ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾನ್ ಶಕ್ತಿವಂತ ಶನಿದೇವರ ಬಗ್ಗೆ ಇನ್ನಷ್ಟು ಮಾಹಿತಿ

By ನಾಗನೂರಮಠ ಎಸ್ಎಸ್
|
Google Oneindia Kannada News

ಈಗಾಗಲೇ ಶನಿಪ್ರಭಾವವನ್ನು ಎಲ್ಲ ರಾಶಿಗಳವರಿಗೆ ತಿಳಿಸಿಕೊಡಲಾಗಿದೆ. ಈಗ ಸ್ವತಃ ಶನಿದೇವನ ಬಗ್ಗೆಯೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ಹೀಗಾಗಿ ಅವನ ಬಗ್ಗೆ ಒಂದಿಷ್ಟು ವಿವರಗಳು ಇಲ್ಲಿವೆ ಓದಿಕೊಳ್ಳಿ. ಆದರೆ ಓದಿದ ಮೇಲೆ ಶನಿದೇವರ ಬಗ್ಗೆ ಅಥವಾ ಅವನ ಶಕ್ತಿಯ ಬಗ್ಗೆ ಮನಸ್ಸಿನಲ್ಲಿಯೂ ಕೂಡ ಸಂಶಯ ಪಡಬಾರದು ದಯವಿಟ್ಟು ತಿಳಿದುಕೊಳ್ಳಿ. ಇಲ್ಲವೇ ಓದಿ ಮರೆತು ಬಿಡಿ. ಏಕೆಂದರೆ ಅವನಷ್ಟು ಶಕ್ತಿವಂತರು ಇಡೀ ನಮ್ಮ ದುನಿಯಾದಲ್ಲಿಯೇ ಇಲ್ಲ.

ಶನಿದೇವನು ಹಳದಿ ಬಣ್ಣದ ಕಣ್ಣುಗಳನ್ನು ಹೊಂದಿದ್ದಾನೆ. ಆದರೆ ನೇರ ದೃಷ್ಟಿ ಇರಲ್ಲ. ಮೇಲೆ ನೋಡಿರುತ್ತದೆ ಕಣ್ಣಿನ ದೃಷ್ಟಿ. ದಯಾಗುಣ ಎಂಬುದೇ ಇಲ್ಲ ಇವನಿಗೆ. ಅಂದರೆ ಯಾರನ್ನೂ ಕೇಳಲ್ಲ. ತಲೆಗೆ ಬಂದಿದ್ದು ಮಾಡಿ ಬಿಡುತ್ತಾನೆ. ದಪ್ಪನೆಯ ಕ್ರೂರವಾಗಿರುವ ಉಗುರು. ದಪ್ಪನಾದ ಹಲ್ಲುಗಳು ಹೊಂದಿದ್ದಾನೆ. ಮೈಯೆಲ್ಲ ವಾಸನೆ ಅಂದರೆ ಸ್ವಚ್ಛವಾಗಿರಲ್ಲ. ಮುಖದಲ್ಲಿ ಕಳೆ ಇರಲ್ಲ. ತೆಳ್ಳಗಿನ ಸೊರಗಿದವರ ತರಹದ ಮೈಕಟ್ಟು. ಸೋಮಾರಿತನ, ಆಲಸ್ಯತನ ಹೆಚ್ಚಿರುತ್ತದೆ ಈತನಿಗೆ. ಮೈಯೆಲ್ಲ ನೀಲಿ ಬಣ್ಣದ ಹೊಂದಿಕೊಂಡು ಒಂಥರಾ ನೋಡಿದರೆ ಹೆದರಬೇಕು ಆ ತರಹ.

ಬಯ್ಯಲು ಇಷ್ಟಪಡುತ್ತಾನೆ. ಮತ್ತು ಬೈಯಿಸುತ್ತಾನೆ ಕೂಡ ತನ್ನ ದೃಷ್ಟಿಗೆ ಬಿದ್ದವರನ್ನು. ಮೈಯಲ್ಲಿ ಶಕ್ತಿವಂತ ದೇಹ ಸಣಕಲಾಗಿದ್ದರೂ ಕೂಡ ಸಿಟ್ಟು ತುದಿಯಲ್ಲಿಯೇ ಇರುತ್ತದೆ. ವಯಸ್ಸಿನಲ್ಲಿ ಮುದುಕ. ಮೈತುಂಬ ಕಪ್ಪು ಬಟ್ಟೆಗಳನ್ನು ಮಾತ್ರ ಧರಿಸುತ್ತಾನೆ. ಅದಕ್ಕೆಂದೇ ಕೆಲವರಿಗೆ ಕಪ್ಪು ಬಟ್ಟೆ ಧರಿಸಬೇಡಿ ಎಂದು ಮನೆಯಲ್ಲಿ ಹೇಳುತ್ತಾರೆ. ಯಾಕೆಂದರೆ ಕೆಲವರಿಗೆ ಕಪ್ಪು ಧರಿಸಿದ್ದಾಗಲೇ ಅಪಘಾತ, ಅನಾಹುತ, ಜಗಳಗಳು ನಡೆದಿರುತ್ತವೆ. ಇದನ್ನು ಪರೀಕ್ಷಿಸಬೇಕೆಂದರೆ ಒಮ್ಮೆ ಶನಿವಾರ ಕಪ್ಪು ಬಟ್ಟೆ ಹಾಕಿಕೊಂಡು ಓಡಾಡಿ. ಆಮೇಲೆ ಅನುಭವಿಸಿ ಶನಿಪ್ರಭಾವ ಪರೀಕ್ಷೆ ಮಾಡಬೇಕೆಂದುಕೊಂಡವರು. [ಶನಿದೇವರಿಗೇಕೆ ಎಳ್ಳೆಣ್ಣೆ ಅಭಿಷೇಕ? ಇಲ್ಲಿದೆ ಪೌರಾಣಿಕ ಕಥೆ]

Characteristics and Interesting facts about Lord Shani

ನೋಡಲೂ ಕೂಡ ಭಯಂಕರವಾಗಿ ಕಾಣುವ ಶನಿದೇವರ ಲಕ್ಷಣಗಳನ್ನು ಈಗಾಗಲೇ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇವನ ಬಗ್ಗೆ ಚಲನಚಿತ್ರವೂ ಕೂಡ ಹಲವಾರು ಬಂದಿವೆ. ಬೇಕಿದ್ದರೆ ಕುತೂಹಲ ತಣಿಸುವುದಕ್ಕಾದರೂ ಇವನ ಸಿನೆಮಾ ನೋಡಿ ಬಿಡುವು ಮಾಡಿಕೊಂಡು. ಏಕೆಂದರೆ ಎಲ್ಲರ ಜೀವನದಲ್ಲೂ ಒಮ್ಮೆ ಬಂದೇ ಬರುವ ಶನಿದೇವರ ಬಗ್ಗೆ ತಿಳಿದುಕೊಂಡು ಇರುವುದು ಒಳ್ಳೆಯದು.

ಇನ್ನು ಆಕಾಶದಲ್ಲಿ ಇವನ ಅಸ್ತಿತ್ವದ ಬಗ್ಗೆ ಹೇಳುವುದಾದರೆ ಹೊಳಪುಳ್ಳ ಸುಂದರ ಗ್ರಹ. ಪಶ್ಚಿಮ ದಿಕ್ಕಿನಲ್ಲಿಯೇ ಕಾಣುತ್ತಾನೆ ಆಕಾಶದಲ್ಲಿ. ಇವನಿರುವ ಪ್ರದೇಶಗಳೆಂದರೆ ಕಂದಕಗಳು, ಕಣಿವೆಗಳು, ಗುಹೆಗಳು, ಮರುಭೂಮಿ, ಪರ್ವತ, ಮುರಿದು ಬಿದ್ದ ಮನೆಗಳು, ಕಲ್ಲಿದ್ದಲಿನ ದೊಡ್ಡ ದೊಡ್ಡ ಕಣಿವೆಗಳು ಮತ್ತು ಅತ್ಯಂತ ಹೊಲಸಾದ, ಅಂದರೆ ಸ್ವಚ್ಛತೆಯಿಲ್ಲದ ಸ್ಥಾನ. ಗಲೀಜು ಇದ್ದಲ್ಲಿ, ಸಮಾಧಿ ಮತ್ತು ಸ್ಮಶಾನ, ಬಂಜರು ಭೂಮಿ ಮುಂತಾದವುಗಳ ಪ್ರದೇಶಗಳಲ್ಲಿಯೇ ಶನಿಯ ಉಪಸ್ಥಿತಿ ಇರುತ್ತದೆ. ಅಂತಹ ಪ್ರದೇಶಗಳಲ್ಲಿಯೇ ಇವನ ವಾಸ ಸ್ಥಾನ. ರಾತ್ರಿಯ ಹೊತ್ತು ಮಾತ್ರ ಬನ್ನಿಗಿಡದಲ್ಲಿ ವಾಸ. ಏಕೆಂದರೆ ಇವನ ಪತ್ನಿಯ ವಾಸಸ್ಥಾನವೂ ಅದು ಹೌದು. ಇದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತಾರೆ ಸಾಮೇರು.

ಇನ್ನು ಇವನು ಸಂಚರಿಸುವುದು ಕಾಗೆಯ ಮೇಲೆ. ಕಾಗೆಯೇ ಇವನ ವಾಹನವಾಗಿದೆ. ಗಣಪನಿಗೆ ಇಲಿ, ಶಂಭೋಲಿಂಗನಿಗೆ ನಂದಿ, ವಿಷ್ಣುವಿಗೆ ಗರುಡ, ಲಕ್ಷ್ಮೀಗೆ ವಾಹನ ಆನೆ ಹೇಗೋ ಆ ತರಹ. ಇದಕ್ಕಾಗಿಯೇ ಕಾಗೆಯೂ ಕೂಡ ಆಲಸ್ಯತನ ಮತ್ತು ಬರೀ ತಿನ್ನಲು ಹುಡುಕಾಡುವುದು ಮಾಡುತ್ತಿರುತ್ತದೆ. ಅಲ್ಲದೇ ಅದಕ್ಕೆ ಸ್ವಾರ್ಥ ಗುಣ, ಕಠೋರತೆ, ಮಾಂಸದ ಬಗ್ಗೆ ತೀರಾ ಆಸೆ, ದೂರದಿಂದಲೇ ಆಹಾರ ಪತ್ತೆ ಹಚ್ಚುವುದು ಸೇರಿದಂತೆ ಮುಂತಾದ ಕೆಲವೊಂದು ಗುಣಗಳು ಇರುವುದು. [ಸಾಡೇಸಾತಿಯಲ್ಲಿ ಕಡ್ಡಾಯವಾಗಿ ಹೀಗೆಲ್ಲಾ ಮಾಡಬೇಡಿ]

Characteristics and Interesting facts about Lord Shani

ಉದಾಹರಣೆ ನೀವು ನೋಡಿರಬಹುದು, ದಾರಿಯಲ್ಲಿ ಹೆಗ್ಗಣ, ನಾಯಿ ಅಥವಾ ಇನ್ನಾವುದೋ ಪ್ರಾಣಿ ಸತ್ತಿದ್ದರೆ ಅದರ ಸುತ್ತಮುತ್ತ ಕಾಗೆಗಳಿಗೆ ಕುಳಿತು ಅದನ್ನು ತಿನ್ನುತ್ತಿರುತ್ತವೆ. ಸತ್ತ ಪ್ರಾಣಿಯ ಎಲುಬು ಕಾಣಿಸುವವರೆಗೂ ಅದರಲ್ಲಿನ ಮಾಂಸವನ್ನು ತಿಂದು ಮುಗಿಸಿರುತ್ತವೆ ಕಾಗೆಗಳು. ಇದೇ ರೀತಿ ಎಲ್ಲಿಯಾದರೂ ಟ್ರಿಪ್ ಗೆ ಹೋದಾಗ ಊಟಕ್ಕೆಂದು ಕುಳಿತುಕೊಂಡರೆ ಬರೀ ಕಾಗೆಗಳೇ ಬಂದು ಕಾವ್ ಕಾವ್ ಕಾವ್ ಎಂದು ಕಿರಿಕಿರಿ ಮಾಡುತ್ತ ಆಹಾರ ಹಾಕಿ ಎಂದು ಬೆದರಿಸುತ್ತಿರುತ್ತವೆ. ಬಹುಶಃ ಈ ಅನುಭವ ಎಲ್ಲರಿಗೂ ಆಗಿರಲೇಬೇಕು. ಆದವರು ಹೇಳಿ ಆಗಿದೆಯೋ ಇಲ್ಲವೆಂದು.

ಇವನ ಪ್ರಭಾವದಿಂದ ಬರೀ ಮನುಷ್ಯರಷ್ಟೇ ಅಲ್ಲ ನಗರ, ರಾಜ್ಯ ಮತ್ತು ದೇಶಗಳೇ ಕಂಗಾಲಾಗುತ್ತವೆ. ಇದಕ್ಕೆ ಸಾಕ್ಷಿಗಳೂ ಸಾಕಷ್ಟಿವೆ. ಇದು ಹೇಗೆ ಎಂದು ಶನಿಪ್ರಿಯ ಸಾಮೇರಗೆ ಕೇಳಿದರೆ ಹೇಳ್ತಾರೆ. ಇನ್ನು ಇವನ ಪ್ರಭಾವದಿಂದ ಹಲವಾರು ರೋಗಗಳು ಬರುತ್ತಾವೆ ಅವುಗಳ ಬಗ್ಗೆ ಮುಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತೇನೆ. ಅಲ್ಲಿಯವರೆಗೂ ಶನಿದೇವನ ಬಗ್ಗೆ ಓದಿಕೊಂಡವರು ನಿಮ್ಮ ಪರಿಚಿತರಿಗೆ ತಪ್ಪಿಸದೇ ತಿಳಿಸಿ ಅವರಿಗೂ ಅರ್ಥವಾಗಲಿ ಮಹಾನ್ ಶಕ್ತಿವಂತ ಶನಿದೇವನ ಬಗ್ಗೆ. [ಸಾಡೇಸಾತಿ : ಶನಿಕಾಟಕ್ಕೆ ಸುಲಭ ಪರಿಹಾರಗಳು]

English summary
How Lord Shani looks and what are his characteristics? Believe it or not, Shani will make an impact of everyone's life, some or the other time. He does bad and good thing also. Though he looks ugly, belive in him and he will make your life beautiful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X