ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಸಲ್ಲಿ ಹಾವು ಕಾಣಿಸಿಕೊಳ್ಳುವುದರ ಸೂಚನೆ ಏನು? ಸರ್ಪ ದೋಷ ಪರಿಹಾರ ಹೇಗೆ?

By ಶ್ರೀನಿವಾಸ ಗುರೂಜಿ
|
Google Oneindia Kannada News

ವಿವಾಹ ವಿಳಂಬ, ಸಂತಾನ ವಿಳಂಭ, ಕೆಲಸ- ಕಾರ್ಯಗಳಲ್ಲಿ ವಿಘ್ನ, ಪದೇಪದೇ ವೈಫಲ್ಯ, ಚರ್ಮ ವ್ಯಾಧಿಯೂ ಸೇರಿದಂತೆ ಹಲವು ಸಮಸ್ಯೆಗಳನ್ನು ತಂದೊಡ್ಡಬಲ್ಲಂಥದ್ದು ಸರ್ಪ ದೋಷ ಹಾಗೂ ಕಾಳ ಸರ್ಪ ದೋಷ. ಜನ್ಮ ಜಾತಕವನ್ನು ತೋರಿಸಿಕೊಂಡರೆ ಜ್ಯೋತಿಷಿಗಳು ಈ ದೋಷ ಇದೆಯೋ ಇಲ್ಲವೋ ಎಂಬುದನ್ನು ತಿಳಿಸುತ್ತಾರೆ.

ಆ ದೋಷ ಯಾವ ಪ್ರಮಾಣದಲ್ಲಿದೆ, ಅದರ ಸ್ವರೂಪ ಏನು, ಆ ಪರಿಣಾಮ ನಿಮ್ಮ ಜಾತಕದಲ್ಲಿ ಯಾವ ರೀತಿ ಆಗುತ್ತಿದೆ ಎಂಬುದನ್ನು ಸಹ ಹೇಳಬಹುದು. ಆದರೆ ದೋಷವಿದೆ ಎಂಬ ಕಾರಣಕ್ಕೆ ಆ ಪರಿಹಾರವನ್ನು ಯಾವಾಗೆಂದರೆ ಆಗ ಮಾಡಿಸಿಕೊಂಡರೆ ಬದಲಾವಣೆ ಆಗುತ್ತದೆಯಾ ಎಂಬ ಪ್ರಶ್ನೆಯನ್ನು ಒಮ್ಮೆ ಕೇಳಿಕೊಳ್ಳಬೇಕು.

ಕೀರ್ತಿ, ಹಣ, ಯಶಸ್ಸು, ಸುಖ ನೀಡುವ ಶುಕ್ರ ಗ್ರಹ ನಿಮ್ಮ ಜಾತಕದಲ್ಲಿ ಹೇಗಿದೆ?ಕೀರ್ತಿ, ಹಣ, ಯಶಸ್ಸು, ಸುಖ ನೀಡುವ ಶುಕ್ರ ಗ್ರಹ ನಿಮ್ಮ ಜಾತಕದಲ್ಲಿ ಹೇಗಿದೆ?

ಸರ್ಪ ದೋಷ ಅಥವಾ ಕಾಳಸರ್ಪ ದೋಷಕ್ಕೆ ಕಾರಣ ಆಗುವ ಗ್ರಹಗಳೆಂದರೆ ರಾಹು- ಕೇತು. ಜನ್ಮ ಜಾತಕದಲ್ಲಿ ಈ ಗ್ರಹಗಳು ಎಲ್ಲಿ ಸ್ಥಿತವಾಗಿವೆ ಎಂಬುದನ್ನು ಗಮನಿಸಿ, ದೋಷದ ಪ್ರಮಾಣ ಅಥವಾ ದೋಷ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಆದರೆ ಆ ದೋಷ ಇದ್ದಲ್ಲಿ ಪರಿಹಾರ ಮಾಡಿಕೊಳ್ಳುವುದಕ್ಕೆ ದಶಾ- ಭುಕ್ತಿ ಯಾವುದಿದೆ ಎಂಬುದನ್ನು ಕಡ್ಡಾಯವಾಗಿ ನೋಡಬೇಕು.

Snake

ಜಾತಕದಲ್ಲಿ ದಶಾ- ಭುಕ್ತಿಯ ವಿವರಗಳು ಇರುತ್ತವೆ. ಅವುಗಳಲ್ಲಿ ರಾಹು ಅಥವಾ ಕೇತು ದಶೆಯಲ್ಲಿ ಹಾಗೂ ಅವೇ ಗ್ರಹದ ಭುಕ್ತಿ ನಡೆಯುತ್ತಿರುವ ಕಾಲದಲ್ಲಿ ದೋಷಕ್ಕೆ ಪರಿಹಾರ ಮಾಡಿಕೊಂಡರೆ ಅದರ ಫಲಿತಾಂಶ ಗಮನಕ್ಕೆ ಬರುತ್ತದೆ. ಹಣವಿದೆ ಎಂಬ ಕಾರಣಕ್ಕೋ ಅಥವಾ ಆ ಸಮಯದಲ್ಲಿ ಬಿಡುವಿದೆ, ಬೇರೇನೂ ಕಾರ್ಯಕ್ರಮ ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೋ ದೋಷ ಪರಿಹಾರ ಮಾಡಿಸಿಕೊಂಡರೆ ಅದರಿಂದ ಪ್ರಯೋಜನ ಬರುವುದಿಲ್ಲ.

ನನ್ನ ವೈಯಕ್ತಿಕ ಅನುಭವದಿಂದ ಹೇಳುವುದಾದರೆ, ಸುಬ್ರಹ್ಮಣ್ಯ ಸ್ವಾಮಿಯ ಶಾಪ ಇರುವವರ ಪೈಕಿ ಹಲವರಿಗೆ ಕನಸಿನಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತದೆ. ಹಾವು ಅಟ್ಟಿಸಿಕೊಂಡು ಬಂದ ಹಾಗೆ, ದೇಹಕ್ಕೆ ಸುತ್ತು ಹಾಕಿಕೊಂಡ ಹಾಗೆ, ಕಡಿದ ಹಾಗೆ ಕನಸಿನಲ್ಲಿ ಬರುತ್ತದೆ. ಇನ್ನು ಕೆಲವರಿಗೆ ಹರಕೆ ಪೂರ್ಣ ಮಾಡದಿದ್ದರೂ ಕನಸಿನಲ್ಲಿ ಹಾವು ಬರುವುದುಂಟು.

ಸಂತಾನ- ಧನ ಪ್ರಾಪ್ತಿಗೆ ಅತ್ಯಂತ ವಿಶಿಷ್ಟವಾದ ಪಯೋವ್ರತ ಆಚರಣೆ, ನಿಯಮಗಳುಸಂತಾನ- ಧನ ಪ್ರಾಪ್ತಿಗೆ ಅತ್ಯಂತ ವಿಶಿಷ್ಟವಾದ ಪಯೋವ್ರತ ಆಚರಣೆ, ನಿಯಮಗಳು

ತಮಗೆ ಕನಸಿನಲ್ಲಿ ಪದೇಪದೇ ಹಾವು ಕಾಣಿಸಿಕೊಳ್ಳುವುದು ಸರ್ಪ ದೋಷ- ಕಾಳ ಸರ್ಪ ದೋಷದ ಕಾರಣಕ್ಕೋ ಅಥವಾ ಹರಕೆ ತೀರಿಸಿಲ್ಲ ಎಂಬ ಕಾರಣಕ್ಕೋ ಎಂಬುದು ಸಹ ಹಲವರಿಗೆ ನಿರ್ಧರಿಸುವುದು ಸಾಧ್ಯವೇ ಆಗುವುದಿಲ್ಲ. ಅದನ್ನು ತಿಳಿದುಕೊಳ್ಳುವುದಕ್ಕೂ ಜ್ಯೋತಿಷ್ಯದಲ್ಲಿ ಮಾರ್ಗಗಳಿವೆ.

ಅದೇ ರೀತಿ ಸರ್ಪ ಸಂಚಾರ ಇದ್ದಲ್ಲಿ ಅಥವಾ ಸರ್ಪ ವಾಸಸ್ಥಳ (ಹುತ್ತ ಮೊದಲಾದವು) ಇದ್ದಲ್ಲಿ ಮನೆ ಕಟ್ಟಿಕೊಂಡಿದ್ದರೂ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಆ ಮನೆಗೆ ಹೋದ ಮೇಲೆ ಹಣಕಾಸು ಕೈ ಹತ್ತಿರುವುದಿಲ್ಲ. ಇದಕ್ಕೆಲ್ಲ ಸುಬ್ರಹ್ಮಣ್ಯಸ್ವಾಮಿ ಆರಾಧನೆ ಆಗಬೇಕು. ಅದಕ್ಕೂ ಮೊದಲು ಆ ಬಗ್ಗೆ ಸೂಕ್ತರಾದ ಜ್ಯೋತಿಷಿಗಳಲ್ಲಿ ಮಾಹಿತಿ ಕೇಳಿ, ಪಡೆದುಕೊಳ್ಳಿ.

ಯಾವುದೇ ಮಾರ್ಗದರ್ಶನಕ್ಕೆ, ಸೂಕ್ತ ಜಾತಕ ವಿಶ್ಲೇಷಣೆಗೆ ವೈಯಕ್ತಿಕವಾಗಿ ಭೇಟಿಗೆ ಮೊಬೈಲ್ ಫೋನ್ ಸಂಖ್ಯೆ 9886665656- 9886155755 ಸಂಪರ್ಕಿಸಿ.

English summary
Sarpa dosha meaning, reason and solution explained according to vedic astrology in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X