ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Astrology yogas: ಗಜಕೇಸರಿ ಯೋಗದ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿ

By ಹರಿಶಾಸ್ತ್ರಿ ಗುರೂಜಿ
|
Google Oneindia Kannada News

ಈ ದಿನ ಒಂದು ಪ್ರಮುಖ ಯೋಗವೊಂದರ ಬಗ್ಗೆ ತಿಳಿಸುತ್ತೇನೆ. ಸಮಸ್ಯೆಗಳು ಎದುರಾದಾಗ ಸರಕ್ಕನೆ ಜ್ಯೋತಿಷಿಗಳ ಹತ್ತಿರ ಹೋಗಿ, ನನ್ನ ಜಾತಕದಲ್ಲಿ ದೋಷ ಇದೆಯೇ ಎಂದು ಕೇಳುವವರೇ ಹೆಚ್ಚು. ಆದರೆ ತಮ್ಮ ಜಾತಕದಲ್ಲಿನ ಯೋಗದ ಬಗ್ಗೆ ಅರಿವಿಲ್ಲದೆ ಹೋದರೆ, ಆ ಯೋಗ ಸಮಯದಲ್ಲಿ ಉನ್ನತವಾದ ಕೆಲಸಗಳನ್ನು ಮಾಡದೇ ಕಾಲ ಸರಿದು ಹೋಗುತ್ತದೆ.

ಆದ್ದರಿಂದ ಒಂದು ವಿಚಾರ ತುಂಬ ಸ್ಪಷ್ಟವಾಗಿ ನೆನಪಿಟ್ಟುಕೊಳ್ಳಿ: ಯಾವುದೇ ವ್ಯಕ್ತಿಯ ಜಾತಕದಲ್ಲಿ ದೋಷ ಹಾಗೂ ಯೋಗಗಳು ಎರಡೂ ಇರುತ್ತವೆ. ಅವುಗಳ ಬಗ್ಗೆ ತಿಳಿದುಕೊಂಡು ದೋಷಗಳನ್ನು ಪರಿಹರಿಸಿಕೊಳ್ಳಬೇಕು. ಯೋಗಗಳ ಅವಧಿಯನ್ನು ತಿಳಿದು, ಆಗ ಉತ್ತಮ ಕೆಲಸಗಳನ್ನು ಕೈಗೊಳ್ಳಬೇಕು.

ಜನ್ಮ ದಿನಕ್ಕೂ ಹೆಸರಿಗೂ ಎಂಥ ನಂಟು? ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಗೊತ್ತಾ?ಜನ್ಮ ದಿನಕ್ಕೂ ಹೆಸರಿಗೂ ಎಂಥ ನಂಟು? ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಗೊತ್ತಾ?

ಅದೆಂಥವರ ಜಾತಕದಲ್ಲಿಯಾದರೂ ಸರಿ, ಯೋಗಗಳೇ ಇಲ್ಲದಂಥ ಸನ್ನಿವೇಶವೇ ಇಲ್ಲ. ಆದ್ದರಿಂದ ಕನಿಷ್ಠ ಒಮ್ಮೆಯಾದರೂ ಜ್ಯೋತಿಷಿಗಳಲ್ಲಿ ನಿಮ್ಮ ಜಾತಕವನ್ನು ತೋರಿಸಿ. ಇರಲಿ, ಈಗ ವಿಷಯಕ್ಕೆ ಬರುತ್ತೇನೆ. 'ಗಜಕೇಸರಿ' ಎಂಬ ಅದ್ಭುತ ಯೋಗದ ಬಗ್ಗೆ ತಿಳಿಸಿಕೊಡುತ್ತೇನೆ. ಈಗ ನಿಮ್ಮ ಜಾತಕವನ್ನು ಎದುರಿಗೆ ಇಟ್ಟುಕೊಂಡು ಪರಿಶೀಲನೆ ಮಾಡಿಕೊಳ್ಳಬಹುದು.

ಗಜಕೇಸರಿ ಯೋಗ ಅಂದರೇನು?

ಗಜಕೇಸರಿ ಯೋಗ ಅಂದರೇನು?

ಗಜಕೇಸರಿ ಯೋಗವನ್ನು ಗುರು-ಚಂದ್ರ ಯೋಗ ಅಂತಲೂ ಕರೆಯಲಾಗುತ್ತದೆ. ಜನ್ಮ ಜಾತಕದಲ್ಲಿ ಗುರು ಹಾಗೂ ಚಂದ್ರ ಒಟ್ಟಿಗೇ ಇದ್ದರೆ ಅದನ್ನು ಗಜಕೇಸರಿ ಯೋಗ ಎನ್ನಲಾಗುತ್ತದೆ. ಅದೇ ರೀತಿ ಗುರು ಗ್ರಹ ಎಲ್ಲಿದೆಯೋ ಅಲ್ಲಿಂದ ನಾಲ್ಕು-ಏಳು ಅಥವಾ ಹತ್ತರಲ್ಲಿ ಚಂದ್ರ ಸ್ಥಿತನಾಗಿದ್ದರೆ ಆಗಲೂ ಈ ಯೋಗ ಬರುತ್ತದೆ. ದಕ್ಷಿಣ ಭಾರತದಲ್ಲಿ 'ಜನ್ಮ ಕುಂಡಲಿ' (ನವಾಂಶ ಕುಂಡಲಿ ಅಲ್ಲ) ರಚಿಸುವ ಬಗೆಯಲ್ಲಿ ಇರುವಂತೆ ನಿಮ್ಮ ಜಾತಕ ಇದ್ದರೆ ಲೆಕ್ಕ ಹಾಕುವುದು ಸಲೀಸಾಗುತ್ತದೆ. ಗುರು ಯಾವ ಸ್ಥಾನದಲ್ಲಿದೆ ಎಂಬುದರ ಆಧಾರದಲ್ಲಿ ಆ ಮನೆಯಿಂದಲೇ ಗಡಿಯಾರ ಮುಂದಕ್ಕೆ ಚಲಿಸುತ್ತದಲ್ಲಾ ಆ ಮಾದರಿಯಲ್ಲಿ (ಕ್ಲಾಕ್ ವೈಸ್) ಲೆಕ್ಕ ಹಾಕಲು ಆರಂಭಿಸಿ. ಒಂದು, ನಾಲ್ಕು, ಏಳು ಅಥವಾ ಹತ್ತು (ಈ ಸ್ಥಾನಗಳನ್ನು ಕೇಂದ್ರ ಸ್ಥಾನಗಳು ಎನ್ನಲಾಗುತ್ತದೆ) ಈ ಪೈಕಿ ಯಾವುದೇ ಮನೆಯಲ್ಲಿ ಚಂದ್ರನಿದ್ದರೂ ಗಜಕೇಸರಿ ಯೋಗ ನಿಮಗಿದೆ ಎಂದರ್ಥ.

ಆಯಾ ದಶೆ-ಭುಕ್ತಿ ಕಾಲದಲ್ಲಿ ಅತ್ಯುತ್ತಮ ಫಲ ನೀಡುತ್ತದೆ

ಆಯಾ ದಶೆ-ಭುಕ್ತಿ ಕಾಲದಲ್ಲಿ ಅತ್ಯುತ್ತಮ ಫಲ ನೀಡುತ್ತದೆ

ಇನ್ನು ಈ ಯೋಗವು ಗುರು ದಶೆ ಚಂದ್ರ ಭುಕ್ತಿಯಲ್ಲಿ ಅಥವಾ ಚಂದ್ರ ದಶೆ ಗುರು ಭುಕ್ತಿಯಲ್ಲಿ ತನ್ನ ಫಲ ನೀಡಲು ಆರಂಭಿಸುತ್ತದೆ. ನಿಮ್ಮ ಜಾತಕದಲ್ಲಿ ಇರುವ ಮಾಹಿತಿ ಎಂಬುದರ ಆಧಾರದಲ್ಲಿ ಈ ಎರಡು ದಶೆ ಅಥವಾ ಭುಕ್ತಿ ಯಾವಾಗ ನಡೆಯುತ್ತದೆ ಎಂಬುದು ತಿಳಿದುಕೊಳ್ಳಬಹುದು. ಇನ್ನೊಂದು ಮಾತು: ಯಾರಿಗೆ ಈ ಗಜಕೇಸರಿ ಯೋಗ ಇದೆ ಎಂಬುದು ತಿಳಿದುಬರುತ್ತದೋ ಅಂಥವರ ಜತೆಗೆ ಸೇರಿ ವ್ಯಾಪಾರ-ವ್ಯವಹಾರ ಮಾಡುವುದರಿಂದಲೂ ಉತ್ತಮ ಫಲ ದೊರೆಯುತ್ತದೆ. ಇನ್ನು ಯಾರಿಗೆ ಈ ಯೋಗ ಇರುತ್ತದೋ ಅಂಥವರು ಅದೇ ಸಮಯದಲ್ಲಿ ಹೊಸ ವ್ಯವಹಾರ-ವ್ಯಾಪಾರ ಆರಂಭಿಸುವುದರಿಂದ, ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳುವುದರಿಂದ, ಉನ್ನತ ವಿದ್ಯಾಭ್ಯಾಸ, ಶಾಸ್ತ್ರಾಧ್ಯಯನ ಮಾಡುವುದರಿಂದಲೂ ಯಶಸ್ಸು ಕಾಣಬಹುದು.

ಯೋಗ ಜಾತಕರಿಗೆ ಇನ್ನೇನು ಫಲಗಳು?

ಯೋಗ ಜಾತಕರಿಗೆ ಇನ್ನೇನು ಫಲಗಳು?

ಇನ್ನು ಗಜಕೇಸರಿ ಯೋಗದಲ್ಲಿ ಜನಿಸಿದವರಿಗೆ ದೊರೆಯುವ ಇನ್ನಷ್ಟು ಶುಭ ಫಲಗಳ ಬಗ್ಗೆ ತಿಳಿಯುವುದಾದರೆ, ಇವರು ದೈಹಿಕವಾಗಿ ಸದೃಢರಾಗಿರುತ್ತಾರೆ. ಗಟ್ಟಿ ಶರೀರ ಇರುತ್ತದೆ. ಅದೃಷ್ಟ ಜಾಸ್ತಿ ಇರುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಜಯ ಪ್ರಾಪ್ತಿ ಆಗುತ್ತದೆ. ಈ ಜಾತಕರು ಸೃಜನಶೀಲರಾಗಿರುತ್ತಾರೆ. ಸಂಪೂರ್ಣ ವಿದ್ಯಾವಂತರಾಗುತ್ತಾರೆ. ಉತ್ತಮವಾದ ವ್ಯಾಪಾರ-ವ್ಯವಹಾರ, ಉದ್ಯೋಗವನ್ನು ಮಾಡುವಂಥವರಾಗುತ್ತಾರೆ. ಇವರು ತಮ್ಮದೇ ವ್ಯಾಪ್ತಿಯಲ್ಲಿ ಸಾಧನೆ ಮಾಡುವ ಅವಕಾಶ ಅಪಾರವಾಗಿರುತ್ತದೆ. ತಮ್ಮ ಮನೆ, ಜಿಲ್ಲೆ, ರಾಜ್ಯ, ಅಷ್ಟೇ ಏಕೆ ದೇಶಕ್ಕೇ ಹೆಸರು ತರಬಲ್ಲ ಶಕ್ತಿ ಇವರಿಗಿರುತ್ತದೆ.

ಕೆಟ್ಟ ಯೋಗಗಳ ದುಷ್ಪರಿಣಾಮವನ್ನು ತೊಡೆದು ಹಾಕುತ್ತದೆ

ಕೆಟ್ಟ ಯೋಗಗಳ ದುಷ್ಪರಿಣಾಮವನ್ನು ತೊಡೆದು ಹಾಕುತ್ತದೆ

ಗಜಕೇಸರಿ ಯೋಗ ಜಾತಕದಲ್ಲಿದ್ದೂ ಅದು ಗಮನಕ್ಕೆ ಬಾರದೆ ಬಹಳಷ್ಟು ಮಂದಿ ಅವಕಾಶ ವಂಚಿತರಾಗುತ್ತಾರೆ. ಆದ್ದರಿಂದ ಕನಿಷ್ಠ ಒಂದು ಬಾರಿಯಾದರೂ ನಿಮ್ಮ ಜಾತಕವನ್ನು ಜ್ಯೋತಿಷಿಗಳಲ್ಲಿ ತೋರಿಸಿ, ಯೋಗಗಳು- ದೋಷಗಳ ಬಗ್ಗೆ ತಿಳಿದುಕೊಂಡು, ಮುಂದಿನ ಹೆಜ್ಜೆಗಳನ್ನು ಇಡಿ. ಯೋಗಗಳಿದ್ದಾಗ ಮುಂದೆ ನುಗ್ಗಿ. ಸಮಸ್ಯೆ ಎದುರಾಗಬಹುದು ಎಂದಾಗ ತಾಳ್ಮೆಯಿಂದ ಇರುವುದನ್ನು ಕಲಿಯಿರಿ. ಒಂದು ಉದಾಹರಣೆಯನ್ನು ಹೇಳ್ತೀನಿ ಕೇಳಿ: ಜ್ಯೋತಿಷ್ಯದಲ್ಲಿ ಕೇಮದ್ರುಮ ಯೋಗ ಅಂತೊಂದಿದೆ. ಅದು ಬಹಳ ಕೆಟ್ಟ ಫಲ ನೀಡುವ ಯೋಗ. ಯಾರ ಜಾತಕದಲ್ಲಿ ಗಜಕೇಸರಿ ಯೋಗ ಇರುತ್ತದೋ ಅಂಥವರಿಗೆ ಕೇಮದ್ರುಮ ಯೋಗ ಇದ್ದರೂ ಆ ಕೆಟ್ಟ ಫಲಗಳು ತಾಗುವುದಿಲ್ಲ. ಪರಿಣಾಮ ಬೀರುವುದಿಲ್ಲ.

ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.

English summary
Auspicious Yogas in Astrology: Here is the complete details about Gajakesari yoga. It is also called Guru Chandra yoga. What are the benefits of this yoga and how it will benefit native other things explained by well known astrologer Hari Shastri Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X