ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರಕಾರಕ್ಕೆ ಆತಂಕ ತರಲಿದೆಯೇ ಬಜೆಟ್ ಮಂಡನೆ ಮುಹೂರ್ತ?

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

Recommended Video

Karnataka Budget 2018 : ಜ್ಯೋತಿಷಿಗಳಿಂದ ಬಜೆಟ್ ಮುಹೂರ್ತದ ವಿಶ್ಲೇಷಣೆ | Oneindia Kannada

ನಾನು ಮುಖ್ಯಮಂತ್ರಿ ಆಗುವುದಕ್ಕೆ ಆ ದೈವ ಅನುಗ್ರಹವೂ ಕಾರಣ ಎನ್ನುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಜ್ಯೋತಿಷ್ಯದ ರೀತಿ ಬಲ ಸಿಗುತ್ತಿಲ್ಲವೆ? ಗುರುವಾರ ಬಜೆಟ್ ಮಂಡನೆ ಆರಂಭಿಸಿದ ಸಮಯ ಹಲವು ಸುಳಿವುಗಳನ್ನು ನೀಡುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಅಂಥದ್ದು ಆಗಿದ್ದಾದರೂ ಏನು ಅನ್ನೋ ಪ್ರಶ್ನೆ ಮೂಡುವುದು ಸಹಜ.

ಇನ್ನು ಉಡುಪಿ ಮೂಲದ ಜ್ಯೋತಿಷಿಯೊಬ್ಬರು ಕುಮಾರಸ್ವಾಮಿ ಅವರಿಗೆ ಯಾರೋ ಸರಿಯಾಗಿ ದಾರಿ ತಪ್ಪಿಸುತ್ತಿದ್ದಾರೆ ಎಂದೇ ಅಭಿಪ್ರಾಯ ಪಡುತ್ತಾರೆ. ಜುಲೈ ಐದರಂದು ಒಳ್ಳೆ ದಿನ ಅನ್ನೋದರ ಬಗ್ಗೆ ಅನುಮಾನ ಬೇಡ. ಆದರೆ ಬಜೆಟ್ ಮಂಡನೆ ಆರಂಭ ಮಾಡಿದ ಲಗ್ನದ ಬಗ್ಗೆಯೇ ಭಾರೀ ಬೇಸರ ಆಗುತ್ತದೆ ಎನ್ನುತ್ತಾರೆ ಅವರು.

ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlightsಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights

ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಆರಂಭ ಮಾಡಿದ್ದು ಸಿಂಹ ಲಗ್ನದಲ್ಲಿ. ಆ ಲಗ್ನಕ್ಕೆ ಈಗ ಐದನೇ ಮನೆಯಲ್ಲಿ ಶನಿ, ತೃತೀಯದಲ್ಲಿ ಗುರು, ಹನ್ನೆರಡರಲ್ಲಿ ರಾಹು ಇದೆ. ಇದರಿಂದ ಹೇಳಬಹುದಾದದ್ದು ಏನೆಂದರೆ, ಈ ಬಜೆಟ್ ಸರಕಾರದ ಪಾಲಿಗೆ ಭಾರೀ ಆತಂಕವನ್ನು, ಅಲ್ಲೋಲ- ಕಲ್ಲೋಲವನ್ನು ಸೃಷ್ಟಿಸುತ್ತದೆ.

ಸಿಂಹ ಲಗ್ನಕ್ಕೆ ಶನಿ ಚೆನ್ನಾಗಿಲ್ಲ

ಸಿಂಹ ಲಗ್ನಕ್ಕೆ ಶನಿ ಚೆನ್ನಾಗಿಲ್ಲ

ಸಿಂಹ ಲಗ್ನಕ್ಕೆ ಪಂಚಮದಲ್ಲಿರುವ ಶನಿ ಯಾವ ಒಳ್ಳೆಯದನ್ನೂ ಮಾಡುವುದಕ್ಕೆ ಬಿಡುವುದಿಲ್ಲ. ಮೊದಲೇ ಇದು ಮೈತ್ರಿ ಸರಕಾರ. ಈಗಿರುವ ಅಸಮಾಧಾನ ತಗ್ಗಿಸಬೇಕಾದಂಥ ಅನಿವಾರ್ಯ ಇರುವ ಸನ್ನಿವೇಶದಲ್ಲಿ ಅದಕ್ಕೆ ಮತ್ತಷ್ಟು ಬೆಂಕಿ ಬೀಳುವಂಥ ಲಗ್ನದಲ್ಲೇ ಬಜೆಟ್ ಮಂಡನೆ ಆರಂಭಿಸಿದ್ದಾರೆ ಕುಮಾರಸ್ವಾಮಿ.

ಪದೇಪದೇ ಹೀಗೇಕೆ ಆಗುತ್ತಿದೆ?

ಪದೇಪದೇ ಹೀಗೇಕೆ ಆಗುತ್ತಿದೆ?

ಈಗ ಎರಡೂ ಪಕ್ಷಗಳ ಮಧ್ಯೆ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ದೇವರು-ಜ್ಯೋತಿಷ್ಯದಲ್ಲಿ ನಂಬಿಕೆ ಇರುವ ಕುಮಾರಸ್ವಾಮಿ, ನಡೆದಾಡುವ ಪಂಚಾಂಗದಂತೆ ಇರುವ ಎಚ್.ಡಿ.ರೇವಣ್ಣ...ಹೀಗಿದ್ದರೂ ಏಕೆ ಮುಹೂರ್ತದ ವಿಚಾರದಲ್ಲಿ ಹೀಗಾಗುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ.

ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?

ಇದ್ದುದರಲ್ಲೇ ಒಳ್ಳೆ ದಿನ ಹುಡುಕುತ್ತಿದ್ದಾರೆ

ಇದ್ದುದರಲ್ಲೇ ಒಳ್ಳೆ ದಿನ ಹುಡುಕುತ್ತಿದ್ದಾರೆ

ಅದಕ್ಕೆ ಉತ್ತರ ಕೂಡ ನಮಗೇ ಸಿಕ್ಕಿಹೋಗುತ್ತದೆ. ಸ್ವತಃ ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಆಯಾ ದಿನದಲ್ಲಿ ಇರುವ ಉತ್ತಮ ಮುಹೂರ್ತ ಅಥವಾ ಇದ್ದುದರಲ್ಲೇ ಉತ್ತಮವಾದ ದಿನವನ್ನು ಆಯ್ದುಕೊಳ್ಳುವುದಕ್ಕಷ್ಟೇ ಸಾಧ್ಯವಾಗುತ್ತಿದೆ ವಿನಾ ಅತ್ಯುತ್ತಮ ಎನಿಸುವ ದಿನ, ಮುಹೂರ್ತ, ಲಗ್ನವನ್ನು ಆರಿಸಿಕೊಳ್ಳಲು ಆಗುತ್ತಿಲ್ಲ.

ಪಂಚಾಂಗ ನೋಡಿಯೇ ಆಡಳಿತ ನಡೆಸುವುದಕ್ಕಾಗುತ್ತಾ?

ಪಂಚಾಂಗ ನೋಡಿಯೇ ಆಡಳಿತ ನಡೆಸುವುದಕ್ಕಾಗುತ್ತಾ?

ಸರಕಾರದ ಎಲ್ಲ ಕೆಲಸ ಹೀಗೆ ಪಂಚಾಂಗ ನೋಡಿ ಮಾಡುತ್ತಾ ಹೋದರೆ ರಾಜ್ಯ ಉದ್ಧಾರ ಆಗುತ್ತಾ ಎಂದು ಪ್ರಶ್ನೆ ಇಟ್ಟರೆ, ಒಂದು ರಾಜ್ಯಕ್ಕೆ ಬಜೆಟ್ ಎಂಬುದು ಬಹಳ ಮುಖ್ಯ. ಭವಿಷ್ಯದ ಮುನ್ಸೂಚಿ ಅದು. ಅಂಥದ್ದರಲ್ಲಾದರೂ ಅಥವಾ ಅಂಥದ್ದರ ಬಗ್ಗೆ ಮಾತ್ರ ಗಮನ ವಹಿಸಲಿ ಅನ್ನೋದು ನಮ್ಮ ತಿಳಿವಳಿಕೆ ಮಿತಿಯೊಳಗಿನ ಸಲಹೆ ಎನ್ನುತ್ತಾರೆ ಜ್ಯೋತಿಷಿಗಳು.

English summary
Budget muhurth (July 5th, 2018) may bring problem to Karnataka government. According to astrologers, day was auspicious but the time budget presented was not at all good. Here is the detailed story of Karnataka Budget 2018 muhurth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X