ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಸಮಯದಲ್ಲಿ ಹುಟ್ಟಿದವರ ಗುಣ ಹೇಗೆ? ಯಾವ ಉದ್ಯೋಗ-ವೃತ್ತಿ ಸೂಕ್ತ?

By ಅನಿಲ್ ಆಚಾರ್
|
Google Oneindia Kannada News

ನೀವು ಹುಟ್ಟಿದ ಸಮಯ ಯಾವುದು? ಹಗಲೋ-ರಾತ್ರಿಯೋ? ನೀವು ಯಾವ ರೀತಿಯ ಉದ್ಯೋಗ ಅಥವಾ ವೃತ್ತಿ ಅಥವಾ ಉದ್ಯಮಕ್ಕೆ ಹೊಂದಿಕೊಳ್ತೀರಿ ಗೊತ್ತೆ? ಅದರಲ್ಲೂ ನಿಮ್ಮ ಜನ್ಮ ದಿನಾಂಕದ ಜತೆಗೆ ಹುಟ್ಟಿದ ಸಮಯದ ಬಗ್ಗೆ ನಿಖರವಾದ ಮಾಹಿತಿ ಇದ್ದರೆ ಇಲ್ಲಿರುವ ಮಾಹಿತಿ ಸೋಜಿಗ ಹುಟ್ಟಿಸುತ್ತದೆ.

ನಿಮ್ಮ ಮಕ್ಕಳು, ಸಂಬಂಧಿಕರು, ಸ್ನೇಹಿತರು ಮಕ್ಕಳು ಯಾರೇ ಇರಲಿ, ಅವರ ಸಮಯ ತಿಳಿದುಕೊಂಡು, ಇಲ್ಲಿರುವ ಮಾಹಿತಿ ಮೂಲಕ ಕೆಲವು ಸಲಹೆಗಳನ್ನು ಕೂಡ ನೀವು ಅವರಿಗೆ ನೀಡಬಹುದು. ಸಣ್ಣ ವಯಸ್ಸಿನಿಂದ ಸರಿಪಡಿಸಲಾಗದೆ ಉಳಿದು ಹೋದ ಗುಣದೋಷಗಳ ನಿವಾರಣೆ ಕೂಡ ಮಾಡಬಹುದು.

ಜನ್ಮದಿನಾಂಕದ ಪ್ರಕಾರ ನಿಮ್ಮ ಗುಣ-ಸ್ವಭಾವ ಹೇಗೆ?ಜನ್ಮದಿನಾಂಕದ ಪ್ರಕಾರ ನಿಮ್ಮ ಗುಣ-ಸ್ವಭಾವ ಹೇಗೆ?

ಜ್ಯೋತಿಷ್ಯ ಎಂಬುದು ಅಗಾಧವಾದ ಸಮುದ್ರ. ಮೇಲ್ನೋಟಕ್ಕೆ ಕಾಣುವುದು ಬೇರೆ. ಆಳದಲ್ಲಿ ಇಳಿದಾಗ ಸಿಗುವ ಅದ್ಭುತಗಳೇ ಬೇರೆ. ಇಲ್ಲಿರುವುದು ಅಂಥ ಅದ್ಭುತಗಳಲ್ಲಿ ಒಂದು. ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ಯಾವ ಸಮಯದಲ್ಲಿ ಹುಟ್ಟಿದ ಮಕ್ಕಳು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಓದಿ, ತಿಳಿದುಕೊಳ್ಳಿ. ಜತೆಗೆ ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ.

ಬೆಳಗಿನ ಜಾವ 4ರಿಂದ 6ರ ಒಳಗೆ

ಬೆಳಗಿನ ಜಾವ 4ರಿಂದ 6ರ ಒಳಗೆ

ಈ ಸಮಯದಲ್ಲಿ ಹುಟ್ಟಿದವರಿಗೆ ಅವರ ಜನ್ಮ ಕುಂಡಲಿಯ ಮೊದಲ ಮನೆಯಲ್ಲೇ ಶಾಶ್ವತವಾಗಿ ರವಿ ಇರುತ್ತಾನೆ. ಆಗಾಗ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇವರ ಆತ್ಮವಿಶ್ವಾಸ ವಿಪರೀತ ಹೆಚ್ಚಾಗಿರುತ್ತದೆ. ಈ ಗುಣವೇ ಇತರರಲ್ಲಿ ದ್ವೇಷ ಮೂಡಿಸುತ್ತದೆ. ಇವರ ಆತ್ಮವಿಶ್ವಾಸ ಅದಮ್ಯವಾದದ್ದು. ತಾವು ಜವಾಬ್ದಾರಿ ತೆಗೆದುಕೊಳ್ಳುವ ಯಾವುದೇ ವಿಷಯದಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುತ್ತಾರೆ. ಭವಿಷ್ಯ ಬಹಳ ಉಜ್ವಲ ಆಗಿರುತ್ತದೆ. ಯಶಸ್ಸು ಸಿಗುವುದು ಸ್ವಲ್ಪ ಮಟ್ಟಿಗೆ ನಿಧಾನ ಆಗಬಹುದು. ಆದರೆ ಶ್ರಮ ಎಂದೂ ಹುಸಿ ಹೋಗುವುದಿಲ್ಲ. ಶ್ರಮಕ್ಕೆ ತಕ್ಕ ಯಶಸ್ಸು ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತದೆ.

ಬೆಳಗ್ಗೆ 6ರಿಂದ ಬೆಳಗ್ಗೆ 8ರೊಳಗೆ

ಬೆಳಗ್ಗೆ 6ರಿಂದ ಬೆಳಗ್ಗೆ 8ರೊಳಗೆ

ಈ ಅವಧಿಯಲ್ಲಿ ಜನಿಸಿದವರ ಕುಂಡಲಿಯಲ್ಲಿ ರವಿ ಹನ್ನೆರಡನೇ ಸ್ಥಾನದಲ್ಲಿ ಇರುತ್ತಾನೆ. ಇಂಥವರ ಬದುಕಿನಲ್ಲಿ ತೀರಾ ನಿಗೂಢ ಎನಿಸುವಂಥ ಘಟನೆಗಳು ಸಂಭವಿಸುತ್ತವೆ. ನೀವು ನಿರೀಕ್ಷೆ ಕೂಡ ಮಾಡದ ಘಟನೆಗಳು ಏಕಾಏಕಿ ಕಕ್ಕಾಬಿಕ್ಕಿ ಆಗುವಂತೆ ಮಾಡುತ್ತವೆ. ಅದರ ಫಲಿತಾಂಶ ಕೂಡ ತೀರಾ ಭಿನ್ನವಾಗಿರುತ್ತದೆ. ಇವರು ಯಾವಾಗಲೂ ಮನಸ್ಸನ್ನು ಸಮಾಧಾನವಾಗಿ ಇರಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಸದಾ ಚಟುವಟಿಕೆಯಿಂದ ಇರಲೇಬೇಕು. ಯಾವುದೇ ಕಾರಣಕ್ಕೂ ಸೋಮಾರಿತನ ಮಾಡಬಾರದು. ಬಿಂದಾಸ್ ಆಗಿ ಖರ್ಚು ಮಾಡುವ ಗುಣ ಒಳ್ಳೆಯದಲ್ಲ. ಉಳಿತಾಯದ ಕಡೆಗೂ ಗಮನ ನೀಡಬೇಕು.

ಬೆಳಗ್ಗೆ 8ರಿಂದ ಬೆಳಗ್ಗೆ 10ರೊಳಗೆ

ಬೆಳಗ್ಗೆ 8ರಿಂದ ಬೆಳಗ್ಗೆ 10ರೊಳಗೆ

ಈ ಸಮಯದಲ್ಲಿ ಜನಿಸಿದವರ ಜನ್ಮ ಕುಂಡಲಿಯಲ್ಲಿ ಶಾಶ್ವತವಾಗಿ ರವಿ ಹನ್ನೊಂದನೇ ಸ್ಥಾನದಲ್ಲಿ ಸ್ಥಿತವಾಗಿರುತ್ತದೆ. ಇದರರ್ಥ ಏನೆಂದರೆ, ಇವರ ಸ್ನೇಹಿತರು, ಸಾಮಾಜಿಕ ಸಂಬಂಧಗಳನ್ನು ಆರ್ಥಿಕ ಸ್ಥಿತಿ-ಗತಿಯೇ ರೂಪಿಸುತ್ತದೆ. ಇವರ ಜೀವನದಲ್ಲಿ ಹಣವು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇವರಿಗೆ ಸಿಗಬೇಕಾದ ಗೌರವ, ಸ್ಥಾನ-ಮಾನಗಳು ಸಿಗಲಿಲ್ಲ ಎಂದಾಗ ಒಂದಿಷ್ಟು ಬೇಸರ ಆಗುತ್ತದೆ. ಅದು ಸಹಜ. ಆದರೆ ಎಂಥ ಕಷ್ಟದ ದಿನಗಳನ್ನು ದಾಟಿಸುವ ಸಂಯಮವನ್ನು ಕಾಯ್ದುಕೊಂಡರೆ ಭವಿಷ್ಯ ಉತ್ತಮವಾಗಿ ಇರುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯೊಳಗೆ

ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯೊಳಗೆ

ಮಧ್ಯಾಹ್ನ 12 ಗಂಟೆಗೂ ಮುನ್ನ ಹಾಗೂ ಹತ್ತು ಗಂಟೆ ನಂತರ ಜನಿಸಿದವರ ಜನ್ಮ ಕುಂಡಲಿಯಲ್ಲಿ ರವಿಯು 10ನೇ ಸ್ಥಾನದಲ್ಲಿ ಇರುತ್ತದೆ. ರವಿಗೆ ಈ ಸ್ಥಾನ ಬಹಳ ಬಲವನ್ನು ನೀಡುತ್ತದೆ ಎಂಬುದು ಉಲ್ಲೇಖಿಸಬೇಕಾದ ಅಂಶ. ಇವರು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಅದರಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಜೀವನದಲ್ಲಿ ತುಂಬ ದೊಡ್ಡ ಮಟ್ಟದ ಯಶಸ್ಸು ಕಾಣುತ್ತಾರೆ. ತಮ್ಮ ಸಾಧನೆಯ ಕಾರಣಕ್ಕೆ ಸನ್ಮಾನ ಪಡೆಯುವಂತೆ ಆಗುತ್ತಾರೆ. ಆದರೆ ಇವರಿಗೆ ಸಿಗುವ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಕಷ್ಟದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ.

ಮಧ್ಯಾಹ್ನ 12ರಿಂದ ಮಧ್ಯಾಹ್ನ 2 ಗಂಟೆಯೊಳಗೆ

ಮಧ್ಯಾಹ್ನ 12ರಿಂದ ಮಧ್ಯಾಹ್ನ 2 ಗಂಟೆಯೊಳಗೆ

ಈ ಸಮಯದಲ್ಲಿ ಹುಟ್ಟಿದವರಿಗೆ ರವಿಯು ಒಂಬತ್ತನೇ ಸ್ಥಾನದಲ್ಲಿ ಇರುತ್ತಾನೆ. ಜೀವನದಲ್ಲಿ ಬಹಳ ಪ್ರಯಾಣಗಳನ್ನು ಮಾಡುತ್ತಾರೆ. ಅದು ತಮ್ಮ ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಆಗಿರಬಹುದು ಅಥವಾ ವೈಯಕ್ತಿಕವಾಗಿರಬಹುದು. ಎಲ್ಲ ರೀತಿಯಲ್ಲೂ ಆಗಿರಬಹುದು. ಬಹುತೇಕರು ಸುಂದರ ರೂಪು, ತೀಕ್ಷ್ಣ ಬುದ್ಧಿ, ಧಾರ್ಮಿಕ ಚಿಂತನೆ ಒಳಗೊಂಡಿರುತ್ತಾರೆ. ತಮ್ಮ ಉದಾರತೆ ಕಾರಣಕ್ಕೆ ಜನರಿಂದ ಗೌರವ ಪಡೆಯುತ್ತಾರೆ. ವಯಸ್ಸು ಆದಂತೆ ಗೌರವ-ಮನ್ನಣೆ, ಸನ್ಮಾನ ದೊರೆಯುತ್ತದೆ. ಇವರ ಗಮ್ಯ ಬಹಳ ದೊಡ್ಡ ಮಟ್ಟದ್ದಾಗಿರುತ್ತದೆ. ಜೀವನದ ಉದ್ದಕ್ಕೂ ಹಲವರಿಂದ ಪ್ರೀತಿ-ಗೌರವ ಪಡೆಯುವಂಥ ಅದೃಷ್ಟ ಇರುತ್ತದೆ.

ಮಧ್ಯಾಹ್ನ 2ರಿಂದ ಸಂಜೆ 4ರೊಳಗೆ

ಮಧ್ಯಾಹ್ನ 2ರಿಂದ ಸಂಜೆ 4ರೊಳಗೆ

ಈ ಕಾಲದಲ್ಲಿ ರವಿಯು ಕುಂಡಲಿಯ ಎಂಟನೆ ಮನೆಯಲ್ಲಿ ಸ್ಥಿತವಾಗಿರುತ್ತದೆ. ದುಡ್ಡುಕಾಸಿಗೆ ಸಂಬಂಧಿಸಿದ ವ್ಯವಹಾರಗಳನ್ನು ನೋಡಿಕೊಳ್ಳುವ ಹುದ್ದೆಯನ್ನು ವೃತ್ತಿಯಾಗಿ ಸ್ವೀಕರಿಸುವವರಲ್ಲಿ ಇವರೇ ಹೆಚ್ಚು. ಅಕೌಂಟಿಂಗ್, ಟ್ರಸ್ಟ್, ಸರಕಾರಿ ಹಣಕಾಸು ಯೋಜನೆಗಳು, ಬ್ಯಾಂಕಿಂಗ್ ವಲಯ ಇತ್ಯಾದಿ ಹಣಕಾಸಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಇವರನ್ನು ಕಾಣಬಹುದು. ಇನ್ನು ನಿರ್ಧಾರ ಮಾಡುವಂಥ ಜವಾಬ್ದಾರಿಯುತ ಹುದ್ದೆ ಕೂಡ ನಿರ್ವಹಿಸುತ್ತಾರೆ. ಲೈಂಗಿಕ ಜೀವನ ಹಾಗೂ ಅಪಘಾತದ ವಿಚಾರಗಳನ್ನು ಕೂಡ ರವಿಯ ಈ ಸ್ಥಾನದ ಮೂಲಕ ಚಿಂತನೆ ಮಾಡಬಹುದು. ಜೀವನದ ಒಂದು ಹಂತದಲ್ಲಿ ಗಂಭೀರವಾದ ಅಪಘಾತ ಅಥವಾ ಕಾನೂನು ವಿಚಾರಣೆಗಳನ್ನು ಎದುರಿಸಬೇಕಾಗುತ್ತದೆ.

ಸಂಜೆ 4ರಿಂದ ಸಂಜೆ 6 ಗಂಟೆಯೊಳಗೆ

ಸಂಜೆ 4ರಿಂದ ಸಂಜೆ 6 ಗಂಟೆಯೊಳಗೆ

ಈ ಸಮಯದಲ್ಲಿ ಜನಿಸಿದವರಿಗೆ ರವಿಯು ಜಾತಕ ಕುಂಡಲಿಯಲ್ಲಿ ಏಳನೇ ಸ್ಥಾನದಲ್ಲಿ ಇರುತ್ತದೆ. ಇವರ ಜೀವನದ ಉದ್ದಕ್ಕೂ ಬಹಳ ಜವಾಬ್ದಾರಿಗಳನ್ನು ಹೊರುತ್ತಾರೆ. ಮತ್ತು ಯಾವಾಗಲೂ ಪ್ರಾಶಸ್ತ್ಯ ಹೊಂದಿರುತ್ತಾರೆ. ಇತರರಿಗೆ ಹೋಲಿಸಿದರೆ ಮದುವೆ ನಂತರ ನಿಮ್ಮ ಜೀವನದಲ್ಲಿ ಪ್ರಬಲವಾದ ಬದಲಾವಣೆ ಆಗುತ್ತದೆ. ದೊಡ್ಡ ಮಟ್ಟದಲ್ಲಿ ಗಟ್ಟಿಯಾದ ಪ್ರಯತ್ನ ಹಾಕದ ಹೊರತು ಸುಲಭವಾಗಿ ಏನನ್ನೂ ಬಿಟ್ಟುಕೊಡುವ ಪ್ರವೃತ್ತಿ ಇವರದಲ್ಲ. ಜನರ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿ ಇರಬೇಕಾದ ವೃತ್ತಿಯನ್ನೇ ಬಹುತೇಕ ಇವರು ಆರಿಸಿಕೊಳ್ಳುತ್ತಾರೆ. ಎದುರಿನವರಿಗೆ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ನೀಡುತ್ತಾರೆ. ಇವರು ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಕಡ್ಡಾಯವಾಗಿ ತೊಡಗಲೇಬಾರದು. ದುಷ್ಟ ಜನರಿಂದ ದೂರ ಇರಬೇಕು. ಸಣ್ಣ ತಪ್ಪು ಕೂಡ ಆಗದಂತೆ ಎಚ್ಚರಿಕೆಯಿಂದ ಇರಬೇಕು.

ಸಂಜೆ 6ರಿಂದ ರಾತ್ರಿ 8 ಗಂಟೆಯೊಳಗೆ

ಸಂಜೆ 6ರಿಂದ ರಾತ್ರಿ 8 ಗಂಟೆಯೊಳಗೆ

ಈ ಸಮಯದಲ್ಲಿ ರವಿ ಜಾತಕದ ಆರನೇ ಮನೆಯಲ್ಲಿ ಇರುತ್ತದೆ. ಇವರ ಜೀವನದ ಬಹುತೇಕ ಘಟನೆಗಳು ತುಂಬ ಹತ್ತಿರದವರು, ಸ್ನೇಹಿತರ ಮೇಲೆಯೇ ಅವಲಂಬಿತ ಆಗಿರುತ್ತದೆ. ಮತ್ತು ಅವರ ಜತೆಗೆ ಹೇಗೆ ಸಂಬಂಧ, ಸ್ನೇಹ ನಿಭಾಯಿಸುತ್ತಾರೆ ಎಂಬುದು ಕೂಡ ಮುಖ್ಯವಾಗಿರುತ್ತದೆ. ಸಾಮಾಜಿಕ ಬದುಕಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಕೌಟುಂಬಿಕ ಬದುಕಿಗೆ ಎರಡನೇ ಪ್ರಾಮುಖ್ಯ ಕೊಡುತ್ತಾರೆ. ಸಾಮಾಜಿಕ ಚಟುವಟಿಕೆಗಳು ಹಾಗೂ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಜಾಗೃತ ಸ್ವಭಾವ ಹಾಗೂ ಕಠಿಣ ಪರಿಶ್ರಮದಿಂದ ದೀರ್ಘಾವಧಿಯಲ್ಲಿ ಅನುಕೂಲವಿದೆ. ಕೀರ್ತಿ, ಸಂಪತ್ತು, ಯಶಸ್ಸು ದೊರೆಯುತ್ತದೆ.

ರಾತ್ರಿ 8ರಿಂದ ರಾತ್ರಿ 10ರೊಳಗೆ

ರಾತ್ರಿ 8ರಿಂದ ರಾತ್ರಿ 10ರೊಳಗೆ

ಈ ಸಮಯಕ್ಕೆ ರವಿಯು ಐದನೇ ಸ್ಥಾನದಲ್ಲಿ ಇದ್ದು, ಆ ವ್ಯಕ್ತಿಗೆ ಕ್ರಿಯಾತ್ಮಕವಾಗಿ ಆಲೋಚಿಸುವ ಪ್ರತಿಭೆ ಹಾಗೂ ಕೌಶಲ ಲಭಿಸಿರುತ್ತದೆ. ಇವರು ಬಹಳ ಆಶಾವಾದಿಗಳು. ಎಂಥ ಸನ್ನಿವೇಶದಲ್ಲೂ ಭರವಸೆ ಕಳೆದುಕೊಳ್ಳುವುದಿಲ್ಲ. ಯಾವ ಕ್ಷೇತ್ರದಲ್ಲಿ ಬಹಳ ಆಸಕ್ತಿ ಇರುತ್ತದೋ ಅಂಥ ಕ್ಷೇತ್ರದಲ್ಲೇ ಕಾರ್ಯ ನಿರ್ವಹಿಸುವ ಅವಕಾಶ ದೊರೆಯುತ್ತದೆ. ಜೀವನದಲ್ಲಿ ದೊಡ್ಡ ಮಟ್ಟದ ಕೀರ್ತಿ ಹಾಗೂ ಯಶಸ್ಸು ಪಡೆಯುತ್ತಾರೆ. ಸಮಯಕ್ಕೆ ಸರಿಯಾಗಿ ಹಿತೈಷಿಗಳು ನೀಡುವ ಸಲಹೆಯನ್ನು ಪಾಲಿಸದೆ ಕೆಟ್ಟ ಪರಿಣಾಮಗಳನ್ನು ಎದುರಿಸುವಂತಾಗುತ್ತದೆ. ಆ ಬಗ್ಗೆ ಎಚ್ಚರವಾಗಿರಬೇಕು.

ರಾತ್ರಿ 10ರಿಂದ 12ರೊಳಗೆ

ರಾತ್ರಿ 10ರಿಂದ 12ರೊಳಗೆ

ಈ ಸಮಯದಲ್ಲಿ ರವಿಯು ನಾಲ್ಕನೇ ಸ್ಥಾನದಲ್ಲಿ ಇರುತ್ತದೆ. ಇವರಿಗೆ ಸಂಪತ್ತು ಹಾಗೂ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಚಿಂತೆ ಇರುವುದಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಇವರು ತೊಡಗಿಸಿಕೊಳ್ಳುವ ಸಾಧ್ಯತೆ ಜಾಸ್ತಿ. ಈ ಉದ್ಯಮದ ಮೂಲಕ ಶ್ರೀಮಂತರಾಗುತ್ತಾರೆ. ಜೀವನದ ಯಶಸ್ಸು, ಏರಿಳಿತಗಳಿಗೆ ಇವರನ್ನು ಹೊರತುಪಡಿಸಿ ಬೇರೆ ಯಾರೂ ಕಾರಣರಾಗಿರುವುದಿಲ್ಲ. ಆದ್ದರಿಂದ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇವರ ಬಳಿ ಇರುವ ಎಲ್ಲ ಸಂಪತ್ತು ಒಂದೇ ಕೂಡ ಹೂಡಿಕೆ ಮಾಡುವುದು ಅಪಾಯಕರ.

ರಾತ್ರಿ 12ರಿಂದ 2 ಗಂಟೆಯೊಳಗೆ

ರಾತ್ರಿ 12ರಿಂದ 2 ಗಂಟೆಯೊಳಗೆ

ಈ ಸಮಯದಲ್ಲಿ ಜನಿಸಿದವರ ಮೂರನೇ ಮನೆಯಲ್ಲಿ ರವಿ ಸ್ಥಿತವಾಗಿರುತ್ತದೆ. ಇವರ ಆಲೋಚನಾ ಮಟ್ಟ, ಬುದ್ಧಿಮತ್ತೆ ಅಪಾರವಾಗಿರುತ್ತದೆ. ಸಾಹಸಪ್ರಿಯರು ಹಾಗೂ ಸದಾ ಪ್ರಯಾಣವನ್ನು ಬಯಸುವಂಥವರು. ಮಾಧ್ಯಮಕ್ಕೆ ಸಂಬಂಧಿಸಿದ ವೃತ್ತಿಗಳಲ್ಲಿ ತೊಡಗಿಕೊಳ್ಳುತ್ತಾರೆ. ಸೋದರ-ಸೋದರಿಯರು, ನೆರೆ ಮನೆಯವರ ಪ್ರಭಾವ ಇವರ ಮೇಲೆ ಅಪಾರವಾಗಿರುತ್ತದೆ. ಇವರ ವ್ಯಕ್ತಿತ್ವ ರೂಪಿಸುವುದರಲ್ಲಿ ಅವರ ಪಾತ್ರ ಇರುತ್ತದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಇವರ ಸಾಮಾಜಿಕ ಬದುಕು ಬಹಳ ಚೆನ್ನಾಗಿ ಇರುತ್ತದೆ.

ರಾತ್ರಿ 2ರಿಂದ 4

ರಾತ್ರಿ 2ರಿಂದ 4

ಈ ಅವಧಿಯಲ್ಲಿ ರವಿ ಗ್ರಹವು ದ್ವಿತೀಯ ಸ್ಥಾನದಲ್ಲಿ ಸ್ಥಿತವಾಗಿರುತ್ತದೆ. ಈ ಸ್ಥಾನವು ಕುಟುಂಬ ಹಾಗೂ ಹಣಕಾಸು ವಿಚಾರಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಅಡುಗೆ, ಆಹಾರದ ಬಗ್ಗೆ ಕೂಡ ಈ ಸ್ಥಾನವು ತಿಳಿಸುತ್ತದೆ. ಈ ಸಮಯದಲ್ಲಿ ಹುಟ್ಟಿದವರು ಅಡುಗೆಗೆ ಸಂಬಂಧಪಟ್ಟ ವೃತ್ತಿಯನ್ನೇ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ನೆನಪಿಟ್ಟುಕೊಳ್ಳಿ, ಬಾಣಸಿಗರೇ ಆಗಬೇಕು ಅಂತೇನೂ ಇಲ್ಲ. ಒಟ್ಟಾರೆ ಆಹಾರಕ್ಕೆ ಸಂಬಂಧಿಸಿದ ಉದ್ಯಮದಲ್ಲಿ ತೊಡಗಿಸಿಕೊಳ್ಳಬಹುದು. ಅಥವಾ ದೊಡ್ಡ ಕುಟುಂಬದಲ್ಲಿ ಅಡುಗೆ ಮನೆಯ ಜವಾಬ್ದಾರಿ ಇವರೇ ವಹಿಸಿಕೊಳ್ಳಬೇಕಾಗಬಹುದು.

English summary
Here is the details about birth time influence on people according to astrology. 24 hours divided in to 2 hours 12 segment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X