವ ಕೊರೊನಾ ವೈರಸ್ ನ ಕಟ್ಟಿಹಾಕಲು ಸಮರೋಪಾದಿಯ ಕಾರ್ಯಗಳು ಚಾಲ್ತಿಯಲ್ಲಿರುವಾಗಲೇ, ಅರಸೀಕೆರೆಯ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಮುಂಬರುವ ದಿನಗಳ ಬಗ್ಗೆ ಭಯ ಭೀಕರ ಭವಿಷ್ಯ ನುಡಿದಿದ್ದಾರೆ.

   ಮಾರಣಾಂತಿಕ ಕೊರೊನಾ ವೈರಸ್: ಕೋಡಿಶ್ರೀಗಳ ಬಹುನಿರೀಕ್ಷಿತ ಭವಿಷ್ಯ

   ಈ ವರ್ಷದ ಯುಗಾದಿ ಭವಿಷ್ಯವನ್ನು ನುಡಿದಿರುವ ಕೋಡಿಶ್ರೀಗಳು, ''ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ'' ಎಂದಿದ್ದಾರೆ. ಅದು ಯಾವ ದೇಶ ಎಂಬುದನ್ನು ಸ್ಪಷ್ಟವಾಗಿ ಹೇಳದ ಕೋಡಿಶ್ರೀಗಳು, ''ಭಾರತ ದೇಶಕ್ಕೆ ಅಪಾಯವಿಲ್ಲ'' ಎಂದು ತಿಳಿಸಿದ್ದಾರೆ.

   ''ಕೊರೊನಾ ವೈರಸ್ ಗೆ ಮದ್ದು ಸಿಗಲಿದೆ'' ಅಂತ ಹೇಳಿರುವ ಕೋಡಿಶ್ರೀಗಳು, ''ಕೊರೊನಾ ಮೇ ತಿಂಗಳಲ್ಲಿ ನಿರ್ನಾಮವಾಗಲಿದೆ. ಸ್ವಲ್ಪ ಎಚ್ಚರ ತಪ್ಪಿದರೂ ವರ್ಷಪೂರ್ತಿ ಇರಲಿದೆ'' ಎಂದಿದ್ದಾರೆ.

   ಕೊರೊನಾ ವೈರಸ್ : ನಿಜವಾದ ಕೋಡಿಮಠದ ಶ್ರೀಗಳ ಭವಿಷ್ಯ

   ಕೋಡಿಶ್ರೀಗಳು ನುಡಿದಿರುವ ಬಹು ನಿರೀಕ್ಷಿತ ಯುಗಾದಿ ಭವಿಷ್ಯ ಇಲ್ಲಿದೆ. ಓದಿರಿ...

   ಕೊರೊನಾ ವ್ಯಾಧಿ ಉಲ್ಬಣವಾಗುವ ಲಕ್ಷಣ

   ಕೊರೊನಾ ವ್ಯಾಧಿ ಉಲ್ಬಣವಾಗುವ ಲಕ್ಷಣ

   ''ಜಗತ್ತಿನಾದ್ಯಂತ ಕೊರೊನಾ ವ್ಯಾಧಿ ಇನ್ನೂ ಉಲ್ಬಣವಾಗುವ ಲಕ್ಷಣವಿದೆ. ಈ ವ್ಯಾಧಿ ದಿನೇ ದಿನೇ ಹೆಚ್ಚುತ್ತಾ ಮನುಷ್ಯರ ಪ್ರಾಣದ ಜೊತೆ ತಾಂಡವವಾಡುತ್ತೆ. ಗಿಡ, ಮರ, ಪ್ರಾಣಿಗಳಿಗೂ ಈ ವ್ಯಾಧಿ ಘೋರವಾಗಿ ಅಪ್ಪಳಿಸಲಿದೆ. ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ'' ಎಂದು ಭವಿಷ್ಯ ನುಡಿದಿದ್ದಾರೆ ಕೋಡಿಶ್ರೀಗಳು.

   ಮೇ ತಿಂಗಳಲ್ಲಿ ಕೊರೊನಾ ನಿರ್ನಾಮ

   ಮೇ ತಿಂಗಳಲ್ಲಿ ಕೊರೊನಾ ನಿರ್ನಾಮ

   ''ಈ ರೋಗಕ್ಕೆ ಮದ್ದು ಸಿಗಲಿದೆ. ಕೊರೊನಾ ಮೇ ತಿಂಗಳಲ್ಲಿ ನಿರ್ನಾಮವಾಗಲಿದೆ. ಸ್ವಲ್ಪ ಎಚ್ಚರ ತಪ್ಪಿದರೂ ವರ್ಷಪೂರ್ತಿ ಇರಲಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಆಳರಸರಿಗೆ ತೊಂದರೆಯಿಲ್ಲ. ಅರಸನೇ ತಾನೇ ಶಸ್ತ್ರಾಸ್ತ್ರ ತ್ಯಾಗ ಮಾಡಿದರೆ ಕೇಂದ್ರಕ್ಕೆ ಹೋಗುವ ಅವಕಾಶ ಇದೆ'' ಎಂದಿದ್ದಾರೆ ಕೋಡಿಶ್ರೀಗಳು.

   ಭಾರತಕ್ಕೆ ಅಪಾಯವಿಲ್ಲ.!

   ಭಾರತಕ್ಕೆ ಅಪಾಯವಿಲ್ಲ.!

   ''ಭಾರತ ಧರ್ಮ ಭೂಮಿಯಾಗಿದ್ದು, ಈ ವ್ಯಾಧಿ ಜಗತ್ತಿಗೆ ಮುತ್ತಿಗೆ ಹಾಕಿ ಕೊಲ್ಲುತ್ತಾ ಹೋದರೂ, ಭಾರತ ದೇಶಕ್ಕೆ ಅಪಾಯವಿಲ್ಲ. ಭಾರತೀಯರು ಹದರಬೇಕಾಗಿಲ್ಲ.‌ ಅವರವರು ಅವರವರ ಇಷ್ಟ ದೇವರ ಪ್ರಾರ್ಥನೆ ಸಲ್ಲಿಸಬೇಕು. ಭಾರತದಲ್ಲಿ ರೋಗ ಎಷ್ಟೇ ಎತ್ತರಕ್ಕೆ ಹೋದರೂ, ಈ ಭೂಮಿಯ ಪುಣ್ಯ ಫಲದಿಂದ ತನ್ನನ್ನು ತಾನೇ ಕಳೆದುಕೊಳ್ಳುತ್ತೆ'' ಅಂತ ಕೋಡಿಶ್ರೀಗಳು ತಿಳಿಸಿದ್ದಾರೆ.

   ಪ್ರಕೃತಿಯಿಂದಲೇ ಔಷಧ

   ಪ್ರಕೃತಿಯಿಂದಲೇ ಔಷಧ

   ''ಅಕ್ಷಯ ನಾಮ ತೃತೀಯವರೆಗೂ ಅಬ್ಬರಿಸುತ್ತಾ, ಮೇ ತಿಂಗಳ ಅಂತ್ಯದ ವೇಳೆಗೆ ಒಂದು ಅವಸ್ಥೆಗೆ ತಲುಪುತ್ತೆ. ಜನ ಭಯ ಬೀಳುವ ಅವಶ್ಯಕತೆಯಿಲ್ಲ. ಪ್ರಕೃತಿ ಕೊಟ್ಟಿರುವ ರೋಗಕ್ಕೆ ಪ್ರಕೃತಿಯಿಂದಲೇ ಔಷಧಿ ದೊರೆಯಲಿದೆ'' ಎಂದು ಕೋಡಿಶ್ರೀಗಳು ಹೇಳಿದ್ದಾರೆ.

   ಹೊಸ ಶಾಸನ ಬರುವ ನಿರೀಕ್ಷೆ

   ಹೊಸ ಶಾಸನ ಬರುವ ನಿರೀಕ್ಷೆ

   ''ಹೊಸ ಶಾಸನ ಬರುವ ನಿರೀಕ್ಷೆಯಿದೆ. ಬರುವ ಶಾಸನಗಳನ್ನು ಅರಸ ಅರಿತು ಮಾಡಿದರೆ ಒಳಿತು. ಅತೃಪ್ತ ಪ್ರಜೆಗಳು ಅರಸನ ವಿರುದ್ಧ ಧಂಗೆ ಏಳಬಹುದು. ಅರಸು ಪಟ್ಟಕ್ಕೂ ಭಂಗವಾಗುವ ಲಕ್ಷಣವಿದೆ. ಶಾಸನಗಳು ಮಾರಕ, ಪೂರಕವಾಗಲಿವೆ'' - ಕೋಡಿಶ್ರೀಗಳು

   ಸಂವತ್ಸರ ಪರ್ಯಂತ ರೋಗ

   ಸಂವತ್ಸರ ಪರ್ಯಂತ ರೋಗ

   ''ಈ ಸಂವತ್ಸರ ಪರ್ಯಂತ ರೋಗ ಇರಲಿದ್ದು, ಜಗತ್ತಿಗೆ ಪೀಡೆಯಾಗಲಿದೆ. ಈ ರೋಗದಿಂದ ಅನೇಕ ಅರಸರು ನಿಯಂತ್ರಣ ಮಾಡಲಾಗದೆ, ಪ್ರಜೆಗಳ ನಿಯಂತ್ರಣ ಮಾಡಲಾಗದೆ ಪಟ್ಟ ಕಳೆದುಕೊಳ್ಳುವ ಲಕ್ಷಣವಿದೆ. ಈ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಪ್ರಜೆಗಳು ಅವಶ್ಯಕವಾಗಿ ಹೊಂದಿಕೊಂಡು, ಸರ್ಕಾರದ ಜೊತೆ ಕೈಜೋಡಿಸಬೇಕು. ಇಲ್ಲವಾದರೆ ಸಾವಿಗೆ ತಾವೇ ಆಹ್ವಾನ ಕೊಟ್ಟಂತೆ ಆಗುತ್ತದೆ'' - ಕೋಡಿಶ್ರೀಗಳು

   ನಾಡಿನ ಅರಸನಿಗೆ ಭಂಗವಿಲ್ಲ

   ನಾಡಿನ ಅರಸನಿಗೆ ಭಂಗವಿಲ್ಲ

   ''ಈ ನಾಡಿನ ಅರಸನಿಗೆ ಯಾವುದೇ ಭಂಗವಿಲ್ಲ. ಈಗಿನ ದೊರೆ ವಾಸಕ್ಕೆ ಹೋಗಿರುವ ಮನೆ ಬಗ್ಗೆ ಮರು ಪರಿಶೀಲನೆ ಮಾಡಿದರೆ ಒಳ್ಳೆಯದು. ಅದರಿಂದ ಮುಂದೆ ಸುಖ, ದುಃಖ ಮಿಶ್ರವಾಗಿ ಬಂದರೂ ದೊರೆಗೆ ಕಂಟಕವಾಗಲಿದೆ.'' - ಕೋಡಿಶ್ರೀಗಳು

   ಪಂಚಭೂತಗಳಿಂದಲೂ ತೊಂದರೆ

   ಪಂಚಭೂತಗಳಿಂದಲೂ ತೊಂದರೆ

   ''ಮಳೆ ವಿಚಾರದಲ್ಲಿ ಭೂಮಿಯೆಲ್ಲ ಒದ್ದೆಯಾದೀತು. ಕೆಲವೆಡೆ ವೃಷ್ಟಿ ಅನಾವೃಷ್ಟಿ ಆಗಲಿದೆ. ಪಂಚಭೂತಗಳಿಂದಲೂ ಈ ಬಾರಿ ತೊಂದರೆಯಾಗಲಿದೆ. ಭೂಮಿ ಕಂಪನವಾಗಿ ಇಬ್ಭಾಗವಾಗಲಿದೆ. ಸಮುದ್ರ ಒಡಲನ್ನು ಬಿಚ್ಚಲಿದೆ. ಮಳೆ ಬೆಳೆ ಬಂದು ಹೆಚ್ಚು ಫಸಲು ಬಂದರೂ, ಅದಕ್ಕೆ ರೋಗ ಕಾಡಲಿದೆ. ಕೆಲವು ನದಿಗಳು ಉಕ್ಕಿ ಹರಿದರೆ ಕೆಲವು ನದಿಗಳು ಬರಡಾಗುತ್ತವೆ. ಬಹುಪಾಲು ಜಲಪ್ರಳಯವಾಗುವ ಲಕ್ಷಣವಿದೆ'' - ಕೋಡಿಶ್ರೀಗಳು

   ಬೆಂಕಿ ನಾಲಿಗೆ ಚಾಚಲಿದೆ

   ಬೆಂಕಿ ನಾಲಿಗೆ ಚಾಚಲಿದೆ

   ''ಆಶ್ವೀಜದಿಂದ ಕಾರ್ತೀಕದವರೆಗೆ ಹಳ್ಳಿಗಳಲ್ಲಿ ಭಂಗವಾಗಲಿದೆ. ಗ್ರಾಮೀಣ ಪ್ರದೇಶಗಳು ತಲ್ಲಣಗೊಂಡಾವು. ಮಳೆಯ ಲಕ್ಷಣ ಇದ್ದರೂ ಅದೂ ಕೂಡ ಆಪತ್ತಾಗಲಿದೆ. ಬೆಂಕಿ ನಾಲಿಗೆ ಚಾಚಲಿದೆ. ಭೂಮಿಯಲ್ಲಿ ದೈವ ಸಾಕ್ಷಾತ್ಕಾರದಿಂದ ಹೇಳುವಂತಹ ಅಪಾಯವಿಲ್ಲ. ದೊಡ್ಡ ದೊಡ್ಡ ನಗರಗಳಿಗೆ ತೊಂದರೆ ಇದೆ'' - ಕೋಡಿಶ್ರೀಗಳು

   ಮನೆಯಲ್ಲಿ ಮಾವು-ಬೇವು ಇರಲಿ

   ಮನೆಯಲ್ಲಿ ಮಾವು-ಬೇವು ಇರಲಿ

   ''ಮನೆಯಲ್ಲಿ ಮಾವು, ಬೇವು, ಬೇಟೆ ಸೊಪ್ಪು ಇಡಬೇಕು. ರಾತ್ರಿ ಮಲಗುವಾಗ ಬಿಲ್ವಪತ್ರೆ ತಲೆಗೆ ಸುತ್ತಿ ಮಲಗಬೇಕು. ಗೃಹದಲ್ಲಿ ನಿತ್ಯ ದೀಪ ಉರಿಸಬೇಕು'' ಎಂದು ತಿಳಿಸಿದ್ದಾರೆ ಕೋಡಿಶ್ರೀಗಳು

   English summary
   Coronavirus Outbreak in India: Most Awaited Kodimutt Seer Ugadi Prediction is here.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more