ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹಾವಳಿ ತೀವ್ರಗೊಳ್ಳುವ ಸಮಯ: ಕೋಡಿಶ್ರೀಗಳು ನುಡಿದ ಭವಿಷ್ಯದ ದಿನ ಮುಂದೆ ಬರುತ್ತಿದೆ

|
Google Oneindia Kannada News

ಒಂದೆಡೆ ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ಹೆಚ್ಚಾಗುತ್ತಿದ್ದರೆ, ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡಾ ಅಷ್ಟೇ ಏರಿಕೆಯಾಗುತ್ತಿದೆ. ಇನ್ನು, ಮರಣ ಪ್ರಮಾಣ ವಿಶ್ವದಲ್ಲೇ ಕಮ್ಮಿ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

Recommended Video

Corona ಅಂಕಿ ಅಂಶಗಳಲ್ಲಿ ಕಂಡ ಏಕೈಕ ಪಾಸಿಟಿವ್ ಸುದ್ದಿ | Oneindia Kannada

ಕೊರೊನಾ ವಿಚಾರದಲ್ಲಿ ಹಲವು ಜ್ಯೋತಿಷಿಗಳು ಭವಿಷ್ಯವನ್ನು ನುಡಿದಿದ್ದರು. ಅದರಲ್ಲಿ, ಕೆಲವರು ಮೇ ತಿಂಗಳಲ್ಲಿ ಕೊರೊನಾ ಬಿಟ್ಟು ಓಡಿ ಹೋಗಲಿದೆ ಎಂದು ಹೇಳಿದ್ದರು. ಆದರೆ, ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದಂತೂ ಹೌದು.

ಆಶ್ಲೇಷಾ, ಮೂಲಾ, ವಿಶಾಖ, ಜ್ಯೇಷ್ಠ ನಕ್ಷತ್ರದಲ್ಲಿ ಹುಟ್ಟಿದವರು ದುರದೃಷ್ಟವಂತರೆ?ಆಶ್ಲೇಷಾ, ಮೂಲಾ, ವಿಶಾಖ, ಜ್ಯೇಷ್ಠ ನಕ್ಷತ್ರದಲ್ಲಿ ಹುಟ್ಟಿದವರು ದುರದೃಷ್ಟವಂತರೆ?

"ಮೇ 29ರ ನಂತರ ಕೊರೊನಾ ವೈರಾಣುವಿನ ತೀವ್ರತೆ ಕಮ್ಮಿಯಾಗುತ್ತಾ ಬರುತ್ತದೆ. ಈ ಅವಧಿಯಲ್ಲಿ ಕಾಳಸರ್ಪಯೋಗವೂ ಬರುವುದರಿಂದ, ಕೊರೊನಾ ಪ್ರಭಾವ ಕಮ್ಮಿಯಾಗುತ್ತಾ ಬರುತ್ತದೆ"ಎಂದು ಬಾಲ ಜ್ಯೋತಿಷಿ ಎಂದು ಪ್ರಸಿದ್ದಿ ಪಡೆದಿರುವ ಅಭಿಗ್ಯಾ ಆನಂದ್ ಹೇಳಿದ್ದರು. ಅದೂ ಸುಳ್ಳಾಗಿದೆ..

ಈ ನಡುವೆ, ರಾಜಕೀಯ ಮತ್ತು ಪ್ರಾಕೃತಿಕ ವಿಕೋಪ ಮುಂತಾದವುಗಳ ಬಗ್ಗೆ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳು, ಕೊರೊನಾ ಬಗ್ಗೆ ಭವಿಷ್ಯವನ್ನು ನುಡಿದಿದ್ದರು. ಅವರು ತಮ್ಮ ಭವಿಷ್ಯದಲ್ಲಿ ಹೇಳಿದಂತೆ, ಕೊರೊನಾ ಸೋಂಕು ಗರಿಷ್ಠ ಮಟ್ಟ ಏರುವ ಸಮಯ ಇನ್ನು ಮುಂದೆಯಷ್ಟೇ ಬರಬೇಕಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವನಾನಂದ ಶಿವಯೋಗಿ ರಾಜೇಂದ ಶ್ರೀಗಳು

ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವನಾನಂದ ಶಿವಯೋಗಿ ರಾಜೇಂದ ಶ್ರೀಗಳು

"ಹಳ್ಳಿಗಳ ಜನರು ಎಚ್ಚರದಿಂದ ಇರಬೇಕು. ಜನರು ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಜನರು ಸ್ವಚ್ಛತೆ, ಸಾಮಾಜಿಕ ಅಂತರದ ಕಡೆ ಗಮನ ಕೊಡಬೇಕು. ಇನ್ನೂ ಕೆಲ ತಿಂಗಳು ಕೊರೊನಾ ಅಟ್ಟಹಾಸ ಇರಲಿದೆ" ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದರು.

ಅಶ್ವಯುಜ, ಕಾರ್ತಿಕ ಮಾಸ

ಅಶ್ವಯುಜ, ಕಾರ್ತಿಕ ಮಾಸ

"ಅಶ್ವಯುಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ ಹೆಚ್ಚಾಗಲಿದೆ. ಈ ವೈರಸ್ ಗಾಳಿಯಲ್ಲಿ ಸಂಚಾರ ಮಾಡೋದು ಕಡಿಮೆ. ಹೀಗಾಗಿ ಜನರು ಸುರಕ್ಷತೆ ಕಾಪಾಡಿಕೊಂಡರೆ ಕೊರೊನಾದಿಂದ ಪಾರಾಗಬಹುದು" ಎಂದು ಕೋಡಿ ಶ್ರೀಗಳು ಹೇಳಿದ್ದರು. ಹಾಗಿದ್ದರೆ, ಅಶ್ವಯುಜ, ಕಾರ್ತಿಕ ಮಾಸ ಮುಗಿಯುವುದು ಯಾವಾಗ?

ಮಹಾಲಯ ಅಮಾವಾಸ್ಯೆ

ಮಹಾಲಯ ಅಮಾವಾಸ್ಯೆ

ಸೆ.17ರಂದು ಮಹಾಲಯ ಅಮಾವಾಸ್ಯೆಯ ನಂತರ ಅಶ್ವಯುಜ ಮಾಸ ಆರಂಭವಾಗಲಿದೆ. ಇದು, ಅಕ್ಟೋಬರ್ ಹದಿನಾರರ ವರೆಗೆ ಇರಲಿದೆ. ಆದರೆ, ಈ ಬಾರಿ ಅಧಿಕ ಮಾಸ ಬಂದಿರುವುದರಿಂದ ಅಶ್ವಯುಜ ಮಾಸ, ದೀಪಾವಳಿ ಅಮಾವಾಸ್ಯೆಯ ದಿನವಾದ ನವೆಂಬರ್ 15ರವರೆಗೆ ಇರಲಿದೆ.

ಬಲಿಪಾಡ್ಯಮಿಯ ದಿನದ ನಂತರ ಕಾರ್ತಿಕ ಮಾಸ

ಬಲಿಪಾಡ್ಯಮಿಯ ದಿನದ ನಂತರ ಕಾರ್ತಿಕ ಮಾಸ

ನವೆಂಬರ್ 16, ಬಲಿಪಾಡ್ಯಮಿಯ ದಿನದ ನಂತರ ಕಾರ್ತಿಕ ಮಾಸ ಆರಂಭವಾಗಲಿದೆ. ಅಲ್ಲಿಂದ ಒಂದು ತಿಂಗಳು, ಅಂದರೆ, ಕಾರ್ತಿಕ ಮಾಸ ಮುಗಿದು, ಮಾರ್ಗಶಿರ ಮಾಸ ಆರಂಭವಾಗುವುದು ಡಿಸೆಂಬರ್ 15ಕ್ಕೆ. ಹಾಗಾಗಿ, ಈ ಅವಧಿಯ ವರೆಗೆ ಕೋಡಿ ಶ್ರೀಗಳು ಹೇಳಿದ ಹಾಗೆ, ಕೊರೊನಾ ಗರಿಷ್ಠ ಮಟ್ಟಕ್ಕೆ ಹೋಗಬಹುದು.

English summary
Corona: As Per Kodimutt Seer Prediction Virus Will Be In Peak Stage Till Mid Of December,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X