ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ಜಲಪ್ರಳಯ ಸೇರಿದಂತೆ ಎಲ್ಲವೂ ಸತ್ಯವಾಗುತ್ತಿದೆ ಬಬಲಾದಿ ಸಿದ್ದು ಮುತ್ಯಾ ಕಾಲಜ್ಞಾನ

|
Google Oneindia Kannada News

ಎರಡು ತಿಂಗಳ ಹಿಂದೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಅಕಾಲಿಕ ಮಳೆಯ ಬಗ್ಗೆ ಭವಿಷ್ಯ ನುಡಿದು, "ಕುಂಭ ರಾಶಿಯಲ್ಲಿ ಗುರು ಪ್ರವೇಶಿಸುವುದರಿಂದ ಮಳೆ ಹೆಚ್ಚು ಬೀಳಲಿದೆ. ಕಾರ್ತಿಕ ಮಾಸದವರೆಗೂ ನೆರೆ, ಮತ್ತಿತರ ವಿಕೋಪಗಳಿಂದ ಜನ ತತ್ತರಿಸಲಿದ್ದಾರೆ. ಅಕಾಲಿಕ ಮಳೆ, ನೆರೆ, ಬರದಿಂದ ಜನ ತತ್ತರಿಸಲಿದ್ದು, ಪ್ರಕೃತಿ ವಿಕೋಪಕ್ಕೆ ಸಿದ್ಧರಾಗಬೇಕಿದೆ" ಎಂದು ಹೇಳಿದ್ದರು.

ಇದೇ ರೀತಿ ಸುಮಾರು ಒಂಬತ್ತು ತಿಂಗಳ ಹಿಂದೆ ವಿಜಯಪುರ ಜಿಲ್ಲೆಯ ಬಬಲಾದಿ ಮಠದ ಸಿದ್ದು ಮುತ್ಯಾ ನುಡಿದಿದ್ದ 2021ರ ಕಾಲಜ್ಞಾನ ಒಂದೊಂದಾಗಿಯೇ ಸತ್ಯವಾಗುತ್ತಿದೆ. ಅಕಾಲಿಕ ಜಲಪ್ರಳಯದ ಬಗ್ಗೆ ಅವರು ಅದರಲ್ಲಿ ಸೂಚಿಸಿದ್ದರು.

ಅಕಾಲಿಕ ಮಳೆ: ಕೋಡಿಮಠದ ಶ್ರೀಗಳು ನುಡಿದಿದ್ದ ಕರಾರುವಾಕ್ ಭವಿಷ್ಯಅಕಾಲಿಕ ಮಳೆ: ಕೋಡಿಮಠದ ಶ್ರೀಗಳು ನುಡಿದಿದ್ದ ಕರಾರುವಾಕ್ ಭವಿಷ್ಯ

ಎಂಟು ತಿಂಗಳ ಹಿಂದಿನ ಅವರ ಕಾಲಜ್ಞಾನದ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ಭಾರೀ ಸದ್ದನ್ನು ಮಾಡುತ್ತಿದೆ. ಅದರಲ್ಲಿ ಈಗ ನಡೆಯುತ್ತಿರುವ ಒಂದೊಂದು ಬೆಳವಣಿಗೆ, ನಡೆಯಬಾರದ ಘಟನೆ, ರಾಜಕೀಯ ಮೇಲಾಟದ ಬಗ್ಗೆ ಸಿದ್ದು ಮುತ್ಯಾ ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಸುಮಾರು 500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನವನ್ನು, ಪ್ರತಿ ವರ್ಷದ ಶಿವರಾತ್ರಿಯಂದು ಓದಲಾಗುತ್ತದೆ. ವಿಶಿಷ್ಟವಾದ ಸಂಪ್ರದಾಯವನ್ನು ಹೊಂದಿರುವ ಬಬಲಾದಿ ಮಠಕ್ಕೆ ಬರುವ ಭಕ್ತರಿಗೆ ಮದ್ಯವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತೆ. ಭಕ್ತರು ಸಹ ಮದ್ಯವನ್ನೇ ನೈವೇದ್ಯವಾಗಿ ತರುತ್ತಾರೆ. ಕಾಲಜ್ಞಾನದಲ್ಲಿ ಏನು ಹೇಳಲಾಗಿತ್ತು? ಮುಂದೆ ಓದಿ..

Astrology: 'ಇದ್ದಕ್ಕಿದ್ದಂತೆ ಚಿಂತೆ' ಈ ರಾಶಿಯವರು ತುಂಬಾ ಸೂಕ್ಷ್ಮAstrology: 'ಇದ್ದಕ್ಕಿದ್ದಂತೆ ಚಿಂತೆ' ಈ ರಾಶಿಯವರು ತುಂಬಾ ಸೂಕ್ಷ್ಮ

 ವಿಜಯಪುರ ಜಿಲ್ಲೆಯ ಬಬಲಾದಿ ಮಠದ ಸಿದ್ದು ಮುತ್ಯಾ

ವಿಜಯಪುರ ಜಿಲ್ಲೆಯ ಬಬಲಾದಿ ಮಠದ ಸಿದ್ದು ಮುತ್ಯಾ

"ಭೂಮಿ ಕುಪ್ಪಳಿಸಿತ್ತೊ ಮಕ್ಕಳಿರ್ಯಾ, ಎಂಟಾಣೆ ಮಳೆ, ಒಂಬತ್ತಾಣೆ ಬೆಳೆ, ಇರಾನ್, ಇರಾಕ್, ಅಮೆರಿಕಾ ದೇಶಕ್ಕೆ ಕೇಡಿದೆ, ಬೆಳೆಗಳು ಜಾಸ್ತಿಯಾಗುತ್ತದೆ ಜೊತೆಗೆ ಬೆಲೆಯಲ್ಲೂ ಏರಿಕೆಯಾಗುತ್ತದೆ, ಕಾಳು ಕಡಲೆಯ ಬೆಲೆ ಗಗನಕ್ಕೇರುತ್ತದೆ" ಎಂದು 2021ರ ಕಾಲಜ್ಞಾನದಲ್ಲಿ ಬರೆದಿದ್ದನ್ನು ಬಬಲಾದಿ ಮಠದ ಶ್ರೀಗಳು ಓದಿದ್ದರು. ಅದರಂತೇ, ಅಕಾಲಿಕ ಮಳೆ ಸಾರ್ವಜನಿಕರನ್ನು ತೊಂದರೆಗೀಡು ಮಾಡಿದೆ. ಇನ್ನು, ತರಕಾರೀ, ದೈನಂದಿನ ಸಾಮಗ್ರಿಗಳ ಬೆಲೆ ತುಟ್ಟಿಯಾಗಿರುವುದರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.

 ಜುಲೈ 28ರಂದು ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ

ಜುಲೈ 28ರಂದು ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ

ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವಿನ ಬಗ್ಗೆ ಹೇಳಿರುವುದು

"ಒಬ್ಬ ಗಣ್ಯ ವ್ಯಕ್ತಿಯ ಏರಿಳಿತವಾಗಲಿದೆ, ಅದು ರಾಜಕೀಯ ಇರಬಹುದು, ಹೊರಗಡೆ ಇರಬಹುದು, ಇದು ಗೂಡಾರ್ಥ, ಒಂದೇ ರಂಗದಲ್ಲಿ ಎಂದು ಹೇಳಲಾಗುವುದಿಲ್ಲ, ಎಲ್ಲಾದರೂ ಒಂದು ಕಡೆಯಿಂದ ಆಗಬಹುದು"ಎಂದು ಭವಿಷ್ಯವನ್ನು ನುಡಿಯಲಾಗಿತ್ತು. ಬಬಲಾದಿ ಮಠದ ಈ ಕಾಲಜ್ಞಾನ, ಯಡಿಯೂರಪ್ಪನವರ ಪದತ್ಯಾಗ, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದು ಎನ್ನುವ ಚರ್ಚೆ ಈಗ ಜೋರಾಗಿದೆ. ಯಡಿಯೂರಪ್ಪನವರು ಜುಲೈ 26, 2021ರಂದು ರಾಜೀನಾಮೆ ನೀಡಿದ್ದರು ಮತ್ತು ಜುಲೈ 28ರಂದು ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
 ಸದಾಶಿವ ಮೂಲಮಹಾ ಸಂಸ್ಥಾನ ಮಠ, ಬಬಲಾದಿಯ ಈ ಬಾರಿಯ ಕಾಲಜ್ಞಾನ

ಸದಾಶಿವ ಮೂಲಮಹಾ ಸಂಸ್ಥಾನ ಮಠ, ಬಬಲಾದಿಯ ಈ ಬಾರಿಯ ಕಾಲಜ್ಞಾನ

"ಗುರು ಚಕ್ರವರ್ತಿ, ಸದಾಶಿವ ಮೂಲಮಹಾ ಸಂಸ್ಥಾನ ಮಠ, ಶಿವಯೋಗಿ ಪ್ರಸನ್ನ ಬಬಲಾದಿಯ ಈ ಬಾರಿಯ ಕಾಲಜ್ಞಾನ ಏನಂದರೆ, ಹಿಂಗಾರಿ ಕಂಡುಮಂಡಲ, ಒಂದು ಕಡೆ ಮಳೆಯಾದರೆ, ಇನ್ನೊಂದು ಕಡೆ ಮಳೆಯಿಲ್ಲ. ಕೋಮು ದಂಗೆಗಳು ಹೆಚ್ಚಾಗುತ್ತದೆ, ಅಗ್ನಿ ಅವಘಡ ಜಾಸ್ತಿಯಾಗುತ್ತದೆ. ಭೂಮಿ ಕುಪ್ಪಳಿಸುತ್ತದೆ, ಭೂಕಂಪನವಾಗಲಿದೆ"ಎಂದೂ ಭವಿಷ್ಯವನ್ನು ನುಡಿಯಲಾಗಿತ್ತು. ಕೋಮು ಗಲಭೆ ಹೆಚ್ಚಾದ ಬಗ್ಗೆ ವರದಿಗಳು ಇಲ್ಲದಿದ್ದರೂ, ಅಗ್ನಿ ದುರಂತ, ಭೂಕಂಪಗಳು ಅಲ್ಲಲ್ಲಿ ವರದಿಯಾಗುತ್ತಲೇ ಇದೆ.

 ತಿರುಪತಿಯಲ್ಲಿ ಕಂಡು ಕೇಳರಿಯದ ಜಲಪ್ರಳಯ

ತಿರುಪತಿಯಲ್ಲಿ ಕಂಡು ಕೇಳರಿಯದ ಜಲಪ್ರಳಯ

"ರಾಜಕೀಯ ಏರಿಳಿತವಾಗಿದೆ, ಪಕ್ಷಪಕ್ಷದೊಳಗೆ ಅಸೂಹೆ ಮೂಡಲಿದೆ, ಗಾಳಿ ಹೆಚ್ಚಾಗಲಿದೆ, ಮಹಾವ್ಯಾಧಿ ಹುಟ್ಟುತ್ತದೆ, ಆಂಧ್ರ ತೆಲುಗು ರಾಜ್ಯಕ್ಕೆ ಕೇಡಾಗುತ್ತದೆ. ಯುದ್ದದ ಭಯವೂ ಇದೆ, ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನ ಎಂದಿಗೂ ಸುಳ್ಳಾಗುವುದಿಲ್ಲ ಮಕ್ಕಳ್ರಾ"ಎಂದು ಸಿದ್ದು ಮುತ್ಯಾ ಭವಿಷ್ಯ ನುಡಿದಿದ್ದಾರೆ. ಅದರಂತೇ, ಆಂಧ್ರದಾದ್ಯಂತ ಮಹಾಮಳೆ ಮುಂದುವರಿದಿದೆ. ತಿರುಪತಿಯಲ್ಲಿ ಕಂಡು ಕೇಳರಿಯದ ಜಲಪ್ರಳಯದಿಂದಾಗಿ, ತಿಮ್ಮಪ್ಪನ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿತ್ತು. ಮಹಾಶಿವರಾತ್ರಿಯ ದಿನವಾದ ಗುರುವಾರ, 11 ಮಾರ್ಚ್, 2021ರಂದು ನುಡಿಯಲಾಗಿದ್ದ ಭವಿಷ್ಯದ ಸತ್ಯಾಸತ್ಯೆಯ ಚರ್ಚೆ ಈಗ ಜೋರಾಗಿ ನಡೆಯುತ್ತಿದೆ.

Recommended Video

ಭಾರತೀಯ ವಾಯುಪಡೆಗೆ ಶಕ್ತಿಶಾಲಿ ಯುದ್ಧವಿಮಾನ ಸೇರ್ಪಡೆ | Oneindia Kannada

English summary
Babaladi Sadashiva Mutya Prediction on Rain, Flood and Politics Becomes True. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X